ಸೂಚನೆ:
ಪಕ್ಷಿರಾಜಮಹೇಶ್ವರನು ನೆರೆ
ಭಕ್ಷಿಸಿದ

[1]ನು ಮಹೋಗ್ರ[2] ಖಳರನು
ರಕ್ಷಿಸಿದನಾ[3]ವಾಲಖಿಲ್ಯಮಹಾಮುನೀಶ್ವರರ[4]

ಪದನು:
ಕೇಳು ಶೌನಕ ಬಂದನಾ ನಾ
ಗಾಲಯಕೆ ನಾಗಾಂತಕನು ಸುವಿ
ಶಾಲಕಲ್ಪದ್ರುಮಲತಾವೇಷ್ಟಿತವನಾಂತರಕೆ
ಲೋಲತರ[5]ಸಾರಂಗ[6]ಭೃಂಗೋ
ತ್ತಾಲ[7]ವಿವಿಧ[8]ವಿಹಂಗಕಿನ್ನರ
ಜಾಲ[9]ಸೇವಿತರಮ್ಯರತ್ನ[10] ಸ್ಥಳ ಮಹಾವನಕೆ           ೧

ಫಲಿತ ಕುಸುಮಿತ ಪಲ್ಲವಿತ ತರು
ಗಳಲಿ ಪುಷ್ಪಾಮೋದ ರಮ್ಯಾ
ನಿಲನಿರಂತರವಿರಚಿತೋದ್ಯಾನದಲಿ ಸಾಗರದ[11]ಸಲಿಲವೀಚೀಭಂಗರಂಗೋ[12] ಚ್ಚಲಿತ ಜಲಚರನಿಕರದಲಿ ಮಂ
ಡಲಿತ ಪಾವನ [13]ಭನ[14]ತಲೆದುಗಿಸಿತು ಖಗಪತಿಯ    ೨

ಇಳಿದು ನಿಜ ಭವನದಲಿ ಮತ್ತಾ
ಖಳ ಮಹೋರಗನಿಕರ[15]ವಂದೆಲ
ವೆ[16]ಲವೋ ದಾಸಿಯ ಮಗನೆ ಬಲ್ಲಿದನಾದೆ ಸತ್ವದಲಿ[17]ಜಲನಿಧಿಯಲಿ[18]ನ್ನೊಂದು ರಮ್ಯ
ಸ್ಥಳಕೆ ನೀ ಹೊತ್ತೊಯ್ವುದೆಮ್ಮನು
ಹೊಳೆದು ಹೋದರೆ ಮಾಣದೆಂದರು ಕದ್ರುನಂದನರು  ೩

ಎಂ [19]ದಡ[20]ದನಾಲಿಸುತ ಮನದಲಿ
ನೊಂದು ನುಡಿದನು ತಾಯೆ ತೊತ್ತಾ
ದೆಮ್ದು ಮೊದಲಾಗೀ ಮಹೋರಗಸಂತತಿಗೆ ನೀನು
ಎಂದು ಪರಿಯಂತೇನು ಕಾರಣ
ವೆಂದೆನಲು ಕೇಳುತ್ತ ತನ್ನಯ
ನಂದನಂ [21]ಗಿದನೆಂದಳಾಗಲೆ[22] ವಿನತೆ [23]ಸುರವಿನುತೆ[24]        ೪

ಮಗನೆ ನೀನಿದ[25]ನೇನ ಕೇಳುವೆ[26] [27]ಹುಗಿಸಿ ಬಡಿದಳು[28] ಕದ್ರು ತನ್ನನು
ಮುಗುದೆಯನು ತಾವೊಂದು ತುರಗವ ಕಂಡೆವಬುಧಿಯಲಿ
ಭಗಿನಿ ಹೇಳೀ ತುರಗಬಾಲವ
ಬಗೆದು ಬಿಳಿದೋ ಕರಿದೊ ಹೇಳೆಂ
ದಗಡಿ[29]ಸಿದಡುಳ್ಳುದನು[30] ಹೇಳಿದೆನದನು ಬಿಳಿದೆಂದು ೫

