ಸೂಚನೆ:
ಹೇಳಿದರು ಜನಮೇಜಯಂಗೆ ವಿ
ಶಾಲಮತಿಗಳು ಮಂತ್ರಿಗಳು ಮಖ
ಮೂಲಕಾರಣವನೆ ಪರೀಕ್ಷಿನ್ನಿಧನ

[1]ಸಂಗತಿ[2]ಯ

ಪದನು:
ಸೂತ ಹೇಳೈ ಸರ್ಪಯಾಗ
ಖ್ಯಾತ[3]ದುಷ್ಕರ[4]ಕರ್ಮನಿಷ್ಠೆಗೆ
ಹೇತುವಾವುದು ಹೇಳು ತನಗಾ ಪಾಂಡುನಂದನರು[5]ಧೂತ[6] ಪಾತಕನಿಕರರಲ್ಲೈ
ಘಾತಿಸಿದನೆಂತುರಗಕುಲವನು
ಭೂತಳಾಧಿಪನೆನಲು ಮಗುಳಿಂತೆಂದನಾ ಸೂತ      ೧

ಕೇಳು ಶೌನಕ ಪರಹಿತೈಕಸು
ಶೀಲಸಂಪನ್ನಿಧಿಯೆ ಯಾಗಕೆ
ಮೂಲವೆನಿಪ ಪರೀಕ್ಷಿತಾಖ್ಯಾನವನು ಮನವೊಲಿದು
ಹೇಳುವೆನು ಜನಮೇಜಯಕ್ಷಿತಿ
ಪಾಲನೊಂದಿನವಖಿಳ ಮಂತ್ರಿಗ
ಳೋಲಗದೊಳೊಪ್ಪಿರಲು ಕುಳ್ಳಿರ್ದೆಂದನವರೊಡನೆ    ೨

ಏನು ಹದನಯ್ಯನನು ತಕ್ಷಕ
ನಾನನದ[7]ಲುರುಹಿದನಲೆಂಬರ
ದೇ[8]ನುಕಾರಣ ಹಗೆಯೊ ಹರಹರ ಪನ್ನಗಾಧಿಪಗೆ
ದಾನವಾಂತಕನೊಲವಿನವರಿಗೆ
ಹಾನಿಯೆಂತೈ ಹೇಳಿ ನೀವೆನ
ಲಾನೃಪೋತ್ತಮನೊಡನೆ ಬಿನ್ನಯಿಸಿದರು ಕೈಮುಗಿದು ೩

ಉಂಟು ಕೃಷ್ಣನ ಕರುಣ ನಿಮ್ಮೊಳ
ಗೆಂಟು ಮಡಿ ನೃಪನಳೀಯಲರಿವನೆ
ಗಂಟಲೊಳಗಾ ತಕ್ಷಕನ ಹಗೆಯಿಲ್ಲ ತಾತನಲಿ
ವೆಂಟಣಿಸಿದುದು ವಿಪ್ರತನಯನ
ಕುಂಟಿಣಿಯ [9]ಕೋಪಾಗ್ನಿ[10] ತಂದೆಗೆ
ಕಂಟಕವ ಮಾಡಿತ್ತು ಚಿತ್ತಯಿಸೆಂದರವನಿಪಗೆ ೪

ಹೇಳಿದೇತಕೆ ತನಗೆ ತನ್ನಯ
ಬಾಲತನದಲಿ ಮಡಿದನಯ್ಯನ[11]ಹೇಳಿ ನವಗಾಕಾರ್ಯದೆಲ್ಲಾ ವಿಷಯ ವಿಸ್ತರವಾ[12] ಹೇಳಿರೈ ದ್ವಿಜಸುತನ ಕೋಪಕೆ
ಮೂಲವೇನಾರಾತನಾರೆನೆ
ಹೇಳಿದರು ಮಂತ್ರಿಗಳು ತದ್ವೃತ್ತಾಂತಸಂಗತಿಯ      ೫

ಆದಡವಧರಿಸಾ ಪರೀಕ್ಷಿತ
ಮೇದಿನೀಪತಿ ಧರ್ಮ[13]ರಕ್ಷಾ
ಪಾದನೈಕ[14]ಪರಾಯಣನು ಸುರವಿಪ್ರಪೂಜಿತನು
ಹೋದನವನಿಪನೊಂದು ದಿನ ಮೃಗ[15]ಭೇದಿ[16]ಗಳುಸಹಿತೊಂದು [17]ವನಕೆ[18] ವಿ
ನೋದದಲಿ ಮುನಿವರ [19]ಶಮೀಕಸಮಾಖ್ಯನಶ್ರಮಕೆ[20] ೬

