ಕೆಲರು ವಿಷ್ಠಿಸುತಭ್ರದಲಿ ಕೆಲ
ಕೆಲರು ಮೂತ್ರಿಸುತೊಡಲು ಕಂಪಿಸಿ
ಕೆಲರು ಕಾರುತ ರಕ್ತವನು

[1]ವಿಷವೀರ್ಯವನು ಕೆಲರು[2] ಕೆಲರು ಬಾಲವನೂರಿ ಮತ್ತಾ
ಕೆಲರು ತಲೆಗಳನೂರಿ ತಕ್ಕೆಯ
ವಳಯದಲಿ ಕೆಲಕೆಲರು ಬೀಳುತ್ತಿರ್ದರುರಿಯೊಳಗೆ     ೨೧

ಹೆಡೆಗಳುರಿದುವು ವರ ಫಣಾಮಣಿ
ಸಿಡಿದು ಹಾರಿದುವುರಿಯ ಹೊಯ್ಲಲಿ
ಕಿಡಿಗಳಂತಿರೆ ಠಣಠನಠಣತ್ಕಾರ ರಂಜಿಸಲು
ಅಡಸಿ ಬೆಂದುದು ಭೋಗಿ ಭೋಗದ
ಗಡಣ ಸಿಮಿಸಿಮಿಸಿಮಿಠಟತ್ಕೃತಿ[3]ಯಡರಲ[4]ಭ್ರದಲೆಂಟು ದೆಸೆಯಲಿ ಧೂಮ ಧಾಳಿಡಲು ೨೨

ಬಸೆಯ ನದಿಗಳು ಬೀದಿವರಿಯಲು
ದೆಸೆಗೆ ನಿಲಲರಿದಾಯ್ತು ಸುತ್ತಲು
ಮಸಗಿದುದು ದುರ್ಗಂಧ[5]ಧೃತಿ[6]ಯೆಂತುಟೋ ಮುನೀಶ್ವರರ
ಬೆಸನಿಗಳು ಬೇಳಿದರು ಬೇಸರ
ವುಸುರಲರಿದೆನೆ ಪನ್ನಗರಕುಲ
ವಿಸರವನು ವಿಧಿಕೋವಿದರು ಕಂಗೆಡಿಸಿದರು ಜಗವ    ೨೩

ಅತ್ತಲನ್ನೆಗ ತಕ್ಷಕನ ತನು
ಹೊತ್ತಿದುದು ಸಂತಾಪವಹ್ನಿಯ
ನುತ್ತರಿಸುವೆನದೆಂತು ನರಪತಿ [7]ಹೂಡಿದುರಿ[8]ಮಖದ
ಮೃತ್ಯುವನು ಹಾಯೆನುತ ಹಾತ್ದನು
ವೃತ್ರವೈರಿಯ ಹೊರಗೆ ರಕ್ಷಿಸು
ಭೃತ್ಯನನು ಮೊರೆಹೊಕ್ಕೆನೆಂ[9]ದನು ನಡುಗಿ[10] ಸುರಪತಿಗೆ       ೨೪

ಅಂಜಬೇಡೆಲೆ ಮಗನೆ [11]ತಾ ಪವಿ
ಪಂಜರವು ನಿನಗಿನ್ನು[12] ಯಾಗಧ
ನಂಜಯನು ಸುಡುವನೆ ನಿಜಾಂಘ್ರಿಸಮಾಶ್ರಿತ[13]ರ ನೆಳಲ
ಎಂಜಲಿಸಬಿಡೆನೆ[14]ನುತ ದಾನವ
ಭಂಜನನು ಮಸ್ತಕದಲಭಯಕ
ರಾಂಜಲಿಯನಿರಿಸಿದನು ಸುಖ[15]ದಿಂದಿರ್ದ[16]ನುರಗೇಂದ್ರ         ೨೫

ಹೋದವರನೀಕ್ಷಿಸುತ ವಾಸುಕಿ
ಗದುದಂತಸ್ತಾಪ ಮನದಲಿ
ತೀದುದಿನ್ನೇನುರಗಕುಲ ನೆರೆ ಬೆಂದುದಾನಿಪನ
ಬೀದಿಗಿಚ್ಚಿನಲುರಿದು ಹೋಹಂ
ತಾದು[17]ಗಿನ್ನೇನು ಗತಿ ಕರೆ
ಮೈದುನನ ಮಗ[18]ನೆಲ್ಲಿಯೆಂದನು ತಂಗಿಯನು ಕರೆದು[19]        ೨೬

