ಏಳು ಮಗನಹನಂಜಬೇಡೆಲೆ
ಬಾಲೆ

[1]ಬೆದರ[2]ದಿರರ್ಕವಹ್ನಿ
ಜ್ವಾಲೆ[3]ಗಳ ಬೊಂಬೆಯವೊಲುರು ತೇಜೋತ್ತ[4]ನೆಂದೆನಿಸಿ] ಪಾಲಿಸುವನುರಗರನು ಬರಿದೇ
ತಾಳದಿರು ಶೋಕವನೆನುತ್ತುವೆ
ಬೀಳುಕೊಟ್ಟು ಮುನೀಂದ್ರನೈದಿದ[5]ನಾ[6] ತಪೋವನಕೆ  ೪೧

ಬಳಿಕ ಗರ್ಭಿಣಿ ಹೋದಳಗ್ರಜ
ನಲಘುಮಂದಿರದಲ್ಲಿಗಾತನು
ಲಲನೆಯನು ಬೆಸಗೊಂಡನೇಕೌ ತಂಗಿ ದುಮ್ಮಾನ
ಇಳಿಯುತಿದೆ ಕಂಬನಿ ಮುಖಾಬ್ಜದ
ಲುಳಿಸದುಳ್ಳುದ ಹೇಳೆನಲು ಕಾ
ದಲನ ಕಳುಹಿಯೆ ಬಂದೆನೆಂದಳು ಕಾನನಕೆ ತರಳೆ    ೪೨

ಹದನನೆಲ್ಲವ ಕೇಳಿ ವಾಸುಕಿ
ಬೆದರಿ ನುಡಿದನು ತಂಗಿ ನೀ ಕೆಡಿ
ಸಿದೆ ಮನೋರಥವನು ಗತಪ್ರಾಣರು ಮಹೋರಗರು
ಉದರವಾಸಿಯದಾರು ಪುತ್ರನೊ
ವಿದಿತ ಪುತ್ರಿಯೊ ಹೇಳು ಹೇಳೌ[7]ಕುದಿದು ಫಲವೇ[8] ಪುಣ್ಯಹೀನರು ನಾವಲಾಯೆಂದ     ೪೩

ಅಣ್ಣ ಚಿಂತಿಸಬೇಡ ನೀವೇ
ಪುಣ್ಯವಂತರು [9]ತಾಪಸರಿಗ[10] [11]ಗ್ರಣ್ಯ[12]ನಹ ಗಂಡಳಿಯನನೃತವದಲ್ಲ ಮುನ್ಹಿವಚನ
ತಿಣ್ಣ[13]ವಿನ್ನಂ[14]ತಕಗೆ ಪಾವಕ
ನುಣ್ಣನುರಗರ ಕುಲವನೇತಕೆ
ಬಣ್ಣಿಸುವೆ [15]ಭಂಗವನು ನೀನೆಂದಳು ಸರೋಜಮುಖಿ[16]          ೪೪

ಎನಲು ತಂಗಿಯ ನುಡಿಗೆ ವಾಸುಕಿ
ಮನದ ಸಂತಾಪವನು ಬಿಟ್ಟನು
ವನಿತೆ ಪಡೆದಳು ಪುತ್ರನನು ಕಾಲದಲಿ ಕಮನೀಯೆ
ಅನಲಸನ್ನಿಭತೇಜನನು ಬಳಿ
ಕನುಪಮನ ತನು ಬೆಳೆಯುತಿದ್ದುದು
ಮನೆಯೊಳಗೆ ವಾಸುಕಿಯ ಮನ[17]ದುತ್ಸವವು[18] ಬೆಳೆವಂತೆ     ೪೫

ಚ್ಯವನನಲಿ ಬಳಿಕಾತನಭ್ಯಾ
ಸವನು ಮಾದಿದನಖಿಳವಿದ್ಯಾ
ನಿವಹವನು ಹೆಸರಿಸಿದನಾಸ್ತೀಕಾಖ್ಯದಲಿ ಮುನ್ನ
ಯುವತಿಗಸ್ತಿಯೆನುತ್ತ ಮುನಿ [19]ಭಾ
ರ್ಗವನು ಹೇಳಿ[20]ದನಾಗಿ ಕೇಳಾ
ಭುವನಪಾವನ[21]ಕೀರ್ತಿ[22]ಯಿದ್ದನು ನಾಗ[23]ನಿಳಯ[24]ದಲಿ        ೪೬

ಹೇಳಿದೆನು ಮುನಿನಾಥ ದುರಿತ
ವ್ಯಾಳವಿಷಹರವೆನಿಪ ಮುನಿಕುಲ
ಮೌಳಿಚಾರಿತ್ರವನು ಭುವನಪವಿತ್ರವನು ನಿನಗೆ
ಹೇಳುವೆನು ತಾನೇನನಿನ್ನು ಗು
ಣಾಲಯನೆ ತಾನೆನುತ ಸೂತನು
ಕೇಳಿದನು ನಿತ್ಯಾತ್ಮನಾರಾಯಣಪರಾಯಣಗೆ          ೪೭

ನವಮ ಸಂಧಿ ಸಮಾಪ್ತ


[1] ಯಂಜ (ಪ)

[2] ಯಂಜ (ಪ)

[3] ಬೊಂಬೆಯವೋಲು ತೇಜೋಯುಕ್ತ (ಭ), ಗಳವೋಲೆಸೆವ ತೇಜೋಯುಕ್ತ (ಪ)

[4] ಬೊಂಬೆಯವೋಲು ತೇಜೋಯುಕ್ತ (ಭ), ಗಳವೋಲೆಸೆವ ತೇಜೋಯುಕ್ತ (ಪ)

[5] ವರ (ಭ)

[6] ವರ (ಭ)

[7] ಬದುಕಲೇಕೌ (ಪ).

[8] ಬದುಕಲೇಕೌ (ಪ).

[9] ತಪ್ಪದದು ತಾ | (ಭ)

[10] ತಪ್ಪದದು ತಾ | (ಭ)

[11] ಗಣ್ಯ (ಭ)

[12] ಗಣ್ಯ (ಭ)

[13] ನೀನಂ (ಭ)

[14] ನೀನಂ (ಭ)

[15] ಬಂಧನವನೆಂದಳು ಕಮಲ ಮುಖಿ ನಗುತ || (ಪ)

[16] ಬಂಧನವನೆಂದಳು ಕಮಲ ಮುಖಿ ನಗುತ || (ಪ)

[17] ದುತ್ಸಾಹ (ವಿ)

[18] ದುತ್ಸಾಹ (ವಿ)

[19] ಗ | ರ್ಭವನು ಮುಟ್ಟಿ (ಭ)

[20] ಗ | ರ್ಭವನು ಮುಟ್ಟಿ (ಭ)

[21] ಮೂರ್ತಿ (ಭ)

[22] ಮೂರ್ತಿ (ಭ)

[23] ವಾಸ (ವಿ, ಮು)

[24] ವಾಸ (ವಿ, ಮು)