ಬಂದನಮ್ಮತಾವಾಸಕೆಲ್ಲರ
ಹಿಂದುಳಿಹಿ ಕಾಹಿನ ದುರಾತ್ಮರ
ಕೊಂದು ಹೊಕ್ಕನು ಮಿಕ್ಕನಾಸುರಕುಲದ ಮೋಹರವ
ಮುಂದುವರಿದಧಟರನು ಕಾಣು
ತ್ತಂದು ಕಾಪಿನ ನಾಯಕನು ನಿ
ಲ್ಲೆಂದು

[1]ಭೌಮನ[2]ನೆಂಬವನು ತಾಗಿದನು ಖಗಪತಿಯ          ೪೧

ಎಚ್ಚನಾತನು ಖಗನೊಡಲು ಥ
ಟ್ಟು[3]ಚ್ಚಿತ[4]ಮಳಾಸ್ತ್ರದಲಿ ಹೋಹೋ
ಮೆಚ್ಚಿದೆನು ಮತ್ತೇನು ವೀರರ ದೇವನೀನೆನುತ
ಬೆಚ್ಚನೊಡಲಲಿ ತುಂಡದಗ್ರವ
ನೊಚ್ಚತುಳಿದುದು ಜೀವಕಾಯವ
ನುಚ್ಚಿ[5]ದುದು ಬಳಿಕಮೃತದಲ್ಲಿಗೆ ಬಂದನಾ ವಿಹತ[6]     ೪೨

ಕಂಡನದರೊಳಗಾತನಾ ಬ್ರ
ಹ್ಮಾಂಡ ಪರಿಯಂತದನು ವೇಷ್ಟಿಸಿ
ಕೊಂಡು ಪಾವಕನುಜ್ವಲಜ್ವಾಲಾವಳಿಗಳಿಂದ
ಕೆಂಡಗೆದರಲು [7]ನೂರು[8] ಯೋಜನ
ಮಂಡಲಾಕಾರದಲಿ ಕವಿದಿರೆ
ಕೊಂಡ ಹಜ್ಜೆಯ ತೆಗೆದು ನಿಂದನಿದೇನಿದೇನೆನುತ     ೪೩

ಬಟ್ಟೆಗೊಡು ಭುವನೈಕಭಾವನ
ಬಟ್ಟೆಗೊಡು ಲೋಕೈಕಪಾವನ
ಬಟ್ಟೆಗೊಡು ಸುರಪಿತೃಕುಲಾನನ ವರ ಹುತಾಶನನೆ
ಬಟ್ಟೆಗೊಡು [9]ಸುಜನೈಕವಂದ್ಯಾ[10] ಭೀಷ್ಟಮೂರ್ತಿಯೆ ಪುಣ್ಯಕೀರ್ತಿಯೆ
ಬಟ್ಟೆಗೊಡು ತನಗೆನುತ ಖಗನಭ್ಯರ್ಥಿಸಿದ[11]ನೆರಗಿ[12]   ೪೪

ಬಗೆವನೇ ಸಾಮವನು ಧಗಧಗ
ಭುಗುಭುಗಿಲು ಭೋರೆಂದು ಕುಡಿ ನಾ
ಲಗೆಗಳಂಡಕಟಾಹವನು ಕಾಸಿದುವು ಕುಣಿಕುಣಿದು
ಹೊಗೆಯ ಹೊರಳಿಯ [13]ಕೆಂಡಗಿಡಗಳ
ಸೆಗಳಿ[14] ಸಂವರ್ತಾಗ್ನಿಯಂತಿರೆ
ಹೊಗುವ ಮಾತೇಕೀಸುವಡರಿದದಾಯ್ತು [15]ಖಗಪತಿಗೆ[16]         ೪೫

