ನೆನೆದ ಹೊತ್ತೈತಹುದು ಸುಖಿಯಾ
ಗೆನುತ ಮೈದಡಹಿದನು ಕರುಣಾ
ವನಧಿ ವಿಹಗೋತ್ತಮನನನುರಾಗದಲಿ ಬೀಳ್ಕೊಟ್ಟು
ನೆನದಂತರ್ಧಾನವನು ಬಳಿ
ಕನುಪಮನು ಗಗನದಲಿ ಬರುತಿ

[1]ರೆ
ಕನಲಿದಿಂ[2]ದ್ರನು ತಾಗಿದನು ಬೆಂಬತ್ತಿ ಮಾರ್ಗದಲಿ     ೨೧

*ಹೋಹೊ ನಿಲುನಿಲ್ಲಮ್ಮತಸಹಿತ ಸ
ದೇಹನಾಗಿಳೆಗಿಳಿಯಲೀಸೆನು
ಕಾಹುರದ [3]ಕೈ[4]ಮನದ ಕಲಿಯೇ ಕಾಣಬಹು[5]ದಿನ್ನು[6] ಬಾಹುಬಲ[7]ದಲಿ[8] ಬರಿದೆ [9]ಸಾಯದೆ[10] ಹೋಹುದಮೃತವನಿರಿಸು ವಜ್ರದ
ಸಾಹಸವನೀನರಿಯೆಯೆಂದನು ಜರಿದು ಖಗಪತಿಯ   ೨೨

ಕೊಳಚೆ ನೀರನು ದಾಂಟಲಾರದ[11]ಹುಳುವೆ[12] ಕಲ್ಪಾಂತದ ಸಮುದ್ರವ
ಕಳಿವೆನೆಂದೈತಂದೆ [13]ಮತ್ಸರತರವಲಾ[14] ಲೋಭ
ಗಳಹು ಬಳಿಕೆಲ್ಲವನು ಬಿಡುಬಿಡು
ಕುಲಿಶವನು ತನ್ನಾಣೆ ತನ್ನಲಿ
ಬಳಿಕ [15]ಚಿಂತಿಸಬೇಡ ಮಾತಿಂಗಿಲ್ಲ ತೆರಹೆಂದ[16]      ೨೩

ಅದಡಿದೆ ಕಲ್ಪಾಂತ [17]ಶರ[18]ಧಿಯ
ಸೇದು[19]ವಡೆ ವಡಬಾಗ್ನಿ[20] ತಾನಾ
ರಾದಡೇನಿದ ಕೊಳ್ಳೆನುತ ಕೋಪಾಗ್ನಿಯಲಿ [21]ಬೆಂದು[22] ಕಾದ ಕಂಗಳಲುರಿಯನುಗುಳುತ
ಹೋದೆಯಿನ್ನೇನೆನುತ ದುರ್ಧರ
ನಾದದಲಿ [23]ತಿರುಹಿ[24]ಟ್ಟನಾ ವಜ್ರದಲಿ ಖಗಪತಿಯ     ೨೪

ಇಟ್ಟನೋ ವಜ್ರದಲಿ ಸುರಪತಿ[25]ಕೆಟ್ಟನೋ ಖಗಪತಿ ನಿರರ್ಥಕೆ[26] ಮುಟ್ಟಿ ಬದುಕುವರುಂಟೆ ಹರಹರಯೆನುತ ಜನ ಬೆದರೆ
ಬೆಟ್ಟಗಳ [27]ಕಡಿಗಳೆದ ವಜ್ರವು[28] ಬಟ್ಟೆ[29]ದೆಗೆ[30]ದುದು ಖಗನ ಸಮ್ಮುಖ
ಕೊಟ್ಟಿದಾ ಜ್ವಾಲೆಯಲಿ [31]ನಿಂದಂ[32]ತಾಯ್ತು ಮೂಲೋಕ         ೨೫

ಕಂರ್ಡನದನಾ ವಿಹಗಪತಿ ರ್ಕೈ[33]ಕೊಂಡುದೆನ್ನನು [34] ವಜ್ರವೆನುತಾ
ಖಂಡಲಂಗಿದನೆಂದನೊಯ್ಯನೆ ನಗುತ ಲೀಲೆಯಲಿ
ಗಂಡುಗೆಡಿಸದೆ ಬರಿದೆ ವಜ್ರವ
ಕೊಂಡು ಹೋಗದೆ ನೀನು ಬಿಸುಟರಿ
ಖಂಡನನೆ ನೀನಿನ್ನು ಸುಖದಲಿ ಹೋಗು ಮನೆಗೆಂದ   ೨೬

