ದುಷ್ಟರನು ಹೋಮಿಸುವ

[1]ನೆಲ್ಲರ[2] [3]ಸೃಷ್ಟಿ[4]ಯಲಿ  ಕೆಲಕೆಲರು ಧರ್ಮವಿ
ಶಿಷ್ಟರುಳಿವರು ಲೋಕರಹಿತಕಾರಿಗಳು ಸಾಧುಗಳು
ನಷ್ಟವವರಿಂದಾಗದೀ ಜಗ[5]ದಿಷ್ಟರಹಿರೀ ನಿಮಗೆ[6] ಚಿಂತಾ
ವಿಷ್ಟರಾಗಲದೇಕೆ ನೀವಿನ್ನೆಂದನಬುಜಭವ     ೨೧

ನಿರುತವನು ಕೇಳುವಡೆ ಯಾಯಾ
ವರ ಕುಲೋ[7]ತ್ತಮ[8]ನೆನಿಪ ಭೂಸುರ
ವರ ಜರತ್ಕಾರುವಿಗೆ ಮಗನಾಸ್ತೀಕನೆಂಬವನು
ಪರಮ[9]ಪಾವನ[10]ನಂದಿಸುವನು ತ
ದ್ಧ ರಣಿಪಾಧ್ವರಕರ್ಮ[11]ವನು[12] ಪರಿ
ಹರಿಸು[13]ವನು[14] ಬಳಿಕಾತ [15]ನೀವಿನ್ನಂಜದಿರಿಯೆಂದ[16] ೩೨

ಪಂಕ[17]ರುಹಭವ[18]ನಿಂತು ಸುರರಾ
ತಂಕವನು ಮಾಣಿಸಿದನಾ ತಾ
ಯಂಕದಲಿ ಕುಳ್ಳಿರ್ದು ಕೇಳಿದೆ ನಾನು ಬಾಲ್ಯದಲಿ
ಸಂಕಟವ ತಾಳದಿರು ಮನದಲಿ
ಮುಂಕೊಳಿಸು ಧರ್ಮವನು [19]ಮರೆಯದೆ[20] [21]ಶಂಕಿಸಿದಡುಳಿವಿಲ್ಲ[22] ಧರ್ಮಪರಾಯಣರಿಗೆಂದ      ೨೩

ಎನಲು ತಪ್ಪದು ತಮ್ಮ ತನ್ನಯ
ಮನಕೆ ಘನ ಪರಿತೋಷವಾಯ್ತೆ
ನ್ನನುಜ ಬಾಯೆನ್ನರಸ ಬಾಯೆನ್ನಯ್ಯ ಬಾರೆನುತ
ತನುವ ತೆಗೆದಪ್ಪಿದನು ಬಲ್ಲಡೆ
ತನಗೆ ಹೇಳಾ ವಿಪ್ರ[23]ಜನನವ
ನನುಜರೆಲ್ಲ ಜಡಾತ್ಮರಿವದಿರು[24] ತಮ್ಮ ಹೇಳೆಂದ      ೨೪

ಬಲ್ಲೆ[25]ನಿದನಂದಬುಜಭವನೇ[26] ಸೊಲ್ಲಿಸಿದನಮರರಿಗೆ ಮದುವೆಯ
ನೊಲ್ಲದಾದ್ವಿಜನಡವಿಯಲಿ ಸಂದರಿಸುತಿರಲಿಮ್ಮೆ
ಬಳ್ಳಿಯನು ಹಿಡಿದೊಂದು ಬಾವಿಯೊ
ಳೆಲ್ಲ ತಲೆಕೆಳಗಾಗಿ ಪಿತೃಗಳು
ತಲ್ಲಣಿಸುತಿರೆ ಕಂಡು ನೀವಾ[27]ರೆಂದು ಬೆಸಗೊಂಡ[28]   ೨೫

