ಸೂಚನೆ:
ಹೇಳಿದನು ಗರುಡಪ್ರಬಾವದ
ಮೂಲಕಾರಣ ಸಂಗತಿಯನಾ
ವಾಲಖಿಲ್ಯ ಚರಿತ್ರವನು

[1]ಸಂಕ್ಷೇಪದಲಿ ಸೂತ[2]||

ಪದನು:[3]ಕೇಳಿದೆನಲೈ[4] ಸೂತ ತ್ರಿಭುವನ
ಪಾಲಕರನೆಲ್ಲರನು ಖಗಪತಿ
ಸೋಲಿಸಿದ[5]ನೆಂತೈ ಸಮಗ್ರಬಲ[6] ಪ್ರಭಾವದಲಿ
ಏಳಿಗೆಯ ವಿಕ್ರಮದ ಲಕ್ಷ್ಮಿಗೆ
ಮೂಲ ಕಾರಣವಾವುದುತ್ತಮ
ಶೀಲಗುಣಸಂಪನ್ನ ಹೇಳೆವಗೆಂದನಾ ಮುನಿಪ          ೧

ಎಂದಡೆಂದನು ಸೂತನಧಿಕಾ
ನಂದದಲಿ ಶೌನಕಗೆ ಭೃಗುಕುಲ
ನಂದನನೆ ಕೇಳಾದಡಾ ವಿಹಗೋತ್ತಮೋದ್ಭವದ
ಅಂದವನು ಹೇಳುವೆನು ಕಶ್ಯಪ
ನೊಂದು ದಿನ ವರಯಾಗಕರ್ಮವ
ನಿಂದು [7]ಮಾಡುವೆನೆನುತ[8] ಬೆಸಸಿದನಾತ್ಮಜರಿಗೊಲಿದು        ೨

ವರ [9]ಸಮಿತ್[10] ಕುಶಗಳನು [11]ತಹುದ[12] ಧ್ವರಕೆ [13]ನೀವೆಂ[14]ದೆನುತ ನಿಜ ಪು
ತ್ರರಿಗೆ ವಾಸವಮುಖ್ಯರಿಗೆ [15]ವರ[16] ವಾಲಖಿಲ್ಯರಿಗೆ
ಕರೆದು ಬೆಸಸಿದಡವರು ವಿಪಿನಾಂ
ತರಕೆ ಹೋಗಿ ಸಮಿತ್ಕು[17]ಶಂಗಳ[18] [19]ನುರುತರಾಧ್ವರ[20] ಸಾಧನವ ಸಾಧಿಸಿದರೊಲವಿನಲಿ  ೩

ಸಂದ ಮಖಸಾಧನಸಮಿತ್ಕುಶ
ವೃಂದವನು ವಿಪಿನಾಂತರದ ವರ
ಕಮ್ದಮೂ[21]ಲಫಲಂಗಳನು ಸವನಿಸುತ[22] ತಮತಮರ
ತಂದು ಹೊರೆಗಳ ಕಟ್ಟಿ [23]ವರ[24]ಮುನಿ
ವೃಂದ [25]ವಾಸವಮುಖ್ಯರಮರರ[26] ವೃಂದವೆಲ್ಲರು ಹೊತ್ತುಕೊಂಡರು ಮರಳಿದರು [27]ಮಖಕೆ[28]       ೪

ಕಂಡನಾಖಂಡಲನು ಬರುತು
ದ್ದಂಡ ತೇಜದ ವಾಲಖಿಲ್ಯರ
ಮಂಡಲವನಂಗುಷ್ಟ [29]ಮಾತ್ರ[30] ಶರೀರರೆಂದೆನಿಸಿ
ಮಂಡೆಗಳಲೊಂದೊಂದು ಸಮಿಧೆಯ
ಕೊಂಡು ಕೃಶತರಗಾತ್ರರೆನೆ ಮುಂ
ಕೊಂಡು ಹೋಗುತ್ತಿರಲು ಮುಮ್ಮಾರ್ಗದಲಿ ಮುನಿವರರು        ೫

ಒಲೆಯುತವೆ ಕೃಶಸೂಕ್ಶ್ಮಕಾಯರು
ಕೊಳಚೆ ನೀರಲಿ ಮುಳುಗುತೇಳುತ
ಬಳಲುತೈತರೆ ಮುಂದೆ ಹೋಹ ಮಹಾಮುನೀಶ್ವರರ
ಬಳಗವನು ಕಾಣುತ್ತ ನಕ್ಕನು
ಬಲ[31]ಮದಾನ್ವಿತನ[32]ಧಿಕ ಗರ್ವದ
ಲಲಘುಭಾರವ ಹೊತ್ತುಕೊಂಡೈತರುತ ಮಾರ್ಗದಲಿ   ೬

