ಸೂಚನೆ:
ಶೇಷನ
ಶೇಷವನು ಚರಿಸಿದನು ತಪವನ
ಶೇಷವಿಷಯವ ತೊರೆದು ಪಡೆದನಭೀಷ್ಟಸಂಪದವ
ಪದನು:
ಸೂತ ಹೇಳೇನಾಯ್ತು ಬಳಿಕಾ
ಮಾತೆಯಿತ್ತಾಶಾಪವುರಗ
ವ್ರಾತ [3]ಮಾಡಿದುದೇನ ಹೇಳೈ ಮೇಣ್ ಪ್ರತಿ[4]ಕ್ರಿಯೆಯ
ಆತುರರು ಹೇಳೆವಗೆ ಭುವನ
ಖ್ಯಾತರಲ್ಲಾ ಕಾದ್ರವೇಯರು
ತಾತ ಹೇ[5]ಳೆಂದ[6]ನಲು ಮಗುಳೀಂತೆಂದನಾ ಸೂತ ೧
ಕೇಳು ಶೌನಕ ತಾಯ ಶಾಪವ
ಕೇಳುತವೆ ಮರುಗಿದರು ಬಹಳ
ಜ್ವಾಲೆಯಲಿ ಬಿದ್ದಂತೆ [7]ಮರಣ[8] ಭಯಾತುರರು ಬಳಿಕ
*ಹೇಳಿ ಫಲವೇನಿನ್ನು ಮಾತೆಯ
ಕೀಳು ಶಾಪವ ಪರರಿಗುಸುರಿದೊ
ಡಾಳಿಗೊಂಬರು ಗರಿಯದಿದಕ್ಕಿನಾವುದಕಟೆನುತ ೨
ಈ ತೆರದಿ ಕಾಕೋದರಾವಳಇ
ಭೀತಿಗೊಳುತವೆ ತಮ್ಮೊಳೊಂದ
ಖ್ಯಾತಿಯಲಿ ತಾವಳಿವ ತೆರನಾಯ್ತೆನುತಲಳುಕಿತಿರೆ*
ಜಾತ [9]ಕದ್ರೂ[10]ತನಯರೊಳು ವಿ
ಖ್ಯಾತಮಹಿಮನು ಶೇಷನೆಂಬವ
ನಾತತುಕ್ಷಣ ಭೀತಿಗೊಂಡನು ತನ್ನ ಮನದೊಳಗೆ ೩
ಘೋರರೂಪರು ಘೋರಕರ್ಮರು
ಘೋರ [11]ದೋಷಾರಿಷ್ಟ[12] ಹೃದಯರು
ಘೋರ ವಿಷವೀರ್ಯಪ್ರದೂಷಿತ ಮುಖರು ಮೂಜಗಕೆ
ಘೋರತರ [13]ಭಯ[14] ದುಃಖಕಾರಿಗ
ಳಾರುವನು [15]ಸೈರಿಸದ[16] ಪಾ[17]ಪವಿ[18]
ಚಾರರು[19]ಗರರೆನುತ್ತ ಬಿಟ್ಟನು[20] ಸಂಗವನು ಖಳರ ೪
ದುರ್ವಿನೀತರು ಸೈರಿಸರು ಕಿರಿ
ಯವ್ವೆಯರ ತತ್ಪುತ್ರರಿರವನು
ಸರ್ವವೀರರ ದೇವನಲ್ಲಾ ಗರುಡನಾತನಲಿ
ನ್ರ್ವಹಿಸುವರು ವೈರವನು ವಿಷ
ಗರ್ವಿತರು ದುಷ್ಪುತ್ರರವರನು
ಸರ್ವಥಾ ಬಿಡಳವ್ವೆ ತನಗಿ[21]ನ್ನಾರು[22] ಗತಿಯೆಂದ ೫
ವೈರವತಿಬಲನೊಡನೆ ಜನನಿಯ
ಘೋರತರ[23]ವಹ ಶಾಪ[24]ವಿಂತೆರ
ಡಾರು ಮಾಣಿಸಬಹುದು ಬಂದುದು ಕೇಡು ತನ[25]ಗಿನ್ನು[26]
ಆರು ಗತಿ ಕಾಣರು ದುರಾತ್ಮರ
ಬೇರುಗೊಳೆಯನೆನುತ್ತ ಬಿಸುಟನು
ದಾರಮತಿ ಜನನಿಯನು ಸಕಲ ನಿಜಾತ್ಮಬಾಂಧವರ ೬
ಸಂಗವೇ ಸುಡು [27]ದುಷ್ಪ[28] ದುರ್ಜನ[29]ಸೆಂಗವದರಿಂ ಕಷ್ಟ ಮಾಳ್ಬೆನು[30]
