ಕಂಡೆ

[1]ನಗ್ಗದ[2] ದೇವ ನಿಜಪದ
ಪುಂಡರೀಕವನಿದನು ಬಹುಳೋ
ದ್ದಂಡ ಪುಣ್ಯದ ಫಲದ ಪೂರಾಯದ ಸಮೃದ್ಧಿಯಲಿ
ಹಿಂಡಿದೆನು ಮನದಳಲನಾರ್ತಿಯ
ಖಂಡಿಸಿದೆನಿನ್ನೊಂದು ಬಿನ್ನಹ
ಪುಂಡರೀಕೋದ್ಭವನೆಯುಚಿತವ ಕರುಣಿಸುವುದೆಂದ    ೨೧.

ಭುವನವಂದ್ಯನೆ ಕೇಳು ಮೇಲಣ
ಭವದಕಡೆಯಾ ಪರಿಯಲುರೆ ಸಂ
ಭವಿಸಲಾಗದು ಸಮ್ಗತನ [3]ನಿರ್ಜೀವ ಪಾಪಿಗಳ[4] ಸವನಿಸಲಿ ಸತ್ಯಂಗ ಸದ್ಧ
ರ್ಮವನು ಮಾಡುವ ಪುಣ್ಯ[5]ವನು[6] ಬೇ
ಡುವೆನು [7]ಬಹಳ[8]ಕೃಪಾರ್ಣವನೆ ಕರುಣಿಸುವುದೆನಗೆಂದ         ೨೨

ಎಂದು ತನುವನು ನೂಕಿ ಚರಣ
ದ್ವಂದ್ವದಲಿ ಹೊರಳುತ್ತ ರಕ್ಷಿಸು
ತಂದೆ ತನ್ನನನಾಥನನು ಕಾರುಣ್ಯದಿಂದೆನುತ
ಮಂದಹಾಸದಲೆತ್ತಿದನು ಬಾ
ಕಂದ ಬಾ[9]ಯೆನ್ನಸುವೆ ಬಾ[10] ಗೋ
ವಿಂದ[11]ಹ್ರುದಯ[12]ಪ್ರಿಯನೆ ಬಾಯೆನುತಪ್ಪಿದನು ತೆಗೆದು        ೨೩

*ಸಾವೆನೆಂಬೈ ಮಗನೆ [13]ಹೊರೆ[14]ಯೇ
ಜೀವವಿದು ಪುರುಷಾರ್ಥ ಸಾಧನ
ಭಾವಿಸುವಡಲ್ಲೈ ವೃಥಾ ಮತಣದಲಿ ಫಲವೇನು
ಸಾವು ಸುಕೃತದ ಫಲವ ತಾನೇ
ನೀವುದೈ ಬೇಸತ್ತು ಸತ್ತದೆ[15]ಭಾವಿಸೀ ಜನ್ಮದ ಸುಖಕೆ ಸಾಧನವೆ[16] ಹೇಳೆಂದ     ೨೪

ತಾಯ ಶಾಪವೆ ಖಳರ ಜೀವವ
ಬೀಯ ಮಾಳ್ಪುದು ಬೆದರದಿರು ಪಾ
ಪಾಯುಗಳು ಬದುಕುವರೆ ಭೂತದ್ರೋಹಿಗಳು ದಿಟಕೆ
ಆಯುವಂತನೆ ನೀನು ಮನದಲಿ
ಬೇಯದಿರು ಬಾಧಿಸದು ನಿನ್ನನು
ತಾಯಶಾಪ [17]ವದ[18] ಮಳಚರಿತ[19] ನೆಯೆಂ [20]ದನಬುಜಭವ    ೨೫

ಬೇಡ ವರವನು ಮಗನೆ ಸಂಶಯ
ಬೇಡ [21]ಬಿಡು ಭೀತಿಯನು ಮನದಲಿ[22] [23]ನಾಡೆ[24] ಮೆಚ್ಚಿದೆನಮಳಚರಿತನೆ [25]ಬೇಡ ಬೇಡೆನಲು[26] ಕೂಡಿ ಕರಮುಕುಳವನು ಶಿರದಲಿ
ಬೇಡುವೆನು ಧರ್ಮದಲಿ [27]ದಯೆ[28]ಯಲಿ
ಕೂಡೆ ಮತಿಯನು ಕರುಣಿಸುವುದೆಂದರಗಿದನು ಪದಕೆ ೨೬

