ಸೂಚನೆ:
ಗಂಡುಗಲಿ ಗಜಕಚ್ಛಪಂಗಳ
ಕೊಂಡುಹಾಯ್ದನು ವಾಲಖಿಲ್ಯರ
ಮಂಡಲವ ಕೈ

[1]ಗಾಯ್ದು[2] ಖಗಪತಿ ಗಂಧಮಾದನಕೆ

ಪದನು:
ಕೇಳು ಶೌನಕರಾಯ ಖಗಕುಲ
ಮೌಳಿಮಣಿ ನಿಜ ಜನಕನಂಘ್ರಿಯ
ಬೀಳುಕೊಂ[3]ಡನು[4] ನಮಿಸಿ ಹಾಯ್ದನು ತತ್ಸರೋವರಕೆ[5]ಶೈಲರಾಜನವೋಲು ಮೆರೆವಾ
ಭೀಳಗಜವನು ಕಚ್ಛಪನ ಸುವಿ[6] ಶಾಲತೆಯನೀಕ್ಷಿಸುತ ಮರೆದನು ಹಸಿವನಾ ಗರುಡ    ೧

ಎರಡು ಕೈಯಲಿ ತೆಗೆದುಕೊಂಡುರೆ
ಕರಿಯನಾ ಕಚ್ಛಪನನಂಬರ
ಚರರು ಭಾಪೆನೆ ಬೊಬ್ಬಿರಿದು ಪುಟನೆದನಂಬರಕೆ
ಹರಹಿದನು ಪಕ್ಕ[7]ವನು[8] ದೆಸೆಗಳು
ಬಿರಿಯೆ ದಿಕ್ಕರಿನಿಕರದಸು ಪೈ
ಸರಿಸೆ ಪಕ್ಷಪುಟಪ್ರಭೂತೋದ್ದಂಡ[9]ಪವನನಲಿ[10]        ೨

ಕಾಲುಗುರ ಕೊನೆ ಸೋಂಕೆ ಗಿರಿಗಳು
ಸೀಳಿದುವು ಧ್ರ ಕುಸಿದುದಾ ಪಾ
ತಾಳದತ್ತಲು ಕದಡಿದವು [11]ಕಡಲೇಳು ಪದಹತಿಗೆ[12] [13]ಬೀಳುಕೊಂಡನು[14] ತರಣಿ ತಾರಾ
ಮಾಲೆಗಳು ಕೆದರಿದುವು [15]ಜೋಡಣೆ[16] ಜಾಳಿಸಿತು ಜಗದೇಕವೀರರ ದೇವನುರವ[17]ಣೆಗೆ[18]      ೩

ಎಲ್ಲಿರಿಸಿ [19]ತಾ [20] ತಿಂಬೆನೀ ಗಜ
ಮಲ್ಲಕಚ್ಛಪಗಳನೆನುತ ಖಗ
ಮಲ್ಲನಂಬರಮಾರ್ಗದಲಿ ಸಾಗರ ಸಮೀಪದಲಿ
ಸಲ್ಲಲಿತ ತರುಗಳನು ನೋಡು
ತ್ತಲ್ಲಿ ತನಗೀಡೇರದೆನುತುವೆ
ನಿಲ್ಲ[21]ದಾಲಸಮಾಖ್ಯ[22]ತೀರ್ಥಕೆ ಬಂದನಾ ಗರುಡ     ೪

ದೇವ[23]ವೃಕ್ಷಂಗಳಲಿ ಬಹು[24]ಪು
ಷ್ಪಾವಳಿಯ ಫಲಗಳಲಿ ಧರಣೀ
ದೇವ ಸಂತುಷ್ಟಿಯನು ಮಾಡುತ್ತದರೊಳೆಸೆದಿರಲೂ
ಈ ವಿಪಿನವತರಮ್ಯವದರೊಳು
ಜೀವಭ್ಕಶ ಮಳ್ಬೆನೆನುತಾ
ಪಾವಕಪ್ರತಮಾನನೈತಂದನು ವನಾಂತರಕೆ ೫

ನಡುಗಿದವು ಫಲನಿಕರವವನಿಗೆ
ಕೆಡೆದು ಒಣಗಿದು[25]ವಾ ಮರಂ[26]ಗಳು
ಕುಡಿತೆಗೊಂಡುವು ಪತ್ರಚಯ ಬಾಡಿದುವು ತಳಿರುಗಳು
ಕಡುಗಿ ಖಗನೈತರಲು ತರುಗಳು
ನುಡಿದುವೆಲೆ ಪುಣ್ಯಾತ್ಮ ನೀನಡಿ
ಯಿಡದಿರೆಮ್ಮಲಿ ಶಕ್ತಿ[27]ಯಿನಿತಿ[28]ಲ್ಲೆಂದು ತಮತಮಗೆ   ೬

