ಸೂಚನೆ:

ಬಂದು ಕಂಡನು

[1]ರಾಜವನಮಾ[2] ಕಂದ ಜನಮೇಜಯಮಹೀಪತಿ
ಗಂದು ಕಥನವನರುಹಿ ಸರ್ಪಾಧ್ವರವ ತೊಡಗಿಸಿದ

ಪದನು:
ಹೇಳಿದರು [3]ತನ್ಮಂತ್ರಿಗಳು ಭೂ[4] ಪಾಲ ಜನಮೇಜಯಗೆ ಬಳಿಕಾ
ವೇಳೆಯಲಿ ಶಿಷ್ಯಪ್ರಶಿಷ್ಯರುಸಹಿತುದಂಕಮುನಿ
ಜೋಳಿಸಿದಶಾಂತಿಯಲಿ ಪೂರ್ವದ
ಕಾಲದಲಿ ತಕ್ಷಕನು ಮಾಡಿದ
ಖೂಳತನವನು ನೆನೆದು ಬಂದನು ನೃಪನು ಹೊರೆಗಾಗಿ         ೧

ಬರಲು ಮುನಿಯಿದಿರೆದ್ದು ಭಕ್ತಿಯ
ಭರದಿ ವಂದಿಸಿ ಸತ್ಕೃತಿಯನಂ
ದರಸ ವಿರಚಿಸಿ ಬಳಿಕ ಬರವೇನೆಂದು ಬೆಸಗೊಳಲು
ಪಿರಿದು ಸಲ್ಲಾಪಗಳ ಮಾ[5]ಡಿದು[6] ಪರಮ ತತ್ತ್ವವನೊರೆದು ಮೆಲ್ಲನೆ
ದುರುಳ ತಕ್ಷಕಗುಪಹತಿಯ [7]ಬಗೆ[8]ದಾಗಳಿಂತೆಂದ      ೨

ಆದರೇನೆಲೆ ಭೂಪ ರಾಜರು
ಮೇದಿನಿಯನಾ[9]ಳುವರಿ[10]ಗೊಂದೇ
ಕಾದ ಕರಣವು ಪದುಳ ರಾಜ್ಯವನಾಲಿ ಧರ್ಮದಲಿ
ಕಾದಿದರೆ ಪ್ರತಿಭಟರನಿರಿವುದು
ಭೇದದಲಿ ನೆರೆ ಕೊಂದವರ ಮಿಗೆ
ಭೇದಿಸಿಯೆ ಕೊಲಬೇಕು ಹಿಂಸೆಯಿದಲ್ಲ ಶಾಸ್ತ್ರದಲಿ     ೩

ಅದು ನಿಮಿ[11]ತ್ತೆಲೆ[12] ಭೂಪ ನಿಮ್ಮಯ
ಸದಮಲಾನ್ವಯ[13]ಶರಧಿಚಂದ್ರಮ[14] ನಧಟು ಮಿಗೆ ನಿಮ್ಮಯ್ಯ ರಾಜ್ಯವನಾಳುತೊಂದುದಿನ
ವಿದಿತವೆನಲೈದಿದನಂ ಬೇಂಟೆಗೆ
ಹೃದಯದಲಿ ನೀರಡಿಸಿ ಬಂದನು
ಸದನವೊಂದರಲೊರ್ವಸಂಯಮಿ ಯೋಗದಿಂ[15]ದೆಸೆವ[16]       ೪

ನೃಪನು ಬಂದಿರೆ ಯೋಗದಿಂದಾ[17]ತೃಪುತ[18] ಮುನಿಯಿರೆ [19]ತನ್ನ ಲಿಕ್ಕಿಸ
ದಪಸದನಲಾಯೆನುತ ಖಾತಿಯ ಧರಿಸಿಯಳಿದಿರ್ದ[20] ಕುಪಿತ ಕಾಳೋರಗವನೊಂದನು[21]ರಪಣಗೇಡಿಯೆನುತ್ತ[22]ಕೊರಳಿಂ
ಗಪಯಶವಿದೆಂದರಿಯದಾತಗೆ ಸುತ್ತಿ ಮರಳಿದನು     ೫

