ಸೂಚನೆ:
ವರ್ಣಿಸಿದನಾ ಸೂತನಾದ್ವಿಜ
ವರ್ಣನಿಯಾಸ್ತೀಕಪುಣ್ಯಾಖ್ಯಾನ ಸಂಗತಿಯ
ಪದನು:
ಸೂತನನು ಬೆಸಗೊಂಡ[3]ಡಾ[4] ಮುನಿ
ಜಾತ ಕೇಳಲು ಶೌನಕನು ಸಂ
ಜಾತಸಂತೋಷದಲಿ ಪೌಲೋಮನನು [5]ಕೇಳಿದೆವು[6]
ಕೌತುಕ೪[7]ಕಥಾ[8] ಶ್ರವಣಪೀಯೂ
ಷಾತಿಶಯಲಾಭೈಕಲೋಭವ
ರೀತಹೃದಯನು ಯೆಸೆದನಖಿಳಪ್ರಾಣಿನಿಕರದಲಿ ೧
ಹೇಳು ತನಗೆಲೆ ತಂದೆ ಭಾರತ
ಮೂಲವೆನಿಪಾಸ್ತೀಕಚರಿತವ
ನಾಲಿಸುವಡಾರಾತ್ಮಭವನಾಸ್ತೀಕನೆಂಬವನು
ಮೇಲೆ ಸರ್ಪಾಧ್ವರಕೆ ತಾ ಪ್ರತಿ
ಕೂಲನದನಕೇಕೆ ಪನ್ನಗ
ಜಾಲಸಂಭವ[9]ನೆಂತು[10] ಹೇಳೆಲ್ಲವನು ತನಗೆಂದ ೨
ಕೇಳಬೇಹುದು ಪುಣ್ಯಕಥನವ
ಹೇಳಲೊಲ್ಲದ ಪಾಪಿಮರ್ತ್ಯರ
ಬಾಳಿಕೆಗೆ ಫಲವೇನು ಮರನಂದದಲಿ ಬದುಕಿದರೆ
ಹೂಳುವರು ನರಕದಲಿ ಕುಲವನು
ಹೇಳು ನೀನದರಿಂದ [11]ಸತ್ ಶ್ರ
ದ್ದಾ[12] ಳುವಹ ತನಗೆಂದು [13]ನುಡಿದನು[14] ಶೌನಕವ್ರತಿಪ ೩
ಬಲ್ಲೆ ನೀನೆಲೆ ಸೂತ ಧರ್ಮವ
ನೆಲ್ಲವನು [15]ಶ್ರದ್ಧೆಯಲಿ ಬೆಸಗೊಳೆ
ಬಲ್ಲವನು ನೀನೆಂದು ನಮಗೀ ವರ[16] ಹಿತಾರ್ಥವನು
ಸೊಲ್ಲಿಸುವರಿಲ್ಲರಿಯದವರಿಗೆ
ಬಲ್ಲತನವನು ಕೊಟ್ಟ ಸುಕೃತ
ಕ್ಕಿಲ್ಲ[17]ಲೈ[18] ಪಡಿಯಾದ ಸುಕೃತ ಮಹಾತ್ಮ ಕೇಳೆಂದ ೪
ಎಂದಡಾ [19]ಸೂತನು ಮುನಿ[20] ದ್ವಿಜ೦
ವೃಂದದಲಿ ನುಡಿದನು ಸರಾಗದ
ಲಂದು ಸರ್ಫೋ[21]ದ್ಭವನನಾಸ್ತೀಕನ ಸಮುದ್ಭ[22]ವವ
ಸಂದ ಪೌರಾಣಿಕ ಶಿರೋಮಣಿ
ವಂದಿಸುತ [23]ವಾಸವಿಯ[24] ಸುತನನು
ಕಂದೆರೆದು ಕಾರುಣ್ಯದಲಿ ಹೇಳಿದನು ಸತ್ಕಥೆಯ ೫
ಲೇಸನಾಡಿದೆ ಮುನಿಪ ಪರಹಿತ
ಭಾಷಿತನೆ ಹರಿಚರಣಕಮಲೋ
ಪಾಸಕರ ಬಲ್ಲಹನೆ ಭಾಗ್ಯೋದಧಿಯೆ ಗುಣನಿಧಿಯೆ
ಏಸು ಧನ್ಯನೋ ನಿಮ್ಮೊಡನೆ ಸಂ
ಭಾಷಣೆಯ ಪುಣ್ಯವಿದು ತನಗಾ
ವಾಸುದೇವನ [25]ಕರುಣ[26]ದಲಿ ದೊರೆಕೊಂಡುದಕಟೆಂದ ೬
ಲೋಲನೇತ್ರೆಯರೆಸೆದರವರೊಳು
ಬಾಲಿಕಯರಾ ಕದ್ರು ವಿನತೆಯರೆಂಬ [30]ನಾರಿ[31] ಯರು