ಅಲ್ಲದಡೆ [35]ನಾ ನಾಚಿಸುವನ
ಲ್ಲಲ್ಲ[36] ನಿನ್ನನು ಮೇಣಪೋಹವಿ
ದಲ್ಲ[37]ಲೈ ತಾಪಸದಧೀಚಿಯ ಕಾಯದಸ್ಥಿಯಲಿ[38] ಬಲ್ಲಿದರು ನಿರ್ಮಿಸಿದರೆಂಬುದ
ಬಲ್ಲೆನಿತ್ತೆನು ಗರಿಯನೊಂದನು
ಹೊಳ್ಳುಗಳೆಯಲಿ ವಜ್ರವೆಂದನು ನಗುತ ಸುರಪತಿಗೆ   ೨೭

ಎಂದೆನುತ ಗಗನದಲಿ ಮೊಳಗುವ
ಮುಂದುವರಿದೈತಹ ಮಹಾ[39]ಸ್ತ್ರ
ಕ್ಕೊಂದು[40] ಗರಿಯನು ತೋರಿದನು [41]ಕೊಳ್ಳೆ[42]ನುತ ಖಗರಾಜ
ಎಂದಡದನೇನೆಂಬನಮರರ
ವೃಂದ ಘೇಯನೆ ಬಿದ್ಪುದಾಗರಿ
ಸಂದುಡಿದ ಗಿರಿಯಂತೆ ವಜ್ರದಹತಿಯಲವನಿಯಲಿ     ೨೮

ಉರುವ ದಿವ್ಯಮಹಾಯುಧಕೆ ಕಿ
ಗ್ಗರಿಯನಿತ್ತೆನೆನುತ್ತ ಮನದಲಿ
ಮರುಗದಿರು [43]ನೆಗಹಾಪಡೊಂದೇ ಗರಿಯ[44] ಕಡೆಸೆರಗ
ಬರಿದೆ ನಾಚಲದೇಕೆನಲು ಶಚಿ
ಯೆರೆಯನದನಾಲಿಸುತ ಕಾಣದೆ
ಹರಿಯ [45]ಕಡೆ[46]ಯನು ಮೇಣು [47]ನೆಗಹಲು ನೆರೆ[48]ಯದಿಂತೆಂದ ೨೯

ಆರು ನೀನೆಲೆ ವೀರ ನಿನ್ನಾ
ಕಾರವದುಭುತ ನಿಜಪರಾಕ್ರಮ
ವಾರಿಧಿಯ ನೆಲೆಗಾಣದರಿದಾಯ್ತೆಲೆ ಸಖಿಯೆ ನಿನ್ನ
ಸಾರಬಲವೆನಿತೆಂದು ತಿಳಿವ ಮ
ನೋ ರಥದ ಸಖ್ಯವನು ತನ್ನಲಿ
ಸೇರಿಸೆಂದನು ವಿನಯದಲಿ ಖಗಪತಿಗೆ ಸುರ[49]ನಾಥ[50] ೩೦

ಸೇರಿತಿದೆಲಾ ಸಖ್ಯ ನಿನ್ನಲಿ[51]ವೈರವೆನಗೇನೆನ್ನ ಸತ್ವವ
ಸಾರುವಡೆ ಯೋಗ್ಯವೆ ವಿಚಾರಿಸಲಾತ್ಮ[52] ಸಂಸ್ತುತಿಯ ಸೂರಿಗಳು ಮಾಡುವರೆ ಹೇಳಾ
ವೀರ ಸಖಿ ನೀನೆಂದೆಯದರಿಂ
ದಾರು ಸಖಿಯಭ್ಯರ್ಥಿತವನಾಚರಿಸದಿಹರೆಂದ          ೩೧

ಸುರವರನೆ ಕೇಳಖಿಳಗಿರಿವನ
ವರನದೀಕಾನನಮಹಾಸಾ
ಗರ[53]ಸಮಸ್ತ[54] ದ್ವೀಪಧರೆಸಹಿತಖಿಳಭುವನವನು
ಧರಿಸುವೆನು ತಾನೊಂದು ಪಕ್ಷದ
ಲೊರೆದುದೆನಿತುಂಟನಿತನಧಿಕವ
ಸೊರಹಲರಿಯೆನಜಾಂಡಮಂಡಲ [55]ತೃಣ[56]ವಿದೆನಗೆಂದ        ೩೨

