ಸೂಚನೆ:
ಜನಿಸಿದನು ಜಗದೇಕವೀರನು
ದನುಜ ಮನುಜ ಭುಜಂಗ ನಿರ್ಜರ
ಜನ

[1]ಕದುತ್ಸವ[2]ವೆ[3]ನಿಸಿ[4] ವಿನತಾನಂದನನು ಧರೆಗೆ

ಪದನು:
ತಂದೆ ಶೌನಕ ಕೇಳು ವಿನತಾ
ನಂದನನ [5]ಸಂಭವವ[6]ನಘಕುಲ[7]ವೃಂದ[8]ವಿಚ್ಚೇದನ[9]ವನಿಷ್ಟ[10]ಫಲಾಪ್ತಿಸಧನವ
ಸಂದುದಾಪರಿ ಕೆಲವು ದಿನ ಪೂ
ರ್ಣೇಂದುಮುಖಿ ಹಾರುತ್ತ ಮನದಲಿ
ನೊಂದು ಚಿಂತಿಸುತಿರಲು ನಿಜ ಪುತ್ರೋದಯವನಬಲೆ ೧

ನೋಡಿ [11]ಸುಯ್ವಳು[12]  ನಳೀನಮುಖಿಯೆಡೆ
ಯಾಡಿ ವಿಪಿನಾಂತರಕೆ ಬರಿದೇ
ಕಾಡೊಳಗೆ ತಾ ಕರುಳ ಬಿಸುಟೆನು ಕದ್ರುವಿನ ಮನದ
ಬೇಡಿದಿಷ್ಟಾರ್ಥದ ಫಲವೆ ಕೈ
ಗೂಡಿತಿನ್ನೇನೆನುತ ಬಂಬಲ
ಬಾಡಿ ಬಳುಕುತ್ತಿದ್ದಳಂಗನೆ ದಾಸ್ಯಕರ್ಮದಲಿ ೨

ಹಾರು [13]ತಿರಲಿರ[14] ಲಿಂತು ಸತಿಯ ಮ
ನೋ [15]ರಥಾಂಕುರ[16] ಫಲಿತವಾಯ್ತೆನೆ
ವೀರನಂದುದುಭವಿಸಿದನು ವರ ಪುಣ್ಯಕಾಲದಲಿ[17]ಭೂರಿ ಮಂಗಳವಾಯ್ತು ಭುವನಕೆ
ಭಾರಿಸಿತು ಸಂತೋಷವಂಬರ
ಭೇರಿಗಳು ಮೊಳಗಿದುವು ಮುಳುಗಿದುದವನಿ ಸೌಖ್ಯದಲಿ[18]     ೩

ಎಡದ ಬದಿ ತೋಳ್ಕಣ್ಣುಹುಬ್ಬುಗ
ಳಡಿಗಡಿಗೆ ಕೆತ್ತಿದುವು ವಿನತೆಯ
ಕಡು ನಿರೋಧಸ್ಥಿತಿಗೆ ಕಡೆಯಿಂದಿನಲಿಯೆಂಬಂತೆ
ನಡುಗಿದುದು ಕದ್ರುವಿನೊಡಲು ಬಲ
ದೆಡೆಯಲಂಗಸ್ಪಂದವಾದುವು
ತುಡುಕಿದುದು ದುಮ್ಮಾನ [19]ಮನವನು ಕದ್ರು[20] ನಂದನರ       ೪

ಏನಿದಕೆ ಫವುತ ಕಡು ದು
ಮ್ಮಾನದಲ ಬಂದಳು ಮಹಾಸತಿ
ಕಾನನಕೆ ಮುನ್ನಿರಿಸಿದೆಡೆಯಲಿ ಗರ್ಭನು ನೋಡಿ
ಏನಿ [21]ದೇಕೊ[22]ಡೆಯಿತ್ತು ಕಾಣಿನಿ
ದೇನುವನು ಹಾ ವಿಧಿಯೆ ಪುಣ್ಯವಿ
ಹೀನೆ ತಾನೆಮ್ದಳಲಿದಳು ಕಾಣದೆ ಕುಮಾರಕನ        ೫

