ಸುಡುವುದರಿದಲ್ಲ

[1]ಹಿತ[2]ನನು ನಭ[3]ದೆಡೆಯಲಾತನು[4] ಬಂದನಿದೆಯಿದೆ
ಕೊಡು ಕುಮಾರಂ[5]ಗಿತ್ತ[6] ವರವನು ಮುನ್ನ ನೀನೆನಲು[7]ನುಡಿದೆಯೇನನು ಪಾರ್ವ ಹೇಳೆನೆ[8] ಸುಡದಿ[9]ರಹಿಗಳ ನಿನ್ನ[10] ಮುಖವಿದು[11]ತಡೆಯಲೀ ಹದದಲಿ ಸಮಾಪ್ತಿಕ[12]ವರವಿದೆನಗೆಂದ   ೨೧

ಏನು ಹೇಳೇನೇನು ಹೇಳು ಮ
ಹಾನುಭಾವನೆ ಧರಣಿಯಮರನ
ಸೂನುವಲ್ಲವೆ ನೀನು ಹೇಳೈ ತಂದೆ ನೀನೆನಗೆ
ಹಾನಿ ಹೇಳಿನ್ನೊಂದ [13]ಬೇಡೆನೆ[14] ತಾನರಿಯೆನಿನ್ನೊಂದು [15]ಮಾತನು[16] ಮಾನವೇಶ್ವರ ಸಲಿಸು ಕೃಪೆಯುಂಟಾದಡೆನಗೆಂದ     ೨೨

ಹೇಳಿರೈ [17]ಋಷಿ[18]ವರರು ಸಭ್ಯರು
ಹೇಳಿರೈ ಋತ್ವಿಜರು ವಿಪ್ರರು
ಹೇಳಿರೈ ಬುದ್ಧಿಯನು ವಿಪ್ರಕುಮಾರಕಂಗೆನಲು
ಹೇಳಿದರು ಮುನ್ನವೆ ನೃಪೋತ್ತಮ
ಹೇಳ[19]ಲೇಕಿನ್ನೀ[20] ಮಹಾತ್ಮರ
ಕಾಲಧೂಳಿಯ ಶಿಷ್ಯನೆಂದನು ನಗುತ ಮುನಿಸೂನು   ೨೩

ತಪ್ಪದೆಂದರು ಋಷಿವರರು ನೃಪ
ಕಲ್ಪಿತವಿದೆಂದರು ಸಭಾಸದ
ರೂಪ್ಪುವುದು ನಿನಗೆಂದರಾ ಋತ್ವಿಜರು [21]ಪಾರ್ವಜನ[22] ಉಪ್ಪರವ ಮಾಣೆಂದನಿಂದ್ರನು
ನೊಪ್ಪಿತಾಯ್ತೆಮಗೆಂದ[23]ರಮರರು[24] [25]ತುಪ್ಪದಲಿ[26] ಪೂರ್ಣಾಹುತಿಯ ಮಾಡೆಂದರವನಿಪಗೆ ೨೪

ಒಂದೆಮತವಾಯ್ತೆಲ್ಲರಿಂಗಿ
ನ್ನೆಂದು ಫಲವೇನೊಬ್ಬನಾನಕ
ಟಂದಗೆಡಿಸಿದನಧ್ವರವನೀ ಭೂಸುರೋತ್ತಮನ
ನಂದನನು ಹಾಯೆಂದು ಭೂಪತಿ
ನೊಂದು ಸುಯ್ಯುತ್ತಿರಲು ಹೇಳಿದ
ರೊಂದು ಕಥೆಯನು [27]ಕೋವಿದದ್ವಿಜರಂದು[28] ಭೂಪತಿಗೆ        ೨೫

