ಮುಟ್ಟಿ ಮಂತ್ರಿಸಿದಡೆ ಮಹಾದ್ವಿಜ

[1]ದೃಷ್ಟಿ[2]ಗದುವೇ ಭಂಗ ನೋಡಾ
ದುಷ್ಟ ಪನ್ನಗ ಮಂತ್ರಬಲವನು ನೋಡುನೋಡೆನುತ
ದೃಷ್ಟಿಯಲಿ ಮಂತ್ರಜ್ಞನೀಕ್ಷಿಸೆ
ತೊಟ್ಟುದಸುವನು ಭಸ್ಮರೂಪವ
ಬಿಟ್ಟುದಂಕುರಿಸಿತ್ತು ಪಲ್ಲವಿಸಿತ್ತು ಮರನಾಯ್ತು ೨೧

ಹೊನ್ನಬಣ್ಣವದಾಯ್ತು ಮರನದು
ಹೊನ್ನ [3]ಕೊಂಭೆ[4]ಗಳಿಂದ ಮೆರೆದುದು
ಮುನ್ನಿನಿಂದತಿಶಯಸಮ[5]ಗ್ರೋದಗ್ರಪರ್ಣದಲಿ[6] ಪನ್ನಗೇಂದ್ರನು ಕಂಡನದನತಿ
ಖಿನ್ನನಾದನು ವಿಫಲವಾದುದು
ತನ್ನಮನದಂಘವಣೆಯೆನುತಿಂತೆಂದನಾ ದ್ವಿಜಗೆ        ೨೨

ಏನನಭ್ಯರ್ಥಿಸುವೆ ಹೋಹೆಯ
ದೇನು ಕಾರಣ ಮಾಳ್ಪು[7]ದೇನಾ[8] ಮಾನವೇಶ್ವರನಾವುದೈ ಕರ್ತವ್ಯ ನಿನಗೆನಲು[9]ಹಾನಿಯೇ[10] ಪರಹಿತವ ಮಾಡಿ ಮ
ಹಾನುಭಾವರು ಕೆಡುವರೇ
ಧನಹೀನ[11]ನೆನಗವನೀವನಿಷ್ಪಾರ್ಥವನು[12] ಕೇಳೆಂದ   ೨೩

*ಐಸಲೇ ತಾನೀವೆನರ್ಥವ
ನೇಸನಭ್ಯರ್ಥಿಸುವೆ ಹೇಳೆನೆ
ಲೇಸನಾಡಿದೆ ಬರಿಯೆ ಧನವನು ಕೊಂಡು ಫಲವೇನು
ನಾಶವಲ್ಲೈ ಪರರ ಜೀವವ
ಸಾಸಿಗನೆ ರಕ್ಷಿಸಿದ ಫಲವವಿ
ನಾಶಿ[13]ಫಲ[14]ವೆಂದೆಂಬರುಭಯಾರ್ಥವದು ತನಗೆಂದ  ೨೪

ವಿಪ್ರಶಾಪದಲಳಿವ ನೃಪನನು
ತಪ್ಪಿಸುವೆ[15]ನೆಂದೆಂ[16]ಬೆ ನಿಧಿಕೃತ
ತಪ್ಪಲರಿವುದೆ ಕಾವರಾರಾಯುಷ್ಯವಿಲ್ಲದನ
ತಪ್ಪದಲ್ಲಿ ಲಘುತ್ವ ನಿನಗೆಲೆ
ವಿಪ್ರ ಭಾವಿಸಿ ನೋಡು ಧನವನು
ಕೊಪ್ಪರಿಗೆಯಲಿ ತುಂಬಿಕೊಡುವೆನು ಕೊಂಡು ಹೋಗೆಂದ        ೨೫

