ಸಿಕ್ಕಿದೆನಲೈ ಮಗನೆ ಸವತಿಯ
ತೆಕ್ಕೆಯಲಿ ಬರಿ ಮಾತುಗಳ ಬಲೆ
ಯಿಕ್ಕೆ
ಮಕ್ಕಳನು ನುಂಗುವೆನು ತಾ ಬಡ
ಹಕ್ಕಿಯೆನ್ನದಿರವ್ವ ಸಂಶಯ [3]ಬೇಡ[4] ಹೋಗೆಂದ 21
ಎನಲು ಹರಸಿದಳಬಲೆ ಬಲುಗೈ
ಯೆನಿಸಿ ಬದು [5]ಕುವು[6] ದೆನುತ ಪುಳಕಕೆ[7]ತನು ನೆರೆಯದೆನೆ[8] ಹಿಗ್ಗಿದಳು [9]ಪುಳಕಾಂ[10]ಬುಪೂರದಲಿ
ನೆನೆದು ಹೊಂಗಿದಳಂಗವನು ನಿಜ
ತನಯನಂಗ [11]ದಲಮರಿಬಿಟ್ಟಳು[12]
ಮನದ ಸಂತಾಪವನು ತಕ್ಕಯಿಸುತ್ತ ಜಿಜ ಸುತನ ೨೨
ತೊತ್ತುಗೆಲಸವು ತಡೆವುದೇಳೆಲೆ
ಪುತ್ರಕಾಲಕ್ಷೇಪವಾಯ್ತೆನೆ
ಹೊತ್ತುಕೊಂಡನು ತಾಯೆ ತೋರೌ ಮನೆಯನೆಂದೆನುತ
ಹೆತ್ತ ತಾಯನು ಸವತಿಯಿದಿರಲಿ[13]ಹೊತ್ತು ತಂದಿಳುಹಿದನು ಕಾಣುತ
ಮತ್ತಿವೇನಾರಾತ[14]ನೆಂದಳು ವಿನತೆ [15]ಯೊಳು[16] ಕದ್ರು ೨೩
ಅರಿಯೆನಾರೆಂದಕ್ಕ ಮಗನೆಂ
ದೆರಗಿದನು ಕಾಲಿಂಗೆ ತನ್ನಯ
ಬರಿ [17]ಯದಾದುದ[18] ಕಂಡೆನಂಡವನಿರಿಸಿದಂತಿರಲು
ಮರುಗದಿರು ನೀನೆಂದಡೆಂದಳು
ಮರೆಯ ಮಾತೇ [19]ಸಾಕು[20] ಕೆಲಸವ[21]ನೊರ[22]ಗಿಸಿದೆ ಯಾರಾದಡಾಗಲಿಯೆಂದಳಾ ಕದ್ರು ೨೪
ತೊತ್ತೆ ಹೊರು ನೀನೆನ್ನನೆನ್ನಯ
ಪುತ್ರರನು ಮಗ ಹೊರಲಿ ಸಾಗರ
ದತ್ತಲಿದೆಲಾ ರಮ್ಯತರವಹ ಮನೆ ಮದಾತ್ಮಜರ
ಚಿತ್ತದಲಿ [23]ಲೋಲುಪ್ತಿ[24]ಯಾಯ್ತಾ
ಪುತ್ರಸಂದರ್ಶನದಲೆನಲಾ
ಮತ್ತಕಾಶಿನಿಯನು ವಿನತೆ ಹೊತ್ತಳು ಸರಾಗದಲಿ ೨೫
*ಹೊರು ಮಗನೆ ನೀನೆನಲು ಕುಳ್ಳಿರಿ
ಗರಿಯ ಕಡೆಸೆರಗಿನಲಿ ನೀವೆನು
ತೆರಗಿ [25]ಪಕ್ಕ[26]ವನೊಡ್ಡೆ ಹತ್ತಿದು [27]ವಾಗಲುರಗಗಳು[28]
ಹೊರಗುಳಿಯದಂತಯಿದೆ ಜಲಧಿಯ
ಕುರುಹದೆಲ್ಲಿಗೆ ಹೋಹೆವೆನುತವೆ
ಮಿರುಪ ಹೆಡೆವಣಿಕರದಲಿ ಬೆಳಗುತ್ತ ದಿಗುತಟವ ೨೬
ಮುಗುದೆ ನಡೆದಳು ಹೊತ್ತುಕೊಂಡಾ[29]ಹೊಗೆಮುಸುಡ[30] ಕದ್ರುವನು ಜಲಧಿಗೆ
ನೆಗೆದನತ್ತಲು ಪಕ್ಷಿರಾಜನು ಪವನವೇಗದಲಿ
ಗಗನಮಣಿಮಂಡಲದ [31]ಸನ್ನಿಧಿ
ಗೊ[32]ಗುಮಿಗೆಯ ರೋಷದಿ ಮಹೋರಗ
ನಿಗರ ಮುಮ್ಮಳಿಗೊಳಲು ಬಲು ಬಿರು ಬಿಸಿಲತಾಪದಲಿ ೨೭
ಹಾರಿದನು ಖಗನಂಬರಾಗ್ರಕೆ
