ಧನಂಜಯ = ಅಗ್ನಿ ೧೧
ಧರಾಮರ = ಬ್ರಾಹ್ಮಣ ೧೯
   
ನನ್ನಿ = ಸತ್ಯ ೨೩
ನಿಗಮಗರ್ಭ = ವೇದಗಳನ್ನು ಹೊಟ್ಟೆಯಲ್ಲಿರಿಸಿಕೊಂಡವನು, ಚತುರ್ಮುಖ ಬ್ರಹ್ಮ
ನಿಗಮನಿಷ್ಠ = ವೇದಗಳಲ್ಲಿ ಶ್ರದ್ಧೆಯುಳ್ಳವ
ನಿಗ್ರಹ = ದಂಡನೆ, ಶಿಕ್ಷೆ
ನಿತ್ಯಾತ್ಮ = ಕವಿಯ ಅಂಕಿತ ೪೬
ನಿಬದ್ಧ = ನಿಶ್ಚಯ ೨೫
ನಿರವದ್ಯ = ಪವಿತ್ರ, ಪಾಪರಹಿತ ೩೧
ನಿರಾಮಯ = ನಿಷ್ಕಂಟಕ, ಕ್ಷೇಮ ೩೪
ನಿರುತ = ನಿಶ್ಚಯವಾಗಿಯೂ ೧೯
ನಿವಹ = ಸಮೂಹ
ನಿಶಾಚರ = ರಾಕ್ಷಸ ೨೧
ನೀರೆ = ತರುಣ ಸ್ತ್ರೀ, ಹೆಂಡತಿ ೨೨
ನೆಗಳು = ಮಾಡು ೧೦
ನೆಚ್ಚು = ಶ್ರದ್ಧೆಯಿಡು, ನಂಬು  ಸೂ
ನೈಮಿಷ = ಪೂರ್ವಕಾಲದ ಒಂದು ಅರಣ್ಯದ ಹೆಸರು
   
ಪ್ರಮದೆ = ಚೆಲುವೆ, ಸುಂದರಿ ೩೧
ಪ್ರವರ = ಶ್ರೇಷ್ಟ
ಪರ್ಣಾಲಯ = ಎಲೆಮನೆ, ಗುಡಿಸಲು
ಪರರೂಪು = ಇನ್ನೊಂದು ರೂಪು ೩೦
ಪರಾಶರಸೂನು = ಪರಾಶರನ ಮಗ, ವೇದವ್ಯಾಸ
ಪರಿಭವಿಸು = ಅವಮಾನಗೊಳಿಸು ೧೪
ಪರಿವರಿಸು = ಸುತ್ತುಗಟ್ಟು, ಬಳಸು   ೨೦
ಪರಿಸೃಷ್ಟಿ = ಪುನರ್ಜನನ ೧೪
ಪವಮಾನ = ವಾಯುದೇವ ೨೨
ಪವಿಪಂಜರ = ವಜ್ರದ ಪಂಜರ, ಭದ್ರವಾದ ಆಶ್ರಯ ೧೧
ಪಾಕಕರ್ತು = ಬೇಯಿಸುವವ, ಅಡಿಗೆ ಮಾಡುವವ ೧೧
ಪಾರಾಶರವೃತಿ = ಪರಾಶರ ಋಷಿಯ ಮಗನಾದ ವೇದವ್ಯಾಸ ಮುನಿ
ಪಾವಕ = ಅಗ್ನಿ ೨೧
ಪ್ರಾರಬುಧ = ಪ್ರಾರಬ್ಧ
ಪಿತಾಮಹ = ಅಜ್ಜ ೨೬
ಪುಂಜ = ಸಮೂಹ ೧೫
ಪುಣ್ಯಾವಹ = ಪುಣ್ಯಕರವಾದ
ಪುಳಕಿತ = ಹೊಂಪುಳಿಗೊಂಡ, ರೋಮಾಂಚಿತವಾದ
ಪೊಡವಂಟ = ನಮಸ್ಕರಿಸಿದನು ೧೪
ಪೌಲೋಮ = ಪುಲೋಮೆಗೆ ಸಂಬಂಧಿಸಿದ ಕಥೆ ಸೂ
ಫಲಾಪ್ತಿ = ಫಲಪ್ರಾಪ್ತಿ
   