ಎಂದಡಾಲಿಸಿ ನೊಡಿ ತನ್ನೊಳ
ಗಂದು ತಿಳಿದನು ವಿಗತಜೀವನ
ನೆಂದು ನೃಪನನು ಬರು ಚಿಕಿತ್ಸಿಸಲೇನು ಫಲವೆನುತ
ಎಂದನಿತು ಧನವನು ಕೊಡಲು ಕೊಂ
ಡಂದು ಮರಳಿದನಾ ದ್ವಿಜೋತ್ತಮ
ನೊಂದುಪಾಯವ ಗೆಲಿದೆನೆಂದನು [17]ತಕ್ಷಕನು ತಿರುಗಿ[18]         ೨೬

ಇಂತು ತಪ್ಪಿಸಿ ಬರುತ ತನ್ನಲಿ
ಚಿಂತಿಸಿದನಾ ತಕ್ಷಕನು ನೃಪ
ನೆಂತು ಗೋಚರನಹನು ಕೊಲುವೆನದೆಂತು ನಾನವನ
ಮಂತ್ರಿಗಳ ಬಲು ಮಂತ್ರವಾದಿಗ
ಳಂತರಾಳದಲಿರ್ದವನನೆಂ
ದಿಂತು ತನ್ನೋ [19]ಡನಿ[20]ರ್ದವರಿಗಿದನೆಂದನುರಗೇಂದ್ರ ೨೭

ಭೂಸುರರು ನೀವಾಗಿ ಹೋಗಿ ಮ
ಹೀಶನಲ್ಲಿಗೆ ಮರಸಿಕೊಂಡೀ
ವೇಷವನು ಕೊಡುವುದು ಸುಪುಷ್ಪಫಲಾವಳಿಯನೆನುತ
ಸಾಸಿಗನು ಕಳುಹಿದರೆ ಬಂದರು
ಭೂಸುರಾಕಾರದಲಿ ಕೊಟ್ಟರು
ಲೇಸೆನಿಪ ಫಲಪುಷ್ಪನಿಕರಂಗಳನು ನರಪತಿಗೆ         ೨೮

ಅದರೊಳಗೆ ತಾನೊಂದು ಫಲದಂ
ಗದಲಿ ಬಂದನು ಕುಹಕಿ ತಕ್ಷಕ
ಹೃದಯಹರವೆಂದಿನಿಪ ಬಹಳಾಮೋದ ಮಘಮಘಿಸೆ
ಅದರೊಳುತ್ತಮವಾದ ಫಲವನು[21]ಮುದದ[22]ಲವನಿಪ ತಾನೆ ಕೊಂಡುಳೆ
ದುದನು [23]ಕೊಟ್ಟನು ಮಂತ್ರಿಗಳಿಗಿದ[24] ಮೆಲ್ಲಿ ನೀವೆನುತ        ೨೯

ಇಳಿದನಪರಾಂಬುಧಿಗೆ ರವಿಯರೆ
ಗಳಿಗೆಗಂಜುವನಲ್ಲ ತಾನಿ
ನ್ನೆಲವೊ ತಕ್ಷಕಗಿಕ್ಷಕಂಗೆನುತ ಹರುಷದಲಿ
ಫಲವ ಕೈಯಲಿ ಹಿಡಿದು ಮಂತ್ರಿಗ
ಳುಲಿಯೆ ವಾಸನಿಸುತ್ತ ಕಂಡನು[25]ಹುಳುವ[26]ನದರೊಳು ಕೃಷ್ಣವರ್ಣದ ಸೂಕ್ಷ್ಮರೂಪವನು         ೩೦

ಬಾರನೇತಕೆ ತಕ್ಷಕಾಖ್ಯ ಮ
ಹೋರಗನು ವಿಪ್ರಾತ್ಮಜನ ನುಡಿ
ಘೋರ ಶಾಪವಿದೆಂತು ತಪ್ಪಿತೊ ಬಲ್ಲರಾರದನು
ಸಾರ[27]ದಲ್ಲಿ[28] ಹುಳುವಿದೆ[29]ನ್ನನು
ಘೋರ[30] ತಕ್ಷಕನಾಗಿ ಸುಡಲೀ ಶ
ರೀರವನು ಭೂಸುರನ ಶಾಪವ ಸಲಿಸಬೇಕೆಂದ        ೩೧

