(ನೋಡಿರಿ: ಪುಟ ೧೫೧, ಅಡಿಟಿಪ್ಪಣಿ)
ಮುದ್ರಿತ-೧೫ನೆಯ ಸಂಧಿ.

ಸೂಚನೆ:
ಗುರುಚರಣಸೇವೆಯಲಿ ಪಡೆದರು
ಪರಮಪಾವನವಾಹ ಕೀರ್ತಿಯ
ಧರೆಯೊಳುದ್ದಾಲಕನು ಮುನಿಕುಲತಿಲಕನುಪಮನುಯ

ಪದನು:
ಸೂತ ಹೇಳೈ ಪೂರ್ವದಲಿ ವಿ
ಖ್ಯಾತನೆನಿಸುವುದಂಕಮುನಿಯೊಡ
ನಾ ತಪೋನಿಧಿಯೆನೆಸುವುದ್ದಾಲಕನುನುಪಮನ್ಯು
ಭೀತಿಯನು ನೆರೆ ತೊರೆದು ಸಹಜ
ಪ್ರೀತಿಯಲಿ ಗುರುವಿನ ನಿರೂಪವ
ನೋತು ಶಿರದಲಿ ಧರಿಸಿ ನಡೆದುದನರುಹು ನಮಗೀಗ           ೧

ಎನಲು ಹೇಳ್ದನು ಸೂತನಾ ವರ
ಮುನಿಗಳಿಗೆ ಭೃಗುವರಕುಲಜನಿತ
ರೆನಿಸುವನುಪಮಚರಿತನುದ್ದಾಲಕನುನುಪಮನ್ಯ
ಘನ ತಪೋನಿಧಿಯೆನಿಪುದಂಕನು
ಮನದ ಧೃತಿಯಿಂದಾದರದಲಂ
ಹನುನಯದಲಾ ಯೋಧ ಧೌಮ್ಯನ ಕಂಡು ನಮಿಸಿದರು       ೨

ಮುನಿವರೇಣ್ಯ ಮಹಾಮಹಿಮ ನೀ
ನನಘನೆಂಬುದ ಕೇಳ್ದು ಬಂದೆವು
ಮನವೊಲಿದು ವೇದಾದಿ ವಿದ್ಯವ ಕಲಿಸಿ ಸಲಹುಮ್ಮ
ನಿನಗೆ ಶಿಷ್ಟರು ನಾವು ನಮ್ಮಯ
ಮನವಚನೆಕಾಯದಲಿ ತವ ಪದ
ವನಜಸೇವೆಯನೆಮಗೆ ತಾರಣವಾಗಿ ಚರಿಸುವೆವು     ೩

ಎನಲು ನಗುತಾ ಮುನಿಪ ನುಡಿದನು
ಘನವಲಾ ಗುರುಭಜನೆ ಲೋಕಕೆ
ಮನವೊಡಲು ತಾ ಸಕಲ ಸಾರ್ಥವು ತಪ್ಪಿದರೆ ಘನದುರಿತ
ನೆನೆಯಬಾರದ ತೆರದಲಪು ವು
ದನುನಯವು ನೀವ್ ನೆನೆದು ನಿಶ್ಚಯ
ವನು ತಿಳಿದು ಹೇಳುವುದು ನೀವೆನೆ ನುಡಿದರವರಂದು ೪

ಎಲೆ ಮುನೀಶ್ವರ ನಿಮ್ಮ ಚರಣದ
ಲಲಿತ ಸೇವೆಯೆ ಗತಿಗೆ ಸಾಧನ
ವಲಸದೆಮ್ಮವಧಾನ ತ್ರಿಕರಣ ಶುದ್ಧಿ ನಿಮ್ಮಡಿಯ
ಸುಲಭದಲಿ ಭಜಿಸುವೆವು ವಿದ್ಯೆಯ
ಕಲಿಸುವುದು ಕರುಣದಲಿ ನೀವೆಯೆ
ನಲು ಸುಶಿಷ್ಯರನಂದು ಪತಿಕರಿಸಿದನು ಮುನಿ ನಗುತ ೫