ಬನ್ನ – ದುಃಖ, ಕೊರತೆ ೨೩
ಬರುಮನ = ಹಾಳಾದ ಮನಸ್ಸು ೩೪
ಬರುಮಾತು = ಅರ್ಥವಿಲ್ಲದ ಮಾತು ೨೭
ಬಲ್ಲಿದ = ತಿಳಿದವ ೨೭
ಬಸವಳಿ = ಸ್ವಾಧೀನ ತಪ್ಪು ೩೦
ಬಸಿರು = ಹೊಟ್ಟೆ ೩೮
ಬಾಹಿರ = ಬಹಿಷ್ಕೃತ, ಕುಲಗೇಡಿ
ಬಾಳಕೊಳ್ = ಕತ್ತಿಯಿಂದ ಚುಚ್ಚು
ಬಿತ್ತನು = ಬೀಜವನ್ನು ೩೩
ಬೇಗಡೆ = ತೊಂದರೆ, ದುಃಖ ೩೩
ಬೇಗಡೆ = ತೊಂದರೆ, ದುಃಖ
ಬೇಹುದು = ವೇಳ್ಕು, ಬೇಳ್ಕು, ಬೇಕು ೨೨
   
ಭದ್ರ = ಮಂಗಳ ೩೪
ಭರದ್ವಾಜ = ಒಬ್ಬ ಋಷಿ
ಭರಿತ = ತುಂಬಿದ
ಭವ = ಶಿವ ೩೭
ಭವನ = ಮನೆ ೩೭
ಭಸ್ಮೀಭೂತನಾಗು = ಬೂದಿಯಾಗಿ ೩೧
ಭಾಜನ = ಪಾತ್ರ, ಯೋಗ್ಯ ೩೬
ಭಾನುವಂತ = ಪ್ರಕಾಶದಿಂದ ಕೂಡಿದವನು ೨೨
ಭಾರ್ಗವ = ಬೃಗುಋಷಿಯ ವಂಶದಲ್ಲಿ ಹುಟ್ಟಿದವ ಸೂ
ಭಾವಿತ = ಹೇಳಲ್ಪಟ್ಟುದು
ಭಾಸುರ = ಹೊಳೆಯುವ, ಪ್ರಕಾಶಿಸುವ ೧೯
ಭಾಳನೇತ್ರ = ಹಣೆಗಣ್ನ, ಶಿವ ೨೮
ಭೀರು = ಹೆದರುಗುಳಿ ೧೩
ಭೂತಭಾವನ = ಪ್ರಾಣಿಗಳ ಸ್ಥಿತಿಗೆ ಕಾರಣನಾದವನು ೧೨
ಭೂದಿವಿಜ = ಬ್ರಾಹ್ಮಣ, ಭೂಸುರ ೧೨
ಭೃಗೂದ್ವಹ = ಭೃಗುವಂಶದಲಿ ಹುಟ್ಟಿದವ
   
ಮಕುಟುಅ = ಕಿರೀಟ
ಮಖ = ಯಜ್ಜ
ಮಂಡೆ = ತಲೆ
ಮತ್ತಕಾಶಿನಿ = ಸುಂದರಿ, ಚೆಲುವೆ ೨೦
ಮಧ್ಯಮಪಾಂಡವ = ಅರ್ಜುನ ೨೧
ಮನೋಭವ = ಕಾಮ ೩೦
ಮರೆವೊಗು = ಶರಣುಹೋಗು ೧೫
ಮಸೆ =ತಿಕ್ಕು
ಮಹಾರ್ಣವ = ಮಾಹಾಸಗರ ೪೩
ಮಾಣು = ಬಿಡು ೪೧
ಮರವಡು = ಕಟ್ಟಿಗೆಯಂತೆ ಆಗು ೧೮
ಮರುಮೊನೆಗೊಳ್ಳು – ಚುಚ್ಚಿದಲ್ಲಿಯೇ ಚುಚ್ಚು ೧೭
ಮಸಣ = ಸ್ಮಶಾನ ೩೮
ಮಾರ್ಕಾಂಡೇಯ = ಮೃಕಂಡು ಋಷಿಯ ಮಗ ೧೮
ಮೀ = ಸ್ನಾನಮಾಡು, ಮೈದೊಳೆ ೩೫
ಮುಗಿವುದು = ತೀರುವುದು, ಸಾಧ್ಯ
ಮುಟ್ಟಿದನು = ಕಚ್ಚಿದನು
ಮೃಗಯಾ = ಬೇಟೆ ೨೧
ಮೃದುಸ್ಮಿತ = ಮೆಲುನಗೆ ೧೬  
ಮೆಟ್ಟು = ತುಳಿ
ಮೇದಿನೀ = ಭೂಮಿ ೧೨
ಮೆಯ್ದೆಗೆ = ಮುಂದಿನ ಕೆಲಸ
ಮೇಹುಗೊಳ್ = ತಿನ್ನು ೪೧
ಮೌಳಿ – ತಲೆ
   