ನಕ್ಕು ಸರಸವನಾಡಿ [31]ಮುದದಲಿ[32] ಸೊಕ್ಕಿ ಕೊರಳನು ಹೊಡೆಯೆ ಫಲದಲಿ
ಡೊಕ್ಕರಿಸಿದನು ನಾಗರಾಜನು ಕೊರಳನವನಿಪನ
ಧಿಕ್ಕೆನಲು ಚೆಲ್ಲಿದುದು ಸಭೆ ನೃಪ
ಚಕ್ರವರ್ತಿಯನುರಗವೇಷ್ಟಿಸ
ಲಿಕ್ಕೆಲದ ಮಂತ್ರಜ್ಞರೋಡಿದರಂಜಿ ದೆಸೆದೆಸೆಗೆ         ೩೨

ಭೂಪವರನೀಕ್ಷಿಸುತ ಸಂವಿ
ದ್ರೂಪ ಪರಮಾತ್ಮನಲಿ [33]ಸಂದನು[34] [35]ಶಾಪಮಿಗೆಯು[36]ರುಹಿದ[37]ನು ಕಾಯವನುರು ವಿಷಾಗ್ನಿಯಲಿ[38] ತಾಪಗೊಂಡುದು ಸಕಲ ಜನನಿ
ರ್ಲೇಪನಳಿವನು ಕಂಡು ಮನೆಯನು
ದೀಪಿಸಿತು [39]ದೀಪ್ತಾಗ್ನಿಯಲಿ ನಿಮಿಷಾರ್ಧ ಮಾತ್ರದಲಿ[40]         ೩೩

ಹೊಳೆದು ಹೋದನು ಮಿಂಚಿನಂತಿರೆ
ಥಳಥಳಿಸೆ ಗಗನದಲಿ ಸೂರ್ಯನ
ಹೊಳಹು ಹುರಿಗೊಂಡಂತೆ ತಕ್ಷಕನಾ ನಿಜಾಲಯಕೆ
ಬಳಿಕ ನೃಪಸಂಸ್ಕಾರಕರ್ಮವ
ನೊಲಿದು ಮಾಡಿದುದಾಪ್ತಜನ ಕೇ
ಳಲಘು[41]ವಿಕ್ರಮ[42]ಹದನವೆಂದರು ಮಂತ್ರಿಗಳು ನೃಪಗೆ ೩೪

ಮಾಡಿದೆವು ಬಾಲ್ಯದಲಿ ನಾವೀ
ರೂಢಿಗಾಶ್ರಯವಾಗಿ [43]ನಿನ್ನನು[44] ಕಾಡಮರನೇ ಕಲ್ಪತರುವಿನ ಬೀಜದಂಕುರವು
ಬೇಡಿಕೋ ದೈವವನು ಸಂಶಯ
ಬೇಡ ನಿನ್ನಲಿ ಕರುಣವನು ನೆರೆ
ಮಾಡುವನು ನಿತ್ಯಾತ್ಮನಾರಾಯಣನು ಮನವೊಲಿದು ೩೫

ದಶಮ ಸಂಧಿ ಸಮಾಪ್ತ

[1] ಸೃಷ್ಟಿ (ವಿ)

[2] ಸೃಷ್ಟಿ (ವಿ)

[3] ಶಾಪೆ (ವಿ, ಪ)

[4] ಶಾಪೆ (ವಿ, ಪ)

[5] ಗ್ರದ ಶಾಖೆಗಳು ಸಹಿತ || (ಪ)

[6] ಗ್ರದ ಶಾಖೆಗಳು ಸಹಿತ || (ಪ)

[7] ದಾವುದು (ಪ)

[8] ದಾವುದು (ಪ)

[9] ದಾನಿಯದೆ (ಭ)

[10] ದಾನಿಯದೆ (ಭ)

[11] ನಾಗಳೆ ನೆರೆವನಿಷ್ಟಾರ್ಥವನು (ಭ), ನೆನಗಿಷ್ಟಾರ್ಥವಿದುವೈ ಸರ್ಪ (ಪ)

