ಸೂಚನೆ:
ರಾಯ ಮುನಿಕುಲಮಂಡನನು ರಿಪು
ರಾಯ ಖಂಡನನಮೃತವನು ಸುರ
ರಾಯರಾಯರ ಸದೆದುಕೊಂಡನಖಂಡಬಲ

[1]ಜಲಧಿ[2]

ಪದನು:
ಕೇಳು ಶೌನಕ ಗರುಡನಾ ವರ
ಶೈಲದಲಿ ಗಜಕಚ್ಛಪಂಗಳ
ಮೂಲಶಾಪಪ್ರಾಪ್ತಜನ್ಮವನದನು ಪರಿಹರಿಸಿ
ಬೀಳುಕೊಟ್ಟನು ಸದುಗತಿಗೆ ಸುರ
ಪಾಲಲೋಕವನೈದಲೆಂದು[3]ಬ್ಬಾಳುತನದಲಿ ಹಾಯ್ದು[4] ಬೊಬ್ಬಿರಿದಭ್ರಮಂಡಲಕೆ    ೧

ಬರುತಿರಲು ಸುರಲೋಕದಲಿ ಮೋ
ಹರಿಸಿದುದು [5]ದುಶ್ಯ[6] ಕುನ ದಿಗುಪಾ
ಲರ ಮಹಾಮಂದಿರಗಳಲಿ ಸುರಪತಿಯ ಸದನದಲಿ
ಬಿರಿದುದಿಳೆ ಶಸ್ತ್ರಾಸ್ತ್ರನಿಕರದ
ಲುರಿ ನೆಗೆದು [7]ದೆಡದಲ್ಲಿ[8] ಗಾತ್ರ
ಸ್ಫುರಣವಾದುವು ಕಾದುವಾನಾಕಾದಿ [9]ವಾಸ[10]ಗಳು    ೨

ಹಳಚಿದುವು ದಿವ್ಯಾಸ್ತ್ರತತಿ ತ
ಮ್ಮೊಳಗೆ ವಾರುಣಯಾಮ್ಯಪಾವಕ
ಚಲನಧನದೇಶಾನವಸುರುದ್ರಾಶ್ವಿನೀಗಣದ
ಜ್ವಲಿತ ಬಹುಳಜ್ವಾಲೆಯಲಿ [11]ದಿಗು[12] ವಳಯ ಧೂಮೋದ್ಧೂತ ಘನ ಮಂ
ಡಲ ಸಮಾವೃತವಾಯ್ತು ನಿಮಿಷಾರ್ಧಾರ್ಧಮಾತ್ರದಲಿ          ೩

ಒಣಗಿದುವು ತಾವರೆಗಳುದಕದ[13]ಡೊಣೆ[14]ಗಳಾರಿದುವರತುವಂಬರ
ಮಣಿಗೆ ಮೈಲಿಗೆ [15]ಬಿದ್ದುದದ್ದುದು[16] ಪೀಠವವನಿಯಲಿ
ಮಣಿಮಕುಟ ಜಾರಿದುವು ತನು ಭೂ
ಷಣಗಳುಡಿದುವು ವಾರಿತೀರದ
ತೃಣಗಳೊಣಗಿದುವೇನ[17]ನೆಂಬೆನು ಸುರರ[18] ದುಃಸ್ಥಿತಿಯ       ೪

ನೆತ್ತರಿನ ಮಳೆಗರೆ[19]ದುದು[20]ಬರ
ಮತ್ತೆ ಮೇಘವ ಕಾಣೆನಗಲಕೆ
ಕೆತ್ತುದಂಧತಮಿಸ್ರ [21]ವಿದ್ದಿರಿಕೆ[22]ಯಲಿ ಸುರರೊಡಲು
ಹೊತ್ತಿದುದು [23]ದೆಸೆದೆಸೆಗೆ ಮೊರೆದುದು
ಮೊತ್ತದುಲ್ಕಾಪಾತವದಿತಿಯ[24] ಚಿತ್ತ ಚಂಚಲವಾಯ್ತು ಕಂಡನು ಶಕ್ರನೀ ಹದನ         ೫

ನಡುಗಿದ[25]ನಿದೇನೇನು[26] ಕಾರಣ
ಗಡಣದವಶಕುನಂಗಳಾರಿಗೆ
ತೊಡಕ ತಹವೋ ಕಲ್ಪಕಾಲಪ್ರಳಯದಂತಿದೆಲಾ[27]ಕಡುಗಿ ಕಾದುವರಿಲ್ಲ[28] ದೈತ್ಯರು
ನುಡೀಯಲರಿಯೆವೆನುತ್ತಸುರಸಭೆ
ಯೊಡನೆ ಬರಲೈತಂದು ಬೆಸಗೊಂಡನು ಬೃಹಸ್ಪತಿಯ         ೬

