ಸೂಚನೆ:
ವಾಸುಕಿಯ ತಂಗಿಯಲಿ ತೇಜೋ
ರಾಶಿಯೆನಲಾಸ್ತೀಕನೆಂಬ

[1]ಮ
ಹೀಸುರೋತ್ತಮ ಜನಿಸಿದನು ಸಂಪನ್ನಗುಣವನಧಿ[2]

ಪದನು:
ಕೇಳು ಶೌನಕ ವರಮಹೋರಗ
ಜಾಲವಾ[3]ವರ[4] ಜನನಿಯಿ[5]ತ್ತಾ
ಭೀಳ ಶಾಪದ ತಾಪದಲಿ[6] ನೆರೆ ಬೆಂದು ತಮ್ಮೊಳಗೆ
ಬಾಳುವಂದವ[7]ದೆಂತೆನುತ ಸು[8]ವಿ
ಶಾಲ ಮತಿಗಳು ಸುಯುದು ಚಿಂತಿಸಿ
ಕೋಳುವೋದರು ಮರಣಭಯದಲಿ ಬಹಳ ದುಸ್ಥಿತಿಗೆ  ೧

ಅ ಸಮಸ್ತ ಮಹೋರಗರ ಕುಲ
ಭೂಷಣನು ಭುವನೈಕವೀರನು
ವಾಸುಕಿಯೆನಿಪ್ಪುರಗಪತಿ ನೆರಹಿದನೂ ಮತಿಯುತರ
ಭಾಸುರೋರಗ ಮಂತ್ರಿಗಳನು ವಿ
ನಾಶವೆಂತಹುದನ್ವಯಕೆ ಮ
ತ್ತೋಸರಿಸದಾಲೋಚನೆಯ ಮಾಡಿದರು [9]ತಮ್ಮೊಳಗೆ[10]        ೨

ಬಂದುದಲ್ಲೈ ಶಾಪವೆಲ್ಲರಿ
ಗಿಂದು [11]ಕುಲಸಂ[12]ಕ್ಷಯಕೆ ಕಾರಣ
ವೆಂದೆನಿ[13]ಸುವಿದ ಗೆಲುವೆವೆಂತೈ[14] ಘೋರತರ ಭಯವ
ಮಂದಮತಿಗಳು ನಾವು ತಪ್ಪಿಸು
ವಂದವನು ನಿಶ್ಚಯಿಸದೀ ಪರಿ
ತಂದೆಗಳಿ[15]ರಿರಲು[16]ಚಿತವೇ ನೀವರಿಯರೇ ಎಂದ     ೩

ಹುಟ್ಟಿ ಜನಮೇಜಯನು ತಂದೆಯ
ಮುಟ್ಟಿದನು ತಕ್ಷಕನೆನುತ್ತವೆ
ಸುಟ್ಟು ಬೂದಿಯ ಮಾಳ್ಪ ನೀ ನಮ್ಮೆಲ್ಲರನು ದಿಟಕೆ
ಇಟ್ಟ ಕಿಚ್ಚಿದು ಜನನಿ ನಮ್ಮನು
ಬಿಟ್ಟುಹೋಹುದ ಕಾಣೇನೇತ[17]ಕೆ
ದೃಷ್ಟಿ[18]ವಿರಹಿತರಾಗಿ ನೀವಿಹಿರೆಂದನುರಗೇಂದ್ರ        ೪

ಹೇಳಿ ಬುದ್ದಿಯ[19]ನಿಲ್ಲಿ[20] ಶಾಪವ
ಸೋಲಿಸುವ ಪರಿಯೆಂತು ಬಂದುದು
ನಾಳೆ ನಿಶ್ಚಯವೆಲ್ಲರಿಗೆ ಕಡುಗೇಡು [21]ತಮಗಿನ್ನು[22] ಬಾಳುವುದು ಹುಸಿ ಬರಿದೆ ಚಿಂತಾ
ಲೋಲಮತಿ ಮರುಗಿದರೆ ಫಲ ಕೈ
ಮೇಳವಿಸುವುದೆ ಭಾಗ್ಯಹೀನರಿಗೆಂದು ಬಿಸುಸುಯ್ದ     ೫

