ಸೂಚನೆ:
ಲೋಕ ಬೆದರಲು ಮಾಳ್ಪ ಸರ್ಪಾ
ನೀಕ

[1]ದುಃಖವ[2] ಮಾಣಿಸಿದನಾ
ಸ್ತಿಕ ಮುನಿ ಮುಂಕೊಂಡು ಸಲಹಿದನಖಿಳಬಾಂಧವರ

ಪದನು:
ಕೇಳು ಶೌನಕ ವಿಪ್ರವಚನವ
ಕೇಳುತವೆ ಹಿಗ್ಗಿದನು ಲಕ್ಷ್ಮೀ
ಲೋಲನೊಲವಿನ ದಾಸರಹ ನಿಜಪಿತೃಪಿತಾಮಹರ
ಬಾಳಿಕೆಗೆ ಫಲವೇನು [3]ಸಭ್ಯರ[4] ಜಾಲವನು ನೋಡುತ್ತ ಭೂಪತಿ
ಬಾಲನಲ್ಲಿವನಧಿಕವೃದ್ಧನೆಯಾಗಬೇಕೆಂದ     ೧

ಅಲ್ಲದಿದ್ದರೆ ಪೂರ್ವಕಥನವ
ಬಲ್ಲನೆಂತೀ ಹಸುಳ ಲಕ್ಷ್ಮೀ
ವಲ್ಲಭನ ಕೀರ್ತಿಯ ಸುವಾರ್ತೆಯನರಿವನಿವನೆಂತು
ಸೊಲ್ಲು ಸವಿ[5]ಯಾಯ್ತೇವೆನೇನನು[6] ವಲ್ಲಭನೆ ಹೇಳೆನುತ ಕರಪುಟ[7]ಪಲ್ಲವಕೆ ಸೇರಿಸಿದನಂಗವ[8] ವಿಪ್ರಪುಂಗವನ  ೨

ಅತ್ತಲಾ ದ್ವಿಜನೊಡನೆ ಮಾತಾ
ಡುತ್ತ ಕಂಡನು ತಿರುಗಿ [9]ಭೂಪ ಕು
ಲೋ[10]ತ್ತಮನು ಬೆಸಗೊಂಡನಂದಾ ಚಂಡಕೌಶಿಕನ
ಮತ್ತೆ ಬಂದವರಾರು ಬಹ ದು
ರ್ವೃತ್ತರಾರೀ ಶಿಖಿಗೆ ಹೇಳಿದ
ತುತ್ತಲಾ ತಕ್ಷಕನು ತಡೆದನಿದೇನು ಹೇಳೆಂದ ೩

ಎಂದಡೆಂದನು ಹೋತೃ ಲೆಕ್ಕಿಸ
ಲಿಂದುಧರಗರಿದನಲಮುಖದಲಿ
ಬೆಂದವರಸಂಖ್ಯಾತ ಮಿಕ್ಕವರಳವೆ ಮುಖ್ಯರನು
ತಂದೆ ಕೇಳಾ ವಾಸುಕಿಯ [11]ಕುಲ[12] ನಂದನರು ಹದಿಮೂರು ಲಕ್ಷದ
ಮಂದಿ [13]ಬಿದ್ದುದು[14] ಗಿರಿಶಿಖರಸನ್ನಿಭರು ಕೇಳೆಂದ     ೪

*ಅಳಿದುದಷ್ಟಾದಶಮಹೋರಗ
ಕುಲಪತಿಗಳಾ ತಕ್ಷಕಾತ್ಮಜ
ರಲಘುವೀರ್ಯೋತ್ಪನ್ನಧೀರರು ಶೃಂಗಸನ್ನಿಭರು
ಬಲವದೈರಾವತ ಮಹೋರಗ
ಕುಲದಲಿವರೈವರು ಹುತಾಶನ
ನೊಳಗೆ ಮುಗ್ಗಿದರುಗ್ರವಿಷದೂಷಿತ ಜಗತಯರು       ೫