ಶೀಲಗುಣಸಂಪನ್ನೆಯರು ಸುವಿ[32]ಶಾಲೆಯರು ಬಾಲೆಯರು ತೇಜೋ[33] ಲಾಲಿತೆಯರೆಂದೆನಿಸಿ ಮೆರೆದರು ನಿಜನಿವಾಸದಲಿ ೭ [34]ವರತಪಸ್ವಿನಿಯರು ಸುನಿರ್ಮಳ
ಚರಿತೆಯರು ಪತಿಭಕ್ತಿಯುಕ್ತೆಯ
ರುರುಗುಣಾನ್ವಿತೆಯರು [35]ನಿಜೋಚಿತ[36] ಧರ್ಮನಿರತೆಯರು
ಇರಲವರ ಸದ್ಭಾವಭಕುತಿಯ
ಭರವ[37]ನದ ನೀಕ್ಷಿಸುತ ಮೆಚ್ಚಿದೆ[38] [39]ನ[40]ರಳೂಗಂಗಳ ಮಂಗಳಾಂಗನೆಯರಿರ ನಿಮಗೆಂದ ೮
ವರವನೀವೆನು ಬೇಡಿಕೊಂಬುದು
ಪರಮಮಾನಿನಿಯರಿರ ನೀವೆನೆ
ಕರವ ಮುಗಿದಳು ಕದ್ರು [41]ಕೊಡು ಸಾವಿರ[42] ಮಹೋರಗರ
ವರತನಯರೆನಗಾಗಬೇಕೆನೆ
ತಿರುಗಿ ವಿನತೆಯ ಮೊಗವ ನೋಡಲು
ಚರಣದಲಿ ತಲೆವಾಗಿ ನುಡಿದಳು ನಿಜಮನೋರಥವ ೯
ಬೇಡುವೆನು ಸುತರಿಬ್ಬರನು ತಾ[43]ನಾಡೊಳ[44] ತಿಶಯ ವೀರ್ಯವಂತರ
ನಾಡೀ ತೋರೆಸಲೇಕೆ ಸವತಿಯ ಮಕ್ಕಳನು ಮಿಗುವ
ರೂಢಿಗತಿಶಯಪುಣ್ಯವಂತ್ರ
ನೋಡದೀವುದು ತನ್ನೊಳಗೆ ಕೃಪೆ
ಮಾಡುವರೆ ನಿಮ್ಮಡಿ[45]ಗಳೆನೆ[46] ನಗುತೆಂದನಾಮುನಿಪ ೧೦
ಸುರನರೋರಗವೀರರೊಳುದು
ರ್ಧರ ಪರಾಕ್ರಮ ನೀರ್ಯ ಶೌರ್ಯೋ
ತ್ಕರುಷಬಲಸಂಪನ್ನರನು [47]ತನಗೀವುದೆಂದೆನಲು[48]
ಪರಮ ಪಾವನಕೀರ್ತಿ ಕೇಳಾ[49]ದರೆ[50] ಕುಮಾರಕನಿತ್ತೆನೆನೆ ಪಂ
ಕರುಹಮುಖಿ ಪರಿತುಷ್ಟೆಯಾದಳು ಪತಿಯ ನುಡಿಗಳಿಗೆ ೧೧
ಸುದತಿ ಗರ್ಭವನೆರಡ ಸುಯಿಧಾ
ನದಲಿ ರಕ್ಷಿಸೆನುತ್ತ ಮುನಿಪತಿ
ಹದುಳದಲಿ ಸತಿಗೊರೆದು ತೆರಳಿದನಾತಪೋನವನಕೆ
ಮುದದಲಂದಾ ಕದ್ರು ಪುತ್ರರ[51]ಪದವ[52] ಪಡೆದಳು ಸಾವಿರವನ
ಗ್ಗದ ಮಹೋರಗನಿಕರವನು ಮುನಿವೀರ್ಯಸಂಭವರ ೧೨
ವಿನತೆ ಧರಿಸಿದಳಂಡವೆರಡನು
ವಿನುತ ಮುನಿವೀರ್ಯದಲಿ ಕಾಲದ
ಲನುಪಮೆ ಮಹಾಂಡುಗಳನು ಬೆಸಲಾಗಿ ವನದೊಳಗೆ
ಜನಿಸಿದಂಡಂಗಳನು ಮಾನಿನಿ
ದಿನ[53] ಹಲ[54] ವನೀಕ್ಷಿಸಿದರೊಡೆ [55]ಯದೆ[56]
ಜನಿಸಿದರು ಕದ್ರುವಿಗೆ ಸುತರೆಂದಳಲಿದಳು ತರಳೆ ೧೩
ವರುಷವೈನೂರರಲಿ ಸವತಿಗೆ
ಬಿರಿದುವಂಡಂಗಳು ಸಭಾಗೈಗೆ
ವರಕುಮಾರರು ಜನಿಸಿದರು ವಿಕ್ರಮಸಮನ್ವಿತರು