ಸಂಗವನು ಸಜ್ಜನರಲತಿಶಯ ಪುಣ್ಯವಂತರಲಿ
ಸಂಗ ಸಕಲಾನರ್ಥಸಾಧನ
ಸಂಗವಾತ್ಮ ಸುಖೈಕ[31]ಭೋಧನ[32]
ಸಂಗಹೀನರ ಸಂಗ[33]ನೇ ಗತಿಯೆನುತ[34] ಹೊರವಂಟ ೭
*ತೊರೆದನೆಲ್ಲರ ಸಂಗವನು ನೆರೆ
ಜರಿದನೈಹಿಕ ವಿಷಯಭೋಗವ
ಸೆರೆಯಲಿಟ್ಟನು ಮನವಿತರದ ಚಿಂತೆಯನು [35]ತೊರೆದು[36]
ತೊರೆದನಾಹಾರವನು [37]ನಿದ್ರೆಯ[38]
[39]ತೊರೆದು[40] ನಿಂದನು [41]ತತ್ತ್ವ [42]ನಿಷ್ಠೆಯ
ಲುರುವ ಪನ್ನಗರಾಯ ಹೊರವಂಟನು ತಪೋವನಕೆ ೮
ಇರದೆ ಹೊಕ್ಕನು ಗಂಧಮಾದನ
ಗಿರಿಯ ಪುಣ್ಯಾಶ್ರಮವನೊಪ್ಪುವ
ಪರಮಪಾವನವೆನಿಸಿ ಮೆರೆವಾ ಬದರಿಕಾಶ್ರಮವ
ಚರಿಸಿ ತಪವನು ದೇಶದೇಶಾಂ
ತರದೊಳಗೆ ತಿರುಗುತ್ತ [43]ರಮಿಸಿ[44]ದ
ನಿರದೆ ಗೋಕರ್ಣದಿ ಪುಣ್ಯಕ್ಷೇತ್ರವಿದ್ದೆಡೆಗೆ ೯
ಬಂದನಾ ಪುಷ್ಕರಕೆ ಮಗುಳ
ಲ್ಲಿಂದ ಹಿಮಗಿರಿ [45]ಪಾರ್ಶ್ವ[46] ದಾಶ್ರಮ
ವೃಂದವನು ಸಾರಿದನು [47]ಸೇರಿದನಾ[48] ತಪೋಧನರ
ವೃಂದವನು ಸಚ್ಚರಿತ ಗುಣಗಳ
ಕಂದವನು ಬಹುಕಾಲ ತಪದಲಿ
ನಿಂದು ನಿರ್ಮಲ ಹೃದಯನಿದ್ದನು ನಿಯಮನಿಷ್ಠೆಯಲಿ ೧೦
ಧರೆಯ ಪುಣ್ಯಕ್ಷೇತ್ರ [49]ತೀರ್ಥ[50]ವ
ನಿರದೆ ಸೇವಿಸುತಾತ್ಮನಿಷ್ಠೆಯ
ಲರಿವಿಜಯನಿಮ್ದ್ರಿಯವನಡಗಿಸಿ ಮೌನಿಯೆಂದೆನಿಸಿ
ಪರಮಪಾವನಕೀರ್ತಿ [51]ಕಾರಣ[52]
ವಿರಚಿತಾಮಳ [53]ಮೂರ್ತಿ ತಪವನಂ[54]
ಚರಿಸುತಿರ್ದನು ಶೇಷನಪಗತದೋಷನೆಂದೆನಿಸಿ ೧೧
ಭಾಸುರಾಮಳಮೃದು [55]ಶರೀರನು[56]
ಶೇಷನಾಚರಿಸಿದನು ತಪವನು
ಭೂಶಯನ[57]ನಿರಶನಮಹಾಕ್ಷೇಶಂಗಳನು ಧರಿಸಿ[58]
ಪೈಸರಿಸಿದುದು ದೇಹ ಕಡುಗುವ
ನೇಸರಿಗಿದಿರಾಗಿ ಕೊಯ್ದ ಶಿ
ರೀಷಕುಸುಮದ [59]ವೋಲು[60] ಬಾಡಿದುದಧಿಕ ತಾಪದಲಿ ೧೨
ಸ್ಪದನೆನಿಸಿ ಕೃತಗಾತ್ರ [63]ನಭಾಂ[64] ಗದ ಜಟಾಜಾಲದಲಿ ದೀಪ್ತಿದಿಗಂತನೆಂದೆನಿಸಿ
ಅಧಟನಿರಲಾ ಪುಷ್ಕರಾರ