ಕೇಳಿ ಹುಯ್ಯಲನತ್ತಲೇ ಖಗ
ಬೀಳುಕೊಂಡನು ಹಲವು ವಿಧ ತರು
ಶೈಲನಿಕರಂಗಳನು ಕಳಿಕಳಿದತ್ತಲಂಬುಧಿಯ
ಕೂಲವನಗಳನೀಕ್ಷಿಸುತ ಬರೆ
ಕೇಳಬಂದುದು ಮತ್ತೆ ಹೆಮ್ಮರ[29]ನಾಳಪಿತವಾ[30]ವೀರ ವಿಹಗೇಶ್ವರಗೆ ದೂರದಲಿ       ೭

ತಂದೆ ಬಾರೈ [31]ತನ್ನ[32] ಶಾಖೆಯ
ದೊಂದಿಹುದು ಶತಯೋಜನವು ನೀ
ಬಂದು ಕುಳ್ಳಿ[33]ರುವದರ[34] ಮೇಲೆ ನಿರಾಮಯವು ನಿನಗೆ
ಹಿಂದುಗಳೆ ಹಸಿವನು ಮಹಾಮತಿ
ಮುಂದೆ ನಡೆ ನಿಜ ಕಾರ್ಯಸಂಗತಿಗೆಂದುದಾ ವೃಕ್ಷ    ೮

ಧರಿಸಲುಳಿಯಲಿ ಮೇಣು ಚರಣ
ಸ್ಪರುಶವಾ[35]ದರೆ[36] ಸಾಕು ಘನತರ
ದುರಿತವನು ಪರಿಹರಿಸುವೆನು ತರುಜನ್ಮಸಂಭವದ
ಪರಮಪಾವನಮೂರ್ತಿ ಬಾ ಯೆಂ
ದಿರದೆ ಕರೆಯಲು ಕೇಳುತವೆ ಖಗ
ವರನು ತನಗೊಂದಾಶ್ರಮವಿದಾಯ್ತೆನುತ ನಡೆತಂದ   ೯

ಕಂಡನದರಾ[37]ಛಾಯೆಯಲಿ[38] ಕೆಳೆ
ಗೊಂಡು ಸುಖದಲಿ ವಿಶ್ರಮಿಸಿ ನೆಲೆ
ಗೊಂಡ ಖಗಮೃಗದೇವಕಿನ್ನರಮರ್ತ್ಯನಿಕರವನು
ಅಂಡಜೇಂದ್ರನು ನಗುತ ಗಗನದ
ಮಂಡಲವನಿಳಿತಂದು ಶಾಖೆಗೆ
ಗಂಡುಗಲಿ [39]ಕಾಲೂರಿ ಕುಳ್ಳಿರ್ದನು ಸರಾಗದಲಿ[40]      ೧೦

ಮುರಿದು[41]ದೋ[42] ಭೋಂಕೆನಲು ಪ್ರಳಯದ
ಬರಸಿಡಿಲು ಹೊಡೆದಂತೆ ಚರಣದ
ಸೆರಗು ಸೋಂಕಲು [43]ಶಾಖೆ ವೀರವಿಹಂಗನೋ[44]ತ್ತಮನ
ತಿರುಗಿ ಕಂಡನು ವಾಲಖಿಲ್ಯರು
ತುರುಗಿ ತಲೆಕೆಳಗಾಗಿ ಹೊಸ ನೇ
ಸರಿನ [45]ಮರಿಗಳ[46]ವೋಲು ಜೋಲುತ್ತಿರಲು ಶಾಖೆಯಲಿ        ೧೧

ಕಿಚ್ಚಿನಲಿ ಬಿದ್ದಂತೆ ಖಗಪತಿ
ಬೆಚ್ಚಿ[47]ದನು ಬೆದರಿದನು[48] ಕಾಣುತೆ
ಸಚ್ಚರಿತರಿವರಾರು ಮಾರಿಯಿದಾಯ್ತಲಾ [49]ಎನುತ[50] ಕೊಚ್ಚಿದುದು ತರು ಕೊರಳನೆನುತುವೆ[51]ಹಚ್ಚಿ ಹಲುಬುತ ಬೀಳಲೀಸದೆ[52] ಕಚ್ಚಿಕೊಂಡನು ಶಾಖೆಯನು ತುಂಡಾಗ್ರದಲಿ [53]ಗರುಡ[54]         ೧೨

