*ಮಂದರಮಹಾಗಿರಿಗೆ ಗರಿಗಳು
ಬಂದುವೋ ಕೃತಪೂರ್ವವೈರದ
ಲಿಂದ್ರನೂರಿಗೆ ಧಾಳಿಯಿಟ್ಟನೊ ಶೈಲರಾಜನೆನೆ
ಬಂದನಮರಾವತಿಗೆ ವಿನತಾ
ನಂದನನು
ನಂದನನು ರಿಪುಕುಲಭಯಂಕರ [3]ಮೂರ್ತಿಯುರವಣಿಸಿ[4] ೨೧
ರೂಢಿಗರಿದಾಯ್ತಮರರಿಗೆ ನೆರೆ
ಗಾಢವಿಕ್ರಮನಾರುಭಟೆಗಳ
ವೇಢೆಯನು ನೋಡಿದನು ತೊಳಗುವ ಲೋಕಪಾಲಕರ
ಗಾಢವಾಯ್ತಿನ್ನೇನು ನಿಮ್ಮ[5]ಡಿ[6]
ರೂಢಿಯಿದು ತೆಗೆ ಮತ್ತೆ[7]ಹಸ್ತ್ಯಾ[8]
ರೂಢನೀನಾರೆನುತ ಬಂದನು ಸುರಪತಿಯ ಹೊರೆಗೆ ೨೨
ಕಂಡನೀತನನಾತನೇನೈ
ಚಂಡವಿಕ್ರಮ ಬಂದೆ ಸುಧೆಯನು
ಕೊಂಡುಹೋಹಭಿಲಾಷೆಯಲಿ ಕೈಯೆಡೆಯಲಿರಿಸಿದೆಲಾ
ಪುಂಡರೀಕಾಸನನ ಸೃಷ್ಟಿಗೆ
ಗಂಡುಗಲಿ ನೀನೊಬ್ಬನೊಡೆಯನೆ
ಕೊಂಡು[9]ಹೋಹಡೆ ನೀ ನಿರೀಕ್ಷಿಸಬಹುದು ನಿಲ್ಲೆಂದ[10] ೨೩
*ನೋಡುವರೆ ನೀನಾರು ತನ್ನಯ
ಗಾಢವಿಕ್ರಮತನವನತ್ತಲು
ನೋಡು ಹಿಮರಿಗಿಪಾರ್ಶ್ವದಲಿ ಕೊಂಬೆಯನು ಹೆಮ್ಮರನ
ದಾಡೆಯನು ಗಜಕಚ್ಛಪನ ಬೆ
ನ್ನೋಡನೀಕ್ಷಿಸು ಕಾದಲಾಪಡೆ
ಹೂಡು ಬಾಣವನಭಿಮುಖಕೆ ನಿಲ್ಲೆಂದನಾ ವಿಹಗ ೨೪
ನಿಂದೆನಿದಕೊಳ್ಳೆನುತ ಬಾಣದ
ವೃಂದವನು ಸೈಗರೆದನಂದು ಪು
ರಂದರನು ಪೂರಾಯ ಕೋಪಾಟೋಪದಲಿ [11]ಜಡಿದು[12]
ಮುಂದುಗೆಡಿಸಿದ ತನ್ನನಕಟಕ
ಟಿಂದ್ರನಲ್ಲಾ ಎನುತ ಬಹ ಶರ
ವೃಂದವನು ತೂರಿದನು ಪಕ್ಷಪುಟಾಗ್ರದಲಿ ಗರುಡ ೨೫
ಹೇರಿ ಕಂಗಳಲಮರಪತಿ ದಿವ್ಯಾಸ್ತ್ರಸಂತತಿಯ
ತೋರಿದನು ಖಗಪತಿಗೆ ಬಲುಬಿಲು
ಗಾರನಹೆಯೋ ಎನುತ ಗಗನಕೆ
ಹಾರಿಸಿದನನಿತುವನು ಬಾಯಲಿ ಕಚ್ಚಿ ಮುರಿಮುರಿದು ೨೬
ಫಡ ತೊಲಗು [15]ತೊಲಗ[16]ಸ್ತ್ರಶಸ್ತ್ರದ
ತೊಡಕು[17]ವಲೆತನ[18]ಗೇಕೆ ತೆಗೆಯೆನು
ತಡಸಿ ಪಕ್ಷಾಗ್ರದಲಿ ಬೀಸಾಡಿದನು ಸುರಪತಿಯ
ಕೆಡಹಿ ಪಾಗಾರವನು ಬಾಗಿಲ
ನೊಡೆದು ಹೊಕ್ಕನು ಲೋಕಪಾಲರ
ನೊಡೆದುಳಿದು ಕಲಕಿದ[19]ನು ಕಟಕವನೊಂದೆ ನಿಮಿಷದಲಿ[20] ೨೭
