ಅರಿವೆ

[1]ನಾನೆಂ[2] ತೆನಲು ಕೆಂಡದ
ತೆರನಹುದು ಗಂಟಲಲಿ ನೀ ಬಾ
ಯ್ದೆರೆದು ನುಂಗುತ್ತಿರಲು ಬಂದಡೆ ವಿಪ್ರರದರೊಳಗೆ
ಕುರುಹು [3]ವಿದುವೆಂ[4]ದೆನಲು ಚರಣದ
ಲೆರಗಿದನು ಬಲವಂದು ಮನದಲಿ
ಮರುಗಬೇಡೆಂದತ್ತಲಂಬರತಳಕೆ ಲಂಘಿಸಿದ ೨೧

ರೂಢಿಯಲ್ಲಾಡಿದುದು ಪದಹತಿ
ಗೋಡಿದರು ಖೇಚರರು ಪಕ್ಷವ
ನೀಡಲಿಂಬಿಲ್ಲಂಬರವನೆನಲೈದಿದನು [5]ಖಳರ[6] ಬೀಡ ಮುತ್ತಿದನೊತ್ತಿದನು ಕಡೆ
ವೀಡು ಕಲಕಲು ಪದರಜ[7]ದಿ ತಮ[8] ಕೊಡೆ ಕವಿದುದು ಕಂಗಳಿದಿರನು ಕಾಣಲರಿದೆನಲು     ೨೨

ಹಾಸಿದನು ತುಟಿಯೊಂದನಿಳೆಗಾ
ಕಾಶಕೊಂದನು ನೆಗಹಿದನು ಸಲೆ
ಸಾಸಿಗರು ಬಹ ಮಾರ್ಗದಿದಿರಲಿ ನಿಂದು ಖಗರಾಜ
ಆ [9]ಸುರಾರಿ[10] ಗಳೇನಿದೇನೈ
ದೇಶವಿಪ್ಲವನೆನುತ ಕವಿದರು
ನಾಶಕಾರಿಗಳೈದೆ ಕೈದುವ ಸೆಳೆದು ತಮತಮಗೆ      ೨೩

ಕೆಡಿಸಿದುದು ಕಂಗಳನು ಕತ್ತಲೆ
ತಡತಡವಿ ಪಕ್ಕವನು ತುಂಡವ
ನಡಸಿ ಹೊಕ್ಕುದು ಬಾಯನಿದೆಲಾ ಮಾರ್ಗವೆಂದೆನುತ
ಪಡೆ ನಿಷಾದಾಧಿಪರ ಸಹಿತವ
ನೊಡನೊಡನೆ ನುಂಗಿದನು ಹಸಿವೆಗೆ
ಕಡೆಯ ಕಾ[11]ಣೆನು[12]ಕಾಣೆನವಸಾನವನು ಖಳಕುಲದ  ೨೪

ಕಟ್ಟೆಯೊಡೆದಂದದಲಿ ಬಾಯನು
ದುಷ್ಟಮನದ[13]ನಿಷಾದಬಲ[14] ಕಂ
ಗೆಟ್ಟು ಹೊಕ್ಕುದು [15]ಹೊರಗೆ[16] ಕಳನಿನ್ನೊಬ್ಬನುಳಿಯನೆನೆ
ಸುಟ್ಟನೊಬ್ಬನು ಗಂಟ[17]ಲನು[18] ಹಾ
ಕೆಟ್ಟೆ [19]ನಾರೋ[20] ವಿಪ್ರನೆನುತವೆ
ದುಷ್ಟಮರ್ದನನಾತನನು ನುಡಿಸಿದನು ತವಕದಲಿ      ೨೫

