ಬಿಟ್ಟರುರುಹುವರವರು ನಿನ್ನನು
ಸೃಷ್ಟಿ
ದೃಷ್ಟಿಯಲಿ ನೋಡಿದರೆ ಕಮಲಜ ರುದ್ರ ಮೊದಲಗಿ
ಕೆಟ್ಟರೆಂದರಿ ಬಿಡದಿರೆಲೆ ಜಗ
ಜಟ್ಟಿ ವೀರನೆ ನಿಲ್ಲುನಿಲ್ಲೆನು
ಜಟ್ಟಿ ವೀಅನೆ ನಿಲ್ಲುನಿಲ್ಲೆನು
ತುಟ್ಟುದನು [3]ಸಂವ[4]ರಿಸುತೆದ್ದನು ನೋಡಿ ಋಷಿಕುಲವ ೨೧
ಮುಗಿದ ಕೈಯಲಿ ನಿಂದು ಮುನಿಪತಿ
ಮಗನ ಜೀವವ ಕಾಯಲೋಸುಗ
ಜಗದಧೀಶಾರಾಧಿತಾಂಘ್ರಿಗಳಿಂಗೆ [5]ತಲೆವಾಗಿ[6]
ಬಗೆಯಲಾಗದು ದೋಷವನು ತಂ
ದೆಗಳು ಬಾಲಕೃತಾಪರಾಧವ
ಮುಗುದನನು ಕೈಗಾವುದೊಲವಿನಲೆಂದನಾ ಮುನಿಪ ೨೨
ಸೇವಕನ ಗುಣದೋಷವನು [9]ನೋಡದೆ ಮಹಾತ್ಮರಿರ[10] ಭಾವಿಸಲು ನಿಮ್ಮಂಘ್ರಿಗಳಿ[11]ಗಪ[12] ಭಾವನೆಯನಾಚರಿಸಿ ಬದುಕುವ[13]ನಾವದೇವನು[14] ದಯೆಯ ಮಾಳ್ಪುದು ತಂದೆಗಳಿರೆಂದ ೨೩
ತಾಯ ಸೆರೆಯನು ಬಿಡಿಸಲೋಸುಗ
ದಾಯಿಗರ ಮಾತಿನಲಿ ಬಮ್ದನು
ಪಾಯವಹ ಪೀಯುಷವನು ತಹ ಮನದ ಕಡುಹಿನಲಿ
ಕಾಯಬೇಹುದು ಸಕಲಜೀವ ನಿ
ಕಾಯ[15]ಹಿತವರ್ತಿಗಳಿರೆನುತ ಮ
ಹಾ[16]ಯಶೋನಿಧಿ ಬೇಡಿಕೊಂಡನು [17]ಬಹಳ[18] ಮುನಿಕುಲವ ೨೪
ಎಂದ[19]ಡದ[20] ನಾಲಿಸುತ ಮುನಿಕುಲ
ಕಂದೆರೆದು ಕೈನೆಗಹಿ ಭಯ ಬೇ
ಡೆಂದನುತ ಕಾರುಣ್ಯದಲಿ ಶಾಖಾಗ್ರದಿಂದಿಳಿದು
ಮಂದಿರವ ಮಾಡಿ[21]ದರು ಹಿಮ[22]ಗಿರಿ
ಕಂದರ[23]ವನ[24]ತ್ತಲು [25]ಖಗಾಧಿಪ[26]
ನೊಂದು ಮೃತ್ಯುವ [27]ಗೆಲಿದೆ[28]ನೆಂದನು ತನ್ನ್ ಅಮನದೊಳಗೆ ೨೫
ಬಿಡೂವೆನೀಶಾಖೆಯನು ತಾನಾ
ವೆಡೆಯಲಿದರೊಳು ಬಿಡಲು ವಿಪ್ರರು[29]ಮಡಿ[30]ವರೆನುತಾ ಬಾಯ ಶಾಖೆಯನ್ನೊಯ್ಯನೋಸರಿಸಿ
ನುಡಿದನಾವೆಡೆ ಕೊಂಬ [31]ಬಿಸುಡುವೆ
ನೊ[32]ಡೆಯ ಹೇಳೆನೆ ಮಗನ ಮಾತನು
ಕಡುಕರುಣಿ ಕೇಳುತ್ತ ಮಗುಳಿಂತೆಂದ[33]ನಾ ಮುನಿಪ[34] ೨೬
