ಆವನಿದನೋದುವನು ಕೇಳುವ
ನಾವ
ಭಾವಸುವಿನುದಯದಲಿ ಮೇಣಸ್ತಮಯಸಮಯದಲಿ
ನೀವು [3]ನಿಮ್ಮಯ[4] ಕುಲಜರೊಳ[5]ಗಾ
ವಾ[6]ವನಾಗಲಿ ಮುಟ್ಟಲಾಗದು
ಕಾವುದಾ ಪುಣ್ಯಾತ್ಮರನು ನೀವೆಂದನಾ ಮುನಿಪ ೪೧
ಐಸಲೇ ನೀ ಬೇಡಿಕೊಂಬುದ
ದೇಸು ಘನವೆಲೆ ತಂದೆ ನೆನೆವರ
ದೇಶದೊಳಗಿರ್ದ್ದವರ ಮುಟ್ಟುವ ಮಾತ[7]ದಂತಿರಲಿ[8]
ಸಾಸಿಗನನಪ್ಪಿದನು ಹರುಷಾ
ವೇಶದಲಿ ಮನಮುಳುಗಿ ಘನಪರಿ
ತೋಷದಲಿ ಕೊಂಡಾ[9]ಡಿದನು ವರ[10] ಮುನಿಕುಮಾರಕನ ೪೨
ವರ ಜರತ್ಕಾರುವಿಗೆ [11]ನಾಗೇ[12]
ಶ್ವರಿ ಜರತ್ಕಾರುವಿನಲುದಿಸಿದ
ಪರಮ ಋಷಿಯಾಸ್ತೀಕನುನ್ನತಕೀರ್ತಿ ಸಯ[13]ನಿಧಿ[14]
ಉರಗ[15]ರತ್ತಣ[16] ಭಯದಲೆನ್ನನು
ನಿರುತ ರಕ್ಷಿಸುಗೆಂದು ಪಠಿಸುವ
ನರರಿಗಿಲ್ಲಹಿ[17]ಬಯವದೆಂ[18]ದನು ಶೌನಕಗೆ ಸೂತ ೪೩
ಏನನೆಂಬೆನು ಪನ್ನಗರ ಸು
ಮ್ಮಾನವನು ಸುಖದಿಂದ ತಂಗಿಯ
ಸೂನುವನು ಮುಂದಿಟ್ಟುಕೊಂಡು [19]ಮನೋನುರಾಗದಲಿ[20]
ಜ್ಞಾನವಂತರವೋಲು [21]ಭಾವವ[22]
ನೇನುವನು ತಾವರಿಯದಾನಂ
ದಾನುಭವದಲಿ [23]ರಮಿಸಿ[24]ತಿರ್ದುರು ಧರ್ಮ[25]ಪರರೆನಿಸಿ[26] ೪೪
ಇದು ಮಹಾಮಂಗಳ ಮಹೋದಯ
ವಿದು ಮಹಾಯುಷ್ಕೀರ್ತಿವರ್ಧನ
ವಿದುವೆ ವಿಷಭಯರೋಗದಾರಿದ್ರ್ಯಾದಿದುಃಖಹರ
ಇದನು ಶೌನಕ ಕೇಳು ಸಂಕ್ಷೇ
ಪದಲಿ ಹೇಳಿದೆನಿನ್ನು [27]ನಿನಗಾ[28]
ವುದನು [29]ನಾನ[30]ಭಿವರ್ಣಿಸುವೆನೆಂ[31]ದರುಹಿ[32]ದನು ಸೂತ ೪೫
*ಲೇಸನಾಡಿದೆ ಸೂತ ನೀನವ
ನೀಶ ಜನಮೇಜಯಗೆ ಮುನಿಯಂ
ದೈಸೆ ವೈಶಂಪಾಯನೊರೆದಾ ಭಾರತಾಮೃತವ
ವಾಸುದೇವನ ಪುಣ್ಯಕೀರ್ತನ
ವಾಸಭಾಗ್ಯರ ಪಾಂಡವರ ಕಥೆ
ಯೇಸದನು ವರ್ಣಿಸುವೆ ನಿನಗೆಂದರುಹಿದನು ಸೂತ ೪೬
ಮನ್ನಿಸಿದನಾ ಸೂತನನು ಸಂ
ಪನ್ನಗುಣನಿಧಿ ಪಾವನಕಥಾ
ಕರ್ಣ[33]ನದ ಕೌತುಕರಸಾಸ್ವಾದನದ[34] ಲಂಪಟನು
ಧನ್ಯನಾದೆನೆನುತ್ತ ನೆನೆದನು
ತನ್ನ ಮನದಲಿ ಪರಮ ಕಾರು
ಣ್ಯಾರ್ಣವನ ನಿತ್ಯಾತ್ಮನಾರಾಯಣನ ಸಿರಿಪದವ ೪೭
*ಇದು ಮಹಾ ದುರಿತೌಘಹರವಿಂ
ತಿದು ಮನೋರಥಸಿದ್ದಿಯಾಗರ
ವಿದು ವಿಷಾನಲ ಶತ್ರುಬಾಧಾಪಹರ ಸೌಖ್ಯಕರ
ಇದನು ಹೇಳುವ ಕೇಳುವ ಸದು
ಹೃದಯರನು ರಕ್ಷಿಸುವನೊಲಿದಾ
ಪದುಮದೃಶ ನಿತ್ಯಾತ್ಮನಾರಾಯಣನು ಕರುಣದಲಿ ೪೮
