ಶಬ್ದಾರ್ಥ ಸೂಚಿ: (ii) ಆಸ್ತೀಕ ಪರ್ವ
ಅ | ಸಂ. | ಪ. |
ಅಕ್ಕು = ಆಗುವುದು | ೪ | ೧೩ |
ಅಖ್ಯಾತಿ = ಕೆಟ್ಟ ಹೆಸರು | ೮ | ೩ |
ಅಗ್ಗ = ಶ್ರೇಷ್ಠ | ೧ | ೧೨ |
ಅಗ್ರಗಣ್ಯ = ಮೊದಲೆಣಿಕೆಯವ, ಶ್ರೇಷ್ಟ | ೯ | ೪೪ |
ಅಗ್ರಜ = ಮೊದಲು ಹುಟ್ಟಿದವ, ಅಣ್ಣ | ೯ | ೪೨ |
ಅಗಡಿಸು = ವಂಚನೆಯ ಮಾತನಾಡು | ೩ | ೫ |
ಅಗುಳು = ಅಗಿ, ಖನನ | ೧೧ | ೩೪ |
ಅಂಕ = ತೊಡೆ ೯ | ೨೩ | |
ಅಂಕುಳ = ಅಧಿಕಾರ, ಶಿಕ್ಷಿಸುವವ | ೨ | ೨೦ |
ಅಂಘವಣೆ = ಆಶೆ, ಅಪೇಕ್ಷೆ | ೯ | ೩೯ |
ಅಜಮೀಢ = ಸೂರ್ಯವಂಶದ ಒಬ್ಬ ರಾಜ | ೧೨ | ೩೩ |
ಅಂಜನ = ಕಣ್ಣಿಗೆ ಹಚ್ಚುವ ಕಾಡಿಗೆ | ೭ | ೧೭ |
ಅಡ್ಡವಿಸು = ತಡೆಯೊಡ್ಡು | ೧೨ | ೨೯ |
ಅಂಡ = ಮೊಟ್ಟೆ, ತತ್ತಿ | ೧ | ೧೩ |
ಅಂಡಕಟಾಹ = ಬ್ರಹ್ಮಾಂಡದ ಕೊಪ್ಪರಿಗೆ | ೫ | ೪೫ |
ಅಂಡಲೆ = ಹಿಂಸಿಸು, ಪೀಡಿಸು, ಬೆನ್ನುಹತ್ತು | ೩ | ೩೨ |
ಅಣುರೂಪ = ಸೂಕ್ಷ್ಮ ದೇಹ | ೫ | ೪೯ |
ಅದ್ದುದು = ಯಜ್ಞಶಾಲೆಯಲ್ಲಿಯ ವೈದಿಕ ಧುರೀಣ | ೧೨ | ೧೪ |
ಅಧಟ = ಶೂರ, ಪರಾಕ್ರಮನಿ | ೫ | ೧೦ |
ಅನಂತ = ಶ್ರೇಷ | ೮ | ೩೨ |
ಅನಂತೋರು – ಅತಿಶಯ, ಬಹಳ | ೨ | ೧೫ |
ಅನಾರತ = ಸತತ, ಯಾವಾಗಲೂ | ೧೧ | ೪೨ |
ಅನೀಕ = ಸಮೂಹ, ಸೇನೆ | ೭ | ೨೮ |
ಅನುನಯ = ಪ್ರೀತಿಯ ಮಾತು, ನೀತಿಯ ಮಾತು | ೩ | ೩೪ |
ಅನುವರಿ = ವೇಳೆಯ ಔಚಿತ್ಯವನ್ನು ತಿಳಿ | ೫ | ೧೧ |
ಅನುವಾದ = ಒಪ್ಪಿಗೆ, ಸಮ್ಮತಿ | ೭ | ೨೩ |
ಅನೂರು = ತೊಡೆಗಳಿಲ್ಲದವ, ಅರುಣ | ೧ | ೨೫ |
ಅನ್ನೆವರ = ಅಲ್ಲಿಯವರೆಗೆ | ೩ | ೧೮ |
ಅಪ್ರತಿ = ಸರಿಯಿಲ್ಲದ, ಅಸಮಾನ | ೧೩ | ೪೦ |
ಅಪಗತದೋಷ = ಪಾಪವನ್ನು ಕಳೆದುಕೊಂಡವ | ೮ | ೧೧ |