ಅಕಟಕಟ ಕೃಶಗಾತ್ರರೆಲೆ ಬಾ
ಲಕರು ಭಾ[33]ರಾಕ್ರಾ[34] ತನಿಜಮ[35]ಸ್ತಕರೆನಿಸಿ ಕುಳಿಗಳಲಿ ಬೀಳುತ್ತೇಳಂತಳಲುತ್ತ[36] ಶಕುತಿಹೀನರು ಹೋಹುದನು ಮತಿ
ವಿಕಳನೀಕ್ಷಿಸಿ ಗರ್ವದಲಿ ಪಾ
ವಕನವೋಲಿರೆ ದಾಂಟಿ ನಡೆದನು ವರತಪಸ್ವಿಗಳ      ೭

ಕೇಳು ಶೌನಕ ಕಂಡುದಾ ಮುನಿ
ಜಾಲವಮರೇಶ್ವರನ ಕೃತನಿಜ[37]ಹೇಳನವನು[38] ರುತರತಪೋಗ್ನಿಜ್ವಾಲೆಕೋಪದಲಿ
ಮೇಳವಡೆದುದು ಮೇಲೆ [39]ವಿಷಮ[40]ಕ
ರಾಳನಯನರು ನುಸುಳಿಸಿದನೆಡ
ಗಾಲ[41]ಲದ[42]ಕೇನಾಯ್ತೆನುತ ಕನಲಿದರು ಸುರಪತಿಗೆ   ೮

ಹೋಹೊ ಕಂಡಿರೆ ಗರ್ವವನು ಘನ
ವಾಹನನ [43]ಧಾರ್ಷ್ಟ್ಯವನು[44] ವಿಕ್ರಮ
ಬಾಹುಬಲ ಸಂಪನ್ನ ತಾನೆಂಬಧಿಕತರ ಮದದ
ಸಾಹಸಿಕ [45]ನಹನಹನು[46] ದುರ್ಬಲ
ದೇಹಿಗಳ ಸಾಮರ್ಥ್ಯ[47]ಬಲ[48]ವನು[49]ಹೋಹೋ[50] ನೋಡಲಿಯೆನುತ ಗರ್ಜಿಸಿ [51]ತಂದು ಮುನಿನಿಕರ[52]       ೯

ಇಂದ್ರತನದೈಶ್ವರ್ಯಮದದಲಿ
ಮುಂದುಗಾಣನು ಮಾಳ್ವೆ[53]ವಾವಿ
ನ್ನಿಂದ್ರನೊಬ್ಬನನೀತ[54] ನಿಂದ್ರತ್ವವನು ಬೇ [55]ರಿರಿಸಿ[56] ಕೊಂದಡಹುದಪಕೀರ್ತಿ [57]ತಪ[58]ವಿದು
ಹೊಂದುವುದು ಬೇಡೆನುತ ತಮ್ಮೊಳ
ಗೊಂದು ಮತವನು ಮಾಡಿದರು ತೊಡಗಿದರು ತಾಮಸವ      ೧೦

ಮೊದಲುಗೊಂಡರು ಬೇರ ಮುಖವನು
ಮದಮುಖನನೆಬ್ಬಟ್ಟಿ [59]ಸುರಪತಿ[60] ಪದವನೇರುವ ವೀರ್ಯಶೌರ್ಯಬಲೋಪಪನ್ನನನು
ತ್ರಿದಶಪತಿಯನು ಪಡೆವೆವಾವೆಂ[61]ದುದಿತ[62] ದಿವ್ಯ ಮನೋರಥದಲ
ಗ್ಗದ ಮಹಾಮುನಿ ನಿಕರ [63]ತೊಡಗಿ ದರಧ್ವರಕ್ರಿಯೆಯ [64]        ೧೧

ಶೌರ್ಯದಲಿ ಶಕ್ರಂಗೆ ನೂರ್ಮಡಿ
ವೀರ್ಯದಲಿ [65]ಶಿವನಿಂದಧಿಕನೆನೆ[66] ಧೈರ್ಯದಲಿ [67]ಹನುಮಂಗೆ ತೋಳ್ಬಲದಲಿ[68] ಸಮೃದ್ಧಿಯಲಿ
ಸ್ಥೈರ್ಯದಲಿ ಹದಿನಾಲ್ಕು ಜಗಕನಿ
ವಾರ್ಯನೆನಿಪ ಮಹಾಬಲಾಧಿಕ
ವರ್ಯನೊಬ್ಬನು ಜನಿಸಲೆಂದಾಹುತಿಯ ನೀಡಿದರು   ೧೨

