ಸೂಚನೆ:
ಚಂಡವಿಕ್ರಮನಮರರನು

[1]ಕೈ[2] ಕೊಂಡು ತಂದನು ಸುಧೆಯನವನಿಗೆ
ಕಂಡು ನಾರಾಯಣನ ಕರುಣವ ಪಡೆದ[3]ನಾ ಖಗಪ[4]

ಪದನು:
ಕೇಳು ಶೌನಕಮುನಿಪ [5]ಸದೆದು[6] ಸು
ರಾಳಿಯನು ಪೀಯೂಷದುರ್ಗವ
ಬೀಳೆಹೊಯ್ದನು ಕೆಡಹಿದನು ಪೀಯೂಷಪಾಲಕರ
ಕೋಳುವಿಡಿದಮೃತವನು ಹಾಯ್ದನು[7]ಹಾಳು[8]ಮೋರೆಯ ತ್ರಿದಶ[9]ರಿಪು[10]ವನು
ಬೀಳುಗೊಂಡೊಡಲಂತೆ[11]ಯಿದ್ದುದು[12] ಸುರ[13]ಪತಿಯ[14] ವಿಭವ  ೧

ಕೆಟ್ಟುದೋ ಸುರಲೋಕ ಭಂಗವ
ತೊಟ್ಟುದೋ ತೊಡೆದುದೊ ಮಹಾತ್ರೈ
ವಿಷ್ಟಪಾಧೀಶ್ವರರ [15]ಭವಣೆಯ[16] ಹೇಳಲೇಕಿನ್ನು
ದುಷ್ಟ [17]ಖಗ[18]ನೆಳೆದೊಯ್ವನಮೃತವ
ನಟ್ಟಡವಿಯಾ[19]ಯ್ತರರೆ[20]ಯೆನುತವೆ
ಬಿಟ್ಟುಕೊಂ[21]ಡುದು[22]ಬಾಯಬಿಡುತಾ ತೀರ ವಾರಿಧಿಗೆ  ೨

ಹುಯ್ಯಲಿಡು[23]ತವೆ ಹೋದರಮರರು[24] ಕೆಯ್ಯ ಸೊಪ್ಪನು ನೆಗಹಿ ಮನುಮಥ
ನಯ್ಯನಲ್ಲಿಗೆ ಭಕುತಿಯಲಿ [25]ದುಗ್ಧಾಬ್ಧಿ[26]ಯಭಿಮುಖಕೆ
ಮೆಯ್ಯನೀಡಾಡಿದರು ಸಂಸ್ತುತಿ
ಗೆಯ್ಯ[27]ಲದನಾಲಿಸುತ[28] ಪನ್ನಗ
ಶಯ್ಯನೆದ್ದನು ನೆಗಹಿದಭಯಕರಾಬ್ಜದಲಿ ನಗುತ        ೩

ಹೋಹೊ [29]ಸಾಕಂಜದಿರಿ ನೀವ್[30] ನಿ
ಮ್ಮಾಹವವನಾರಿತೆ[31]ನೆನಗದು[32] ಸಾಹಸದ ಸಂರಂಭವಾ ಗಂಭೀರ ವಿಕ್ರಮನ
ಬಾಹುಬಲ ಬಡವರಿಗೆ ಸೆಡೆಯದು
ಕಾಹುರದ ಕಲಿ ಯೆಲ್ಲೆನುತ್ತ ಮ
ಹಾಹಿಶಯನನು ಬಂದನಮರಾವತಿಗೆ [33]ವಹಿಲದಲಿ[34]

ನಡೆಯೆನುತ ನಯನಾಭಿರಾಮನು
ಪಡೆಗೆ ಕೈವೀಸಿದನು ಬಂದನು[35]ಜಡಿವ[36] ಘನಗಂಭೀರಭೇರಿಯಶಂಖಪಟಹದಲಿ
ಒಡೆದುದಬುಜಭವಾಂಡವೆನೆ ಬೆಳು
ಗೊಡೆಯಚಾಮರನಿಕರವೆಸೆವು
ಗ್ಚಡದ ಪರಮೈಶ್ವರ್ಯದಲಿ [37]ರಂಜಿಸಿದನಸುರಾರಿ[38]   ೫

