ಸೂಚನೆ :
ಡುಂಡುಭನ ರುರುವಿನ ಚರಿತ್ರವ
ಪಂಡಿತೋತ್ತಮನೊರೆದನಾಮುನಿ
ಮಂಡಲದಲಾಶೌನಕಂಗಾಸೂತನೊಲವಿನಲಿ

ಪದನು :
ಕೇಳು ಶೌನಕಮುನಿಪ ರುರುವಿನ
ಲೋಲಲೋಚನೆಯಾಪ್ರಮದ್ವರೆ
ಕಾಲನನು ಕೆಡೆಯೊಡೆದು

[1]ಪಾತಿವ್ರತ್ಯ ಶಕ್ತಿಯಲಿ[2] ಮೇಲೆ ಮುನಿಪನ ವರತಪೋಜಂ
ಘಾಳ ಸಾಮರ್ಥ್ಯದಲಿ ಬದುಕಿ ನಿ
ಜಾಲಯ[3]ದಲೆ[4] ಸೆದಿರ್ದಳಧಿಕ ಮನೋನುರಾಗದಲಿ   ೧

ಅಂದುಮೊದಲಾರುರು ಮಹೋರಗ
ವೃಂದವನು ತನ್ನಬಲೆಯನು ನೆರೆ
ಕೊಂದ ವೈರವ ನೆನೆಯು[5]ತಲೆ ಕೊಂದನು ಸರೋಷದಲಿ[6] ಸಂದ ವಿಪಿನಾಂತರ[7]ಗಳಲ್[8] ಬರು
ತೊಂದು ದಿನ ಮುನಿವರನು ಕಂಡನು
ಮುಂದೆ ಭೀಕರರೂಪಿನಲಿ ಕೆಡೆದಿರ್ದ ಡುಂಡುಭವ      ೨

ಕಾಣುತವೆ ದಡಿಗೊಂಡನುರಗ
ಶ್ರೇಣಿ ಹಗೆ ತನಗೆನುತ ವಿಗತ
ಪ್ರಾಣನನು ಮಾಡುವೆನು ತಾನೀ ವಿಷಧರನನೆನುತ
ಹೂಣಿಗನು ಹರಿತರಲು ಭೂಗೀ
ರ್ವಾಣನನು ಕಾಣುತ್ತ ಸಲೆ ಸಮ್
ಕ್ಷೀಣ[9] ಧೈರ್ಯ[10]ನು ಬೆದರಿ ನುಡಿದನು ವಿಪ್ರವರನೊಡನೆ        ೩

ಕೊಲ್ಲದಿರು ಕೊಲ್ಲದಿರು ಕೊಲ್ಲದಿ
ರಲ್ಲತಾನಪರಾಧಿ ಬರಿದೇ
ಬಿಲ್ಲನೇರಿಸಲೇಕೆ ಹಸುವಿಗೆ ಹಾರುವನೆ ನಿನ್ನಾ
ವಲ್ಲಭೆಗೆ ಮುನಿದವನು ತಾನ
ಲ್ಲಲ್ಲ ತತ್ಕುಲಸಂಭವನ್ ಮೇ
ಣಲ್ಲ ತನ್ನನು ಕೊಂದಡೇನು ಹಿತಾರ್ಥ ನಿನಗೆಂದ      ೪

[11]ಪಾವನನೆ ಭೂಸುರನೆ ಹಿಂಸೆಯಿ
ದಾವ ಶಾಸ್ತ್ರೋದಿತವು[12] ಹೇಳೆನ
ಗೀವಿಧಾನವ ವಿದ್ಯೆಯಿದ ನಿನಗಾರು ಕಲಿಸಿದರು
ಕೋವಿದನೆ ಹೇಳುವರೆ ಬುದ್ಧಿಯ
ನಾನು ಶಾಸಕರಲ್ಲ ನೃಪರಿಗೆ
ಭಾವತವಲಾ ಧರ್ಮವಿದು ನಿನಗುಚಿತವಲ್ಲೆಂದ         ೫

ದುಷ್ಟನಿಗ್ರಹ ಶಿಷ್ಟರಕ್ಷೆ[13]ಗ
ಳಿ[14]ಷ್ಟವಾಭೂಪರಿಗೆ ನೃಪರಿಗೆ
ಹುಟ್ಟಿದವನೇ ನೀನು ಭೃಗುಮುನಿವರನ ಕುಲಜನಲಾ
ಇಷ್ಟ[15]ವೇ[16] ಹಿಂಸೆಯಿದು ಭುವನವು
ಶಿಷ್ಟವಲ್ಲಾ ಭೃಗುವಿನನ್ವಯ
ಕಷ್ಟವನು ನೀನೀಕೆ ಬಯಸುವೆಯೆ[17]ದನಾ[18]ಸರ್ಪ      ೬