ಸುಯ್ದು ಸಭೆಯಲಿ [23]ನಿಂದು[24] ವಿಧಿಯನು
ಬೆಯ್ದು ಬಸವಳಿದಳಲಿ ಕೊರಳನು[25]ಕೊಯ್ದುದೋ ವಿಧಿ ಕೆಟ್ಟುದೋ ಕುಲವೆನುತ ಚಿಂತಿಸಲು[26] ನೆಯ್ದ [27]ನಿರುಗೆ[28]ಯ ಬಿಡಸಲರಿದೆನು
ತಯ್ದೆ ಸಭೆ ಸಂಭ್ರಾಂತಚಿತ್ತವ
ನೆಯ್ದುತಿರಲಿಂತೆಂದ[29]ನೆಲ್ಲಾಪತ್ತನವನೊಡನೆ[30]        ೬

ಸಾಸಿಗರಿರಳಲದಿರಿ ತನ್ನಭಿ
ಲಾಷೆಯನು ಕೇಳುವುದು ಪಾಂಡು ಮ
ಹೀಶನಂದನಂದನನ ನಂದನನ ನಂದನನ
ವಾಸ[31]ವನು[32] ನಾವೈದಿ ವಿಪ್ರರ
ವೇಷದಲಿ [33]ಬೇಡುವೆವು[34] ಸರ್ಪವಿ
ನಾಶಕರವಹ ಮಖವ ಮಾಡದಿರೆಂದು [35]ಭೂಮಿಪನ[36] ೭

ಸತ್ಯಸಂಧನು ವಿಪ್ರವಚನ
ನುತ್ತರಿಸಲರಿಯನು ಮಹಾಮತಿ
ಮೃತ್ಯುವದರಿಮ್ದುರಗರಿಗೆ ತಪ್ಪುವುದು ನಿಮಗೆನಲು
ಮತ್ತದೇತಕೆ ದೈನ್ಯವಾ ನೃಪ[37]ರುತ್ತಮರೆ ಮಂತ್ರಿ[38]ಗಳ[39]ಹೆವು ತ
ಚ್ಚಿ[40]ತ್ತವನು ವಶಮಾಳ್ವೆವೆಂದರು ಪನ್ನಗರು ಕೆಲರು    ೮

ಚಂಡಮುಖಕರ್ಮವನು ನೃಪ ಬೆಸ
ಗೊಂಡರಲ್ಲೆಂದೆಂಬೆವಘ[41]ವನು[42] ಪಾಂಡುನಂದನ ಮಾಡಲಾಗದು ನಾಶವಿಹಪರಕೆ
ಕೊಂ[43]ಡಿಳಿ[44]ವುದಘ[45]ದಡಿಗೆ[46] ನರಕದ
ಕೊಂಡದೊಳಗಾಳುವರೆಯೆನುತು
ದ್ದಂಡಮತಿಯನು ಬೋಧಿಸುವೆವೆಂದರು ನಯಾನ್ವಿತರು         ೯

ಅಲ್ಲ ತೆಗೆ ಯಜ್ಞಾಂಗ ಕರ್ಮವ
ಬಲ್ಲೆವೆಂದೈತಂದ ವಿಪ್ರರ
ನೆಲ್ಲರನು ಕಚ್ಚುವುದು ಹೋಹುದು ವೇಶವನು ಮರೆಸಿ
ಇಲ್ಲ ಬಳಿಕಾಯಜ್ಞ [47]ಗಿಜ್ಞದ
ತಲ್ಲಣದ ತನಿಬೇಗೆ ತಮಗೆನು
ತಲ್ಲಿ[48] ಕೆಲವರು ಮಂತ್ರಿಗಳು ಹೇಳಿದರು ನಿಜಮತವ  ೧೦