ಒಡೆದು ಕೆಡಿಸಿದೆನೊಬ್ಬನನು ತಾ
ನೊಡೆಯಲಾಗದೆನಲ್ಕೆ ಕಂದನ
ನುಡಿಯ ಮನ್ನಿಸಿ ನೂಕಿದೆನು ಹಲಕಾಲವನು ತನ್ನ
ಹಿಡಿದು ಮೆಟ್ಟಿದ ಕೊಂಬುಗಳು ಭಾ
ಪುಡಿದುವೇ ಹಾಯೆನುತ ಹೊರಳಿದ
ಳಡವಿಯಲಿ ಬಾಯ್ಬಿಡುತ ಕಂಬನಿ ಧರೆಗೆ [23]ಕಡಲಿ[24] ಡಲು       ೬

ತನ್ನ ಸೆರೆಯನು ಬಿಡಿಸುವನು ಸಂ
ಪನ್ನ ಬಲ [25]ನೆಂದೆನಿಸಿ[26] ಸುತನು
ತ್ಪನ್ನನಹನೆಂಬಾಸೆ ಪೈಸರವಾಯ್ತು ತನಗಿನ್ನು
ದುರ್ನಿಯೂಪ್ಯವಿದಾಯ್ತು ಬಾಗಿದ
ಬೆನ್ನ ನಿಗುಚಿಸುವವರ ಕಾಣೆನು
ಮುನ್ನ ಮಾಡಿದ [27]ಸುಕೃತಫಲವಿದೆಯಂ[28] ದಳಾವಿನತೆ         ೭

ದೋಷ [29]ವಿದು ದುಷ್ಖ್ರುತವಿದ[30] ಲ್ಲದ
ಡೀಸುದುಃಸ್ಥಿತಿಯಹುದೆ ಸವತಿಗೆ
ಸೂಸಿದುದು ಕಡೆ [31]ಗಣ್ಣ ಪೂರ್ವಾರ್ಜಿತದ ಪುಣ್ಯಫಲ[32] ದೇಸಿ [33]ಗಿತಿ[34] ಗಿನ್ನಾರು ಗತಿ ಪತಿ
ಭಾಷ್ವೇಕಫಲವಾಯ್ತೆನು
ತಾಸರೋರುಹನೇತ್ರೆ ಹೊಸೆದಳು ಬಸುರನಡಿಗಡಿಗೆ   ೮

ಎಂದು ದುಃಖಿಸುವಬಲೆಗಂಗ
ಸ್ಪಂದವಾಯ್ತೆಡದಲ್ಲಿ ಕಾಣು
ತ್ತಿಂದುಮುಖಿ ಕಂಬನಿಯ ತೊಡೆದಳು ಶಕನ ಶುಭವೆನುತ
ದುಂದುಭಿಯದೇನೆನುತ ಗಗನವ
ನಂದು ನೋಡಿದಳುರಿವ ಪಾವಕ
ನಂದ [35]ದುತ್ಕಟಭಟವಿಹಂಗನ ಕಂಡಳಾ ವಿನತೆ[36]     ೯

ಮುಚ್ಚಿದಳು ಕಂಗಳನು ಕಾಣುತ
ಸಚ್ಚರಿತೆ ನೆರೆಯದೆ ಕುಮಾರನ
ಹೆಚ್ಚಿದೊಡಲ ಮಹಾಪ್ರಭೆಯನೀಕ್ಷಿಸು [37]ವಡದಕಂಜಿ[38] ಅಚ್ಚರಿಯದೇನೆನುತಿರಲು ಸುರ
ರೊಚ್ಚತುಳಿದರು ನಭವನಾರವಿ[39]ಮುಚ್ಚಿ[40] ಕೊಂಡನು [41]ಕರ[42] ವನೇನೆಂಬೆನು ದಿಗಂತರಕೆ      ೧೦