ಇತ್ತಲಾ ಮುನಿ[23]ಸುತನು[24] ಶೃಂಗಿಯು
ಹತ್ತೆ ಬಂದಾ ಪಿತನ ಕಾಣುತ
ಲತ್ತು ತನ್ನಯ ಜನಕನೊಡಲಲಿ [25]ಮೃತಸರೀಸೃಪನ[26] ಸುತ್ತಿದವನಿಂದೇಳು ದಿನದಲಿ
ಮತ್ತೆ ಬಂದಾ ತಕ್ಷಕನು ಮಿಗೆ
ಮೃತ್ಯುವಾಗಲೆನುತ್ತ ಶಪಿಸಿದನಾಗ ರೋಷದಲಿ        ೬

ಅರಸೆ ವಿಪ್ರೋತ್ತಮರ ಶಾಪವ
ಪರಿಹರಿಸಲಾರಳವು ಹೋಗಲಿ
ಬರುತ ತಕ್ಷಕ ಕಂಡನಾ ಕಶ್ಯಪನ ವಂಶಜನ
ತಿರುಗಿಸುವೆ ತಕ್ಷಕನ ವಿಷವನು
ಕರುಣದಲಿ ಸಲಹುವೆನು ಭೂಪನ
ಪರಮಪುಣ್ಯಾತ್ಮಕನನೆನುತಿರೆ ಕಂಡನುರಗೇಂದ್ರ      ೭

ಬಂದವಿಪ್ರಗೆ ಧನವ ತಾ ಮುದ
ದಿಂದಲಿತ್ತಾತನನು ಕಳುಹಿಯೆ
ಸಂದ ವಿಪ್ರಾಕಾರದಲಿ ನಾಗರಗಳನು ಕಳುಹಿ
ಅಂದು ಫಲರೂಪದಲಿ ತಾನೇ
ಬಂದು ನೃಪತಿಯ ಕಚ್ಚಿ ಪೋದುದ
ರಿಂದ ಮೃತಿ [27]ಘಟಿಸಿದುದು ನಿಮ್ಮಯ[28] ಪಿತನಿಗಕಟೆಂದ       ೮

ಅಕಟ ಹರಯದ ರಾಜನಾತನ
ನಕುಟಿಲನನಿವ ಕೊಂದು ಪೋದನು
ಪ್ರಕಟದಿಂದಾ ವಿಪ್ರನನು ಮರಳಿಸಲು ತನಗೇಕೆ
ಸುಕರದಲಿ ನಾಗರುಗಳೆಲ್ಲರ
ವಿಕಳರನು ನೆರೆಮಾಡಿ ನೀತ
ಕ್ಷಕನುರಿವ ತೆರ ನೆನೆವುದೆನೆ ಕೈಕೊಂಡನಾಭೂಪ      ೯

ಎನಲು ಕೇಳ್ದರು ಶೌನಕಾದಿಗ
ಳನಘ ಸೂತನಿಗೆಂದರೇತಕೆ[29]ಮುನಿಯು[30]ದಂಕಗೆ ವೈರ ತಕ್ಷಕನೊಡನೆ ತನಗಿನಿತು
ಘನ ಮಹಿಮನಹ ವ್ಯಾಸಮುನಿಪನು
ನಿನಗೆ ಪೇಳ್ದಂದವನು ನೀನೆಮ
ಗನುವಿನಲಿ ಪೇಳೊಲಿದು ತತ್ಕಾರಣವನೆಲ್ಲವನು       ೧೦

ಎನಲು ನಿಡುದನು ಸೂತನೆಲೆ [31]ಮುನಿ
ಜನರೆ ಕೇಳಿಯುದಂಕನಿಂದತಿ[32] ಮನಮುನಿಸು ತಕ್ಷಕನೊಳೇತಕೆ ಬಂದುದೆಂಬುದನು
ಘನ[33]ಕೃಪಾ[34]ನಿಧಿ ಭೃಗು[35]ಕುಲಜನನು
ಪಮನು ತಾಳ್ದು ದ್ವಿಜತ್ವವನು ತಾ
ಘನತೆ ಮಿಗೆ[36] ವೇದಾಧ್ಯಯನಪರನಾಗಿ ಹೊರವಂಟ  ೧೧