ಆರು ಹಾರುವ [21]ನೆಲವೋ[22] ನಿನಗೀ
ಯೂರಲಿರ [23]ವೇಕೀ[24] ನಿಷಾದಕು
ಮಾರಿ ಹೆಂಡತಿ ತನಗೆ ಲೇಸಾಯ್ತಣ್ಣ ಹೊರವಡೆನೆ
ನಾರಿ ಸಹಿ[25]ತಲ್ಲದೆ ವಿ[26]ನಿರ್ಗಮ
ಸೇ[27]ರದೆನೆ[28] ಕೈಗಾಯ್ದೆನೇಕೆ ವಿ
ಚಾರ[29] ವೇಕಧಿ[30]ದೈವವಲ್ಲಾ ವಿಪ್ರ [31]ರೆನಗೆಂ[32] ದ     ೨೬

ಹೊರವಡೆನೆ ಹೊರವಂಟನತ್ತಲು
ಸೆರಗ[33]ಹಿಡಿದಂಗನೆಯನಾದ್ವಿಜ[34] ಹೊರವಡಿಸೆ ಹರಸಿದನು ನೆರೆ ಬಲವಂತನಾಗಿನುತ
ತೆರೆದ ಬಾಯನು ಮುಚ್ಚಿದನು ಬಳಿ
ಕೆರಗಿ ಖಗನಾ ವಿಪ್ರನಂಘ್ರಿಗೆ
ಕೊರತೆ [35]ವೋಯ್ತಾ[36] ಹಾರವೆಂದನು ತಡವಿ[37]ತೆನೆ[38]ಯುಸಿರು           ೨೭

ಮತ್ತೆ ಖಗನಲ್ಲಿಂದ ಹಾಯ್ದನು
ತುತ್ತ ತೋ[39]ರೆಂದೆ[40]ನುತ ತಂದೆಯ
ಹತ್ತಿರಕೆ [41]ಪೊಡಮಟ್ಟು[42] ನಿಂದಿರೆ ಕಶ್ಯಪನು ನಗುತ
ಪುತ್ರ [43]ಬಂದೆಯಿದೇನು ಹೇಳು[44] ಮ
ಹೋತ್ತಮನೆ ಹೇಳೆನುತ ನುಡಿಸಿದ
ನುತ್ತಮಾಂಗವ ತಡಹಿ [45]ಕಡು[46] ಮೋಹದ ಕುಮಾರಕನ       ೨೮

ತಾಯಿ ತನಗಾಹಾರವನುಕೊಡ
ಲಾಯಿತುದರಾರ್ಧಕ್ಕೆ ಕೊಡು ತರು
ವಾಯಲೆನಗೆನಲದನು ಕೇಳುತ ಕಶ್ಯಪನು ನಗುತ
ಆಯುವಂತನೆ ಕೊಟ್ಟೆನಿದುಕೊ
ಳ್ಳಾಯವನು ಗಜಕಚ್ಚಪಂಗಳ
ಕಾಯದಾಹಾರವನು ಸಾ[47]ಗರದಾ ತಡಿಯಲೆಂದ[48]    ೨೯

ಆರು ಯೋಜನದುದ್ದ [49]ಗಜವೀ
ರಾರು[50] ಯೋಜನದಗಲ ನೀಳವು
ಕೂರುಮನು ಯೋಜನ ಸಮುಚ್ಚಯದಲ್ಲಿ ಗುಣಯುತವು
ಕಾರಣದಲುತ್ಪನ್ನವಾದುವು
ವೀರ ನೀನಾ ಪ್ರಾಣಿಗಳನಾ
ಹಾರವನು ಮಾಡೆನಲು ನುಡಿದನು ತಂದೆಗಾ ವಿಹಗ   ೩೦

ತಂದೆ ಹೇಳೆನಗೇನು ಕಾರಣ
ದಿಂದ ಗಜಕಚ್ಚಪರು ಜನಿಸಿ[51]ದ
ರೆಂದದನು[52] [53]ವಿವರಿ[54]ಸುವುದೆನೆ ವೃತ್ತಾಂತ ಸಂಗತಿಯ
ಕಂದ ಕೇಳುಪಕಥೆಯನೆಸೆದರು
ಮಂದಮತಿಗಳು ವಿಪ್ರರಿಬ್ಬರು
ಬಂದ ಬವಣೆಗೆಯನು ಸವಿಸ್ತರವಾಗಿ ಕೇಳೆಂದ         ೩೧