ಎಲೆ ಮುನಿಗಳಿರ ಮೇಲೆ ಪೇಳ್ವೆನು
ಸಲೆವುದಂಕಚರಿತ್ರವನು ಮ
ತ್ತೊಲಿದುವುದ್ದಾಲಕನನುಪಮನ್ಯುವ ಮಹಾಕಥೆಯ
ಸುಲಭದಲಿ ನಾನೊರೆವೆ ನೀವಿದ
ನೊಲಿದು ಕೇಳುವುದೆನುತ ಮತ್ತಾ
ಲಲಿತಸನ್ಮತಿ ಸೂತ ಹೇಳಿದನಾ ಮಹಾಕಥೆಯ       ೬

ಗುರುವಿನಾಜ್ಞೆಯ ತಲೆಯಲಾನುತ
ಪರಮಾವೇದಾಧ್ಯಯನಪರರಾ
ಗಿರಲು ಸಂತೋಷದಲಿ ಮಿಗೆ ಮತ್ತೊಂದು ವಿವ ದಿವಸದಲಿ
ಗುರು ಕರೆದನುದ್ದಾಲಕನನೆಲೆ
ತರುಣ ನಮ್ಮಯ ಮಾನ್ಯವೃತ್ತಿಯ
ಲುರುತರದ ಧರಣಿಯಲಿ ಬೆಳೆದಿಹುದಲ್ಲಿ ಘನ ಶಾಲಿ    ೭

ಹರಿವ ಜಲವನು ನಮ್ಮ ಧರಣಿಯ
ಹೊರಗಿರಿಸಲನ್ಯರು ಕೊಂಡು ಹೋ
ಹರು ದುರಾತ್ಮಕರವರ ಸೀಮೆಗೆ ಪೋಗದಂದದಲಿ
ಭರಿದಿನುದಕವ ತಿರುಹು ನಮ್ಮಯ
ಧರೆಗೆ ನೀನೆನೆ ಶಿರದಲಾನುತ
ಭರವಸದಿ ತಾ ಬಂದು ಕಂಡನು ಹರಿವ ಶಂಬರವ     ೮

ಪರರ ಭೂಮಿಗೆ ಪೋಪುದಕಟಾ
ಭರದೆ ಜಲವನು ತಾನು ತಿರುಹಲು
ತರಲೆ ಗುದ್ದಲಿಯೊಂದು ಪೋದರೆ ತಡವಲಾಯೆನುತ
ಭರದಿ ಪೋಪೀಯುದಕವನು ತಾ
ತಿರುಗಿಸದೆನೆಂದೆನುತಲಲ್ಲಿಯೆ
ಕರದ ತಲೆದಿಂಬಿನಲಿ ಪವಡಿಸಿದನು ನಿಜೇಚ್ಚೆಯಲಿ     ೯

ಸಂದಿಯಲಿ ಜಲ ಪೋಗಲೀಯದೆ
ತಂದು ಮೃತ್ತಿಕೆಯಿಂದ ಕಟ್ಟಿಯೆ
ಬುದ ಜಲವೆಲ್ಲವನು ತಿರುಹಿದನಾತ್ಮಧಾರಿಣೆಗೆ
ಸಂದುದೀಪರಿ ಹಲವು ದಿನವದ
ಕಂದು ಗುರು ತಾ ನೆನೆದನಾಗಳೆ
ಕಂದನಾವೆಡೆಯೆನುತ ಬಂದನು ಕಂಡನೀಹದನ       ೧೦

ನಿಕಟ ಮಗನ ನಿರರ್ಥದಲಿ ತಾ
ನಕುಟೀಲನ ಕಳುಹಿದರೆ ನಮ್ಮಯ
ಬಕುತಿಯಲಿ ತನ್ನೊಡಲ ಮೋಹವ ತೊರೆದು ದೃಢತೆಯಲಿ
ಪ್ರಕಟದಲಿ ತಾನಡ್ಡಬಿದ್ದೀ
ಸಕಲ ಜಲವನು ನಮ್ಮ ಭೂಮಿಗೆ
ಸುಕರದಲಿ ತಿರುಹಿದನು ಹರಹರ ಎನುತ ಹರುಷಿಸಿದ  ೧೧

ಬಂದು ಕೈವಿಡಿದೆತ್ತಿ ಕೇಳೆಲೆ
ಕಂದ ಮೆಚ್ಚಿದೆನೆಂದು ಬಹಳಾ
ನಂದದಲಿ ಹರ್ಸಸಿದನು ಮಸ್ತಕಕಿರಿಸಿ ಹಸ್ತವನು
ಸಂದ ಸಕಲ ಸುವಿದ್ಯೆಗಳು ನಿನ
ಗಿಂದು ಫಲಿಸಲಿ ಗಾರುಹಸ್ಥ್ಯಕೆ
ಛಂದದಲಿ ನಡೆಯೆಂದು ಕಳುಹಿದರಾತಬೀಳ್ಕೊಂಡ    ೧೨