ಆಗದಾಗದು ವಿಪ್ರವಧೆ ನಿ
ರ್ಭಾಗಧೇಯ[49]ರಿರೆನಲು ಹಸಿದರೆ[50] ಭೋಗಿಸುವರೇ ವಿಷವ ನಿಮ್ಮಡಿ ಕೇಡ ತಂದಿರಲೆ
ಲೋಗರಾದಿರಿ ನಿಮಗೆ ನೀವೆನು
ತಾಗಮಜ್ಞರು ಜರಿದರವರನು[51]ಹೋ[52]ಗುಣವ ಕೇಳೆಂ[53]ದರದರೊಳು[54] ಮತ್ತೆ [55]ಮಂತ್ರಿಗಳು[56]          ೧೧

ಕೊ[57]ಲಲ[58]ದೇತಕೆ ವಿಪ್ರರನು ನೆರೆ
ಕೊಲುವುದಾ ಯಜಮಾನಿನಿಯ[59]ಳನು[60] ಲಲನೆಯಿಲ್ಲದೆ ಮಾಡಲಾಗದು ಯಜ್ಞಕರ್ಮವನು
ಕೊಲೆಗೆ ನಾವಳುಕಿದರೆ ಶಾಪವ
ಗೆಲುವಪರಿಯೆಂತೆಮ್ದರದರೊಳು
ಕೆಲರು ಗೆಲವನು [61]ದೂಷಿಸು[62]ವೆವೆಂದರು ದುರಾತ್ಮಕರು        ೧೨

ಕೆಲರು ಋತ್ವಿಜರಹೆವು ಬೇಡುವೆ
ವಲಘುಮತಿಯಲಿ ದಕ್ಷಿಣೆಯನಿದ[63]ನಳಿ[64]ವುದಧ್ವರಕರ್ಮವನು ನೀನೆಂದು ನಾವದನು
ಗೆಲುವೆವೆಂದರು ಕೆಲರು ಕೆಲರಾ
ಚಲನ ಸಖನಲಿ ಮೂತ್ರಿಸುವೆವ
ಗ್ಗಳದ ನಾಯಿಗಳಾಗಿಯೆಂದರು [65]ಮತ್ತೆ ಕೆಲಕೆಲರು[66]  ೧೩

ಗಳಹಲರಿಯೆವು ಹಲವು ಮಾತನು
ಕೊಲುವೆವಾವವನಿಪನ [67]ಶಾಖಾ[68] ವಳಿಯ ಸವರಲದೇಕೆ ಬೇರಿರೆ ಬಣಗುಗಳಿ[69]ರೆನುತ[70] ಕೊಲೆ ನಿರರ್ಥಕ ಮೇಣು ಮುನಿದರೆ
ಕುಲವನುರುಹುವನವನಿಪಾಲನ
ಛಲ ನಮಗೆ [71]ದುರ್ಬಲರು ನಾವೆಂ[72]ದೊದರಿದರು ಕೆಲರು      ೧೪

ಸಾಕುಸಾಕೆಲವೆಲವೊ ಹೋ ಹೋ
ವ್ಯಾಕುಲತೆ ಫಲವೇನು ಮಂಟ್ರವ
ನೇಕಮುಖವಾಯ್ತಾಗದಾಗದು ನಿಮ್ಮ ಮತವೆ[73]ನುತ[74] ಲೋಕನೀತಿಗೆ ಬಾರದೆಂದೇ
ಸಾಕು ಪೂರ್ವಕೃತಾಘ[75] ಕುತ್ತರ
ವೇಕೆ[76] ನೆನೆವಿರಿ ಖೂಳರಿರ ನೀವೆಂದನುರಗೇಂದ್ರ     ೧೫

