ಸಂ. .
ಕಕ್ಕಡೆ = ಒಂದು ಬಗೆಯ ಆಯುಧ ೧೬
ಕಚ್ಛಪ = ಕೂರ್ಮ, ಆಮೆ ೨೯
ಕಟಕ = ಸೈನ್ಯ ೨೭
ಕಡಿತಲೆ = ಒಂದು ಬಗೆಯ ಆಯುಧ ೨೮
ಕಡುಗು = ಹೆಚ್ಚಾಗು ೪೧
ಉತ್ಸಾಹ, ರಭಸ ೨೪
ಕಡುಹು = ರಭಸ, ಅತಿಶಯತೆ ೩೪
ಕಡೆಗಳೆ = ಉಪೇಕ್ಷಿಸು ೨೫
ಕಡೆಗಾಣು = ಕೊನೆಗಾಣು, ಸಂಪೂರ್ಣವಾಗು ೧೧ ೩೯
ಕಂಟಕ = ತೊಂದರೆ, ಆಪತ್ತಿ ೧೦
ಕಣ್ಣುಹರಿಕ = ಕುರುಡ ೧೭
ಕದರ್ಥನ = ಕೆಣಕುವಿಕೆ, ಕೆರಳಿಸುವಿಕೆ ೩೬
ಕಂತುಹರ = ಕಾಮನನ್ನು ಸಂಹರಿಸಿದವ, ಶಿವ ೩೬
ಕಂದ = ಗಡ್ಡೆ
ಕಂದು = ಹೊಳೆ, ಹೊಲಸು ೧೨ ೧೮
ಕನಕ = ಬಂಗಾರ, ಚಿನ್ನ ೧೩
ಕನಲ್ = ಸಂತಾಪಗೊಳ್ಳು, ಸಿಟ್ಟಾಗು ೧೬
ಕಬ್ಬೊಗೆ = ಕರಿಯ ಬಣ್ಣದ ಹೊಗೆ ೪೭
ಕರರ್ತ = ಅಂಗೈ ೪೧
ಕಶ್ಯಪ = ಒಬ್ಬ ಪ್ರಮುಖ ಋಷಿ (ಬ್ರಹ್ಮನ ಮಾನಸಪುತ್ರ ಮರೀಚಿಯ ಮಗ)
ಕಳಾಪ = ಸಮೂಹ ೧೭
ಕಳಿಕಳಿದು = ದಾಟಿ ದಾಟಿ
ಕಳೇವರ = ದೇಹ, ಶರೀರ ೧೬
ಕಾ    
ಕಾಕೋದರ = ಸರ್ಪ
ಕಾತರಿಸು = ದುಃಖಿಸು, ತಳಮಳಿಸು ೧೨ ೩೧
ಕಾದ್ರವೇಯ = ಕದ್ರುವಿನ ಮಗ, ಸರ್ಪ
ಕಾದಲ = ಪ್ರಿಯ, ಪತಿ ೪೨
ಕಾಮಗಮನ = ಇಚ್ಛಿತ ಸ್ಥಳಕ್ಕೆ ಹೋಗ ಬಲ್ಲವನು ೧೩
ಕಾಮತೇಜ = ಬೇಕಾದ ಕಾಂತಿಯನ್ನು ಪಡೆಯಬಲ್ಲವ ೧೩
ಕಾಮಪ್ರದ = ಅಪೇಕ್ಷಿಸಿದುದನ್ನು ಕೊಡಬಲ್ಲವ ೧೩
ಕಾಮರೂಪ = ಅಪ್ಕ್ಷಿತ ರೂಪವನ್ನು ಪಡೆಯುವವ ೧೩
ಕಾಮವೀಯ = ಬೇಕಾದ ಶಕ್ತಿಯನ್ನು ಪಡೆಯಬಲ್ಲವ ೧೩
ಕಾಮಹರ = ಶಿವ ೧೩
ಕಾಶ್ಯಪ = ಸರ್ಪಮಂತ್ರವಾದಿಯಾದ ಒಬ್ಬ ಬ್ರಾಹ್ಮಣನ ಹೆಸರು ೧೦ ೧೩
ಕಾಹು = ಸಂರಕ್ಷಣೆ, ಕಾವಲು ೧೦
ಕಾಹುರ = ಉಗ್ರ, ತೀವ್ರ, ಭಯಂಕರ
ಕಾಳಭೈರವ = ಪ್ರಳಯ ಕಾಲದ ರುದ್ರನ ಭೀಕರ ರೂಪ
ಕಿತ್ತಡ = ಅತಿಶಯವಾದ
೩೯
ಕಿರುಬ = ಕ್ಷುದ್ರ, ಸಣ್ಣವ -೧೬
ಕೀಲಣ = ರತ್ನಕೆಚ್ಚಿಗೆ, ಹೊಂದಾವಣೆ
ಕೀಸು = ನುಚ್ಚು ಮಾಡು, ತುರಿ, ಹರೆ ೨೦
ಕುಠಾರ = ಕೊಡಲಿ ೧೪
ಕುಡಿತೆ = ಅರೆಬೊಗಸೆ, ಸೇರೆ
ಕುತ್ತು = ಕಣ್ಣನ್ನು ಕುಕ್ಕಿಸು ೫೦
ಕುಲಿಶ = ವಜ್ರಾಯುಧ ೨೩
ಕುಶ = ಒಂದು ಬಗೆಯ ಹುಲ್ಲಿ, ದರ್ಭೆ
ಕುಳಿ = ತಗ್ಗು, ಕುಣಿ
ಕುಕ್ಷಿ = ಹೊಟ್ಟೆ ೪೨
ಕೂಲ = ನದಿಯ ಹಾಗೂ ಸಮುದ್ರಗಳ ದಂಡೆ
ಕಚ್ಛ್ರ = ಕಠಿಣವಾದ ಉಪವಾಸವ್ರತ ೩ ೧೮
ಕೃಪಾಣ = ಕಿರುಗತ್ತಿ ೧೫
ಕೃಷ್ಣವರ್ತ್ಮ = ಅಗ್ನಿಯ ಒಂದು ಹೆಸರು ೧೨ ೩೫
ಕೆತ್ತು = ಹಾರು, ಸ್ಪಂದಿಸು
ಕೆತ್ತುದು = ಮುಚ್ಚಿಕೊಂಡಿದು ೨೯,
ವ್ಯಾಪಿಸು
ಕೆ    
ಕೆದರು = ಹಬ್ಬಿಸು, ವಿಸ್ತರಿಸು ೨೪
ಕೆಪ್ಪುಗೆಡೆ = ಕೆಳಗೆ ಬೀಳು ೧೪
ಕೇಡು = ಅನರ್ಥ, ಪ್ರಳಯ ೧೨
ಕೇಯೂರ = ಭುಜಕಿರೀಟ, ಬಾಹುಪೂರ
ಕೈಕೊಂಡು = ವಶಪಡಿಸಿಕೊಂಡು ಸೂ
ಕೈಕೊಳ್ಳು = ಲೆಕ್ಕಿಸು, ಗಣಿಸು ೧೧
ಕೈದು = ಆಯುಧ, ಶಸ್ತ್ರ ೨೩
ಕೊಂಡುಮುಳುಗು = ಸಂಪೂರ್ಣ ನಾಶಮಾಡು ೧೦ ೧೯
ಕೊಂಬು = ಗಿಡದ ಕೊಂಬೆ
ಕೊಂಬನೆ = ಲೆಕ್ಕಿಸುವನೆ, ಗಣಿಸುವನೆ ೨೪
ಕೋರುವಿಸು = ಕುಕ್ಕಿಸು, ಚುಚ್ಚು ೨೭
ಕ್ಷೋಣಿಧರ = ಭೂಧರ, ಪರ್ವತ ೨೭
   