ಅಮೃತಮಥನಾನಂತರದಲಂ
ದಮರರಿಗೆ ಹೇಳಿದನು ತನ್ನಲಿ
ಮಮತೆಯುಳ್ಳಡೆ ತಾಯಶಾಪವ ಮಾಣಿಸುವುದೆಂದು
ಸುಮತಿ ವಾಸುಕಿ ಬೇಡಿಕೊಳಲು
ದಮರರೈದಿದ[29]ರಾತ ಸಹಿತಾ[30] ಕಮಲ[31]ಸಂಭವನೋಲಗಕೆ ಭಿನ್ನವಿಸಿದರು[32] ಹದನ   ೧೬

ಜೀಯ ಭಿನ್ನಹ ಬೆದರುತೈದನೆ
ತಾಯ ಶಾಪಕ್ಕುರಗಪತಿ ಶಿಖಿ
ಬೀಯ ಮಾಡುವನೆಂದು ಜನಮೇಜಯನು ಮಖವರವ
ಕಾಯಲರಿದೆಮಗೀತನನು ಕೈ
ಗಾಯಬೇಹುದು ಜಲಧಿಮಥನಸ
ಹಾಯನನು ನಿಮ್ಮಡಿಗಳೆಂದರು ಸುರರು ಕಮಲಜಗೆ  ೨೭

ಎಂದಡಾತನು ಬೆದರಬೇಡೆಲೆ
ಕಂದ ಕಲ್ಪಾಂತ[33]ರ ಬದುಕು ಕುಲ[34] ನಂದನ ಜರತ್ಕಾರು ನಂದನನಭಯವನು ನಿಮಗೆ
ತಂದೆ ಮಾಳ್ಪನು ಮಖಕೆ ಕಡೆಯುವ
ನಿಂದ ಜನಿಸುವುದಂಜಬೇಡುರ
ಗೇಂದ್ರಕುಲಕೀರ್ತಿಪ್ರವರ್ಥನ ಎಂದನಬುಜಭವ        ೨೮

ವೀರವರ ಕೇಳದುನಿಮಿತ್ತ ಮ
ಹೋರಗರ ಕುಲರಕ್ಷಕ ಜರ
ತ್ಕಾರು ನಂದನನೀತನಧ್ವರಘಾತಕನು ವಿಧಿಯ
ಪ್ರೇರಣೆಯಿದಲ್ಲೆಂದು ಕಳೆವೊಡ
ದಾರವಶವೆಲೆ ತಂದೆ ಹೋಗಲಿ
ಬೇರುಗೊಲೆ ಬೇಡೆಂದು ಸಂತೈಸಿದರು [35]ಮುನಿವರರು[36]        ೨೯

ಸತ್ತ[37]ವನಲಾ[38] ಉರಿಯೊಳಗೆ ಹೊರ
ಳುತ್ತಲೈದನೆಯಾಜ್ಞೆಯನುತಾ
ನುತ್ತರಿಸಲಳವಲ್ಲ ಋತ್ವಿಜ ಮಂತ್ರಶಕ್ತಿಯನು
ಹೊತ್ತಿಹೋಗದ ಮುನ್ನ ತೆಗೆ ನೀ
ನಿತ್ತ ವರವನು ಪಾಲಿಸೆನೆ ಭೂ
ಪೋತ್ತಮನು [39]ನಸು[40]ನಗುತ ನುಡಿದನು ವರ ಸದಸ್ಯರಿಗೆ      ೩೦

ಮಾನಭಂಗವೆ ಮರಣ ಹೋಗಲಿ
ದೀನನನು ಕೊಲಲೇಕೆ ವಿಪ್ರನ
ಸುನುವನು ಮನ್ನಿಸಿದೆನಿಷ್ಟಾತಿಥಿಯಲಾ ತನಗೆ
ಏನನಿತ್ತು ದಧೀಚಿಮುಖ್ಯಮ
ಹಾನುಭಾವರು ಪಡೆದರಭಯ
ಸ್ಥಾನವನು ಮಖವಿದು ಮಹಾಸಂಪೂರ್ಣವಾಯ್ತೆಂದ   ೩೧

