[1]ಬರುತ ಪೌಷ್ಯನ ಪುರವ ಕಂಡನು[2] ಸುರನಗರಿಗೆಣೆಯೆನಲು ಮತ್ತಾ
ಪುರಿಯ ಬಹಿರುದ್ಯಾನವೆಸೆದುದು ಚೈತ್ರರಥದಂತೆ
ಪರಿವ ನದಿ ಕಂಗೆಸೆದುದುತ್ತಮ[3]ತರವಿಯದ್ ಗಂಗೆಯೊಲು ಬಳಿಕಾ[4] ಪುರಜನರು ಕಾಣಿಸಿದರಮರರ ತೆರದಿ ಸೌಖ್ಯದಲಿ     ೨೧

[5]ಬರಲು ಸಂಯಮಿವರನ ಸನಿಯದೊ
ಳು[6] ರುತರಶ್ವೇತಾಂಗದಲಿ ಬಂ[7]ದುರೆ[8] ಮನೋಹರರೂಪದಲಿ ದೇವೇಂದ್ರ ಮನವೊಲಿದು
ಗುರುಚರಣಸೇವಕಗೆ ಹರುಷಿಸಿ[9]ಭರದ[10] ವೃಷಭಾಕಾರದಲಿ ತಾ[11]ನಿರದೆ ಬಂದುರೆ[12] ವತ್ಸಲತೆಯಲುದಂಕಗಿಂತೆಂದ   ೨೨

ಎಲೆ ಮುನಿಪ ನೀ ಬಂದ ಕಾರ್ಯಕೆ
ಹಲವು ಲೇಸಾದಪುದು ಬೇಗದ
ಲಲಸದೆನ್ನಯ ಗೋಮಯವನೀ [13]ಭುಂಜಿಸೆಂ[14]ದೆನುತ
ಸಲೆ ಸುಧೆಯನಾ ತೆರದಿನೀಯಲು
ಲಲಿತಮತಿ ಕೈಕೊಂಡು ಬಂದನು
ವಿಲಸದಭಿನವರಾಜಮಂದಿರಕಾಗಿ ಶೀಘ್ರದಲಿ ೨೩

ಬಂದು ದ್ವಾರ್ಸ್ಥರ ಕರೆದುದಂಕನು
ಸಂದ ವಿಪ್ರನು ಬಂದನೆಂದೆನ
ಲಂದು ತನ್ನೈಪಗರುಹಲಾತನ ಕರೆಸಿ ಭೂವರನು
ಚೆಂದವಹ [15]ಸತ್ ಕ್ರಿಯೆಯ ವಿರಚಿಸು
ತಂದು[16] ತತ್ಕಾರಣವ ಮನದೊಳ[17]ಗಂದವೆನೆ ತಿಳಿಯುತವೆ[18] ಬೆಸಗೊಂಡನು ಮುನೀಶ್ವರನ      ೨೪

ಏನು ಬೇಹುದುನಮ್ಮೆಡೆಯಲೆಲೆ
ಭೂನುತನೆ ಹೇಳೆನಲುದಂಕನು
ಮಾನಸದ ಸಂದೇಹವೆಲ್ಲವನುಳಿದು ನೃಪನೊಡನೆ
ನಾನು ಗುರುಸೇವಾರ್ಥನಾಗಿಯೆ
ಮಾನವೇಶ್ವರ ಬಂದೆ ನಿನ್ನಯ
ಮಾನಿನಿಯ ಘನ ರತ್ನಕುಂಡಲಕಾಂಕ್ಷೆಯಿಂದೆಂದ      ೨೫

ಎನಲು ನಕ್ಕನು ನೃಪನು ನಿನ್ನಯ
ಮನದಭೀಷ್ಟವನೀವಳೆನ್ನಯ
ವನಿತೆಯಲ್ಲಿಗೆ ಹೋಗು ಬೇಡಿದಡೀವಳೆಂದೆನಲು
ಘನಮಹಿಮನೈತಂದು ಕಾಣದೆ
ವನಜಮುಖಿಯನಿದೇನು ವಿಸ್ಮಯ
ವೆನುತ ತನ್ನೈಪನೆಡೆಗೆ [19]ಬಂದಾ ಮುನಿಪನಿಂತೆಂದ[20] ೨೬