ಏನಿದೇನೈ ತಂದೆ ಬಂದಿಹ
ಹಾನಿಯಾರಿಗೆ ನಿಮ್ಮಡಿಗಳಿದ
ಕೇನು [29]ಕಾಣಿರೆ[30] ಕಡುಗುವುತ್ಫಾತಂಗಳುರವಣೆಯ
ಏನು ಕಾರಣ ವಿದಕೆ ಕಾಣೆನು
ದಾನವರದಾಹವಕೆ [31]ಬಹರೇ
ನೇ[32] ನೆನಲು ಮನದೊಳಗೆ ನಿಶ್ಚಯಿಸುತ್ತ ಗುರು ನುಡಿದ        ೭

ಅರಿತೆ ನಾನೆಲೆ ಮಗನೆ ಹಾನಿಯ
ಹೊರಿಗೆ ನಿಮ್ಮಲಿ [33]ನೀವೆ[34] ಮಾಡಿದ
ದುರಿತಫಲವಿದು ವಾಲಖಿಲ್ಯಮಹಾಮುನೀಶ್ವರರ
ಅರಿಯ[35]ದಂದಾ[36]ಕ್ರಮಿಸಿದಘವಿದು
ಬರಿದೆ ಹೋಹುದೆ [37]ಮಗನೆ[38] ಬಂದುದು
ಮರೆಯ ಮಾತೇನಳಿವು ನಿಮಗೆಂದನು ಸುರಾಚಾರ್ಯ          ೮

ತನುಜ ಕೇಳಾ ಕಶ್ಯಪನ ವರ
ತನಯ[39]ಬಂದನು ಗರುಡದೇವನು
ಘನ[40]ಮಹಾಬಲವೀರ್ಯವಿಕ್ರಮಗುಣಸಮನ್ವಿತನು[41]ಮನುಜ[42]ದಿವಿಜಭುಜಂಗ[43]ವೀರರು[44] ನೆನೆಯಲರಿದಾಹವಕೆ ಕೊಂಡೊ
ಯ್ವನು ಮಹಾಮೃತ ಭಾಂಡವನು ಸಂದೇಹವಿಲ್ಲೆಂದ  ೯

ಪರಿಹರಿಸುವಡೆ ಭಾಳನೇತ್ರಂ
ಗರಿದು ಜನನಿಯ ಸೆರೆಯ ಬಿಡಿಸಲು
ನಿರುತ ಮಾಡಿದ ಭಾಷೆ ತಹೆನಮೃತವನು ತಾನೆಂದು
ಉರಗಪತಿಗಳಿಗಧಟನನು ಗೆಲು[45]ವರೆ[46] ಪರಾಕ್ರಮ[47]ವಿಲ್ಲ[48] ಕಾಹನು
ಭರಿತವಾಗಿಯೆ ರ್ಮಾಡು ಸುಧೆಗೆಲೆ [49]ಮಗನೆ ಹೋಗೆಂದ[50]     ೧೦

ಎನೆ ಹಸಾದ ಭವತ್ಕೃಪಾಲೋ
ಕನದ ಬಲವುಂಟೆನಗೆ ಗರುಗಿರು
ಡನನು ಕೈಕೊಳ್ಳುವೆನ ಫಡಫಡಯೆನುತ ಬೀಳ್ಕೊಂಡು[51]ಅನಲ ಯಮ ನಿರುರುತಿ ವರುಣ ವಾ
ಯು ನಿಧಿಪತಿ ಸೋಮೇಶರೆಂಬರ[52] ನನುವರಿದು ಬೆಸಸಿದನು ದೆಸೆದೆಸೆಗಿರದೆ ದಿಗಧಿಪರ   ೧೧

ಬೆಸಸಿದನು ಬಲವೀರ್ಯಯುತರನು
ವಸುಗಳನು [53]ರುದ್ರರನು ಸೂರ್ಯರ
ನಸಮ ವಿಕ್ರಮ ವೀರ್ಯಬಲಗರ್ವಿತರನಶ್ವಿಗಳ[54] ಹೆಸರ ವೀರರ ನಾ ಮರುದ್ಗಣ
ವಿಸರವನು ಮುಂಕೊಂಡು ಘನ ಪೌ
ರುಷರಾಕ್ರಮಯುಕ್ರರನು ವಿಶ್ವಾಮರೋತಮರ        ೧೨