[12] ನಾಗಳೆ ನೆರೆವನಿಷ್ಟಾರ್ಥವನು (ಭ), ನೆನಗಿಷ್ಟಾರ್ಥವಿದುವೈ ಸರ್ಪ (ಪ)

* ೨೪ ರಿಂದ ೨೨೭ ರವರೆಗಿನ ೪ ವರೆಗಿನ ೪ ಪದ್ಯಗಳು ’ಪ’ ಪ್ರತಿಯಲಿಲ್ಲ. ೨೫ ನೆಯ ಪದ್ಯವಾದ ಮೇಲೆ ಮುದ್ರಿತ ಪ್ರತಿಯಲ್ಲಿ ಒಂದು ಪದ್ಯವು ಹೆಚ್ಚಿಗಿದೆ. ಏಕೆ ನಿನಗೀ ವೈರ ತಕ್ಷಕ | ಸಾಕು ನಾ ರಕ್ಷಿಸುವೆ ನೆನೆ ಹಿಂ | ದೇಕೆ ಖಾಂಡವ ದಹನದಲಿ ಫಲುಗುಣನು  ಸಲೆ ಮುಳಿದು || ಸೋಕಿದನು ತನ್ನುವನು ಬರಿದೇ | ಕಾಕುಳವ ಮಾಡಿದನು ಹಗೆಯನು | ಸಾಕುವೆನು ಬಲು ವಿಪ್ರಶಾಪ ಸಹಾಯವಾಯ್ತೆಂದ ||

[13] ಪದ (ಭ)

[14] ಪದ (ಭ)

[15] ನೀನೆಂ (ಭ)

[16] ನೀನೆಂ (ಭ)

[17] ತನ್ನ ಮನದೊಳಗೆ || (ಮು)

[18] ತನ್ನ ಮನದೊಳಗೆ || (ಮು)

[19] ಳಗಿ (ಭ)

[20] ಳಗಿ (ಭ)

[21] ಮೊದಲ (ವಿ, ಮು)

[22] ಮೊದಲ (ವಿ, ಮು)

[23] ಮಂತ್ರಿಗಳಿಂಗೆ ಕೊಟ್ಟನು (ವಿ, ಮು)

[24] ಮಂತ್ರಿಗಳಿಂಗೆ ಕೊಟ್ಟನು (ವಿ, ಮು)

[25] ಹೊಳಹ (ಪ)

[26] ಹೊಳಹ (ಪ)

[27] ವಿದೆಲಾ (ವಿ), ವಲ್ಲಾ (ಪ)

[28] ವಿದೆಲಾ (ವಿ), ವಲ್ಲಾ (ಪ)

[29] ನ್ನಸು | ಹಾರಿ (ಪ್ರ, ವಿ)

[30] ನ್ನಸು | ಹಾರಿ (ಪ್ರ, ವಿ)

[31] ಮದದಲಿ (ವಿ), ಮಾನದಿ (ಪ)

[32] ಮದದಲಿ (ವಿ), ಮಾನದಿ (ಪ)

[33] ನಿಂದನು (ಭ, ವಿ)

[34] ನಿಂದನು (ಭ, ವಿ)

[35] ಕಾಪಟಿಗನು (ವಿ, ಮು)

[36] ಕಾಪಟಿಗನು (ವಿ, ಮು)

[37] ವಿಷಜ್ವಾಲೆಯಲಿ ಕಾಯವನು || (ಪ)

[38] ವಿಷಜ್ವಾಲೆಯಲಿ ಕಾಯವನು || (ಪ)

[39] ದೀಪಾಗ್ನಿ ಮಾತ್ರದಲ್ಲೊಂದು ನಿಮಿಷದಲಿ || (ವಿ)

[40] ದೀಪಾಗ್ನಿ ಮಾತ್ರದಲ್ಲೊಂದು ನಿಮಿಷದಲಿ || (ವಿ)

[41] ವಿಪ್ರನ (ವಿ, ಮು)

[42] ವಿಪ್ರನ (ವಿ, ಮು)

[43] ನೃಪನನು (ಭ, ಪ)

[44] ನೃಪನನು (ಭ, ಪ)