ಧರೆಯಲೊಡಹುಟ್ಟಿದವರಿರ್ವರು

ವರ ವಭಾವಸು ಸುಪ್ರತೀಕಾ
ಖ್ಯ್ರ ವಭ್ವ [55]ಬೇಡಿ[56] ಹಿರಿಯನನಾ ವಿಭಾವಸುವ
ಹಿರಿದು ದಿನವಂಡಲೆದಡಾತನು
ಕೆರಳಿ ನುಡಿದನು ಪಾಪಿ ಧರ್ಮವ
ನರಿಯೆ ಹೋಗನುಚಿತವಿದೆಂದನು ಸುಪ್ರತೀಕಂಗೆ      ೩೨

ಹುರಿಯ ಬಿಡಿಸಿದಡಹುದೆ ಬಲು ಹೆದೆ
ಮರುಳೆಯೊಡಹುಟ್ಟಿದವರೊಂದಾ
ಗಿರದೆ ಬೇರಾಗಿರ್ದಡಹು[57]ದೇ ಮನಕೆ ಸಂತೋಷ[58] ಗುರುವಿರೋಧವ್ಯಸನ [59]ಭಯ[60]ಮ
ತ್ಸರಮಮತೆಲೋಭಂಗಳೆಂಬಿವು
ತರಲ ನೀನದನರಿಯೆಯೆಂದನು ತಮ್ಮನನು ಜರಿದು   ೩೩

ತೊಗಲು ಹರಿದರೆ ಮೈಯ [61]ನೊಣವದು[62] ಹೊಗುವವೊಲು ಬೇರಾದಡಾ ದಾ
ಯಿಗರು ಮನವನು ಕಿಡಿಸುವರು [63]ಕುಹಕಿ[64] ಗಳು ಭೇದದಲಿ
ಬಗೆಯೆ ಬಂಧುಸ್ನೇಹ ಕೆಡುವುದು
ಮುಗುದ [65]ಮಾಣಾ[66] ಮಾತನೆಂದರೆ
ಮೊಗದಿರುಹಿದನು ಸುಪ್ರತೀಕನು ಕೇಳದನುನಯವ   ೩೪

ಮದಮಖನ ಗಜವಾಗಿ ಬೀಳೆಂ
ದೊದರಿ ಶಪವನಿತ್ತಡಾತನು
ಹದುಳ ನೀನಹುದೆನುತ ಕೊಟ್ಟನು ಮರಳಿ ಶಾಪವನು
ಹ್ರದದ ಕಚ್ಚಪನಾ[67]ಗುಯೆನುತೊಂ[68] ದುದರದಲಿ ಜನಿಸಿದವರೀಪರಿ
ಯೆದೆಯ ಕಿಚ್ಚನು ಕಳೆದುಕೊಂಡರು ಮಗನೆ ಕೇಳೆಂದ ೩೫

ಅರ್ಥಲೋಭದಲವರು ವಿಗತ
ಸ್ವಾರ್ಥರೆನಿಸಿದರದುನಿಮಿತ್ತವೆ[69]ಯರ್ಥಲೋಭವನುಳಿವುದರಿವುಳ್ಳವರು ಸದುಗತಿಯ[70] ಅರ್ಥಿಸುವಡೆಲೆ ಮಗನೆ [71]ಕೇಳು[72]ಕ
ದರ್ಥನಕೆ ಕಾರಣವದಲ್ಲೈ
ವ್ಯರ್ಥ[73]ವನು[74] ಮಾಡುವುದು ಬಹಳ ತಪೋವ್ರ[75]ತವ[76]ನೆಂದ   ೩೬

ಜನಿಸಿದರು ಬಳಿಕವರು ಶಾಪವ
ನನುಕರಿಸಿ ಗಜಕಚ್ಚಪಾಂಗವ
ನನುಪಮನೆ ತಾವೊಂದೆಡೆಯಲಾ ಪೂರ್ವವೈರದಲಿ
ವನವ ಹೊರವಂಟಾ ಮಹಾಗಜ
ವನುಜಕಚ್ಚಪ[77]ನಿರ್ದ[78] ಮಡುವಿಗೆ
ಕನಲುತೈತಂ[79]ದರಸಿ[80] ಕಾಣದೆ ಬೃಂಹಣವ ಮಾಡೆ   ೩೭