ಮಾಡಿ ಪೂರ್ಣಾಹುತಿಯ[41]ನೆನ್ನಲಿ[42] ಖೋಡಿ [43]ಯಳ್ಳನಿತಿಲ್ಲ[44] ಸುರಪನ[45]ಬೋಡು[46]ಮಾಡಲದೇಕೆ ಮಾತನು ಮನ್ನಿಸಿದೆನೆನಲು
ಕೊಡೆ ಲೇಸೆಂದುದು ಮಹಾಜನ
ಕಾಡಮರನೇ ಕಲ್ಪತರು [47]ದಯೆ[48] [49]ಮಾಡು ನೀ ಪಾರ್ಥಿವನೆನುತ್ತಿರ್ದುದು ಋಷಿಸ್ತೋಮ[50]         ೩೨

ಎಸಗಿದರು ಪೂರ್ಣಾಹುತಿಯನಾ
ಋಷಿವರರ [51]ಸರ್ವ[52]ರನು ಸಂತ
ರ್ಪಿಸಿದ[53]ನಿಷ್ಟಧನಪ್ರದಾನದದಲಾ[54] ತಪೋಧನರ
ವಸುಧೆಯರಸನು ಮದದಲವಭೃಥ
ದೊಸಗೆ[55]ಯಲಿ[56] ಮಜ್ಜನನ ಮಾಡಿದ
ನಸಮ[57]ವಿಕ್ರಮನ[58]ಖಿಳಜನ ನಿಜಬಂಧುಜನ ಸಹಿತ   ೩೩

ಹೋಹೊ ಬದುಕಿದೆನೊಮ್ಜೆಗೆನ್ನಯ
ದೇಹವುಳಿದುದೆನುತ್ತ[59]ಲತ್ತ[60] ಮ
ಹಾಹಿ ತಕ್ಷಕ ತೊಲಗಿದನು ಪಾವಕನ ಮುಖದಿಂದ
ಬೇಹ ಧನವನು ಕೊಟ್ಟನವನಿಪ
ನಾ [61]ಹವಿಯ[62] ಶಾಲೆಯಲಿ ವಿಘ್ನವ
ನೂಹಿಸಿದ ಬಿನ್ನಾಣಿಗಧಿಕ ಮನೋನುರಾಗದಲಿ        ೩೪

ಕಳುಹಿದನು ಕೈಮುಗಿದು ಮುನಿ ಸಂ
ಕುಲವನುಚಿತೋಕ್ತಿಯಲಿ ಮನ್ನಿಸಿ
ಬಲವದಾ[63]ಸ್ತೀಕನನಭೀಷ್ಟಧನ[64]ಪ್ರದಾನದಲಿ
ಒಲವ ಮರೆಯದಿರೈತಹುದು ಮೇ
ಲಲಘುಹಯಮೇಧವನು ಮಾಳ್ಪೆನು
ಕೆಳೆಯ ಋತ್ವಿಜನಾಗಬೇ[65]ಕೈ ಎಮ್ದ[66]ನವನೀಶ        ೩೫

ತಂದೆ ನಿನ್ನವರಾವೆನುತ ಮುನಿ[67]ನಂದನನ[68] ಕಳುಹಿದನು ಧರ್ಮದ
ಲಂದು ಧರೆಯನು ಪಾಲಿಸುತ್ತಿರ್ದನು ಮಹೀಪಾಲ
ಸಂದ ಪಿತೃಪ್ರಪಿತಾಮಹರ [69]ಪದ[70] ದಿಂದ ಹರಿಪದ[71]ಭಕುತನೆ[72]ನಿಸಿ ಮು
ಕುಂದದಾಸನು ಮಾಡಿದನು ರಾಜ್ಯವನು [73]ಸುಖದಿಂದ[74]        ೩೬

