ಅಶನವಾಗಲಿ ಕದ್ರುಪುತ್ರರ
ವಿಸರವೆನಗೆಲೆ ದೇವ ಕೊಡು ಕಾಂ
ಕ್ಷಿಸಿದ ವರ್ವನೆನಲ್ಕೆ ಕೊಟ್ಟೆನು ವಿಜಯ ಹೋಗೆನಲು
ವಸುಧೆಗೈತಂದನು ಸುರೇಂದ್ರನ
ನೊಸಲು ಬೆವರಲು ಜನನಿಯಂಘ್ರಿಯ
ಬಿಸರುಹಕೆ ತಲೆವಾಗಿ ನಿಂದನು ವಿನಯದಲಿ ವಿಹಗ    ೪೧

ತಂದೆನಮೈತವನವ್ವ ತಂದೆನು
ತಂದೆನಿದೆಯಿದೆಯೆನಲು ಬದುಕೆಲೆ
ಕಂದ ಕಲ್ಪಸಹಸ್ರವನು ದೀರ್ಘಾಯುವಾಗೆನುತ
ನಿಂದು ಹರಸಿದಳಬಲೆ ಕದ್ರುವ
ನಂದನರಿಗೀಯೆನಲು ಕರೆದನು
ಬಂದು ಕದ್ರುಕುಮಾರ

[1]ಕರೆ[2] ಪೀಯೂಷವಿದೆಯೆನುತ    ೪೨

ಕೊಟ್ಟೆನಮೃತವನಿದೆ[3]ಯಿದೇಯಿದೆ[4] ಕೊಟ್ಟೆ[5]ನೊಲೆದಿಂ[6]ತಿದನು ಕೊಂಬುದು
ದುಷ್ಟರಿರ ಹಾಸುವುದು ದರ್ಭೆಯನವನಿಯಲಿ ಸುಧೆಯ
ನೆಟ್ಟನಿರಿಸಿದೆನಿದೆಯಿದೇ [7]ನೀವ್[8] ಮುಟ್ಟದಿರಿ ಶುಚಿಯಲ್ಲದವರು ವಿ
ಶಿಷ್ಟವಿಹಿತಸ್ನಾನರಾಗಿಯೆ ಕೊಂಬುದಿದನೆಂದ ೪೩

[9]ಅಲ್ಲ ತೊತ್ತೆನ್ನವ್ವೆಯೆನಲ
ಲ್ಲಲ್ಲ ಹೋಗಲ್ಲೆನುತ[10] ಪನ್ನಗ
ರೆಲ್ಲ[11]ವರು[12] ಸುಸ್ನಾನರಹೆವೆಂದೆನುತ ತಮತಮಗೆ
ನಿಲ್ಲದೈದಿದ[13]ರುರು ನದೀ[14] ಜಲ
ದಲ್ಲಿಗಾಕ್ಷಣ ಬಂದನಮರರ
ಬಲ್ಲಹನು ಕೊಂಡೊಯ್ದನಮೃತವನರಿಯದಂದದಲಿ    ೪೪

ಮಿಂದು ಮಡಿಗಳನುಟ್ಟು ಕುಂಕುಮ
ಚಂದನಾಗರು ಭೂಷಣಂಗಳ[15]ನಂದದಲಿ ಧರಿಸಿದರು[16] ತಮ್ಮೊಳಗೊಬ್ಬರೊಬ್ಬರನು
*ಹಿಂದುಳುಹಿ ನಾಮುನ್ನ ತಾಮು
ನ್ನೆಂದು ತಿವಿದಾಡುತ್ತ ಪನ್ನಗ
ವೃಂದವಂಬರ ಮುಳುಗಲೈತಂದುದು ತತುಕ್ಷಣಕೆ      ೪೫

ಕುಡಿ[17]ವೆವ[18]ಮೃತವನಖಿಳಲೋಕ
ಕ್ಕೊಡೆಯರಹೆವಜರಾಮರತ್ವವ
ಪಡೆದ ಬಳಿ[19]ಕಿದಿರಾರು[20] ಕೊಂಬೆವೆ ಗರುಡಗಿರುಡನನು
ಮೃಡ ವಿರಿಂಚಿ ಮಹೇಂದ್ರರೆಂಬರ
ನೆಡಹಿ ಕಾಂಬೆವೆ ನೂಕುನೂಕೆನು
ತಡಸಿ ಕವಿತಂದುದು ಮಹೋರಂಗ ನಿಕರ ಬೊಬ್ಬಿರಿದು         ೪೬

ತಂದನಾ[21]ಯಾಸ[22]ವನು ನೋಡದೆ
ವೃಂದದಮರರ ಸದೆದು [23]ತಮ[24]ಗುಣ
ಸಂದುದಿಲ್ಲಮೃತ[25]ವನು[26] ಭಾಗ್ಯಾಧಿಕರು ತಾವೆನುತ
ಮುಂದಣವರನು ಕೆಡೆದುಳಿದು ಸಾ
ರೆಂದೆನುತ ಸಂಭ್ರಮದಲಂದೈ[27]ತಂದರೇನೆಂಬೆನು ಮಹೋರಗ[28]ನಿಕರದುತ್ಸವವ    ೪೭