ನೀಲಮೇಘನಿಭಾಂಗಕಾಂಟಿಯ
ಲೋಲಮಣಿಕುಂಡಲದ ವಿಮಲ ಕ
ಪೋಲಮಂ[39]ಡಲವೆ[40]ಸೆವ ಕಮಲದಳಾಯತೇಕ್ಷಣದ
ಶ್ರೀಲಲಾ[41]ಟದ[42] ಮೌಳಿಮಕುಟದ
ಕೀಲಣದ ನವರತುನಕಾಂತಿಯ[43]ಜಾಲ[44]ದಲಿ ಜಗದೇಕನಾಥನು ಬಂದನಾ[45]ಸ್ಥಳ[46]ಕೆ  ೬

ಕೊರಳಹಾರದ ಕೌಸ್ತುಭದ ಪೇ
ರುರದ ಶ್ರೀವತ್ಸದ ಸುನಾಭಿಯ
ಕರಕಮಲಕಂಕಣದ ಕೇಯೂರದ ಚತುರ್ಭುಜದ
ಅರಿಗದಾಶಂಖಾಂಬುಜಂಗಳು
ಭರಿತತೇಜದ ದಿವ್ಯಪೀತಾಂ
ಬರದ ಮಂಗಳಮೂರ್ತಿ ಬಂದನು ಗರುಡ [47]ನಿದ್ದೆ ಡೆಗೆ[48]         ೭

ವಂದಿಗಳ [49]ಮಾಗಧರ ಕಳಕಳ[50] ವೃಂದದೊತ್ತೊತ್ತುಗಳ ಸೂತರ
ಸಂದಣಿಯ ಗಂಧರ್ವಕಿನ್ನರ ಜೀತಸಂಸ್ತವದ
ದುಂದುಭಿಯ ಕಹಳೆಗಳ ಬಹುವಿಧ
ದಿಮ್ದೆಸೆವ ಬಲು ಭದ್ರವಾದ್ಯದ
ಸಂದ ಸಕಲೈಶ್ವರ್ಯದಲಿ ಬಂದನು ಸುರಾಲಯಕೆ     ೮

ಸುರಿವ ಸುಮನೋವೃಷ್ಟಿಯಲಿ ಮಿಗೆ
ಮೊರೆವ ವೀಣಾವೇಣು ಮುರಜದ
ಕರಪುಟದ [51]ನೊಸಲು[52]ಗಳಲೊಪ್ಪುವ ಲೋಕಪಾಲಕರ
ಸರಸಿಜಾಸನ ರುದ್ರವಿಭುಧೇ
ಶ್ವರನಿಷೇವಿತ ಪಾದಪೀಠದ
ಕರುಣಿಗಳ ದಾತಾರ ಮೈದೋರಿದನು ಖಗಪತಿಗೆ      ೯

ಗಂಡುಗಲಿ [53]ತಾನಮೃತಕಲಶವ[54] ಕೊಂಡು [55]ಹಾಯ್ದೈತರುತ[56] ನಭದಲಿ
ಕಂಡನಾ ಕಮನೀಯ ಮೂರ್ತಿಯ ದಿವ್ಯ[57]ಕೀರ್ತಿ[58]ಯನು
ಅಂಡಜೇಂದ್ರನು ನಗುತನಿಂದನು
ಪುಂಡರೀಕದಳಾಕ್ಷನಿದಿರಲಿ
ಪಂಡಿತನೆ ನೀನಾರು ಹೇಳೆನಗೆನುತ ಬೆಸಗೊಂಡ     ೧೦

[59]ಹೇಳೆನಲು ಹೇಳಿದನು ಖಗಮನೆ[60] ಪಾಲುಗಡಲ ಮಹಾಲಕುಮಿ ನಿಜ
ಲೋಲಲೋಚನೆ ಕಮಲಭವಭವಮುಖ್ಯರವರೆನಗೆ
ಕೇಳು ಪುತ್ರ [61]ಸಖಿಪ್ರಿಯರು ಕೇ[62] ಳಾಳುಗಳು ಸುರರೀಚರಾಚರ
ಜಾಲ[63]ವೆನಯ[64] ಲೀಲೆ ನಾರಾಯಣನು ತಾನೆಂದ    ೧೧

ಮೆಚ್ಚಿದೆನು ಖಗ[65]ವರ್ಯ[66] ನಿನ್ನಯ[67]ನಿಚ್ಚಟದ ಬಲ ವೀರ್ಯ[68] ಶೌರ್ಯದ
ಹೆಚ್ಚಿಗೆಯ ವಿಕ್ರಮಪರಾಕ್ರಮ ಶಕ್ತಿಯನು ಕಂಡು
ಮೆಚ್ಚಿದುದ ನೀ ಬೇಡಿಕೊಳ್ಳಿನ
ಲಚ್ಯುತನ ನುಡಿಗೇಳಿ ನಕ್ಕನು
ಮುಚ್ಚುಮರೆಯೇ[69]ಕೀವ[70] ಕಾವ ಸಮರ್ಥನಹೆಯೆಂದ  ೧೨

ಈವೆ[71]ನೀನೆನಗೇನನಿಲ್ಲದ
ಡಾ[72]ವುದಡಿಯಲಿ ಬಿದ್ದು [73]ನಿನ್ನನು[74] ಮೂವರಾಯರ ಗಂಡನೆಂಬ ಮಹಾತ್ಮ [75]ಮರುಳನಲಾ[76] ದೇವರೆಂಬವರೈದೆ ತನಗನು
ಜೀವಿಗಳು ನೆರೆ ಕಾಣದೇ ಜಗ
ಗಾವಿಲನೆ ತಾನೀವೆ[77]ನಿಷ್ಟ[78]ವ ಬೇಡಿಕೊಳ್ಳೆಂದ        ೧೩

ನಕ್ಕನಸುರಾರಾತಿ ನೋಡಿದ
ನಿಕ್ಕೆಲದ ಕಮಲಜ ಭ[79]ವೇಂದ್ರ[80]ರ
ನೆಕ್ಕಟಿ[81]ಗನುಬ್ಬಳಿಯನು[82] ಕಂಡಿರೆ ಖಗಾಧಿಪನ
ಸಿಕ್ಕಿಸುವೆನತಿಬಲನನೆನುತುವೆ
ಜಕ್ಕುಳಿಸಿ ಕಡೆಗಣ್ಣಲೀಕ್ಷಿಸಿ
ರಕ್ಕಸರ ಕುಲವೈರಿ ನುಡಿದನು ನಗುತ ಖಗಪತಿಗೆ     ೧೪

ಆಗಲದಕೇನಾಯ್ತು ತಪ್ಪೇ
ನೀಗಲೆಂದುದು ವರ ತಪೋವ್ರತ
ಯೋಗನಿಷ್ಠದ್ವಿಜರು ತನಗಧಿದೈವ[83]ರವರಿತ್ತ[84] ಭಾಗಧೇಯವಿದೆನಗೆ ವಾಹನ[85]ವಾಗು[86] ನೀನೆಂದರ್ಥಿಸಿದನಾ
ಯೋಗಮಾಯಾ[87]ಧೀಶ್ವರನು ನಗುತಾ[88] ಖಗೇಶ್ವರನ          ೧೫

[89]ಕೇಳಿ[90] ತಲೆದೂಗಿದನು ಹೋಹೋ
ಕೋಳುವಿಡಿದೈ ತನ್ನನಾರಿಗೆ
ಹೇಳುವೆನಹಂಕಾರ[91]ವಾರನು ಕೆಡಿಸದಕಟಕಟ[92] ಕಾಲ[93]ನಿಡು ಮಸ್ತಕದೊಳೆನೆ[94] ಕರು
ಣಾಳುಗಳ ದಾತಾರನಹಿಕುಲ
ಲಾನೊಡನಿಂತೆಂದನಧಿಕಮನೋನುರಾಗದಲಿ         ೧೬