ಅತ್ತಲಾಸ್ತಿ[75]ಕಾಖ್ಯ[76]ನೈದಿದ
ನುತ್ತಮೋರಗರಾಜಮಂದಿರ
ದತ್ತ[77]ಲಹಿ[78]ಜನವಿದಿರುಗೊಳಲತ್ಯಧಿಕ ವಿಭವದಲಿ
ಎತ್ತು[79]ಗನ್ನಡಿ ಕಳಸ[80] ವಾದ್ಯದ
ಮೊತ್ತ[81]ದಲಿ ಮಂಗಳವ[82] ಪಾಡಲು
ಹೆತ್ತತಾಯಣ್ಣಂದಿರಂಘ್ರಿಗೆ ನಮಿಸಿದನು ಮುನಿಪ       ೩೭

ತೆಗೆದು ಬಿಗಿಯಪ್ಪಿದರು ಹರುಷಾಂ
ಬುಗಳ ನಯನದ ತಳಿತ ಪುಳಕದ
ಹೊಗರ ಹೊಳಹಿನ ನಗೆಮೊಗದ ನಾಗೇಂದ್ರನೈತಂದು
ಬಗೆಯ ಬಯಕೆಯನಿತ್ತೆ ಮುನಿಮೌ
ಳಿಗಳರತ್ನವೆ ತನ್ನ ಹೃದಯದ
ಢಗೆಯ ಡಾವರ್[83]ವಡಗಿ[84]ತೆಂದನು ಹರಸಿ ಬಾಲಕನ  ೩೮

ಬದುಕಿದವರೈ ತಂದೆ ನಾವಿನಿ
ತು ದಿನ ಪಾವಕನೊಳಗೆ ನಿಂದೊಲು
ಕುದಿಯುತಿದ್ದೆವು ಅಂತಕನಭಯವಿಷಮಹಾಗ್ನಿಯಲಿ[85]ಉದಿಸಿ[86]ದುದು ಫಲವಾಯ್ತು ತಂಗಿಯ
ಮದುವೆ [87]ಫಲಿಸಿತ್ತೆಮ್ಮೆವೋಲಾ[88] [89]ರಧಿಕಭಾಗ್ಯರು ಭಾಪೆನುತ ಕೊಂಡಾಡಿದರು ಮುನಿಯ[90]      ೩೯

ಬೇಡು ಬೇಡೆಲೆ ಮಗನೆ [91]ಮೆಚ್ಚಿದೆ[92] [93]ಬೇಡು ವರವನು ತನ್ನ[94] ವಂಶದ
ಕೇಡ ತಪ್ಪಿಸಿದಧಿಕಕರುಣಾ[95]ವನಧಿ[96] ಗುಣನಿಧಿಯೆ
ನೋಡಲಪ್ರತಿಕೃತಿಯಲಾ ನೀ
ಮಾದಿದುಪಕೃತಿ ತಂದೆ ಬಯಕೆಯ
ಬೇಡಿ[97]ಕೊಳ್ಳೈ ತಡೆಯದಿರು ನೀನೆಂದ[98]ನನುಪಮಗೆ  ೪೦


[1] ಹಿಪ (ವಿ)

[2] ಹಿಪ (ವಿ)

[3] ದೊಡೆಯನಲ್ಲಿ (ವಿ) ದೆಡೆಯಲಾಗಲೆ (ಪ)

[4] ದೊಡೆಯನಲ್ಲಿ (ವಿ) ದೆಡೆಯಲಾಗಲೆ (ಪ)

[5] ಗಿಷ್ಟ (ವಿ)

[6] ಗಿಷ್ಟ (ವಿ)

[7] ನುಡಿದನವನಿಷ್ಟಾರ್ಥವೇನೆನೆ | (ಪ), ನುಡಿದೇನಿಷ್ಟಾರ್ಥ ಹೇಳೆನೆ | (ವಿ)