ಘಾಸಿಯಾದರು ಸುರರು ತೇಜೋ
ರಾಶಿ ತಾನೇನೆನುತ ಹೋಗಿ ಹು
ತಾಶನಲ್ಲಿಗೆ ಹುಯ್ಯಲನು ಹಾಯ್ಕಿದರು ಭೀತಿಯಲಿ
ವಾಸುದೇವಾಂಶೋದ್ಭವನೆ ಪರಿ
ಭಾಸಮಾನ ಮಹಾಪ್ರಭನೆ ಕರು
ಣಾಸಮುದ್ರನೆ ಕಾವು [43]ದೆಮ್ಮನೆನುತ್ತ ಕರುಣದಲಿ[44]    ೧೧

ಆಡಲಮ್ಮೆವು ದೇವಕಲ್ಪದ
ಕೇಡಿನಂದದ [45]ದಿನದವೊಲು ನೀ[46] [47]ಗಾಢಮಾದಿದೆಯಿಂದು[48] ಬಹಳ ಜ್ವಾಲೆಯನು ಕಳುಹಿ
ಓಡುವರೆ ದೆಸೆಯಿಲ್ಲ ಗಗನದ
ಗೂಡು ನೆರೆಯದು ಕಮಲಜಾಂಡವ
ಕೊಡೆ ಕವಿಯುತ್ತಿದೆಯೆನುತ ಘೋಳಿಟ್ಟುದಮರಗಣ    ೧೨

*ಹೋ ಹೊ ಅಂಜದಿರಂಜದಿರಿ [49]ನೀವ್
ದಾ[50] ಹಿಸುವ ಕಿಚ್ಚಲ್ಲ ವಿನತೆಯ
ದೇಹಸಂಭವನೈದೆ ಮರೆವೊಗುವುದು ತಂದಂಘ್ರಿಗಳ
ಕಾಹ ತೆಗೆಸುವ [51]ಡಾತ[52] ನಲ್ಲದೆ
ಬಾಹಿರರ ಕೈಯಿಂದ ಹೋ [53]ಹುದೆ[54] ದಾಹವಿದು ನಿಮಗೆನುತ ನುಡಿದನು ಪಾವಕನು ನಗುತ          ೧೩

ಎನಲು ನೆರೆದುದ ಸುರರು ಸಂಕ್ರಂ
ದನ ಹುತಾಶ್ ಯಮನಿರ್ತ ವು
ಣನು ಪವನ ಸೋಮೇಶ್ರಂಬ ದಿಗೀಶ್ವರರು ಸಹಿತ
ತನತನಗೆ ಹೊಡಮಟ್ಟು ತೇಜೋ
ವನಧಿಯತ್ತಲು ಮುಗಿದ ಕರಪುಟ
ವನಜದಲಿ ಸಂಸ್ತುತಿಯ ಮಾಡಿದರಧಿಕ [55]ಭಕುತಿಯಲಿ[56]        ೧೪

ಜಯ ನಮೋ ವಿಹಗೇಂದ್ರ ಜಯಜಯ
ಜಯ ನಮೋ [57]ವಿಬುಧೇಂದ್ರ[58] ವಂದಿತ
ಜಯ ನಮೋ ಲೋಕೈಕರಕ್ಷಕ [59]ದುರಿತಭಕ್ಷಕನೆ
ಜಯ ನಮೋ ಜಗದೇಕ ವೀರನೆ
ಜಯ ನಮೋ ಬಲವೀರ್ಯಸಾರನೆ
ಜಯ ನಮೋನಂತೋರುತೇಜನೆ ಭುವನ [60]ಭಾವ[61] ನನೆ      ೧೫

ನೀನೆ ರವಿ [62]ನೀನೇ ಹುತಾಶನ[63] ನೀನೆ ಕಮಲಜ ರುದ್ರ ಗುಹ [64]ಗಜ
ದಾನ [65]ನಾದ್ಯಧಿದೈವವಖಿಳಾಮರಸುಸಂಪೂಜ್ಯ
ನೀನೆ ಸಾಕ್ಷಾದ್ವಿಷ್ಟು ಭುವನ
ಸ್ಥಾನ [66]ಸಂಭವಹೇತು ನೀನೇ[67] ನೀನೆ ಸಚರಾಚರವಿದೆಂದರು ಸುರರು ಕೈಮುಗಿದು     ೧೬