ಭೃತ್ಯವಿಹಿತಮಹಾಪರಾಧವ
ದೊತ್ತದೇ ಸ್ವಾಮಿಯನು ಪಾತಕ
ಚಿತ್ತರಿರ ಪರಿಹಾರವೆಂತಹುದಘಕೆ ಮೇಣಘವೆ
ಮತ್ತುಪಾಯವ ಬಲ್ಲಡೆಂಬುದು
ಚಿತ್ತನಿರ್ಮಳವಾದವರು ತನ
ಗುತ್ತಮರಿರೆನೆ ನುಡಿದನೇಲಾಪುತ್ರನಗ್ರಜಗೆ   ೧೬

ಅಣ್ಣ ಚಿತ್ತೈ [77]ಸಘಕೆ[78] ನಿಷ್ಕೃತಿ
ಪುಣ್ಯಕರ್ಮವದಲ್ಲದಾಗದು
ಕಣ್ಣು[79]ಹರಿ[80]ಕರ ಕೈಯಲೇತಕೆ ಕೊಡುವೆ ದರ್ಪಣವ
ಪುಣ್ಯಹೀನರ ಮಾತ ಕೇಳ್ದರೆ
ಮಣ್ಣ ಹೊಯ್ವರು ಕಡೆಗೆ ಬಾಯಲಿ
ತಿಣ್ಣವಹುದೀ ರಾಜಕಾರ್ಯದ ಭಾರ ನಿಮಗೆಂದ        ೧೭

[81]ಮರೆಹೊಗುವುದಾ[82] ಪತ್ತು ಬಂದರೆ
ಮರೆಯದಧಿದೈವವನು ವಿಪ್ರರ[83]ಮರೆವು[84] ರಮಗುಳ್ಳವರು ನಾವವರಿಗೆ ವಿರೋಧವನು
ನೆರೆ ರಚಿಸಿ ಬಂದೀ ವಿಪತ್ತನು
ಹೊರೆಗಳೆವ ಪರಿಯೆಂತು ಬಾಹಿರ
ರ[85]ರಚಿ[86]ದರೆ ಬಲ್ಲವರು ಕೊಂಬರೆ ಪಾ[87]ತಕವನೆಂದ  ೧೮

ಹೇಳುವೆನು ತಾನೊಂದುಪಾಯವ
ಕೇಳಿದೆನು ಪೂರ್ವದಲಿ ವಿಬುಧರ
ಝಾಳ[88]ವಲ್ಲಿ[89] ಪಿತಾಮಹನ ಸನ್ನಿಧಿಗೆ ನಡೆತಂದು
ಹೇಳಿದರು [90]ಜಗವಿದು[91] ಮಹೋರ್ಗ
ರೊಳಿಗದಲುಳಿವುದನು ಕಾಣೆವು
ಹೂಳಿದರು ಪನ್ನಗರು ಧರಣೆಯನಿಂದು ಭೀತಿಯಲಿ     ೧೯

ಅಂಜದಿರಿ ಸುರವರರು ಭೂಪತಿ
ಸಂಜನಿಸುವನು ಪಾಂಡುಕುಲದಲಿ[92]ರಂಜಿತಾಖಿಳಭುವನ[93] ನಿಜಜನಕನನು ತಕ್ಷಕನು
ಎಂಜಲಿ[94]ಸಿದುದ[95] ಕೇಳಿ ರಿಪುಕುಲ
ಭಂಜನನು ಹೋಮಿಸುವನುರಗರ
ಪುಂಜವನು ಬೆದರದಿರಿ ನೀವೆಂದನು ಸರೋಜಭವ     ೨೦

[1] ಮು | ನೀಶ್ವರನು ಜನಿಸಿದನು ಸಂಪನ್ನನು ಸುಗುಣವನಧಿ || (ಪ), ಮ| ಹೀಸುರೋತ್ತಮನುದಿಸಿದನು ಸಂಪನ್ನಗುಣ್ವನಧಿ || (ವಿ)