ವಸುಮತೀಪತಿ [21]ಕೇಳು[22] ವರ ತಾ
ಪಸನನಾ ಮೃಗ ಹೋದ [23]ಹಜ್ಜೆಯ[24] ಬೆಸಗೊಳಲು ಬೇರೊಂದನರಿಯದೆ ಯೋಗ[25]ನಿಷ್ಠೆ[26]ಯಲಿ
ಉಸುರದಿರಲುರಗನನು ಕೊಂದಾ
ಹಸಿವು ತೃಷೆಯಲಿ ನೃಪತಿ ತನು [27]ತು
ಟ್ಟಿಸಲು[28] ಕೊರಳಲಿ ಸುತ್ತಿ ಬಂದನು ಮರಳಿ ನಿಜಪುರಕೆ           ೭

ಅದನರಿತು ತತ್ಪುತ್ರನಾಡುತ
ವಿದಿತ ಶೃಂಗಿಯೆನಿಪ್ಪನತಿ ಕೋ
ಪದಲಿ ಕೊಟ್ಟನು ಶಾಪವನು ಬಾಲಕನು ಭೂಪತಿಗೆ
ಮದಮುಖನನವನಿಪನನೇಳನೆ
ಯದಿನ ಕುರುಹಲಿ ತಕ್ಷಕನು ತ
ಪ್ಪದು ಮದುಕ್ತಿಯೆನುತ್ತ ಬಂದನು ತಂದೆಯಿದ್ದೆಡೆಗೆ     ೮

ತಂದೆಯನು ಕಾಣುತ್ತ ವರ ಮುನಿ
ನಂದನನು ಬಾಯ್ವಿಡಲು ಕೇಳುತ
ಕಂದೆರೆದು ಗಳದುರಗನನು ಬೀಸಾಡಿ ಮಗನೊಡನೆ
ಎಂದನೇತಕ್ಕಳುವೆ ನೀನೆಲೆ
ಕಂದ ಎನುತವೆ ಕೇಳಿ [29]ಮುನಿಪತಿ[30] ಸಂದ ವೃತ್ತಾಂತವನು ಮರುಗಿದ[31]ನಂದು[32] ಮನದೊಳಗೆ      ೯

ಸುಯ್ದು ಚಿಂತಿಸಿ ನೃಪನ ಕೊರಳನು
ಕೊಯ್ದೆ ಪಾತಕಿ ಎನುತ ಮಗನನು
ಬೆಯ್ದು ಬಹಳ ಕೃಪಾವನಧಿ ಭೂಪೋತ್ತಮನ ಹೊರೆಗೆ
ಮೆಯ್ದೆಗೆಯದಟ್ಟಿದನು ಶಿಷ್ಯನ
ನೆಯ್ದಿದನು [33]ಖಗನೆಂಬವನು ತಾ[34] [35]ನೊಯ್ದು[36] ಬಿಸುಟನು ವಾರ್ತೆಯನು ಬೆದರಿದುದು ಸಭೆ ನೃಪನ        ೧೦

ಮುನ್ನವೇ ತಾ ನೆನೆಯುತಿರ್ದೆನು[37]ತನ್ನ[38] ಮಾಡಿದ ಕರ್ಮವಿದು ನೆರೆ
ಬನ್ನ ಬಡಿಸದೆ ಹೋಹುದಲ್ಲೆಂದದುವೆ ಬಂದುದಲಾ
ಇನ್ನು ಮಾಡುವುದೇನೆನುತ ನೃಪ
ಖಿನ್ನನಾದಂತಿರಲು ನೆನೆದೆವು
ಪನ್ನಗೇಂದ್ರನ ಭಯವ ಪರಿಹರಿಸುವ ಮನೋರಥವ   ೧೧

[39]ಒಂದು ಕಂಭದ[40]ಲೊಂದು ಮನೆಯನು
ತಂದೆ ಮಾಡಿ[41]ದೆವ[42]ಮರನದಿಯಲಿ
ಬಂದು ತಕ್ಷಕ [43]ಸೇರ[44]ದಂತಿರೆ ರಚಿಸಿ ರಕ್ಷೆಯನು
ಸಂದ ಸಚಿವರು ಸಹಿತ ನೃಪನಾ
ಮಂದಿರದಲಿರಲೇಳನೆಯ ದಿನ
ಬಂದುದವಧರಿಸಾದ ಕಥನವನೆಂದನವನಿಪಗೆ         ೧೨