ತೋರಿದನು ಬಿಸಿಲಿಂಗೆ ಬೆನ್ನನು
ಮೀರಿದನು ಖೇಚರರ [33]ವೀಥಿಯ[34] ಪನ್ನಗೇಶ್ವರರ
ಮಾರಿದನು ಬಲು ಮೂರ್ಛೆಗಳಲ್ನು[35]ಹೇರಿ[36]ದನು ಕದ್ರುವಿನ ಗಂಟಲ
ಕೂರಿದನು ಹಾಯೆ [37]ನಲು[38] ಸುಳಿದಾಡಿದನು ಗಗನದಲಿ ೨೮
ಸುತ್ತುದೋ ಉರಗಾಳಿ [39]ಹರಹರ
ಕೆ[40]ತ್ತುದೋ ನಾಗಾಲಯದ ಕದ[41]ಕಿತ್ತು[42]ದೋ ಕದ್ರುವಿ[43]ನ ಕುಲ[44]ಕಲ್ಪದ್ರುಮದ ಬೇರು[45]ಹೊತ್ತಿಹೊಗೆದುದೊ ನಾಗಕುಲ[46] ಖಗ
ಮೃತ್ಯುವಾದುದೆನುತ್ತ ಖೇಚರ
ರತ್ತ[47]ಲೊದರಲು[48] ಕೇಳಿದಳು [49]ಗೋಳುಗಳ[50]ನಾ ಕದ್ರು ೨೯
ಭಯದಲಂದಾ ಕಂಪಿಸಿದಳ
ನ್ವಯ[51]ವ ಕೆಡಿಸಿದನಕಟೆನುತ[52]ಹರಿ
ಹಯನನಭ್ಯರ್ಥಿಸಿದಳಂದಮರೇಂದ್ರ ಸೂಕ್ತದಲಿ
ಜಯ ನಮೋ ದೇವೇಂದ್ರ ಜಯ ಜಯ
ಜಯ ನಮೋ ಮಾಹೇಂದ್ರ ಜಯ ಜಯ
ಜಯ ಮಹಾ ಸುಖಸಾಂದ್ರಭಕ್ತಚಕೋರಕುಲಚಂದ್ರ ೩೦
ನೀನೆ ರವಿ ಶಶಿ ನೀನೆ ಪಾವಕ
ನೀನೆ ವರುಣನು [53]ಪವನ ಯಮನರ[54]
[55]ನೀನಲೇ[56]ವಿತ್ತೇಶನೀಶಾನನೌ ಸರೋಜಭವ
ನೀನೆ ನಾರಾಯಣನು ಭುವನ
ಸ್ಥಾನ[57]ರಕ್ಷಾ[58]ನಾಶಕಾರಣ
ನೀನೆ ಖಚರಾಚರ ಜಗನ್ಮಯನೆಂದಳಬುಜಾಕ್ಷಿ ೩೧
ಸ್ತುತಿಗೆ ತೆರಹಿಲ್ಲಕಟ ಕೆಟ್ಟೆನು
ಗತಿಯ ಕಾಣೆನು [59]ಬೇಗ ಕರುಣಿಸು[60]
ಶತಮಖನೆ [61]ಮಳೆಗರೆ[62] ಮಹೋರಗರೊಣಗಿಲಿನ ಮೇಲೆ
ಗತಿಯೆನಗೆ [63]ಮತಿ[64]ಯೆನಗೆ ನೀನೆನು
ತತುಳ ಮತಿಯಭ್ಯರ್ಥಿಸುತ್ತಿರೆ
ಶತಮಖನು ಕಡಿ ಮೇಘನಿಕರದ ಸಂಕಲೆಯನೆಂದ ೩೨
ಕಡಿ [65]ಹವೇ[66] ತಡವಾಯ್ತು ಮೇಘದ
ಗದಣವಾವರಿಸಿತ್ತು ನಭವನು[67]ಸಿಡಿಲು ಸಡಿಲಿದುವಾಡಿದುವು[68] ಮಿಂಚ[69]ಗಳ ಚೆಂಚುಗಳು[70]
ಗುಡಿಗಳಂತಿರೆ ಪಕ್ಷಿಗಳ ಪತಿ
ಯೊಡಲು ನನೆಯಲು ಗಗನಮಂಡಲ
ವೊಡೆದು ಸುರಿವಂದದಲಿ ಸುರಿದುದು ವೃಷ್ಟಿ [71]ಭೂತಳಕೆ[72] ೩೩
ಚೇತರಿಸಿದುದು [73]ವುದ್ರಿದವು[74]ರಗ
ವ್ರಾತ ಸಪ್ರಾಣಿಸಿದುದವದಿರ
ಮಾತೆ ಮಾಹೇಂದ್ರಸ್ತವವನುಡುಗಿದಳು ಹರುಷದಲಿ
ಪೂತು ಮಝ ಸುರನಾಥ ಕಾರು
ಣ್ಯಾತಿಶಯ ಕಿರಿದುಂಟಲಾಯೆನು