ಪೋದೆನಂತಃಪುರಕೆ ಕಾಣೆನು
ಮೇದಿನೀಶ್ವರ ನಿನ್ನ ಸತಿಯನಿ
ದಾದ ಕಾರಣವೇನು ಬೆಸಗೊಳಲಾತ ನಸುನಗುತ
ಭುದಿವಿಜ ನೀನಶುಚಿಯೆನಿಸುವೆ
ಪಾದಕರಪ್ರಕ್ಷಾಲನಾಚ
ಮ್ಯಾದಿ ಪರಿಶುದ್ಧಿಯಲಿ ಪೋದರೆ ಕಾಂಬೆ ನೀನೆಂದ    ೨೭

ಮುನಿಪನಾರೀತಿಯಲಿ ಪೋದನು
ಘನಪತಿವ್ರತೆಯೆಡೆಗೆ ಮತ್ತಾ
ವನಿತೆಯಿದಿರೆದ್ದರ್ಘ್ಯಂಪಾದ್ಯಾದಿಗಳ ನೆರೆ[21] ರಚಿಸಿ
ಮನದಭೀಷ್ಟವ[22]ನೊರೆದ[23] ನೆನ್ನಯ
ಮನುಜನಾಯಕನೊಲಿದಕಾರ್ಯವೆ
ತನಗೆಬೇಕದರಿಂದಲೀವೆನು [24]ರತ್ನಕುಂಡಲವ[25]        ೨೮

ಎಡೆಯಲತಿ ವಿಘ್ನಗಳು ಬಹವದ
ಕೊಡನೆ ತಪ್ಪುದ ನೆನೆವುದೆಲೆ ಮುನಿ
ಬಿಡು ಮನದ ಸಂದೇಹವನು ಹೋಗೆನುತ ಹರುಷದಲಿ
ಮಡದಿ ಧಾರೆಯನೆರೆದು ಕೊಟ್ಟಳು
ಪೊಡವಿಗತಿಶಯ ಕುಂಡಲಂಗಳ
ನಡರಿದುರು ಸಂತೋಷಸಾಗರವಾ [26]ತಪೋನಿಧಿಯ[27]          ೨೯

ಬೀಳುಕೊಂಡನು ನೃಪಸ್ತಿಯ ಭೂ
ಪಾಲನನು ಹರಸಿದನು ಬಂದನು
ಮೇಲು ಮದದುಬ್ಬಾಳುತನದಲಿ ಪಥದ ಬಳಿವಿಡಿದು
ಮೇಲೆ ಮಧ್ಯಾಹ್ನಿಕ[28]ವ ವೈಶ್ವವ[29] ಷಾಲಿಸುವೆನೆಂದೆನುತಲಾಗಳು
ಲೋಲಕುಂಡಲಗಳನು [30]ತೀರದಲಿ[31]ರಿಸಿ ನದಿಗಿಳಿದ   ೩೦

ಎಲೆಮುನಿಗಳಿರ ಲೇಸ [32]ಕಾಣ್ಬಡೆ[33] ಪಲವು ವಿಘ್ನಗಳಹವು ನೋಡಲು
ಸುಲಭ[34]ಪ್ಪುದು ಧರ್ಮ[35]ನಿಷ್ಠರಿಗದುವೆ ಪುಸಿಯಲ್ಲ
ಸಲೆಯುದಂಕನು ನಿತ್ಯಕರ್ಮಾ
ವಳಿಯ ವಿರಚಿಸುತಿರಲು ತಕ್ಷಕ
ನೊಲಿದದೃಶ್ಯದಿ ಬಂದು ಕುಂಡಲಗಳನು ಕೊಂಡೊಯ್ದು         ೩೧