ನಾವು ಮರೆಹೊಕ್ಕೆವು ಮಹಾತ್ಮನೆ
ಬೇವುತಿದೆ ತಮ್ಮೊಡಲು ನಿನ್ನ ಮ
ಹಾವಿವೃದ್ಧತನೊದ್ಘಬಹುಳಜ್ವಾಲೆಯಲಿ ಮುಳುಗಿ
ಕಾವುದೆಮ್ಮನು ವೀರ ಕಾರು
ಣ್ಯಾವಲೋಕನದಿಂದ [68]ನಿನ್ನಯ[69] ಪಾವನಾಂಘ್ರಿ ಸಮಾಶ್ರಿತರನೆಂದುದು ಸುರಸ್ತೋಮ   ೧೭

ಸುರಮುನೀಶ್ವರರಿಂತು ತನ್ನನು
ಶರಣುಹೊಗಲೀಕ್ಷಿಸುತ ಖಗಪತಿ
ಕರತಳವ ನೆಗಹಿದನು ಹೋ ಹೋ ಭೀತಿ ಬೇಡೆನುತ
ಭರಿತ [70]ತನು[71] ರಶಿಗಳನುಪಸಂ
ಹರಿಸಿದನು ಬಳಿಕಾತ್ಮಜನನಿಯ
ಚರಣದಲಿ ತಲೆವಾಗಿ [72]ನಿಂದನು ಮುಂದೆ ಕೈಮುಗಿದು[73]        ೧೮

ಹೇಳೆನಗೆ ಬೆಸ [74]ನೇನೆನುತ್ತಿರೆ[75] ಲೋಲಲೋಚನೆ ನಡುಗಿ ನಿಜವನು
ಹೇಳು ನೀ [76]ನಾರಾರು ನಿನ್ನನು ಹೆತ್ತವರು ದಿಟಕೆ[77] ಕಾಲಿಗೆರಗುವೆ ನೀನ [78]ದೇತಕೆ[79] ನೀಲಲೋಹಿತನೋ ವಿರಿಂಚಿಯೊ
ಹಾಲುಗಡಲ ಮಹಾತ್ಮನೋ [80]ಹೇಳೆಂದ[81] ಳಬುಜಾಕ್ಷಿ ೧೯

ಶಂಕೆ ಬೇಡಲೆ ತಾಯೆ ನಿನ್ನುದ
ರಾಂಕಸಂಭವ ನಾನು ಕಮಲಜ
ಶಂಕರಾಚ್ಯುತರೆಂಬವರು ತಾ [82]ನಲ್ಲ ನಿನ್ನೊಡಲ[83] ಶಂಕೆಯನು ತಾ ಕಳೆವೆನಂಜದಿ
ರಂಉಶವದಾರೆನಗೆ ಜಗವನು
ಕಂಕುಳಲಿ ಧರಿಸುವೆನು ನಡೆ ಮನೆಗವ್ವ [84]ನೀನೆಂದ[85] 20

[1] ಕೆ ದುಸ್ಸಹ (ವಿ)

[2] ಕೆ ದುಸ್ಸಹ (ವಿ)

[3] ನಿಪ (ಭ)

[4] ನಿಪ (ಭ)

[5] ನುದ್ಭವವ (ಭ)

[6] ನುದ್ಭವವ (ಭ)

[7] ಕಂದ (ಮು)

[8] ಕಂದ (ಮು)

[9] ವೆನಿಪ್ಪ (ಭ)

[10] ವೆನಿಪ್ಪ (ಭ)

[11] ಸುಳಿದಳು (ಪ)

[12] ಸುಳಿದಳು (ಪ)

[13] ತಿರುತಿರ (ಪ).