ಬೇಡಿಕೊಂಡೆನು ವರನನಿನ್ನೇಂ
ಬೇಡಿಕೊಳ್ಳೆಲೆ ವೀರ ತನ್ನನು[95]ಬೋಡು[96] ಮಾಡ[97]ದಿರೆಲವೋ ನಿನ್ನಯ ಮನದ ಬಯಕೆಯನು[98] ಬೇಡು ಮೆಚ್ಚಿದೆನೆನಲು ಖಗನೀ
ಡಾಡಿ ಪದದಲಿ ತನುವನಾವುದ
ಬೇಡುವೆನು ತನಗೊಡೆಯರಾಜ್ಞಾಪಿಸುವು[99]ದೆನಗೆಂದ[100]        ೧೭

ಮತ್ತೆ ದುರ್ಲಭವೇನು ನಿನ್ನನು
ಹೊತ್ತು ನಡೆವಂಗೆನಗೆ ತನ್ನಯ
ತೊತ್ತಲಾ ವರ ಮುಕುತಿ ನಿನ್ನ ಪದಾಬ್ಜಸೇವಕಗೆ
ಮೃತ್ಯುಜರೆಯರಡಿಲ್ಲದಂ[101]ತೊಲಿ[102] ದಿತ್ತು ರಕ್ಷಿಸನಾಥನಾನೆನ
ಲುತ್ತಮಾಂಗವ ತಡಹಿಸಲಿಸಿದೆನಂಜಬೇಡೆಂದ         ೧೮

[103]ಕಂದ[104] ಕೇಳೈ ಕಾಡುತಿದೆ ಸುರ
ವೃಂದವೆನ್ನನು ಸುಧೆಗೆ ಕೇಳಿ
ನ್ನೊಂದು ಮಾತನು ಕೊಂಡುಹೋಹುದಯೋಗ್ಯವಮೃತವನು
ಒಂದು ನಿಮಿಷವಿದಿಲ್ಲ[105]ದಿದ್ದಡೆ[106] ಹೊಂದುವುದು ಸುರಕುಲವೆನಲು ಗೋ
ವೆಂದನಂಘ್ರಿಗೆ ನಮಿಸಿ ಬಿನ್ನಹವೆಂದನಾ ಗರುಡ       ೧೯

ತಾಯ ಸೆರೆಯನು [107]ಬಿಡಿಸಲೋಸುಗ
ದಾಯಿಗರು[108] ನಾಚಿಸಿದರೆ[109]ನ್ನನು[110] ಪಾಯವಿದು ಬಿಡಿಸುವಡೆ ಗಡ ತೋರಿಸಿ ದುರಾತ್ಮರಿಗೆ
ಬಾಯಹೊಗಲೀಸೆನು ನಿಜಾಭಿ
ಪ್ರಾಯವನು ನಾ ಬಲ್ಲೆನೆನೆ ನಾ
ರಾಯಣನು [111]ನಸುನಗುತ ಮನ್ನಿಸಿ ಕಳುಹಿದನು ಖಗನ[112]     ೨೦

[1] ಬೆಂ | (ವಿ, ಪ).

[2] ಬೆಂ | (ವಿ, ಪ).