ಮಾಯವಾದನು ತಕ್ಷಕನು ಬಳಿ
ಕಾಯುವಂತನುದಂಕ ತನ್ನ[36]ಯ
ಧ್ಯೇಯನೀಯ[37]ವೆನಿಪ ನಿತ್ಯಕ್ರಿಯೆಯ ನೆರೆ ರಚಿಸಿ
ಆಯಿತಿಲ್ಲಿಗೆ ತಡವು ಹೋಹೆನು
ವಾಯುವೇಗದಲೆನುತ ನೋಡಿದ
ನಾ ಯುವಕ ತನಗಿತ್ತ ನಿರುಪಮ ದಿವ್ಯ ಕುಂಡಲವ     ೩೨

ಕಾಣದಾಕ್ಷಣ ಮುನಿವ ತನ್ನಯ
ಪ್ರಾಣ ಹೋದಂದಲಿ ಚಿಂತಿಸಿ
ಸ್ಥಾಣುವನು ನೆನೆದರಿದು ದಿವ್ಯಜ್ಞಾನ ದೃಷ್ಟಿಯಲಿ
ಕ್ಷೋಣಿಯಲಿ ತಕ್ಷಕನು ನೆನೆಸಿದ
ನೂಣಯವನಕಟಕವಿನ್ನೀ
ಕ್ಷೀಣನಾಗಿರ್ದವಗುಪಾಯವ ಕಾಣಬೇಕೆಂದ   ೩೩

ನಾಗಲೋಕದಲಿಹ[38]ನಲೇ[39] ತಾ
ನಾಗಲದಕೇನೆನುತ ಕಾಂಬೆನ
ದೀಗ ತಡವಿಲ್ಲೆನುತ[40]ಲೊಂದನು ಕಾಷ್ಠವನು ಕೊಂಡು[41] ಬೇಗ ಪೋಪೆನು ಬಿಲನಿವಾಸ
ಕ್ಕಾಗಲವ ಕೊಡದಿರ್ದಡವನನು
ನೀಗಿಸುವೆನೆಂ[42]ದಗುಳಿದನು ಧಾರಿಣೆಯ[43]ನಾ ಮುನಿಪ         ೩೪

ಎಲೆ ಮುನಿಗಳಿರ ಹೋದಕಾರ್ಯದ
ದಲಘುಧೈರ್ಯವೆ ಮುಖ್ಯ ಮತ್ತಾ
ಲಲಿತ ಗುರುಭಕುತಿಯ ಮಹಾಲವಲವಿಕೆಯಿನ್ನೆನಿತೊ
ಬಲಿದ ಭೂಮಿಯನಗಿದು ಪಥವನು
ಸುಲಭದಿಂದಾಗಿಸುವೆನೆಂದಾ[44]ಹುಲು[45]ಮರದ ಕಾಷ್ಠದಲಿ ಖನನವನೆಸಗಿದನು ಮುಳಿದು      ೩೫

ಇದನು ಕಂಡನು ಶಕ್ರನೀತನ
ಮದಮುಖದ ಗುರು [46]ಭಕುತಿಯನು ಮಿಗೆ[47] ಸದಮಳನಲಾಯೆನುತ ವಿಪ್ರಾಕಾರದಲಿ ಬಂದು
ಅದರ ವೃತ್ತಾಂತವನು ಬೆಸಗೊಳ
ಲುದಿತ ಧೈರ್ಯದಲೆಂದನಂದತಿ
ಮೃದುನುಡಿಯ ನೀ ಕೇಳು [48]ತನ್ನಯ ನೆನಹನಿದನಿಂದ[49]        ೩೬

ನಾನಯೋದನ ಧೌಮ್ಯಮುನಿಪಗೆ
ಮಾನನೀಯನು ಶಿಷ್ಯನಾತನ[50]ಮಾನನಿಯತಿಪ್ರೀಯದಲಿ ಪೌಷ್ಯಾವ[51]ನೀಶ್ವರನ[52]ಭೂನುತೆ[53]ಯ ಕುಂಡಲವ ತಹುದೆನ
ಲಾನುಡಿಗೆ ತಾ ಪೋಗಿ ತಂದೆನು
ಮಾನಹಾನಿಯನೆಸಗಿ ತಕ್ಷಣ ಚೌರ್ಯದಿಂದೊಯ್ದ     ೩೭