ಇಲಿ ಕಡಿದ [29]ಹಳಬಳ್ಳಿಯನು ಪಿಡಿ
ದ[30]ಲಘು[31]ಮತಿಗಳು[32] ಜೋಲುವಿರಿ ಕೈ
ಗಳನು ನೀಡುವುದೆತ್ತಿಕೊಂಬೆನು ನಿಮ್ಮ ನಾನೆನಲು
ಸಲುವುದಿದು ನೀನಾರು ಕರುಣವ
ನಲಘುಮತಿ ತಮ್ಮಲ್ಲಿ ಮಾಡಿದೆ
ತಿಳುಹೆನಲು [33]ನೀವಾರು ನಿಮ್ಮಯ ಕುಲದಲುದುಭವನಂ[34]     ೨೬

ನಿರುತವೇ ಲೇಸಾಯ್ತು ಯಾಯಾ
ವರರು ನಾವೆಲೆ ತಂದೆ ನೀನೀ
ವಿರತಿಯನು ಕೈಕೊಂಡ [35]ದುಸ್ಥಿತಿಯಿಂದಲಿದು ನ[36]ಮಗೆ
ದೊರಕಿದುದು ಸಂತಾನವಿಲ್ಲದೆ
ಹೊರೆವರಾರಿನ್ನೆಮ್ಮನೇತಕೆ
ಮರುಳು ಮಗನೆ ವಿರೋಧಿಸುವೆ ಹೇಳೆಂದರವರಂದು ೨೭

ಬರಿದೆ ಕೈಯನು [37]ಹಿಡಿದರೆಯು[38] ಬಹ
ಪ್ರಿಯ ಕಾಣೆವೆನಲ್ಕೆ ಮಾಣಲಿ
ವಿರತಿಯದು ಸತಿ ತನ್ನ ಹೆಸರವಳಾದಡುಹುದೆನಗೆ
ಒರೆವೆ ನಾನಿನ್ನೊಂದನಪ್ರಿಯ
ಕರವ ಮಾಡಿದ [39]ಡಾಕೆ[40] ಯೊಡನಾ
ನಿರೆನು ಸಂಶಯವಿಲ್ಲೆನುತ ಬೀಳ್ಕೊಂಡನಾ ವಿಪ್ರ      ೨೮

ತಿರುಗುತೈ[41]ದಿದ[42] ಧರೆಯೊಳಾದ್ವಿಜ
ವರನು ತನ್ನಯ ಹೆಸರ ಸತಿಯನು
ನಿರುತ ಕಾಣದೆ ದೇಶದೇಶಾಂತರಗಳ[43]ಲಿ ತೊಳಲಿ[44] ಉರಗರಾಜನೆ ಕೇಳು ಕೊಡುವುದು[45]ನಿರುತ ತಂಗಿಯ ಮುನಿಗೆ ನಿನ್ನಯ[46] [47]ಪರಮ ಸುಕ್ಷೇಮವನು ನೀ ಬಯಸುವಡೆ ಕೇಳೆಂದ[48] ೨೯

ಲೇಸನಾಡಿದೆ ತಂದೆ ತನ್ನೊಡ
ಲಾಸರಡಗಿತು ತಮ್ಮ ನಿನ್ನಯ
ಭಾಷಿತವ ನಾ ಕೇಳಿದೆನು [49]ಕಳಿದೆನು ಮಹಾ[50]ಭಯವ
ಭೂಸುರೋತ್ತಮರನು ವಿಚಾರಿಸು
ಮೀಸಲಾದಳು ತಂಗಿ ಕರೆಸಾ
ದೇಶಿಗನನೀ ಕ್ಷಣವೆ ಮದುವೆಯ ಮಾಡಬೇಕೆಂದ      ೩೦*

ತಂದರಾತನನರಸಿ ಮಾಡಿದ
ರಿಂದುಮುಖಿಯ ವಿವಾಹವನು ಸಾ
ನಂದದಲಿ ಬಳಿಕಾ ಜರತ್ಕಾರುಗೆ ಜರತ್ಕಾರು
ಇಂದುಮುಖಿಯಾಗಿರಲು ವಧು ಸುಖ
ದಿಂದ ತಾವಿಂತಿರಲು ಧರಿಸಿದ
ಳಂದು ಗರ್ಭವನಾ ಮಹಾಸತಿ [51]ಸಕಲಗುಣ[52]ವಸತಿ  ೩೧