ಣ್ಯದಲಿ ನೆರೆದೈತಂದರಲ್ಲಿಗೆ
ಪದುಮಭವನಿಖಿಳಾಮರೇಶ್ವರಮುನಿವರರುಸಹಿತ ೧೩
ಮೊರೆವ ದುಂದುಭಿಶಂಖವೀಣಾ
ಮುರಜ ಪಟಹದ ಪಟುರವದಲಂ
ಬರವನಿಳಿದನು ಸಿದ್ಧವಿದ್ಯಾಧರರ ಕಿನ್ನರರ
ಭರಿತಜಯರವಸೆಂಸ್ತುತಿಯಲ
ಪ್ಸರಸಿಯರ ಸಂಗೀತ ನೃತ್ಯದ
ಪರಮವಿಭವದಲಂದು ಮೈದೋರಿದನು [65]ಪದುಮ[66]ಭವ ೧೪
ಕಂಡನಿದಿರಲಿ ಹೊಳೆದು ತೋರುವ
ಪುಂಡರೀಕಾಸನನ ಪದದಲಿ
ದಿಂಡುಗೆಡಹಿದನೊಡಲ [67]ನವನಿಗೆ[68] ಜಯ ನಮೋ ಎನುತ
ಗಂಡುಗಲಿ ತಾಪಸರ ದೇವನು
ಮಂಡೆಯಲಿ ಮುಕುಳಿತ ಕರಾಂಜಲಿ
ಪುಂಡರೀಕವ ಹೊತ್ತು ಕುಣಿದನು [69]ಭರಿತ[70]ಭಾವದಲಿ ೧೫
ಜಯ ನಮೋ ಜಗದೇಕಕರ್ತೃವೆ
ಜಯ ನಮೋ ಭುವನೈಕಭರ್ತೃವೆ[71]ಜಯ ನಮೋ ಜಗದೀಶ್ವರನೆ ಜಯ[72] ಜಯ ಮಹೇಶ್ವರನೆ
ಜಯ ನಮೋ ಜಗದುದುಭವಸ್ಥಿತಿ
ಲಯವಿಹಾರನೆ ನಿಗಮಸಾರನೆ
ಜಯ ವರೇಣ್ಯ ಶರಣ್ಯ ಘನಕಾರುಣ್ಯವಿಗ್ರಹನೆ ೧೬
ತಂದೆ ರಕ್ಷಿಸೆನುತ್ತ ಚರಣ
ದ್ವಂದ್ವದಲಿ ಮೈಯಿಕ್ಕೆ ಬಿದ್ದಿರ
ಲಿಂದಿರಾರಮಣಾತ್ಮಜನು ಕಾರುಣ್ಯದಲಿ ನೋಡಿ
ಕಂದ ಬಾರೈ ಹೇಳಿದೇತಕೆ
ನಿಂದೆ ತಪದಲಿ ಕಾರಣವ ಹೇ
ಳೆಂದು [73]ಕರುಣಾವನಧಿ ಮೈದಡಹಿದನುರಗಪತಿಯ[74] ೧೭
ಕಾರಣವ ಬೆಸಗೊಂಬೆ ಜೀವ
ಪ್ರೇರಕನೆ ಚೈತನ್ಯರೂಪನೆ
ಬೇರ ಬೆಸಗೊಳಲುಂಟೆ ಬೇರಾಶಾಖೆಗಳ [75]ತುದಿಯ[76]
ಕಾರಣಜ್ಞನೆ ಕದ್ರುಪುತ್ರರು
ಮೇರೆಯನು ಮೀರಿದರು ಪಾಪಾ
ಚಾರರೊಡನಿರಲಾರದಿತ್ತಲು ಬಂದೆ ನಾನೆಂದ ೧೮
ಮಂದಮತಿಗಳು ವಿನತಿಯನು [77]ತಾವ್[78]
ನಿಂದಿಸುವರಾ ವಿನತೆಯಾತ್ಮಜ
ನೆಂದಡವನಸುಮಿಗೆ ಮುನಿವರು ಪಾಪಕರ್ಮಿಗಳು
ಬಂದುದವರಿಂದಳಿವು ವಂಶಕೆ[79]ಬಂಧುಬಲವದ್ವೈರ[80] ಲೇಸ
ಲ್ಲೆಂದಡೆನ್ನನು ಜರೆದು ಕಳಿದರು ಖಾತಿಯಲಿ ಖಳರು ೧೯
ಏವೆನನಗಿನ್ನೇನು ಗತಿಯೆನು
ತೀವಿಪಿನಗಿರಿ[81]ವನನದೀ[82]ಜಲ
ಸೇವೆಯ[83]ಲಿ ಸಲೆ[84] ಪಾಪಕರ್ಮವ ಜರೆದು ಸದುಗತಿಗೆ