ಬಲ್ಲಿದನು ಗಡ ಗರುಡನೆಂಬವ
ನೆಲ್ಲರಿಗೆ ಬಲವೀರ್ಯ[55]ವಿತರಣ[56] ವುಳ್ಳವನು ಗಡ ಗೆಲಿದು ನಮ್ಮನು ವಿಹಗನಮೃತವನು
ಕೊಳ್ಳದಿರನೇಳಿಲವ ಮಾಡದೆ
ಕಳ್ಳನೈತರಲೆಲ್ಲವರು ಕೈ
ಕೊಳ್ಳಿ ಹೊಗಲೀಸದೆ ಮಹಾಮೃತ ಮಂದಿರವನೆಂದ   ೧೩

ಹೊಕ್ಕುಹೊರವಡುವಾತನಾರಿದ
ನೆಕ್ಕತುಳದಲಿ ದೈತ್ಯದಾನವ[57]ರೊಕ್ಕರಿ[58]ಸು[59]ವರು[60] ಪಡೆಯದಮೃತವನಾಹವಾಗ್ರದಲಿ[61]ಲೆಕ್ಕಿಸುವೆನೇ ವಿಹಗಗಿಹಗನ[62] ನಿಕ್ಕಡಿಯ ಮಾಡುವೆನು ವಜ್ರದ
ಲಿಕ್ಕೆ ನೀವಿದಕಂಜಬೇಡಾನಿಹೆನು [63]ಹೋಗೆಂದ[64]      ೧೪

ಮಸೆಸು ಮಸೆಸಾಯುಧವನಸ್ತ್ರ
ಪ್ರಸರ [65]ಶಾಲೆಯ ಬೀಯಗವ ತೆಗೆ
ಯೆಸೆವ[66] ಮುಸಲ ಮುಸುಂಡಿ ಮುದ್ಗರ ತೋಮರಂಗಳನು
ಮಸೆಸು ಶೂಲಕೃಪಾಣಪಟ್ಟಿಸ
ವಿಸರವನು ದಿವ್ಯಾಸ್ತ್ರಧಾರಾ
ಪ್ರಸರವನು ಪರಿಭಾವಿಸೆಂದನು ಸಾರಥಿಗೆ ಶಕ್ರ        ೧೫

ಮಾಡಿ ಸುಯಿಧಾನವನು ಸುಧೆಯನು
ಕೊಡೆ ಕಾಯ್ದಿಹುದಸ್ತ್ರಶಸ್ತ್ರದ[67]ಗೂಡುವಲೆ[68]ಗಳನೊಡ್ಡಿ ಸಬಳಕಠಾರಿ[69]ಕಕ್ಕಡೆಯ[70] ಮೂಡಿಗೆಯಕಳೆ ಮೊನೆಯನೀಡಿ ವಿ
ಭಾಡಿಸಹಿತನ ಶಿರವನೆನೆ ಕೈ
ಮಾಡಿ ಕಲಬಲದವರು ಪಡಿಬಲವಾಗಿ ನೀವೆಂದ       ೧೬

ಎಂದು ಕಾಹನು ಹೇಳಿ ತಾನೇ
ನಿಂದನಿದಿರಲಿ ತುಡುಕಿ ವಜ್ರದ
ನಿಂದ್ರನಮರರು ಭಾಪೆನಲು ಮಂಡಿಸಿ ಮದೇಭದಲಿ
ವಂದಿಗರ ಮಾಗಧರ ಕಳಕಳ
ದಂದವಡೆದ ಮಾಹಾಮೃದಂಗದ
ದುಂದುಭಿಯ ಕಹಳೆಗಳ ರವವಾವರಿಸೆ ದಿಗುತಟವ    ೧೭

ಬಂದಡಹುದಾಹವಕೆ ಖಗಪತಿ
ನಿಂದನಾದಡೆ ಬಲ್ಲಿದನು ಫಡ
ಚಂದ್ರಮೌಳಿವಿರಿಂಚಿವಿಷ್ಣುಗ[71]ಳೆಂಬವರು[72]ಮೇಣು
ಬಂದು ನೋಡಲಿ ವಡಬ ಶಿಖಿಯನು
ಕಂದೆರೆದು ಹುಗುವುದೆ ಶಲಭ ಸಾ
ರೆಂದೆನುತ ಗರ್ಜಿಸುತಲಿದ್ದುದು ಕೊಡೆ [73]ಸುಭಟಜನ[74] ೧೮