ಅಲ್ಲ ಹುಸಿ ಕರಿದೆಂದು ಹೇಳಿದ[31]ಳಲ್ಲದುದನಾ ಕದ್ರು[32] ಪಣವೇ
ನಿಲ್ಲಿ ಸೋತರೆ ತೊತ್ತು ನಾವೊಬ್ಬೊಬರಿಂಗೆನುತ
ಅಲ್ಲಿ ಭಾಷೆಯಮಾಡಿ ಬಂದೆವು
ಕಳ್ಳ ಮಕ್ಕಳ ಕರೆದು ಹೇಳಿದ
ಳೆಲ್ಲರಿಗೆ [33]ನೀವ್ ತೇಜಿಪುಚ್ಚವ ಕರಿದುಮಾಡೆಂದು[34]   ೬

ಬೇಡ ತಮಗನ್ಯಾಯವೆನೆ ಕುಲ
ಗೇಡಿ [35]ಕೊಟ್ಟಳು[36]ಸರ್ಪಯಾಗವ
ಮಾಡಿ ಜನಮೇಜಯನು [37]ಕೊಲ್ಲಲಿ[38] ನಿಮ್ಮನೆಂದೆನುತ[39]ಜೋಡೆ[40] ಶಾಪವನಲ್ಲಿ ಕೆಲರವ
ಳಾಡಿದುದಕೆ ಹಸಾದವೆಂದರು
ಕೊಡೆ ಹೊಕ್ಕದು ತುರಗಬಾಲವ ಕಾಮರೂಪಿನಲಿ      ೭

ಹೋಗಿ ಕಂಡೆವು ಮರುದಿವಸ ಕರಿ
ದಾಗಿ ತೋರುವ ಬಾಲವನು ತಲೆ
ವಾಗಿಸಿತು ವಿಧಿ ತನ್ನನನ್ಯಾಯಪ್ರ [41]ವೃತ್ತಿ[42]ಯಲಿ
ಹೋಗಲದ[43]ಕೇನೆಲೆ[44] ಮಗನೆ ಹೊರು
ಭೋಗಿನಿಕರವನೆನ್ನ ಬಸುರಲಿ
ಭಾಗಧೇಯವಿಹೀನ ಜನಿಸಿದೆಯೆಂದಳಾತ್ಮಜಗೆ        ೮

ಎಂದಡೆಂದನು ಸಾಕುಸಾಕಿ
ಲ್ಲಿಂದಮೇಲೆಲೆ ತಾಯೆ ಫಡ ತೊ
ತ್ತೆಂದಡಾದರೆ ತೊಡೆವೆನವದಿರ ಭಾಳದಕ್ಕರವ
ಕೊಂದಳನ್ಯಾಯದಲಿ ಹರಹರ
ಹಿಂದಿನಿತು ದಿನ ಸಾಧ್ವಿಯನು ತಾ
ನಿಂದು ಮರುಗಿದಡೇನು ಫಲವಿನ್ನೆನುತ ಬಿಸುಸುಯ್ದ   ೯

ಶೋಕವನು ಬಿಡು ತಾಯೆ ತಾನಿರ
ಲೇಕೆ ಭಯ ನಿನಗುರಗ [45]ಗಿರಗರ[46] ಲೋಕವನು ನುಂಗುವೆನು ಮುನಿದರೆ ಪನ್ನಗೇಶ್ವರ
ಸಾಕು ನದೆ ಮನೆಗೆನಲು ಸತ್ಯವ
ನೇಕೆ ಕೆಡೆ[47]ಸುವೆ[48] ಮಗನೆ ಕೊಡು ಜಗ
ದೇಕವೀರನೆ ಕದ್ರುವೆಂದುದನೆಂದಳಾ ವಿನತೆ ೧೦

ತಾಯೆ [49]ಬೆಸಗೊಂಬುದು[50] ಮನೋಭಿ
ಪ್ರಾಯವೇನೆಂಬುದನು ಭುವನನಿ
ಕಾಯದೊಳಗೆನಗಿಲ್ಲ ದುರ್ಲಭವಾದ ಪುರುಷಾರ್ಥ
ಈಯಲಾಪೆನು ಕಾಯಲಾಪೆನು
ವಾಯುಭೋಜನರವ್ವೆಯೆಂದುದ
ನಾಯತಿಕೆಯನು ತಿಳಿದು ಹೇಳೆನಗೆಂದನಾ [51]ವಿಹಗ[52] ೧೧

