ಶಬ್ದಾರ್ಥ ಸೂಚಿ: (i) ಪೌಲೋಮ ಪರ್ವ

ಸಂ. .
ಅಕ್ಕುಳಿಸು = ಸಂಕೋಚಗೊಳಿಸು ೨೬
ಅಖಂಡಿತ = ನಾಶವಿಲ್ಲದುದು ೧೩
ಅಘ = ಪಾಪ ೪೫
ಅಂಗ = ರೀತಿ
ಅಂಗಜ = ಕಾಮ ೧೭
ಅಂಗನೆ = ಹೆಂಡತಿ, ಹೆಂಗಸು ೧೯
ಅಂಗವಟ್ಟ = ದೇಹ ೪೧
ಅಂಘ್ರಿ = ಪಾದ
ಅಟ್ಟು = ಬೆನ್ನುಹತ್ತು ೧೮
ಅದ್ದು = ಅಳ್ದು, ಮುಳುಗಿ ೩೧
ಅಧ್ವರ = ಯಜ್~ಝ, ಯಾಗ ೨೦
ಅಂತರಾಯ = ಅದೃಶ್ಯತೆ ೨೩
ಅನ್ವಯ = ವಂಶ
ಅನಾರತ = ಸತತ, ಯಾವಾಗಲು ೨೩
ಅನಿಮಿಷ = ದೇವತೆ, ಸ್ದುರ ೨೨
ಅನಿಲ = ಗಾಳಿ ೪೫
ಅನಿಲಮಿತ್ರ = ವಾಯುವಿನ ಮಿತ್ರ, ಅಗ್ನಿ ೪೫
ಅನುಪಮ = ಅಸಾಮಾನ್ಯ, ಪರಿಯಿಲ್ಲದ ೪೫
ಅನುವು = ವಸ್ತುಸ್ಥಿತಿ, ಸತ್ಯ ೨೧
ಅನೄತ = ಅಸತ್ಯ, ಸುಳ್ಳು ೧:೨೫ ೪೨
ಅಪ್ಪು = ನೀರು ೧೮
ಅಪರಮೂರ್ತಿ = ಇನ್ನೊಂದು ಸ್ವರೂಪ ೩೭
ಅಬ್ಜ = ಕಮಲ ೧೬
ಅಬ್ರಹ್ಮಣ್ಯ = ಬ್ನ್ರಾಹ್ಮಣಕರ್ಮ ರಹಿತತೆ ೧೦
ಅಬಲೆ = ಹೆಣ್ಣು, ಹೆಂಡತಿ ೪೧
ಅಭ್ಯರ್ಥಿಸು = ಅಪೇಕ್ಷಿಸು, ಬೇಡು ೩೨
ಅಭಿಜನ = ಒಳ್ಳೆಯ ಜನ ೩೨
ಅಭಿಜಾತ = ಒಳ್ಳೆಯ ಕುಲದಲ್ಲಿ ಹುಟ್ಟಿದ, ಕುಲೀನ
ಅಭಿಧಾನ = ಹೆಸರು ೩೭
ಅಭಿವರ್ಣಿಸು = ವಿಸ್ತರಿಸಿ ಹೇಳು  ಸೂ
ಅಂಬರ = ಆಕಾಶ ೩೧
ಅಬಿಜಭವ = ಕಮಲದಲಿ ಹುಟ್ಟಿದವ, ಬ್ರಹ್ಮ ೩೨
ಅಂಬುಜಾಸನ = ಕಮಲದ ಗದ್ದುಗೆಯ ಮೇಲೆ ಕುಳಿತವ, ಬ್ರಹ್ಮ ೩೫
ಅಮರಾರಿ = ರಾಕ್ಷಸ, ದೇವತೆಗಳ ವೈರಿ ೧೮
ಅರ್ಥಿಸ್ತು = ಬೇಡು ೧೨
ಅವಧರಿಸು = ಮನಗೊಟ್ಟು ಕೇಳು ೧೨
ಅವಸರ = ಅವಕಾಶ, ಯೋಗ್ಯ ಸಮಯ ೧೯
ಅವಸಾನ = ಕೊನೆಗಾಲ
ಅವಿತಥವಲಾ = ಅಸತ್ಯವಾಗಬಾರದಲ್ಲವೇ ೩೧
ಅವುಡು = ಹಲ್ಲು ೧೧
ಅಶ್ರುತ = ಕೇಳದಿರುವ, ಕೇಳಲು ಯೋಗ್ಯವಲ್ಲದ
ಅಷ್ಟ = ಎಂಟು ೧೪
ಅಹಡೆ = ಆಗಿದ್ದರೆ ೧೫
ಅಳವಳಿ = ಶಕ್ತಿಗುಂದು, ಬಲಹೀನನಾಗು ೨೫
   