ಹೊತ್ತಿದುದು ಕೌರವ್ಯ ಕುಲದಲಿ
ಹತ್ತು ಹುತವಹ ಮುಖದಲಳಿವಡೆ
ಮತ್ತಗಜಸನ್ನಿಭರು ನಾನಾ ವರ್ಣ[15]ಸಂಜ್ಞಿತರು[16] ಮತ್ತೆ ಧೃತರಾಷ್ಟ್ರಾಂಕ ಕುಲ ಮೂ
ವತ್ತು ನಾಲುಕು ನಾಗಪತಿಗಳು
ಮೃತ್ಯುವಿಗೆ ಮಾರಿದರು ತನುವನು ಘೋರವಿಕ್ರಮರು ೬

ಕನಕವರ್ಣದ ರೌಪ್ಯವರ್ಣದ
ವಿನುತ ಪಿಂಗಲ ಕೃಷ್ಣವರ್ಣದ
ಘನತರಶ್ಯಾಮಾಕೃತಿಯ ಕಾಮಸ್ವರೂಪಿಗಳು
ಅನಲನೆರಕದ ಕಣ್ಣಕೆಂಪಿನ
ಕೊನರುಗಿಡಿಗಳ ವಿಷದ ಹೊಗೆಗಳ
ಹೊನಲ ಹೊರಳಿಯ ದುರುಳರೊಡೆ ಮುಗ್ಗಿದರು ಶಿಖಿಯೊಳಗೆ  ೭

ಎರಡು ಯೋಜನ ದೀರ್ಘ [17]ಶಾರೀ
ರರು ಕೆಲರು ಯೂಜನ[18]ಶರೀರರು
ಗಿರಿನಿಭರು ಗಜನಿಭರು ಪಾವಕನಿಭರು ಶಸಿನಿಭರು
ಎರಡು ಹೆಡೆಗಳ ಮೂರು ಹೆಡೆಗಳ[19]ತರದಲೈದಾರೇಳಂ[20] ಹೆಡೆಗಳ
ದುಉರುಳ ದಂಷ್ಟೋರಗರು [21]ಮುಗ್ಗಿ[22]ದರಗ್ನಿಯೊಳಗೆಂದ      ೮

ಲೆಕ್ಕವನು ನಾನರಿಯೆನುರಿಯನು
ಹೊಕ್ಕವರ ಹೊಗುವವರ ಭಾರಿಯ
ತೆಕ್ಕೆಯನು ಮಂಡಳಿಸಿ ನಭದಿಂ[23]ದೊರಲಂತಿ[24]ಳಿವವರ
ಮಕ್ಕಳನು ಮೊಮ್ಮಕ್ಕಳನು ಮರಿ
ಮಕ್ಕಳನು ಹೋಮಿಸಿದೆವಾವುದ
ಶಕ್ಯವೆಮಗಲೆ ಭೂಪಕಾಣೆನು ತಕ್ಷಕನನೆಂದ  ೯

ಹಗೆಯ [25]ಮೂಲಿಕೆಯುಳಿವುದಕಟಾ[26] ಮುಗುವುತನ[27]ದಲಿ[28] ಮಾಳ್ಪುದೇತಕೆ
ನಗೆಯಲಾ ಕೊಂದವನ ಕೊಲ್ಲಿರದೇಕೆ ನೀವೆನಲು
ಮುಗುದ ಭೊಪತಿ ಕೇಳು ತಮ್ಮಲಿ
ಮಗುವುತನವಿಲ್ಲಿಂದ್ರ [29]ನಾತನ[30] ತೆಗೆದುಕೊಂಡೈದನೆ ಬಿಡದೆ ಶರಣಾಗತನನೆಂದ       ೧೦

ಕೊಟ್ಟನಾತಂಗಾತ[31]ನಭಯವ[32] ಶಿಷ್ಟನವನೆಂದೊಲಿದು ಭಾಪತಿ
ಯಿಷ್ಟಿಯಲಿ ನೀ [33]ಬೀಳದಿರು[34] ತಾನಿತ್ತೆ ವರವಿಂದು
ವಿಷ್ಟಪೇಶ್ವರನಾತನನ್ನು ಹಿಂ
ದಿಟ್ಟುಕೊಂಡೈದನೆ ಸುದುರ್ಮತಿ
ದುಷ್ಟನನು ತಾವೇವೆವೆಂದರು ಋತ್ವಿಜರು ನೃಪಗೆ      ೧೧