ಕೇಳುತವೆ ಗಜಬೃಂಹಣವನಾ
ಭೀಳ ಕಚ್ಚಪನಾ[81]ರವವನದ
ನಾಲಿಸುತ[82] ಕರಚರಣಹತಿಯಲಿ ಜಲಚರ[83]ವ್ರಜವ[84] ಬೀಳೆಹೊಯ್ಯುತ ಕಮಲವನವನು
ತೂಳಿದುಳಿಯುತ ಕುಮುದ ನಿಕರವ
ಕಾಲನನು ಕಾಣಿಸುತ ಹೊರವಡುವುದು ತತುಕ್ಷಣಕೆ    ೩೮

ಮತ್ತಗಜವಾಕೂರ್ಮನನು ಕಾ
ಣುತ್ತ ಸುಂಡಿಲ ಸುತ್ತಿ ದಂತದ
ಲೊತ್ತಿ ಕಾಲಲಿ ತುಳಿದು ಲಾಂಗೂಲಾಗ್ರದಲಿ ಹೊಡೆದು
ಮೃತ್ಯುವನು ಕಾಣಿಸಲು [85]ಕೊಳ್ಳದೆ[86] ಕಿತ್ತಡದ ಕೋಪದಲಿ ಬಿಡೆ ಹಳ
ಚುತ್ತ ಬೃಹಣ[87]ರವವ[88] ಮಾಡುತ್ತಿಹುದು ಕೇಳೆಂದ     ೩೯

ತಿನ್ನು ಹೋಗವನೆರಡ ನಾ ಕೊ
ಟ್ಟನ್ನವದು [89]ಮೇಲುಳ್ಳ[90] ಕಾರ್ಯವ[91]ನೆನ್ನು ಬಂದೆಯದೇನು[92] ಕಾರಣ ತೀವ್ರ ವೇಗದಲಿ
ತನ್ನ ಸಿಂಗನೆ ಹೇಳು ನೀನೆನೆ
ಪನ್ನಗರು ಪೀಯೂಷಕಾಂಕ್ಷೆಯ
ಲೆನ್ನುನಟ್ಟಿದರೆವ್ವೆಯನು ಬಿಡಹೇಳಿಸಿದರೆಂದ  ೪೦

ಅಮೃತವನು ತಹೆನಪ್ಪ ನಿಮ್ಮಡಿ
ಮಮತೆಯುಂಟೆಲೆ ತಾಯ ಸೆರೆ ನಿ
ರ್ಗಮಿತವಾಗಲಿ ತಲೆಯಲಿಡು ಕರತಳವನೆಂದೆನಲು
ಅಮಲಹೃದಯನೆ ಜಯಿಸು ಹೋಗಾ
ಅಮರನು ಸುಖಿಯಾಗು ಹೋಗೆನು
ತಮರಿದನು ಕರತಳವನಂಗದಲಧಿಕ [1]ಕರುಣ[2]ದಲಿ     ೪೧

*ರಕ್ಷಿಸಲಿ ನಿನ್ನನು ಧರಾಶ್ರಿತ
ಭಕ್ಷಕಾನಿಲಜಲನಭಂಗಳು[3]ಕುಕ್ಷಿಯನು ಮಿಗೆ ರವಿಶಶಿಯು ತಾರಾಗ್ರಹಗಳೊಲಿದು[4] ರಕ್ಷಿಸಲಿ ಕಮಲಜನು ಗೌರೀ
ದಕ್ಷಮಖವಿಧ್ವಂ[5]ಸಿಗಲು[6] ನೆರೆ
ರಕ್ಷಿಸಲಿ ನಿತ್ಯಾತ್ಮನಾರಾಯಣನು ಹೋಗೆಂದ          ೪೨

ತೃತೀಯ ಸಂಧಿ ಸಮಾಪ್ತ


[1] ಹರುಷ (ವಿ)

[2] ಹರುಷ (ವಿ)

[3] ರಕ್ಷಿಸಲಿ ರವಿಶಶಿಸುತಾರಾಗ್ರಹನಿಕರವೊಲಿದು || (ವಿ).

