ಆರು ಮಾಡುವುದೇನೆ ದೈವ
ಪ್ರೇರಿತವ ಗೆಲಲರಿದು ಕರ್ಮವೆ
ಕಾರಣವು ನೀನಲ್ಲ

[1]ತಾನಲ್ಲವ್ವ ಪೂರುವದ[2] ಸೈರಿ [3]ಸುವುದ[4] ಕದ್ರು ತನಯರ
ಬೇರುಗೊಲೆಯನು  [5]ಮಾಳ್ವ ಬಲ್ಲಿದ[6] ವೀರನಹನಂಜದಿರು ಸಂಶಯವಿಲ್ಲ ಹೋಗೆಂದ         ೨೧

ಎಂದಡಾಸತಿ ಸುತನ [7]ನುಡಿಗಾ[8] ನಂದಪುಳಕಿತೆಯಾಗಿ ಜೀವಿಸು
ವಂದವೆಂತೆಲೆ ಮಗನೆ ಮಾಡಿದೆನನುಚಿತವನೆನಲು
ಬಂದನಲ್ಲಿಗೆ ಸೂರ್ಯನೇತ
ಕ್ಕಿಂದುಮುಖಿ ಮರುಗುವೆ ವೃಥಾ ಕೊಡು[9]ಕಂದನನು[10]ತನ[11]ಗೆನುತ[12]ಬೇಡಿದನಳಲುವಂಗನೆಯ          ೨೨

ವಾರಿಜಾನನೆ ತನಗೆ ಮಾಳ್ಪನು
ಸಾಥಿತ್ವವನಂಜಬೇಡೀ
ವೀರನಳಿವುಳಿವೆನ್ನದೆನುತರವೆಂದಸಖನೊಲಿದು
ಆ ದುಷಿಗಳನುಮತದಲೊಯ್ದನು
ಧೀರನನು [13]ನಿಜ ರಥಕೆ ತುರಗ
ಪ್ರೇರಕನು ತಾನಾಗಿ ನಿಂದನು ವರ[14] ರಥಾಗ್ರದಲಿ     ೨೩

ಅರುಣನೆಂದಭಿಧಾನವಡೆದನು
ತರುಣನಂದಿಂದಿತ್ತ ಸೂರ್ಯನ[15] ಕರುಣ[16]ದಿಂದವೆ ಮುನ್ನ ಕೆದರುವ [17]ನುದಯದಲಿ ತನುವ[18] ಚರಣವೆರಡುಂಟಾದಡಾ ಹರಿ
ಹರವಿರಿಂಚಾದ್ಯರನು ಕೊಂಬನೆ
ವರಕುಮಾರಕನೆಂದು ಕೊಂಡಾ[19]ಡಿತ್ತು[20] ಸುರನಿಕರ   ೨೪

ನಿಂದ[21]ನತ್ತಲನೂರು[22] ತ್ರಿಭುವನ
ವಂದ್ಯ [23]ನುನ್ನತ ರಥದ[24]ಲಿತ್ತಲು
ಬಂದಳಂದಾ ವಿನತೆ ಮನದಲಿ ಚಿಂತಿಸುತ ಮನೆಗೆ
ಇಂದು ವದನೆಯರಿಂತು ಮತ್ಸರ
ದಂದವನು ತೋರಿಸದೆ ತಮ್ಮೊಳ
ಗೊಂದೆನಿಸಿಯೊಡಹುಟ್ಟಿದ [25]ವೊಲಿ[26] ದ್ದರು ಸರಾಗದಲಿ           ೨೫

[27]ಅವನಿಗಿಳಿದೊಂದು[28] ದಿನ ಲವಣಾ
ರ್ಣವ ಸಮೀಪದ [29]ಲಾಡು[30]ವುಚ್ಚೈ
ಶ್ರ್ಯವ ಸಮಾಹ್ವಯ ತುರಗವನು ಕಾಣುತ್ತ [31]ತಮ್ಮೊ[32]ಳಗೆ
ಧವಳವರ್ಣವೊ ಕೃಷ್ಣವರ್ಣವೊ
ಯುವತಿ ತುರಗದ ಬಾಲ ನೀ ಹೇ
ಳುವುದು ತನಗೆಂದೆನುತ ವಿನತೆಗೆ[33]ಕದ್ರು ಕೇಳಿದಳು[34]