ತೀತನಿಳಿದನು ಸೂರ್ಯನಿರ್ಳಿ[75]ವಂತಿರಲು[76] ಸಾಗರಕೆ ೩೪
ಇಳುಹಿದನು ಪನ್ನಗರನಿವಹವ
ನುಳುಹಿದನು ನಿಜ ಜನನಿಯೊಲವನು
ಸಲಹಿದನು ಪನ್ನಗರನಾಪ್ತರನೊಲಿದು ಕರುಣದಲಿ
ಉಳುಹಿದನು ಕದ್ರುವಿನ ಖಾತಿಯ
ಕಳುಹಿದನು ಖಗಕುಲಶಿರೋಮಣಿ
ತಿಳುಹಿದನು [77]ತಾಯಳನನಧಿಕ[78] ಮನೋನುರಾಗದಲಿ ೩೫
ಇದು ಸಕಲ ಮಂಗಲ ಮಹೋ [79]ದಧಿ
ಯಿ[80]ದು ಸಕಲ ಪುರುಷಾರ್ಥ [81]ಸನ್ನಿಧಿ
ಯಿ[82]ದು ಸದಾಯುಷೀರ್ತಿ ಸಂಪ[83]ತ್ಕರವ[84]ಫೌರಘಹರ
ಇದನು ಹೇಳುವ ಕೇಳುವಾ ಸದು
ಹೃದಯರನು ರಕ್ಷಿಸುವ [85]ನೊಲಿದಾ[86]
ಪದುಮದೃಶ ನಿತ್ಯಾತ್ಮನಾರಾಯಣನು ಕರುಣದಲಿ ೩೬
ದ್ವಿತೀಯ ಸಂಧಿ ಸಮಾಪ್ತ
[1] ದಳು ಕಪಟದಲಿ ತನ್ನಯ ದಾಸಿಯೆಂದೆನುತ (ಪ) [2] ದಳು ಕಪಟದಲಿ ತನ್ನಯ ದಾಸಿಯೆಂದೆನುತ (ಪ) [3] ಕೆಂ (ವಿ, ಮು) [4] ಕೆಂ (ವಿ, ಮು) [5] ಕೆಂ (ವಿ, ಮು) [6] ಕೆಂ (ವಿ, ಮು) [7] ತನುವು ನೆರೆಯದೆ (ಪ) [8] ತನುವು ನೆರೆಯದೆ (ಪ) [9] ಹರುಷಾಂ (ಪ) [10] ಹರುಷಾಂ (ಪ) [11] ವ ನೇವರಿಸಿ ತಾ (ಭ) [12] ವ ನೇವರಿಸಿ ತಾ (ಭ) [13] ಸತ್ವನಿಧಿ ತಂದಿಳುಹಿದನು ಕಾ | ಣುತ್ತಲಿವನಾರಾತ (ಪ), ಸತ್ವನಿಧಿತಂದಿಳುಹಿಅನು ಕಾ | ಣುತ್ತಿರದೆಯಾರಾತ (ಭ) [14] ಸತ್ವನಿಧಿ ತಂದಿಳುಹಿದನು ಕಾ | ಣುತ್ತಲಿವನಾರಾತ (ಪ), ಸತ್ವನಿಧಿತಂದಿಳುಹಿಅನು ಕಾ | ಣುತ್ತಿರದೆಯಾರಾತ (ಭ) [15] ಯನು (ಭ) [16] ಯನು (ಭ) [17] ದೆಯಿದ್ದುದ (ವಿ) [18] ದೆಯಿದ್ದುದ (ವಿ) [19] ಸಾರು(ವಿ) [20] ಸಾರು(ವಿ) [21] ನೆರ (ಪ) [22] ನೆರ (ಪ) [23] ಲೋಲುಪತೆ (ವಿ) [24] ಲೋಲುಪತೆ (ವಿ) [25] ಪಕ್ಷ(ವಿ, ಮು). [26] ಪಕ್ಷ(ವಿ, ಮು). [27] ದುರಗಸಂದೋಹ (ವಿ) [28] ದುರಗಸಂದೋಹ (ವಿ) [29] ಹೊಗೆ ಮೊಗದ (ವಿ), ನಗೆ ಮೊಗದ (ಪ). [30] ಹೊಗೆ ಮೊಗದ (ವಿ), ನಗೆ ಮೊಗದ (ಪ). [31] ಸಮ್ಮುಖ | ಕೊ (ವಿ, ಮು) [32] ಸಮ್ಮುಖ | ಕೊ (ವಿ, ಮು)
* ೨೬ನೆಯ ಪದ್ಯವು ’ಪ’ ಪ್ರತಿಯಲ್ಲಿಲ್ಲ.