[14] ತಿರುತಿರ (ಪ).

[15] ರಥದ ಫಲ (ಪ).

[16] ರಥದ ಫಲ (ಪ).

[17] ವಾರಿಜಾಸನ ಮುಖ್ಯ ಸುಮನೋ | ನಾರಿಯರು ಹರುಷಿಸಿದರಿತ್ತಲು | ನಾರಿಗಾಯ್ತುರೆ ಶಕುನಸೂಚನೆ ಮುನಿಪ ಕೇಳೆಂದ || (ಮು)

[18] ವಾರಿಜಾಸನ ಮುಖ್ಯ ಸುಮನೋ | ನಾರಿಯರು ಹರುಷಿಸಿದರಿತ್ತಲು | ನಾರಿಗಾಯ್ತುರೆ ಶಕುನಸೂಚನೆ ಮುನಿಪ ಕೇಳೆಂದ || (ಮು)

[19] ವನು ಕದ್ರುವಿನ (ಪ)

[20] ವನು ಕದ್ರುವಿನ (ಪ)

[21] ದಕ್ಕೊ (ಪ)

[22] ದಕ್ಕೊ (ಪ)

[23] ವೊಸರಿ (ಪ), ಕೆಸರಿ (ವಿ.ಮು)

[24] ವೊಸರಿ (ಪ), ಕೆಸರಿ (ವಿ.ಮು)

[25] ನೆಂದೆನಿಪ (ಭ)

[26] ನೆಂದೆನಿಪ (ಭ)

[27] ದುಷ್ಕೃತದ ಫಲವೆಂ (ವಿ, ಮು)

[28] ದುಷ್ಕೃತದ ಫಲವೆಂ (ವಿ, ಮು)

[29] ವೇ ದುಷ್ಕೃತಿಯದ (ವಿ), ವಿದು ಪೂರ್ವಾಘವ (ಭ)

[30] ವೇ ದುಷ್ಕೃತಿಯದ (ವಿ), ವಿದು ಪೂರ್ವಾಘವ (ಭ)

[31] ಗಣ್ಣನಾ ಪೂರ್ವಾರ್ಜಿತದ ಪುಣ್ಯ|| (ಭ)

[32] ಗಣ್ಣನಾ ಪೂರ್ವಾರ್ಜಿತದ ಪುಣ್ಯ|| (ಭ)

[33] ಗರಿ (ವಿ)

[34] ಗರಿ (ವಿ)

[35] ಧಟವಿಹಗನನು ಕಂಡಳು ಮಿಗೆ ಕಟಾಕ್ಷದಲಿ (ಭ), ದುತ್ಕಟವಿಹಗನನು ತಾ ಕಂಡಳಾ ವಿನತೆ (ಪ)

[36] ಧಟವಿಹಗನನು ಕಂಡಳು ಮಿಗೆ ಕಟಾಕ್ಷದಲಿ (ಭ), ದುತ್ಕಟವಿಹಗನನು ತಾ ಕಂಡಳಾ ವಿನತೆ (ಪ)

[37] ತ ಕಂದನನು (ಪ)

[38] ತ ಕಂದನನು (ಪ)

[39] ಯುಚ್ಚಿ (ವಿ, ಪ)

[40] ಯುಚ್ಚಿ (ವಿ, ಪ)

[41] ರಥ (ಪ, ಭ)

[42] ರಥ (ಪ, ಭ)

[43] ದೆಂದರು ಸುರರು ಕೈ ಮುಗಿದು (ಎ), ದೆಮ್ಮನೆನುತ್ತ ಕೈಮುಗಿದು (ಪ).

[44] ದೆಂದರು ಸುರರು ಕೈ ಮುಗಿದು (ಎ), ದೆಮ್ಮನೆನುತ್ತ ಕೈಮುಗಿದು (ಪ).