ಮುನಿಪ ಕೇಳೊಂದು ದಿನ ತನ್ನಯ
ವನಿತೆ[53]ಯಂಕದ ಮೇಲೆ ತಲೆಯಿ
ಟ್ಟನುಪಮನು ಮಲಗಿದನು ನೆರೆ ನಿರ್ವಿಣ್ಣನೆಂದೆನಿಸಿ[54] ಇನನಿಳಿದ[55]ನನ್ನೆಗ[56]ಮಹಾಬ್ಧಿಯ
ಮನೆಗೆ ಮುನಿ ನಿದ್ರೆಯಲಿ ಮುಳುಗಿರ
ಲನುಪಮಾಂಗನೆ ತಾನೆ ತನ್ನೊಳಗೆಂದ[57]ಳೀ ಹದನ[58] ೩೨

ಸಂದನಿನನಂಬುಧಿಗೆ ಸಂಧ್ಯಾ
ವಂದನೆಯ ಹೊತ್ತಾಯ್ತು ಮುನಿಪತಿ
ಕಂದೆರೆಯನಿನ್ನೇವೆನೆಬ್ಬಿಸಿದರೆ ಮಹಾತ್ಮನನು
ಇಂದು ಮುನಿವನೊ ಕೋಪಯುಕ್ತನು
ಮಂದಮತಿ ಎಬ್ಬಿಸದೆ ತನ್ನನು
ಕೊಂದೆಯೆಂಬನೊ ಮಾಳ್ಪುದೇನೆಂದಳಲಿದಳು ತರಳೆ ೩೩

ಕೋಪವನು ಮಾಡಿದರೆ ಮಾಡಲಿ
ತಾಪವದೆಕೆನಗಿಲ್ಲ ಧರ್ಮದ
ಲೋಪವನು ಕಾಣುತ್ತಲಾನಿಹುದುಚಿತವಲ್ಲೆನುತ
ಓಪನನು [59]ತರ[60]ಳಾಕ್ಷಿ ಮಧುರಾ
ಳಾಪದಲಿಯೆಬ್ಬಿಸಿದಳಂದತಿ
ರೂಪುಗುಣಸಂಪನ್ನೆ ಧರ್ಮವಿನಾಶ[61]ಭಯಗಮನೆ[62]   ೩೪

ಎದ್ದನಾ ಮುನಿ ಕೋಪತನುಗೊಂ
ಡೆದ್ದವೊಲಂಗನೆಯನೀಕ್ಷಿಸಿ
ನಿದ್ದೆಯನು ನೆರೆ ಕೆಡಿಸಿದೆಯಲಾ ತನಗೆ ವಿಪ್ರಿಯವ
ಹೊದ್ದಿಸಿದೆ ನಿನ್ನೊಡನೆ ತಾನಿರೆ
ನೆದ್ದೆ[63]ನೆದ್ದೆನು[64] ಮೋಹಪಾಶವ[65]ಗೆದ್ದೆ[66]ನೆಂದನು ಮುನಿಪನಾ ಮಾನಿನಿಗೆ [67]ಮುನಿದಂತೆ[68]      ೩೫

ಕೆಟ್ಟೆ[69]ನಿನ್ನೇನೆನುತ[70] ತನ್ನನು
ಬಿಟ್ಟೂ ಹೋಹಾ [71]ಮಾತಿನಿಟ್ಟಿಯ
ಲಿಟ್ಟಿರಲ್ಲಾ ತನ್ನನಂಘ್ರಿಸರೋಜಸಂಶ್ರಿತೆಯ[72] ಮೆಟ್ಟಲಾಗದು ಧರ್ಮಲೋಪದ
ಕಟ್ಟದೆಸೆಯಿಂದೆಚ್ಚರಿಸಿದೆನು
ಬಟ್ಟೆದಪ್ಪುವಳಲ್ಲ ತಾನೆಂದಳು ಸರೋಜಮುಖಿ         ೩೬