ಪ್ರಾಣಿಭಾಧೆಗಳಾಗದೆಡೆಯನು
ಕಾಣೆ ನಾನೆಲೆ ಮಗನೆ ತುಹಿನ
ಕ್ಷೋಣೆಧರನಿಂ [35]ದಾಚೆ[36] ಯಲಿ ಹಿಮ [37]ನಿಕರ[38]ಬಾಧೆಯಲಿ
ಪ್ರಾಣಿಮಾತ್ರವೆಯಿಲ್ಲ ಗಿರಿತಟ
ಹೂಣೆಗನೆ ಹೊಗಲರಿದು ವಂಶ
ಶ್ರೇಣಿ [39]ವೇತ್ರಪರೀತವದು ಠಾವಹುದು[40] ಕೇಳೆಂದ ೨೭
ತಿನ್ನು ನೀನದರೊಳಗೆ ಹಿಡಿದುದು
ನೆನ್ನರಸ ಹೋಗೆನಲು ಕಶ್ಯಪ
ನುನ್ನತಾಂಘ್ರಿಗೆ ನಮಿಸಿ ಗತಿ ನೀನೆನುತ ಬೀಳ್ಕೊಂಡು
ಹೊನ್ನಬಣ್ಣದ ಶಾಖೆ ಕಚ್ಛಪ
ಮನ್ನಣೆಯ ಗಜಸಹಿತ ಹಾಯ್ದನು
ದುರ್ನಿರೀಕ್ಷವೆನಿಪ್ಪ ಗಿರಿಗೆ ಮನೋನುರಾಗದಲಿ ೨೮
ಗಂಡುಗಲಿ ಗಗನಾಂಗಣಕೆ ಬ್ರ
ಹ್ಮಾಂಡ [41]ಗರಿವೊತ್ತಂತೆ[42] ಹಾಯ್ದು
ದ್ವಂಡ ಪಕ್ಷಪುಟಪ್ರಹಾರದಲಿನನರಥವೊಡೆಯೆ
ಚಂಡವಿಕ್ರಮನೈದಿದನು ಕಡಿ
ಖಂಡವನು ಮಾಡುತ್ತ ತರುಗಳ[43]ತಂಡ[44]ವನು [45]ತೀವ್ರ[46]ದಲಿ ಹಿಮಗಿರಿಪಾರ್ಶ್ವ[47]ದೆಡೆಗಾಗಿ[48] ೨೯
ಬಿಸುಟ[49]ನದರ[50]ಲಿ ಶಾಖೆಯನು ಧರೆ
ಕುಸಿಯೆ ಹೆಮ್ಮರಕೋಟಿ[51]ಯುಡಿಯಲು[52]
ಮಸಗಿ ಬರಸಿಡಿಲೆರಗಿದಂತಾಯ್ತಾ ಮಹಾರಭಸ
ಬಸುರುಬಿಚ್ಚಿದನೆರಡರಂಗದ
ಬಿಸಿರಕುತ [53]ವನದೊಳಗೆ ಕಡಲಿಡೆ
ಮುಸುಡನೂರಿದನಾ ಮಹಾಗಜಕಚ್ಛಪಂಗಳಿಗೆ[54] ೩೦
ಹೊಳ್ಳಿಸಿದನಂಗವನು ರಕುತದ
ಹಳ್ಳವನು ಸೇದಿದನು ಬಾಯ್ದೆರೆ
ದಳ್ಳೆ ಹಿಗ್ಗಲು ಮಾಂಸರಾಶಿಯನಗಿದಗಿದು ಬಗಿದು[55]ಬಲ್ಲಿದ[56]ನು ತೇಗಿದನು ನೀಗಿದ
ನೆಳ್ಳನಿತು ಹೊರಗುಳಿಯ[57]ದನಿತವ
ನೆ[58]ಲ್ಲವನು [59]ಜಠರೀಕರಿಸಿ ನಸು[60] ಮಲಗಿದನು [61]ವಿಹಗ[62] ೩೧
ತಂದೆನಾಗಳೆ ಸುಧೆಯನಮರರ
ವೃಂದವನು ತಾ ಗೆಲಿದೆನಿನೇ
ನಿಂದುಧರನಡ್ಡಯಿಸಿದಡೆ ಬಿಡುವೆನೆ ಜಗತ್ತ್ರಯವ
ಒಂದು ನಿಮಿಷದಲೊರಸುವೆನು [63]ಫಡ[64]