ಎಂದಡಾ [57]ಖಗಪತಿಗೆ[58] ಮಗುಳಿಂ
ತೆಂದನಹುದೋ ವೀರ ಬಲ್ಲಿದ
ನೆಂದರಿತೆನಾಕಾರದಳತೆಯ [59]ತೋರ[60]ಬೇಹುದೆಲೆ
ತಂದೆ ಸಖಿಯಾನಾದಡೆನ ವಿಹ
ಗೇಂದ್ರನಿಂದ್ರನ ಮಾತ ಕೇಳುತ
ಮಂದಹಾಸದಲಮರಪರಿಗಿಂತೆಂದ ನೊಲವಿನಲಿ      ೩೩

ನೋಡಬಹುದೀ ಪಕ್ಷದಗಲವ
ನೀಡುವಡೆ ತೆರಹಿಲ್ಲ ಕಮಲಜ
ನಾಡಲೇತಕೆ ಕೃಪಣನಾದನು ಗಗನ ಸೃಷ್ಟಿಯಲಿ
ನೋಡುವರೆ ತನಗೊಂದು ಗರಿಯನು
ನೀಡಲಿಂಬಿಲ್ಲಂಬರವನೆಡೆ
ಮಾಡಿ [61]ತೋರೀಕ್ಷಿಸುವಡೆಂ[62]ದನು ನಗುತ ಸುರಪತಿಗೆ         ೩೪

ವೀರ ಕಂಡೈ [63]ಹೇಳು ವಜ್ರವಿ
ದಾ[64]ರಿಸಿದ [65]ತನ್ನೊಂದು[66] ಪಕ್ಷದ
ಸಾರವನು ಮತಿಯುತನೆ ಮತ್ತಿನ್ನೇನನೀಕ್ಷಿಸುವೆ
ಭೂರಿನಯನನೆ ಸಖ್ಯವಿದು ನಿ
ಷ್ಕಾರಣವೆ ನೋಡಾದಡೆನುತ ಮ
ಹೋರಗಾಂತಕ[67]ನಮರರುಘ್ಹೆ[68]ಯೆನೆ ತೋರಿದನು ನಿಜವ      ೩೫

ಮುಳುಗಿದವು ದೆಸೆಯೆಂಟು ಪಕ್ಷದ
ವಳದೇ[69]ಕಾಂಗ[70]ದಲಿ ಧ್ರುವ ಮಂ
ಡಳಕೆ ಸಂಕಟವಾಯ್ತು ಶಿರವನು ನೆಗಹಿದಡೆ ಮೇಲೆ
ಇಳೆ ರಸಾತಳಕಿಳಿದುದಂಘ್ರಿಯ
ನೆಲೆಯ ಕಂಡವರಾರು ಭುವನಾ
ವಳಿ ತದತ್ಮಕವಾಯತದೊಂದೇ ನಿಮಿಷಮಾತ್ರದಲಿ   ೩೬

ಘಾಸಿಯಾದನು ತರಣಿ ತೇಜೋ
ರಾಶಿಯಂಗಚ್ಛವಿಯನೀಕ್ಷಿಸಿ
ವಾಸವನು ನಡುಗಿದನು ಜಯಜಯವೆಂದುದಮರಗಣ
ಸೂಸಿದರು ಹೂಮಳೆಯನಾ ಕಮ
ಲಾಸನಾದ್ಯರು ತೂಗಿ ಶಿರವನು
ಭಾಸು[71]ರಾಂಗಪ್ರಭವನೆಸೆದನು[72] ತೀವ್ರ ತೇಜದಲಿ    ೩೭

ಸಾಕು ಸಖಿಯೇ ಕಂಡೆನಂಭಡೆ
ನೂಕವಾಲಿಗಳಂಗವಟ್ಟ[73]ಗ
ಳೇ[74]ಕದೇಶವನೀಕ್ಷಿಸುವ[75]ದಾನಾ[76]ವನೆಂದೆನುತ
ಪಾಕಶಾಸನನರ್ಥಿಸಲು ಸು
ಕ್ಷಾಕೃತಿಯ ಕೈಕೊಂಡು ನುಡಿದನು
ಲೋಕಪಾಲನೆ ಹೋಗು [77]ನೀ ನಿನ್ನಾಲಯಕ್ಕೆಂದ[78]    ೩೮

