ಸೂಚನೆ:
ಸರ್ಪ

[1]ಯಾಗ[2]ವ ಮಾಡಿದನು ರಿಪು
ದರ್ಪಖಂಡನ ಪಾಂಡುಕುಲಮುಖ
ದರ್ಪಣನು ಜನಮೇಜಯಕ್ಷಿತಿಪಾಲನೊಲವಿನಲಿ

ಪದನು:
*ಕೇಳು ಶೌನಕ ಮಂತ್ರಿಮುಖದಲಿ
ಕೇಳಿ ಪಿತೃ ಮರಣವನು ತಳೆದನು
ಕಾಳ ಬೈರವನಂತೆ ಕೋಪಾಟೋಪವನು ನೃಪತಿ
ಕೋಳುಹೋದನೆ ತನ್ನ ಪಿತನಾ
ಭೀಳ [3]ತಕ್ಷಕ[4] ವಿಷದ ವಹ್ನಿಗೆ
ಬಾಳಿಕೆಗೆ ಫಲವೇನು ತನಗಿನ್ನೆಂದು [5]ಚಿಂತಿಸಿದ[6]       ೧

ಕರವ ಕರ[7]ದಲಿ ಹಿಡಿದು[8] ಮುರಿದನು
ಬೆರಳನಕಟಾ ಪಾಪಿ ತಕ್ಷಕ
ಮರಳೀ[9]ಚಿದನೇ ವಿಪ್ರನನು[10] ಭೈಷಜ್ಯಕೋವಿದನ
ಉರು ಮಹಾ[11]ಧನದಾನದಲಿ ಹಗೆ[12] ಧರಣಿಸುರಸುತನಲ್ಲ ಕೊಯ್ದನು
ಕೊರಳ[13]ನುರಗನೆನುತ್ತ ಕಿಡಿಕಿಡಿ[14]ಯೋದನವನೀತ   ೨

ಅವನಿಸುರಸುತ ಶಾಪದಲಿ ಕೋಂ
ದವನು ತಕ್ಷಕನಹಡೆ ನೆರೆ ಭ
ಸ್ಮವನು ಮಾಡುವೆ ಬಳಿಕ ಹಾನಿಯದೇನು ಬದು[15]ಕಿದಡೆ[16] ಅವನೆ ಹಗೆ ಹರಹರ ಮಹಾ ಪಾ
ಪವನು ಮಾಡಿದನೆನುತ ಕಂಬನಿ[17]ಯವನಿಗೆ[18]ಳಿಯಲು ಶೋಕಮೂರ್ಛಿತನಾದ[19]ನಾ ಭೂಪ[20]    ೩

ಹೊಳ್ಳು [21]ಮಾತಿನಲೇನು ಫಲ[22] ಕೊಲ
ಬಲ್ಲಿರೇ ನೀವವನ ಜೀವವ
ಕೊಲ್ಲದೀಪರಿ ಜೀವಿಸುವನಾನಲ್ಲ ದುಮತಿಯ
ಹಲ್ಲ ಬಲುಹನು ನೋಡುವೆನು ನೆರೆ
ಬಲ್ಲ [23]ಮಂತ್ರಿಗಳುಳ್ಳರೆ[24]ನುತರಿ
ಮಲ್ಲಮರ್ದನನೆಡಬಲದ ಮಂತ್ರಿಗಳನೀಕ್ಷಿಸಿದ         ೪

ಕರೆಸಿದನು ಭೂಪತಿ ಪುರೋಹಿತ
ವರರನಾಪ್ತರನೆಂದನ[25]ವರಿಗೆ
ನಿರುತ[26] ಸರ್ಪಾಧ್ವರವ ಮಾಳ್ಪೆ[27]ನು[28] ನಿಮ್ಮನುಜ್ಞೆಯಲಿ
ವರವಿಧಾನವ ಬಲ್ಲಿರಾದಡೆ
ವಿರಚಿಸುವುದು [29]ಸಹಾಯ[30]ಕರ್ಮವ
ನುರಗರಾಜನ  ಕುಲವನುರುಹುವೆನೆಂದನವನೀಶ     ೫

