ಬಳಿಕಲಗಿದನು ಧರೆಯನಾಕ್ಷಣ
ವಿಳಿದು

[1]ಪೋದುದು[2] ಬಿಲವಿವರವದ
ರೊಳಗೆ ಕಾಣಿಸಿತೊಂದು ವಾಡಬ ದಿವ್ಯತೇಜದಲಿ
ಹಳಹಳಿಸಿ ನೋಡಿದನು [3]ನುಡಿದನು[4] ಗಳಿಲನೆಲ್ಲಿಗೆ ಪೋಪೆಯೆನಲಾ
ಗಳು ಮನೋಮುದದಿಂದ[5]ಲನಲಗುದಂಕನಿಂ[6]ತೆಂದ  ೪೧

ನೀನು ರಚಿಪುದ್ಯೋಗವೆನ್ನಯ
ಮಾನಸಕೆ  ಪರಿತೋಷವಾಯಿತು
ನಾನು ವೈಶ್ವಾನರನು ನೀ ಭಜಿಸಿ[7]ದೆಯನಾರತವು[8] ಹಾನಿ ಹೊಗದಂದದಿ ಸಹಾಯವ
ನೂನವಿಲ್ಲದೆ ಮಾಡುವೆನು ಘನ
ಮಾನನೀಯ ಮಹಾತ್ಮ ನಡೆ ತಕ್ಷಕನ ಸ್ಥಳಕೆಂದ       ೪೨

ಎಂದಡಾಕ್ಷಣ ನಡೆದು ಬಂದನು
ಮುಂದೆ ಕಂಡನು ನಾಗಲೋಕವ
ನಿಂದಿದನು ದಹಿಸುವೆನೆನುತ್ತುವೆ ವಾಡಬನ ಕರೆದು
ನಿಂದಪರಭಾಗದಲಿ ಪೃಷ್ಠವ
ನಂದವೆನಲೂದಿದನು ಹುತವಹ
ನಂದು ಪ್ರಜ್ವಲಿಸಿದನು ಶಿಖಿಯಾವರಿಸಿತಾ ಸ್ಥಳವ      ೪೩

ನಾಗಲೋಕಾನೈದೆ ತುಂಬಿದು
ದಾಗ ಪ್ರಳಯಾನಲನವೊಲು ಮಿಗೆ
ಬೇಗೆಗಾರದೆ ವಾಸುಕಿಪ್ರಭೃತಿಗಳು ತಾವಾಗ
ಆಗ[9]ನರಿಯದೆ[10] ತಕ್ಷಕನ[11]ನವ
ರೀ[12]ಗ ತಾ ಕುಂಡಲವನೆಂದು ಮ
ಹಾಗಮಜ್ಞಗೆ ಕೊಟ್ಟು ಸಂಸ್ತುತಿಸಿದರು ಭಕ್ತಿಯಲಿ       ೪೪

ಲೇಸು ಲೇಸುವುದಂಕ [13]ಗುಣವಾ[14] ರಾಶಿ ಗುರುಚರಣಾರವಿಂದೋ
ಪಾಸಕನೆ [15]ಸರ್ವಜ್ಞ ವೇದಾಂಗೈಕಗುಣನಿಧಿಯೆ[16] ಏಸು [17]ದುರ್ವೈತ್ತರುಗಳಾ[18]ದೊಡ
ದೈಸುವನು ನೀ ಕ್ಷಮಿಸು ನಮ್ಮನು
ಸಾಸಿಗನೆ ನೀ ಸಲಹಬೇಕೆಂದರು [19]ಸರೀಸೃಪರು[20]    ೪೫

ದುರುಳನೀ ತಕ್ಶಕನನೀತನ
ಭರದ ತಪ್ಪನು ನೋಡಲಾಗದು
ಕರುಣದಲಿ ನೀನೆಮ್ಮ ಸಲಹೆನೆ ನಗುತುದಂಕಮುನಿ
ಗರುವರಿರ ನಿಮ್ಮಿಂದಲನುಚಿತ
ಬೆರಸುವುದೆ ಸಾಕೆನುತಲವರನು
ಕರೆದು ಕಳುಹಿತಲಗ್ನಿಯನು ಸಂಸ್ತುತಿಸಿ ಬೀಳ್ಕೊಟ್ಟ    ೪೬

ಪರಮ ಹರುಷದಲಂದು ಬಂದನು
ಗುರುಚರಣಗಳಿಗೊಲಿದು ವಂದಿಸಿ
ನಿರುಪಮಿತ ಭಕುತಿಯೊಳಗಾತನ ವನಿತೆಯೆಡೆಗೈದಿ
ಪರಮ ಮಾತೆ ಮಹಾತ್ಮೆ ತಂದೆನು
ವರ ಪತ್ರಿವ್ರತೆ[21]ಯಿತ್ತ ಕುಂಡಲ[22] ಸುರರು ಬಯಸುವರಿದನು [23]ತಂದೆನು[24] ನಿಮ್ಮ ಕರುಣದಲಿ     ೪೭

ಎಂದು ಮುಂದಿರಿಸಿದನು ಕಂಡಳು
ಮಮ್ದಗಮನೆ ಮನೋನುರಾಗದ
ಲಂದು ಕೈಕೊಂಡಧಿಕ ಹರ್ಷೊದ್ರೇಕದಲಿ ಹರಸಿ
ಕಂದ ನೀ ಸುಖಿಯಾಗು ನಿನಗೆ ಮು
ಕುಂದ ತೋರಲಿ ವಿಶ್ವರೂಪದ
ಛಂದವನು ನಿನಗೊಲಿದು ಮೆಚ್ಚಲಿ ಶಕ್ರವಿಧಿಶಿವರು     ೪೮

