ಯತಿಗಳಿರ ಕೇಳಿರಿ ಜಗತ್ ಸಂ
ಸ್ಥಿತಿಗೆ ಕಾರಣವನುಪಮ ತಪೋ
ವ್ರತಗಳಿವು ವಿಪರೀತ ಹೇತುಗಳಾ
ಪತಿಯದಾರೊಳಗಾರು ಲಕ್ಷ್ಮೀ
ಪತಿಯ ಪರುಠವ [3]ವೀ[4] ಜಗತ್ರಯವೆಂದನಾಮುನಿಪ ೨೧
ಬೇಡ ಮಖವಿದು ಪರಮ ಪುರುಷನ[5]ಕೋಡು[6]ಯಂತ್ರದ ಹಾಹೆ ಜಗ[7]ವಿದು[8]
ಮಾಡ[9]ಲಾಗದು[10] ಮತಕೆ ಬಾರದ ಕರ್ಮ[11]ವಿದ[12] ನಾವು
ಕೋಡಗಕೆ ಕಲ್ಪದ್ರುಮವ ನೀ
ಡಾಡುವರೆ ಕಡಿದೀ ತಪಸ್ಸಿನ
ಕೇಡ [13]ಕಂಡಿರೆ[14] ತಂದೆಗಳಿರೆಂದನು ಮುನಿವ್ರಜಕೆ ೨೨
ಆದಡಾಗಲಿ ನಿಮ್ಮ ವಚನವ
ನಾದರಿಸಿದೆವು [15]ತಮ್ಮ[16] ಸಂಕ
ಲ್ಪೋದಯವದೇ ಸುರಪತಿಯ ಗರ್ವವನು ಖಂಡಿಸುವ
ಆದಪನು ನಿಮಗೊಬ್ಬ [17]ಮಗನರಿ[18]
ಭೇದನೈಕಸಮರ್ಥ [19]ನಿದಕನು[20]
ವಾದಮಾತ್ರವನೀವುದೆಂದರು ವರಮುನೀಶ್ವರರು ೨೩
ಶಿಖಿ[21]ಯುಪಾ[22] ಸನದಿಂದ ಜನಿಸಿದ[23]ಸುಖ[24]ಮುಖನು ಬಲವಂತನಿವ ಶತ
ಮಖನ [25]ಪರಿಭವಿಸಿದ ಬಳಿಕಲಾ[26] ವೀರನಿಂದ್ರನಲಿ
ಸಖಿತನವನಾಗಿಸಲಿ ಪಾಲಿಸ
ಲಖಿಳಲೋಕಹಿತಾರ್ಥ ತಿರ್ಯ
ಜ್ಮುಖವನಿಡದಿರಿ ಬೇಡಿಕೊಂಬೆನು ನಿಮ್ಮನಾನೆಂದ ೨೪
ಎಂದು ಮುನಿಪನ ಕೈಯಲಿತ್ತು ಪು
ರಂದರನ ಕೈವಿಡಿದು ತಮ್ದರ
ವಿಮ್ದತನಯನ ಮೊಮ್ಮನುಮ್ಮೋಹವಿದು ತನಗೆನುತ
ಕಂದ ಬೇಡಿದನವರ ಚಿತ್ರಕೆ
ಮಂದಮತಿಯಾಗದಿರು ವಿಪ್ರರು
ವಂದ್ಯ [27]ರಲ್ಲೈ ಮಗನೆ[28] ಯೆಂದನು ಸುರಪತಿಗೆ ಮುನಿಪ ೨೫
ಶ್ರೀ ಕೆಡುವುದಾಯುಷ್ಯ ಕೆಡುವುದು
ಲೋಕವೆರಡರ ಸೌಖ್ಯ ಕೆಡುವುದು[29]ಬೀಕಲಹುದೈಶ್ವರ್ಯ[30] ಕೆಡುವುದು ವಿಜಯ ವಿಕ್ರಮದ
ಲೋಕಪೂಜ್ಯರು ದ್ವಿಜರವಜ್ಞೆಯ[31]ನೇಕ[32] ಸುಕೃತವ ಕೆಡಿಸುವುದು ನರ
ಕೈಕಹೇತುವಿದೆಂದು ತಿಳಿ ನೀನೆಮ್ದನಾ ಮುನಿಪ ೨೬
ಎಂದು ಮರಳಿದನತ್ತಲಾ ದ್ವಿಜ
ವಂದ್ಯಕಶ್ಯಪನಿತ್ತಲೀ ಮುನಿ
ವೃಂದ ಮಾಡಿದು [33]ದವಭೈಥವನೈದಿದನು[34] ಸುರನಾಥ
*ಸಂದ ತ್ರಿದಶಾಲಯಕೆ ಜನಿಸಿದ
ನಿಂದುಮುಖಿ ವಿನತೆಯಲಿ ಮುನಿಕುಲ
ನಂದನನು ಸಾನಂದ ವೀರವಿಹಂಗಕುಲನಾಥ ೨೭
ಭುವನವಂದ್ಯನೆ ಕೇಳು ಬಳಿಕಾ
ಹವಮಹಾವೀರಂಗೆ ಮುನಿ ಪ
ಟ್ಟವನು ಕಟ್ಟಿದನಾಭಿಷೇಕಾನೀಕವನು ರಚಿಸಿ[35]ಭವನರಿಯೆ[36] ಪಕ್ಷೀಂದ್ರನೀತನು
ದಿವಿಜರಿಂ [37]ಗಮರೇಂದ್ರನಿಂ[38] ದ್ರನು
ಸವನಿಸಲಿ ವರಸಖ್ಯವಿಬ್ಬರಿಗೆಂದು ಪತಿಕರಿಸಿ ೨೮
ಆರು ಸರಿ ಖಗಪತಿಗೆ ಭುವನಾ
ಧಾರ ವಿಷ್ಣುವನೊಲಿದು ಧರಿಸುವ
ಭೂರಿ ಬಲಸಾಮರ್ಥ್ಯ [39]ಸಂಪನ್ನಿಧಿಗೆ[40] ಗುಣನಿಧಿಗೆ