ದೇವ[85]ಪದ[86] ಸಂಬಳವ ಮಾಳ್ಪೆನು
ಸಾವೆನೆಂದೇ ನೆನೆದು ತಪದಲಿ
ಭಾವವನು ಮಾಡಿದೆನು [87]ತತ್ಸಂ[88] ಸರ್ಗವನು ಬಿಸುಟು ೨೦
[1] ರ್ಥಿಸಿ ಪರಮ (ವಿ), ರ್ಚಿಸಿ ಪರ (ಪ) [2] ರ್ಥಿಸಿ ಪರಮ (ವಿ), ರ್ಚಿಸಿ ಪರ (ಪ) [3] ಪತಿಗಳಿಗೇನ ಮಾಡಿದವರವರು ತತ್ (ವಿ) [4] ಪತಿಗಳಿಗೇನ ಮಾಡಿದವರವರು ತತ್ (ವಿ) [5] ಳೆನನೆ (ವಿ) [6] ಳೆನನೆ (ವಿ) [7] ಮನದ (ಪ) [8] ಮನದ (ಪ)
* ೨ನೆಯ ಪದ್ಯದ ಕೊನೆಯ ಮೂರು ಸಾಲುಗಳೂ ೩ನೆಯ ಪದ್ಯದ ಮೊದಲ ಮೂರು ಸಾಲುಗಳೂ ’ಪ’ ಮತ್ತು ’ಭ’ ಪ್ರತಿಯಲ್ಲಿಲ್ಲ
* ೨ನೆಯ ಪದ್ಯದ ಕೊನೆಯ ಮೂರು ಸಾಲುಗಳೂ ೩ನೆಯ ಪದ್ಯದ ಮೊದಲ ಮೂರು ಸಾಲುಗಳೂ ’ಪ’ ಮತ್ತು ’ಭ’ ಪ್ರತಿಯಲ್ಲಿಲ್ಲ
[9] ಕಶ್ಯಪ (ಮು). [10] ಕಶ್ಯಪ (ಮು). [11] ರೋಷಾವಿಷ್ಟ (ವಿ) [12] ರೋಷಾವಿಷ್ಟ (ವಿ) [13] ದಾ (ಪ) [14] ದಾ (ಪ) [15] ಕೈಕೊಳದ (ವಿ) [16] ಕೈಕೊಳದ (ವಿ) [17] ಪಾ (ಭ, ಪ) [18] ಪಾ (ಭ, ಪ) [19] ಗಳೆನುತತ್ತ ಬಿಸುಟನು (ಪ) [20] ಗಳೆನುತತ್ತ ಬಿಸುಟನು (ಪ) [21] ನ್ನೇನು (ಪ) [22] ನ್ನೇನು (ಪ) [23] ಶಾಪವದು (ಪ) [24] ಶಾಪವದು (ಪ) [25] ಗಿಂದು (ಭ) [26] ಗಿಂದು (ಭ) [27] ಕಷ್ಟ (ವಿ, ಭ) [28] ಕಷ್ಟ (ವಿ, ಭ) [29] ರಂಗವೇಯದರಿಂದ ಮಾಳ್ಪುದುದು | (ಪ) [30] ರಂಗವೇಯದರಿಂದ ಮಾಳ್ಪುದುದು | (ಪ) [31] ಬಾಧನ (ಮು) [32] ಬಾಧನ (ಮು) [33] ಗತಿಯಲ್ಲೆನುತ (ಭ), ವೇತಕ್ಕೆನುತ (ಪ) [34] ಗತಿಯಲ್ಲೆನುತ (ಭ), ವೇತಕ್ಕೆನುತ (ಪ).* ಈ ಪದ್ಯವು ಮುದ್ರಿತಪ್ರತಿಯಲ್ಲಿಲ್ಲ