ಎಂದಂಡೆಂದನು ಸಖಿತನಕೆ ತಾ
ಸಂದೆನಲ್ಲೈ ತನ್ನ ಮಾತನು
ವೊಂದ ಮನ್ನಿಸಬೇಹುದೀವುದು ಸುಧೆಯನಿದನೆವಗೆ
ತಂದೆ ನಿನಗಿದರಿಂದ ಫಲವೇ
ನಿಂದಿದನು ಸೇವಿಸಿದಡುರಗರು
ಕೊಂದರೆಂದರಿ ತನ್ನ [79]ನನುಚಿತ ಮಾಡಬೇಡೆಂದ[80]   ೩೯

ಕೊಟ್ಟೆನಮೃತವನೆನ್ನ ಕಾರ್ಯವ[81]ನೆಟ್ಟನಾಗಿಸಿ[82] ತಾಯ ಕಾರ್ಯವ
ಬಿಟ್ಟೆನೆನಿಸುವೆನೊಯ್ದು ತೋರಿಸಿ ಸುಧೆಯನುರಗರಿಗೆ
ಮುಟ್ಟಲೀ[83]ಸೆನು ಸುಧೆಯನದನೀ
ನಿ[84]ಷ್ಟವಾದರೆ ಕೊಂಡುಬಹುದೆನೆ
ಕೊಟ್ಟು ಕಳುಹುವೆನೊಂದು ವರವನು ಬೇಡಿಕೊಳ್ಳೆಂದ ೪೦

[1] ರ | ಲನಿಮಿಷೇಂ (ವಿ, ಮು, ಭ)

[2] ರ | ಲನಿಮಿಷೇಂ (ವಿ, ಮು, ಭ)

*ಈ ಪದ್ಯವು ಮುದ್ರಿತ ಪ್ರತಿಯಲ್ಲಿಲ್ಲ.

[3] ಕಲಿ (ಭ), ಕಡು (ವಿ)

[4] ಕಲಿ (ಭ), ಕಡು (ವಿ)

[5] ದೆನ್ನ (ವಿ)

[6] ದೆನ್ನ (ವಿ)

[7] ವನು (ವಿ)

[8] ವನು (ವಿ)

[9] ನೀಗದೆ (ಭ)

[10] ನೀಗದೆ (ಭ)

[11] ಡಳವೆ (ಪ)

[12] ಡಳವೆ (ಪ)

[13] ದುಸ್ತರವಲ್ಲಲಾ (ಪ)

[14] ದುಸ್ತರವಲ್ಲಲಾ (ಪ)

[15] ಮಾತಿನ್ನಿಲ್ಲ ತರಹರಿಸೆಂದು ಕೊಳ್ಳೆಂದ (ಪ)

[16] ಮಾತಿನ್ನಿಲ್ಲ ತರಹರಿಸೆಂದು ಕೊಳ್ಳೆಂದ (ಪ)

[17] ಜಲ (ಭ)

[18] ಜಲ (ಭ)

[19] ವಡಬಗ್ನಿಯನು (ಭ)

[20] ವಡಬಗ್ನಿಯನು (ಭ)

[21] ಜಡಿದು (ಭ)

[22] ಜಡಿದು (ಭ)

[23] ತೆಗದಿ (ವಿ, ಮು)

[24] ತೆಗದಿ (ವಿ, ಮು)

[25] ನೆಟ್ಟನಾ ಖಗಪತಿಯ ವೈರದಿ (ಪ)

[26] ನೆಟ್ಟನಾ ಖಗಪತಿಯ ವೈರದಿ (ಪ)

[27] ಕಳವಳಿಪ ವಜ್ರದ (ಪ)

[28] ಕಳವಳಿಪ ವಜ್ರದ (ಪ)

[29] ಗಳೆ (ಪ)

[30] ಗಳೆ (ಪ)

[31] ಬೆಂದಂ (ವಿ, ಮು)

[32] ಬೆಂದಂ (ವಿ, ಮು)

[33] ಕೊಂಡನೇನವ (ಪ)

[34] ಕೊಂಡನೇನವ (ಪ)

[35] ನಾಚಿಸುವನಲ್ಲತಿ | ನಿಲ್ಲ (ಪ)

[36] ನಾಚಿಸುವನಲ್ಲತಿ | ನಿಲ್ಲ (ಪ)

[37] ತಾಪಸವರದಧೀಚನ ಕಾಯದಸ್ಥಿಯನು (ಭ)

[38] ತಾಪಸವರದಧೀಚನ ಕಾಯದಸ್ಥಿಯನು (ಭ)