ಬಂದು ಕಂಡನದೊರ್ವ ಮುನಿಸಂ
ಕ್ರಂದನನನಾಯೋಧಧೌಮ್ಯನ
ನಂದು ವಂದಿಸಿಯಧ್ಯಯನಕಾಂಕ್ಷೆಯಲಿ ತಾ ನೆನೆದ
ಸಂದ ವೃತ್ತಾಂತವನು ಹೇಳಲಿ
ಕಂದು ಹರುಷದಲಾತನೀತಂ
ಗಂದು ಮೊದಲೆನೆ ಕಲಿಸಿದನು ಹದಿನಾಲ್ಕು ವಿದ್ಯೆಗಳ ೧೨

ಹಲವು ಶಾಸ್ತ್ರವ ಕಲಿತುದಂಕನು
ಕೆಲವು ದಿನ ಗುರು[37]ಸೇವೆಯನು ಸಲೆ
ಸಲಿಸುತಿರಲಾತನನು[38] ಕರೆದು ಮನೋನುರಾಗಲಿ
ಬಲುವಿಡಿದು ಶುಶ್ರೂಷೆಯನು ನೀ
ಸಲೆ ರಚಿ[39]ಸೆಯದರಿಂದ[40] ಪೋದುದು
ಪಲವು ವತ್ಸರ[41]ವೆಲೆ ಮಗನೆ ಸುಖಿಯಾಗು ಹೋಗೆಂದ[42]       ೧೩

*ಎಂದು ನುಡಿಯಲು ಕೇಳಿ ಮುನಿಯೊಡ
ನಂದು ನುಡಿದನುದಂಕನಂದಾ
ನಂದ ಮಿಗಲೆಲೆ ತಾತ ಗುರುದಕ್ಷಿಣೆಯ ತಾನಿತ್ತು
ಚೆಮ್ದ ಮಿಗೆ ನೇಮವನು ಕೊಂಬುದೆ
ಸಂದ ಪರಿವಿಡಿ ನಿಮಗೆ ಬೇಹುದ
ನಿಂದು ಬೆಸಸುವುದೆನಲು ಹರುಷಿತನಾಗುತಿಂತೆಂದ   ೧೪

ಬಂದುದೆಮಗಲೆ ಮಗೆನೆ ನೀ ಕೊಡು
ವಂದವೆನಿಸಿದ ದಕ್ಷಿಣಾರ್ಥವಿ
ದಿಂದು ಪರಿಯಂತರವು ನೀ ಶುಶ್ರೂಷೆಯಿಂದೆಮ್ಮ
ಚೆಂದದಲಿ ಮೆಚ್ಚಿಸಿದೆ ಬೇಡೆನ
ಲೊಂದಿದತಿ ಭಕ್ತಿಯಲಿ ಮತ್ತಿಂ
ತೆಂದ ದಕ್ಷಿಣೆಯಿತ್ತಡಲ್ಲದೆ ಪೋಪನಲ್ಲೆಂದು    ೧೫

ಎಂದ ನುಡಿಯನು ಕೇಳುತಾಗುರು
ವಂದು ಮನಕದು ಸೊಗಸದಿರೆ ಮ
ತ್ತಿಂದುಮುಖಿಯಹ ತನ್ನ ಸತಿಯ ನಿರೂಪವನು ಕೇಳಿ
ತಂದು ಕೊಡು ಆ ಕಾಂತೆ ಬೇಡಿದ
ಚೆಂದವಹ ವಸ್ತುವನು ನೀನೆನ
ಲೊಂದಿದತಿ ಹರುಷದಲಿ ಸತಿಯಿದ್ದೆಡೆಗೆ ನಡೆತಂದ    ೧೬

ಬಂದು ವಂದಿಸಿ ಗುರು ನಿರೂಪದ
ಛಂದವನು [43]ತಾ ಪೇಳಲಾ[44] ಸತಿ
ಯೆಂದು ನುಡಿದಳು ತನಗೆ ವಾಂಛಿತವೆನಿಸಿ[45]ದರ್ಥ[46]ವನು
ಸಂದ [47]ಪೌಷ್ಯ ನೃಪಾಲಕನ[48] ವಧು
ವಿಂದು ಧರಿಸಿಹಳೆಲೆ ಮಗನೆ ನೀ
ತಂದು ಕೊಡು ಕುಂಡಲವನಮರಾವಳಿಗೆ ದುರ್ಲಭವ   ೧೭