ಮುನಿಪ [19]ಕೊಲುವವನಲ್ಲ ಪರರನು[20] ತನಗೆ ವಿಷವಿನಿತಿಲ್ಲ ತತ್ಕುಲ
ಜನಿತವಲ್ಲದೆ ಗಂಧಮಾತ್ರವದಿಲ್ಲ ತತ್ಕುಲದ
ತನಗೆ ಮುನಿಯಲದೇಕೆ ಹೇಳೆನೆ
ಮುನಿಪನದನಾಲಿಸುತ ತನ್ನಯ
ಮನದೊಳಗೆ [21]ಮಾಡಿದ್ದ ಸಂಶಯ[22] ನುಡಿದನದರೊಡನೆ       ೭

ಆರು ನೀನೆಲೆ ಸರ್ಪ ಹೇಳು ಮ
ಹೋರಗನೊ ಗಂಧರ್ವನೋ [23]ಸುವಿ[24] ಚಾರಿ ದೈತ್ಯನೊ [25]ದೇವನೋ[26] ದಿಟ ಸರ್ಪ ನೀನಲ್ಲ
ಕಾರಣವ ಹೇಳೆನಲು ಮುನಿಪನ
ಚಾರುಸೂಕ್ತಿಯ ಕೇಳಿ ತನ್ನಯ[27]ಪ್ರಾರಬುಧ[28] ಸಂಗತಿಯ ನೆನೆಯುತ್ತುರಗನಿಂತೆಂದ ೮

ವಿಶ್ರುತದ್ವಿಜವರನೆ [29]ಹೇಳೆ
ನ್ನ[30] ಶ್ರುತಾಖ್ಯಾನವನು ತಾನು ಸ
ಹಸ್ರಪಾದಾಹ್ವಯನು ನೋಳ್ಪಡತೀತ[31]ಭಾವದೊಳು[32] [33]ದು[34] ಸ್ವಭಾವದಲೊಬ್ಬ ಸಖಿ ವಿ[35]ಸ್ಪರ್ಶ[36] ಮಾಡಿದ [37]ವಿಪ್ರಿಯದಲವಿ[38] ಷಾಸ್ಯ ಜನ್ಮವಿದಾಯ್ತು ನಿನಗದನೊರೆವೆನಾನೆಂದ     ೯

ಖಗಮ[39]ನೆಂದೆಂಬಾ[40]ದ್ವಿಜೋತ್ತಮ
ನೊಗುಮಿಗೆಯ[41]ಸಖ್ಯ[42]ವಸು
ನೆಗಳಿ [43]ನಾನಾಂಗ[44]ದಲಿ ಹಿತಕರನಾಗಿ ನೆರೆಯಿರಲು
ಬಗೆಯಲಾನೊಂದು ದಿನ ಮಾಡಿದ
ಮುಗುದತನವನು ಕೇಳು ಕಾಷ್ಕೋ
ರಗನ ನಿರ್ಮಿಸಿ ಹಾಯ್ಕಿದೆನು ಸಖಿವಿಪ್ರನಿದಿರನಲಿ     ೧೦

ಬೆಚ್ಚಿ ಬೆದರಿದನಾದ್ವಿಜೋತ್ತವಂ
ಕಚ್ಚಿತೆನ್ನನು ಹಾವೆನುತ ನೆನೆ
ದಚ್ಯುತನೆ ಗತಿ[45]ಯೆನುತಿದೇ[46] ನೆಂದೀಕ್ಷಿಸುತ ತಿಳಿದು
ಹೆಚ್ಚಿದುದು ಕಡು ರೋಷ ಕಂಗಳು
ಕಿಚ್ಚಿನಂದದಲಾ[47] ದುವ[48] ವುಡನು
ಕಚ್ಚಿ ಶಾಪವನೆನಗೆ ಕೊಟ್ಟನು ಮುನಿಪ ಕೇಳೆಂದ       ೧೧

ದರ್ಪವೇ ತನ್ನೊಡನೆ ಫಡಫಡ
ಸರ್ಪನಾಗು ದುರಾತ್ಮ ನೀನೆನು
ತುಪ್ಪರದ ಕೋಪದಲಿ ಶಾಪವ[49]ನಿತ್ತ[50]ಡಾನಂಜಿ
ತಪ್ಪಿದೆನನುಗ್ರಹವ ಮಾಳ್ಪುದು
ವಿಪ್ರವರನೆನೆ ವಿಷರಹಿತನಾ
ಗಿಪ್ಪುರಗನಾಗೆಂದು ತನ್ನಲಿ [51]ಮಾಡಿದನು ಕೃಪೆಯ[52]  ೧೨