ತಾತನೊಡಲು ವಿಷಾಗ್ನಿಯಿಂದುರಿ
ದಾತೆರದಲಧ್ವರಮಹಾಗ್ನಿಯೊ
ಳಾತತಾಯಿಗಳುರಿದುಹೋಗಲಿ ಧರ್ಮಕಂಟಕರು
ಭೂತಳದಮೇಲುರಗರೆಂಬರ
ಮಾತನಾಡದವೋಲು ಮಾಳ್ಪೆನು
ಕೌತುಕಾಧ್ವರ ವಿಧಿಯ[31]ದಾವುದು[32] ಬೆಸಸಬೇಕೆಂದ    ೬

ಎನಲು ನುಡಿದರು ಮುನ್ನ ಕಮಲಾ
ಸನನು ವಿಧಿಸಿಹನಮರರಿಗೆ ಕೇ
ಳನುಪಮನೆ ವರ ಸರ್ಪಯಾಗಕೆ ಕರ್ತು ನೀನೆಂದು
ಮನುಜಲೋಕದೊಳೋಅನ್ಯರಿಲ್ಲದ
ನನು[33]ಗೊಳಿಸಿ[34] ನಡೆಸುವ ಸಮರ್ಥರು
ಜನಪ ಬಲ್ಲೆವು ತದ್ವಿಧಾನವನೆಂದರಾ ದ್ವಿಜರು          ೭

ಬೇಗ ಮಾಡೆಲೆ ತಂದೆ ಕರೆಸು ಮ
ಹಾಗಮಜ್ಞರನಮಳಮಂತ್ರವಿ[35]ಭಾಗಕೋವಿದ[36] ವಿಪ್ರರನು [37]ಋತ್ವಿಜ[38] ಸದಸ್ಯರನು
ಯಾಗ ಸಂಭಾರವನು ತರಿಸುವ ಸ
ರಾಗವುಳ್ಳಡೆ ತಡವಿದೇತಕೆ
ತೂಗಿನೋ[39]ಡುವಿ[40]ರೆಮ್ಮನೆಂದರು ನೃಪಪುರೋಹಿತರು         ೮

ಬೆಂದನಾಗಳೆ ತಕ್ಷಕನು ಹೋ
ಕೊಂದೆನುರಗರ ಕುಲವ ತನ್ನಯ
ತಂದೆಗಾ ಮಗನಾದೆನಿಂದಿನಲೆನುತ ನೃಪನೆದ್ದು
ನಿಂದು ಬೆಸಸಿದನೆಲವೊ ಮಾಡುವೆ
ನಿಂದು [41]ತನ್ಮಖ[42]ಸಾಧನಂಗಳ
ವೃಂದವನು ತಹುದೆಂದು ಮಂತ್ರಿಗಳಿಂಗೆ ಪರಿಜನಕೆ   ೯

ಬೆಸ[43]ಸುವ[44]ಲ್ಲಿಂ ಮುನ್ನ ಬಂದುದು
ವಿಷಧರಾಧ್ವರ ಕರ್ಮಸಾಧನೆ[45]ವಸಮ[46]ವಿದ್ವದ್ವಿಪ್ರವರಭೂವರದಿಶಾವರರು
ಮುಸುಕಿದುದು ವರ ಯಾಗಭೂಮಿಯ
ನೆಸಗಿದರು [47]ಶಾಸ್ತ್ರೋಕ್ತ[48] [49]ಪಥದಲಿ[50] ಋಷಿವರರು ಮಾಡಿಸಿದರಗಲಕೆ ಕುಂಡವನು ಶಿಖಿಗೆ    ೧೦