ಅಕ್ಕಟೀಶಾಖೆಯನು ತಾ ಬೀ
ಳಿಕ್ಕಿದರೆ ಶಾಪಾಗ್ನಿ ತನ್ನನು
ಮುಕ್ಕುವುದು [55]ಪರಮರ್ಷಿಕುಲ ಸಾಮಾನ್ಯವಲ್ಲಿವರು[56] ಇಕ್ಕಿ ಹಕ್ಕಿಯ ಮಾಡಿ ನೆಳಲಲಿ
ಸೊಕ್ಕಿ ಸುಖದಿಂದಿರ್ದವರ ಕೊಲೆ
ಯಕ್ಕು [57]ತಾನಿ[58]ನ್ನೇವೆನೆಂದನು ಸುಯಿದು ಮನದೊಳಗೆ       ೧೩

ತಪ್ಪಿ[59]ಸಿದೆ[60]ನಡಗಿರ್ದವರನೀ
ವಿಪ್ರಕುಲಕಿನ್ನೇನು ಗತಿ [61]ತಾ
ನೊ[62]ಪ್ಪಿತಾದುದ ಸಾಧಿಸುವರಾರೋ ಶಿವಾಯೆನುತ
ಉಪ್ಪರಿಸಿದನು ನಭಕೆ ರವಿರಥ[63]ಕೆಪ್ಪುಗೆಡೆ[64]ಯಲು ಪಕ್ಷಪುಟದಲಿ
ಸರ್ಪಕುಲಕಾನನಕುಠಾರನು ಸುರರು ಭಾಪೆನಲು      ೧೪

ಇರಿಸುವೆನು ತಾನೆಲ್ಲಿ [65]ತಾಪಸ
ಧರರನಿವರನೆನುತ್ತ ಗಗನೇ
ಚರನು ಚಿಂತಿಸಿ ಸುಯಿದು[66] ತೊಳಲಿಸನಖಿಳದಿಗುತಟವ
ಗಿರಿಗಳೊಡೆದುವು ಜಗಗಳಡಕಿಲು
ಜರಿದು ಬೀಳಲು ಬಗೆದುದಮರದ[67]ಸಿರಿ[68]ಗರಿಯ ಹೊತ್ತಂತೆ[69]ತೊಳಲು[70]ತ್ತಿರ್ದನಭ್ರದಲಿ ೧೫

ಇಳುಹಿದರೆ ಕೋಪಿಸುವುದೀ ಮುನಿ
ಕುಲವೆನುತ ಗಜಕಚ್ಛಪಂಗಳ
ಕಳೆವರವನಿಕ್ಕೈ ಯ[71]ನಖಮುಖ[72]ದಗ್ರದಲಿ[73]ಕೊಂಡು[74] ಪ್ರಳಯಮೇಘಕೆ ಪಕ್ಷವಾದಂ
ತುಲುಕಲೀಯದೆ ಶಾಖೆಯನು ಖಗ
ಕುಲಶಿರೋಮಣೆ ಕಚ್ಚಿಕೊಂಡೇ ತಿರುಗಿದನು ಧರೆಯ   ೧೬

ಭಾಪು ಭುವನಾಲಂಘ್ಯವಿಕ್ರಮ
ಭಾಪು ದುಸ್ಸಹಬಲಪರಾಕ್ರಮ
ಭಾಪು ತ್ರಿಭುವನ[75]ದೀಪ[76]ಭದ್ರಾಳಾಪಜಿತ [77]ಕೋಪ[78] ಭಾಪು ವಿಹಗಾಕಾರ ವಿಶ್ವಕ
ಳಾಪ ಮಹಿ [79]ಮೋದ್ಧಾರ[80] ಜಯಜಯ
ಭಾಪೆನುತ ಹೊಗಳುತ್ತಲಿರ್ದುದು ಸಕಲ [81]ಸುರ[82] ನಿಕರ        ೧೭

ತರುಗಳನು ಮುರಿಯುತ್ತ ಗಿರಿಗಳ
ಶಿರಗಳನು ಕೆಡಹುತ್ತ ಗಗನೇ
ಚರರ ಗತಿಗೆಡಿಸುತ್ತ ರವಿಮಂಡಳವನಲೆಯುತ್ತ
ಇರದೆ ಭವ[83]ನಂಗಳನು[84] ಬಲು ಮಂ
ದರದವೊಲು [85]ಮರ್ದಿಸುತ[86] ಬಂದನು
ಗರುಡದೇವನು ಗಗನಗತಿಯಲಿ ಗಂಧಮಾದನಕೆ      ೧೮