ಬೇಡಬೇಡಳಿಬಲರನೆಲ್ಲರ
ಕೂಡಿಕೊಂಡೇ ಕುಡಿವು[29]ದೆಲ್ಲರು[30] ಮಾಡಲಾಗದು ಸಾಹಸವ [31]ನೀವೆನುತ[32] ಕೆಲಕೆಲರು
ಕೊಡೆ ಹುಲುಗೈಗಳನು ನೆಗಹಿದ[33]ರಾಡಿ[34]ದೆಡೆ ಕೇಳು[35]ವರದಾರವ
ನೀ[36]ಡಿರಿಯುತೊಬ್ಬೊಬ್ಬರನು ಹರಿತಂದರಾಸ್ಥಳಕೆ     ೪೮

ಕಾ[37]ಣೆವೇ[38]ನಾಯ್ತಿರಿಸಿದೆಡೆಯಲಿ
ಮಾಣದಮೃತವ ಕದ್ದರಾರೋ
ಪ್ರಾಣವನು ನೆರೆ ಕೊಂಡ[39]ರಕಟಕಟೇವೆವೆಂದೆನುತ[40] ಹೂಣಿಗರು ನೆಕ್ಕಿದರು ದರ್ಭೆಯ
ತಾಣವನು ಸುಧೆ[41]ಯೆ[42]ನುತ ಜಿಹ್ವಾ
ಶ್ರೇಣಿ ಸೀಳಿದುದೊಂದೆರಡು ಸೀಳಾಗಲಹಿಕುಲದ      ೪೯

ಇದುವೆ ಲಾಭವೆನುತ್ತ ದುಮ್ಮಾ
ನದಲಿ ಹಿಂಗಿದುದಹಿನಿಕರವಾ
ಪದುಮ ಮುಖಿಯನು ಬಿಟ್ಟು ವಿನತೆಯನಧಿಕ ತಾಪದಲಿ
ಕುದಿಯುತಿರ್ದುದು ನೋಡಿ ಖಗಪತಿ[43]ಯುದಿತ[44]ಬಲಪೌರುಷಪರಾಕ್ರಮ
ದುದಯವನು [45]ಶುಭವಹುದೆ ಕೇ[46]ಳನ್ಯಾಯನಿಷ್ಠರಿಗೆ  ೫೦

ಇತ್ತಲಾಜನನಿಯ ಹೊರೆಗೆ ವಿಹ
ಗೋತ್ತಮನು ನಡೆತಂದನೆರಗಿದ
ನುತ್ತಮಾಂಘ್ರಿಗಳಿಂಗೆ [47]ಬೆಸನೇನಾವುದಿನ್ನೆ[48]ನುತ
ಪುತ್ರವಚನವನಾಲಿಸುತ ಪುಳ
ಕೋತ್ತರದ ಸಪ್ರೇಮಜಲಸಂ
ವೃತ್ತಲೋಚನೆಯಪ್ಪಿದಳು ಸಂಪೂರ್ಣವಾಯ್ತೆನುತ     ೫೧

ಎಸೆದನೀಪರಿ ಗರುಡದೇವನು
ದೆಸೆಹೊಗಳಲಾಶ್ರಮದ[49]ಲತಿ[50]ಮಾ
ನುಷ ಪರಾಕ್ರಮಸತ್ವಬಲ ಸಂಯುಕ್ತನೆಂದೆನಿಸಿ
ಶಶಿವದನೆ ವಿನತೆಯ ಮನೋರಥ[51]ದೆಸಕ ಫಲವಾದಂತೆ[52] ರಮಿಸುತ
ಋಷಿಕುಲದ ಧರ್ಮದಲಿ ಸುಸ್ಥಿರವಾಗೆ ನುತಕೀರ್ತಿ     ೫೨

ಅವನಿದನೋದುವನು ಕೇಳುವ
ನಾವ[53]ನನುಪಮವಹ[54]ವಿಹಂಗಮ
ದೇವನುದಯವನಮಳಚಾರಿತ್ರವನು ಮನವೊಲಿದು
ಕಾವನವರನು ಪರಮಕಾರು
ಣ್ಯಾವಲೋಕನದಿಂದ ಸೌಖ್ಯವ
ನೀವನಾ ನಿತ್ಯಾತ್ಮನಾರಾಯಣನು [55]ಕರುಣದಲಿ[56]     ೫೩

ಷಷ್ಠ ಸಂಧಿ ಸಮಾಪ್ತ

[1] ರಿರ (ವಿ),

[2] ರಿರ (ವಿ),

[3] ಕೊ ಕೊಟ್ಟೆನು | (ವಿ), ಯಿದೆನಲಾ | (ಪ)

[4] ಕೊ ಕೊಟ್ಟೆನು | (ವಿ), ಯಿದೆನಲಾ | (ಪ)

[5] ನಿದನಿಂ (ಪ)