ಎಂದಡಹುದೈ ವೀರ ತನ್ನನು
ಬಂದಿವಿಡಿದೈ ಮಗನೆ ಮೆಚ್ಚಿದೆ
ನಿಂದುಧರನಾಯುಷ್ಯವಾಗಲಿ ನಿನಗೆನುತಾ ಹರಸಿ
ನಿಂದು ತೆಗೆದಪ್ಪಿದನು ಕೊಟ್ಟೆನು
ಕಂದ ಕಾಂಕ್ಷಿತ ವರವ ನಾ ನಿ
ನ್ನೊಂದ ಹೇಳುವೆನದನು ಸುಸ್ತಿರ[29]ವಾಗಿ ಕೇಳೆಂದ[30]  ೨೭

ಭೂತ [31]ಭೌತಿಕನಿಕರಸಹಿತೀ[32] ಭೂತಳವನೆಲ್ಲವನು [33]ನೀನೊಲಿ[34] [35]ದೋತು ಧರಿಸೆಲೆ ಮಗನೆ[36] ಚಲಿಸದವೋಲು ಸಂಗ್ರಹಿಸಿ
ಆತು[37] ನಿಲು ತನ್ನಿಷ್ಟವಿದು[38] ಸಲೆ
ಭೂತಹಿತವಾ ಪರಮ ಪುರುಷ
ಪ್ರೀತಿಕರವಿದರಿಂಧಿಕವಿಲ್ಲೆಂದನಬುಜಭವ     ೨೮

ಇತ್ತೆ[39]ನಮರತ್ವವನು ನಿನಗಾ
ನುತ್ತಮನೆ ಬಲವೀರ್ಯಶೌರ್ಯ[40]ಗ್ಉ
ಣೋತ್ತರದ [41]ಸಂಸಿದ್ಧಿ ಸಾಮರ್ಥ್ಯವನು[42] ನಿನಗೆನುತ[43]ತತ್ತ್ವನಿಧಿ ಬೋಳಯಿಸು[44]ತಿರಲುರ
ಗೋತ್ತಮನು ತಂದಿರಿಸು ಶಿರದಲಿ
ಹೊತ್ತುಕೊಂಬಿನು ಜೀಯ [45]ನಿಮ್ಮಡಿ[46]ಭೃತ್ಯ ತಾನೆಂದ          ೨೯

ಇಳಿ ಮಗನೆ ಪಾತಾಳ ಲೋಕಕೆ
ತಲೆಯಲಿರಿಸುವಡಲ್ಲ ಬಡ ಹೊರೆ
ಸಲೆ ಸಮಸ್ತದ್ವೀಪಸಾಗರಶೈಲವನಸಹಿತ
ವಿಲಸದಂಡಕಟಾಹವನು ನೀ
ತಲೆಯಲಿರಿಸಿದ ಭಾರವಲಸದಿ
ರಿಳೆ ನಿನಗೆ ಮಾರ್ಗವನು ಕೊಡುವಳು ಕಂದ ಹೋಗೆಂದ        ೩೦

ನಿಮ್ಮಡಿಯ ಕೃಪೆಯುಂಟೆ ಹೊರುವೆನು
ಹಮ್ಮನುಡಿವವನಲ್ಲ ಸಾಸವೆ
ಸಮ್ಮತ ಬ್ರಹ್ಮಾಂಡವಲ್ಲಾ ನಿಮ್ಮ [47]ಲೆಂಕರಿ[48]ಗೆ
ಹೆಮ್ಮೆಗಾಡೆನು ಶಿರದಲಿಡು ನಿಜ[49]ರಮ್ಯ[50]ಹಸ್ತಾಂಬುಜವನೆನುತಾ
ಬೊಮ್ಮನಂಘ್ರಿಯ ಬೀಳುಕೊಂಡನು ಶೇಷನಭಿನಮಿಸಿ ೩೧