ಅಂದು ಕಳುಹಿಸಿಕೊಂಡುದಂಕನು
ಬಂದು ಗುರು[25]ಗಳಿಗೆ[26]ರಗಿ ಪೇಳ್ದವ
ರಿಂದನುಜ್ಞೆಯಕೊಂಡು ಬಂದು ನಿಜೇಚ್ಚೆಯಿಂದಾಗ
ಸಂದಗಾರ್ಹಸ್ಥ್ಯದ ಸುಧರ್ಮದ
ಲೊಂದಿ ನಡೆದು ಮಹಾನುಭಾವತೆ
ಯಿಂದಿರುತ [27]ತಕ್ಷಕನ ವೈರವ ನೆನೆವನಡಿಗಡಿಗೆ[28]    ೪೯

*ಧರಣೆಪತಿ ಜನಮೇಜಯಂಗಾ
ಸುರುಚಿರದ ಮಂತ್ರಿಗಳು ಪೇಳ್ದುದ
ಪರಮ ದಿವ್ಯಜ್ಞಾನದಿಂದರಿದಧಿಕ ಹರುಷದಲಿ
ಧರೆಯೊಳಗೆ ತಾನಾಗ ಬಂದಾ
ಭರದ ವೈರದಲಂದು ನೃಪತಿಗೆ
ಪರುಷವಾಕ್ಯಗಳಿಂದರುಹಲಂದಾತನೊಡಬಟ್ಟ         ೫೦

ಮೊದಲು ತನ್ನನು ಮಂತ್ರಿಗಳು ತನ
ಗೊದವಿದಗ್ಗದ ಕೋಪ ಪುಟ್ಟುವ[29]ಹದನದನು ಹೇಳಿದರು[30] ಬಳಿಕಲುದಂಕಮುನಿ ಬಂದು
ಹದುಳದಲಿ ತನಗೊರೆಯಲಾಕ್ಷಣ
ವದವಿದುರು [31]ರೋಷ[32] ದಲಿ ಸದಮಳ
ಹೃದಯ ನಿತ್ಯಾತ್ಮನ ನೆನೆದು ಮಖಗೆಯ್ಯಲನುವಾದ  ೫೧

ಏಕಾದಶ ಸಂಧಿ ಸಮಾಪ್ತ


[1] ಪೋದನು (ಮು)

[2] ಪೋದನು (ಮು)

[3] ವಲ್ಲಿಯು | (ಮು)

[4] ವಲ್ಲಿಯು | (ಮು)

[5] ಲೆಂದನುದಂಕಗಿಂ (ಮು)

[6] ಲೆಂದನುದಂಕಗಿಂ (ಮು)

[7] ದ ಮನೋರಥವು || (ಮು)

[8] ದ ಮನೋರಥವು || (ಮು)

[9] ಲವರ್ಗಳು (ಮು)

[10] ಲವರ್ಗಳು (ಮು)

[11] ಕರೆ | ದೀ (ಮು)

[12] ಕರೆ | ದೀ (ಮು)

[13] ಕರುಣಾ (ಮು)

[14] ಕರುಣಾ (ಮು)

[15] ಸರ್ವಾಂಗ ವೇದಾಂಗೈಕ ಶರಣನಿಧಿ (ಮು)

[16] ಸರ್ವಾಂಗ ವೇದಾಂಗೈಕ ಶರಣನಿಧಿ (ಮು)

[17] ದುರ್ವೃತ್ತಿಯುತರಾ (ಮು)

[18] ದುರ್ವೃತ್ತಿಯುತರಾ (ಮು)

[19] ಮಹೋರಗರು (ಮು)

[20] ಮಹೋರಗರು (ಮು)

[21] ಕುಂಡಲಗಳನು (ಮು)

[22] ಕುಂಡಲಗಳನು (ಮು)

[23] ದೊರಕಿತು (ಮು)

[24] ದೊರಕಿತು (ಮು)

[25] ವಿಂಗೆ (ಮು)

[26] ವಿಂಗೆ (ಮು)

[27] ಲಾ ತಕ್ಷಕನ ನೆನೆವನು ಸರೋಷದಲಿ || (ಮು)

[28] ಲಾ ತಕ್ಷಕನ ನೆನೆವನು ಸರೋಷದಲಿ || (ಮು)

* ’ಮು’ ಪ್ರತಿಯಲ್ಲಿ ಈ ಪದ್ಯವು ಹೆಚ್ಚಿನದಿದೆ – ಮನದೊಳಗೆ ಹಿರಿದಾಗಿ ಹುಟ್ಟಿದು | ದನಘ ಜನಮೇಜಯಗೆ ಖತಿಯೆಲೆ | ಮುನಿಗಳಿರ ನೀವ್ ಕೇಳ್ದ ಮಾತಿಂಗುತ್ತರವಿದೆಂದ || ಘನಮಹಿಮನೆಂದೆನಿಪುದಂಕನ | ವಿನಯದಿಂಸಕ್ತರಿಸಿ ಬಳಿಕಾ | ಜನಪ ಸರ್ಪಾಧ್ವರಕೆ ನೀವನುನಯದಿ ಬಹುದೆಂದ ||

[29] ವಿದಿತದಲಿ ಬಿನ್ನೈಸೆ (ಮು)

[30] ವಿದಿತದಲಿ ಬಿನ್ನೈಸೆ (ಮು)

[31] ಕೋಪ (ಮು)

[32] ಕೋಪ (ಮು)