ಸ್ಥಪತಿಮುಖ್ಯರು ಯಾಗಶಾಲೆಯ
ವಿಪುಳವೆನೆ ನಿರ್ಮಿಸಿದರದರೊಳು
ನಿಪುಣಮತಿಯೊಬ್ಬನು ನಿಮಿತ್ತವ ಕಂಡು [51]ಮನದೊಳಗೆ[52] ನೃಪತಿಯಧ್ವರ ಕರ್ಮವಿದು ಕೆ
ಟ್ಟಪುದು ಕಡೆಗೀಡೆರ[53]ದೆಂದಾ[54] [55]ನೃಪನ ಸಭೆಯೊಳು ಘೋಷಿಸಿದನತಿ ಸಕಲ ಜನ ಬೆದರೆ[56]    ೧೧

ಹೇಳು ಹೇ[57]ಳೇ[58]ನಾರು ವಿಘ್ನವ
ಮೇಳವಿಸುವ[59]ವರೆನಲು[60] ಭೂಸುರ
ಮೌಳಿಮಣಿ ವಿಪ್ರೋತ್ತಮನ ದೆಸೆಯಿಂದ ಮಖವಿಘ್ನ
ಕೇಳೆನಲು [61]ಕೇಳಿದನು[62] ಪೃಥ್ವೀ[63]ಪಾಲನಧ್ವರದ್ದಾರಪಾಲರ[64] ಕೋಲ ತೆಗೆಯದಿರರಿಕೆಯಿಲ್ಲದೆ ವಿಪ್ರರಿಂಗೆಮ್ದ ೧೨

ಅರಿದೆನಿಸಿತಧ್ವರದ ಗೃಹವಿತ
ರರಿಗೆ ಹೊಗುವಡೆ ಭೂಮಿಲಂಬದ
ನೆರವಿಯಲಿ ಋತ್ವಿಕ್ಸಭಾಸದರ್ವರ್ಗದುತ್ಸವದ
ಭರಿತ ಲಕ್ಷ್ಮಿಯನೇನನೆಂಬೆನು
ಪರಮ ಋಷಿಮುಖ್ಯರಲಿ [65]ಪೃಥ್ವೀ
ಶ್ವರ ಮಹಾಮಖಮರ್ಮ[66]ವಿನಿಯೋಗವನು ಕೇಳೆಂದ ೧೩

ಚಂಡಕೌಶಿಕನೆಂಬ ಮುನಿ ಕೈ
ಕೊಂಡನಾ ಹೋತೃತ್ವವನು ಕೈ
ಕೊಂಡನುದ್ಗಾತೃತ್ವ[67]ವನು ವರ[68] ಜೈಮಿನಿವ್ರತಿಪ
ಮಂಡಿಸಿದನಾ ಬ್ರಹ್ಮಪದದಲಿ
ಪಂಡಿತನು ಭಾರ್ಗವ[69]ನೆನಿಪ್ಪವ[70] ಕೊಂಡನಧ್ವರ್ಯತ್ವವನು ಪಿಂಗಲನು ಕೇಳೆಂದ         ೧೪

ತಿಳಿಯೆ ವೇದವ್ಯಾಸಮುನಿ ಮು
ದ್ಗಲನು [71]ದತ್ತಾತ್ರೇಯ ವರ ದೇ
ವಲನು ಚ್ಯವನನು ಕಣ್ವನುದ್ದಾಲಕ ಘಟೋತ್ಕಚರು[72] ಅಲಘುಮತಿ [73]ನಾರದನು[74] ಮುನಿಕೋ
ಹಳನ ಸುತನಾ ದೇವಶರ್ಮನು
ಲಲಿತ ಜಠರಶ್ವೇತಕೇತು ಸದಸ್ಯರಿವರೆಂದ   ೧೫