ಐಸಲೇ ತಪ್ಪೇನು ವರವನು
ಸಾಸಿ ಕೊಟ್ಟನೆ ತಕ್ಷಕಂಗಾ
ವಾಸವನು ಲೇಸಾಯ್ತು ಕರ ಲೇಸಾಯ್ತು ಲೇಸಾಯ್ತು
ತಾ ಸಹಿತ ಬೀಳಲಿ [35]ಸಮೃದ್ಧ[36]ಹು
ತಾಶನನ ಮುಖದೊಳಗೆನುತ ಭೂ
ಮೀಶನಾ [37]ಋತ್ವಿಜ[38]ರಿಗೆಂದನು ಹೋಮಿಸುವುದೆಂದು         ೧೨

*ಎಂದಡೆಂದನು ಭೂಪ ತಂದೆಯ
ಕೊಂದವನ ಹಿಂದಿಟ್ಟುಕೊಂಡು ಪು
ರಂದರನು ತಾನಿದ್ದದಾವುದಸಾಧ್ಯ ನಿವಗಿಂದು
ಇಂದ್ರನಳಿದರೆ ನಷ್ಟವೆಮಗಿ
ಲ್ಲಿಂದು ಫಣಿ ಸುರಪಾಲರಿಬ್ಬರು
ಬೆಂದುಹೋಗಲಿ ಬೇಳಿದೆಂದನು ನೃಪತಿ ಮುನಿಗಳಿಗೆ  ೧೩

ಅಹುದು ಭೂಪನ ಮಾತು ತಪ್ಪದು
ಕುಹಕಿಗಭಯವನಿತ್ತಡೇನಾ
ಯ್ತಹಿತನನು ಫಡ ಮೃಡನ ಮರೆಹೊಗೆ ಕೊಲುವೆವೆಂದೆನುತ
ದಹನ[39]ದಲಿ ಬೇಳಿದರು[40] ಬರಲಾ
ಕುಹಕಿ ಮೇಣಲ್ಲದಡೆ ಸುರಪತಿ
ಸಹಿತ ಬೀಳಲೆನುತ್ತ ಕರೆದರು ಮಂತ್ರಕೋವಿದರು      ೧೪

ನಡುಗಿದನು ದೇವೇಂದ್ರ[41]ನೇಳಲ
ಗುಡಿದವೋಲೊಡಲೊಳಗೆ[42] ಸುಣ್ಣದ
ಗಿಡಿಯ ನುಂಗಿದವೋಲು ಬೆಂದನು ನೊಂದನಡಿಗಡಿಗೆ
ಹಿಡಿದು ನೂಕಿದವೋಲು ಸುರಸಭೆ
ನಡುಗಲೇರಿದ ಪೀಠವೆರಗಿತು[43]ತಡೆಯದುರಗನ[44] ಬೀಳುಕೊಟ್ಟನು ತೊಡಕು ಬೇಡೆನುತ      ೧೫

ಸುಡು ಬದುಕಲೇಕಿನ್ನು ಮೂಜಗ
ದೊಡೆಯನಾನೆಂದೆನ್ನ ಮರೆವೊ
ಕ್ಕಡೆ ಗತೋದಕ ಸೇತುವಾದುದು ತನ್ನ ಸಾಮರ್ಥ್ಯ
ಪೊಡವಿಯಮರರು ಕೊಂದರೆನುತುವೆ
ತಡೆಯದೇರಿ ವಿಮಾನವನು ನಭ
ದೆಡೆಗೆ ಬಂದನು [45]ಬಹಳ ಸಂತಾಪದಲಿ ಸುರನಾಥ[46] ೧೬

ಇಂಬಿನಲಿ ಬೀಳುತ್ತ ನುಗ್ಗೆಯ
ಕೊಂಬೆವಿಡಿದಂತಾಯ್ತು [47]ಕೆಟ್ಟೆನು[48] ನಂಬಿ ನಯನಸಹಸ್ರನನು ತಾನೆನುತ ತಕ್ಷಕನು
ಅಂಬರಕ್ಕೈತಂದನೊಡಲಲಿ
ತುಂಬಿ[49]ದಂತಸ್ತಾಪಶಿಖಿಯಲಿ[50] ಬಂಬಲಿನ [51]ಕಿಡಿ ಮಸಗೆ[52] ಧೂಮ[53]ದ ಧಾಳಿ[54]ಗಿದಿರಾಗಿ        ೧೭