ಸುಮ್ಮನಿರು [73]ಸಾರತ್ತಲೆಲ್ಲಿಯ[74] ಧರ್ಮಗಿರ್ಮದ ಲೋಪ ತನ್ನನು
ನೆಮ್ಮುವುದು ಫಡ ತಾನದಾರೆಂದರಿಯೆ ಧರ್ಮವನು
ನಿರ್ಮಿಸಿದವರದಾರು [75]ತನ್ನ[76] ವಿ
ಕರ್ಮಕಂಜುವೆ ನೀನದೇತ
ಕ್ಕುಮ್ಮಳಿಸದಿರು ಕಾಂತೆ ಸುಖಿಯಾಗೆಂದನಾ [77]ಮುನಿಪ[78]      ೩೭

ಅವ [79]ಗತಿಯ[80]ನು ಕಂಡೆ ತನಗೆಲೆ
ದೇವವರವಂದಿತನೆ ತನ್ನಯ
ಜೀವವುಳಿವುದೆ ಬಿಸುಟಡೆನ್ನನಾಥೆಯನು ದಿಟಕೆ
ಆವ ಮನದಭಿಸಂಧಿಯಲಿ ಭೂ
ದೇವವರ ನಿನಗಿತ್ತರೆನ್ನನು
ಜೀವದೊಡೆಯನೆ ವಿಫಲವಾಯ್ತೆನುತಬಲೆ ಹಲುಬಿದಳು          ೩೮

ತಂಗಿ ಮಗನದು ಪಡೆದಳಾದಡೆ
ಹಿಂಗುವುದು ಮೃತ್ಯುವಿನ ಭಯವೆಂ
ದಂಘವಣೆಯನು ಮಾಡಿಕೊಟ್ಟರು ತನ್ನ [81]ನಿಮ್ಮಡಿಗೆ[82] ಭಂಗವಾಯ್ತು ಮನೋರಥಕೆ ಮುನಿ
ಪುಂಗವನೆ ಹೇಳೆಂತು ಗತಿ ತ
ನ್ವಂಗಿಯನು ನಡುನೀರೋಳದ್ದಿದೆಯೆಂದ[83]ಳಳವಳಿದು[84]        ೩೯

ನೀನೆ ಗತಿಮತಿ[85]ಯೆನಗೆ ಕೆಟ್ಟೆನು[86] ಹಾನಿಗೊಳಗಾಯ್ತುರಗಕುಲ ಕರು
ಣಾನಿಧಿಯೆ ಕಾರುಣ್ಯವನು ಮಾಡುವುದನಾಥೆಯಲಿ
ಜ್ಞಾನವಂತನೆಯೆನುತ ಕಂಬನಿ
ಯಾನನದಲು[87]ಕ್ಕಾಡಲ[88]ತ್ತು ಮ
ಹಾನಿತಂಬಿನಿ ಹೊರಳಿದಳು [89]ಪತಿ[90]ಯಂಘ್ರಿಕಮಲದಲಿ         ೪೦


[1] ನುರಗರ (ವಿ)

[2] ನುರಗರ (ವಿ)

[3] ನಿಷ್ಠೆ (ವಿ, ಪ)

[4] ನಿಷ್ಠೆ (ವಿ, ಪ)

[5] ದಿಷ್ಟರಹ ನಿಮಗೇಕೆ (ಪ)

[6] ದಿಷ್ಟರಹ ನಿಮಗೇಕೆ (ಪ)

[7] ದ್ಭವ (ವಿ, ಮು)

[8] ದ್ಭವ (ವಿ, ಮು)

[9] ಧಾರ್ಮಿಕ (ವಿ, ಮು)

[10] ಧಾರ್ಮಿಕ (ವಿ, ಮು)

[11] ವದು (ವಿ, ಪ)

[12] ವದು (ವಿ, ಪ)

[13] ವುದು (ವಿ, ಪ)

[14] ವುದು (ವಿ, ಪ)

[15] ನಿಂದಂಜದಿರಿ ನೀವೆಂದ (ವಿ, ಪ)