ಮಂದರ[65]ಕೆ ಮಲೆ[66]ವುದೆ ಝಷಾವಳಿ
ಯೆಂದೆನುತ ದಾಟಿದನು ಬಹಳ ಮನೋರಥಾಂಬುಧಿಯ ೩೨
ಗೆಲಿದೆನೆಂದು ಪರಿಶ್ರಮವನೊಡ
ಲೊಳ[67]ಗನುರಿಯನು ನಂದಿಸಿದೆನೆಂ[68]
[69]ದುಲಿದು ತನುವನು ಹೊಳ್ಳಿಸಿ[70]ದನನುಭವಿಸಿದಾಯಸವ
ಹಲವು ಮಾತೇಕಾಮಹಾಮುನಿ
ಕುಲದ ಕೋಪಾಗ್ನಿಯನು ತಪ್ಪಿಸಿ
ಸಲಹಿದನು ಪಿತನೆನುತ ಹೊಂಪುಳಿಯೋದನಾ ಗರುಡ ೩೩
ಇದು ಸಕಲಲೋಕೈಕ[71]ಪಾವನ[72]
ವಿದು ಸಕಲ ಪುರುಷಾರ್ಥಸಾಧನ
ವಿದು ಸದಾಯುಷ್ಕೀರ್ತಿ ಬಲವಿಕ್ರಮವಿವರ್ಧನವು
ಇದನೊಲಿದು ಹೇಳುವ ಸರಾಗದ
ಲೊದವಿ ಕೀರ್ತಿಸುವಖಿಳ[73]ನರ[74]ರಿಗೆ
ಪದುಮದೃಶ ನಿತ್ಯಾತ್ಮನೀವನಭೀಷ್ಟ[75]ಸಂಪದವ[76] ೩೪
ಚತುರ್ಥ ಸಂಧಿ ಸಮಾಪ್ತ
[1] ಯುಳಿವುದು (ವಿ, ಪ) [2] ಯುಳಿವುದು (ವಿ, ಪ) [3] ಸಂಸ್ಪ (ಪ) [4] ಸಂಸ್ಪ (ಪ) [5] ಕೈಮುಗಿದು (ವಿ) [6] ಕೈಮುಗಿದು (ವಿ) [7] ದೇವದಾನವರಾದರಿಸರೆಲೆ | (ವಿ, ಮು) [8] ದೇವದಾನವರಾದರಿಸರೆಲೆ | (ವಿ, ಮು) [9] ನೀವ್ ಕಾಯಬೇಕೆನುತ || (ವಿ) [10] ನೀವ್ ಕಾಯಬೇಕೆನುತ || (ವಿ) [11] ಗಘ (ಭ) [12] ಗಘ (ಭ) [13] ದೇವನಾವನು (ವಿ), ನಾವ ವೀರನು (ಪ) [14] ದೇವನಾವನು (ವಿ), ನಾವ ವೀರನು (ಪ) [15] ವನಹಿತವರ್ತಿಗಳಿರೆನು | ತಾ (ಭ) [16] ವನಹಿತವರ್ತಿಗಳಿರೆನು | ತಾ (ಭ) [17] ಸಕಲ (ವಿ, ಭ) [18] ಸಕಲ (ವಿ, ಭ) [19] ನದ (ಭ) [20] ನದ (ಭ) [21] ದೆ ನಿಮಗೆ (ಪ) [22] ದೆ ನಿಮಗೆ (ಪ) [23] ದಲ (ಭ, ಪ) [24] ದಲ (ಭ, ಪ) [25] ಮಹಾಖಗ (ವಿ) [26] ಮಹಾಖಗ (ವಿ) [27] ಕಳಿದೆ (ಭ) [28] ಕಳಿದೆ (ಭ) [29] ಕೆಡು (ಪ) [30] ಕೆಡು (ಪ) [31] ನಿಡೂಕುವುರೆ (ವಿ, ಭ) [32] ನಿಡೂಕುವುರೆ (ವಿ, ಭ) [33] ನೊಲವಿನಲಿ (ವಿ, ಪ) [34] ನೊಲವಿನಲಿ (ವಿ, ಪ) [35] ದ್ರಾಖ್ಯೆ (ಪ) [36] ದ್ರಾಖ್ಯೆ (ಪ) [37] ಸುರಿವ (ವಿ, ಮು) [38] ಸುರಿವ (ವಿ, ಮು) [39] ಪರಿಕರವಹುದು ತವಹುದದುವೆ (ಭ) [40] ಪರಿಕರವಹುದು ತವಹುದದುವೆ (ಭ) [41] ಗತಿಗೋರಂತೆ (ಪ) [42] ಗತಿಗೋರಂತೆ (ಪ) [43] ಷಂಡ (ಭ) [44] ಷಂಡ (ಭ) [45] ಕ್ಷಿಪ್ರ (ವಿ) [46] ಕ್ಷಿಪ್ರ (ವಿ) [47] ದಾ ಗಿರಿಗೆ (ವಿ, ಮು) [48] ದಾ ಗಿರಿಗೆ (ವಿ, ಮು) [49] ವನದ (ಭ) [50] ವನದ (ಭ) [51] ಯಲುಗಲು (ಪ) [52] ಯಲುಗಲು (ಪ) [53] ವೂಡುತ್ತ ತರುಗಳು | ಸಸಿನ ಕಡಲಿಡೆ ಮುಸುಡನೊಡ್ಡಿದ ನಾ ಮಹಾಗಜಕಚ್ಛಪಂಗಳಲಿ || (ಪ) [54] ವೂಡುತ್ತ ತರುಗಳು | ಸಸಿನ ಕಡಲಿಡೆ ಮುಸುಡನೊಡ್ಡಿದ ನಾ ಮಹಾಗಜಕಚ್ಛಪಂಗಳಲಿ || (ಪ) [55] ಬಲ್ಲಹ (ವಿ, ಪ) [56] ಬಲ್ಲಹ (ವಿ, ಪ) [57] ದಂತಿರ | ದೆ (ಭ, ವಿ) [58] ದಂತಿರ | ದೆ (ಭ, ವಿ) [59] ಜಠರದಲಿ ಕೀಲಿಸಿ (ಭ) [60] ಜಠರದಲಿ ಕೀಲಿಸಿ (ಭ) [61] ಗಿರಿಯ (ವಿ) [62] ಗಿರಿಯ (ವಿ) [63] ಬಿಡು (ವಿ) [64] ಬಿಡು (ವಿ) [65] ವ ಕೈ (ಪ) [66] ವ ಕೈ (ಪ) [67] ಗೆ ದಳ್ಳುರಿಯನ್ನು ನಂದಿಸಿ | (ಪ) [68] ಗೆ ದಳ್ಳುರಿಯನ್ನು ನಂದಿಸಿ | (ಪ) [69] ಯೊಲಿದೊಲಿದು ತನುವಳಿಸಿ (ಪ), ದುಲಿದು ತನುವನು ಝಾಡಿಸಿ (ಭ) [70] ಯೊಲಿದೊಲಿದು ತನುವಳಿಸಿ (ಪ), ದುಲಿದು ತನುವನು ಝಾಡಿಸಿ (ಭ) [71] ಕಾರಣ (ಭ) [72] ಕಾರಣ (ಭ) [73] ಜನ (ವಿ) [74] ಜನ (ವಿ) [75] ಸಂಸ್ಥಿತಿಯ (ಪ) [76] ಸಂಸ್ಥಿತಿಯ (ಪ)
Leave A Comment