ಇವರ ಶಿಷ್ಯಜನ ಪ್ರಶಿಷ್ಯ
ಪ್ರವರಜನಸಹಿತಾ ಮಹಾಧ್ವರ
ಭವನದಲಿ ಕುಳ್ಳಿರಲು ವಿಮಳ ಸದಸ್ಯರೆಂದೆನಿಸಿ
ಅವನಿಪತಿ ಕೈಕೊಂಡನಂದಾ
ಸವನ ದೀಕ್ಷೆಯನಖಿಳ ಪನ್ನಗ
ನಿವಹ ಬೆದರಲು ಹೋಮವನು ತೊಡಗಿದರು [75]ಋತ್ವಿಜರು[76]   ೧೬

ಕರಿಯ [77]ಸೀರೆಯನುಟ್ಟು[78] ನೊಸಲಲಿ
ಕರಿಯ ತಿಲಕವನಿಟ್ಟು [79]ರೌದ್ರೋ
ತ್ಕರ[80] ಭಯಂಕರ ನಯನಬದ್ಧಭ್ರುಕುಟಿಭೀಷಣರು
ಕರೆದರುರಗವ್ರಾತವನು ಮೋ
ಹರಿ[81]ಸಿತಗ್ನಿ[82]ಜ್ವಾಲೆ ಗಗನಕೆ
ತರವಿಡಿದು ಕುಳ್ಳಿರ್ದು ವಿಪ್ರರು ಘೋರ ಮಾಂತ್ರಿಕರು  ೧೭

*ಬಂದನಾ ಸಮಯದಲುದಂಕನು
ನೊಂದ ಮೃಗಪತಿಯಂತೆ ಕರುಣದ
ಕಂದು ಬಿಡದುದ್ದಂಡ ತಕ್ಷಕ ಮಡಿವ ತೆರನೆಂತೋ
ಇಂದು ನಾವದನೋಳ್ಪೆವೆಂದಾ
ಸಂದ ಶಿಷ್ಯವ್ರಜಸಹಿತಲಾ
ನಂದ ಮಿಗೆ ತಾನೈದಿ ಮಖಕನುಕೂಲನೆನಿಸಿದನು     ೧೮

ಏನನೆಂಬೆನು [83]ಮುನಿಪ[84] ಮಂತ್ರಾ
ಧೀನವಲ್ಲಾ ಲೋಕ ವಿಪ್ರಮ
ಹಾನುಭಾವವನರಿವರಾರಾಕ್ಷಣದಲಹಿನಿಕರ
ಸ್ಥಾನ ಕಂಪಿತವಾಯ್ತು ಗತಿಯೆ
ನ್ನೇನು ಕೆಟ್ಟೆವೆನುತ್ತ[85]ಲೆಲ್ಲರು[86] [87]ಮ್ಲಾನಮುಖರೊರಲುತ್ತ ಬಂದರು ಗಗನ ಮಂಡಲಕೆ[88]         ೧೯

ಹಲವು ಸುತ್ತನು ಸುತ್ತಿ ತಕ್ಕೆಯ
ವಳಯದಲಿ ತಲೆಗುತ್ತಿ ಘೋಳೆಂ[89]ದಳುತ[90] ತಲೆ ಕೆಳಗಾಗಿ ಬೀಳು[91]ತ್ತಿರ್ದರ[92]ಗ್ನಿಯಲಿ
ಕೆಲರು ಕೆಲರನು ಹಿಡಿದು ಜೋಲುತ
ಕೆಲರು [93]ತಾಯ್ಮಕ್ಕಳನು ಕರೆ[94]ಕರೆ
ದಳುತ ಸಂಕುಲವಾಯ್ತು ಸರ್ಪವ್ರಾತವಭ್ರದಲಿ         ೨೦


[1] ಯಜ್ಞ (ಭ)

[2] ಯಜ್ಞ (ಭ)

* ಈ ಪದ್ಯವು ’ವಿ, ಮು’ ಪ್ರತಿಗಳಲ್ಲಿಲ್ಲ

[3] ಪನ್ನಗ (ಪ)