[45] ವೋಲು ರಾಸಿಯ (ಭ)

[46] ವೋಲು ರಾಸಿಯ (ಭ)

[47] ಮಾಡಿದೆಯಿದೇನೆಂದು (ಭ), ಗಾಡಿ ಮಾಡಿದೆಯಿಂದು (ಪ)

[48] ಮಾಡಿದೆಯಿದೇನೆಂದು (ಭ), ಗಾಡಿ ಮಾಡಿದೆಯಿಂದು (ಪ)

[49] ತಾ | ನೊ (ಭ)

[50] ತಾ | ನೊ (ಭ)

[51] ನಾತ (ವಿ), ದಾತ(ಪ)

[52] ನಾತ (ವಿ), ದಾತ(ಪ)

[53] ಗದು (ವಿ, ಮು)

[54] ಗದು (ವಿ, ಮು)

[55] ವಿನಯದಲಿ (ಪ), ವಿಭವದಲಿ (ಭ)

[56] ವಿನಯದಲಿ (ಪ), ವಿಭವದಲಿ (ಭ)

[57] ದೇವೆಂದ್ರ

[58] ದೇವೆಂದ್ರ

[59] ಜಯ ನಮೋ ಜಯತು (ಪ).

[60] ಪಾವ (ವಿ)

[61] ಪಾವ (ವಿ)

* ೧೨ ನೆಯ ಪದ್ಯದ ಪರ್ವಾರ್ಧವು ’ಪ’ ಪ್ರತಿಯಲ್ಲಿ ಹೀಗೆದಿ:- ಅಂಜದಿರಿ ಸುರರಂಜದಿರಿ ನಿಮ | ಗಂಜಿಸುವ ಕಿಚ್ಚಲ್ಲ ವಿನತೆಯ | ಸಂಜನಿಸಿದವನೈದೆ ಮೊರೆವೊಗುವುದು ತದಂಘ್ರಿಗಳ ||

 

[62] ಶಶಿ ಪವನ ಪವಕ (ಮು), ಶಶಿ ನೀ ಹುತಾಶನ (ಭ).

[63] ಶಶಿ ಪವನ ಪವಕ (ಮು), ಶಶಿ ನೀ ಹುತಾಶನ (ಭ).

[64] ಸ | ಶ್ಯಾನ (ಭ)

[65] ಸ | ಶ್ಯಾನ (ಭ)

[66] ರಕ್ಷಾ ನಾಶಕಾರಣ (ವಿ)

[67] ರಕ್ಷಾ ನಾಶಕಾರಣ (ವಿ)

[68] ನಿನ್ನೀ (ವಿ, ಮು)

[69] ನಿನ್ನೀ (ವಿ, ಮು)

[70] ನಾ (ಪ)

[71] ನಾ (ಪ)

[72] ಬಿನ್ನಹವೆಮ್ದನಾ ಗರುಡ || (ವಿ), ದನು ನಿಂದನು ಮುಗಿದು ಕರವ || (ಪ).

[73] ಬಿನ್ನಹವೆಮ್ದನಾ ಗರುಡ || (ವಿ), ದನು ನಿಂದನು ಮುಗಿದು ಕರವ || (ಪ).

[74] ಸುತ್ತಿರೆನೆ ಶ್ರೀ (ಪ)

[75] ಸುತ್ತಿರೆನೆ ಶ್ರೀ (ಪ)

[76] ನಾರೆಂದು ನಿನ್ನಯ ದಿಟವದೇನೆನಗೆ || (ಪ)

[77] ನಾರೆಂದು ನಿನ್ನಯ ದಿಟವದೇನೆನಗೆ || (ಪ)

[78] ದಾರೋ | (ಭ)

[79] ದಾರೋ | (ಭ)

[80] ನೀನೆಂದ (ವಿ, ಮು)

[81] ನೀನೆಂದ (ವಿ, ಮು)

[82] ವೆನಗೆ ಪಾಡಲ್ಲ (ವಿ)

[83] ವೆನಗೆ ಪಾಡಲ್ಲ (ವಿ)

[84] ಕೇಳೆಂದ (ಪ)

[85] ಕೇಳೆಂದ (ಪ)