ಖಗಪ = ಅಗಿತ ೧೧ ೩೫
ಖಾತಿಯಲಿ = ಕೋಪದಲಿ, ರೊಚ್ಚಿನಿಂದ ೨೮
ಖೋಡಿ = ದ್ವೇಷ, ಕೋಪ ೧೩ ೩೨
   
ಗಜದಾನನ = ಗಜಾನನ, ಗಣಪತಿ ೧೬
ಗತೋದಕ = ನೀರಿನೊಂದಿಗೆ ಹರಿದು ಹೋದ ೧೩ ೧೬
ಗಂಧಮಾಧನ = ಒಂದು ಪರ್ವತದ ಹೆಸರು  ಸೂ
ಗಯ = ಚಂದ್ರವಂಶದ ಒಬ್ಬ ಉದಾರನಾದ ರಾಜ ೧೨ ೩೩
ಗಾಢ = ದೊಡ್ಡ ಆಪತ್ತು ೧೨
ಗಾವಿಲ = ಗ್ರಾಮೀಣ, ಹಳ್ಳಿಯ ಹುಂಬ ೧೩
ಗಿಡಿ = ತುತ್ತು, ಕವಳ ೧೩ ೧೫
ಗುಡಿ = ಧ್ವಜ ೩೩
ಗುಣಯುತ = ಸ್ಕಂದ, ಷಣ್ಮುಖ ೧೬
ಗೂಡುವಲೆ = ಒಂದು ಪ್ರಕಾರದ ಬಲೆ ೧೬
ಗರಿಕ = ಕಾವಿ, ಕೇಮಿ ೩೮
ಗೋಮಯ = ಆಕಳ ಸಗಣಿ ೧೧ ೨೩
   