*ಕಳುಹು ಕಳುಹೆಲೆ ತಂಗಿ ಮಗನನು
ಕಳುಹಿ ತಡೆಯದೆ ಕಳುಹು [20]ತನ್ನಯ
ವುಳಿವುದಾತನ ಕೈಯಲಿದೆ ಯೆಲೆ [21]ತಾಯೆ ಕಳುಹೆನಲು
ನಳಿನಲೋಚನೆ ಯೆಲ್ಲವನು ನೆರೆ
ತಿಳುಹಿ ಪೂರ್ವಾಪ್ರವನವನಿಪ
ನಲಘುಮಖ[22]ಭಂಗವನು[23] ಮಾಡೆಂದಳು ನಿಜಾರ್ಭಕಗೆ         ೨೭

ಇದು ನಿಮಿತ್ತವೆ ನಿನ್ನ ತಂದೆಗೆ
ಮದುವೆಯನು ಮಾಡಿದರು ತನ್ನನು
ಬದುಕುವಭಿಲಾಷೆಯಲಿ ಮಾವಂದಿರು ಮಹಾಮುನಿಗೆ
ಪದುಮಭವನಾಜ್ಞಾಪಿಸಿದ ಗಡ
ತ್ರಿದಶರಿಗೆ ನಿನ್ನಿಂದ ಕುಲವಿದು
ಬದುಕುವುದು ಗಡ ಬೇಗ ಮಾಡೆಂದಳು ಸರೋಜಮುಖಿ         ೨೮

ಬೇಗ[24]ವೆಂದೇನವ್ವ[25] ನಿಲಿಸುವೆ
ನೀಗಳಂತಿರೆ ಭೂಮಿಪಾಲನ
ಯಾಗವನು ನೀನೇತಕಂಜುವೆ ತಾಯೆ ತನ್ನಳವ
ತೂಗಿ ನೋಡದಿರಡ್ಡವಿಸಲಾ
ಭೋಗಿಭೂಷಣನೊಂದು ಬಾರಿಗೆ
ಭೋಗಿಕುಲವನು ರಕ್ಷಿಸುವೆನೆಂದೆನುತ ಹೊರವಂಟ    ೨೯

ಕಾಲಿಗೆರಗಲು ಹರಸಿ ಪನ್ನಗ
ಪಾಲನಪ್ಪಿದನಳಿಯನನು ಕ
ಣ್ಣಾಲಿಗಳು ನೀರೇರಲಧಿಕಾನಂದ[26]ಬಾಷ್ಪ[27]ದಲಿ
ಪಾಲಿಸೆಮ್ಮನು ಪರಮ ಧಾರ್ಮಿಕ
ಮೌಳಿರತ್ನವೆ ನಿನ್ನ ಕೈಯೆಡೆ
ಹೂಳಿದರ್ಥವಿದೆಮ್ಮ ಜೀವನವೆಂದನುರಗೇಂದ್ರ        ೩೦

ಏತಕಂಜುವೆ [28]ಮಾವ[29] ಬರಿದೇ
ಕಾತರಿಸದಿರು ತನ್ನ ಮೇಲಾ
ಭೂತನಾಥನ ಕರುಣವುಂಟಂಜದಿರಿ ನೀವೆನುತ
ಮಾತೆಮಾತುಳರಂಘ್ರಿಗೆರಗಿಯ
ಭೀತನೆದ್ದನು ಬೀಳುಕೊಂಡಾ
ಭೂತಳಾಧಿಪನಧ್ವರಕೆ ನಡೆತಂದನೊಲವಿನಲಿ          ೩೧

ಬಂದನಾಸ್ತೀ[30]ಕಾಖ್ಯ[31]ನಧ್ವರ
ಮಂದಿರದ ಬಾಗಿ[32]ಲಲಿ[33] ಹೋ ನಿ
ಲ್ಲೆಂದು ಪಡಿವಳರಡ್ಡವಿಸಲಿದು ಮಾರಿಯಯ್ತೆನುತ
ನಿಂದನಲ್ಲಿಯೆ ಯಾಗಶಾಲೆಯ
ಮುಂದೆ ನೃಪನನು [34]ಯಾಜ್ಞವನು[35] ಮುನಿ
ವೃಂದವನು ಹೊಗಳಿದನು ವಿನಯೋಪೇತನೆಂದಿನಿಸಿ ೩೨