ಅಪಭಾವನೆ = ಅವಮಾನ, ಮಾನಗೇಡು | ೪ | ೨೩ |
ಅಪರಾಂಗ = ದೇಹದ ಕೆಳಭಾಗ | ೩ | ೧೭ |
ಅಪರಾದ್ರಿ = ಪಡುವಣಬೆಟ್ಟ | ೧೦ | ೧೭ |
ಅಪಸದ = ದುಷ್ಟ, ದುರ್ಜನ | ೧೧ | ೫ |
ಅಪೋಹ = ಆಕ್ಷೇಪಣೆ, ತಡೆ | ೬ | ೨೭ |
ಅಭ್ರ = ಆಕಾಶ, ಮೋಡ | ೪ | ೧೫ |
ಅಭ್ರಾಂಗ = ನೋಡದಂಟಹ ಮೈಯವ | ೮ | ೧೩ |
ಅಭಯಸ್ಥಾನ = ಮುಕ್ತಿ, ಮೋಕ್ಷ | ೧೩ | ೩೧ |
ಅಭಿರಾಮ = ಸುಂದರ, ಮನೋಹರ | ೬ | ೫ |
ಅಭಿಸಂಧಿ = ಇಚ್ಛೆ | ೯ | ೩೮ |
ಅಂಬರಮಣಿ = ಸೂರ್ಯ | ೫ | ೪ |
ಅಂಭೋನಿಧಿ = ಸಮುದ್ರ | ೧ | ೩೩ |
ಅಮರ್ = ಅಪ್ಪಿಕೊಳ್ಳು, ಅಂಟಿಕೊಳ್ಳು | ೨ | ೨೨ |
ಅಮರನದಿ = ಸುರನದಿ, ಗಂಗಾ | ೧೦ | ೧೨ |
ಅಮರರಗಿರಿ = ಮೇರು ಪರ್ವತ | ೪ | ೧೫ |
ಅರ್ಕ = ಸೂರ್ಯ | ೯ | ೪೧ |
ಆರ್ಘ್ಯ = ಧನ, ಸಂಪತ್ತು | ೧೦ | ೨೪ |
ಅರುತುವು = ಬತ್ತಿದುವು | ೫ | ೪ |
ಅರಳು = ಹೂವು | ೧ | ೮ |
ಅರಿ = ಚಕ್ರ, ಚಕ್ರಾಯುಧ | ೬ | ೭ |
ಅರಿಷ್ಟ = ಹಗೆತನದಿಂದ ಕೂಡಿದ | ೮ | ೪ |
ಅರಿವಿಜಯ = ಷಡ್ರಿಪುಗಳನ್ನು ಜಯಿಸಿದವ | ೮ | ೧೧ |
ಅಲಘು – ದೊಡ್ಡ, ಬಹಳ | ೭ | ೬ |
ಆಲಂಘ್ಯ = ದಾಟಲುಬಾರದ, ಗೆಲ್ಲಲಾಗದ | ೪ | ೧೭ |
ಅಲಸು = ಅಸಸ್ಯಗೊಳ್ಳು, ಬೇಸರಪಡು | ೧೧ | ೨೩ |
ಅವಜ್ಞೆ = ತಿರಸ್ಕಾರ, ಅಪಮಾನ | ೭ | ೨೬ |
ಅವದಿರು = ಅವರು | ೩ | ೯ |
ಅವಭೃಥ = ಯಜ್ಞದ ಕೊನೆಯಲ್ಲಿ ಮಾಡುವ ಸ್ನಾನವಿಧಿ | ೭ | ೨೭ |
ಅವರಜ = ತರುವಾಯ ಹುಟ್ಟಿದವ, ತಮ್ಮ | ೧ | ೨೦ |
ಅಶ್ವಿ = ಅಶ್ವಿನಿ ದೇವತೆಗಳು | ೫ | ೧೨ |
ಆಶೇಷ = ಎಲ್ಲ | ೮ | ಸೂ |
ಅಷ್ಟಮೂರುತಿ = ಶಿವ | ೭ | ೨೦ |
ಅಹಿಕುಲಕಾಲ = ಸರ್ಪಗಳ ಸಮೂಹಕ್ಕೆ ಯಮನಂತಿದ್ದವ, ಗರುಡ | ೬ | ೧೬ |