ಕೆಟ್ಟಿನಿದು ವಿಪರೀತವಾಯ್ತೆನು
ತಟ್ಟಹಾಸವ ಮಾಡಿ ಖಗಪತಿ
ತೊಟ್ಟು ಸಾವಿರ ಮುಖಗಳಲಿ ನಿಜಯೋಗ ಶಕ್ತಿಯಲಿ[17]ಕಟ್ಟುಗೆರೆಕಾಲುವೆಗಳನು ಮೊಗ[18] ವಿಟ್ಟು ಕುಡಿದನು ಕಾರಿ[19]ದನು[20] ಜಗ
ಜಟ್ಟಿ ಪಾವಕನೊಳಗೆ [21]ಸರ್ವರ್ತಾಬ್ದ[22]ದಂದದಲಿ      ೪೬

ಏನನೆಂಬೆನು ತೀದುದಾಪವ
ಮಾನಸಖ[23]ನುಬ್ಬಾಳಿ[24] ಕಬ್ಬೊಗೆ
ಹಾನಿಗೊಂಡುದು ಕಿಡಿಗಳುಡುಗಿದುವಡಗಿತಾಜ್ವಾಲೆ
ಸ್ಥಾನ ಬಿಸಿಯಾರಿತ್ತು ಹೊಕ್ಕನು
ವೈನತೇಯನು ಮುಂದೆ ಕಂಡನು
ಭಾನುತೇಜದ ಶಸ್ತ್ರದುರ್ಗವ ನೋಡಲರಿದೆನಲು       ೪೭

ಇದು ಪ್ರಳಯವಾಯ್ತಾ[25]ವನೋ[26] ಹೋ
ಕ್ಕಿದನು ಹೊರವಡುವಧಿಕಬಲನೆನು
ತೊದೆ[27]ದನಸ್ತ್ರದ ದುರ್ಗವನು[28] ಪಕ್ಷದಲಿ ತುಂಡದಲಿ
ಕೆದರಿ ಹೊಕ್ಕನು ಮುಂದೆ ಕಂಡನು
ಕುದಿವ [29]ಸಾಹಸ್ರೋರಗನ[30] ಯಂ
ತ್ರದ ಮಹಾ[31]ಚಕ್ರವನು ತಿರುಗುತ್ತಿರಲು ತೀವ್ರದಲಿ[32]   ೪೮

ಕಂಡು ತಲೆದೂಗಿದನು ಖಗನು
ದ್ವಂಡ ಚಕ್ರವ ಗೆಲುವುಪಾಯವ
ಪುಂಡರೀ[33]ಕಾಸನನೆ[34] ಬಲ್ಲನೆನುತ್ತ ಬಿಸುಸುಯ್ದು
ಚಂಡಬಲನಣುರೂಪವನು ಕೈ
ಕೊಂಡು ಚಕ್ರದ ನಾಭಿಯೊಳಗಿರ
ಲಂಡಜೇಂದ್ರನು ಕಂಡನಮೃತವನದ[35]ರ ಕೆಳಗಿರಲು[36]          ೪೯

ಮತ್ತೆ ಕಂಡನು ಕೆಳಗಿಳಿದು ಬಲು
ಮೃತ್ಯು ಬಾಯ್ದೆರೆದೆರಡು ರೂಪವ
ಹೊತ್ತವೋಲಿರೆ ರೌದ್ರಮುಖದ ಭಯಂಕರಾನನದ
ಎತ್ತುದಲೆಗಳ ಕುಪಿತನಯನದ[37]ಕುತ್ತು[38] ಮಿಂಚನು ಜರಿವ ಜಿಹ್ವೆಯ
ಹೊತ್ತುವುಸುರಿನ [39]ಹೊಳೆವ[40] ದಾಡೆಯ ದಡಿಗ [41]ದಾನವರ[42]  ೫೦

[43]ಘಾತ[44] ಕರು ನೋಡಿದರೆ ಭಸ್ಮೀ
ಭೂತರಹರಾರಾದಡಾಗಳಿ
ಭೂತನಾಥನೆಯಾಗಲ[45]ರಿದವರೊಡನೆ[46]ಕಾದುವರೆ
ವೀತನಿದ್ರರು [47]ವಿವೃತನೇತ್ರರು[48] ಮಾತು ಹಲವೇನಮೃತ ಕಲಶದ
ಮಾತು ಬೇ[49]ಡೆಂಬಂತೆ[50] ಕಾಯ್ದಿಹರೆರಡು ದಿಕ್ಕಿನಲಿ   ೫೧