ಘನ = ಮೋಡ
ಘನವಾಹನ = ಮೇಘವಾಹನ, ಇಂದ್ರ
ಘೋಳಿಡು = ಮೊರೆಯಿಡು ೧೨
   
ಚಲನ = ಗಾಳಿ, ವಾಯು
ಚಲನಸಖ = ವಾಯುವಿನ ಗೆಳೆಯ, ಅಗ್ನಿ ೧೩
ಚೆಂಚು = ಪ್ರಕಾಶ ೩೩
ಚೈತ್ರರಥ = ಕುಬೇರನ ಉದ್ಯಾನ ೧೧ ೨೧
ಚೌರ್ಯ = ಕಳ್ಳತನ ೧೧ ೨೭
   
ಛಂದ = ರೀತಿ, ಕ್ರಮ ೧೧ ೧೭
   
ಜಕ್ಕುಳಿಸು = ಹಂಗಿಸು, ವ್ಯಂಗ್ಯವಾಗಿ ಮಾತನಾಡು ೧೪
ಜಡಾತ್ಮ = ಮೂರ್ಖ, ಅಜ್ಞಾನಿ ೨೪
ಜಾಳ = ಸಮೂಹ ೧೯
ಜಾಳಿಸು = ಸಡಿಲಾಗು, ಶಿಥಿಲವಾಗು
ಜಿತಕೋಪ = ಕೋಪವನ್ನು ಗೆದ್ದವನು ೧೭
ಜೋಡೆ = ವ್ಯಭಿಚಾರಿಣಿ, ನೀಚ ಸ್ತ್ರೀ
ಜೋಳಿಸು = ಹೊಂದಿಸು ೧೧
   
ಝಷಾವಳಿ = ಮೀನುಗಳ ಸಮೂಹ ೩೨
   
ಟಕ್ಕರಿಗಳೆ = ತಿರಸ್ಕರಿಸು, ಬೀಳುಗಳೆ ೧೦ ೧೬.
   
ಠಾವು = ಸ್ಥಳ, ಎಡೆ ೨೭
   
ಢಾವರ = ಡಾಮರ, ಉಪದ್ರವ ೧೩ ೩೮
ಡೊಣೆ = ಗುಂಡಿ, ಕುಂಡ
ಢಗೆ = ತೃಷೆ, ಬಾಯಾರಿಕೆ, ಅಪೇಕ್ಷೆ ೧೩ ೩೮
ಢಾಳಿಡು = ಮುತ್ತಿಗೆ ಹಾಕು ೧೨ ೨೨
ಡೊಕ್ಕರಿಸು = ಸುತ್ತು ಹಾಕು ೧೦ ೩೨
   