[3] ಖಗರಾಜ (ಭ), ನಾ ಗರುಡ (ವಿ, ಮು)

[4] ಖಗರಾಜ (ಭ), ನಾ ಗರುಡ (ವಿ, ಮು)

[5] ನವನು (ಪ)

[6] ನವನು (ಪ)

[7] ಹೂಳು (ವಿ)

[8] ಹೂಳು (ವಿ)

[9] ಪುರ (ವಿ, ಪ)

[10] ಪುರ (ವಿ, ಪ)

[11] ಮೆರೆದುದು (ಭ, ವಿ)

[12] ಮೆರೆದುದು (ಭ, ವಿ)

[13] ಪುರದ (ವಿ)

[14] ಪುರದ (ವಿ)

[15] ಹೆಸರನು (ವಿ, ಭ)

[16] ಹೆಸರನು (ವಿ, ಭ)

[17] ಖಳ (ವಿ, ಪ)

[18] ಖಳ (ವಿ, ಪ)

[19] ಯ್ತಾರೆ (ವಿ)

[20] ಯ್ತಾರೆ (ವಿ)

[21] ಡರು (ಭ, ಪ)

[22] ಡರು (ಭ, ಪ)

[23] ವರೆ ಹೋದರವದಿರು (ಪ)

[24] ವರೆ ಹೋದರವದಿರು (ಪ)

[25] ಕರುಣಾಬ್ಧಿ (ಪ)

[26] ಕರುಣಾಬ್ಧಿ (ಪ)

[27] ಲಂಘವಿಸುತ್ತ (ಭ)

[28] ಲಂಘವಿಸುತ್ತ (ಭ)

[29] ಅಂಜದಿರಂಜದಿರಿ (ವಿ, ಪ, ಮು)

[30] ಅಂಜದಿರಂಜದಿರಿ (ವಿ, ಪ, ಮು)

[31] ನಗ್ಗದ (ಪ), ತನಗದು (ವಿ)

[32] ನಗ್ಗದ (ಪ), ತನಗದು (ವಿ)

[33] ನಲವಿನಲಿ (ವಿ), ಗೆಲವಿನಲಿ || (ಮು)

[34] ನಲವಿನಲಿ (ವಿ), ಗೆಲವಿನಲಿ || (ಮು)

[35] ಝಡಿತ (ಭ)

[36] ಝಡಿತ (ಭ)

[37] ಖಗರಾಜನಿದ್ದೆಡೆಗೆ (ಪ)

[38] ಖಗರಾಜನಿದ್ದೆಡೆಗೆ (ಪ)

[39] ಡಿತದೆ (ಪ)

[40] ಡಿತದೆ (ಪ)

[41] ಮದ (ಭ)

[42] ಮದ (ಭ)

[43] ಭಾಳ (ಭ)

[44] ಭಾಳ (ಭ)

[45] ಹವ (ವಿ, ಮು)

[46] ಹವ (ವಿ, ಮು)

[47] ನಭಿಮುಖಕೆ (ವಿ)

[48] ನಭಿಮುಖಕೆ (ವಿ)

[49] ಕಳಕಳದ ಮಾಗಧ (ವಿ, ಪ, ಮು)

[50] ಕಳಕಳದ ಮಾಗಧ (ವಿ, ಪ, ಮು)

[51] ಮೌಳ (ವಿ, ಪ)

[52] ಮೌಳ (ವಿ, ಪ)

[53] ಯಮೃತದ ಕಲಶವನು (ವಿ)

[54] ಯಮೃತದ ಕಲಶವನು (ವಿ)

[55] ಹಾಯ್ದು ಬರುತ್ತ (ಪ)

[56] ಹಾಯ್ದು ಬರುತ್ತ (ಪ)

[57] ಶಕ್ತಿ (ಪ)

[58] ಶಕ್ತಿ (ಪ)

[59] ಹೇಳು ಹೇಳೈಯೆನಲು ಖಗಪತಿ (ವಿ, ಮು)

[60] ಹೇಳು ಹೇಳೈಯೆನಲು ಖಗಪತಿ (ವಿ, ಮು)

[61] ಸಪೌತ್ರರೈ ಕೀ (ವಿ, ಮು), ಸಖಪ್ರಚಯವೆನೆ (ಪ)

[62] ಸಪೌತ್ರರೈ ಕೀ (ವಿ, ಮು), ಸಖಪ್ರಚಯವೆನೆ (ಪ)