ಯಜ್ಞವಾಟ = ಯಜ್ಞಶಾಲೆಗಳ ಬೀದಿ
ಯುಗಳ = ಜೊತೆ, ಎರಡು ೧೬
ರಕ್ಷಾಮಣಿ = ರಕ್ಷೆಗಾಗಿ ಕಟ್ಟುವ ರತ್ನ ೩೦
ರಚಿಸುವರೆ = ಮಾಡುವುದಕ್ಕೆ ೧ ೧೫  
ರತೆ = ಆಸಕ್ತಿ ೧೪
ರೂಪುದೋರು= ಪ್ರತ್ಯಕ್ಷವಾಗು ೨೮
ರೋಮಹರ್ಪಣ = ಸೂತ ಪೌರಾಣಿಕನ ತಂದೆ
ರೌರವ = ರುರು ಎಂಬ ರುಷಿಯ ಮಗ ಶುನಕ ೨೫
   
ಲವ = ತೀರ ಸಣ್ಣಭಾಗ ೩೬
ಲೋಲ = ಚಂಚಲ, ಅಸ್ಥಿರ
ಲೋಲಲೋಚನೆ = ಚಂಚಲಾಕ್ಷಿ ೧೩
   
ವಧೂಸರ = ಮಹಾಭಾರತದಲ್ಲಿ ಬರುವ ಒಂದು ಪುಣ್ಯ ನದಿಯ ಹೆಸರು ೩೫
ವನಧಿ = ಸಮುದ್ರ ೧೩
ವರಾನ್ನ = ಯಜ್ಞಾಹುತಿಯ ಅನ್ನ
ವಳಯ = ಪರಿಸರ, ವರ್ತುಲ ೨೮
ವಿಗತಾಶನ = ಅಹಾರವನ್ನು ತ್ಯಜಿಸಿದವ ೩೨
ವಿಜನ = ಅರಣ್ಯ, ಕಾಡು, ಜನರಿಲ್ಲದ ಪ್ರದೇಶ ೧೯
ವಿತತ = ವಿಸ್ತಾರವದ, ವ್ಯಾಪಕವಾದ
ವಿದ್ಯಾರೂಢ = ವಿದ್ಯೆಯ ಪೂರ್ಣತೆಯನ್ನು ಪಡೆದವ
ವಿದಿತವೆನಲು = ತಿಳಿಯುವ ಹಾಗೆ
ವಿಧಾತೃ = ಬ್ರಹ್ಮ, ದೈವ ೧೨
ವಿಧಿಕೋವಿದ = ದೈವನಿಯಮ ಬಲ್ಲವ ೨೬
ವಿಧು = ಚಂದ್ರ ೩೦
ವಿಪ್ಲವ = ಸಂಕಟ, ಗಂಡಾಂತರ ೧೩
ವಿಪಿನ = ಅಡವಿ, ಕಾಡು, ಅರಣ್ಯ ೨೭
ವಿಪ್ರಿಯ = ಪ್ರಿಯವಲ್ಲದುದು
ವಿಬುಧ = ದೇವತೆ ೨೧
ವಿಮಲಪಕ್ಷ = ಶುಕ್ಲ ಪಕ್ಷ ೩೦
ವಿಮೋಹಿತವೃತ್ತ = ಮಾಹೆಗೆ ಸಿಕ್ಕಿಸಿಕೊಂಡವರು ೧೮
ವಿಶ್ರಾಮಯಾಮಿ = ವಿಶ್ರಾಂತಿಗಾಗಿ ಬಂದವ
ವಿಶ್ರುತ = ಎಲ್ಲವನ್ನೂ ಅರಿತವ
ವಿಶ್ರುತ = ಚೆನ್ನಾಗಿ ಕೇಳಿದ
ವಿಶ್ವಾವಸು = ಗಂಧರ್ವ ರಾಜನ ಹೆಸರು ೨೭
ವಿಷಧರೆ = ಹಾವು, ಸರ್ಪ
ವಿಷಯ = ಪ್ರದೇಶ, ದೇಶ
ವಿಷಾಸ್ಯ = ಮುಖದಲ್ಲಿ ವಿಷವುಳ್ಳದು, ಹಾವು
ವಿಹಿತ = ನಿಯಮ, ಕಟ್ಟಳೆ ೨೩
ವೃತ್ತವಂಶ = ಚರೀತ್ರ ಶೀಲ ೧೫
ವೃತ್ತವಿರಹಿತೆ = ಕೆಟ್ಟ ಹೆಸರುಯಿಲ್ಲದವಳೆ ೩೯
ವೃತ್ತರಿಪು = ಇಂದ್ರ ೧೫
ವೃಥಾ = ವ್ಯರ್ಥ, ಕಾರಣವಿಲ್ಲದೆ ೧೨
ವೇದಿ = ಯಜ್ಞಕುಂಡದ ಕಟ್ಟೆ
ವೈಶ್ವಾನರ = ಅಗ್ನಿ ೨೨
   