[2] ಮು | ನೀಶ್ವರನು ಜನಿಸಿದನು ಸಂಪನ್ನನು ಸುಗುಣವನಧಿ || (ಪ), ಮ| ಹೀಸುರೋತ್ತಮನುದಿಸಿದನು ಸಂಪನ್ನಗುಣ್ವನಧಿ || (ವಿ)

[3] ನಿಜ (ವಿ, ಪ)

[4] ನಿಜ (ವಿ, ಪ)

[5] ತ್ತಕ | ರಾಳ ಭೀಕರ ಶಾಪದಲಿ (ವಿ, ಪ)

[6] ತ್ತಕ | ರಾಳ ಭೀಕರ ಶಾಪದಲಿ (ವಿ, ಪ)

[7] ದಾವುದೆನುತ (ವಿ)

[8] ದಾವುದೆನುತ (ವಿ)

[9] ಸಭೆಯೊಳಗೆ || (ವಿ)

[10] ಸಭೆಯೊಳಗೆ || (ವಿ)

[11] ಸುಕುಲ (ವಿ, ಮು)

[12] ಸುಕುಲ (ವಿ, ಮು)

[13] ಸಿ ನೀವಿದನು ಕಾಣದೆ (ವಿ)

[14] ಸಿ ನೀವಿದನು ಕಾಣದೆ (ವಿ)

[15] ರಿಹುದು (ವಿ, ಮು).

[16] ರಿಹುದು (ವಿ, ಮು).

[17] ಕ | ದೃಷ್ಟ (ಮು)

[18] ಕ | ದೃಷ್ಟ (ಮು)

[19] ನೀವು (ಪ)

[20] ನೀವು (ಪ)

[21] ನಾವಿನ್ನು || (ವಿ)

[22] ನಾವಿನ್ನು || (ವಿ)

[23] ನೊಂದು (ವಿ,ಭ)

[24] ನೊಂದು (ವಿ,ಭ)

[25] ಕೊಯ್ದ ವಿಧಿ ಕೆಟ್ಟುದುರೆ ಕುಲವನುಯೆಂದು ಚಿಂತಿಸಿದ || (ಪ)

[26] ಕೊಯ್ದ ವಿಧಿ ಕೆಟ್ಟುದುರೆ ಕುಲವನುಯೆಂದು ಚಿಂತಿಸಿದ || (ಪ)

[27] ನೆಯ್ಗೆ (ವಿ, ಮು, ಪ)

[28] ನೆಯ್ಗೆ (ವಿ, ಮು, ಪ)

[29] ನಲ್ಲೈ ಮಂಟ್ರಿಯಿವರೊಡನೆ || (ಪ)

[30] ನಲ್ಲೈ ಮಂಟ್ರಿಯಿವರೊಡನೆ || (ಪ)

[31] ದಲಿ (ಭ)

[32] ದಲಿ (ಭ)

[33] ಬೋಧಿಸಲು (ಭ, ವಿ, ಮು)

[34] ಬೋಧಿಸಲು (ಭ, ವಿ, ಮು)

[35] ಭೂಪತಿಯ || (ಭ, ಪ).

[36] ಭೂಪತಿಯ || (ಭ, ಪ).