[33] ಪಥವನು (ವಿ, ಪ, ಮು) [34] ಪಥವನು (ವಿ, ಪ, ಮು) [35] ತೂರಿ (ಭ, ಪ) [36] ತೂರಿ (ಭ, ಪ) [37] ನುತ(ಪ) [38] ನುತ(ಪ) [39] ಹರಣವ | ತೆ (ಭ) [40] ಹರಣವ | ತೆ (ಭ) [41] ಕೆತ್ತು (ಭ) [42] ಕೆತ್ತು (ಭ) [43] ನೊಡಲ (ಪ) [44] ನೊಡಲ (ಪ) [45] ಹೊತ್ತಿತೋ ಹೊಗೆದುದೋ ಮಹಾ (ವಿ, ಮು) [46] ಹೊತ್ತಿತೋ ಹೊಗೆದುದೋ ಮಹಾ (ವಿ, ಮು) [47] ಲೊರಲಲು (ವಿ, ಪ) [48] ಲೊರಲಲು (ವಿ, ಪ) [49] ಕಳಕಳವ (ಭ) [50] ಕಳಕಳವ (ಭ) [51] ದಿರವ ಕಡಿಸಿದನಕಟ (ಭ) [52] ದಿರವ ಕಡಿಸಿದನಕಟ (ಭ) [53] ನೀನೆ ಪವನನೌ (ಪ), ಪವನನೆಂಬವ ಈಭ) [54] ನೀನೆ ಪವನನೌ (ಪ), ಪವನನೆಂಬವ ಈಭ) [55] ನೀನೆ ಯಮ (ಭ) [56] ನೀನೆ ಯಮ (ಭ) [57] ರಕ್ಷಕ (ಭ, ಮು) [58] ರಕ್ಷಕ (ಭ, ಮು) [59] ಕರುಣೆಸೈ ವರ (ಪ) [60] ಕರುಣೆಸೈ ವರ (ಪ) [61] ಕರುಣಿಸು(ಭ) [62] ಕರುಣಿಸು(ಭ) [63] ಪತಿ (ಪ) [64] ಪತಿ (ಪ) [65] ವುದೇ (ವಿ, ಮು) [66] ವುದೇ (ವಿ, ಮು) [67] ಸಿಡಿಲವಡರಿದುನಾಡದುವು(ಪ) [68] ಸಿಡಿಲವಡರಿದುನಾಡದುವು(ಪ) [69] ಗಳು ಅಂಬರವ(ಭ) [70] ಗಳು ಅಂಬರವ(ಭ) [71] ಯವನಿಯಲಿ (ಭ, ಪ, ಮು) [72] ಯವನಿಯಲಿ (ಭ, ಪ, ಮು) [73] ಹೊಂದಿದು (ವಿ, ಮು) [74] ಹೊಂದಿದು (ವಿ, ಮು) [75] ವಮ್ದದಲಿ (ವಿ) [76] ವಮ್ದದಲಿ (ವಿ) [77] ಪನ್ನಗರ ತಾಯ್ಗೆ (ಪ) [78] ಪನ್ನಗರ ತಾಯ್ಗೆ (ಪ) [79] ದಯ | ವಿ (ಭ) [80] ದಯ | ವಿ (ಭ) [81] ಸಾಧನ | ವಿ (ಭ) [82] ಸಾಧನ | ವಿ (ಭ) [83] ತ್ಪ್ದ (ಪ) [84] ತ್ಪ್ದ (ಪ) [85] ನೋಡಾ(ಪ) [86] ನೋಡಾ(ಪ)
Leave A Comment