[16] ನಿಂದಂಜದಿರಿ ನೀವೆಂದ (ವಿ, ಪ)

[17] ಜಾಸನ (ಪ)

[18] ಜಾಸನ (ಪ)

[19] ಮತಿಯನು (ವಿ, ಮು)

[20] ಮತಿಯನು (ವಿ, ಮು)

[21] ಶಂಕೆ ಬೇಡಳಿವಿಲ್ಲ (ಭ, ವಿ, ಮು)

[22] ಶಂಕೆ ಬೇಡಳಿವಿಲ್ಲ (ಭ, ವಿ, ಮು)

[23] ನಾವೆಡೆ | ಜನಿಪನೆ ಜರತ್ಕಾರು ನಂದನ (ವಿ)

[24] ನಾವೆಡೆ | ಜನಿಪನೆ ಜರತ್ಕಾರು ನಂದನ (ವಿ)

[25] ನದನಿಮ್ದಂಬುಜೋಧ್ಭವ | (ವಿ)

[26] ನದನಿಮ್ದಂಬುಜೋಧ್ಭವ | (ವಿ)

[27] ರಂದನಾ ವಿಪ್ರ || (ವಿ, ಮು)

[28] ರಂದನಾ ವಿಪ್ರ || (ವಿ, ಮು)

[29] ಬಳ್ಳಿಯನು ಪಿಡಿದೇ | ಕ (ವಿ)

[30] ಬಳ್ಳಿಯನು ಪಿಡಿದೇ | ಕ (ವಿ)

[31] ಮಹಿಮರು (ವಿ, ಮು)

[32] ಮಹಿಮರು (ವಿ, ಮು)

[33] ಯಾಯಾಕುಲೋದ್ಭವನಹುದು ತಾನೆಂದ || (ವಿ, ಮು)

[34] ಯಾಯಾಕುಲೋದ್ಭವನಹುದು ತಾನೆಂದ || (ವಿ, ಮು)

[35] ಕಾರಣ ದುಸ್ಥಿತಿಯಿದೆ (ವಿ, ಮು)

[36] ಕಾರಣ ದುಸ್ಥಿತಿಯಿದೆ (ವಿ, ಮು)

[37] ನೀಡಿದರೆ (ವಿ, ಪ)

[38] ನೀಡಿದರೆ (ವಿ, ಪ)

[39] ಕಾಂತೆ (ಪ)

[40] ಕಾಂತೆ (ಪ)

[41] ದನೆ (ಭ, ವಿ)

[42] ದನೆ (ಭ, ವಿ)

[43] ನು ಚರಿಸಿ || (ಪ)

[44] ನು ಚರಿಸಿ || (ಪ)

[45] ಕರೆದು ವಿಪ್ರಗೆ ತಂಗಿಯನು ನೀ | (ಭ)

[46] ಕರೆದು ವಿಪ್ರಗೆ ತಂಗಿಯನು ನೀ | (ಭ)

[47] ನಿರುತ ನಮ್ಮನ್ವಯಕೆ ಕ್ಷೇಮವ ಬಯಸುವಡೆಯೆಂದ || (ಭ), ನಿರುಪಮ ಕ್ಷೇಮವನು ಬಯಸುವಡೆಂದನುರಗೇಂದ್ರ || (ಪ)

[48] ನಿರುತ ನಮ್ಮನ್ವಯಕೆ ಕ್ಷೇಮವ ಬಯಸುವಡೆಯೆಂದ || (ಭ), ನಿರುಪಮ ಕ್ಷೇಮವನು ಬಯಸುವಡೆಂದನುರಗೇಂದ್ರ || (ಪ)

[49] ತಾ ಕಳಿದೆನಾ (ವಿ)

[50] ತಾ ಕಳಿದೆನಾ (ವಿ)

* ಮುದ್ರಿತ ಪ್ರತಿಯಲ್ಲಿ ೬ ಪದ್ಯಗಳು ಈ ಸಂದರ್ಭದಲ್ಲಿ ಹೆಚ್ಚಿಗೆ ಇವೆ. ಇವುಗಳನ್ನು ಪರಿಶಿಷ್ಟದಲ್ಲಿ ನೋಡಿರಿ.