ಎನಲು ಹೋದಳು ಕದ್ರುವಿನ ಮನೆ
ಗನುಪಮ ಮಹಾವನಿತೆ [53]ತನ್ನಯ
ತನಯನೆಮ್ದುದನೆಂದಳ [54]ವಳಾಲೋಚನೆಯ ಹದನ
ಮನದೊಳಗೆ ನಿಶ್ಚಯಿಸಿ [55]ದುರ್ಲಭ[56] ನೆನಿಪುದನೆ ಬೇಡುವೆನು ತರಲರಿ
ಯನು ವಿಹಂಗಮನೆನುತ ನುಡಿದಳು [57]ಕದ್ರು ಮಿಗೆ[58] ನಗುತ   ೧೨

ಅಮೃತವನು ತಂದೀವುದುರುವಿ
ಕ್ರಮಪರಾಕ್ರಮಶಕ್ತಿಯುಳ್ಳಡೆ
ಸುಮತಿ ಸೆರೆಯನು ಬಿಡುವೆನೆನ್ನಲಿ ಮಾತು ಹಲವಿಲ್ಲ
ಭ್ರಮಿತೆ ಹೋಗೆನೆ ಬಂದಳಾಸತಿ
ತಮವ ತಗುಳುವ ತೀರ್ವ ತೇಜದ
ಕಮಲ ಮಿತ್ರನವೋಲು ಮೆರೆವಾತ್ಮಜನ ಸನ್ನಿಧಿಗೆ     ೧೩

ಕಕ್ಕುಲಿತೆ ಬೇಡೆಲೆ ಮಗನೆ ಗಂ
ಟಿಕ್ಕಿ [59]ದಳು ತಾ ಬಿಡಿಸಹೇಳಿದ[60] ಳಕ್ಕನನು ಗೆಲಲರಿದು ಬೇಡಿದಳಮೃತವನು ತನಗೆ
ಎಕ್ಕತುಳದಲಿ ಹೋಗಿ ನೀ ತರ
ತಕ್ಕವನೆ ಸುಧೆಯನು ಸುರಾಲಯ
ಹೊಕ್ಕು ಹೊರ [61]ವಡುವರೆ ಸದರವಲ್ಲೆಂದಳಿಂದುಮುಖಿ[62]        ೧೪

ದೇವದಾನವ [63]ಮಥಿತ[64] ಸಾಗರ
ದೇವನಲಿ ಸಂಭವಿಸಿ ತಮ್ದಾ
ದೇವರಿಪುಗಳು ಕಾದಿ ಸತ್ತರು ಪಡೆಯದಮೃತವನು
ಅವನೈ ನೀನದನು ತಹರೆ ವಿ
ಭಾವಸುವಿನುರಿಹೊಕ್ಕು ಹೊರಗಾ
ಜೀವದಲಿ ಮರಳುವುದೆ ಮಾಣೆಂದಳು ಸರೋಜಮುಖಿ ೧೫

ಸಾಕು ಭಯಬೇಡವ್ವ ತನಗಾ
ಪಾಕಶಾಸನ [65]ನಲ್ಲ[66] ಮೇಣು ಪಿ
ನಾಕಿ ವಿಷ್ಣು [67]ವಿರಿಂಚರಿದಿರೇ ಕೊಡದಡಾಸುರರ[68] ಲೋಕವನು ನುಂಗುವೆನು ಸುಧೆಸಹಿ
ತೇಕೆ ಕಳವಳ ತಾಯೆ ತನ್ನನು
ನೂಕಿ ನೋಡದುಭುತವ ತೋರುವೆನೆಂದನಾ ಗರುಡ  ೧೬

ಎನಲು ಹರಸಿದಳಬಲೆ ಬಲ್ಲಿದ
ನೆನಿಸಿ ಬದುಕೆಂ [69]ದೆನುತ[70] ರಕ್ಷೆಯ
ನನುಪಮಗೆ ಕಟ್ಟಿದಳು ಪಕ್ಷಂಗಳೆನು ರಕ್ಷಿಸಲಿ
ಅನಿಲನಪರಾಂಗವನು ಚಂದ್ರಮ
ನನಲನೀ ಶಿರವನು ಶರೀರವ
ದನುಜರಿಪು ರಕ್ಷಿಸಲಿ ಸರ್ವವನೆಂದ [71]ಳಬುಜಾಕ್ಷಿ[72]    ೧೭