ಆಕಾರವನು ತೋರು = ಬಾಯ್ದೆರೆ, ಬಾಯ್ಬಿಡು ೧೦
ಅಖ್ಯಾನ = ದೊಡ್ಡಕತೆ
ಆಖ್ಯೆ = ಹೆಸರು ೨೨
ಆತ್ಮಭವ = ಮಗ ೩೬
ಆತ್ಮವಾಸ = ಒಳಮನೆ, ತನ್ನಮನೆ ೨೨
ಆತ್ರೇಯಾ = ಅತ್ರಿಋಷಿಯ ಮಗ, ದತ್ತಾತ್ರೇಯ
ಅನತ = ತಲೆಬಾಗಿದವ ೨೪
ಅಪತುವ = ಸಂಕಟವನ್ನು, ಆಪತ್ತನ್ನು ೨೮
ಆಭೀಳ = ಭಯಂಕರವಾದ ೨೧
ಆರ್ = ಸಮರ್ಥನಾಗು ೨೨
ಅರ್ಷ್ಣಿಷೇಣ = ಒಬ್ಬ ಋಷಿ
ಆವಂಗ = ಯಾವ ರೀತಿ (ಆವ = ಅಂಗ)
ಆಶ್ರಮ = ಋಷಿಗಳ ವಾಸಸ್ಥಾನ
ಆಹ್ವಯ = ಹೆಸರಿನವ ೨೭
ಆಳಾಪ = ಮತು ೨೬
ಆಳಿ = ನಿಂದೆ, ಅಪವಾದ ೨೪
   
ಇಂದುಮೌಳಿ = ಚಂದ್ರಶೇಖರ, ಶಿವ ೨೩
ಇಳಿತರು = ಅವತರಿಸು, ಇಳಿದುಬರು ೩೨
   
ಈಗೆ = ಕೊಡಲಿ
   
ಉಕ್ತಿ = ಮಾತು ೨೫
ಉಡುಗು = ಸಂಕೋಚಗೊಳ್ಳು ೩೧
ಉಡುಗಿ = ಸಂಕೋಚಗೊಳಿಸಿ
ಉತ್ತರ = ಶ್ರೇಷ್ಠ, ಹೆಚ್ಚಿನ
ಉತ್ಫುಲ್ಲ = ಅರಳಿದ ೩೨
ಉದ್ಭವ = ಮಗ
ಉದರಕೃಶಾನು = ಜಠರಾಗ್ನಿ
ಉಪಶಮಿಸು = ಶಾಂತಗೊಳಿಸು, ಸಮಾಧಾನಪಡಿಸು ೩೯
ಉಪ್ಪರ = ಅತಿಶಯವಾದ ೧೨
ಉರಗ = ಹಾವು, ಸರ್ಪ
ಉರುವ = ಶ್ರೇಷ್ಠಳಾದ ೪೦
ಉಸುರ್ = ಹೇಳು ೪೪
ಉಳ್ಳುದನೆ = ನಿಜವಾದ ಮಾತನ್ನೇ, ಸಂಗತಿಯನ್ನೇ ೨೧
   
ಊಳಿಗ = ಹಿಂಸೆ, ದುಃಖ ೩೯
   
ಎಂಜಲಿಸು = ಮೈಲಿಗೆ ಮಾಡು ೧೮
ಎಯ್ದದು = ಧರಿಸದು, ಹಿಡಿಸಲಾರದು
ಎರೆ = ನೀಡು, ಕೊಡು ೧೨
ಎವಗೆ = ಎಮಗೆ, ನಮಗೆ
   
ಏವೆನು = ಏನು ಮಾಡಲಿ ೩೪
   
ಒಗುಮಿಗೆಯ = ಅತಿಶಯವಾದ, ಹೆಚ್ಚಾದ ೧೦
ಒಡಲು = ದೇಹ ೧೮
ಒಮ್ಮೊಳ = ಒಂದು ಮೊಳ ೨೫
ಒರೆ = ಹೇಳು
ಒರಲ್ = ದುಃಖದಿಂದ ಕೂಗು, ಅಳು ೪೦
ಒಲವರಿಸು = ಪ್ರೀತಿಸು ೧೨
ಒಸಗೆ = ಶುಭವಾರ್ತೆ, ಮಂಗಲ ೩೮
   