[8] ನುಡಿದನವನಿಷ್ಟಾರ್ಥವೇನೆನೆ | (ಪ), ನುಡಿದೇನಿಷ್ಟಾರ್ಥ ಹೇಳೆನೆ | (ವಿ)

[9] ರಿನ್ನಹಿಗಳನು (ಭ)

[10] ರಿನ್ನಹಿಗಳನು (ಭ)

[11] ತಡೆಯದಿಹುದಿಲ್ಲೀ ಮದಿಷ್ಟಿತ (ವಿ)

[12] ತಡೆಯದಿಹುದಿಲ್ಲೀ ಮದಿಷ್ಟಿತ (ವಿ)

[13] ಹೇಳೆನೆ | (ವಿ)

[14] ಹೇಳೆನೆ | (ವಿ)

[15] ಗಿಂದನು | (ವಿ)

[16] ಗಿಂದನು | (ವಿ)

[17] ಮುನಿ (ಪ)

[18] ಮುನಿ (ಪ)

[19] ಬೇಕೇನೀ (ಭ), ಲಿನ್ನೇಕಾ (ವಿ).

[20] ಬೇಕೇನೀ (ಭ), ಲಿನ್ನೇಕಾ (ವಿ).

[21] ಪಾವಕನ || (ಭ, ವಿ)

[22] ಪಾವಕನ || (ಭ, ವಿ)

[23] ರುರಗರು | (ಪ)

[24] ರುರಗರು | (ಪ)

[25] ತಪ್ಪದೈ (ವಿ, ಮು)

[26] ತಪ್ಪದೈ (ವಿ, ಮು)

[27] ಕೋವಿದರು ಋತ್ವಿಜರು (ವಿ) ಕೋವಿದದ್ವಿಜರೆಲ್ಲ (ಪ)

[28] ಕೋವಿದರು ಋತ್ವಿಜರು (ವಿ) ಕೋವಿದದ್ವಿಜರೆಲ್ಲ (ಪ)

[29] ರೆಸೆದರೆಲ್ಲರು | (ಪ)

[30] ರೆಸೆದರೆಲ್ಲರು | (ಪ)

[31] ಭವನೋಲಗಕೆ ಬಿನ್ನಹ ಮಾಡಿದರು (ವಿ).

[32] ಭವನೋಲಗಕೆ ಬಿನ್ನಹ ಮಾಡಿದರು (ವಿ).

[33] ರವ ಬದುಕಲು | (ಪ)

[34] ರವ ಬದುಕಲು | (ಪ)

[35] ಋತ್ವಿಜರು || (ವಿ)

[36] ಋತ್ವಿಜರು || (ವಿ)

[37] ನಲ್ಲಾ (ಪ)

[38] ನಲ್ಲಾ (ಪ)

[39] ತಾ (ಪ)

[40] ತಾ (ಪ)

[41] ನೆನಲಾ | (ವಿ)

[42] ನೆನಲಾ | (ವಿ)

[43] ಯಿಲ್ಲೆಲೆ ಮಗನೆ (ಪ)

[44] ಯಿಲ್ಲೆಲೆ ಮಗನೆ (ಪ)

[45] ಜೋಡು (ವಿ, ಮು)

[46] ಜೋಡು (ವಿ, ಮು)

[47] ವೆನೆ | (ಪ)

[48] ವೆನೆ | (ಪ)

[49] ಮಾಡಿದಿಷ್ಟಾರ್ಥವನೆನುತ್ತಿರ್ದುದು ಸುರಸ್ತೋಮ || (ವಿ) ಮಾಡಿದಿಷ್ಟಾರ್ಥವನು ನೆನೆಯುತಲಿಹುದು ಸುರನಿವಹ || (ಪ)