ಯಮನ ವರುಣನ ವೈಶ್ರವನನಾ
ಕಮಲತನಯನ ರಂತಿದೇವನ
ಹಿಮಕರನ ಗಯನೃಪನ ನೃಗಜಮೀಢ [36]ಸಂಚಿತನ[37] ವಿಮಲ ದಶರಥನಂದನನ ಭೂ
ರಮಣ ಧರ್ಮಾತ್ಮಜನ ಭರತನ[38]ಸಮವಹಲೆ ಯಜ್ಞಂಗಳೀ ನೃಪಯಜ್ಞಕೊರೆಯೆಂದ[39]  ೩೩

ಈ ಸಮಾಹಿತ ಮಖಕೆ ತೇಜೋ
ರಾಶಿ ಮುನಿಕುಲವರ್ಯ ವೇದ
ವ್ಯಾಸನಲ್ಲಾ ವರ ಸದಸ್ಯನು ಭುವನಪೂಜಿತನು
ಈ ಸಕಲ ಋತ್ವಿಜರು ಶಿಷ್ಯರು
ನೇಸರೊಡಲಿಟ್ಟಂತೆ ನೆರೆದಿದೆ
ಯೇಸು ಧನ್ಯನೊ ಭೂವರನು ಯಜಮಾನನಕಟೆಂದ  ೩೪

ಏನನೆಂಬೆನು ಸಕಲ [40]ದಿವಿಜರಿ
ಗಾ[41]ನನವಲಾ ಪಾವಕನು ಪವ
ಮಾನಸಖನೇ ದಕ್ಷಿಣಾವರ್ತಾರ್ಚಿಯೆಂದೆನಿಸಿ
ಮಾನವೇಂದ್ರನ ವರ ಮನೋರಥ
ದಾನಿಯಲ್ಲಾ ಕೃಷ್ಣವರ್ತ್ಮ ಕೃ
ಶಾನು ಮುಖ್ಯಾನಂತನಾಮನಂತಗುಣನೆಂದ          ೩೫

ಆರು ನೀನೆಲೆ ಭೂಪ ಸಾಕ್ಷಾ
ದ್ವಾರಿಜಾಸನನೋ ಮಹೇಂದ್ರನೊ
ಮಾರ[42]ಮಥನನೊ[43] ಮೇಣು [44]ವಿಷ್ನುವಿನಂಶ[45]ಸಂಭವನೊ
ಆರು ನೆನೆವರು ಮಖವಿದನು ಮೇ
ಣಾರು ಮಾಳ್ಪರು ಸಮಿಧೆಯಾಯ್ತು ಮ
ಹೋರಗರ ಕುಲ ನಿನ್ನ ಹೋಲುವ ನೃಪರದಾರೆಂದ    ೩೬

ಭೂಪವರ ಖಟ್ಟಾಂಗ ನಹುಷದಿ
ಳೀಪಮಾಂಧಾತೃಪ್ರಮುಖನೃಪ
ರೀಪರಿಯ ವರ ಮಖವ ಮಾಡಿದರುಂಟೆ ಪೂರ್ವದಲಿ
ಭಾಪು ತೇಜೋನಿಧಿಯೆ [46]ವರಧೃತಿ[47] ರೂಪು ಗುಣ[48]ಸುಂದರನೆ[49] ತನ್ನಾ
ಳಾಪವನು ಚಿತ್ತವಿಸು ವಿಕ್ರಮಶೌರ್ಯವಾರಿಧಿಯೇ     ೩೭

ರವಿಯವೊಲು ತೇಜದಲಿ ಪರಮ ಹು
ತವಹನೊಲು ದುರ್ಧರ್ಕ್ಷತೆಯಲಿಂ
ದುವಿನವೊಲು ಸೌಖ್ಯದಲಿ ಶಕ್ರನ[50]ವೊಲು ಪ್ರಭುತ್ವ[51]ದಲಿ
ಭವನವೋಲಾ ಸುಪ್ರ[52]ಸಾದ[53]ದ
ಲವನಿಯೊಲು ಕ್ಷಮೆಯಲ್ಲಿ ವಾಲ್ಮೀ
ಕಿವೂಲು ಮತಿಯಲಿ ವರ ವಸಿಷ್ಠನವೋಲು ಶಾಂತಿಯಲಿ        ೩೮