ಅಹಿಶಯನ = ವಿಷ್ಣು | ೬ | ೪ |
ಅಳವಳಿ = ಸಾಮರ್ಥ್ಯಗುಂದು | ೫ | ೩೯ |
ಅಳ್ಲೆ = ಪಕ್ಕಡಿ | ೪ | ೩೧ |
ಆ | ||
ಆಕರ್ಣನ = ಕಿವಿಯನ್ನು ತುಂಬುವ, ಕೇಳಬಹುದಾದ | ೧೩ | ೪೭ |
ಆಕ್ರಮಿಸು = ದಾಟು, ಮೀರು | ೫ | ೮ |
ಆಕುಳ = ಚಿಂತಾಗ್ರಸ್ತ, ದುಃಖಿ | ೭ | ೧೮ |
ಅಖಂಡಲ = ಇಂದ್ರ | ೫ | ೩೧ |
ಆಗು = ಆದ ಸಂಗತಿ | ೧೧ | ೪೪ |
ಆಚಮ್ಯ = ಅಚಮನ | ೧೧ | ೨೭ |
ಆತತಾಯಿ = ಪಾತಕಿ, ದುಷ್ಟ | ೧೨ | ೬ |
ಆತ್ಮಭವ = ಮಗ | ೧ | ೨ |
ಆಪಡೆ = ಸಮರ್ಥನಾದರೆ | ೬ | ೨೯ |
ಆಪಾದನ = ಸಂಪತ್ತು, ಸಂರಕ್ಷಣೆ | ೧೦ | ೬ |
ಆಮೋದ = ಪರಿಮಳ, ಸುವಸನೆ | ೩ | ೨ |
ಆಯತಿಕೆ = ವಿಸ್ತಾರ, ವೈಶಾಲ್ಯ, ಮರ್ಮ | ೩ | ೧೧ |
ಆಯತೇಕ್ಷಣ = ವಿಶಾಲವಾದ ಕಣ್ಣು | ೬ | ೬ |
ಆರ್ತಿ = ದುಃಖ, ಸಂತಾಪ | ೮ | ೨೧ |
ಆರವ = ಕೂಗು, ಕಿರುಚು | ೩ | ೩೮ |
ಆಲಸಮ = ಒಂದು ಪುಣ್ಯತೀರ್ಥದ ಹೆಸರು | ೪ | ೪ |
ಆಲಿ = ಕಣ್ಣು | ೬ | ೩೮ |
ಆಲೋಕನ = ದೃಷ್ಟಿ, ನೋಟ | ೫ | ೧೧ |
ಆವಾಸ = ಮನೆ, ಬೀಡು | ೫ | ೪೧ |
ಆಶ್ರಿತಭಕ್ಷಕ = ಅಗ್ನಿ | ೩ | ೪೨ |
ಆಸರೆ = ಚಿಂತೆ, ದುಃಖ, ದಣಿವು | ೯ | ೩೦ |
ಆಹವ = ಯುದ್ಧ | ೫ | ೭ |
ಅಹಿತಾಗ್ನಿ = ಯಜ್ಞಾಗ್ನಿಯನ್ನಿರಿಸಿ ಕೊಂಡುವ, ಅಗ್ನಿಹೋತ್ರಿ | ೧೩ | ೨೦ |
ಅಳಪ್ತಿಅ = ಮಾತು, ಕೂಗು | ೪ | ೭ |
ಆಳಾಪ = ಮಾತು | ೧ | ೧೫ |
ಆಳಿಗೊಳ್ = ನಿಂದಿಸು, ತಿರಸ್ಕರಿಸು | ೨ | ೮ |
ಆಳುವರೆ = ಮುಳುಗುವರೆ | ೯ | ೯ |
ಇ | ||
ಇಕ್ಕಡಿ = ಎರಡು ತುಂಡು | ೫ | ೧೪ |
ಇಕ್ಕೆ = ಇರ್ಕೆ, ಇರುವ ಸ್ಥಳ, ವಸತಿ | ೪ | ೧೩ |
ಇಕ್ಕೈ = ಎರಡು ಕೈಗಳು | ೪ | ೧೬ |