ಆರರಿಯರೆಲೆಯಕ್ಕ ಕಂಗಳ
ಕೋರುವಿಸುತಿದೆ ಮುಂದೆ ಧವಳಾ
ಕಾರವಿದೆಲಾ ಕಾಣಬಾರದೆ ತುರಗಬಾಲವನು
ದೂರವೇ ಭಾವಿಸ [35]ಲು ಮಥಿತ[36] ಕ್ಷೀರಸಾಗರಜನಿತತುರಗ ಶಿ
ರೋರತುನವಿದು ಧವಳವೆಂದಳು ವಿನತೆ ಕದ್ರುವಿಗೆ     ೨೭

ಅಲ್ಲ ಹುಸಿ ನಿನ್ನಂತೆ ತಾ ಕ
ಣ್ಣೆಲ್ಲದವಳೇ ಕರಿಯ ಬಾಲದ
ಬೆಳ್ಳಿಯಂಗದ ತುರಗವಿದೆಲಾ ಕಾಣದೇ ಲೋಕ[37]ಹಲ್ಲ[38]ನೋಡಾ ನಗು[39]ವವಳ[40] ತಾ
ನುಳ್ಳೂದನು ಹೇಳೀದರೆ ನಿಂದಿಸ
ಬಲ್ಲೆ ಘಡ ಬಾಯ್ಬಡಿಕೆಯೆಂದಳು [41]ಕದ್ರು ಖಾತಿಯಲಿ[42] ೨೮

[43]ಇನಿತನಾನಿನಗೆಂದಡಾ[44] ನೀ
ತನುವ ವರ್ಜಿಸಲರಿಯೆ ಏತಕೆ
ಕನಲಿ ಕಣ್ಣನು ಕೆಂಪು ಮಾಡುವೆ ಕಾಣದೇ ಲೋಕ
ವನಿತೆ ಕಣು ನನಗಿಲ್ಲ ನಿನಗುಂ
ಟನುಚಿತನನೀಕ್ಷಿಪರೆ ಬರಿದೇ
ಮನದ ಗರ್ವವಿದೇಕೆ ವಿಫಲವೆದೆಂದಳಾ ವಿನತೆ        ೨೯

ಹೇಳು ಪಣವೇನಿದಕೆ ನಿನಗೆನೆ
ಕೇಳೆ ದಿಟವಲ್ಲಶ್ವರಾಜನ
ಬಾಲ ಬಿಳಿದಾಗಿರ್ದಡಾಳಹೆ ನಾನು ನಿನಗೆಂದು
ಆಳು ನೀನಾಗೆನಗೆ ತುರಗದ
ಬಾಲ ಕಪ್ಪಾಗಿರ್ದಡೆನಲಾ
ಬಾಲೆ ಬೇಹುದ[45]ನೆಂದೆಯೆಂ[46]ದಳು ಹೊಯ್ದು ಕರತಳವ        ೩೦

ಏಳು ನೋಡುವೆವೆನಲು ನೋಳ್ಪೆವು
ನಾಳೆ ತಾವೆಂದೆನುತ ತಮತ
ಮ್ಮಾಲಯಕೆ ನಡೆತಂದು ಹೊಕ್ಕರು ಮಾಡೆ ಸತ್ಯವನು
ಹೇಳಿದಳು ನಿಜ ಪುತ್ರರಿಂಗಾ
ಲೋಲಲೋಚನೆ ಕದ್ರು ಭಾಷೆಯ[47]ನಾಲಿ[48]ಸುವರಾರುಂಟು ಮಕ್ಕಳಿರೆನುತ ದುಗುಡದಲಿ ೩೧

ಭಾಷೆಯೇನೌ ತಾಯೆ ಚಿತ್ತಕೆ
ಬೇಸರವಿದೇನಾನನದ ಸಿರಿ
ಮಾಸಿದಂತಿದೆ ಹೇಳು ಹೇಳೇನಾಯಿತೆನುತಿರಲು
ಸೂಸಿದಳು ಬಿಸುಸುಯಿಲ ತಂಗಿಗೆ
ದಾಸಿಯಹ ವಿಧಿಯಾಯ್ತು ಮಕ್ಕ[49] ಳಿ
ರೇ[50]ಸು ನೀವಿದ್ದೇನು ಫಲ ತನಗೆಂದಳಾ ಕದ್ರು         ೩೨