[39] ಸ್ತ್ರದ | ಲೊಂದು (ಪ)

[40] ಸ್ತ್ರದ | ಲೊಂದು (ಪ)

[41] ತಾಳೆ (ವಿ)

[42] ತಾಳೆ (ವಿ)

[43] ನೀ ನೆಗಹಲಾಪವರುಂಟೆ (ಪ)

[44] ನೀ ನೆಗಹಲಾಪವರುಂಟೆ (ಪ)

[45] ಗಡಿ (ಪ)

[46] ಗಡಿ (ಪ)

[47] ತಾ ನೆಲೆಯರಿ (ಪ)

[48] ತಾ ನೆಲೆಯರಿ (ಪ)

[49] ರಾಯ (ಪ)

[50] ರಾಯ (ಪ)

[51] ವೀರ ನೀನೇಯೆಂದ ಸತ್ವದ | ಸಾರವನ ಹೇಳವಡೆ ತನ್ನಯ ಆತ್ಮ (ಪ), ವೈರವೇ ನಿನಗೆನ್ನ ಸತ್ವದ | ಸಾರವನು ಹೇಳುವಡ ಯೋಗ್ಯವೆ ಆತ್ಮ (ಭ)

[52] ವೀರ ನೀನೇಯೆಂದ ಸತ್ವದ | ಸಾರವನ ಹೇಳವಡೆ ತನ್ನಯ ಆತ್ಮ (ಪ), ವೈರವೇ ನಿನಗೆನ್ನ ಸತ್ವದ | ಸಾರವನು ಹೇಳುವಡ ಯೋಗ್ಯವೆ ಆತ್ಮ (ಭ)

[53] ಸಸಪ್ತ (ವಿ), ದಸಪ್ತ (ಪ)

[54] ಸಸಪ್ತ (ವಿ), ದಸಪ್ತ (ಪ)

[55] ತುಷ (ಪ)

[56] ತುಷ (ಪ)

[57] ಸುರವರನು (ಭ, ಪ)

[58] ಸುರವರನು (ಭ, ಪ)

[59] ತೋರಿಸವಹರೆಯೆಂ (ಪ),

[60] ತೋರಿಸವಹರೆಯೆಂ (ಪ),

[61] ತೋರಿಸವಹರೆಯೆಂ (ಪ)

[62] ತೋರಿಸವಹರೆಯೆಂ (ಪ)

[63] ವಜ್ರವನು ನೀ | ಹಾ (ಪ)

[64] ವಜ್ರವನು ನೀ | ಹಾ (ಪ)

[65] ರೆನ್ನೊಂದು (ಪ)

[66] ರೆನ್ನೊಂದು (ಪ)

[67] ಸುರರುಘೇ (ಪ)

[68] ಸುರರುಘೇ (ಪ)

[69] ಕಾಂಶ (ಪ)

[70] ಕಾಂಶ (ಪ)

[71] ರಪ್ರಭನೆಸೆದನಸದಳ (ಪ)

[72] ರಪ್ರಭನೆಸೆದನಸದಳ (ಪ)

[73] ದ|ಲೇ (ಪ), ದ | ನೇ (ಭ)

[74] ದ|ಲೇ (ಪ), ದ | ನೇ (ಭ)

[75] ನವನಾ (ಭ)

[76] ನವನಾ (ಭ)

[77] ನಿಳಯಕ್ಕೆಂದನಾಗರುಡ (ವಿ), ನಿನ್ನಾಲಯಕೆ ನಡೆಯೆಂದ (ಪ)

[78] ನಿಳಯಕ್ಕೆಂದನಾಗರುಡ (ವಿ), ನಿನ್ನಾಲಯಕೆ ನಡೆಯೆಂದ (ಪ)

[79] ನುಚಿತವ ಮಾಡಬೇಕೆಂದ (ಪ)

[80] ನುಚಿತವ ಮಾಡಬೇಕೆಂದ (ಪ)

[81] ನೊಟ್ಟನೇಗಿಸಿ (ಪ)

[82] ನೊಟ್ಟನೇಗಿಸಿ (ಪ)

[83] ಸದೆ ದುಷ್ಟರನು ನೀ|ನಿ (ಭ), ಸೆನು ಬಳಿಕದನು ನಿನ|ಗಿ (ಪ)

[84] ಸದೆ ದುಷ್ಟರನು ನೀ|ನಿ (ಭ), ಸೆನು ಬಳಿಕದನು ನಿನ|ಗಿ (ಪ)