ಮೃತ್ಯುವಿಗೆ[75]ಹೊಗ[76]ಲರಿದು ಹೊಗುವಡೆ
ಯೆತ್ತಣವ[77]ನಾ ವಿಹಗ[78]ನರಗಿನ
ಪುತ್ತಳಿಗೆ ಪರಿಭವಿಸಲಳವೇ ಪಾವಕನ ಹೊಳಲ
ಮತ್ತೆ ನೋಡುವೆವೈಸಲೆಯೆನು
ತತ್ತಲೀಕ್ಷಿಸುತಿರಲು ನಭ ಕೆಂ[79]ಪೊತ್ತಿದುದು ನೆರೆ[80] ಕಾಣಬಂದುದು ಖಗನ ತನುಕಾಂತಿ       ೧೯

ಬೀಸಿದುದು ಬಿರುಗಾಳಿ ತೆಗೆದಾ
ಕಾಶಚಾರಿಗ[81]ಳೋಡೆಯುರಗ ಕು
ಲಾ[82]ಶನನ ಪಕ್ಷಪ್ರಭೂತೋದ್ದಂಡವೇಗದಲಿ
ಸೂಸಿದವು ಕೆಂದೂಳಿ ದೆಸೆಗಳು
ಮಾಸಿದುವು ಸುರರೆದೆಯ ಧೈರ್ಯವ
ಕೀಸಿದುವು [83]ಕಿವುಡಿಡಿದು[84] ಕಂಡುದು ಖಗಪತಿಯ ಬರವ       ೨೦

[1] ವನಧಿ (ಭ, ಪ)

[2] ವನಧಿ (ಭ, ಪ)

[3] ಬ್ಬಾಳಿಯಲಿ ಹಾಯಿದನು (ಭ)

[4] ಬ್ಬಾಳಿಯಲಿ ಹಾಯಿದನು (ಭ)

[5] ಅವಶ (ಭ)

[6] ಅವಶ (ಭ)

[7] ಹೇನೆಂಬೆ (ಭ)

[8] ಹೇನೆಂಬೆ

[9] ದ್ವಾರ (ವಿ, ಪ)

[10] ದ್ವಾರ (ವಿ, ಪ)

[11] ದೃಗು (ವಿ)

[12] ದೃಗು (ವಿ)

[13] ಕುಣಿ (ಭ)

[14] ಕುಣಿ (ಭ)

[15] ಯಾಯ್ತಬಿದ್ದುದು (ಮು)

[16] ಯಾಯ್ತಬಿದ್ದುದು (ಮು)

[17] ನುಸುರುವೆನಲ್ಲಿ (ಭ)

[18] ನುಸುರುವೆನಲ್ಲಿ (ಭ)

[19] ಯಲ (ಪ)

[20] ಯಲ (ಪ)

[21] ವಿದಿರಿಕ್ಕೆ (ಮು)

[22] ವಿದಿರಿಕ್ಕೆ (ಮು)

[23] ಮುತ್ತಿದುದು ದೆಸೆದೆಸೆ|ಗತ್ತ ಮೆರೆದುತ್ಪಾತವದರಿಂ (ಪ)

[24] ಮುತ್ತಿದುದು ದೆಸೆದೆಸೆ|ಗತ್ತ ಮೆರೆದುತ್ಪಾತವದರಿಂ (ಪ)

[25] ದೇನೇನೇನು (ಭ), ನಿದೇನೆನುತ (ಪ)

[26] ದೇನೇನೇನು (ಭ), ನಿದೇನೆನುತ (ಪ)

[27] ಅಡಿಸಿ ಕಾಡುವಡಿಲ್ಲ (ಪ)

[28] ಅಡಿಸಿ ಕಾಡುವಡಿಲ್ಲ (ಪ)

[29] ಕಂಡಿರೆ (ಭ)

[30] ಕಂಡಿರೆ (ಭ)

[31] ಬಾಹರಿ | ದೇ (ವಿ, ಮು)

[32] ಬಾಹರಿ | ದೇ (ವಿ, ಮು)

[33] ನೀನು (ವಿ)

[34] ನೀನು (ವಿ)

[35] ದಂತಾ (ಪ)

[36] ದಂತಾ (ಪ)

[37] ಕಂದ (ವಿ)

[38] ಕಂದ (ವಿ)

[39] ತಾ ಬಂದನೆ ಗರುಡದೇ | ವನು (ವಿ)

[40] ತಾ ಬಂದನೆ ಗರುಡದೇ | ವನು (ವಿ)

[41] ದನುಜ (ವಿ)

[42] ದನುಜ (ವಿ)

[43] ವೀರರ (ಪ)

[44] ವೀರರ (ಪ)