ಹೋಗು ಸುಖಿಯಾಗೆನುತ [51]ತಲೆಯ[52]ನು
ತೂಗಿ [53]ಶಿರದ[54]ಲಿ ಕೈಯನಿಟ್ಟನು
ರಾಗದಲಿ ಸಖಿ ನಿನಗೆ ಗರುಡನೆನುತ್ತ ಕೈವಿಡಿದು
ನಾಗವೈರಿಯ ಕರೆದು ಸಖ್ಯವ
ಭೋಗಿರಾಜನಲಾಚರಿಸಿ ಗುಣ
ಸಾಗರನು ಕಳುಹಿದನನಂತನನಧಿಕ ಕರುಣದಲಿ       ೩೨

ಅತ್ತಲಜನಡರಿದನು [55]ದಿವ[56]ವನು
ಮೊತ್ತದಮರರು ಸಹಿತ ನಾಗಕು
ಲೋತ್ತಮನು [57]ರಸೆಗಿ[58]ಳಿದನಧಿಕ ಮನೋನುರಾಗದಲಿ
ಹೊತ್ತುನಿಂದನು ಧರೆಯನೊಂದೇ
ವೃತ್ತಧನಮಂಡಲದಲರಳನು
ಮೊತ್ತಗಜ ಹೊರುವಂತೆ ಶೇಷನಶೇಷಜನ ಹೊಗಳೆ  ೩೩

ಸೃಷ್ಟಿಯನು ನೆರೆ ಧರಿಸ[59]ಲೆಂದಜ[60] ನೆಟ್ಟ ಕಂಭವೊ ಮೇಣು ಬೆಳ್ಳಿಯ
ಬೆಟ್ಟವೋ ಭವಗಿರಿಯೊ ಹೇಳೆನಗಧಿಕ ತೇಜದಲಿ
ವಿಷ್ಟಪಾಧೀಶ್ವರರು ಹೊಗಳಲು
ದೃಷ್ಟಿಮೋಹನಮೂರ್ತಿ ನಿಂದನು
ವಿಷ್ಟರಶ್ರವ[61]ದಾಸನಾ[62] ನಿಜಯೋಗಶಕ್ತಿಯಲಿ         ೩೪

ಓಲಗಿಸಿದುದು [63]ಸಕಲ[64] ಪನ್ನಗ
ಜಾಲವಾತನ ಪದವನವನತ
ಮೌಳಿ[65]ಯನು[66] ಸುರಸಿದ್ಧಕಿನ್ನರದೈತ್ಯದಾನವರು
ಹೇಳಿದುದನಾಚರಿಸುವರು ತಾ
ಹೇಳಲರಿಯೆನು ಯೋಗಸಿದ್ಧಿಗೆ
ಮೂಲ ಭವನದವೋಲು ರಂಜಿಸಿದನು ಜಗತ್ರಯವ     ೩೫

ಇಂತು ಧರಿಸಿದನೊಂದು ಮುಖದಲ
ನಂತ [67]ತಾ ಹಾಸಾದನಾ[68] ಜಗ
ದಂತರಂಗನಿವಾಸಿ ವಿಷ್ಣುವಿಗೊಂದು ರೂಪಿನಲಿ
ಕಂತುಹರಭೂಷಣನೆನಿಸಿದನ
ನಂತಗುಣನಿಧಿಯೊಂದು ರೂಪಿನ
ಲೆಂತು ಬಣ್ಣಿಸಲರಿವೆ ನಾ ನಿಜಯೋಗಸುಖನಿಧಿಯ   ೩೬