ಕಂಡನಾಗಿರಿವಿಪಿನದಲಿ ಮಾ
ರ್ತಾಂಡಮಂಡಲದಂತೆ ಬೆಳಗುವ
ಖಂಡತೇಜೋನಿಧಿಯನಾ ಕಶ್ಯಪಮಹಾಮುನಿಯ
ಕಂಡನೀತನನಾತನಂತ್ಯದ
ದಂಡಧರ[87]ನಂತಿರುವ ಕಂಗಳ[88] ತುಂಡನಖಮುಖದೀಪ್ತಿದಿವ್ಯಶರೀರನನು ಮುನಿಪ      ೧೯

ಏನಿದೇನೈ ತಂದೆ ಮಾಡಿದೆ
ಯೇನನಕಟಕಟಾಯ್ತಲಾ ಕಡು
ಹಾನಿ [89]ಹರಹರ[90] ಮಗನೆ ಕುಲಸಂಕ್ಷಯನ ತಂದುದಲಾ
ಭಾನುಸನ್ನಿಭ ಋಷಿ[91]ಗಳ[92] ಸ್ಥಿತಿ
ಗೇನ ಕಂಡೆ ಮಹಾತ್ಮಬಿಡದಿರು
ಮಾನನಿಧಿ ಶಾಖೆಯನು ಸುಯಿಧಾನವನು ಮಾಡೆಂದ ೨೦

[1] ಗೊಂಡು (ವಿ, ಮು)

[2] ಗೊಂಡು (ವಿ, ಮು)

[3] ಡಭಿ (ಮು)

[4] ಡಭಿ (ಮು)

[5] ಮೇಲು ಮೇಲಹ ದ್ವಿರದರಾಜನ | ವೋಲು ಮೆರೆವಾಭೀಳಗನದ ವಿ | (ವಿ)

[6] ಮೇಲು ಮೇಲಹ ದ್ವಿರದರಾಜನ | ವೋಲು ಮೆರೆವಾಭೀಳಗನದ ವಿ | (ವಿ)

[7] ಗಳ (ವಿ, ಮು)

[8] ಗಳ (ವಿ, ಮು)

[9] ಸ್ಪರ್ಶದಲಿ (ಪ)

[10] ಸ್ಪರ್ಶದಲಿ (ಪ)

[11] ಪದಹತಿಗೆ ಶರಧಿಗಳು (ವಿ, ಮು)

[12] ಪದಹತಿಗೆ ಶರಧಿಗಳು (ವಿ, ಮು)

[13] ತೇಲುಗೊಂಡನು (ಪ)

[14] ತೇಲುಗೊಂಡನು (ಪ)

[15] ಜ್ಯೋತಿಷ (ವಿ), ಭೂಮಿಯು (ಭ)

[16] ಜ್ಯೋತಿಷ (ವಿ), ಭೂಮಿಯು (ಭ)

[17] ಣೆಸೆ(ಪ)

[18] ಣೆಸೆ(ಪ)

[19] ಇವ (ಪ)

[20] ಇವ (ಪ)

[21] ದಲಸದೆ ಮುಖ್ಯ (ಪ)

[22] ದಲಸದೆ ಮುಖ್ಯ (ಪ)

[23] ವೃಕ್ಷಗಳನವರತ (ಪ)

[24] ವೃಕ್ಷಗಳನವರತ (ಪ)

[25] ವಂಕುರಂ (ವಿ)

[26] ವಂಕುರಂ (ವಿ)

[27] ಯೆಮಗಿ (ಪ)

[28] ಯೆಮಗಿ (ಪ)

[29] ನಾಳ್ವ ಸತ್ವದ (ಪ)

[30] ನಾಳ್ವ ಸತ್ವದ (ಪ)

[31] ತನಗೆ (ಪ)

[32] ತನಗೆ (ಪ)

[33] ಹುದಿದರ(ವಿ)

[34] ಹುದಿದರ(ವಿ)

[35] ಗಲಿ (ಪ, ಮು)

[36] ಗಲಿ (ಪ, ಮು)

[37] ಚೆಯಲಿ ತಾ (ಪ)

[38] ಚೆಯಲಿ ತಾ (ಪ)