ಮಗನೆ ತಾ[73]ನನ್ನೆವರ[74] ಕೃಛ್ರಾ
ದಿಗಳನಾಚರಿಸುತ್ತ ಶಕ್ರಾ
ದಿಗಳನಾ ಋಷಿಗಳನು ಪಿತೃಗಳನಖಿಳದೈವವನು
ಮುಗಿದ ಕೈಯಲಿ [75]ಭಜಿಸು[76]ವೆನು ಶಾಂ
ತಿಗಳನಭ್ಯರ್ಥಿಸುವೆ [77]ನಿನಗೆಲೆ[78] [79]ಮಗನೆ[80]ನ್ನುವೆನೆಂದು ಹರಸಿದಳತ್ಮ [81]ಜನನೊಲೆದು[82]        ೧೮

ಸಸಿನವಿರು ಸಂತವಿರು ಫಡ ಚಿಂ
ತಿಸದಿರೇನರಿದವ್ವ ಸುರರನು
ಹೊಸೆದು ತಹೆನಮೃತವನು [83]ಸಾಕೀ ನಾಡ[84] ಮಾತುಗಳು
ಹಸಿದೆನಾವುದು ಹೇಳು ನೀನೆನ
ಗಶನವನು ಕಲ್ಪಿಸುವುದೆಂದೆನೆ
ನಸುನಗುತ ನುಡಿದಳು ಲತಾಂಗಿ ನಿಜಾತ್ಮಸಂಭವಗೆ  ೧೯

ಅದೆ ಸಮುದ್ರದ ಮಧ್ಯದಲಿ ತೋ
ರ್ಪುದು ನಿಶಾಚರಕೇರಿ ನೀ ಹೋ
ಗದರಲದೆಯದೆ ಮಗನೆ ತದ್ಬಾಂಧವರಸಂಖ್ಯಾತ
ಉದರಪೋಷಣ [85]ಮಾಡು[86] ಧರಣಿ
ತ್ರಿದಶರನು [87]ತಿನ್ನ[88] ದಿರು ಹೋಗೆನ
ಲದನು ಕೇ[89]ಳುತ[90] ವಿಪ್ರರನು ತಾನರಿವೆನೆಂತೆಂದ    ೨೦

[1] ನಘಕಾರಿ (ವಿ, ಮು, ಭ)

[2] ನಘಕಾರಿ (ವಿ, ಮು, ಭ)

[3] ವದನಕೈದಿದ ಭೂಸುರತ್ತಮನ || (ವಿ)

[4] ವದನಕೈದಿದ ಭೂಸುರತ್ತಮನ || (ವಿ)

[5] ಸಂರಂಭ (ಪ)

[6] ಸಂರಂಭ (ಪ)

[7] ರಾವ (ಭ, ವಿ)

[8] ರಾವ (ಭ, ವಿ)

[9] ಸಹಕಾರಾಂತರಂಗ (ಪ)

[10] ಸಹಕಾರಾಂತರಂಗ (ಪ)

[11] ಸಲಿಲ ವೀಥಿಯ ಭಂಗರಂಗೋ (ಭ), ಲಲಿತ ವೀಚಿ ತರಂಗ ಭಂಗೋ (ಪ)

[12] ಸಲಿಲ ವೀಥಿಯ ಭಂಗರಂಗೋ (ಭ), ಲಲಿತ ವೀಚಿ ತರಂಗ ಭಂಗೋ (ಪ)

[13] ವಾಗಿ (ಪ)

[14] ವಾಗಿ (ಪ)

[15] ಕರೆಕರೆ|ದೆ (ವಿ, ಮು)

[16] ಕರೆಕರೆ|ದೆ (ವಿ, ಮು)

[17] ಜಲಧಿಯಲ್ಲಿ (ಪ)

[18] ಜಲಧಿಯಲ್ಲಿ (ಪ)

[19] ದ್ದಪ)

[20] ದ್ದಪ)

[21] ಗತೆಂದಳಂದಾ (ಪ)

[22] ಗತೆಂದಳಂದಾ (ಪ)

[23] ದುಃಖದಲಿ (ಭ, ಪ)

[24] ದುಃಖದಲಿ (ಭ, ಪ)

[25] ಕೇತಕಳುಕಿದೆ (ಪ)

[26] ಕೇತಕಳುಕಿದೆ (ಪ)

[27] ಹೊಗಿಸಿ ಜಡಿದಳು (ಭ)

[28] ಹೊಗಿಸಿ ಜಡಿದಳು (ಭ)