ಏಳನೆಯ ದಿನದೊಳಗೆ ಪನ್ನಗ[45]ಲೋಲ[46] ತಕ್ಷಕನುರುಹುವನು ಭೂ
ಪಾಲ[47]ಕನ ಗಡ[48] ನೋಳ್ಪೆನೆನುತಾಕಾಶ್ಯಪಾಹ್ವಯನು
ಕೇಳಿ[49]ದನು[50] ಕಾಂಕ್ಷೆಯಲಿ ಬರುತಿರೆ
ಖೂಳ ತಕ್ಷಕ[51]ನವನ[52] ಕಂಡನು
ಹೇಳಿದೆಲ್ಲಿಗೆ ವಿಪ್ರ ಪಯಣವೆನುತ್ತ ಬೆಸಗೊಂಡ         ೧೩

ತಕ್ಷಕನು [53]ತಾ ಮುನಿವನಂತೆ[54] ಪ
ರೀಕ್ಷಿದವನೀಶ್ವರನ[55]ನೆನುತ ತ
ತು[56]ಕ್ಷಣದೊಳೆತ್ತುವೆನು ವಿಷ[57]ಯೋಗ[58]ವನು ಕೆಡೆಯೊದೆದು
ರಕ್ಷಿಸುವೆನುರು ಮಂತ್ರಬಲದಿಂ
ದಾಕ್ಷಣವೆ ತಾನೆಂದು ಬಂದೆನ
ಪೇಕ್ಷಿತನಲಾ ಸಕಲ ಲೋಕಕ್ಕೆಂದನಾ ವಿಪ್ರ   ೧೪

ಉಂಟು ಸಂಶಯವಿಲ್ಲ ನೃಪತಿಗೆ
ಕಂಟಕನು ತಕ್ಷಕನು ನಿನಗದು
ಗಂಟ[59]ಲಿಂಗೊಳಗಿ[60]ಳಿವ ತುತ್ತೇ ವಿಪ್ರ ಮರುಳನಲಾ
ನಂಟ ಪರಿಹರಿಸಿದರೆ ನಿನಗೇ
ನುಂಟು ಬರಿದೆ ಮನೋರಥಕೆ ಕಡೆ
ಯುಂಟೆ [61]ಬಳಲದೆ[62] ಭಂಗವಡೆಯದೆ ಮನೆಗೆ ನಡೆಯೆಂದ     ೧೫

ಗಳಹದಿರು ನಡೆ ತನ್ನ ಮಂತ್ರದ
ಬಲು[63]ಹೀನಂದವನ[64]ರಿಯೆ ಟಿಕ್ಕರಿ
ಗಳೆಯದಿರು ನೃಪ [65]ತನು[66] ಭಸ್ಮೀಭೂತನಾಗಿರಲಿ
ತಳಿದು ಮಂತ್ರದ ಜಲದಲೆತ್ತುವೆ
ನಲಘುಧರ್ಮಾತ್ಮನನು ಪಾಂಡವ
ಕುಲಜನನು ನೀನೇಕೆ ತನ್ನನು ಬೆದರಿಸುವೆಯೆಂದ     ೧೬

ವೃದ್ಧ ವಿಪ್ರನೆ ಹೇಳು ತಡೆಯ[67]ದಿ
ರಧ್ವವನು ದಿನನಾಥನಿಳಿದಪ
ರಾದ್ರಿ[68]ಗೆರಡೆ ಘಳಿಗೆ ವಿಘ್ನವ ಮಾಳ್ಪೆ ನೀನೇಕೆ[69]ಬದ್ಧವುಂಟೇ[70] ಬಹುದು ಸಂಗಡ
ಬುದ್ಧಿಯನು ನೀ ಹೇಳಬೇಡೆನೆ
ಸಿದ್ಧಿಯೇನೆಲೆ ವಿಪ್ರ ತಕ್ಷಕ ತಾನು ಕೇಳೆಂದ   ೧೭

ಎನ್ನ ವಿಷವನು ಪರಿಹರಿಸುವೊಡೆ
ಪನ್ನಗಾಭರಣಾದ್ಯರಿಂಗರಿ[71]ದಿನ್ನು ಕೇಳೆಲೆ[72] ವಿಪ್ರ ಪರಿಹರಿಸುವ[73]ರೆ ನಿನ್ನಳವೆ[74] ಅನ್ಯ ನಾನಲ್ಲೀಶ್ವರನ ಕೃಪೆ
ತನ್ನಲುಂಟೆಲೆ ಸರ್ಪ ತಾನದ
ನೆನ್ನೆ ನೀ ಹೊತ್ತೇನು ಫಲ ಕಂಡರಿಯಬಹುದೆಂದ      ೧೮