ಶಂಖಮೇಖಲ = ಒಬ್ಬ ಋಷಿ
ಶಲ್ಯ = ಚುಚ್ಚುವ ಆಯುಧ
ಶಲಬ = ದೀಪದ ಹುಳ, ಪತಂಗ ೨೬
ಶಶಾಂಕ = ಚಂದ್ರ
ಶಾಸ್ತ್ರೋದಿತ = ಶಾಸ್ತ್ರದಲಿ ಹೇಳಿದುದು
ಶ್ರೀನಿವಾಸ = ವಿಷ್ಣು, ಶ್ರೀಹರಿ ೧೬
ಶ್ರುತಿ = ವೇದ ೨೯
ಶ್ರೇಣಿ – ಸಾಲು, ಸಮೂಹ
ಶೌನಕ = ಬೃಗು ವಂಶದಲ್ಲಿ ಹುಟ್ಟಿದ ಒಬ್ಬ ಋಷಿ ಸೂ
   
ಸಕಲಾತ್ಮಕನು = ಎಲ್ಲಕ್ಕೂ ಪ್ರಾಣ ಸ್ವರೂಪನಾದವನು ೨೨
ಸಖಿ = ಮಿತ್ರ, ಸ್ನೇಹಿತ
ಸಂಕ್ಷೀಣ = ಕಡಿಮೆಯಾದ, ಕುಂದಿದ
ಸಂಜನಿಸು = ಹುಟ್ಟು, ಉಂಟಾಗು ೧೧
ಸಂಜ್ಞಿತ = ಹೆಸರುಳ್ಲವನು ೮೯
ಸತ್ರ = ಜ್ಞಾನಯಜ್ಞ
ಸತುಕರಿಸಿ = ಸತ್ಕರಿಸು, ಮನ್ನಣೆ ಮಾಡು
ಸಂತ = ಶಾಂತ, ಸಮಾಧಾನ ೨೩
ಸಂದನು = ಹೋದನು ೧೫
ಸಂಭವ = ಮಗ ೧೦
ಸಂಭ್ರಮಿಸು = ಮಂಕುಗೊಳ್ಳು
ಸಮಂತ್ರಕ = ದಾನಮಂತ್ರಸಹಿತ ೨೭
ಸರಳು = ಬಾಣ ೧೮
ಸಲಿಲ = ನೀರು ೧೫
ಸುಲುವೆನೆ = ಯೋಗ್ಯನೆನಿಸುವೆನೇ
ಸರ್ವಭಕ್ಷಕ = ಎಲ್ಲವನ್ನೂ ತಿನ್ನುವವ, ಅಗ್ನಿ ೪೨
ಸಾಗರಾಂತ = ಸಮುದ್ರದವರೆಗೆ ೩೫
ಸ್ವಾಹಾಕಾರ = ಯಜ್ಞಾಹುತಿಯನ್ನು ಹಾಕುವಿಕೆ ೧೦
ಸುತ್ರಾಮ = ದೇವೇಂದ್ರ
ಸೂಕ್ತಿ = ಒಳ್ಳೆಯ ಮಾತು
ಸೂತ = ಹಿಂದಿನ ಕಾಲದಲ್ಲಿ ಪುರಾಣಗಳನ್ನು ಋಷಿಗಳಿಗೆ ಹೇಳಿದವ  ಸೂ
ಸ್ಥೂಲಕೇಶ = ಒಬ್ಬ ಋಷಿಯ ಹೆಸರು = ೨೮
ಸೆಡೆ = ಬೆದರು, ಬೆಚ್ಚು ೧೧