ಎಸೆದನಿಂತು [69]ಸಮಗ್ರ[70]ಗುಣಗಣ
ವಿಸರನೆನಿಸಿ ಸಮಸ್ತ ಲೋಕಕೆ
ಶಶಿನಿಭಾಂಗನು ಮಂಗಳ [71]ಪ್ರದ[72]ನಾಗಿ ನೆರೆ ಧರಿಸಿ
ವಸುಧೆಯನು ಲೀಲೆಯಲಿ [73]ದುರಿತ[74] ಪ್ರಸರಪಾವನ [75]ಕೀರ್ತಿ[76] ಕರುಣಾ
ರಸಮಹೋದಧಿ ಯೋಗಸಾಂಖ್ಯಜ್ಞಾನನಿಧಿಯೆನಿಸಿ   ೩೭

ಆವನಿದನೋದುವನು ಕೇಳುವ
ನಾವನರನೊಲಿದೀ ಮಹೋರಗ
ದೇವನಮಳಚರಿತ್ರವನು ಪಾ[77]ತಕ[78]ಪವಿತ್ರವನು
ಆ ವಿಮಳ ಪುಣ್ಯಾತ್ಮರನು ಕರು
ಣಾವಲೋಕನದಿಂದ ಸಂತತ
ಕಾವನೈ ನಿತ್ಮಾತ್ಮನಾರಾಯಣನು [79]ಮನವೊಲಿದು[80] ೩೮

ಅಷ್ಟಮ ಸಂಧಿ ಸಮಾಪ್ತ


[1] ನನ್ನೆಗ (ವಿ)

[2] ನನ್ನೆಗ (ವಿ)

[3] ವೀ ಪಾಪಿ ಜೀವಿಗಳ || (ಪ)

[4] ವೀ ಪಾಪಿ ಜೀವಿಗಳ || (ಪ)

[5] ಮತಿ (ವಿ, ಮು)

[6] ಮತಿ (ವಿ, ಮು)

[7] ಪರಮ (ವಿ), ಪುಣ್ಯ (ಮು)

[8] ಪರಮ (ವಿ), ಪುಣ್ಯ (ಮು)

[9] ರೆಲೆ ಕೊಡುವೆ ನೀ (ವಿ, ಮು)

[10] ರೆಲೆ ಕೊಡುವೆ ನೀ (ವಿ, ಮು)

[11] ನಂಘ್ರಿಯ (ವಿ, ಮು)

[12] ನಂಘ್ರಿಯ (ವಿ, ಮು)

* ಈ ಪದ್ಯವು ವಿ’ ಮತ್ತು ’ಮು’ ಪ್ರತಿಗಳಲ್ಲಿಲ್ಲ

[13] ಹಗೆ (ಪ)

[14] ಹಗೆ (ಪ)

[15] ಭಾವಿ ಜನ್ಮದ ಸುಖಕೆ ಸಾಧನವೇನು (ಪ)

[16] ಭಾವಿ ಜನ್ಮದ ಸುಖಕೆ ಸಾಧನವೇನು (ಪ)

[17] ವಿದ (ವಿ)

[18] ವಿದ (ವಿ)

[19] ವಿದೆಂ (ವಿ)

[20] ವಿದೆಂ (ವಿ)

[21] ಬಿಡು ಬಿಡು ಭೀತಿಯನು ಮನ | (ಪ)

[22] ಬಿಡು ಬಿಡು ಭೀತಿಯನು ಮನ | (ಪ)

[23] ನೋಡೆ (ಭ)

[24] ನೋಡೆ (ಭ)

[25] ಬೇಡಿಕೊಳ್ಳೆನಲು (ವಿ, ಪ, ಮು)

[26] ಬೇಡಿಕೊಳ್ಳೆನಲು (ವಿ, ಪ, ಮು)

[27] ಶಮೆ (ಭ, ಪ) ||

[28] ಶಮೆ (ಭ, ಪ) ||

[29] ನಾಗು ನೀನೆಂದ (ಪ).

[30] ನಾಗು ನೀನೆಂದ (ಪ).