ಕಂಡರಿವೆನೀಕ್ಷಣದಲಾನೆಲೆ
ಪಂಡಿತನೆ ತೋರುವುದು ನಿನ್ನು
ದ್ದಂಡ ಮಂತ್ರದ [75]ಶಕ್ತಿಯ[76]ಳವನು ನೋಳ್ವೆನೀ ಮರನ
ಕೊಂಡು ಮುಳುಗುವೆನೆತ್ತು ನೀ ನೆರೆ
ಗಂಡುತನವುಂಟಾದರೆನೆ ಕೈ
ಕೊಂಡೆನಾಗಳೆ ಬಣಗು ಸರ್ಪವೆ ಬೇಗ ಮಾಡೆಂದ     ೧೯

ಆತುರಿಸಬೇಡಾದಡಿದೆಕೋ
ಕೌತುಕವ ನೋಡೆನುತ [77]ಸತ್ತೋ
ದ್ಘಾತಿಶಯಕ ವೃಕ್ಷವೊಂದಾಲದ ಮಹಾಮರನ[78] ಘಾತಕನು ಮುಟ್ಟಿದನು ಭಸ್ಮೀ
ಭೂತವಾದುದು ಬಿದ್ದುದವನಿಗೆ
ಚೇತರಿಸು ನಿನ್ನಾಪಡಿದ ಕೊಳ್ಳೆಂದನಾದ್ವಿಜಗೆ ೨೦


[1] ಸಂಸ್ಥಿತ್ (ವಿ)

[2] ಸಂಸ್ಥಿತ್ (ವಿ)

[3] ಮತ್ಸರ (ಭ)

[4] ಮತ್ಸರ (ಭ)

[5] ಪೂತ (ಪ)

[6] ಪೂತ (ಪ)

[7] ಲೇಕುರುಹಿತೆಂಬುದ | ಕೇ (ವಿ), ಲುರುಹಿದನು ಗಡ ಬರಿ | ದೇ (ಪ).

[8] ಲೇಕುರುಹಿತೆಂಬುದ | ಕೇ (ವಿ), ಲುರುಹಿದನು ಗಡ ಬರಿ | ದೇ (ಪ).

[9] ಬಲು ಶಾಪ (ವಿ, ಮು)

[10] ಬಲು ಶಾಪ (ವಿ, ಮು)

[11] ಹೇಳನವದೇಕಾರ್ಯರಲ್ಲಾ ವಿಪ್ರವರರೆಮಗೆ || (ವಿ)

[12] ಹೇಳನವದೇಕಾರ್ಯರಲ್ಲಾ ವಿಪ್ರವರರೆಮಗೆ || (ವಿ)

[13] ರಕ್ಷಕ | ನಾದನಧಿಕ (ಪ)

[14] ರಕ್ಷಕ | ನಾದನಧಿಕ (ಪ)

[15] ವೇಧಿ (ಭ)

[16] ವೇಧಿ (ಭ)

[17] ವಿಪಿನ (ವಿ, ಮು)

[18] ವಿಪಿನ (ವಿ, ಮು)

[19] ಸಮಾಧಿಯ ಕಂಡನಾ ಭೂಪ || (ಭ)

[20] ಸಮಾಧಿಯ ಕಂಡನಾ ಭೂಪ || (ಭ)

[21] ಕಂಡು (ಭ, ವಿ, ಮು)

[22] ಕಂಡು (ಭ, ವಿ, ಮು)

[23] ಮಾರ್ಗವ (ಭ, ವಿ, ಮು)

[24] ಮಾರ್ಗವ (ಭ, ವಿ, ಮು)

[25] ನಿದ್ರೆ (ಪ)

[26] ನಿದ್ರೆ (ಪ)

[27] ಕಂ | ಪಿಸಲು (ಭ)

[28] ಕಂ | ಪಿಸಲು (ಭ)

[29] ದನು ಮುನಿ | (ವಿ)

[30] ದನು ಮುನಿ | (ವಿ)

[31] ನೊಂದು (ಪ)

[32] ನೊಂದು (ಪ)

[33] ಗೌರವದ ಮುಖ್ಯನು | (ಪ), ತಾ ಗೌರಮುಖ ನೊಲಿ (ವಿ)