ಓತು = ಪ್ರೀತಿಯಿಂದ
ಓವಳು = ಪ್ರಿಯೆಯು, ನಲ್ಲಳು ೨೬
   
ಕಂಜನಾಭ – ಕಮಲನಾಭ, ವಿಷ್ಣು ೧೧
ಕದಂಬ = ಸಮೂಹ ೩೫
ಕಂದಳಿತ = ಚಿಗುರೊಡೆದ ೧೭
ಕವಲು = ಕೋಪಗೊಳ್ಳು, ಸಿಟ್ಟಾಗು ೪೨
ಕಮನೀಯ = ಮನೋಹರ, ಸುಂದರ ೧೭
ಕಮಲಜ = ಚತುರ್ಮುಖ ಬ್ರಹ್ಮ ೩೨
ಕರಣ = ಇಂದ್ರಿಯ ೨೫
ಕರುಣಾರ್ಣವ = ದಯಾಸಾಗರ
ಕವ್ಯ = ಪಿತೃಗಳಿಗಾಗಿ ಮಾಡುವ ಕರ್ಮ
ಕಾದಲ = ಪ್ರಿಯ, ಪತಿ ೨೬
ಕಾಪಟಿಗ = ಮೋಸಗಾರ, ವಂಚಕ ೨೮
ಕಾದರ್ಧ = ದೇಹಕದ ಅರ್ಧಭಾಗ ೧೨
ಕಾಲ = ಯಮ ೩೦
ಕಾಷ್ಟೋರಗ = ಕಟ್ಟಿಗೆಯ ಹಾವು ೧೦
ಕಾಯು = ಉಷ್ಣತೆ, ಸೆಕೆ ೪೧
ಕಾಳು = ತಮಸ್ಸು ೧೭
ಕಾಳೋರಗ = ಕೃಷ್ಣಸರ್ಪ
ಕೀರ್ಣ = ದಟ್ಟವಾದ, ಹರಡಿದ
ಕುಲಜಾತ = ಕುಲದಲ್ಲಿ ಹುಟ್ಟಿದ ಸೂ
ಕೂರಲಗು = ಹರಿತವಾದ ಶಸ್ತ್ರ ೨೦
ಕೂರುಮ = ಪ್ರೇಮ, ಪ್ರೀತಿ, ಅನುಗ್ರಹ ೨೦
ಕೆಡೆದ =ಬಿದ್ದ
ಕೆಡೆಯೊದೆ = ಬೀಳುವಂತೆ ಒದೆ
ಕೈಗಾಯ್ = ಸಂರಕ್ಷಿಸು ೧೩
ಕೋಣಕುತ್ಸ = ಒಬ್ಬ ಋಷಿ
ಕೋದನು = ಹೊಂದಿಸಿದನು, ಹೆಣೆದನು ೩೭
ಕೋಮಪೂರ್ಚಿತ = ಸಿಟ್ಟಿನಿಂದ ಮೈಮರೆತ ೩೭
ಕೋಳುಹೋಗು = ಸೆರೆಸಿಕ್ಕು ೧೭
   
ಖಗ = ಪಕ್ಷಿ ೧೦
ಖಂಡೆಯ = ಶಸ್ತ್ರ, ಆಯುಧ ೩೫
ಖಳ = ದುಷ್ಟ, ನೀಚ ೧೯
   
ಗಾತ್ರ = ದೇಹ ೩೨
ಗೀರ್ವಾಣ = ದೇವತೆ
ಗುಡೀಗಟ್ಟು = ರೋಮಾಂಚಿತವಾಗು, ನವಿರೇಳು ೩೩
ಗೇಹ = ಮನೆ ೪೧
ಗೋಪ = ದನಗಾಹಿ ೨೮
ಗೌತಮ = ಒಬ್ಬ ಋಷಿ
   
ಚಪಳ = ಕಿಡಿಗೇಡಿ, ಕೇಡುಗ ೧೬
ಚ್ಯವನ = ಜಾರುವಿಕೆ ೩೭
ಚಾರು = ಶ್ರೇಷ್ಟವದ ೧೬
ಚಿತ್ತಗ್ಲಾನಿ = ಮನೋವ್ಯಥೆ ೩೩
   