[6] ನಿದನಿಂ (ಪ)

[7] ಯಿದೆ (ವಿ)

[8] ಯಿದೆ (ವಿ)

[9] ಅಲ್ಲ ತೊತ್ತಲ್ಲವ್ವೆಯಲ್ಲ | ಲ್ಲಲ್ಲ ಬಿಡಿ ತೊತ್ತಲ್ಲ (ವಿ), ಅಲ್ಲವೇ ತೊತ್ತಲ್ಲವೇಯ | ಲ್ಲಲ್ಲ ಬಿಡಿ ತೊತ್ತಲ್ಲ (ಮು)

[10] ಅಲ್ಲ ತೊತ್ತಲ್ಲವ್ವೆಯಲ್ಲ | ಲ್ಲಲ್ಲ ಬಿಡಿ ತೊತ್ತಲ್ಲ (ವಿ), ಅಲ್ಲವೇ ತೊತ್ತಲ್ಲವೇಯ | ಲ್ಲಲ್ಲ ಬಿಡಿ ತೊತ್ತಲ್ಲ (ಮು)

[11] ರುರೆ (ಪ)

[12] ರುರೆ (ಪ)

[13] ರವರು ನದಿ (ಪ)

[14] ರವರು ನದಿ (ಪ)

[15] ನಂದು ಧರಿಸಿದರೆಲ್ಲ (ಪ).

[16] ನಂದು ಧರಿಸಿದರೆಲ್ಲ (ಪ).

* ’ಭ’ ಪ್ರತಿಯಲ್ಲಿ ಈ ಮೂರು ಸಾಲುಗಳು ಹೀಗಿವೆ:- ಕುಂದಧಿಕರೆನುತ್ತ ಹೊಗಳುತ | ನಿಂದು ಸೌಹಾರ್ದದಲಿ ಹರುಷಿಸಿ | ಚೆಂದದಿಮ್ದೈತಂದರೊಬ್ಬೊಬ್ಬರನು ಲೆಕ್ಕಿಸದೆ. ||

[17] ದಡ (ಪ)

[18] ದಡ (ಪ)

[19] ಕಿನಲಾರ (ಪ)

[20] ಕಿನಲಾರ (ಪ)

[21] ಯುಷ್ಯ (ಪ)

[22] ಯುಷ್ಯ (ಪ)

[23] ತನ (ವಿ, ಪ)

[24] ತನ (ವಿ, ಪ)

[25] ವದು (ಭ)

[26] ವದು (ಭ)

[27] ತಂದುದನುವೇನೆಂಬೆನುರಗರ (ಪ)

[28] ತಂದುದನುವೇನೆಂಬೆನುರಗರ (ಪ)

[29] ದಲ್ಲದೆ (ವಿ).

[30] ದಲ್ಲದೆ (ವಿ).

[31] ನಡೆಯಿಯೆನೆ (ಪ)

[32] ನಡೆಯಿಯೆನೆ (ಪ)

[33] ರೋಡಿ ಈವಿ)

[34] ರೋಡಿ ಈವಿ)

[35] ವವರಾರಿಡ| ಲೀ (ವಿ)

[36] ವವರಾರಿಡ| ಲೀ (ವಿ)

[37] ಣದೇ (ಪ)

[38] ಣದೇ (ಪ)

[39] ರಕಟಾ ಕೆಟ್ಟೆವೆಂದೆನುತ || (ವಿ), ರಕಟಕತೇನು ಗತಿಯೆಂದು || (ಪ)

[40] ರಕಟಾ ಕೆಟ್ಟೆವೆಂದೆನುತ || (ವಿ), ರಕಟಕತೇನು ಗತಿಯೆಂದು || (ಪ)

[41] ಗೆ (ಭ, ವಿ)

[42] ಗೆ (ಭ, ವಿ)

[43] ಯಧಿಕ (ಭ, ವಿ)

[44] ಯಧಿಕ (ಭ, ವಿ)

[45] ಸುಖವಹುದೆ ಹೇ (ಪ)

[46] ಸುಖವಹುದೆ ಹೇ (ಪ)

[47] ಬೆಸನಿನ್ನಾವುದೆಮ್ದ (ವಿ), ಬೆಸನೇನವ್ವೆಯೆಂದೆ (ಪ)

[48] ಬೆಸನಿನ್ನಾವುದೆಮ್ದ (ವಿ), ಬೆಸನೇನವ್ವೆಯೆಂದೆ (ಪ)

[49] ಲರಿ (ಪ)

[50] ಲರಿ (ಪ)

[51] ವಸಮ ಫಲವೆತ್ತಂತೆ (ಪ)

[52] ವಸಮ ಫಲವೆತ್ತಂತೆ (ಪ)

[53] ನಿದನನುಪಮ (ವಿ), ನನುಪಮದಾ (ಪ)

[54] ನಿದನನುಪಮ (ವಿ), ನನುಪಮದಾ (ಪ)

[55] ಮನವೊಲಿದು (ಭ, ಪ)

[56] ಮನವೊಲಿದು (ಭ, ಪ)