ಸೊಲ್ಲಸೂಸು – ಮಾತನಾಡು ೩೨
ಸೋದಕ = ನೀರು ಸಹಿತ ೨೯
ಸೋವು = ಬೆದರಿಸು, ಚದುರಿಸು ೧೪
ಸ್ತೋಮ = ಸಮೂಹ, ಗುಂಪು
ಸೌಧರ್ಮ = ಚಂದ್ರ
ಸೌಭಗ = ಸೌಂದರ್ಯ, ಸಂಪತ್ತು
ಸಂರಂಭ = ಸಮಾರಂಭ, ಉತ್ಸವ ೩೭
ಸಂವರ್ತಾಗ್ನಿ = ಪ್ರಳಯಕಾಲದಲ್ಲಿ ಹುಟ್ಟುವ ಅಗ್ನಿ ೧೪
ಸಂಸ್ತುತಿ = ಹೊಗಳಿಕೆ ೩೨
ಸಂಹಿತೆ = ಬೇರೆ ಬೇರೆ ಜ್ಞಾನಕ್ಕೆ ಸಂಬಂಧಿಸಿದ ವಿಷಯಗಳ ಸಂಗ್ರಹ
   
ಹದನು = ಸಂಗತಿ, ವಿಷಯ ೧೪
ಹಂದೆ = ಹೇಡಿ, ಅಪವಿತ್ರ ೧ ೨೯  
ಫರಣ = ಪ್ರಾಣ, ಜೀವ
ಹರಿತರು = ಓಡಿಬರು ೪:೩
ಹವಣಿಸು = ಆತುರಪಡು, ಮುಂದುವರಿ ೧೧
ಹವ್ಯ = ದೇವತೆಗಳಿಗಾ ಮಾಡುವ ಕರ್ಮ, ಯಜ್ಞ
ಹವಿ = ಯಜ್ಞಕೆ ಆಹುತಿ ಕೊಡ ಬೇಕಾದ ಅನ್ನ ೨೯
ಹವಿಗಳ ವಾಹನ = ಹವ್ಯವಾಹನ ಅಗ್ನಿ ೪೦
ಹಸಾದ = ಪ್ರಸಾದ, ಆಜ್ಞೆ ಅಪ್ಪಣೆ ೨೨
ಹಳವಿಸು = ಪ್ರಲಾಪಿಸು, ಆಳು ೧೧
ಹಾಯ್ಕು = ಚೆಲ್ಲು ೧೧
ಹಿಮಕಿರಣ = ಚಂದ್ರ
ಹುತಾಶನ = ಅಗ್ನಿ ೪೧
ಹುಯ್ಯಲು = ಮೊರೆ, ಕೂಗು ೧೭
ಹೂನಿಗ = ಪ್ರತಿಜ್ಞೆ ಮಾಡಿದವ
ಹೊಗರಿಡು = ಸಾಣಿಹಿಡಿ, ಹೊಳಪುಗೊಳಿಸು ೩೫
ಹೊಂಗರಿಗೋಲು = ಚಿನ್ನದಗರಿ ಗಳುಳ್ಳ ಬಾಣ ೧೭
ಹೊಂದು = ಸಾಯು
ಹೊರೆ = ರಕ್ಷಿಸು, ಪೊರೆ ೩೬
ಹೊರೆ = ಹತ್ತಿರ, ಬಳಿಗೆ ೧೯
ಹೊಸೆ = ತಿಕ್ಕು
ಹೊಳಹು = ರೂಪ ೧೨