[51]ಏನು ಹೇಳಲೆ ತಾಯೆ ಎನಲಂ[52] ಭೋನಿಧಿಯ ಸನ್ನಿಧಿಗೆ ಕಂಡೆವು
ಭಾನುಮಂಡಲದಂತೆ ಬೆಳಗುವ ತುರಗರಾಜನನು
ತಾನದರ ಬಾಲವನು ಕರಿದೆಂ
ದೂನವಚನವನಾಡಿ ತಪ್ಪಿದೆ
ನೇನು ಗತಿ [53]ಬಳೀಕೆಂದಳುಳ್ಳುದ[54] ಸವತಿ ನನ್ನೊಡನೆ          ೩೩

ನಾಳೆ ನೋಡುವೆವೆಂದು ಬಂದೆವು
ಕೋಳು ಹೋದೆನಲಾ ಮಹಾಸತಿ
ಹೇಳಿದಳು ಸತ್ಯವನು [55]ಮಿಥ್ಯ[56]ವದಾಯ್ತು ನುಡಿ ತನ್ನ
ಹೇಳಿ ನೀವೇನುಂಟು ನಿಮ್ಮಲಿ
ಮೇಲೆ ಮಾಡುವುಪಾಯ[57]ವೇನೆನೆ[58] ಹೇಳು ಕೇಳುವೆವವ್ವ ಎನಲಿಂತೆಂದಳಾ[59]ತರಳೆ[60]      ೩೪

ಸುತ್ತಿಕೊಂಬುದು ನೀವದನು ಕ
ಪ್ಪೊತ್ತಲಶ್ವದ ಬಾಲವನು ಸತಿ
ತೊತ್ತಹಳು ತನಗನುಚಿತವಿದೆಂದೆನ್ನದೆಲ್ಲವರು
ಪುತ್ರರಿರ ಬೆಸಗೈವುದೆನೆ ಕೇ
ಳುತ್ತ ಕೆಲರದರೊಳಗೆ ಸಂಶಯ
ಚಿತ್ತರಾದರು ಪಾಪಕರ್ಮವಿಲೇಪವಹುದೆನುತ          ೩೫

ಮಾಡವನ್ಯಾಯವನಸತ್ಯವ
ನಾಡಿದೆಯಲೌ ತಾಯೆ ತತ್ಪಲ
ಕೇಡು[61]ತಂದುದು[62] ಕುಲಕೆ [63]ಮಾಡುವುದೇನು[64] ತಾವಿನ್ನು
ಬೇಡ ತವಗೀ ಕರ್ಮವೆನೆ ಫಡ
ಹೇಡರಾದಿರೆ ಸರ್ಪ[65]ಯಜ್ಞ[66]ವ
ಮಾಡಿ ಜನಮೇಜಯನು ಕೊಲಲೆನುತಬಲೆ ಶಪಿಸಿದಳು         ೩೬

[67]ಕೆಲರದನು ಕೈಕೊಂಡೆವೆಂದುದು
ತಲೆಯಲಾಂತೆವೆನುತ್ತ ಬಳಿಕಾ
ಲಲನೆ ಕರೆದಳು ವಿನತೆಯನು ವಿಶ್ವಾಸಘಾತಕವ
ಲಲಿತಮತಿ ತಾನೆತ್ತ ಬಲ್ಲಳು
ನಳೀನಲೋಚನೆಯೊಡನೆ ಹೋದಳು
ಜಲಧಿತೀರದ ತುರಗವನು ನೋಡುವೆವು ತಾವೆನುತ  ೩೭

ಕಂಡರಾ ತುರಗವನು ವೇಷ್ಟಿಸಿ
ಕೊಂಡಿರಲು ಬಾಲವನು [68]ಫಣೆಗಳು[69] ಕೆಂಡ ನೀರಲಿ ಬಿದ್ದವೋಲಿರೆ ಕಾಣುತವೆ ಕಾಂತೆ
ಮಂಡೆಯನು ತುರಿಸಿದಳು ಹರಹರ
ಕಂಡವೋಲಿರದೇಕೆ ನುಡಿಯನು
ಭಂಡುಮಾಡಿತೆ ದೈವಗತಿಯೆನುತಳಲಿದಳು ತರಳೆ    ೩೮

ಅಳಲಿ ಮಾಡುವುದೇ [70]ನು ತಾ[71] ಮು
ನ್ನೊಲಿದು ಮಾಡಿದ ಪಾಪ ಕರ್ಮದ
ಫಲವಲಾ ಬೆಂಬಿದ್ದಡಹುದೇ ಮೇಣು ಬಂದುದಕೆ
ಕೆಲಸ ಲೇಸಾಯ್ತೆನುತ ದಾಸ್ಯವ
ನೊಲಿದು ಕೈಕೊಂಡಳು ಮಹಾಸತಿ
ಚಲಿಸದಂತಃಕರಣದಲಿ ಕಾತರಿಸದಬುಜಾಕ್ಷಿ  ೩೯