[29] ಸುತ ಕೇಳಿದರೆ (ವಿ)

[30] ಸುತ ಕೇಳಿದರೆ (ವಿ)

[31] ಳಲ್ಲಿಯಲ್ಲದುದನ್ನು (ಪ)

[32] ಳಲ್ಲಿಯಲ್ಲದುದನ್ನು (ಪ)

[33] ನಿಜಮತವ ಕರಿದನು ಮಾಡಿ ನೀವೆಂದು (ಭ, ವಿ)

[34] ನಿಜಮತವ ಕರಿದನು ಮಾಡಿ ನೀವೆಂದು (ಭ, ವಿ)

[35] ಗಳನಾ (ಪ)

[36] ಗಳನಾ (ಪ)

[37] ವಧಿಸಲು (ಪ)

[38] ವಧಿಸಲು (ಪ)

[39] ನೋಡೆ(ಪ)

[40] ನೋಡೆ(ಪ)

[41] ಯ್ಕ್(ವಿ)

[42] ಯ್ಕ್(ವಿ)

[43] ಕೆನ್ನೆಲೆ(ಭ)

[44] ಕೆನ್ನೆಲೆ(ಭ)

[45] ನಿಕರದ (ಪ)

[46] ನಿಕರದ (ಪ)

[47] ಸಲೆ (ಪ)

[48] ಸಲೆ (ಪ)

[49] ನೀ ಬೆಸಗೊಳು (ವಿ)

[50] ನೀ ಬೆಸಗೊಳು (ವಿ)

[51] ಗರುಡ (ವಿ, ಮು)

[52] ಗರುಡ (ವಿ, ಮು)

[53] ತನಯನು | ನೆನೆದುದಕೆಯೇನೆಂದಡ (ಪ)

[54] ತನಯನು | ನೆನೆದುದಕೆಯೇನೆಂದಡ (ಪ)

[55] ದುರ್ಘಟ (ಭ)

[56] ದುರ್ಘಟ (ಭ)

[57] ಕಮಲಮುಖಿ (ಪ, ಭ)

[58] ಕಮಲಮುಖಿ (ಪ, ಭ)

[59] ದೆನು ತಾ ಬಿಡಿಸಹೋದವ (ಪ, ಮು)

[60] ದೆನು ತಾ ಬಿಡಿಸಹೋದವ (ಪ, ಮು)

[61] ವಂಡುವರೆ ಸದರವೆಯೆಂದಳಾ ವಿನತೆ (ವಿ)

[62] ವಂಡುವರೆ ಸದರವೆಯೆಂದಳಾ ವಿನತೆ (ವಿ

[63] ಮಥಿಸೆ (ಪ)

[64] ಮಥಿಸೆ (ಪ)

[65] ಬಲ್ಲ (ಪ)

[66] ಬಲ್ಲ (ಪ)

[67] ವಿರಿಂಚಿಗಳು ಬಲ್ಲರು ಸುರಾಸುರರು || (ಪ)

[68] ವಿರಿಂಚಿಗಳು ಬಲ್ಲರು ಸುರಾಸುರರು || (ಪ)

[69] ದಾಕೆ (ವಿ), ದೆನಲು (ಪ)

[70] ದಾಕೆ (ವಿ), ದೆನಲು (ಪ)

[71] ಳಾ ವಿನತ (ವಿ, ಮು)

[72] ಳಾ ವಿನತ (ವಿ, ಮು)

[73] ನನವರತ

[74] ನನವರತ

[75] ಬೇಡು(ಭ)

[76] ಬೇಡು(ಭ)

[77] ನೈಸಾ (ಭ, ಪ)

[78] ನೈಸಾ (ಭ, ಪ)

[79] ಸಿಗನೆ (ಭ, ಪ)

[80] ಸಿಗನೆ (ಭ, ಪ)

[81] ಜಂಗೊಲಿದು (ಪ)

[82] ಜಂಗೊಲಿದು (ಪ)

[83] ಸಾಕಿನ್ನಿದರ (ವಿ)

[84] ಸಾಕಿನ್ನಿದರ (ವಿ)

[85] ವಹುದು (ವಿ)

[86] ವಹುದು (ವಿ)

[87] ನುಂಗ (ಪ)

[88] ನುಂಗ (ಪ)

[89] ಳಿದ (ಭ)

[90] ಳಿದ (ಭ)