[4] ಪನ್ನಗ (ಪ)

[5] ಬಿಸಿ ಸುಯ್ದ || (ಪ)

[6] ಬಿಸಿ ಸುಯ್ದ || (ಪ)

[7] ವನು ಹಿಡಿದು (ಭ), ದಲಿ ತೀಡಿ (ಪ)

[8] ವನು ಹಿಡಿದು (ಭ), ದಲಿ ತೀಡಿ (ಪ)

[9] ಚಿತೆ ವಿಪ್ರನನು ಮಿಗೆ (ಭ)

[10] ಚಿತೆ ವಿಪ್ರನನು ಮಿಗೆ (ಭ)

[11] ದಾನದಲಿ ಹಗೆಯಾ | (ಪ)

[12] ದಾನದಲಿ ಹಗೆಯಾ | (ಪ)

[13] ನೆನುತವೆ ಕೋಪದಲಿ ಕಿಡಿ (ಪ)

[14] ನೆನುತವೆ ಕೋಪದಲಿ ಕಿಡಿ (ಪ)

[15] ಕುವಡೆ || (ವಿ, ಪ)

[16] ಕುವಡೆ || (ವಿ, ಪ)

[17] ಭುವನಕಿ (ಪ)

[18] ಭುವನಕಿ (ಪ)

[19] ನವನೀತ || (ಪ, ಭ)

[20] ನವನೀತ || (ಪ, ಭ)

[21] ವಾತಿನಲೇನಹುದು (ವಿ, ಮು)

[22] ವಾತಿನಲೇನಹುದು (ವಿ, ಮು)

[23] ಮಾಂತ್ರಿಕರುಳ್ಳಡೆ (ವಿ, ಮು).

[24] ಮಾಂತ್ರಿಕರುಳ್ಳಡೆ (ವಿ, ಮು).

[25] ವನೀ | ಶ್ವರಗೆ (ಪ)

[26] ವನೀ | ಶ್ವರಗೆ (ಪ)

[27] ವು (ಪ)

[28] ವು (ಪ)

[29] ಮಹಾಹಿ (ವಿ), ಮಹಾಗ್ನಿ (ಮು)

[30] ಮಹಾಹಿ (ವಿ), ಮಹಾಗ್ನಿ (ಮು)

[31] ಬಲ್ಲರೆ (ವಿ)

[32] ಬಲ್ಲರೆ (ವಿ)

[33] ಕರಿಸಿ (ಭ)

[34] ಕರಿಸಿ (ಭ)

[35] ದಾಗತೋದಯ (ವಿ, ಮು)

[36] ದಾಗತೋದಯ (ವಿ, ಮು)

[37] ಋತ್ವಿಕ್ (ವಿ, ಮು), ತದ್ವತ್ (ಭ)

[38] ಋತ್ವಿಕ್ (ವಿ, ಮು), ತದ್ವತ್ (ಭ)

[39] ಡದಿ (ವಿ)

[40] ಡದಿ (ವಿ)

[41] ತನ್ನಭಿ (ಪ)

[42] ತನ್ನಭಿ (ಪ)

[43] ಸಿದ (ಭ), ಸದ (ವಿ)

[44] ಸಿದ (ಭ), ಸದ (ವಿ)

[45] ವಿಸರ (ವಿ)

[46] ವಿಸರ (ವಿ)

[47] ವರ ಶಾಸ್ತ್ರ (ಪ)

[48] ವರ ಶಾಸ್ತ್ರ (ಪ)

[49] ದಂದದಿ (ವಿ)

[50] ದಂದದಿ (ವಿ)

[51] ಭಯಗೊಂಡು || (ವಿ, ಮು)

[52] ಭಯಗೊಂಡು || (ವಿ, ಮು)

[53] ದೆಂದುರೆ (ಪ)

[54] ದೆಂದುರೆ (ಪ)