ಅಡಿಗಳನು ತೊಳೆಯುತ್ತ ಕಾಂತೆಗೆ
ಪಡಿಗವ[72]ನು ನೀಡುತ್ತ[73] ತಲೆಯನು[74]ಕೊಡಹಿ ನೇವರಿಸುತ್ತ[75] ತುರುಬನು ಕಟ್ಟಿ ಹೂ ಮುಡಿಸಿ
ನುಡಿಗಳನ್ನು ಸೈರಿಸುತ ಸವತಿಯ
ಬಡಿಗಳನು ತಾಳುತ್ತ ಸೇವೆಯ
ನಡಸುತಿರ್ದಳು ವಿನತೆ ಲಜ್ಜಾವ[76]ನತೆ[77] ಕದ್ರುವಿಗೆ     ೪೦

ಎಂತು ಗತಿ ತನ[78]ಗೇನೆನುತ್ತಾ[79] [80]ಕಾಂತೆ ಕಡುಗುವ ಮನದ ಶೋಕವ
ನಂತರಂಗದಲಡಗಿಸುತ್ತಳಲುತ್ತ ಬಳಲುತ್ತ
ಸಂತತಿಯ ಜನನವನು ಮಾನಿನಿ
ಚಿಂತಿಸುವ ಮರೆಹೊಕ್ಕಳಾ ಶ್ರೀ
ಕಾಂತ ನಿತ್ಯಾತುಮ ಮುಕುಂದ ಪದಾಬ್ಜವನು [81]ವಿನತೆ[82]       ೪೧

ಪ್ರಥಮ ಸಂಧಿ ಸಮಾಪ್ತ


[1] ತಾನಲ್ಲಾರುವಾದೊಡದ|| (ಮು).

[2] ತಾನಲ್ಲಾರುವಾದೊಡದ|| (ಮು).

[3] ಸಿದಡಾ(ಭ).

[4] ಸಿದಡಾ(ಭ).

[5] ಮಾಡಲುಳ್ಳಾ (ವಿ)

[6] ಮಾಡಲುಳ್ಳಾ (ವಿ)

[7] ಮಾತಿಗೆ (ಪ).

[8] ಮಾತಿಗೆ (ಪ).

[9] ನಂದನನ(ವಿ,ಮು)

[10] ನಂದನನ(ವಿ,ಮು)

[11] ಗೆಂದ(ಭ)

[12] ಗೆಂದ(ಭ)

[13] ತಾನಾಗಿ ನಿಂದನು | ವರನಾಕ್ಷಣದಲ್ಲಿಯೆಸೆದನು ನಿಜ(ಭ).

[14] ತಾನಾಗಿ ನಿಂದನು | ವರನಾಕ್ಷಣದಲ್ಲಿಯೆಸೆದನು ನಿಜ(ಭ).

[15] ಕಿರಣ(ವಿ.ಮು)

[16] ಕಿರಣ(ವಿ.ಮು)

[17] ತನ್ನ ಗನುಗಳನು (ವಿ)

[18] ತನ್ನ ಗನುಗಳನು (ವಿ)

[19] ಡಿದುದು(ವಿ.ಮ)

[20] ಡಿದುದು(ವಿ.ಮ)

[21] ನಿತ್ತಲು ಸೂತ (ವಿ, ಮು)

[22] ನಿತ್ತಲು ಸೂತ (ವಿ, ಮು)

[23] ಸಮನಂತರದ (ಮು).

[24] ಸಮನಂತರದ (ಮು).

[25] ವರಿ(ವಿ.ಪ)

[26] ವರಿ(ವಿ.ಪ)

[27] ಅವರು ಬಳಿಕೊಂದು(ವಿ.ಮು)

[28] ಅವರು ಬಳಿಕೊಂದು(ವಿ.ಮು)

[29] ಲೊಂದು (ವಿ.ಮು).

[30] ಲೊಂದು (ವಿ.ಮು).

[31] ವರಿ(ವಿ.ಪ)

[32] ವರಿ(ವಿ.ಪ)

[33] ಹೇಳಿದಳು ಕದ್ರು (ಭ).

[34] ಹೇಳಿದಳು ಕದ್ರು (ಭ).