ಹೊಕ್ಕನೋ ಖಗ[21]ನಧಟ[22]ರನು ಕೈ
ಮಿಕ್ಕನೋ ಕೈಕೊಳ್ಳಿ ಕೈಕೊ
ಳ್ಳೆಕ್ಕಟಿಗನನು [23]ಸೀಳು[24] ಹೊಯ್ ಸಬಳದಲಿ [25]ಹಾಯ್ಕೆ[26]ನುತ
ಕಕ್ಕಡೆಯ ಕಡಿ[27]ತಲೆಯ ಸಬಳದ[28]
ಚಕ್ರ ಮುಸಲ ಮುಸುಂಡಿ ಮುದ್ಗರ
ದುಕ್ಕು ಗಿಡಿಗಳ ಗಡಣದಲಿ [29]ಮುಸುಕಿದುದು[30] ಸುರನಿಕರ ೨೮
ಕೈದುವಿನ ಮಳೆಗಳನು ಪಕ್ಷದ
ಲೈದೆ ಹೊರಬೀಸಿದನು ನಖದಲಿ
ಕೊಯ್ದು ಬೀಸಾಡಿದನು ಗಜರಥತುರಗ[31]ಪತ್ತಿ[32]ಗಳ
ಭೇದಿಸಿದನತಿಬಲರ ತುಂಡದ
ಲೂದಿದನು ಕೆಲಬಲದ ಸುಭಟರ
ಹಾದಿಯನು ಹರಹಿದನು ನೆರಹಿದನಂತಕನ ಪುರಕೆ ೨೯
ಕೆದರಿದನು ಕೆಂಧೂಳಿಯನು ಪ
ಕ್ಕದಲಿ ಕಾಲಲಿ ಕಾಣಲರಿದಾ
ಕದನ[33]ರಂಗ[34]ವನೆನಲು ಕತ್ತಲೆ ಕೆತ್ತುದಂಬರವ
ಕದನಕಲಿಗಳು ಖಗನೆನುತ ಕಾ
ದಿದರು ತಮ್ಮೊಳಗೊಬ್ಬರೊಬ್ಬರ
ನಧಟರಿರಿ[35]ದರು ಕಾಣದಾ ಖಗಪತಿ ಕಳೇವರವ[36] ೩೦
ಕಂಡ[37]ನಾ ಕೊಳೂಗುಳವನಂದಾ[38]
ಖಂಡಲನು ಹಾ ಹಾ ಮಹಾರಥ
ಮಂಡಲಕೆ ಕೆಂಧೂಳಿ ಕವಿದುದು ಕೆಟ್ಟೆನಾಹವವ
ಕಂಡು ಕಾದುವರಿಲ್ಲ ಕಂಗಳು
ಕೊಂಡ[39]ನೋ ಖಗನಮೃತವನು ಕರೆ[40]
ಚಂಡ[41]ಮಾರುತನಾವೆಡೆಂದನು ಮೋಹರವ ನೋಡಿ[42] ೩೧
ಜೀಯ ಬೆಸಸೇನೆನುತ ಬಂದನು
ವಾಯು ತೆಗೆಸಾ ಕತ್ತಲೆಯ ಪೂ
ರಾಯ [43]ರಾಶಿಯ ಬೇಗ ತೆಗೆಸೆನಲಾಗ ವಹಿಲದಲಿ[44]
ಬಾಯ ಮುಚ್ಚದ ಮುನ್ನ ಮೋಹರ
ವಾಯೆನಲು ಧೂಳೀಪಟ[45]ಲವನು[46]
ಬೀಯಮಾಡಿದನೆಲ್ಲವನು ಬೀಸಾಡಿ ದೆಸೆದೆಸೆಗೆ ೩೨
ಮತ್ತೆ ಮೋಹರಿಸಿತ್ತು ಸುರಬಲ
ವೆತ್ತಲಂಬರವೆತ್ತಲಿಳೆದೆಶೆ
ಯೆತ್ತಲುರುಬುವ ವಿಹಗಪತಿ ತಾನೆತ್ತಲೆಂದೆನಲು
ಮುತ್ತಿ ಮುಸುಕಿದರಸ್ತ್ರಶಸ್ತ್ರವ
ಮತ್ತೆದರು ಮೈನೆರೆಯದೆನೆ ಮೊಳ
ಗುತ್ತ ಮೇಘವ್ರಾತ ಗಿರಿಯನು ಮುಸುಕುವಂದದಲಿ ೩೩
ನೇರಿಸಿದನಂಬರಕೆ ಧರಣಿಗೆ
ಮಾರಿದನು [51]ಪಕ್ಷಂಗಳೆರಡನು ತೂರಿ ಖಗರಾಜ[52] ತೂರಿದನು ವಿಕ್ರಮದ ಕಡುಹನು