[51] ಗರಳಗಣ (ಪ).

[52] ಗರಳಗಣ (ಪ).

[53] ಯಲಿ ತಲೆಯಿಟ್ಟು ಮಲಗಿದ | ನನುಪಮನು ಚಿತ್ತದಲಿ ನೆರೆ ನಿರ್ವಾಣನೆಂದೆನಿಸಿ || (ಪ)

[54] ಯಲಿ ತಲೆಯಿಟ್ಟು ಮಲಗಿದ | ನನುಪಮನು ಚಿತ್ತದಲಿ ನೆರೆ ನಿರ್ವಾಣನೆಂದೆನಿಸಿ || (ಪ)

[55] ನನ್ನಕ (ಭ)

[56] ನನ್ನಕ (ಭ)

[57] ಳೊಂದುವನು || (ಭ)

[58] ಳೊಂದುವನು || (ಭ)

[59] ಕಮ (ಪ)

[60] ಕಮ (ಪ)

[61] ಕಾರ್ಪಣ್ಯೆ || (ವಿ)

[62] ಕಾರ್ಪಣ್ಯೆ || (ವಿ)

[63] ನಿದೆಯಿದೆ (ಭ, ವಿ, ಮು)

[64] ನಿದೆಯಿದೆ (ಭ, ವಿ, ಮು)

[65] ನೊದ್ದೆ (ವಿ, ಮು)

[66] ನೊದ್ದೆ (ವಿ, ಮು)

[67] ನಲವಿನಲಿ (ವಿ, ಮು)

[68] ನಲವಿನಲಿ (ವಿ, ಮು)

[69] ನಾನೇನೆನುತ (ವಿ), ನೆಂತಿಂದೆಮ್ದು (ಪ)

[70] ನಾನೇನೆನುತ (ವಿ), ನೆಂತಿಂದೆಮ್ದು (ಪ)

[71] ಮಾತನೀವ್ ನೆರೆ | ಯಿಟ್ಟಿರಲ್ಲಾ ತನ್ನ ನಿಮ್ಮಡಿ ಯಂಘ್ರಿಸಂಸ್ಥಿತೆಯ || (ಭ)

[72] ಮಾತನೀವ್ ನೆರೆ | ಯಿಟ್ಟಿರಲ್ಲಾ ತನ್ನ ನಿಮ್ಮಡಿ ಯಂಘ್ರಿಸಂಸ್ಥಿತೆಯ || (ಭ)

[73] ಸಾರತ್ತಲೆತ್ತಣ | (ವಿ), ಸಾಕೆತ್ತಲೆತ್ತಣ | (ಪ)

[74] ಸಾರತ್ತಲೆತ್ತಣ | (ವಿ), ಸಾಕೆತ್ತಲೆತ್ತಣ | (ಪ)

[75] ಕರ್ಮ (ಭ)

[76] ಕರ್ಮ (ಭ)

[77] ವಿಪ್ರ (ವಿ)

[78] ವಿಪ್ರ (ವಿ)

[79] ವರವ (ಭ)

[80] ವರವ (ಭ)

[81] ನೈ ನಿನಗೆ || (ಭ), ನಿನಗೆಂದು || (ವಿ)

[82] ನೈ ನಿನಗೆ || (ಭ), ನಿನಗೆಂದು || (ವಿ)

[83] ಳಿಂದುಮುಖಿ (ವಿ)

[84] ಳಿಂದುಮುಖಿ (ವಿ)

[85] ಕೆಟ್ಟೆನಯ್ಯೋ (ಭ)

[86] ಕೆಟ್ಟೆನಯ್ಯೋ (ಭ)

[87] ಕ್ಕಲತಿಯ (ಪ)

[88] ಕ್ಕಲತಿಯ (ಪ)

[89] ಮುನಿ (ಭ, ಪ)

[90] ಮುನಿ (ಭ, ಪ)