ಸಮತೆಯಲಿ ಸಾಕ್ಷಾತ್ತು ನೀನೇ
ಕಮಲಭವನೆಲೆ ಭೂಪ ಧರ್ಮದ
ಮಮತೆಯಲಿ ಯಮನಸ್ತ್ರಶಸ್ತ್ರಂಗಳಲಿ ಧರಣೆಜೆಯ
ರಮಣನಖಿಳೈಶ್ವರ್ಯದಲಿ ಮೇ[54]ಣಮಿತ[55]ಗುಣಗಣವೀರ್ಯಶೌರ್ಯದ
ಸುಮತಿಯಲಿ ಸಾಕ್ಷಾತ್ತು ನಾರಾಯಣನು ನೀನೆಂದ    ೩೯

ಆರದಾರೋ ಸ್ತುತಿಸುವವರೀ
ಭೂರಿಮಖವನು [56]ಋತ್ವಿಜರನಾ
ಘೋರ ಭೂಭುಜನೆನ್ನೆನೇತಕೆ ಕಾರ್ಯವೇನೆನುತ[57] ಭೂರಮಣನಾತನನು ಕರೆ [58]ಕರೆ[59] ಕಾರಣವ ಬೆಸಗೊಂಬೆನೆನಲಾ
ದ್ವಾರಪಾಲರು ಹುಗಿಸಿದರು [60]ವಹಿಲದಲಿ[61] ಭೂಸುರನ          ೪೦

ಮೆಚ್ಚಿದೆನು ಮೆಚ್ಚಿದೆನು ಹೇಳೆಲೆ
ಸಚ್ಚರಿತ ಮನದಿಚ್ಚೆಯಾವುದು
ಮುಚ್ಚುಮರೆಯೇಕೀವೆನಭಿಮತಸಿದ್ಧಿಯನು ನಿನಗೆ
ಅಚ್ಯುತಾಂಘ್ರಿಯೆ ಸಾಕ್ಷಿ ಬೇಡಿದು
ದೊಚ್ಚತೀವೆನು ತನ್ನ ಧರೆಯ ಸ
ಮುಚ್ಚಯದ ಸರ್ವಸ್ವ [1]ಧನವನು[2] ಚಿಂತೆ ಬೇಡೆಂದ    ೪೧

ವಸುಮತೀವಲ್ಲಭನೆ ನಿನಗಿದು
ಹೊಸತೆ ಪಾಂಡುನೃಪಾಲವಂಶ
ಪ್ರಸರಪುಣ್ಯಶ್ಲೋಕನಲ್ಲಾ [3]ನೀ ಸಮರ್ಥನಲಾ[4] ಎಸೆವ ಗುಣವಿನಿತಿಲ್ಲದಡೆ ಸುರ
ವಿಸರ ಸನ್ನುತ ಪಾದಪೀಠನು
ವಶವಹನೆ ನಿತ್ಯಾತ್ಮನಾರಾಯಣನು ನಿನಗೆಂದ        ೪೨

ದ್ವಾದಶ ಸಂಧಿ ಸಮಾಪ್ತ


[1] ವನು ಮಿಗೆ (ವಿ)

[2] ವನು ಮಿಗೆ (ವಿ)

[3] ತಂದೆ ನೀ ದಿಟಕೆ || (ವಿ)

[4] ತಂದೆ ನೀ ದಿಟಕೆ || (ವಿ)

[1] ವೀರ್ಯವನು ಕೆಲಕೆಲರು (ವಿ, ಮು)

[2] ವೀರ್ಯವನು ಕೆಲಕೆಲರು (ವಿ, ಮು)

[3] ಗಡಣದ (ವಿ, ಭ)

[4] ಗಡಣದ (ವಿ, ಭ)

[5] ಕೃತಿ (ಪ, ಭ)

[6] ಕೃತಿ (ಪ, ಭ)

[7] ಮಾಡಿದುರು (ವಿ), ಕೂಡಿದುರಿ (ಪ)

[8] ಮಾಡಿದುರು (ವಿ), ಕೂಡಿದುರಿ (ಪ)

[9] ದೆನುತಡಗಿ (ವಿ)

[10] ದೆನುತಡಗಿ (ವಿ)

[11] ತಾಪದ | ಪುಂಜವದು ನಿನಗಿಲ್ಲ (ಪ)

[12] ತಾಪದ | ಪುಂಜವದು ನಿನಗಿಲ್ಲ (ಪ)

[13] ನ ಗಳವ || ಎಂಜಲಿಸಬೇಡೆ (ವಿ)