ಅದಕೆ ತಕ್ಕುದನೆಸಗಿ [54]ಕುಂಡಲ
ವಧಟಿನಲಿ ತಹೆನಿಂದಿನಲಿ ಗುರು
ಪದವನಜಗಳ[55] ಕಾಣಬೇಹುದು ತನ್ನಿಮಿತ್ತದಲಿ
ಒದವಿದೀಕಾಷ್ಠದಲಿ ಭೂಮಿಯ
ನಿದನಗುಳಿ ಪಾತಾಳಕೆಯ್ದಿಯೆ[56]ಮುದದಲಿಹ ತಕ್ಷಕಗುಪಾಯವನೆಸಗಬೇಕೆಂದ[57]     ೩೮

ಎನಲು ನಕ್ಕನು ಕಪಟ ಭೂಸುರ
ನನಘ ವಿಪ್ರೋತ್ತಮನೆ ಕಾಷ್ಠದ
ಲೊನೆದು[58] ನೀ ನೆನೆದಿರ್ದ [59]ಕಾರ್ಯವನೆಸಗಿ ಕಡೆಗಂಡು
ಮನವೊಲಿದು ನೀ ತಿರುಗುವುದು ಸಂ
ಜನಿಪುದಚ್ಚರಿಯೆನಲು ಮತ್ತಾ
ಘನ ಮಹಿಮನೆನಿಪಾವುದಂಕನು ನಗುತಲಿಂತೆಂದ    ೩೯

ತನಗೆ ಗುರುಕರುಣದಲಿ ಸಾಧ್ಯವ
ದೆನಿಸದಿಹುದೇ [60]ನೋಡು ಆ[61]ಚ್ಚರಿ
ಯ[62]ನೆನಲದಕಾಗವನು[63] ಹರುಷಿಸಿ ವಾಸವನು ಬಳಿಕ
ಫನ[64]ವೆನಿಪ[65] ವಜ್ರವನು [66]ಕಾಷ್ಠ[67]ದ
ಲನುವಿನಿಂದಾವಹಿಸಿ [68]ನೀ ನೆನೆ
ದನುನಯದ[69] ಫಲ ಸಿದ್ಧಿಸಲಿ ನಿನಗೆನುತಲಡಗಿದನು  ೪೦

[1] ಬರಲು ಪೌಲಸ್ತ್ಯನ ಪುರವರವು | (ಮು)

[2] ಬರಲು ಪೌಲಸ್ತ್ಯನ ಪುರವರವು | (ಮು)

[3] ತರದ ಗಂಗೆಯ ತೆರದಲಲ್ಲಿಯ | (ಮು)

[4] ತರದ ಗಂಗೆಯ ತೆರದಲಲ್ಲಿಯ | (ಮು)

[5] ಬರಬರಲು ಮುನಿವರನ ಸನ್ನಿಧಿ | ಗು (ಮು)

[6] ಬರಬರಲು ಮುನಿವರನ ಸನ್ನಿಧಿ | ಗು (ಮು)

[7] ಧುರ (ಮು)

[8] ಧುರ (ಮು)

[9] ನಿರುತ (ಮು)

[10] ನಿರುತ (ಮು)

[11] ನಿರಲು ಬಂದನು (ಮು)

[12] ನಿರಲು ಬಂದನು (ಮು)

[13] ಭುಜಿಪುದೆಂ (ಮು).

[14] ಭುಜಿಪುದೆಂ (ಮು).