ದಾರುಮಯ ಸರ್ಪದಲಿ ತನ್ನನು
ಭೀರುವನು ಮಾಡಿದ ನಿಮಿತ್ತ[53]ದ
ಲಾ[54]ರುವನು ಬಾಧಿಸದ ಡುಂಡುಭನಾಗು ನೀನೆಂದು
ಕಾರುಣಿಕ[55]ನೆನೆ[56] ಶಾಪಮೋಕ್ಷವ
ದಾರ ಕೈಯಲಿ ಹೇಳೆನುತ್ತ ವಿ
ವಿಚಾರಿಸಲು ರುರುಸಂಗದಲಿ [57]ನಿನಗಹುದು[58] ಹೋಗೆಂದ      ೧೩

ಅದು ಘಟಿಸಿತೆನಗಿಂದು ತನ್ನ
ಭ್ಯುದಯವೇ ತನಗೊಂಡವೋಲೆಲೆ
ಸದಮಳಾಮಳಚರಿತ ಮೈದೋರಿದೆಯಲಾ ತನಗೆ
ಒದೆದೆನಾಶಾಪವನು ಕರುಣಾ
ಸ್ಪದನೆ ಹೇಳುವೆನಿನ್ನು ನಿಜದೇ
ಹದಲಿ ಮಾತನು ಬಳಿಕ ಕೇಳುವುದೆಂ[59]ದನಾ[60]ಸರ್ಪ  ೧೪

ಎಂದು ಸರ್ಪಾಕೃತಿಯನುಳಿದುರ
ಗೇಂದ್ರನಿರೆ ನಿಜಪೂರ್ವರೂ[61]ಪಿನ[62] ಲಂದು ಮಾತಾಡಿಅನು ರುರುಕೇಳಿಂದುಮೊದಲಾಗಿ
ತಂದೆ ಹಿಂಸಿಸದಿರು ಮಹೋರಗ
ವೃಂದವನು ಜನಮೇಜಯಾಖ್ಯ[63]ನ
ರೇಂದ್ರನೇ[64] ನೆರೆ ಕೊಲುವನಾಸರ್ಪಾಧ್ವರದಲೆಂದ    ೧೫

*ಎನಲದಾರ ಕುಮಾರನಾತನು
ತನಗೆ ಹೇಳಾ ಸರ್ಪ್ಯಾಗವ
ನನುಪಮನು ಮಾಡುವರೆ ಕಾರಣವೇನು ನೀನದನು
ಮುನಿವರನೆ ವರ್ಣೀಸುವುದೆಂದಾ
ತನನು ರುರು ಬೆಸಗೊಳಲು ವಿಪ್ರಾ
ನನದಲದನೆಲ್ಲವನು ಕೇಳಲು ಬಹುದು ಹೋಗೆಂದ     ೧೬

ಎಂದು ರುರುವನು ನಿಲಿಸಿ ಮುನಿಪತಿ
ಕೊಂದನೋ [65]ನೆರೆ[66] ಹೇಳದಾದನು ಸೂಚಿಸಿದ ಕಥೆಯ
ಎಂದು ಮನದಲಿ ಚಿಂತಿಸುತ ನಿಜ
ಮಂದಿರಕ್ಕೈತಂದು ತನ್ನಯ
ತಂದೆಯನು ಬೆಸಗೊಂಡನಾ ವೃತ್ತಾಂತಸಂಗತಿಯ   ೧೭

ಅಪ್ಪ ಕೇಳಾನಿಂದು ವನದಲಿ
ಸರ್ಪರೂಪಿನ[67]ಲಿದ್ದ[68] ಕೋವಿದ
ವಿಪ್ರನನು [69]ತಾ[70] ಕಂಡೆನದನುಳಿದಾತನೆನ್ನೊಡನೆ
ಸರ್ಪನಿಕರವ ಕೊಲ್ಲದಿರು ನಿನ
ಗೊಪ್ಪದಿದು ಜನಮೇಜಯಾಖ್ಯನು
ಸರ್ಪಯಾಗವನಮಿಪತಿ ಮಾಡುವನು ಕೇಳೆಂದ        ೧೮

**ಅದರ ವೃತ್ತಾಂತವನು ಮುನಿ ಹೇ
ಳದೆ ಧರಾಮರರಲ್ಲಿ ಕೇಳುವೆ
ಸದಮಳನೆ ಹೋಗೆಂದು ಸಂದನ[71]ದೃಶ್ಯ[72]ಸಂಸ್ಥಿತಿಗೆ**
ವಿದಿತಹಡಭಿವರ್ಣಿಸುವುದೆನ
ಗದರ ಪೂರ್ವಾಪರವನೆನಲ
ಭ್ಯುದಿತ ಸಂತೋಷದಲಿ ಮುನಿವರ್ಣೀಸಿದ[73]ನಾ[74]ಕಥೆಯ       ೧೯