ಛವಿ = ಕಾಂತಿ
   
ಜಂಘಾಳ = ಶಕ್ತಿ, ಸತ್ವ
ಜಗತ್ರಯ = ಸ್ವರ್ಗ, ಮರ್ತ್ಯ, ಪಾತಾಳ ಈ ಮೂರು ಲೋಕಗಳು ೨೨
ಜಗದುದರ = ಜಗತ್ತನ್ನು ತನ್ನ ಗರ್ಭದಲ್ಲಿರಿಸಿಕೊಂಡವನು, ಶ್ರೀ ವಿಷ್ಣು
ಜಠರಸ್ಥ = ಗರ್ಭದಲ್ಲಿರುವವ ೨೨
ಜನಿತ = ಹುಟ್ಟುವಿಕೆ
ಜರುಗು = ಹಿಂಜರಿ ೧೬
ಜವ = ತೀವ್ರತೆ ೧೬
   
ಡುಂಡುಭ = ನೀರು ಹಾವು, ಒಳ್ಳೆ ಸೂ
   
ತತ್ ಕೃತಿ = ಅದರ ಪರಿಣಾಮವಾಗಿ ೩೧
ತದೀಯ = ಆತನ ೨೮
ತನಿಗೆಡೆ = ಪೂರ್ತಿಯಾಗಿ ಬೀಳು ೩೦
ತನುಗೊಳ್ಳು = ದೇಹವನ್ನು ತಳೆ ೨೯
ತರಿಸಲ್ಲು = ನಿಶ್ಚಯವಾಗು ೧೮
ತಲೆಗಾಯು = ಸಂರಕ್ಷಿಸು ೨೨
ತವಕ = ಆತುರ ೩ ೨೭  
ತಳುವು = ತಡೆ, ನಿಲ್ಲಿಸು ೧೨
ತಳೋದರಿ = ತೆಳುವಾದ ಹೊಟ್ಟೆಯುಳ್ಳವನು, ಸುಂದರಿ ಚೆಲುವೆ ೩೭
ತೀದುವು = ಇಲ್ಲದಂತಾದುವು, ತೀರಿದುವು
ತೀರ್ಥ = ಪವಿತ್ರವಾದ ಜಲ ೪೩
ತೀವ್ರ = ಉಗ್ರ ೩೦
ತುಡುಕಿ = ಒಳನುಗ್ಗಿ, ಒತ್ತಾಯದಿಂದ ಒಳಸೇರಿ ೩೯
ತುಷ್ಟಿ = ತೃಪ್ತಿ, ತಣಿವು
ತೆಪ್ಪ = ಹರಿಗೋಲು ೩೦
ತೊಡವು = ಅಲಂಕಾರ, ಆಭರಣ ೨೯
ತೋಪು = ದಟ್ಟವಾದ ಗಿಡಗಳುಳ್ಳ ಕಾಡು ೨೮
   
ದಡಿ = ದೊಣ್ಣೆ
ದಂಡ = ಕೋಲು ೩೫
ದಂಡೆ = ಹಾರ, ಮಾಲೆ
ದನುಜ = ರಾಕ್ಷಸ ( ಕಸ್ಯಪ ಋಷಿಯ ಹೆಂಡತಿಯಾದ ದನು ಎಂಬವಳ ಸಂಟಾನ) ೨೨
ದಾಡೆ = ದಂಷ್ಟ್ರ, ಸೂಲದ ಹಲ್ಲು
ದಾರುಮಯ = ಕಟ್ಟಿಗೆಯಿಂದ ಮಾಡಿದ ೧೩
ದಿಂಡುಗೆಡೆ = ಅಡ್ಡ ಬೀಳು ೪೪
ದೀಪಶಿಕಿ = ಉರಿಯುವ ದೀಪ ೨೬
ದೀರ್ಘಜಾನುಕ = ಒಬ್ಬ ಋಷಿ
ದುಗ್ಧಾರ್ಣವಾಲಯ = ಕ್ಷೀರಸಾಗರವನ್ನು ಮನೆಮಾಡಿಕೊಂಡವ, ಶ್ರೀಹರಿ ೨೮
ದುರ್ಧರ = ಅಸಹನೀಯ, ತಾಳಲಾರದ ೩೦
ದುವ್ವಾಳಿಸು = ಓಡಿಸು ೧೧
ದುರ್ವೃತ್ತೆ = ದುರಾಚಾರಿಣಿ ೩೯