+ಕರಿವದನ ವಾಗ್ದೇವಿ ನಾರದ
ಪರಮ ವೇದವ್ಯಾಸ ಷಣ್ಮುಖ
ಗಿರಿಜೆ [35]ಸಿರಿಸುರ[36]ನಾಥಸನಕಾದಿಗಳು ದಿಗಧಿಪರು[37]ಹರಿಹರರು ಕಮಲಜನು ರವಿ ಶಶಿ
ಧರಣಿಸುರ ಕವಿವರರು ಇಷ್ಟೈ
ತ್ವರಿಯ ಕರುಣಿಸಿ ಶುಭಮತಿಯನೊಲಿದಿತ್ತು ರಕ್ಷಿಪುಹು[38] ೪೯
ತ್ರಯೋದಶ ಸಂಧಿ ಸಮಾಪ್ತ
[1] ನಮ್ಮಯ ಚರಿತವಿದನು (ಪ) ನೀಮಚ್ಚರಿತವಿದನು (ವಿ) [2] ನಮ್ಮಯ ಚರಿತವಿದನು (ಪ) ನೀಮಚ್ಚರಿತವಿದನು (ವಿ) [3] ನಿಮ್ಮಡಿ (ಪ) [4] ನಿಮ್ಮಡಿ (ಪ) [5] ಗವ | ನಾ (ಭ) [6] ಗವ | ನಾ (ಭ) [7] ದೇಕೆನುತ | (ವಿ) [8] ದೇಕೆನುತ | (ವಿ) [9] ದುತಿರ್ದರು (ಪ) [10] ದುತಿರ್ದರು (ಪ) [11] ಮಾಹೇ | (ಪ) [12] ಮಾಹೇ | (ಪ) [13] ದಲಿ || (ಪ) [14] ದಲಿ || (ಪ) [15] ವರರಾ (ಪ) [16] ವರರಾ (ಪ) [17] ಬಾಧೆಯೆಂ (ವಿ, ಮು) [18] ಬಾಧೆಯೆಂ (ವಿ, ಮು) [19] ಮಹಾನುಭಾವನನು || (ವಿ, ಮು) [20] ಮಹಾನುಭಾವನನು || (ವಿ, ಮು) [21] ತಾಪವ | (ಪ), ತಾವವ | (ಭ) [22] ತಾಪವ | (ಪ), ತಾವವ | (ಭ) [23] ಚರಿಸಂ (ವಿ, ಮು) [24] ಚರಿಸಂ (ವಿ, ಮು) [25] ನಿಷ್ಠೆಯಲಿ || (ವಿ, ಮು) [26] ನಿಷ್ಠೆಯಲಿ || (ವಿ, ಮು) [27] ತಾನಾ | (ವಿ, ಮು) [28] ತಾನಾ | (ವಿ, ಮು) [29] ನಿನಗ (ವಿ, ಮು) [30] ನಿನಗ (ವಿ, ಮು) [31] ದೆರಗಿ (ವಿ, ಮು) [32] ದೆರಗಿ (ವಿ, ಮು)
* ಈ ಪದ್ಯವು “ಭ” ಮತ್ತು ’ಐ’ ಪ್ರತಿಗಳಲ್ಲಿಲ್ಲ.
[33] ಕತಿಕೌತುಕದ ಸುಸ್ವಾದನಸು (ವಿ) [34] ಕತಿಕೌತುಕದ ಸುಸ್ವಾದನಸು (ವಿ)* ಈ ಪದ್ಯವು ’ಭ’ ಪ್ರತಿಯಲ್ಲಿ ಮಾತ್ರ ಇದೆ.
+ ಈ ಪದ್ಯವು ’ವಿ’ ಮತ್ತು ’ಮು’ ಪ್ರತಿಗಳಲ್ಲಿದ್ದು ’ಮು’ ಪ್ರತಿಯಲ್ಲಿಯ ಪಾಠಾಂತರಗಳು ಹೀಗಿವೆ.
[35] ಸುರರಧಿ (ಮು) [36] ಸುರರಧಿ (ಮು) [37] ಹರಿಹರರ ಕಮಲಜನ ರವಿ ಶಶಿ | ಧರಣಿ ಶುಕ ವಾಲ್ಮೀಕಿಗಳವರ | ಚರಣಗಳ ಭಾರತಕಥೆಯ ಹೇಳಿದನು || (ಮು) [38] ಹರಿಹರರ ಕಮಲಜನ ರವಿ ಶಶಿ | ಧರಣಿ ಶುಕ ವಾಲ್ಮೀಕಿಗಳವರ | ಚರಣಗಳ ಭಾರತಕಥೆಯ ಹೇಳಿದನು || (ಮು)
Leave A Comment