[15] ಸತ್ ಕೃತಿಯ ನೀವುತ | ಲಂದು (ಮು)

[16] ಸತ್ ಕೃತಿಯ ನೀವುತ | ಲಂದು (ಮು)

[17] ಗಂದು ತಾ ತಿಳಿವುತ್ತ (ಮು)

[18] ಗಂದು ತಾ ತಿಳಿವುತ್ತ (ಮು)

[19] ಬಂದಿಂತೆಂದನಾ ಮುನಿಪ || (ಮು)

[20] ಬಂದಿಂತೆಂದನಾ ಮುನಿಪ || (ಮು)

[21] ಸತ್ಕಾರಂಗಳನು (ಮು)

[22] ನರಿದೆ (ಮು)

[23] ನರಿದೆ (ಮು)

[24] ಕುಂಡಲವ ನಿನಗೆ || (ಮು)

[25] ಕುಂಡಲವ ನಿನಗೆ || (ಮು)

[26] ಮುನೀಶ್ವರನ || (ಮು)

[27] ಮುನೀಶ್ವರನ || (ಮು)

[28] ಕ್ರಿಯೆಯನು (ಮು)

[29] ಕ್ರಿಯೆಯನು (ಮು)

[30] ಶಿರದಲ್ಲಿ (ಮು)

[31] ಶಿರದಲ್ಲಿ (ಮು)

[32] ಕಾಂಬರೆ (ಮು)

[33] ಕಾಂಬರೆ (ಮು)

[34] ಲ್ಲದು ನಿಯಮ (ಮು).

[35] ಲ್ಲದು ನಿಯಮ (ಮು).

[36] ವಿ | ಥೇಯ ನಿಯಮ (ಮು)

[37] ವಿ | ಥೇಯ ನಿಯಮ (ಮು)

[38] ನೆಲೆಯು (ಮು)

[39] ನೆಲೆಯು (ಮು)

[40] ಕಾಷ್ಠವ ತಾನು ಕೈಕೊಂಡ || (ಮು)

[41] ಕಾಷ್ಠವ ತಾನು ಕೈಕೊಂಡ || (ಮು)

[42] ದೆನುತ ಧಾರುಣಿಯಗಿದ (ಮು)

[43] ದೆನುತ ಧಾರುಣಿಯಗಿದ (ಮು)

[44] ಸಲೆ  (ಮು)

[45] ಸಲೆ  (ಮು)

[46] ಭಕ್ತಿಯೆಡೆಯಲಿ | (ಮು)

[47] ಭಕ್ತಿಯೆಡೆಯಲಿ | (ಮು)

[48] ಭೂಸುರ ನೆನಹುನಿಂತೆಂದ || (ಮು)

[49] ಭೂಸುರ ನೆನಹುನಿಂತೆಂದ || (ಮು)

[50] ಮಾನಿನಿಯು ಪ್ರೀತಿಯಲಿ ಪೌಲಸ್ತ್ಯಾವ (ಮು)

[51] ಮಾನಿನಿಯು ಪ್ರೀತಿಯಲಿ ಪೌಲಸ್ತ್ಯಾವ (ಮು)

[52] ಸುನೃತೆ (ಮು)

[53] ಸುನೃತೆ (ಮು)

[54] ತಕ್ಷಕ | ನಧಟ ಮುರಿದಿಂದಿನಲಿ ಗುರಿವಿನ | ಪದರಜವತಾ (ಮು)

[55] ತಕ್ಷಕ | ನಧಟ ಮುರಿದಿಂದಿನಲಿ ಗುರಿವಿನ | ಪದರಜವತಾ (ಮು)

[56] ಮದಮುಖನ ನಿಗ್ರಹಿಸಿ ಕುಂಡಲಗಳನು ತಹೆನೀಗ || (ಮು)

[57] ಮದಮುಖನ ನಿಗ್ರಹಿಸಿ ಕುಂಡಲಗಳನು ತಹೆನೀಗ || (ಮು)

[58] ನೆನಹಿನಲಿರ್ದ (ಮು).

[59] ನೆನಹಿನಲಿರ್ದ (ಮು).

[60] ಏನದ (ಮು)

[61] ಏನದ (ಮು)

[62] ನಲು ತಾನದಕಾಗ (ಮು)

[63] ನಲು ತಾನದಕಾಗ (ಮು)

[64] ತರದ (ಮು)

[65] ತರದ (ಮು)

[66] ಕೊಟ್ಟ (ಮು)

[67] ಕೊಟ್ಟ (ಮು)

[68] ನೆನೆದು | ತನುನಯದೆ (ಮು)

[69] ನೆನೆದು | ತನುನಯದೆ (ಮು)