[45] ವುರು (ಪ)

[46] ವುರು (ಪ)

[47] ರಿಲ್ಲ (ಪ)

[48] ರಿಲ್ಲ (ಪ)

[49] ಡಿಸುವುದೆಲೆ (ಪ)

[50] ಡಿಸುವುದೆಲೆ (ಪ)

[51] ಅನಲ ನಿರುರುತಿ ವರುಣವಾಯುವ | ಧನಪ ಮಿಗೆ ಸೋಮೇಶರೆಂಬರ | (ವಿ), ಅನಲ ಯಮ ನಿರುರುತಿ ವರುಣನಿಲ | ಧನದ ಭಾಳೇಕ್ಷಣದನೆಂಬರ | (ಪ)

[52] ಅನಲ ನಿರುರುತಿ ವರುಣವಾಯುವ | ಧನಪ ಮಿಗೆ ಸೋಮೇಶರೆಂಬರ | (ವಿ), ಅನಲ ಯಮ ನಿರುರುತಿ ವರುಣನಿಲ | ಧನದ ಭಾಳೇಕ್ಷಣದನೆಂಬರ | (ಪ)

[53] ರುದ್ರಾಮರರ ಸೂ|ರ್ಯಸಮ ವಿಕ್ರಮ ವೀರ್ಯಬಲಗರ್ವಿತರದಾದವರ (ಪ)

[54] ರುದ್ರಾಮರರ ಸೂ|ರ್ಯಸಮ ವಿಕ್ರಮ ವೀರ್ಯಬಲಗರ್ವಿತರದಾದವರ (ಪ)

[55] ಯುತರಣ (ವಿ), ವಿಕ್ರಮ (ಪ)

[56] ಯುತರಣ (ವಿ), ವಿಕ್ರಮ (ಪ)

[57] ರೊಕ್ಕಲಿ (ಪ), ರಕ್ಕಲಿ (ಭ)

[58] ರೊಕ್ಕಲಿ (ಪ), ರಕ್ಕಲಿ (ಭ)

[59] ವನು (ಭ)

[60] ವನು (ಭ)

[61] ಸೊಕ್ಕಿಸುವುದೆಲೆ ಮಗನೆ ವಿಹಗನ (ಪ)

[62] ಸೊಕ್ಕಿಸುವುದೆಲೆ ಮಗನೆ ವಿಹಗನ (ಪ)

[63] ಹೊರಗೆಂದ (ಭ)

[64] ಹೊರಗೆಂದ (ಭ)

[65] ಗಳ ಬೀಯಗವ ತೆಗೆಸಾ|ಅಸಮ (ವಿ)

[66] ಗಳ ಬೀಯಗವ ತೆಗೆಸಾ|ಅಸಮ (ವಿ)

[67] ಕೊಡುವನೆ (ಪ)

[68] ಕೊಡುವನೆ (ಪ)

[69] ತಕ್ಕೆಯನು (ಪ)

[70] ತಕ್ಕೆಯನು (ಪ)

[71] ಳೇಗುವರು (ಪ)

[72] ಳೇಗುವರು (ಪ)

[73] ಸುರಕಟಕ (ವಿ)

[74] ಸುರಕಟಕ (ವಿ)

[75] ಗೆಲ (ವಿ)

[76] ಗೆಲ (ವಿ)

[77] ನು ವಿಹಂಗ (ಭ)

[78] ನು ವಿಹಂಗ (ಭ)

[79] ಪೊತ್ತುತಿರ್ದುದು (ಪ)

[80] ಪೊತ್ತುತಿರ್ದುದು (ಪ)

[81] ಳೋಡಲುರಗವಿ | ನಾ (ವಿ)

[82] ಳೋಡಲುರಗವಿ | ನಾ (ವಿ)

[83] ಕಡೆಬೀಡು (ಭ), ಕಡಲಿಡುತ (ವಿ).

[84] ಕಡೆಬೀಡು (ಭ), ಕಡಲಿಡುತ (ವಿ).

*’ಪ’ ಪ್ರತಿಯಲ್ಲಿ ಈ ಪದ್ಯದ ಮೂರು ಸಾಲುಗಳು ಹೀಗೆ ಇವೆ:- ಮೇರುಮಮ್ದರಗಿರಿಗಳಿಗ್ ಎಗರಿ | ಮೀರಿ ಬಂದವೊಲಾಯ್ತು ಕೃತಕದ | ಪೂರ್ವವೈರದಲಿಂದ್ರನೂರಿಗ ಧಾಳಿಯಿಟ್ಟುವೆನೆ ||