[39] ಕುಳ್ಳಿರ್ದನನುಪಮರಾಗರಚನೆಯಲಿ || (ಪ)

[40] ಕುಳ್ಳಿರ್ದನನುಪಮರಾಗರಚನೆಯಲಿ || (ಪ)

[41] ದದು (ಭ, ವಿ)

[42] ದದು (ಭ, ವಿ)

[43] ವೀರನಹವಿಹಗೋತ್ತಮೋ (ಪ)

[44] ವೀರನಹವಿಹಗೋತ್ತಮೋ (ಪ)

[45] ತೇಜದ (ಪ), ಸರಿಗಳ (ಭ)

[46] ತೇಜದ (ಪ), ಸರಿಗಳ (ಭ)

[47] ಬೆದರಿದನದನು (ಪ)

[48] ಬೆದರಿದನದನು (ಪ)

[49] ತನಗೆ (ಭ, ಪ)

[50] ತನಗೆ (ಭ, ಪ)

[51] ಹೆಚ್ಚಿ ಹಲುಬುತ್ತಿರಲು ಬಳಲದೆ | (ಪ), ಹೆಚ್ಚಿ ಹಲುಬುತ ಬಳಲಿಸದೆ ತಾ | (ವಿ)

[52] ಹೆಚ್ಚಿ ಹಲುಬುತ್ತಿರಲು ಬಳಲದೆ | (ಪ), ಹೆಚ್ಚಿ ಹಲುಬುತ ಬಳಲಿಸದೆ ತಾ | (ವಿ)

[53] ಬಿಡದೆ (ಭ, ಪ)

[54] ಬಿಡದೆ (ಭ, ಪ)

[55] ವರ ಋಷಿಕುಲವು ಸಾಮಾನ್ಯ ವಲ್ಲೆಂದ (ಪ)

[56] ವರ ಋಷಿಕುಲವು ಸಾಮಾನ್ಯ ವಲ್ಲೆಂದ (ಪ)

[57] ತನಗಿ (ಪ)

[58]ತನಗಿ (ಪ)

[59] ಸುವೆ (ಭ, ಪ)

[60] ಸುವೆ (ಭ, ಪ)

[61] ಮತಿ | ಯೋ (ಭ)

[62] ಮತಿ | ಯೋ (ಭ)

[63] ತಪ್ಪಿ ನಡೆ (ವಿ), ತೆಪ್ಪ ಗೆಡೆ (ಭ)

[64] ತಪ್ಪಿ ನಡೆ (ವಿ), ತೆಪ್ಪ ಗೆಡೆ (ಭ)

[65]  ತಾಪೈ | ಸರಿಸದವರಿವರೆಂದೆನುತ ತಾ | ನಿರುಕಿಸುತ ಗಗನವನ (ಪ)

[66] ತಾಪೈ | ಸರಿಸದವರಿವರೆಂದೆನುತ ತಾ | ನಿರುಕಿಸುತ ಗಗನವನ (ಪ)

[67] ಗರಿ (ವಿ),

[68] ಗರಿ (ವಿ),

[69] ತಿರುಗು (ಭ)

[70] ತಿರುಗು (ಭ)

[71] ಲಾನಖ (ಪ)

[72] ಲಾನಖ (ಪ)

[73] ಕೋದು (ಭ), ತೆಗೆದು (ವಿ)

[74] ಕೋದು (ಭ), ತೆಗೆದು (ವಿ)

[75] ದೀರ್ಘ (ಭ)

[76] ದೀರ್ಘ (ಭ)

[77] ತಾಪ (ಭ)

[78] ತಾಪ (ಭ)

[79] ಮಾಳಾಪ (ಭ)

[80] ಮಾಳಾಪ (ಭ)

[81] ನಂತುರಿವ ಕೆಂಡದ (ಭ)

[82] ನಂತುರಿವ ಕೆಂಡದ (ಭ)

[83] ನಾವಳಿಯ (ವಿ)

[84] ನಾವಳಿಯ (ವಿ)

[85] ಮಥಿಸುತ್ತ (ವಿ)

[86] ಮಥಿಸುತ್ತ (ವಿ)

[87] ನಂತುರಿವ ಕೆಂಡದ (ಭ)

[88] ನಂತುರಿವ ಕೆಂಡದ (ಭ)

[89] ಶಿವಶಿವ (ವಿ)

[90] ಶಿವಶಿವ (ವಿ)

[91] ಗಳೀ (ವಿ)

[92] ಗಳೀ (ವಿ)