[50] ಮಾಡಿದಿಷ್ಟಾರ್ಥವನೆನುತ್ತಿರ್ದುದು ಸುರಸ್ತೋಮ || (ವಿ) ಮಾಡಿದಿಷ್ಟಾರ್ಥವನು ನೆನೆಯುತಲಿಹುದು ಸುರನಿವಹ || (ಪ)

[51] ನೆಲ್ಲ (ವಿ)

[52] ನೆಲ್ಲ (ವಿ)

[53] ನಿಷ್ಟದದಾನಮಾನದಲಾ (ವಿ)

[54] ನಿಷ್ಟದದಾನಮಾನದಲಾ (ವಿ)

[55] ಮಿಗೆ (ವಿ)

[56] ಮಿಗೆ (ವಿ)

[57] ವಿಭವದಲ (ವಿ, ಮು)

[58] ವಿಭವದಲ (ವಿ, ಮು)

[59] ವೀರ (ವಿ, ಪ)

[60] ವೀರ (ವಿ, ಪ)

[61] ಹುತಿಯ (ವಿ, ಮು)

[62] ಹುತಿಯ (ವಿ, ಮು)

[63] ಸ್ತಿಕನಿಷ್ಟವಹ ದಾನ (ಭ)

[64] ಸ್ತಿಕನಿಷ್ಟವಹ ದಾನ (ಭ)

[65] ಕೆಂದವನ (ವಿ, ಮು)

[66] ಕೆಂದವನ (ವಿ, ಮು)

[67] ವಂದ್ಯನನು (ಪ)

[68] ವಂದ್ಯನನು (ಪ)

[69] ಪಥ | (ಪ)

[70] ಪಥ | (ಪ)

[71] ವಾಸವೆ (ಭ)

[72] ವಾಸವೆ (ಭ)

[73] ಮನವೊಲಿದು || (ವಿ, ಪ)

[74] ಮನವೊಲಿದು || (ವಿ, ಪ)

[75] ಕಾಂಕ (ಭ),

[76] ಕಾಂಕ (ಭ),

[77] ಲಭಿ (ವಿ, ಪ)

[78] ಲಭಿ (ವಿ, ಪ)

[79] ವಾರತಿಗಳಲಿ (ಭ),

[80] ವಾರತಿಗಳಲಿ (ಭ),

[81] ದೊಳಗಿಕ್ಕೆಲದಿ (ವಿ, ಮು)

[82] ದೊಳಗಿಕ್ಕೆಲದಿ (ವಿ, ಮು)

[83] ವಾರಿ (ಪ)

[84] ವಾರಿ (ಪ)

[85] ಬದುಕಿ (ಪ),

[86] ಬದುಕಿ (ಪ),

[87] ಫಲವಾಯ್ತೆಂದುಕೊಳಲಾ | (ಪ)

[88] ಫಲವಾಯ್ತೆಂದುಕೊಳಲಾ | (ಪ)

[89] ಯ್ತಧಿಕ ಭಾಗ್ಯರು ನಾವಲಾ ಭಾಪೆನುತ ಹೊಗಳಿದನು || (ಪ)

[90] ಯ್ತಧಿಕ ಭಾಗ್ಯರು ನಾವಲಾ ಭಾಪೆನುತ ಹೊಗಳಿದನು || (ಪ)

[91] ವರವನು | (ವಿ, ಮು)

[92] ವರವನು | (ವಿ, ಮು)

[93] ನಾಡೆ ಮೆಚ್ಚಿದೆವೆಮ್ಮೆ (ವಿ)

[94] ನಾಡೆ ಮೆಚ್ಚಿದೆವೆಮ್ಮೆ (ವಿ)

[95] ನಿಧಿಯೆ (ವಿ, ಮು)

[96] ನಿಧಿಯೆ (ವಿ, ಮು)

[97] ಕೊಳ್ಳಂತಾದಡೆಯು ನಿನಗೆಂದ (ಪ)

[98] ಕೊಳ್ಳಂತಾದಡೆಯು ನಿನಗೆಂದ (ಪ)