ಕಾಮರೂಪನು ಕಾಮವೀರ್ಯನು
ಕಾಮಗಮನನು ಕಾಮತೇಜೋ
ದ್ಧಾಮ ಕಾಮಬಲಾನ್ವಿತನು ಕಾಮಪ್ರದನು ಧರೆಗೆ
ಕಾಮಹರನಿಂದಧಿಕನೆನೆ ಸು
ತ್ರಾಮಲೋಕಭಯಂಕರನು ವರ
ಧೂಮಕೇತುವೆ ಜನಿಸ[69]ಲೆಂದರು ವರ ಹುತಾಶನಗೆ[70] ೧೩

ಕುಡನಿದನಾ ಕಶ್ಯಪನು ಬೆಸ
ಗೊಂಡನೇನನು ಬಯಸಿದಿರಿ ಕೈ
ಕೊಂಡೀರೇತಕೆ ಯಾಗಕರ್ಮವ[71]ನಿದ[72] ತಪಸ್ವಿಗಳು
ಚಂಡತೇಜೋನಿಧಿಗಳಿರ ಬ್ರ
ಹ್ಮಾಂಡಸುಖನಿಸ್ಪೃಹರಿದೇನೆನೆ
ಮಂಡಲದ ಮುನಿವರರು ಮಗುಳೆಂದರು ಮನೋ[73]ಗತ[74]ವ    ೧೪

ತಂದೆ ಕೇಳಾದರೆ ಸುರೇಂದ್ರನ
ಕೊಂದು ಕೂಗುವ ವೀರನೊಬ್ಬನ
ನೀಮ್ದುನಾವಭ್ಯರ್ಥಿಸುವೆವೀ ಹವ್ಯವಾಹನನ
ಎಮ್ದಡೇನನ್ಯಾಯವನು ನಿಮ
ಗಿಂದ್ರ[75]ನಾಚ[76]ರಿಸಿದನು ಕೊಲುವಿರೆ
ಕಂದನನು ನೀವೇಕೆನಲು ಹೇಳಿದರು ಮುನಿವರರು     ೧೫

ಮರೆಯ ಮಾತೇಕಿಂದ್ರನೆಮ್ಮನು[77]ಕಿರುಬರೆಂದೈ[78]ಶ್ವರ್ಯಮದದಲಿ
ನೆರೆ ಕುರುಡುಗಣ್ಣಾಗಿ ಕಾಣದೆ ದಾಂಟಿಬಂದನಲೈ
ಕೊರತೆ[79]ಯವಗಿಲ್ಲಾದಡೇನೆ[80] ಚ್ಚರಿಸಬೇಹುದು ಮೂಢಮತಿಯನು
ಹರಿದು ಕಂಗಳ ಪಟಲವನು ಕೇಳೆಂದರಾಮುನಿಗೆ      ೧೬

ವರಪರಾಭವವಂಜನವಲಾ
ಸಿರಿಯ ಮದದಲಿ ಕಾಣದವರಿಗೆ
ಪರಮಶಾಂತಿಪ್ರದವಿದೇ ಸಾಧನವಿದಿಹಪರಕೆ
ಉರಿಯ ಹೋಲುವ ವೀರನನು ನಾ
ವುರಿಯನಭ್ಯರ್ಥಿಸುವೆವರಿಂ
ದುರಿವುದಿಂದ್ರನ ಮದವದೆಂದರು ಪರಮ ಋಷಿವರರು ೧೭

*ಸಾಕುಸಾಕನುಚಿತದ ಮಖವಿದ
ನೇಕೆ[81]ಮಾಡುವಿರುಪಶಮಿಸುವುದು[82] ಪಾಕಶಾಸನನಿದಿರೆ ನಿಮಗೆ ಮಹಾ ತಪಸ್ವಿಗಳು
ಲೋಕಪೂಜ್ಯರು ನೀವು ವಿಗತವಿ
ವೇಕನೊಡನೆ ವಿರೋಧ ನಿಮಗೇ
ಕಾಕುಳವ ಮಾಡದಿರಿ ಭುವನವವೆನೆಂದನಾ ಮುನಿಪ  ೧೮