[37] ನುತ್ತಮಗೆ (ಭ), ಸತ್ತಮಗೆ (ವಿ)

[38] ನುತ್ತಮಗೆ (ಭ), ಸತ್ತಮಗೆ (ವಿ)

[39] ಹೋಲುತ|ಚಿ (ಭ)

[40] ಹೋಲುತ|ಚಿ (ಭ)

[41] ನ್ವದು (ಪ)

[42] ನ್ವದು (ಪ)

[43] ಡಳಿ (ವಿ)

[44] ಡಳಿ (ವಿ)

[45] ವಧಿಕ (ಪ)

[46] ವಧಿಕ (ಪ)

[47] ನಿರ್ಭಯ | ವೆಲ್ಲರಿಗೆ ನಿವಗೆವಗೆಯೆನುತ | ಲ್ಲಲ್ಲಿ

[48] ನಿರ್ಭಯ | ವೆಲ್ಲರಿಗೆ ನಿವಗೆವಗೆಯೆನುತ | ಲ್ಲಲ್ಲಿ

[49] ರು ಹಸಿದರಾದರೆ (ವಿ)

[50] ರು ಹಸಿದರಾದರೆ (ವಿ)

[51] ಭೋ (ವಿ)

[52] ಭೋ (ವಿ)

[53] ದು ನುಡಿದರು (ಭ)

[54] ದು ನುಡಿದರು (ಭ)

[55] ಕೆಲಕೆಲರು (ವಿ).

[56] ಕೆಲಕೆಲರು (ವಿ).

[57] ಲುವು (ಪ)

[58] ಲುವು (ಪ)

[59] ರನು (ಭ)

[60] ರನು (ಭ)

[61] ಸೂಸಿಸು (ವಿ)

[62] ಸೂಸಿಸು (ವಿ)

[63] ನುಳಿ (ವಿ)

[64] ನುಳಿ (ವಿ)

[65] ಮಂತ್ರ ಕೋವಿದರು (ವಿ, ಮು)

[66] ಮಂತ್ರ ಕೋವಿದರು (ವಿ, ಮು)

[67] ಶಾಕಾ (ವಿ, ಮು)

[68] ಶಾಕಾ (ವಿ, ಮು)

[69] ರುಳಿದ || (ಪ, ಭ)

[70] ರುಳಿದ || (ಪ, ಭ)

[71] ದುರ್ಲಭವೆ ತಮಗೆಂ (ವಿ)

[72] ದುರ್ಲಭವೆ ತಮಗೆಂ (ವಿ)

[73] ನ್ನ (ವಿ, ಭ)

[74] ನ್ನ (ವಿ, ಭ)

[75] ಮೊತ್ತವ | ನೇಕೆ (ಪ), ಮತ್ತವ | ನೇಕೆ (ಭ).

[76] ಮೊತ್ತವ | ನೇಕೆ (ಪ), ಮತ್ತವ | ನೇಕೆ (ಭ).

[77] ಸಿದಕೆ (ವಿ)

[78] ಸಿದಕೆ (ವಿ)

[79] ಹುಡಿ (ವಿ), ದಡಿ (ಭ)

[80] ಹುಡಿ (ವಿ), ದಡಿ (ಭ)

[81] ಮರೆಯ ಹೊಗುವಾ (ಪ), ಮರೆಹೊಗುವರಾ (ಭ)

[82] ಮರೆಯ ಹೊಗುವಾ (ಪ), ಮರೆಹೊಗುವರಾ (ಭ)

[83] ನರಿತು (ಭ)

[84] ನರಿತು (ಭ)

[85] ರುಹಿ (ಭ)

[86] ರುಹಿ (ಭ)

[87] ವಕ (ಪ)

[88] ಜಗದ (ವಿ)

[89] ಜಗದ (ವಿ)

[90] ಸುರರಾ (ಪ), ಜಗವೀ (ಭ).

[91] ಸುರರಾ (ಪ), ಜಗವೀ (ಭ).

[92] ಭಂಜಿಸುವ ಭುವನದಲಿ (ವಿ), ರಂಜಿಸುತ್ತಾಭೂಮಿಪನ (ಭ)

[93] ಭಂಜಿಸುವ ಭುವನದಲಿ (ವಿ), ರಂಜಿಸುತ್ತಾಭೂಮಿಪನ (ಭ)

[94] ಸಲದ (ವಿ, ಪ)

[95] ಸಲದ (ವಿ, ಪ)