[4] ರಕ್ಷಿಸಲಿ ರವಿಶಶಿಸುತಾರಾಗ್ರಹನಿಕರವೊಲಿದು || (ವಿ).

[5] ಸಕರು(ಭ).

[6] ಸಕರು(ಭ).

* ’ಪ’ ಪ್ರತಿಯಲ್ಲಿ ಈ ಪದ್ಯವು ಹೀಗಿದೆ : ರಕ್ಷಿಸಲ ಇಂದುಧರ ಬಲವನು | ರಕ್ಷಿಸಲಿ ರವಿಶಶಿಯನಲನಿಲ | ರಕ್ಷಿಸಲಿ ತಾರೆಗಳು ಸಹಿತೆಲ್ಲರು ಸುರಾದಿಗಳು || ರಕ್ಷಿಅಲಿ ಕಮಲಾಕ್ಷ ಗೌರ್ಯ | ಭ್ಯಕ್ಷಮುಖ್ಯವರಿಂಚಿಗಳು ನೆರೆ ರ|ಕ್ಷಿಸಲ ನಿತ್ಯಾತ್ಮನಾರಾಯಣನು ಕರುಣದಲಿ ||

[1] ನೀನಿಂ (ಪ)

[2] ನೀನಿಂ (ಪ)

[3] ಹೋಗರಿ (ವಿ)

[4] ಹೋಗರಿ (ವಿ)

[5] ಖಗನ || (ಪ)

[6] ಖಗನ || (ಪ)

[7] ವು ಜಗ | (ಪ)

[8] ವು ಜಗ | (ಪ)

[9] ಸುರಾಳಿ (ಭ)

[10] ಸುರಾಳಿ (ಭ)

[11] ಣದೆ (ಭ)

[12] ಣದೆ (ಭ)

[13] ನಿಶಾಟಜನ (ಪ, ಭ)

[14] ನಿಶಾಟಜನ (ಪ, ಭ)

[15] ಧರೆಗೆ (ಪ)

[16] ಧರೆಗೆ (ಪ)

[17] ಲಲಿ (ವಿ)

[18] ಲಲಿ (ವಿ)

[19] ನಾರಿವ (ಪ)

[20] ನಾರಿವ (ಪ)

[21] ನಯ್ಯ (ವಿ)

[22] ನಯ್ಯ (ವಿ)

[23] ಲಿಕೆಯೇ (ಪ)

[24] ಲಿಕೆಯೇ (ಪ)

[25] ತಲ್ಲಿರದೆ (ಪ)

[26] ತಲ್ಲಿರದೆ (ಪ)

[27] ರಿತೆನೆ (ಪ)

[28] ರಿತೆನೆ (ಪ)

[29] ವೆನಲಧಿ (ಭ)

[30] ವೆನಲಧಿ (ಭ)

[31] ಕುಲವೆಂ (ಭ), ವರರೆಂ (ವಿ, ಮು)

[32] ಕುಲವೆಂ (ಭ), ವರರೆಂ (ವಿ, ಮು)

[33] ಬೀಸಿದನಂಗ ನೆಗೆಯವ (ಪ)

[34] ಬೀಸಿದನಂಗ ನೆಗೆಯವ (ಪ)

[35] ಯಾಯ್ತಾ (ವಿ)

[36] ಯಾಯ್ತಾ (ವಿ)

[37] ಕೊನೆ (ವಿ)

[38] ಕೊನೆ (ವಿ)

[39] ರೆನಗೆ (ಭ)

[40] ರೆನಗೆ (ಭ)

[41] ಹೊರವಂಟು (ಪ, ಮು)

[42] ಹೊರವಂಟು (ಪ, ಮು)

[43] ಬಂದೈ ಹೇಳದೇನು (ಪ), ಬಂದೈ ಏನು ಹೇಳು (ವಿ)