[55] ನೃಪಸಭೆಯೊಳಾಘೋಷಿಸಿದನತಿ ಬಹಳ ರಭಸದಲಿ || (ವಿ)

[56] ನೃಪಸಭೆಯೊಳಾಘೋಷಿಸಿದನತಿ ಬಹಳ ರಭಸದಲಿ || (ವಿ)

[57] ಳದ (ವಿ)

[58] ಳದ (ವಿ)

[59] ರೆನಲ್ಕೆ (ವಿ)

[60] ರೆನಲ್ಕೆ (ವಿ)

[61] ಕೇಳುತ್ತ (ವಿ)

[62] ಕೇಳುತ್ತ (ವಿ)

[63] ಪಾಲನಾದ್ವಾರ್ಸ್ಥರನು ಕರೆದನು (ವಿ)

[64] ಪಾಲನಾದ್ವಾರ್ಸ್ಥರನು ಕರೆದನು (ವಿ)

[65] ಋತ್ವಿಗ್ | ವರ ಮಹಾಕರ್ಮಕ್ಕೆ (ವಿ, ಮು)

[66] ಋತ್ವಿಗ್ | ವರ ಮಹಾಕರ್ಮಕ್ಕೆ (ವಿ, ಮು)

[67] ಕೌಸ್ತುಭ (ಪ, ಭ)

[68] ಕೌಸ್ತುಭ (ಪ, ಭ)

[69] ನು ತಾಕೈ | (ವಿ, ಮು)

[70] ನು ತಾಕೈ | (ವಿ, ಮು)

[71] ನಾರದಮುನಿಪ ದತ್ತಾ | ತ್ರಯನು ವರ ದೇವಲನು ಚ್ಯವನನು ಕಣ್ವ ಸಂಭವರು || (ವಿ, ಮು)

[72] ನಾರದಮುನಿಪ ದತ್ತಾ | ತ್ರಯನು ವರ ದೇವಲನು ಚ್ಯವನನು ಕಣ್ವ ಸಂಭವರು || (ವಿ, ಮು)

[73] ಗಾಲವನು (ವಿ, ಮು)

[74] ಗಾಲವನು (ವಿ, ಮು)

[75] ತದ್ವಿಜರು || (ಭ)

[76] ತದ್ವಿಜರು || (ಭ)

[77] ವಸ್ತ್ರವ ಧರಿಸಿ (ವಿ, ಮು)

[78] ವಸ್ತ್ರವ ಧರಿಸಿ (ವಿ, ಮು)

[79] ರೌದ್ರದ | ವರ (ವಿ, ಮು)

[80] ರೌದ್ರದ | ವರ (ವಿ, ಮು)

[81] ಸೆ ವಹ್ನಿ (ವಿ, ಮು)

[82] ಸೆ ವಹ್ನಿ (ವಿ, ಮು)

* ಈ ಪದ್ಯವು ’ಪ’, ’ಭ’ ಪ್ರತಿಗಳಲ್ಲಿಲ್ಲ

[83] (ವಿ, ಮು)

[84] (ವಿ, ಮು)

[85] ಶೋಕಾ (ಭ, ವಿ)

[86] ಶೋಕಾ (ಭ, ವಿ)

[87] ಹೀನ ಮತಿಗಳು ಬಾಯ್ಬಿಡುತ ಬರುತಿರಲು ತವಕದಲಿ || (ಪ)

[88] ಹೀನ ಮತಿಗಳು ಬಾಯ್ಬಿಡುತ ಬರುತಿರಲು ತವಕದಲಿ || (ಪ)

[89] ದುಲಿದು (ವಿ)

[90] ದುಲಿದು (ವಿ)

[91] ತ್ತೇಳುತ (ವಿ)

[92] ತ್ತೇಳುತ (ವಿ)

[93] ತಾಯನು ಮಕ್ಕಳನು (ವಿ, ಮು)

[94] ತಾಯನು ಮಕ್ಕಳನು (ವಿ, ಮು)