[35] ಮರೆದು (ವಿ, ಮು) [36] ಮರೆದು (ವಿ, ಮು) [37] ಮನವನು (ಪ) [38] ಮನವನು (ಪ) [39] ತರುಬಿ (ಪ, ಭ) [40] ತರುಬಿ (ಪ, ಭ) [41] ಸತ್ಯ (ವಿ) [42] ಸತ್ಯ (ವಿ) [43] ಗಮಿಸಿ (ವಿ) [44] ಗಮಿಸಿ (ವಿ) [45] ವರುಷ (ಭ) [46] ವರುಷ (ಭ) [47] ಸಂಧಿಸಿದನು (ವಿ) [48] ಸಂಧಿಸಿದನು (ವಿ) [49] ನಿಕರ (ವಿ). ವೆಲ್ಲ (ಪ) [50] ನಿಕರ (ವಿ). ವೆಲ್ಲ (ಪ) [51] ತ್ರವಣವ (ಭ) [52] ತ್ರವಣವ (ಭ) [53] ಜಪವ ಮಾಡುತ (ಪ). [54] ಜಪವ ಮಾಡುತ (ಪ). [55] ಳಶಿರನುರೆ || (ಪ) [56] ಳಶಿರನುರೆ || (ಪ) [57] ನೀರಾಶಯನ ಕ್ಷೇಶಂಗಳನು ಧರಿಸಿ || (ಭ), ಗಿರಿವನ ಮಹಾ ಕ್ಷೇತ್ರಂಗಳಲಿ ಗಮಿಸಿ || (ಪ) [58] ನೀರಾಶಯನ ಕ್ಷೇಶಂಗಳನು ಧರಿಸಿ || (ಭ), ಗಿರಿವನ ಮಹಾ ಕ್ಷೇತ್ರಂಗಳಲಿ ಗಮಿಸಿ || (ಪ) [59] ತೆರದಿ (ವಿ) [60] ತೆರದಿ (ವಿ) [61] ವಿದಿತ (ವಿ) [62] ವಿದಿತ (ವಿ) [63] ನೆನಿಸಿ ಜ (ಪ) [64] ನೆನಿಸಿ ಜ (ಪ) [65] ಕಮಲ (ವಿ, ಪ) [66] ಕಮಲ (ವಿ, ಪ) [67] ಜಯಜಯ (ಪ) [68] ಜಯಜಯ (ಪ) [69] ಭಕ್ತಿ (ವಿ, ಪ). [70] ಭಕ್ತಿ (ವಿ, ಪ). [71] ಜಯತು ಜಯ ಜಗದೀಶ್ವರೇಶ್ವರ (ವಿ) [72] ಜಯತು ಜಯ ಜಗದೀಶ್ವರೇಶ್ವರ (ವಿ) [73] ಮೈದಡಹಿದನು ಕಮಲಜನಂದುರಗಪತಿಯ || (ವಿ), ಮೈದಡಹಿದನು ಕಮಲಜನಂದು ಹರುಷದಲಿ || (ಪ್ರ) [74] ಮೈದಡಹಿದನು ಕಮಲಜನಂದುರಗಪತಿಯ || (ವಿ), ಮೈದಡಹಿದನು ಕಮಲಜನಂದು ಹರುಷದಲಿ || (ಪ್ರ) [75] ಗತಿಯ (ಭ, ವಿ) [76] ಗತಿಯ (ಭ, ವಿ) [77] ನೆರೆ (ವಿ, ಭ) [78] ನೆರೆ (ವಿ, ಭ) [79] ತಂದೆ ಬಲುವೈರದಲಿ (ಪ) [80] ತಂದೆ ಬಲುವೈರದಲಿ (ಪ) [81] ವನಧಿ ನದಿ (ಪ) [82] ವನಧಿ ನದಿ (ಪ) [83] ಲ್ಲಿಯೆ (ಪ) [84] ಲ್ಲಿಯೆ (ಪ) [85] ರಾ (ಭ). ವರ (ಪ) [86] ರಾ (ಭ). ವರ (ಪ) [87] ಸಲೆಸಂ (ಭ) [88] ಸಲೆಸಂ (ಭ)
Leave A Comment