[31] ಜಾತಕೆ ಸರಸ ಹಿತವನು | (ಪ)

[32] ಜಾತಕೆ ಸರಸ ಹಿತವನು | (ಪ)

[33] ಮಿಗೆ ನೀ | (ವಿ)

[34] ಮಿಗೆ ನೀ | (ವಿ)

[35] ನೋತು ಧರಿಸಲ್ಲೆನಲು (ವಿ)

[36] ನೋತು ಧರಿಸಲ್ಲೆನಲು (ವಿ)

[37] ನಿಲ್ಲೆನಗಿಷ್ಟವದು (ವಿ, ಮು)

[38] ನಿಲ್ಲೆನಗಿಷ್ಟವದು (ವಿ, ಮು)

[39] ನಜರಾಮರತೆಯನು ನಿನ | ಗುತ್ತಮೋತ್ತಮ ವೀರ್ಯ ಶೌರ್ಯ (ವಿ), ನಮರತ್ವವನು ನಿನಗಾ | ನುತ್ತಮನೆ ಬಲವೀರ್ಯವಂತ (ಪ)

[40] ನಜರಾಮರತೆಯನು ನಿನ | ಗುತ್ತಮೋತ್ತಮ ವೀರ್ಯ ಶೌರ್ಯ (ವಿ), ನಮರತ್ವವನು ನಿನಗಾ | ನುತ್ತಮನೆ ಬಲವೀರ್ಯವಂತ (ಪ)

[41] ಸಂಸಿದ್ಧಿ ಸಾನಿಧ್ಯವನು (ವಿ), ಸನ್ನಿಧಿಯ ಸಾರೂಪ್ಯವನು (ಪ)

[42] ಸಂಸಿದ್ಧಿ ಸಾನಿಧ್ಯವನು (ವಿ), ಸನ್ನಿಧಿಯ ಸಾರೂಪ್ಯವನು (ಪ)

[43] ಸತ್ಯನಿಧಿಯೋಲೈಸು (ಪ)

[44] ಸತ್ಯನಿಧಿಯೋಲೈಸು (ಪ)

[45] ನಿಮ್ಮೆಡೆ (ಪ)

[46] ನಿಮ್ಮೆಡೆ (ಪ)

[47] ಕಿಂಕರ (ವಿ, ಪ, ಮು)

[48] ಕಿಂಕರ (ವಿ, ಪ, ಮು)

[49] ಗಮ್ಯ (ಪ)..

[50] ಗಮ್ಯ (ಪ)..

[51] ಶಿರವ (ಭ)

[52] ಶಿರವ (ಭ)

[53] ತಲೆಯ (ಭ)

[54] ತಲೆಯ (ಭ)

[55] ನಭ (ವಿ, ಮು)

[56] ನಭ (ವಿ, ಮು)

[57] ತಳಕಿ (ಪ)

[58] ತಳಕಿ (ಪ)

[59] ಲೊಂದೇ (ಪ)

[60] ಲೊಂದೇ (ಪ)

[61] ನಾಜ್ಞೆಯಲಿ (ವಿ)

[62] ನಾಜ್ಞೆಯಲಿ (ವಿ)

[63] ನಿಖಿಳ (ಪ)

[64] ನಿಖಿಳ (ಪ)

[65] ಯಲಿ (ವಿ, ಮು)

[66] ಯಲಿ (ವಿ, ಮು)

[67] ಭುವನಾನಾಥನಾ (ವಿ), ಶಯನದ ಭಾಸನಾ (ಪ)

[68] ಭುವನಾನಾಥನಾ (ವಿ), ಶಯನದ ಭಾಸನಾ (ಪ)

[69] ಸಹಸ್ರ (ವಿ, ಮು)

[70] ಸಹಸ್ರ (ವಿ, ಮು)

[71] ಪ್ರಭ (ಪ)

[72] ಪ್ರಭ (ಪ)

[73] ಭುವನ (ಮು)

[74] ಭುವನ (ಮು)

[75] ನೆನಿಸಿ (ವಿ)

[76] ನೆನಿಸಿ (ವಿ)

[77] ವನ (ವಿ, ಮು)

[78] ವನ (ವಿ, ಮು)

[79] ಕರುಣದಲಿ (ಪ)

[80] ಕರುಣದಲಿ (ಪ)