[63] ಮೇಳವ (ಪ)

[64] ಮೇಳವ (ಪ)

[65] ವೀರ (ಪ)

[66] ವೀರ (ಪ)

[67] ನಚ್ಚನಧಟನು ಜಲಧಿ (ಪ)

[68] ನಚ್ಚನಧಟನು ಜಲಧಿ (ಪ)

[69] ಕಿವನ (ಪ)

[70] ಕಿವನ (ಪ)

[71] ನಿನಗೇನಿಲ್ಲದಿದ್ದುದ|ನಾ (ಭ)

[72] ನಿನಗೇನಿಲ್ಲದಿದ್ದುದ|ನಾ (ಭ)

[73] ನೀನೀ (ಪ)

[74] ನೀನೀ (ಪ)

[75] ನೀನೆನಲು || (ಪ)

[76] ನೀನೆನಲು || (ಪ)

[77] ನೆಲ್ಲ (ವಿ, ಮು)

[78] ನೆಲ್ಲ (ವಿ, ಮು)

[79] ವಾದ್ಯ (ಭ)

[80] ವಾದ್ಯ (ಭ)

[81] ಯನೊಬ್ಬುಳಿಯನಾ (ಪ)

[82] ಯನೊಬ್ಬುಳಿಯನಾ (ಪ)

[83] ವೆಂದರಿತು (ಪ)

[84] ವೆಂದರಿತು (ಪ)

[85] ನಾಅಗು (ಭ, ಪ)

[86] ನಾಅಗು (ಭ, ಪ)

[87] ಸ್ಪದನು ನಗುತಾ ಮಹಾ (ಭ, ಪ)

[88] ಸ್ಪದನು ನಗುತಾ ಮಹಾ (ಭ, ಪ)

[89] ಹೇಳೆ (ಭ)

[90] ಹೇಳೆ (ಭ)

[91] ವನು ತಾ ಕೇದಿಸಿತಕಟಕಟ (ವಿ) || ವೇ ಕೆಡಿಸಿದುದು ಅಕಟೆನುತ || (ಪ)

[92] ವನು ತಾ ಕೇದಿಸಿತಕಟಕಟ (ವಿ) || ವೇ ಕೆಡಿಸಿದುದು ಅಕಟೆನುತ || (ಪ)

[93] ನಿರಿಸೆನೆ ಮಸ್ತಕಕೆ (ಪ)

[94] ನಿರಿಸೆನೆ ಮಸ್ತಕಕೆ (ಪ)

[95] ಖೋಡಿ (ಪ)

[96] ಖೋಡಿ (ಪ)

[97] ದಿರೆನ್ನದರುಶನವಫಲವಲ್ಲಿಳೆಗೆ || (ವಿ, ಪ)

[98] ದಿರೆನ್ನದರುಶನವಫಲವಲ್ಲಿಳೆಗೆ || (ವಿ, ಪ)

[99] ದದನೆಂದ ಭ್ಹ)

[100] ದದನೆಂದ ಭ್ಹ)

[101] ತಿರ (ವಿ)

[102] ತಿರ (ವಿ)

[103] ತಂದೆ (ಭ)

[104] ತಂದೆ (ಭ)

[105] ದಿರೆ ನೆರೆ (ವಿ, ಮು).

[106] ದಿರೆ ನೆರೆ (ವಿ, ಮು).

[107] ಹಿಡಿದು ಪನ್ನಗ | ನಾಯಿಗಳು (ಬ)

[108] ಹಿಡಿದು ಪನ್ನಗ | ನಾಯಿಗಳು (ಬ)

[109] ನಗೆಯು (ವಿ, ಮು)

[110] ನಗೆಯು (ವಿ, ಮು)

[111] ಮನ್ನಿಸಿಯೆ ಕಳುಹಿದನಾ ಖಗಾಧಿಪನ || (ಪ)

[112] ಮನ್ನಿಸಿಯೆ ಕಳುಹಿದನಾ ಖಗಾಧಿಪನ || (ಪ)