ಧರಿಸಿ[57]ದೆನು[58] ತಾನೆರಡ ಮತ್ತದ
ನೊರೆಯಲೇತಕೆ ಭಾಗ್ಯಹೀನೆಗೆ
ದೂರಕದಾತ್ಮಜವದನದರುಶನವೆಂದಳಬುಜಾಕ್ಷಿ ೧೪
ವೈಪರೀತ್ಯವೆದೇನು ಪತಿಯಾ
ಳಾಪವೇನಾಯ್ತಿತ್ತ ವರವದು
ರೂಪುದೋರದು ಶಿವಶಿವಾ ಎಂದೆನುತ ಮನದೊಳಗೆ
ತಾಪವನು ನೆರೆ ತಳೆದು ಲಜ್ಜಾ
ಕೋಪವೇಗಪರೀತೆಯೊಡೆದಳು
ದೀಪದಂತಿದೆ ಬೆಳಗುವಂಡವನೊಂದನದರೊಳಗೆ ೧೫
ಒಡೆದು ನೋಡಿದಳಬಲೆ [59]ಗರ್ಭವ[60]
[61]ತೊಡೆಗಳಿಲ್ಲದ[62] ಪುತ್ರವರನನು
ಕೆಡಿಸಿದುದು ನಿಧಿ ಭಾಪು ಭಾಗ್ಯವೆ ಪಾಪಿ ತನೆನುತ
ಮಡದಿ ಮರುಗುತ್ತಿರಲು ಕನಲಿದು
ನುಡಿದ[63]ನಾತನು ತಾಯೆ ತನ್ನನು[64]
ಕೆಡಿಸಿದೆಯಲಾ ನೀನೆ ವಿಧಿಯನು ದೂರಲೇಕೆಂದ ೧೬
ಕಂಡೆಯಲ್ಲಾ ಪುತ್ರ [65]ವದನದ[66]
ಖಂಡಲಕ್ಷ್ಮಿಯನದನು ಸೈರಿಸ
ದಂಡವನು ನೀನೊಡೆದೆ ಮತ್ಸರ [67]ಲೋಭವೇಗದಲಿ[68]
[69]ತುಂಡಿಸಿದೆ[70] ತೊಡೆಗಳನು ತನ್ನನು
ಗಂಡುಗೆಡಿಸಿದೆ ಸವತಿ ಕದ್ರುಗೆ
ಮಂಡೆಯಲಿ [71]ಹುಳ್ಳೆ[72] ಯನು ಹೊರು ತೊತ್ತಾ [73]ಗು ಹೋಗೆಂ[74]ದ ೧೭
ಮಾರುಹೋಗಾಸತಿಗೆ ನೀನೈ
ನೂರು ವರುಷ ಕೃತಾಘಫಲವನು
ನೀರೆ ಭೋಗಿಸು ಹೋಗೆನಲು [75]ತನು[76] ನಡುಗಿ [77]ಭಯಗೊಂಡು[78]
ಹೆದರಿದಳು ಹೇರಾಳ ಭಯವನು
ತೋರಿದಳು ತನಯಂಗೆ ಕರುಣವ
ನೋರುಗುಡಿಸಿದಳಬಲೆ ಕಂಬನಿದುಂಬಿ ಬಿಸುಸುಯ್ಡು
ಹೊಡವಡಲು [79]ದೇಹದಲಿ [80]ದೇಗುಲ
ಕೆಡೆದವೋಲಾಯ್ತಕಟ ವರವನು
ಪಡೆವ ಮಾತೆಲ್ಲಿಯದು ಹರಹರ ಮಗನನಾಶ್ರಯಿಸಿ
ಹಿಡಿದು ಬದುಕುವೆನೆಂಬ ತನ್ನನು
ಕಡಲಲದ್ದಿದೆ ಮಗನೆ [81]ದುಃಖವ[82]
[83]ಕಡಿಗೆ[84]ಚಾಚುವರಾರು ಕೆಟ್ಟೆನೆನುತ್ತ ಹಲುಬಿದಳು ೧೯
ಹೋಹೊ ಅಂಜದಿರಂಜದಿರು ನಿ
ರ್ವಾಹವನು ಹೇಳುವೆನು ಲೋಭವಿ
ಮೋಹದಲಿ ನೀನೊಡೆಯದಿರು ತನ್ನವರಜಾಂಡವನು
ಬೇಹ ಮಗನಹನುಮರ [85]ದೈತ್ಯರ[86]
ಮೋಹರಕೆ ಬಲುಗೈ ವಿಶಾಪವ[87]ನೂಹಿಸು[88] ವನಂಜದಿರು ಬಂದುದಕಳಬೇಡೆಂದ ೨೦
Leave A Comment