(ನೋಡಿರಿ : ಪುಟ ೧೩೭, ಅಡಿಟಿಪ್ಪಣಿ)
(
ಮುದ್ರಿತ೧೩ ನೆಯ ಸಂಧಿ)

ಆ ಮುನೀಶ್ವರನೊಂದು ಸಮಯವ
ನಾ ಮಹಾಪಿತೃಗಳಿಗೆ ಮಾಡಿದ
ನಾ ಮುನಿಪ ಬೇಡಿದ ಮುಹೂರ್ತಕೆ ಕೊಟ್ಟೊಡದನೊಲಿದು
ಸಾಮದಲಿ ತಾ ಮದುವೆಯಪ್ಪೆನು
ರಾಮಣೀಯಕವೆನಿಸಿ ಬೇಡಿದೊ
ಡಾ ಮುಹೂರ್ತಕೆ ದೊರಕದಿರೆ ಬಳಿಕೆಲ್ಲ ಪರಿಣಾಮ    ೩೧

ಅದರಿನೆಲೆ ಕೇಳಣ್ಣ ನಾವೀ
ಪದುಮಮುಖಿ ಸಹ ತೊಳಲಬೇಹುದು
ಸದಮಳನ ಬಳಿವಿಡಿಯಬೇಕೇಳೆಂದು ತವಕದಲಿ
ಪದುಳದಲಿವರು ಕಾಮರೂಪಿಗ
ಳದು ಮೊದಲು ತನ್ಮುನಿಯನು ಬಿಡುವು
ದದುಭುತವೆನೆ ತೊಳಲಿದು ವನಕದೃಶ್ಯರೂಪದಲಿ     ೩೨

ಇರೆ ವರ ಜರತ್ಕಾರುವೊಂದಿನ
ಬಹ್ರಾಲೈದಿದರಣ್ಯವ ಗಿರಿಶಿ
ಖರದಲಿ ಮುದದಿ ನಿಂದು ವಿಜನವಿದೆಮ್ದು ನಿಶ್ಚಯಿಸಿ
ವರಜರತ್ಕಾರುವಿಗೆ ಕನ್ನಿಕೆ
ವರಜರತ್ಕಾರುವನು ಪಡೆದತಿ
ಭರದಲಿರಲುಂಟೆ ತನಗೆಂದೊಯ್ಯನವ ನೆರೆ ನುಡಿದ   ೩೩

ಪರಮ ಋಷಿ ತನಗನೃತ ಹೊದ್ದದ
ತೆರದಿ ಕರೆದನು ಗಿರಿಶಿಖರದಲಿ
ನಿರುತ ವಚನವಿದೆಂದು ಕಟ್ಟೇಕಾಂತದಲಿ ನುಡಿದ
ಸ್ವರ ಹೊರಡುವುದೆ ತಡವದಾಗಲು
ತರಳಲೋಚನೆಯೀಕೆ ನಿನ್ನ ಪೆ
ಸರಿನ ಸತಿಯಿಹಳಿದಕೊಯೆಂದರು ಪನ್ನಗೇಶ್ವರರು     ೩೪

ಅಕಟ ವಿಜನವೆದೆಂದು ನಿಡಿದರೆ
ಪ್ರಕಟಿಸಿತು ವಿಧಿಯಿದಕೆ ತ್ಕ್ಕಂ
ತಕುಟಿಲವ ನೆನೆಯುತ್ತ ನುಡಿದನು ಕುಂಡಲಿಗಳೊಡನೆ
ವಿಕಲೆಯೆನ್ನಯ ಮನವನರಿಯದೆ
ಸುಕರವಲ್ಲದ ಕ್ರಿಯಿಯವೆಸಗಿದೊ
ಡುಕುತಿಪೂರ್ವಕದಿಂದ ತ್ಯಜಿಸುವೆನೀ ಮಹಾಸತಿಯ  ೩೫

ಎಂದು ಸಮಯವ ನುಡಿಯಲವರಹು
ದೆಂದು ನಿಶ್ವಯವನು ಬಳಿಕ್ಕವ
ಕೊಂದಿದರು ಸಂತೋಷಸಾಗರದೊಳಗೆ ಮನಮುಳುಗೆ
ಕುಂದನುಳಿದರು ತಮ್ಮ ಕುಲದೊಳ
ಗಿಂದು ಬೆರಸಿತು ಯಾಯವರಸಂ
ಬಂಧವೆಂದತಿ ಮುದವತಾಳ್ದರು ಪನ್ನಗೊತ್ತಮರು      ೩೬