ಬೀರಿದನು ಭಯ[53]ರಸದ[54]ಲಹರಿಯ
ನೇರಿಸಿದನಂತಕಗೆ ಬಿಸಿರಕುತದ ಮಹೋದನವ ೩೪
ಒಡ್ಡಿ ಹರಿಗೆಯಲಿರಿಕಠಾರಿಯ
ಲಡ್ಡವಿಸಿ ಹೊಯ್ ಶೂಲದಿಂದಿಡು[55]ದೊಡ್ಡಿಯಲಿ ಹುಗಿಸಸಮನನು ಚಕ್ರದಲಿ ಕಡಿಯೆನುತ[56]
ಗಡ್ಡವನು ಗಂಟಿಕ್ಕಿ ಕವಚ[57]ದ
ದೊಡ್ಡ[58]ದೇಹದಲಮರದಿಗಧಿಪ
ರಡ್ಡವಿಸಿದರು [59]ಹೋ ಹೊ ನಿಲುನಿಲ್ಲೆನುತ[60] ಖಗಪತಿಯ ೩೫
ಬಂದಿರೈ ಲೇಸಾಯ್ತು ತಪ್ಪೇ
ನೆಂದೆನುತ ಮೋಹರವನೊಡೆತುಳಿ
ದೊಂದುಗಲಸಿದನೊರಸಿ[61]ದನು ಪಕ್ಷದಲಿ[62] ಕೈದುಗಳ
ಮುಂದುವರಿವಾ [63]ಲೋಕಪಾಲರ[64]
ನೊಂದೆರಡು ಮೂರೈದು ನಾಲ್ಕಾ
ರೆಂದು [65]ನಖಮುಖಗಳಲಿ ಕೊಂದೀಡಾಡಿದನು ಧರೆಗೆ[66] ೩೬
ಕೆರೆಯ ಹೊಕ್ಕಿಭದಂತೆ ಹಳುವವ
ಬರಸಿಡಿಲು [67]ಬಗಿ[68]ದಂತೆ ಕಡುಗುವ
ಕುಡಿಯ ಹಿಂಡನು ಹೊಕ್ಕ ಹೆಬ್ಬುಲಿಯಂತೆ ಸುರಬಲವ
ಮುರಿದನೆತ್ತಿದನೊತ್ತಿದನು ಮು
ಕ್ಕುರುಕಿ ಮೊಗೆದನು ಮೋದಿದನು ಹೊ
ಕ್ಕಿರಿದ [69]ನೊರಸಿದನರೆದನುದ್ದದನಹಿಕುಲಾರಾತಿ[70]
ಕಡಲು ಹರಿದುದು ಗೈರಿಕದ ಗಿರಿ
ಯೊಡೆದು ಹರಿವಂದದಲಿ ರಕುತದ[71]ಕಡುಹು[72] ದುಸ್ತರವಾಯ್ತು ಕರಿರಥತುರಗಸಂತತಿಗೆ
ಕೆಡೆದುವಿಭಘಟೆ ನೆಗ್ಗಿದುವು ರಥ
ವೊಡಲನುಳಿದುವು ತುರಗ ಕಾಲಾ
ಳೆಡೆಗುಣವ[73]ನೊಡ್ಡಿತ್ತು[74] ಕಾಲನ ಪುರಕೆ ಕಡಿವಡೆದು ೩೮
ಓಡಿದರು ಗಂಧರ್ವ ಸಾಧ್ಯರು
ಕೊಡೆ ಮೂಡಣದೆಸೆಗೆ ರುದ್ರರು
ಬೇಡಿದರು ವಸುಗಳು ಸಹಿತ ದಕ್ಷಿಣದಿಶಾವರವ
ನೋಡಲರಿಯದ [75]ಸುತರು[76]ಪಡುವಣ
ಕಾಡಹೊಕ್ಕರು ಬಡಗ ದೆಸೆಯಲಿ
ಬೀಡಬಿಡಿಸಿದರಶ್ವಿನೀದೇವರುಗಳಳವಳಿದು ೩೯
ಅನಲನಡಗಿದನಂತಕನು ಕಾ
ನನವ ಹೊಕ್ಕನು ನಿರುತಿ ವರುಣರು
ಮನೆ[77]ಗೆ ಬಾ ನೀನೆಂದ[78]ರನಿಲಕುಬೇರಶಂಕರರು
ತನುವ ಮರೆದರು ಮಿಕ್ಕವರ ಮಾ
ತೆನಗೆ ಬಾರದು ಹೇಳುವಡೆ ವಾ