ಬಳಿಕಲುಂದುಪಮನ್ಯುವಿರುತಿರೆ
ಕಳೆದು ಪೋದುದು ಕೆಲವು ದಿನ ಮ
ತ್ತಳುಕದವನಧ್ಯಯನಪಾಠದ ಕಾಂಕ್ಷೆಯಿಂದಿರಲು
ತಿಳಿಯಲೆಂದೀತನ ಮನವನಾ
ಕಳನು ಕಾವುದು ಹೋಗು ನೀಣೆಂ
ದುಳುಹದಟ್ಟಲು ಕಾದನವ ಗೋವುಗಳ ಮನವೊಲಿದು ೧೩

ಒಂದು ದಿನ ಗೋವೃಂದವನು ಸಾ
ನಂದದಲಿ ಮಧ್ಯಾಹ್ನಸಮಯದ
ಲಂದು ತರಲಾಶ್ರಮಕೆ ಗುರುಕಂಡಧಿಕಕೋಪದಲಿ
ಬಂದೆಯೇತಕೆ ಪಶುಗಳನು ನೀ
ನಿಂದು ಮಧ್ಯಾಹ್ನದಲಿ ತಂದರೆ
ನೊಂದುವುಪವಾಸದಲಿ ಕೆಡಿಸಿದೆಯೆಂದು ಗರ್ಜಿಸಿದ   ೧೪

ಎಲೆ ಗುರುವೆ ನಿರ್ವ್ಯಾಜದಲಿ ತಾ
ನೊಲಿದು ಬಂದವನಲ್ಲ ನಾನಿಂ
ದಲವ ಕ್ಷುಧೆಯನು ತಾಳಲಾರದೆ ಬಂದೆನೆಂದೆನಲು
ಘಳಿಲನಾ ಮುನಿ ನುಡಿದನಡವಿಯ
ಲಲಿತ ಕೋಮಲದರ್ಕಪತ್ರವ
ಸುಲಭದಲಿ ನೀ ಭುಜಿಸಿ ಕಾವುದು ದಿನವ ಕಡೆಗಣಿಸಿ   ೧೫

ಎನೆ ಹಸಾದವೆನುತ್ತ ಹೋದನು
ಮನದೊಳನುಮಾನಿಸದೆ ಗೋವುಗ
ಳನುಗೊಳಿಸಿ ಘನದರ್ಕಪತ್ರವ ಭುಜಿಸಿ ಹಲಕಾಲ
ಅನುನಯದೆ ಸಾಯಾಹ್ನ ಸಮಯಕೆ
ಮನೆಗೆ ಬಹನೀ ತೆರದಲಿರುತಿರೆ
ಘನತರೋಷ್ಠವದಡರಿ ಕೆಟ್ಟುವು ನಯನವಾ ಮುನಿಗೆ   ೧೬

ಇರಲಿರಲು ಪಥ ಕಾಣಬಾರದೆ
ಕರದ ಸನ್ನೆಯ ಸೋಹುವಿಡಿದಾ
ಚರಿಸುತಿರೆ ಗುರುವರಿದನಕಟಾ ಶಿಷ್ಯನಾಯಸವ
ಪರಿಹರಿಪೆನೀ ಕ್ಷಣದಲೆನುತುವೆ
ಕರೆದು ಮನದೆರಕದಲಿ ಪೇಳ್ದನು
ತರಣಿ ಮೆಚ್ಚುವ ಮಂತ್ರಗಳನತಿಸಾಧ್ಯತರವಿಧಿಯ     ೧೭

ಒರೆದು ಘನ ವಂತ್ರೋಪದೇಶವ
ನಿರದೆ ಕಳುಹಲು ಬಂದು ಮಿಂದಾ
ಸುರನದಿಯ ತೀರದಲಿ ನಿಂದಾವಶ್ಯಕವ ರಚಿಸಿ
ವರ ಮುನೀಶ್ವರನಿತ್ತ ಮಂತ್ರವ
ಸ್ಮರಿಸಿ ಕರಗಳನೆತ್ತಿ ರವಿಯ
ನ್ನುರೆ ಮನದಿನೀಕ್ಷಿಸಿ ಸುರುಚಿರಧ್ಯಾನಪರನಾದ        ೧೮