ತಕ್ಕೆ = ತಳ್ಕೆ, ಅಪ್ಪುಗೆ ೧೨ ೨೦
ತಗುಳ್ = ತೆರಳು, ಹೋಗು ೫೩,
ನಾಶಿಸು, ಹಿಂಜರಿಸು, ಧಿಕ್ಕರಿಸು ೧೩
ತಡಿ = ದಂಡೆ, ತಟಿ ೧೯
ತನ್ವಂಗಿ = ಸುಂದರಿ, ಚೆಲುವೆ ೩೯
ತನುಗೊಳ್ = ದೇಹವನ್ನು ಧರಿಸು ೩೫
ತನೂದ್ಘ = ದೇಹದಿಂದ ಹೊರಹೊರಟ ೧೭
ತಪ್ಪದು + ಸುಳ್ಳಲ್ಲ ೨೪
ತರಣಿ = ಸೂರ್ಯ
ತಲ್ಲಣ = ದುಃಖ, ಚಿಂತೆ ೧೦
ತವಗೆ = ತಮಗೆ ೧ ೩೬
ತಾಗು = ತಡೆ, ಎದುರಿಸು ೪೦
ತಿಣ್ಣ = ಭಾರ, ಹೊರೆ ೧೭
ತಿರ್ಯಙ್ಮಖ = ಕೆಳಮೋರೆ, ಅಸಮ್ಮತಿ, ೨೪
ತ್ರಿದಶಾಲಯ = ಸ್ವರ್ಗ ೨೭
ತುಟ್ಟಿಸು = ಸಂಕೋಚಗೊಳ್ಳು ೧೦
ತುಡುಕು = ಗಟ್ಟಿಯಾಗಿ ಹಿಡಿ ೧೭
ತುತ್ತು = ಆಹಾರ ೨೮
ತುಂಡು = ಮುಖ, ಚುಂಚು ೧೯
ತುಂಡಾಗ್ರ = ಚುಂಚಿನ ತುದಿ ೧೩
ತುರಗಪ್ರೇರಕ = ಸಾರಥಿ, ರಥದ ಕುದುರೆ ಹೊಡೆಯುವವ ೨೩
ತುರುಗು = ದಟ್ಟವಾಗಿ ತುಂಬು ೧೦
ತುಹಿನ = ಹಿಮ, ಮಂಜು ೨೭
ತೂಳು = ಜಗ್ಗು, ಎಳೆ ೩೮
ತೆರಹು = ಅವಕಾಶ ೨೩
ತೇಜೋಲಾಲಿತೆ = ತೇಜಸ್ಸಿನಿಂದ ಪೋಷಿಸಲ್ಪಟ್ಟವಳು
ತ್ರೈವಿಷ್ಟಪ = ಸ್ವರ್ಗಕ್ಕೆ ಸಂಬಂಧಿಸಿದ
ತೊಳಲು = ತಿರುಗಾಡು, ಅಲೆದಾಳು ೧೫
ತೋಮರ = ಒಂದು ಬಗೆಯ ಆಯುಧ ೧೫
   
ಥಟ್ಟುಚ್ಚು = ಸಡಿಲಾಗು, ಬಿಚ್ಚು ೪೨
ದ ದಡಿಗ = ಹುಂಬ, ಲಠ್ಮ ೫೦
ದಂಡಧರ = ಯಮ ೧೯
ದನುಜರಿಪು = ಶ್ರೀಹರಿ, ವಿಷ್ಣು ೧೭
ದರ್ಪಣ = ಕನ್ನಡಿ ೧೭
ದಕ್ಷಿಣಾವರ್ತಾರ್ಚಿ = ಬಲಕ್ಕೆ ಹೊರಳಿದ ಕಿರಣಗಳಿಂದ ಕೂಡಿದವ ೧೨ ೩೫
ದಾತಾರ = ಕೊಡುವವ, ದಾನಿ
ದಾಯಿಗರು = ಅಣ್ಣತಮ್ಮಂದಿರು, ಪಾಲುಗಾರರು ೩೪
ದ್ವಾರ್ಸ್ಥ = ಬಾಗಿಲಕಾಪಿನಾಳು, ದ್ವಾರಪಾಲಕ ೧೦ ೨೪
ದಿವ = ಸ್ವರ್ಗ ೩೩
ದುಮ್ಮಾನ = ಚಿಂತೆ, ದುಃಖ
ಹುರ್ಧರ್ಷ = ಅಸಹನೀಯ ೧೨ ೩೮
ದುರ್ನಿರೀಕ್ಷ್ಯ = ನೋಡಲು ಅಸಾಧ್ಯವಾದ ೨೮
ದುರ್ನಿರೂಪ್ಯ = ಹೇಳುವುದಕ್ಕೆ ಕಷ್ಟವಾದುದು
ದುರ್ವೃತ್ಯ = ದುಷ್ಟ, ಕೀಳು ನಡತೆಯವ ೧೧ ೪೫
ದುಸ್ಸಹ = ಸಹಿಸಲಸಾಧ್ಯವಾದ ೧೭
ದುಷ್ಕರ = ನಿಷ್ಠುರವಾದ, ಮಾಡಲು ಅನುಚಿತವಾದ ೧೦
ದುಷ್ಕೃತ = ಪಾಪ
ದೃಶ = ಕಣ್ಣು ೩೬
ದೊಡ್ಡೀ = ಆಯಕಟ್ಟಿನ ಸ್ಥಳ ೩೫
ದೊರೆಕೊಳ್ = ಸಿಗು, ಪ್ರಾಪ್ತವಾಗ್ಲು
ದೇವರಿಪು = ರಾಕ್ಷಸ, ದಾನವ ೧೫
ದೇಸಿಗಿತಿ = ದಿಕ್ಕಿಲ್ಲದವಳು, ಪರದೇಶಿ