[34] ಗೌರವದ ಮುಖ್ಯನು | (ಪ), ತಾ ಗೌರಮುಖ ನೊಲಿ (ವಿ)

[35] ದೆಯ್ದಿ (ವಿ)

[36] ದೆಯ್ದಿ (ವಿ)

[37] ಮುನ್ನ (ಭ, ಪ)

[38] ಮುನ್ನ (ಭ, ಪ)

[39] ಎಂದು ಭೀತಿಯ (ಪ)

[40] ಎಂದು ಭೀತಿಯ (ಪ)

[41] ದನ (ಪ, ಭ)

[42] ದನ (ಪ, ಭ)

[43] ನೇರ (ವಿ), ನೆರಗ (ಪ)

[44] ನೇರ (ವಿ), ನೆರಗ (ಪ)

[45] ಪಾಲ (ವಿ, ಪ)

[46] ಪಾಲ (ವಿ, ಪ)

[47] ನಾಗದ (ವಿ), ನನು ಗಡ (ಮು)

[48] ನಾಗದ (ವಿ), ನನು ಗಡ (ಮು)

[49] ಧನ (ಮು), ದಾ (ಪ)

[50] ಧನ (ಮು), ದಾ (ಪ)

[51] ನದನು (ಪ)

[52] ನದನು (ಪ)

[53] ಮುನಿವವನು ಕಂಡು (ಭ) ಮುಟ್ಟುವನು ಗಡ (ಪ)

[54] ಮುನಿವವನು ಕಂಡು (ಭ) ಮುಟ್ಟುವನು ಗಡ (ಪ)

[55] ನಾನವ | ನೀ (ಭ)

[56] ನಾನವ | ನೀ (ಭ)

[57] ವೇಗ (ವಿ, ಪ)

[58] ವೇಗ (ವಿ, ಪ)

[59] ಲೊಳಯಿಂಕಿ (ವಿ)

[60] ಲೊಳಯಿಂಕಿ (ವಿ)

[61] ಬೀಳದೆ (ಭ).

[62] ಬೀಳದೆ (ಭ).

[63] ಹನದ ನೀನ (ವಿ), ಹ ನೀನದನ (ಪ)

[64] ಹನದ ನೀನ (ವಿ), ಹ ನೀನದನ (ಪ)

[65] ವರನು (ವಿ, ಮು)

[66] ವರನು (ವಿ, ಮು)

[67] ದೆ | ಬಧ್ದವನು ಭಟ ದಿನಪನಿಳಿದನು | ಅಬ್ಧಿ (ಪ), ದಿ | ರಿದ್ದರವ ದಿನನಾಥನಿಳಿದಪ | ರಾದ್ರಿ (ಭ)

[68] ದೆ | ಬಧ್ದವನು ಭಟ ದಿನಪನಿಳಿದನು | ಅಬ್ಧಿ (ಪ), ದಿ | ರಿದ್ದರವ ದಿನನಾಥನಿಳಿದಪ | ರಾದ್ರಿ (ಭ)

[69] ಶ್ರದ್ಧೆಯುಂಟೇ (ವಿ, ಮು)

[70] ಶ್ರದ್ಧೆಯುಂಟೇ (ವಿ, ಮು)

[71] ದನ್ಯರಾರೆಲೆ (ವಿ, ಪ)

[72] ದನ್ಯರಾರೆಲೆ (ವಿ, ಪ)

[73] ಸಮರ್ಥರೆನೆ  (ವಿ, ಮು)

[74] ಸಮರ್ಥರೆನೆ  (ವಿ, ಮು)

[75] ಗಿಂತ್ರದ (ಭ, ವಿ, ಮು).

[76] ಗಿಂತ್ರದ (ಭ, ವಿ, ಮು).

[77] ತಕ್ಷಕ | ನಾತತುಕ್ಷಣದೊಳಗೆ ಬಂದನು ಮರದ ಹೊರೆಗಾಗಿ || (ಪ) ತತ್ಕ್ರೋ | ಧಾತಿಶಯ ತಾಮ್ರಾಕ್ಷನೊಂದಾಲದ ಮಹಾತರುವ || (ವಿ)

[78] ತಕ್ಷಕ | ನಾತತುಕ್ಷಣದೊಳಗೆ ಬಂದನು ಮರದ ಹೊರೆಗಾಗಿ || (ಪ) ತತ್ಕ್ರೋ | ಧಾತಿಶಯ ತಾಮ್ರಾಕ್ಷನೊಂದಾಲದ ಮಹಾತರುವ || (ವಿ)