ಜನನರಹಿತನೆ ಲೋಕಭಾವನ
ನೆ ನಿಖಿಳಾತ್ಮಕನೆಯಜರವರೇ
ಣ್ಯನೆಯನುಪಮಾನಘಶುಭದ ಧರ್ಮಸ್ವರೂಪಕನೆ
ಘನ ಮಹಿಮ ಸೃಷ್ಟಿಸ್ಥಿತಿಧಾ
ನನೆ ಪ್ರಳಯ ರೂಪಕದ ಸೂರ್ಯನೆ
ಯನುಪಮರ್ಣವ ಕಾರುಣಿಕ ರವಿ ನಿನಗೆ ಶರಣೆಂದ    ೧೯

ಘನವಿವಸ್ವಾನುವೆ ಮಹಾಜಗ
ವನು ಧರಿಸಿಯಿರ್ದಂತರಾತ್ಮನೆ
ಜನವ ಬೆಳಗುವ ದೀಪರೂಪನೆ ಲೋಕಹಿತಕಾರಿ
ಅನುದಿನವು ನೀನಾದಿ ನಿನ್ನನು
ನೆನವೊಡರಿದು ಸಹಸ್ರ ಲೋಚನ
ಗನುಪಮಿತ ತೇಜನೆ ಸುರರೊಳುತ್ತಮ ನಮೋಯೆಂದ         ೨೦

ನಮಿಸುವೆನು ಸವಿತೃಸ್ವರೂಪನೆ
ನಮಿಸುವೆನು ಜಗದೇಕಚಕ್ಷುವೆ
ನಮಿಸುವೆನು ಜಗದುದಯರಕ್ಷಾಪ್ರಳಯಕಾರಣನೆ
ನಮಿಸುವೆನು ವೇದಸ್ವರೂಪನೆ
ನಮಿಸುವೆನು ತ್ರಿಗುಣಾತ್ಮಕಾರಣ
ನಮಿಸುವೆನು ಬ್ರಹ್ಮೇಶ ನಾರಾಯಣ ನಮೋ ಎಂದ   ೨೧

ಎಂದು ಬಹುವಿದವಾದ ತುತಿಗಳ
ಲಂದು ಹೊಗಳಿ ಮಹಾಮಹಿಮನಹ
ಛಂದದಲಿ ವೇದಾತ್ಮನನು ಮೆಚ್ಚಿಸಲು ರವಿ ಬಂದು
ಕುಂದದಾನಂದದಲಿ ದೃಷ್ಟಿಗ
ಳೊಂದೆ ಕಾಣಿಸಿ ಬೇಗನಾ ರವಿ
ಸಂದನಂದಾಕಾಶದತ್ತಲು ಮುನಿಪ ಹರುಷಿಸಿದ        ೨೨

ಬಂದು ಗುರುಚರಣಾರವಿಂದಕೆ
ವಂದಿಸಲು ಮಿಗೆ ಕೇಳ್ದನಧಿಕಾ
ನಂದದಲಿ ಪರಿಣಮಿಸೆ ಮೆಚ್ಚಿದನಾತ ಶಿಷ್ಯನಿಗೆ
ತಂದೆ ನಿನಗೆ ಸಮಸ್ತ ವೇದಗ
ಳಿಂದು ಫಲಸಲಿ ಹೋಗು ನೀನೆಂ
ದಂದು ಮಸ್ತಕಕಿರಿಸಿ ಕರವನು ಕಳುಹಿದನು ನಲಿದು    ೨೩

ಬಂದನಂದುಪಮನ್ಯು ಬಹಳಾ
ನಂದದಲಿ ಲೋಕದಲಿ ಕೀರ್ತಿಯ
ನಂದು ಪಡೆದನು ಗುರುಪ್ರಸಾದಕರುಣದ ಬಲದಿಂದ
ಇಂದಿದನು ಹೇಳಿದೆನು ನಿಮಗಿ
ನ್ನೊಂದಿತೇ ಘನಹರುಷವೆನೆ ಮನ
ದಂದು ನಿತ್ಯಾತುಮನ ನೆನೆದರು ಭಾವಶುದ್ಧಿಯಲಿ     ೨೪