ಪ್ರಳಯಮಾರುತಗೇಕೆ ನೂಕುವಿ
ರಳಿಮುಗಿಲ ಮೋಹರವನಿಂದ್ರನ
ಕೊಲೆಗೆ ಹೋಮವಿದೇಕೆ ನೋಡಿದಡಾಗದೇ ಮುನಿದು
ನಳಿನನಾಭನ ಸೀಮೆ ನಾವಿದ
ನಳಿಯಲುಳುಹುವರಾರು ನಿಮಗಾ
ನೆಲೆಯ ತೋರುವನಲ್ಲ ಮೂಲವ ಬಲ್ಲರಿಂಗೆಂದ        ೧೯

ಸೃಷ್ಟಿಯನು ಮಾಡುವನು ಕಮಲಜ
ನಷ್ಟದಿಗುಪಾಲಕರು ಕಾಯ್ವರು
ದುಷ್ಟನಿಗ್ರಹಮುಖದಲೀ ತ್ರೈಲೋಕ್ಯ[83]ಸಂತ[84]ತಯ[85]ಅಷ್ಟಮೂರುತಿ ಕಡೆಗೆ ಹಣೆ[86] ಗಣ್
ದಿಟ್ಟಿಯಲಿ ಹೋಮಿಸುವನಿದನು
ತ್ಕೃಷ್ಟಮತಿ ಮೀರುವನದಾವನು ತಂದೆಗಳಿರೆಂದ      ೨೦

[1] ಶೌನಕ ಮಹಾತ್ಮರಿಗೆ (ಪ)

[2] ಶೌನಕ ಮಹಾತ್ಮರಿಗೆ (ಪ)

[3] ಹೇಳಿದೇನೈ (ಪ)

[4] ಹೇಳಿದೇನೈ (ಪ)

[5] ನಸಮಗ್ರ ಬಲ ತೇಜ || (ವಿ)

[6] ನಸಮಗ್ರ ಬಲ ತೇಜ || (ವಿ)

[7] ಮಾಳ್ಬೆನೆನುತ್ತ (ವಿ)

[8] ಮಾಳ್ಬೆನೆನುತ್ತ (ವಿ)

[9] ಸಮಿಧೆ (ಪ)

[10] ಸಮಿಧೆ (ಪ)

[11] ಮಹದ (ಪ)

[12] ಮಹದ (ಪ)

[13] ತಹುದೆಂ (ಪ)

[14] ತಹುದೆಂ (ಪ)

[15] ನಿಜ (ಭ), ಮುನಿ (ಪ)

[16] ನಿಜ (ಭ), ಮುನಿ (ಪ)

[17] ಶಾದ್ಯುರು (ವಿ), ಶಾದಿಯ (ಪ)

[18] ಶಾದ್ಯುರು (ವಿ), ಶಾದಿಯ (ಪ)

[19] ತರಮಹಾಧ್ವರ (ವಿ)

[20] ತರಮಹಾಧ್ವರ (ವಿ)

[21] ಲಂಗಳನು ಸಂವರಿಸಿದರು (ಪ), ಲಫಲಂಗಳನು ಸಂದಿರಿಸಿ (ವಿ)

[22] ಲಂಗಳನು ಸಂವರಿಸಿದರು (ಪ), ಲಫಲಂಗಳನು ಸಂದಿರಿಸಿ (ವಿ)

[23] ದರು (ಪ)

[24] ದರು (ಪ)

[25] ವಾ ವಾಸ್ವಮುಖಾಮರ | (ಭ)

[26] ವಾ ವಾಸ್ವಮುಖಾಮರ | (ಭ)

[27] ಮನೆಗೆ || (ವಿ)

[28] ಮನೆಗೆ || (ವಿ)

[29] ಮಾನ (ಪ)

[30] ಮಾನ (ಪ)

[31] ನು ತಾನಿರಲ (ಪ)

[32] ನು ತಾನಿರಲ (ಪ)

[33] ರಶ್ರಾ (ವಿ)

[34] ರಶ್ರಾ (ವಿ)

[35] ಸ್ತಕರು ಕುಳಿಗಳನಿಳಿಯುತೇಳುತ ಬಳಲುವವರುಗಳ || (ಭ)

[36] ಸ್ತಕರು ಕುಳಿಗಳನಿಳಿಯುತೇಳುತ ಬಳಲುವವರುಗಳ || (ಭ)

[37] ಖೇಳವನ್ನು (ಪ)

[38] ಖೇಳವನ್ನು (ಪ)

[39] ನೋಡಿ (ವಿ, ಪ)