ದಉರುಳುತುರುಳುತಜಾಂಡಮಂಡಲ
ಬಿರಿಯಲೊದರುತ್ತುಗುವ ಹೊಗೆಗಳ
ಹೊರಳಿಯಲಿ ಹೊಡಕರಿಸಿ ಮಂಡಲಿಸುತ್ತ [55]ನಿಗುರುತ್ತ[56] ಕರೆಕರೆದು ವಶವಳಿದು ನೆರೆ ಕಂ
ಡರಿಯೆ ಕಾರುಣ್ಯವನು ತೋರು
ತ್ತುರಗರಾಜನು ಸೆಗಳಿಕೆಯ ಸಸಿಯಾದ [57]ನಿಮಿಷ[58]ದಲಿ        ೧೮

ಉರಿಯ ಸಮ್ಮುಖಕಿಳಿಯುತಿಳಿಯುತ[59]ತಿರುಗಿಯಂ[60]ಬರಗತಿಗೆ ಗಮಿಸುತ
ಮರಳಿ ಸುರನಾಥನನು ನೋಡುತ ಕಾಯ್ದುಕೊಳ್ಳೆನುತ
ಹೊರಳುತಿದ್ದನು ಹೊಗೆಯೊಳಗೆ ಖೇ
ಚರರು ಹಾಹಾ ಕೆಟ್ಟನುರಗೇ
ಶ್ವರನುರಿದನೆನೆ ಕಂಡನಾಸ್ತೀಕನು ಸುದುಸ್ಥಿತಿಯ      ೧೯

ಹೋಹೊ ನಿಲುನಿಲ್ಲೆನುತಲಾ ನಿಜ
ಬಾಹುದಂಡವ ನೆಗಹಿದನು ಮುನಿ
ಸಾಹಸಿಗನೇತಕ್ಕೆ ಬಾರನು ಪಾವಕನಮುಖಕೆ
ದ್ರೋಹಿ ತಕ್ಷಕನೆಂದು ನೃಪವರ
ನಾಹಿತಾಗ್ನಿಗಳಿಂಗೆ ಬೆಸಸಲು
ದೇಹಿ[61]ಯೆಂಬವ[62]ಗಿತ್ತಬಳಿಕಹುದೆಂದರವನಿಪಗೆ       ೨೦


[1] ಮಖವನು (ಭ, ವಿ)

[2] ಮಖವನು (ಭ, ವಿ)

[3] ಸರ್ವರ (ಪ)

[4] ಸರ್ವರ (ಪ)

[5] ಯಾಯ್ತೇನೆನುತ್ತವೆ | (ಪ), ಯಾಯ್ತೀನನು | (ವಿ)

[6] ಯಾಯ್ತೇನೆನುತ್ತವೆ | (ಪ), ಯಾಯ್ತೀನನು | (ವಿ)

[7] ಪಲ್ಲವವ ಪಸರಿಸಿದನಗ್ಗದ (ಪ)

[8] ಪಲ್ಲವವ ಪಸರಿಸಿದನಗ್ಗದ (ಪ)

[9] ವರ ಭೂ | ಪೋ (ವಿ, ಮು).

[10] ವರ ಭೂ | ಪೋ (ವಿ, ಮು).

[11] ನಿಜ | (ವಿ)

[12] ನಿಜ | (ವಿ)

[13] ಯಳಿದುದು (ಪ)

[14] ಯಳಿದುದು (ಪ)

* “ಭ’ ಪ್ರತಿಯಲ್ಲಿ ಈ ಪದ್ಯವು ಹೀಗೆ ಇದೆ:- ಅಳಿದುದಷ್ಟಾದಶಮಹೋರಗ | ಕುಲದಲಿವರಿವರು ಹುತಾಶನ | ನೊಳಗೆ ಮುಗ್ಗಿದರುಗ್ರ ವಿಷದಂಷ್ಟ್ರರು ಜಗತ್ತ್ರಯದ || ಬಲದಲೈರಾವತಫಣೀಂದ್ರನ ಕುಲದಲಿವರೈವರು ಮಹೋರಗ | ಕುಲಪತಿಗಳಾ ತಕ್ಷಕಾತ್ಮಜರಲಘುವಿಷಧರರು ||

[15] ಸಂಯುತರು || (ವಿ, ಭ)