ಹನವನಿಳಿ[79]ದರು ನಿನಗೆ ನಾವೇ[80] ಲೆಂಕರೆಂದೆನುತ ೪೦
*ಈ ಪದ್ಯವು ’ಭ’ ಪ್ರತಿಯಲ್ಲಿ ಮಾತ್ರವಿದ್ದು ಮುಂದಿನ ಪದ್ಯಕ್ಕೆ ಸಂವಾದಿಯೆನಿಸುವ ಮಾತುಗಳಿಂದ ಕೂಡಿದುದಾಗಿದೆ.
[11] ಜರಿದು (ಪ) [12] ಜರಿದು (ಪ) [13] ಜರಿದು (ಪ) [14] ಜರಿದು (ಪ) [15] ನಿನಗ (ವಿ, ಭ) [16] ನಿನಗ (ವಿ, ಭ) [17] ಸಾರ್ನಿನ (ವಿ, ಮು) [18] ಸಾರ್ನಿನ (ವಿ, ಮು) [19] ನದೊಂದೇ ನಿಮಿಷ ಮಾತ್ರದಲಿ (ವಿ, ಮು) [20] ನದೊಂದೇ ನಿಮಿಷ ಮಾತ್ರದಲಿ (ವಿ, ಮು) [21] ನೆಲ್ಲ (ಪ) [22] ನೆಲ್ಲ (ಪ) [23] ಬೀಳ (ವಿ) [24] ಬೀಳ (ವಿ) [25] ಹಯ್ಕೆ (ವಿ, ಮು) [26] ಹಯ್ಕೆ (ವಿ, ಮು) [27] ಹೊಯ್ ಹೊಯ್ದು (ಪ) [28] ಹೊಯ್ ಹೊಯ್ದು (ಪ) [29] ಹೊಯ್ ಹೊಯ್ದು (ಪ) [30] ಹೊಯ್ ಹೊಯ್ದು (ಪ) [31] ಪಂಕ್ತಿ (ಮು) [32] ಪಂಕ್ತಿ (ಮು) [33] ದಂಗ (ವಿ, ಪ, ಮು) [34] ದಂಗ (ವಿ, ಪ, ಮು) [35] ದಾಡಿದರು ಕಾಣದೆ ಖಗಪತಿಯ ಕರವ || (ಪ) [36] ದಾಡಿದರು ಕಾಣದೆ ಖಗಪತಿಯ ಕರವ || (ಪ) [37] ನದನಾ ಕೊಳುಗುಳವನಾ | (ಭ) [38] ನದನಾ ಕೊಳುಗುಳವನಾ | (ಭ) [39] ನೊಯ್ಯುತ್ತಿರಲು ಅಮೃತವ (ಪ) [40] ನೊಯ್ಯುತ್ತಿರಲು ಅಮೃತವ (ಪ) [41] ಮರುತನ ವೇಗವೆಂದನು ಖಗಪತಿಯ ರಭಸ || (ಪ) [42] ಮರುತನ ವೇಗವೆಂದನು ಖಗಪತಿಯ ರಭಸ || (ಪ) [43] ವಾದೀ ರಜದ ರಾಸಿಯ ಬೇಗ ಮಾಡೆನಲು (ವಿ), ದಲಿ ಭೂರಜದ ರಾಶಿಯ ಬೇಗ ಮಾಡೆನಲು (ಪ) [44] ವಾದೀ ರಜದ ರಾಸಿಯ ಬೇಗ ಮಾಡೆನಲು (ವಿ), ದಲಿ ಭೂರಜದ ರಾಶಿಯ ಬೇಗ ಮಾಡೆನಲು (ಪ) [45] ವ ನೆರೆ (ಪ) [46] ವ ನೆರೆ (ಪ) [47] ಹೇ(ಪ) [48] ಹೇ(ಪ) [49] ನಹಿತಾ (ಪ) [50] ನಹಿತಾ (ಪ) [51] ರಿಪು ಬಲವ ಕೆದರಿದನೆರಡು ಪಕ್ಕದಲಿ | (ಪ), ತರಿದನು