[14] ನ ಗಳವ || ಎಂಜಲಿಸಬೇಡೆ (ವಿ)

[15] ದಲ್ಲಿರ್ದ (ಪ)

[16] ದಲ್ಲಿರ್ದ (ಪ)

[17] ದೆಮ (ಪ)

[18] ನಾವೆಡೆಮ್ದನು ತಂಗಿಯನು ಕರೆದು (ಭ), ನೆನಲು ಕರೆಸಿದಳಾ ಜರಾತ್ಮಜನ (ಪ)

[19] ನಾವೆಡೆಮ್ದನು ತಂಗಿಯನು ಕರೆದು (ಭ), ನೆನಲು ಕರೆಸಿದಳಾ ಜರಾತ್ಮಜನ (ಪ)

* ಈ ಪದ್ಯದ ಮೊದಲಿನ ೩ ಸಾಲಿಗಳು ಈ ರೀತಿ ಇವೆ:- ಕೇಳು ಅಣ್ನನೆ ಮಗನಾ ಬಂದನು | ಹೇಳು ಬೆಸನನು ಎನಲು ತನ್ನನು | ಬಾಳ್ವೆವೀತನ ಕೈವಶದಲೆಲೆ ತಾಯೆ ಕಳುಹೆನಲು ||

[20] ತನ್ನಸು | ವುಳಿವುದಾತನ ಕೈಬಲದಲೆಲೆ (ವಿ)

[21] ತನ್ನಸು | ವುಳಿವುದಾತನ ಕೈಬಲದಲೆಲೆ (ವಿ)

[22] ಭಂಜನವ (ಪ)

[23] ಭಂಜನವ (ಪ)

[24] ಲೆಂದೇನೆಂಬೆ (ಮು)

[25] ಲೆಂದೇನೆಂಬೆ (ಮು)

[26] ಭಾರ (ವಿ)

[27] ಭಾರ (ವಿ)

[28] ನೀನು (ಪ)

[29] ನೀನು (ಪ)

[30] ಕಾಂಕ (ಭ)

[31] ಕಾಂಕ (ಭ)

[32] ಲಿಗೆ (ವಿ, ಪ)

[33] ಲಿಗೆ (ವಿ, ಪ)

[34] ಯಜ್ಞಕರ (ಪ)

[35] ಯಜ್ಞಕರ (ಪ)

[36] ಸಂಜ್ಞಿಕನ || (ಪ) ಲೋಹಿತನ || (ವಿ)

[37] ಸಂಜ್ಞಿಕನ || (ಪ) ಲೋಹಿತನ || (ವಿ)

[38] ವಿಮಳದಧ್ವರ ಸರಿಸವೆನೆಯೀಯಜ್ಞದೊಳಗೆಂದ || (ಪ)

[39] ವಿಮಳದಧ್ವರ ಸರಿಸವೆನೆಯೀಯಜ್ಞದೊಳಗೆಂದ || (ಪ)

[40] ಋತ್ವಿಜ | ರಾ (ಪ).

[41] ಋತ್ವಿಜ | ರಾ (ಪ).

[42] ಹರನೋ (ವಿ)

[43] ಹರನೋ (ವಿ)

[44] ನೀ ಮುನಿವಂಶ (ಭ)

[45] ನೀ ಮುನಿವಂಶ (ಭ)

[46] ನೀ ವರ | (ಪ)

[47] ನೀ ವರ | (ಪ)

[48] ನಿರವಧಿಯೆ (ಪ)

[49] ನಿರವಧಿಯೆ (ಪ)

[50] ವೋಲು ಭುಕ್ತ (ಭ)

[51] ವೋಲು ಭುಕ್ತ (ಭ)

[52] ಭಾಸ (ಭ)

[53] ಭಾಸ (ಭ)

[54] ಣಮಳ (ವಿ).

[55] ಣಮಳ (ವಿ).

[56] ಕ್ಮಲಭವೋ | ವಾರಿಜದ ಸಖನಲ್ಲದಡ ಜಂಭಾರಿಯೋ ಮೇಣು || (ಪ)

[57] ಕ್ಮಲಭವೋ | ವಾರಿಜದ ಸಖನಲ್ಲದಡ ಜಂಭಾರಿಯೋ ಮೇಣು || (ಪ)

[58] ನೀ | (ಪ)

[59] ನೀ | (ಪ)

[60] ಬಲು ಬೇಗ (ಪ)

[61] ಬಲು ಬೇಗ (ಪ)