ಇಟ್ಟಿ = ಈಟಿ, ಭಲ್ಲೆಯ | ೯ | ೩೬ |
ಇದ್ದಿರಿಕೆಯಲಿ = ಇದ್ದುದಿದ್ದಂತೆ, ಒಮ್ಮಿದೊಮ್ಮೆಲೆ | ೫ | ೫ |
ಇನ = ಸೂರ್ಯ | ೪ | ೨೬ |
ಇಭ = ಆನೆ | ೫ | ೨ |
ಇಷ್ಟಿ = ಯಜ್ಞಕರ್ಮ | ೧೩ | ೧೧ |
ಈ | ||
ಈಡಿರಿ = ನೂಕು, ನುಗಿಸು | ೬ | ೪೮ |
ಈರಾರು = ಹನ್ನೆರಡು | ೩ | ೩೦ |
ಈಸು = ಇಷ್ಟು | ೨ | ೮ |
ಉ | ||
ಉಗುವ = ಹೊರಚೆಲ್ಲುವ, ಹೊರಹೊಮ್ಮುವ | ೧೩ | ೧೮ |
ಉಗ್ಝಡ = ಬಿರುದಾವಳಿಯ ಹೊಗಳಿಕೆ ೬ | ೫ | |
ಉಚ್ಚಲಿತ = ಮೇಲೆ ಹಾರುವ ನೆಗೆಯುಉವ ೩ | ೨ | |
ಉಚ್ಚೈಃಶ್ರವ = ಇಂದ್ರನ ಕುದುರೆ (ಸಮುದ್ರಮಥನ ಕಾಲದಲ್ಲಿ ಹುಟ್ಟೀದ ೧೪ ರತ್ನಗಳಲ್ಲಿ ಒಂದು) | ೧ | ೨೬ |
ಉಡಿ = ಮುರಿ | ೨ | ೬ |
ಉತ್ತಮಾಂಗ = ತಲೆ | ೩ | ೨೮ |
ಉತ್ತರಿಸು = ದಾಟು, ಮೂರಿ | ೯ | ೮ |
ಉತ್ತಾಲ = ದೀರ್ಘವಾದ, ಉದ್ಧವಾದ | ೩ | ೧ |
ಉದ್ಗಾತೃ = ವೇದಮಂತ್ರಗಳನ್ನು ಹಾಡುವವ | ೧೨ | ೧೪ |
ಉದ್ಘಾಟಿಸು = ಎತ್ತಿತೋರಿಸು | ೧೦ | ೨೦ |
ಉದ್ದಂಡಪವನ = ಬಿರುಗಾಳಿ | ೪ | ೨ |
ಉದ್ದು = ತಿಕ್ಕು, ಉಜ್ಜು, ಮರ್ದಿಸು | ೫ | ೩೭ |
ಉಪ್ಪರಿಸು = ಮೇಲಕ್ಕೆ ಹಾರು | ೪ | ೧೪ |
ಉಪಪನ್ನ = ಕೂಡಿದವ, ಹೊಂದಿದವ | ೭ | ೧೧ |
ಉಪಶಮಿಸು = ಶಾಂತನಾಗು, ಸಮಾಧಾನ ಹೊಂದು | ೭ | ೧೮ |
ಉಪಸಂಹರಿಸು = ಹಿಂದಕ್ಕೆ ಸೆಳೆದುಕೊಳ್ಳಿ | ೨ | ೧೮ |
ಉಪಹತಿ = ಸಂಕಟ, ಆಪತ್ತು | ೧೧ | ೨ |
ಉಪೇತ = ಕೂಡಿದವ, ಹೊಂದಿದವ | ೧೨ | ೩೨ |
ಉಬ್ಬಾಳಿ = ಉತ್ಸಾಹ, ಪ್ರಭಾವ | ೫ | ೪೭ |
ಉಭಯಾರ್ಥ = ಎರಡು ಬಗೆಯ ಸಂಪತ್ತು (ಇಹ-ಪರ ಸಂಪತ್ತು) | ೧೦ | ೨೪ |
ಉಮ್ಮೋಹ = ಅತಿಶಯವದ ಆಕರ್ಷಣೆ, ಹಿಗ್ಗು | ೭ | ೨೫ |