[40] ನೋಡಿ (ವಿ, ಪ)

[41] ಲೊಳ (ಪ)

[42] ಲೊಳ (ಪ)

[43] ಪೌರುಷ್ಯ (ವಿ), ಧಾರ್ಷ್ಟಿತ್ವ (ಪ)

[44] ಪೌರುಷ್ಯ (ವಿ), ಧಾರ್ಷ್ಟಿತ್ವ (ಪ)

[45] ನಹುದಹುದು (ಪ)

[46] ನಹುದಹುದು (ಪ)

[47] ತನ (ಪ)

[48] ತನ (ಪ)

[49] ಹೂಹೆ (ವಿ)

[50] ಹೂಹೆ (ವಿ)

[51] ದುದು ಮುನಿಸ್ತೋಮ || (ವಿ_, ದುದು ಮುನಿವ್ರಾತ || (ಪ)

[52] ದುದು ಮುನಿಸ್ತೋಮ || (ವಿ_, ದುದು ಮುನಿವ್ರಾತ || (ಪ)

[53] ವಿನ್ನೋ|ಬ್ಬಿಂದ್ರನನು ತೆಗೆದೀತ (ವಿ, ಪ)

[54] ವಿನ್ನೋ|ಬ್ಬಿಂದ್ರನನು ತೆಗೆದೀತ (ವಿ, ಪ)

[55] ರೊರಸಿ || (ಮು)

[56] ರೊರಸಿ || (ಮು)

[57] ತಮ (ಭ, ವಿ), (ವಿ)

[58] ತಮ (ಭ, ವಿ), (ವಿ)

[59] ದರು ಸುರ (ಪ), ಸುರಪನ

[60] ದರು ಸುರ (ಪ), ಸುರಪನ

[61] ದಧಿಕ (ಭ)

[62] ದಧಿಕ (ಭ)

[63] ನೆಗಳಿ (ಪ)

[64] ನೆಗಳಿ (ಪ)

[65] ವಿಕ್ರಮಪರಾಕ್ರಮ (ವಿ, ಭ)

[66] ವಿಕ್ರಮಪರಾಕ್ರಮ (ವಿ, ಭ)

[67] ತೇಜೋಬಲೈಶ್ವರ್ಯನ (ವಿ)

[68] ತೇಜೋಬಲೈಶ್ವರ್ಯನ (ವಿ)

[69] ಲೆಂದಾಹುತಿಯ ನೀಡಿದರು || (ವಿ), ಬೇಕೆಂದರು ಹುತಾಶನಗೆ || (ಮು)

[70] ಲೆಂದಾಹುತಿಯ ನೀಡಿದರು || (ವಿ), ಬೇಕೆಂದರು ಹುತಾಶನಗೆ || (ಮು)

[71] ನುರು (ವಿ), ವರ (ಭ)

[72] ನುರು (ವಿ), ವರ (ಭ)

[73] ರಥ (ಭ)

[74] ರಥ (ಭ)

[75] ನಧಿಕ (ಭ)

[76] ನಧಿಕ (ಭ)

[77] ಕರುಬುತನದೈ (ವಿ, ಪ), ಕುರಿತು ತನ್ನೈ (ಮು)

[78] ಕರುಬುತನದೈ (ವಿ, ಪ), ಕುರಿತು ತನ್ನೈ (ಮು)

[79] ಯೇನಿಲ್ಲದರ್ ನೀನೆ | (ಭ), ಯಮಗಿಲ್ಲ. ದಡ ನಿಮಗೆ | (ಪ)

[80] ಯೇನಿಲ್ಲದರ್ ನೀನೆ | (ಭ), ಯಮಗಿಲ್ಲ. ದಡ ನಿಮಗೆ | (ಪ)

[81] ನೀವ್ ಮಾಡುವಿರುಪಶಮಿಸಲಾ | (ಭ)

[82] ನೀವ್ ಮಾಡುವಿರುಪಶಮಿಸಲಾ | (ಭ)

*’ ಪ’ ಪ್ರತಿಯಲ್ಲಿ ಈ ಪದ್ಯವಿಲ್ಲ.

[83] ಸಂಸ್ಥಿ (ಭ, ವಿ)

[84] ಸಂಸ್ಥಿ (ಭ, ವಿ)

[85] ಇಷ್ಟಪಾಧೀಶ್ವರನ ಕಡೆ (ಪ).

[86] ಇಷ್ಟಪಾಧೀಶ್ವರನ ಕಡೆ (ಪ).