[16] ಸಂಯುತರು || (ವಿ, ಭ)

[17] ದೇಹರು | ನಿರುತ ಯೋಜನೆಗಳ (ವಿ) ವಾಗಿಹ | ಶರಿರಗಳು ಗಿರಿಶಿಖರ (ಪ)

[18] ದೇಹರು | ನಿರುತ ಯೋಜನೆಗಳ (ವಿ) ವಾಗಿಹ | ಶರಿರಗಳು ಗಿರಿಶಿಖರ (ಪ)

[19] ತೆರಳ ದೈದೇಳೆಂಟು (ಭ) ತೆರಳಿಗಳೈದೆಂಟು (ಪ).

[20] ತೆರಳ ದೈದೇಳೆಂಟು (ಭ) ತೆರಳಿಗಳೈದೆಂಟು (ಪ).

[21] ಮುಳುಗಿ (ಭ)

[22] ಮುಳುಗಿ (ಭ)

[23] ದೊದರಿಯಿ (ಪ)

[24] ದೊದರಿಯಿ (ಪ)

[25] ಮೂಲೆಯೊಳುಳಿದುದೇತಕೆ | (ಪ) ಮೂಲಿಕೆಯುಳಿದುದೇತಕೆ | (ವಿ)

[26] ಮೂಲೆಯೊಳುಳಿದುದೇತಕೆ | (ಪ) ಮೂಲಿಕೆಯುಳಿದುದೇತಕೆ | (ವಿ)

[27] ವನು (ಭ, ಪ)

[28] ವನು (ಭ, ಪ)

[29] ಸಖತನ | (ವಿ)

[30] ಸಖತನ | (ವಿ)

[31] ನಾಯುವ | (ಪ)

[32] ನಾಯುವ | (ಪ)

[33] ಬೇಯದಿರು (ಪ)

[34] ಬೇಯದಿರು (ಪ)

[35] ಸಮಗ್ರ (ವಿ)

[36] ಸಮಗ್ರ (ವಿ)

[37] ತದ್ವಿಜ (ಭ)

[38] ತದ್ವಿಜ (ಭ)

* ಈ ಪದ್ಯವು ’ಭ’ ಪ್ರತಿಯಲ್ಲಿ ಮಾತ್ರ ಇದೆ

[39] ವನು ಬೇಳಿಸಿದ (ಭ),

[40] ವನು ಬೇಳಿಸಿದ (ಭ),

[41] ನೊಡಲೊಳ | ಗುಡಿದುದಲಗೆನೆ ಮೇಣು (ವಿ, ಮು)

[42] ನೊಡಲೊಳ | ಗುಡಿದುದಲಗೆನೆ ಮೇಣು (ವಿ, ಮು)

[43] ಮೃಡನ ನೆನೆಯುತ (ಭ) ತಡೆದವುರಗನ (ಪ).

[44] ಮೃಡನ ನೆನೆಯುತ (ಭ) ತಡೆದವುರಗನ (ಪ).

[45] ನಯನಸಾಹಸ್ರಕನು ತಕ್ಷಕನು || (ಪ)

[46] ನಯನಸಾಹಸ್ರಕನು ತಕ್ಷಕನು || (ಪ)

[47] ಬಿದ್ದೆನು | (ಪ)

[48] ಬಿದ್ದೆನು | (ಪ)

[49] ದುತ್ಪಾತದಲಿ ಯಜ್ಞದ | (ಪ)

[50] ದುತ್ಪಾತದಲಿ ಯಜ್ಞದ | (ಪ)

[51] ಬಲುಗಿಡಿಯ (ವಿ)

[52] ಬಲುಗಿಡಿಯ (ವಿ)

[53] ಜ್ವಾಲೆ (ಪ)

[54] ಜ್ವಾಲೆ (ಪ)

[55] ನೀವುತ್ತ || (ಪ)

[56] ನೀವುತ್ತ || (ಪ)

[57] ನಭ್ರ (ವಿ)

[58] ನಭ್ರ (ವಿ)

[59] ಭರದಲು (ವಿ).

[60] ಭರದಲು (ವಿ).

[61] ಯೆಂದವ (ಭ), ಗೆಂಬುದ (ಪ)

[62] ಯೆಂದವ (ಭ), ಗೆಂಬುದ (ಪ)