ಎಂದಿಗಾದರು ತಂದುಕೊಡುವರೆ
ಮಂದಮತಿ ತರಬೇಡ ಕೇಳದ
ರಿಂದ ಫಲವೆನಗಿಲ್ಲವಿಂದಿಗೆ ಮೂರು ದಿವಸದಲಿ
ಸಂದ ಪತಿ ಮನವೊಲಿದು ಮಾಳ್ಪರು
ಚೆಂದವಹ ಪಿತೃಯಜ್ಞವನು ನೀ
ನಂದಿಗಪ್ಪಂದದಲಿ ಬಹುದೆನಲಾತ ಕೈಕೊಂಡ         ೧೮

ಬರುತ ಗಂಗಾ[49]ನದಿ[50]ಯ ಕಂಡನು
ಭರದಿ ಕಾಲ್ಮೊಗದೊಳೆದು ಶುದ್ಧಾ
ಚರನವಿರಚಿತನಾಗಿ ಗುರುಪಾದಾಬ್ಜಕಭಿನಮಿಸಿ
ಹರುಷದಲಿ ತಾ ನಿತ್ಯ ಸೇವಿಪ
ಸುರಚಿರಾಗ್ನಿ[51]ಗೆ ನಮಿಸಿ[52] ಹರುಷದ
ಭರವಸದಿ ತಾ ಬರುತ ತವಕಿಸುತಿದ್ದನದಿಗಡಿಗೆ        ೧೯

ಧರಣೆಯೊ[53]ಳಗಾ ಪೌಷ್ಯ[54]ರಾಯನ
ಪುರವು ತಾನಿನ್ನೆನಿತು ದೂರವೊ
ಹರಹರಾ ಗುರುಪತ್ನಿಯಭಿಮತವೆಂತು ಸಿದ್ಧಿಪುದೊ
ಪರದ ಸುಖವೀ ಧರೆಯೊಳಗೆ ತಾ
ಗುರುಭಜಕರಾದವರಿಗಲ್ಲದೆ
ದೊರಕಲರಿಯದೆನುತ್ತ ಬರುತಿರ್ದನು [55]ತಪೋವನದಿ[56]         ೨೦

* ಮುದ್ರಿತ ಪ್ರತಿಯಲ್ಲಿ ಈ ಸಂಧಿಗಿಂತ ಮೊದಲು ಇನ್ನೊಂದು ಹೆಚ್ಚಿನ ಸಂಧಿ ಇದೆ. ಅದು ನಮಗೆ ದೊರೆತ ಕೈಬರಹದ ಪ್ರತಿಗಳಲ್ಲಿಲ್ಲ. ಆದರು ಅದನ್ನು ಪರಿಶಿಷ್ಟರಲ್ಲಿ ತೆಗೆದುಕೊಳ್ಳಲಾಗಿದೆ. ಈ ಸಂಧಿಯು ’ಪ’, ’ಭ’ ಪ್ರತಿಗಳಲ್ಲಿಲ್ಲ. ಮುದ್ರಿತ ಪ್ರತಿಯಲ್ಲಿ ಈ ಸಂಧಿಯು ೧೨೭ ಪದ್ಯಗಳಿಂದ ಕೂಡಿದೆ. ಹೆಚ್ಚಿನ ೭೬ ಪದ್ಯಗಳನ್ನು ಪರಿಶಿಷ್ಟರಲ್ಲಿ ತೆಗೆದುಕೊಳ್ಳಲಾಗಿದೆ.


[1] ದಂಕನವನಾ (ಮು)

[2] ದಂಕನವನಾ (ಮು)

[3] ಮಮ್ಟ್ರಿಗಳು ಭೂಮೀ | (ಮು)

[4] ಮಮ್ಟ್ರಿಗಳು ಭೂಮೀ | (ಮು)

[5] ಡುತ (ಮು)

[6] ಡುತ (ಮು)

[7] ನೆನೆ (ಮು)

[8] ನೆನೆ (ಮು)

[9] ಳ್ವವರೆ (ಮು).