ಸಾರತಾಪಸ ವೀರತಪವಾ
ಕಾರವಾಯ್ತೆನೆ ಗರುಡದೇವನ
ಭೂರಿ ಮಾಹಾತ್ಮವನು ಬಣ್ಣಿಸಲರಿ[41]ಯೆ ನಾನೆಂದ[42] ೨೯
ಇದು ಮಹಾದುರಿತೌಘಹರ [43]ವಿದು
ವಿದು[44] ಮನೋರಥಸಿದ್ಧಿಯಾಗರ
ವಿದು ವಿಷಾನಲ [45]ಶಸ್ತ್ರ[46] ಬಾಧಾ [47]ಪಹರ[48] ಸೌಖ್ಯಕರ
ಇದನು ಹೇಳುವ ಕೇಳುವಾ ಸದು
ಹೃದಯರನು ರಕ್ಷಿಸುವನೊಲಿದಾ
ಪದುಮದೃಶ ನಿತ್ಯಾತ್ಮನಾರಾಯಣನು [49]ಕರುಣದಲಿ[50] ೩೦
ಸಪ್ತಮ ಸಂಧಿ ಸಮಾಪ್ತ
[1] ರಿದಕೆ ಕಡೆಗೆ || (ಭ) [2] ರಿದಕೆ ಕಡೆಗೆ || (ಭ) [3] ವೇ (ಭ) [4] ವೇ (ಭ) [5] ಜೋಡು (ಮು), ಕೊಡೆ (ಪ) [6] ಜೋಡು (ಮು), ಕೊಡೆ (ಪ) [7] ದಲಿ (ಪ) [8] ದಲಿ (ಪ) [9] ಬಾರದು (ವಿ) [10] ಬಾರದು (ವಿ) [11] ವನು (ಭ) [12] ವನು (ಭ) [13] ನೋಡಿರೆ (ವಿ, ಪ) [14] ನೋಡಿರೆ (ವಿ, ಪ) [15] ಕಂಡು (ವಿ) [16] ಕಂಡು (ವಿ) [17] ವೈರಿಯ (ಪ) [18] ವೈರಿಯ (ಪ) [19] ನೀತನು | (ಭ) [20] ನೀತನು | (ಭ) [21] ಮುಖಾ (ಭ) [22] ಮುಖಾ (ಭ) [23] ಶುಕ (ಭ) [24] ಶುಕ (ಭ) [25] ನೊಮ್ಮಭಿಭವಿಸಿ ಬಳಿಕಾ (ಭ), ನೋವನು ಬಿಟ್ಟು ಬಳಿಕಾ (ಪ) [26] ನೊಮ್ಮಭಿಭವಿಸಿ ಬಳಿಕಾ (ಭ), ನೋವನು ಬಿಟ್ಟು ಬಳಿಕಾ (ಪ) [27] ರೈ ಮೂಜಗಕೆ (ಪ) [28] ರೈ ಮೂಜಗಕೆ (ಪ) [29] ಪಾಕಶಾಸನಕೀರ್ತಿ (ಪ) [30] ಪಾಕಶಾಸನಕೀರ್ತಿ (ಪ) [31] ಲೇಕೆ (ಪ) [32] ಲೇಕೆ (ಪ) [33] ದಮಳದವಬೃಥಮೈದೆ (ಪ) [34] ದಮಳದವಬೃಥಮೈದೆ (ಪ)*’ವಿ’, ’ಪ’ ಮತ್ತು ’ಮು’ ಪ್ರತಿಗಳಲ್ಲಿ ಈ ಮೂರು ಸಾಲುಗಳು ಹೀಗಿವೆ:- ಇಂದುಮುಖಿ ವಿನತೆಯಲಿ ಮುನಿಕುಲ | ವಂದ್ಮನಾ ಕಶ್ಯಪನ ಬಸುರಲಿ | ನಂದನನು ಜನಿಸಿದನುವೀರ ವಿಹಂಗಕುಲನಾಥ ||
[35] ಭುವನದಲಿ (ಮು) [36] ಭುವನದಲಿ (ಮು) [37] ದ್ರನುವಾಮಹೇಂ (ಮು) [38] ದ್ರನುವಾಮಹೇಂ (ಮು) [39] ವಿನ್ನೀ ಧರೆಗೆ (ಮು), ಭಾಗ್ಯಾದ್ಯಧಿಕ (ಪ) [40] ವಿನ್ನೀ ಧರೆಗೆ (ಮು), ಭಾಗ್ಯಾದ್ಯಧಿಕ (ಪ) [41] ದು ತನಗೆಂದ || (ವಿ) [42] ದು ತನಗೆಂದ || (ವಿ) [43] ವಿಂ | ತಿದು (ವಿ) [44] ವಿಂ | ತಿದು (ವಿ) [45] ಶತ್ರು (ವಿ, ಮು) [46] ಶತ್ರು (ವಿ, ಮು) [47] ಹೆರವು(ವಿ, ಮ) [48] ಹೆರವು(ವಿ, ಮ) [49] ಮನವೊಲಿದು || (ಪ) [50] ಮನವೊಲಿದು || (ಪ)
Leave A Comment