*ಅಕ್ಕಟಾ ಪನ್ನಗರ [51]ದೃಷ್ಟಿ[52]ಪ
ಥಕ್ಕೆ ಬಿದ್ದರೆ ಬದುಕಲರಿದೆನು
ತಕ್ಕುಳಿಸಿ ಕಾಯವನು ಯೋಜನನೀಳವೆಂದೆನಿಪ
ತೆಕ್ಕೆಯನು ದಾಂಟಿದನಿಳಿದನಮೈ
ತಕ್ಕೆ ಭಾಪೆನ್ನುವನು ನೀನಿನಿ
ತಕ್ಕೆ ತಂದೆಯೆನುತ್ತ ತುಡುಕಿದನ ಮೃತ[53]ಭಾಜನವ[54] ೫೨

ನೆಗಹಿಕೊಂಡನು ಸುರ[55]ರ ಸಿ[56]ರಿಯನು
ನೆಗಹಿಕೊಂಬಂದದಲಿ ಚಕ್ರವ
ನುಗಿದು [57]ಬಗಿ[58]ದೀಡಾಡಿ ಹೊರವಂತನು ನಭೋಗತಿಗೆ
ಖಗವರನು ಕೈಕೊಂಡು ಮುನ್ನಿನ
ಜಗದಗಲದಾ[59]ಕಾರವ[60]ಮರರು
ತಗುಳಿದರು ನಿತ್ಯಾತ್ಮನಾರಾಯಣನ [61]ಸನ್ನಿಧಿಗೆ[62]     ೫೩

ಪಂಚಮ ಸಂಧಿ ಸಮಾಪ್ತ

[1] ದುದ್ಧವ (ಪ)

[2] ದುದ್ಧವ (ಪ)

[3] ಚ್ಚಲ (ಭ), ಚ್ಚದ (ಪ)

[4] ಚ್ಚಲ (ಭ), ಚ್ಚದ (ಪ)

[5] ಕೊಂಡನು ಬಳಿಕಮೃತದಲ್ಲಿಗೆ ಮಹಾವೀರ (ಪ)

[6] ಕೊಂಡನು ಬಳಿಕಮೃತದಲ್ಲಿಗೆ ಮಹಾವೀರ (ಪ)

[7] ಮೂರು (ಪ)

[8] ಮೂರು (ಪ)

* ಈ ಮೂರು ಸಾಲುಗಳು ’ವಿ’ ಪ್ರತಿಯಲ್ಲಿ ಹೀಗಿವೆ : ಬಟ್ಟೆಗೊಡು ಹುತವಹನೆ ಲೋಕಾ|ಧಿಷ್ಟಿತನೆ ಸುರಪಿತೃಗಳಿಗೆ ನೀ | ನಿಷ್ಟನೆನಿಸುವೆ ನೋದಲಾಭುವನೈಕಪಾವನನೆ || ’ಪ’ ಪ್ರತಿಯಲ್ಲಿ ಹೀಗಿವೆ: ಬಟ್ಟೆಗೊಡು ಭುವನೈಕಭಾವನ | ಬಟ್ಟೆಗೊಡು ಸುರಪಿತೃಕುಲಾನನ | ಬಟ್ಟೆಗೊಡು ವರವೀರಸೇನನೆ ಕೊಡು ಹುತಾಶನನೆ ||

[9] ಬಟ್ಟೆಗೊಡು ಸುಜನಾ (ಪ)

[10] ಬಟ್ಟೆಗೊಡು ಸುಜನಾ (ಪ)

[11] ನೊಲಿದು (ವಿ, ಮು)

[12] ನೊಲಿದು (ವಿ, ಮು)