ಉರಗಕುಲಾಶನ = ಹಾವುಗಳನ್ನು ಆಹಾರ ಮಾಡಿಕೊಂಡವ, ಗರುಡ | ೫ | ೨೦ |
ಉರವಣೆ = ರಭಸ, ಉತ್ಸಾಹ | ೪ | ೩ |
ಉಳುಕು = ಅಲ್ಲಾಡು | ೪ | ೧೬ |
ಉಳ್ಳುದು = ವಸ್ತುಸ್ಥಿತಿ, ಇದ್ದ ಮಾತು | ೧ | ೩೩ |
ಊ | ||
ಊಣೆಯ = ನ್ಯೂನತೆ, ಕೊರತೆ | ೧೧ | ೩೩ |
ಊನ = ಕೊರತೆ, ಸುಳ್ಳು | ೧ | ೩೩ |
ಊಳಿಗ = ಉಪದ್ರವ, ಪೀಡೆ | ೯ | ೧೯ |
ಋ | ||
ಋತ್ವಿಜ = ಯಜ್ಞಕಾಲದಲ್ಲಿ ಬೇಕಾಗುವ ವೇದಜ್ಞ, ಬ್ರಾಹ್ಮಣ | ೯ | ೧೩ |
ಎ | ||
ಎಕ್ಕಟಿಗ = ಒಂಟಿಗ, ಏಕಾಕಿ | ೫ | ೨೮ |
ಎಕ್ಕತುಳ = ಒಬ್ಬನೆ ಒಬ್ಬ, ಒಂಟಿಗ | ೩ | ೧೪ |
ಎಂಜಲಿಸು = ಕಚ್ಚು (ಹಾವು) | ೯ | ೨೦ |
ಎಡೆಯಾಡು = ಓಡಾಡು, ತಿರುಗಾಡು | ೨ | ೨ |
ಎತ್ತುದಲೆ = ಮೇಲಕ್ಕಿತ್ತ್ದ ತಲೆ | ೫ | ೫೦ |
ಎರೆಯ = ಒಡೆಯ, ಯಜಮಾನ | ೬ | ೨೯ |
ಎಸಕ = ಕರ್ಮ, ಕೆಲಸ | ೬ | ೫೨ |
ಏ | ||
ಏಲಾಪುತ್ರ = ವಾಸುಕಿಯ ತಮ್ಮನ ಹೆಸರು | ೯ | ೧೬ |
ಏಳಿಲ = ಉಪೇಕ್ಷೆ, ತಿರಸ್ಕಾರ | ೫ | ೧೩ |
ಐ | ||
ಐದನೆ = ಇದ್ದಾನೆ, ಇರುತ್ತಾನೆ | ೧೩ | ೧೦ |
ಐಸಲೆ = ಇಷ್ಟೇ ಅಲ್ಲವೆ, ಹೀಗಲ್ಲವೆ | ೧೦ | ೨೪ |
ಒ | ||
ಒಕ್ಕರಿಸು = ಹೇಸಿಕೊಳ್ಳು, ಹಿಂಜರಿ, ಹೆದರು | ೫ | ೧೪ |
ಒಚ್ಚತ = ಚೆನ್ನಾಗಿ, ಓರಣವಾಗಿ | ೨ | ೧೦ |
ಒಡೆದುಳಿ = ಒಡೆಯುವಂತೆ ತುಳಿ | ೫ | ೨೭ |
ಒತ್ತೊತ್ತು – ಗದ್ದಲ, ಗೊಂದಲ | ೬ | ೮ |
ಒನೆ = ಅಲುಗಾಡಿಸು | ೧೧ | ೩೯ |
ಒಪ್ಪಿತ = ಒಳ್ಳೆಯದು | ೪ | ೧೪ |
ಓ | ||
ಓಲಗಿಸು = ಅನುಸರಿಸು, ಮನ್ನಿಸು | ೮ | ೩೫ |
ಓರುಗುಡಿಸು = ಸಂಕೋಚಗೊಳಿಸು, ಕಡಿಮೆಮಾಡು | ೧ | ೧೮ |
ಓಸರಿಸು = ಬದಿಗೆ ಸರಿಸು | ೪ | ೨೬ |
Leave A Comment