[44] ಬಂದೈ ಹೇಳದೇನು (ಪ), ಬಂದೈ ಏನು ಹೇಳು (ವಿ)

[45] ದನು (ಪ)

[46] ದನು (ಪ)

[47] ತಡಿಯಲಿದೆಯೆಂದ (ಪ)

[48] ತಡಿಯಲಿದೆಯೆಂದ (ಪ)

[49] ದಲಿಯೀ | ರಾರು (ಪ), ಗಜವಿ | ನ್ನಾರು (ಭ)

[50] ದಲಿಯೀ | ರಾರು (ಪ), ಗಜವಿ | ನ್ನಾರು (ಭ)

[51] ದ್ವಂದ್ವವನು (ಭ)

[52] ದ್ವಂದ್ವವನು (ಭ)

[53] ವರ್ಣಿ (ಪ)

[54] ವರ್ಣಿ (ಪ)

[55] ಬಡೆ(ಭ) | ಈ ಮೂರು ಚರಣಗಳು ’ವಿ’ ಮತ್ತು ’ಮು’ ಪ್ರತಿಗಳಲ್ಲಿಲ್ಲ.

[56] ಬಡೆ(ಭ) | ಈ ಮೂರು ಚರಣಗಳು ’ವಿ’ ಮತ್ತು ’ಮು’ ಪ್ರತಿಗಳಲ್ಲಿಲ್ಲ.

[57] ದ ಮಹಾಘ ಸಂದೋಹ || (ವಿ).

[58] ದ ಮಹಾಘ ಸಂದೋಹ || (ವಿ).

[59] ಖತಿ (ಭ), ಕತಿ (ವ)

[60] ಖತಿ (ಭ), ಕತಿ (ವ)

[61] ಲಾ ನೊಣ (ವಿ, ಮು)

[62] ಲಾ ನೊಣ (ವಿ, ಮು)

[63] ಕುಮತಿ (ವಿ)

[64] ಕುಮತಿ (ವಿ)

[65] ಗೆನುತಲೊಂ (ವಿ)

[66] ಗೆನುತಲೊಂ (ವಿ)

[67] ಗೆನುತಲೊಂ (ವಿ), ಗೆನುತ್ತೊಂ (ಭ)

[68] ಗೆನುತಲೊಂ (ವಿ), ಗೆನುತ್ತೊಂ (ಭ)

[69] ಸ್ವಾರ್ಥವನು ಮಾಡುವರು ಪಡೆವರೆ ಸದುಗತಿಯನೆಂದ || (ಪ)

[70] ಸ್ವಾರ್ಥವನು ಮಾಡುವರು ಪಡೆವರೆ ಸದುಗತಿಯನೆಂದ || (ಪ)

[71] ಅರ್ಥ (ಪ)

[72] ಅರ್ಥ (ಪ)

[73] ರನು (ವಿ)

[74]  ರನು (ವಿ)

[75] ತರ (ವಿ)

[76] ತರ (ವಿ)

[77] ನಿರಲು (ಪ)

[78] ನಿರಲು (ಪ)

[79] ದೆರಗಿ (ಪ)

[80] ದೆರಗಿ (ಪ)

[81] ಹ್ರದವಲ|ಲಾಳಿಸುತ (ವಿ)

[82] ಹ್ರದವಲ|ಲಾಳಿಸುತ (ವಿ)

[83] ಪ್ರಕರ (ಪ)

[84] ಪ್ರಕರ (ಪ)

[85] ನೆರೆಯದೆ (ವಿ)

[86] ನೆರೆಯದೆ (ವಿ)

[87] ತನವ(ವಿ), ವನ್ನು (ಪ)

[88] ತನವ(ವಿ), ವನ್ನು (ಪ)

[89] ಮಿಗಲುಳ್ಳ (ಪ)

[90] ಮಿಗಲುಳ್ಳ (ಪ)

[91] ನಿನ್ನು ಹೇಳೈ ಬಂದ (ಮ)

[92] ನಿನ್ನು ಹೇಳೈ ಬಂದ (ಮ)