[35] ಲಿಕಧಿಕ (ಪ, ವಿ,ಮು)

[36] ಲಿಕಧಿಕ (ಪ, ವಿ,ಮು)

[37] ಅಲ್ಲಿ (ಮು)

[38] ಅಲ್ಲಿ (ಮು)

[39] ವವಳು (ಮು)

[40] ವವಳು (ಮು)

[41] ವಿನತೆಯೊಳು ಕದ್ರು (ವಿ)

[42] ವಿನತೆಯೊಳು ಕದ್ರು (ವಿ)

[43] ಎನಿತೆನಿತ ನಾನೆಂದಡಾ (ವಿ)

[44] ಎನಿತೆನಿತ ನಾನೆಂದಡಾ (ವಿ)

[45] ನೊಂದನೆಂ (ಭ)

[46] ನೊಂದನೆಂ (ಭ)

[47] ಪಾಲಿ (ವಿ,ಮು)

[48] ಪಾಲಿ (ವಿ,ಮು)

[49] ಳದೇ (ವಿ)

[50] ಳದೇ (ವಿ)

[51] ಏನ ಮಾಡುವೆ ಹೋದೆ ತಾನಂ I (ವಿ) ಏನ ಮಾಡಿದೆ ಹೋದೆ ತಾನಂ I (ಪ್ರ).

[52] ಏನ ಮಾಡುವೆ ಹೋದೆ ತಾನಂ I (ವಿ) ಏನ ಮಾಡಿದೆ ಹೋದೆ ತಾನಂ I (ಪ್ರ).

[53] ಬಿಳಿದೆಂದಳುಳ್ಳುದ (ವಿ), ಬಿಳಿದೆಂದು ಬಾಲವು (ಭ),

[54] ಬಿಳಿದೆಂದಳುಳ್ಳುದ (ವಿ), ಬಿಳಿದೆಂದು ಬಾಲವು (ಭ),

[55] ನಿಂದ್ಯ (ಪ).

[56] ನಿಂದ್ಯ (ಪ).

[57] ವೆನೆನೀ (ವಿ).

[58] ವೆನೆನೀ (ವಿ).

[59] ಕದ್ರು (ವಿ, ಮು).

[60] ಕದ್ರು (ವಿ, ಮು).

[61] ತಪ್ಪದು (ವಿ,ಪ).

[62] ತಪ್ಪದು (ವಿ,ಪ).

[63] ಯೆಂದರದೆಲ್ಲ (ಪ).

[64] ಯೆಂದರದೆಲ್ಲ (ಪ).

[65] ಯಾಗ(ವಿ,ಪ),

[66] ಯಾಗ(ವಿ,ಪ),

[67] ಕೆಲರದನು ಕೈ ಕೊಂಡೆವೆಂದುದು I ತಲೆಯಲಾಂತೆವೆನುತ್ತ ಬಳಿಕಾ I ಲಲನೆ ಕರೆದಳು ಲಲಿತಮತಿ ತಾವೆತ್ತ ಹಯವೆತ II ನಳಿನಲೋಚನೆಯೊಡನೆ ಹೋದಳು I ಜಲಧಿ ತೀರದ ತುರಗವನು ಬಲು I ಛಲದಿ ನೋಡು ವೆವೆನುತಲಾತವಗೆನುತಯೆವಗೆನುತ II ಈ ತೆರನಾಗಿ ೩೭ನೆಯ ಪದ್ಯವು ’ಪ’ ಪ್ರತಿಯಲ್ಲಿ ವಿಕೃತಿಗೊಂಡಿದೆ.

[68] ರಗತತಿ (ಭ).

[69] ರಗತತಿ (ಭ).

[70] ನೆನುತ (ಪ).

[71] ನೆನುತ (ಪ).

[72] ನ್ನೀಯುತ್ತ (ಪ).

[73]  ನ್ನೀಯುತ್ತ (ಪ).

[74] ತೊಡತೊಡರ ನೇವರಿಸಿ (ಭ).

[75] ತೊಡತೊಡರ ನೇವರಿಸಿ (ಭ).

[76] ನಿತೆ (ಭ).

[77] ನಿತೆ (ಭ).

[78] ಗೆನುತ ಕಾಣೆನು (ಭ).

[79] ಗೆನುತ ಕಾಣೆನು (ಭ).

[80] ಈ ಪದ್ಯದ ಪೂರ್ವಾರ್ಧದ ೨-೩ ನೆಯ ಚರಣಗಳು ’ಭ’ ಪ್ರತಿಯಲ್ಲಿ. ಇಲ್ಲ

[81] ತರಳೆ (ಭ).

[82] ತರಳೆ (ಭ).