[13] ಕೆಂಗಿಡಿ ಯಸೆಗ | ಳಿಗೆಯ (ಭ, ವಿ)

[14] ಕೆಂಗಿಡಿ ಯಸೆಗ | ಳಿಗೆಯ (ಭ, ವಿ)

[15] ಮೂಜಗಕೆ (ಪ)

[16] ಮೂಜಗಕೆ (ಪ)

[17] ಥಟ್ಟುಗೆಯ ಕಿಡಿನಿವಹಗಳ ಮುಖ | (ವಿ)

[18] ಥಟ್ಟುಗೆಯ ಕಿಡಿನಿವಹಗಳ ಮುಖ | (ವಿ)

[19] ತಾ (ವಿ)

[20] ತಾ (ವಿ)

[21] ಸಂವರ್ತಾಭ್ರ (ವಿ), ಸರ್ವತ್ರಾಭ್ರ (ಪ).

[22] ಸಂವರ್ತಾಭ್ರ (ವಿ), ಸರ್ವತ್ರಾಭ್ರ (ಪ).

[23] ನುಬ್ಬಟೆಯು (ವಿ, ಮು)

[24] ನುಬ್ಬಟೆಯು (ವಿ, ಮು)

[25] ವವನು (ವಿ)

[26] ವವನು (ವಿ)

[27] ದು ದುರ್ಗವನುಗುರಿನಲಿ (ಪ)

[28]  ದು ದುರ್ಗವನುಗುರಿನಲಿ (ಪ)

[29] ರಿವ ದಿವ್ಯಾಸ್ತ್ರ ಘನ (ಪ)

[30] ರಿವ ದಿವ್ಯಾಸ್ತ್ರ ಘನ (ಪ)

[31] ಮಹಿಮಾಸುಚಕ್ರವು ತಿರುತಿರುಗುತಿರಲು || (ಪ)

[32] ಮಹಿಮಾಸುಚಕ್ರವು ತಿರುತಿರುಗುತಿರಲು || (ಪ)

[33] ಕದಳಾಕ್ಷ (ಪ)

[34] ಕದಳಾಕ್ಷ (ಪ)

[35] ರೊಳಗೆಯಿರಲು (ಪ)

[36] ರೊಳಗೆಯಿರಲು (ಪ)

[37] ವೊತ್ತು (ಪ)

[38] ವೊತ್ತು (ಪ)

[39] ಹೊಗರ (ಭ), ಮೊಗದ (ವಿ)

[40] ಹೊಗರ (ಭ), ಮೊಗದ (ವಿ)

[41] ರೆನಿಪವರ (ಪ, ಭ)

[42] ರೆನಿಪವರ (ಪ, ಭ)

[43] ವರೊಡನೈದಿ (ಪ)

[44] ವರೊಡನೈದಿ (ಪ)

[45] ವರೊಡನೈದಿ (ಪ)

[46] ವರೊಡನೈದಿ (ಪ)

[47] ವಿತತ (ಭ)

[48] ವಿತತ (ಭ)

[49] ಡಿಂಬಿಲ್ಲ (ಪ)

[50] ಡಿಂಬಿಲ್ಲ (ಪ)

*ಈ ಪದ್ಯ ಮುದ್ರಿತ ಪ್ರತಿಯಲ್ಲಿಲ್ಲ.

[51] ತೃಪ್ತಿ (ಪ)

[52] ತೃಪ್ತಿ (ಪ)

[53] ಕಲಶವನು (ಭ)

[54] ಕಲಶವನು (ಭ)

[55] ರು ಗಿ (ಪ)

[56] ರು ಗಿ (ಪ)

[57] ಮುರಿ (ಭ, ಪ)

[58] ಮುರಿ (ಭ, ಪ)

[59] ಕೃತಿಯಲ (ಭ, ಪ)

[60] ಕೃತಿಯಲ (ಭ, ಪ)

[61] ಸಮ್ಮುಖಕೆ (ಭ)

[62] ಸಮ್ಮುಖಕೆ (ಭ)