ಮಿಗೆ ತನ್ನೆರಡು ಪಕ್ಷದಲಿ | (ವಿ) [52] ರಿಪು ಬಲವ ಕೆದರಿದನೆರಡು ಪಕ್ಕದಲಿ | (ಪ), ತರಿದನು ಮಿಗೆ ತನ್ನೆರಡು ಪಕ್ಷದಲಿ | (ವಿ) [53] ರಭಸ (ಪ) [54] ರಭಸ (ಪ) [55] ವೊಡ್ಡಿಯಲಿ ವಧಿಸಧಮನನು ಚಕ್ರದಲಿ ಕಡಿಯೆನುತ || (ವಿ), ವೊಡ್ಡಿ ಹಾಯಲಿ ವಧಿಸವನ ಚಕ್ರದಲಿ ಪಿಡಿಯೆಂದ || (ಭ) [56] ವೊಡ್ಡಿಯಲಿ ವಧಿಸಧಮನನು ಚಕ್ರದಲಿ ಕಡಿಯೆನುತ || (ವಿ), ವೊಡ್ಡಿ ಹಾಯಲಿ ವಧಿಸವನ ಚಕ್ರದಲಿ ಪಿಡಿಯೆಂದ || (ಭ) [57] ವ | ನೊಡ್ಡಿ (ವಿ) [58] ವ | ನೊಡ್ಡಿ (ವಿ) [59] ಹೊಯ್ಲ ನೀ ಬಲ್ಲೆನುತ (ಪ). [60] ಹೊಯ್ಲ ನೀ ಬಲ್ಲೆನುತ (ಪ). [61] ಪಕ್ಕದಲಿರದೆ (ಪ) [62] ಪಕ್ಕದಲಿರದೆ (ಪ) [63] ದೆಶೆಯ ಪತಿಗಳ (ವಿ, ಮು) [64] ದೆಶೆಯ ಪತಿಗಳ (ವಿ, ಮು) [65] ನಖದಲಿ ಕೊಂದು ಬೀಸಾಡಿದನು ದೆಶೆದೆಶೆಗೆ || (ಭ), ನಖಮುಖಗಳನು ತೋಡೀಡಾಡಿದನು ದೆಸೆಗೆ || (ಪ) [66] ನಖದಲಿ ಕೊಂದು ಬೀಸಾಡಿದನು ದೆಶೆದೆಶೆಗೆ || (ಭ), ನಖಮುಖಗಳನು ತೋಡೀಡಾಡಿದನು ದೆಸೆಗೆ || (ಪ) [67] ಚಿಗಿ (ಪ) [68] ಚಿಗಿ (ಪ) [69] ನರಸಿದ ನರೆದನದ್ದಿದನಹಿತಕುಲರಾಶಿ || (ವಿ), ನದ್ದದನುದ್ದಿದನು ಅಹಿತರ ಕುಲವನೆಲ್ಲ || (ಪ್ರ) [70] ನರಸಿದ ನರೆದನದ್ದಿದನಹಿತಕುಲರಾಶಿ || (ವಿ), ನದ್ದದನುದ್ದಿದನು ಅಹಿತರ ಕುಲವನೆಲ್ಲ || (ಪ್ರ) [71] ಮಡು ಸು (ವಿ, ಮು) [72] ಮಡು ಸು (ವಿ, ಮು) [73] ನೋಡಿತ್ತು (ವಿ, ಮು) [74] ನೋಡಿತ್ತು (ವಿ, ಮು) [75] ಸುರರು (ಪ) [76] ಸುರರು (ಪ) [77] ಯ ಬಾಗಿಲನೊದೆದ (ಪ) [78] ಯ ಬಾಗಿಲನೊದೆದ (ಪ) [79] ದಾಯುಧವನುಳಿದರು (ಭ), ದುದು ಬಿಕ್ಕಬಿನುಗರು (ಪ) [80] ದಾಯುಧವನುಳಿದರು (ಭ), ದುದು ಬಿಕ್ಕಬಿನುಗರು (ಪ)
Leave A Comment