[10] ಳ್ವವರೆ (ಮು).

[11] ತ್ತವೆ (ಮು)

[12] ತ್ತವೆ (ಮು)

[13] ಚಂದ್ರಮನು ತಾ ೯ಮು)

[14] ಚಂದ್ರಮನು ತಾ ೯ಮು)

[15] ದಿರಲು (ಮು)

[16] ದಿರಲು (ಮು)

[17] ತಪದಿ (ಮು)

[18] ತಪದಿ (ಮು)

[19] ಲೆಕ್ಕಿಸನಲಾ | ತಪಸಿಯೆಂದೆನುತಾಗ ಖಾತಿಯ ಧರಿಸಿ ಮೃತವಾದ || (ಮು)

[20] ಲೆಕ್ಕಿಸನಲಾ | ತಪಸಿಯೆಂದೆನುತಾಗ ಖಾತಿಯ ಧರಿಸಿ ಮೃತವಾದ || (ಮು)

[21] ತಪವ ಕೆಡಿಸು ವೆನೆನುತ (ಮು)

[22] ತಪವ ಕೆಡಿಸು ವೆನೆನುತ (ಮು)

[23] ಸೂನು (ಮು)

[24] ಸೂನು (ಮು)

[25] ಕ್ರೂರ ಸರ್ಪವಿದ || (ಮು).

[26] ಕ್ರೂರ ಸರ್ಪವಿದ || (ಮು).

[27] ಪರುಠವಿಸಿತಿದು ನಿಮ್ಮ (ಮು)

[28] ಪರುಠವಿಸಿತಿದು ನಿಮ್ಮ (ಮು)

[29] ಮುನಿಸು (ಮು)

[30] ಮುನಿಸು (ಮು)

[31] ಯಲೆ | ದಂಕನ | (ಮು)

[32] ಯಲೆ | ದಂಕನ | (ಮು)

[33] ತಪೋ (ಮು)

[34] ತಪೋ (ಮು)

[35] ಮುನಿಕುಲಜ | ನನುಪಮನ, ನನುವುಮಿಗೆ (ಮು)

[36] ಮುನಿಕುಲಜ | ನನುಪಮನ, ನನುವುಮಿಗೆ (ಮು)

[37] ವರರ ಸೇವೆಯ | ಸಲೆ ರಚಿಸುತಿರಲಾತ (ಮು)

[38] ವರರ ಸೇವೆಯ | ಸಲೆ ರಚಿಸುತಿರಲಾತ (ಮು)

[39] ಯಿಸೆಮ್ದೆನಲು (ಮು)

[40] ಯಿಸೆಮ್ದೆನಲು (ಮು)

[41] ಹೋಗಿ ಗಾರ್ಹಸ್ಥ್ಯವನು ಧರಿಸೆಂದ || (ಮು)

[42] ಹೋಗಿ ಗಾರ್ಹಸ್ಥ್ಯವನು ಧರಿಸೆಂದ || (ಮು)

* ’ಮು’ ಪ್ರತಿಯಲ್ಲಿ ಈ ಪದ್ಯವಿಲ್ಲ.

[43] ಪೇಳೆನಲಿಕಾ (ಮು)

[44] ಪೇಳೆನಲಿಕಾ (ಮು)

[45] ದಂದ (ಮು)

[46] ದಂದ (ಮು)

[47] ಪೌಲಸ್ತ್ಯ ನೃಪತಿಯ (ಮ)

[48] ಪೌಲಸ್ತ್ಯ ನೃಪತಿಯ (ಮ)

[49] ದುನಿ (ಮು)

[50] ದುನಿ (ಮು)

[51] ಯ ಸ್ತುತಿಸಿ (ಮು)

[52] ಯ ಸ್ತುತಿಸಿ (ಮು)

[53] ಳು ಪೌಲಸ್ತ್ಯ (ಮು)

[54] ಳು ಪೌಲಸ್ತ್ಯ (ಮು)

[55] ಸರಾಗದಲಿ | (ಮು)

[56] ಸರಾಗದಲಿ | (ಮು)