ಸೋಮವಂಶಸರೋಜಸೂರ್ಯನು
ಭೂಮಿಪಾಲಕ ಪಾಂಡು [75]ಪಾಂಡುಮ
ಹಾಮಹೀಶ್ವರ[76] ಪುತ್ರರಲಿ ಹಿರಿಯನು ಯುಧಿಷ್ಠಿರನು
ಭೀಮನರ್ಜುನ[77]ನಕುಲನೆಂಬಭಿ
ನಾಮದಿಂ[78] ಸಹದೇವನೆಂಬ ಮ
ಹಾಮ[79] ಹಿಮರೆಸೆದರು ಧರಿತ್ರಿಗೆ[80] ಪುಣ್ಯತಮರೆನಿಸಿ ೨೦

[1] ಪಾತಿವ್ರತದ ಭಕ್ತಿಯಲಿ (ಭ)

[2] ಪಾತಿವ್ರತದ ಭಕ್ತಿಯಲಿ (ಭ)

[3] ದೊಳೆ (ಭ)

[4] ದೊಳೆ (ಭ)

[5] ತುವೆ ಬಂದನು ಸರಾಗದಲಿ (ವಿ, ಮು)

[6] ತುವೆ ಬಂದನು ಸರಾಗದಲಿ (ವಿ, ಮು)

[7] ದೊಳಗೆ (ಭ)

[8] ದೊಳಗೆ (ಭ)

[9] ಧರ್ಮ (ಭ)

[10] ಧರ್ಮ (ಭ)

[11] ಪಾವನಕೆ ಪಾವನನೆ ಹಿಮ್ಸೆಯ | ಠಾವು ಶಾಸ್ತ್ರೋದಿತವೆ (ವಿ)

[12] ಪಾವನಕೆ ಪಾವನನೆ ಹಿಮ್ಸೆಯ | ಠಾವು ಶಾಸ್ತ್ರೋದಿತವೆ (ವಿ)

[13] ಯ | ಭೀ (ಭ)

[14] ಯ | ಭೀ (ಭ)

[15] ವೈ (ಭ)

[16] ವೈ (ಭ)

[17] ದುದಾ (ವಿ, ಮು

[18] ದುದಾ (ವಿ, ಮು

[19] ಕೊಯ್ವವನಲ್ಲ ಕೊರಳನು (ಮು)

[20] ಕೊಯ್ವವನಲ್ಲ ಕೊರಳನು (ಮು)

[21] ಸಂಶಯವಿಲೋಲನು (ವಿ, ಮು)

[22] ಸಂಶಯವಿಲೋಲನು (ವಿ, ಮು)

[23] ಸವಿ (ಪ, ಭ)

[24] ಸವಿ (ಪ, ಭ)

[25] ಮನುಜನೋ (ಪ)

[26] ಮನುಜನೋ (ಪ)

[27] ಪೂರುವದ (ವಿ, ಮು)

[28] ಪೂರುವದ (ವಿ, ಮು)

[29] ನೀಕೇ | ಳ (ಪ, ಭ)

[30] ನೀಕೇ | ಳ (ಪ, ಭ)

[31] ಭವದೊಳಗೆ (ಪ), ಪದರೊಳಗೆ (ವಿ)

[32] ಭವದೊಳಗೆ (ಪ), ಪದರೊಳಗೆ (ವಿ)

[33] ಸು (ಪ)

[34] ಸು (ಪ)

[35] ಪ್ರಸ್ಯ (ಪ, ಭ)

[36] ಪ್ರಸ್ಯ (ಪ, ಭ)

[37] ವಿಷಯದಲ್ಲವಿ (ಪ)

[38] ವಿಷಯದಲ್ಲವಿ (ಪ)

[39] ನೆಂದೊಬ್ಬಾ (ವಿ)

[40] ನೆಂದೊಬ್ಬಾ (ವಿ)

[41] ಸೌಕ್ಯ (ಭ, ಪ)

[42] ಸೌಕ್ಯ (ಭ, ಪ)

[43] ತಾನಂಗ (ಪ)

[44] ತಾನಂಗ (ಪ)

[45] ಯೇನಿದೇ (ವಿ)

[46] ಯೇನಿದೇ (ವಿ)

[47] ಗಲ (ಭ)

[48] ಗಲ (ಭ)

[49] ಕೊಟ್ಟ (ಭ)

[50] ಕೊಟ್ಟ (ಭ)

[51] ಕೃಪೆಯ ಮಾಡಿದನು (ವಿ, ಪ)

[52] ಕೃಪೆಯ ಮಾಡಿದನು (ವಿ, ಪ)

[53] ದಿ | ನಾ (ವಿ, ಪ)

[54] ದಿ | ನಾ (ವಿ, ಪ)

[55] ನೇ (ಭ)

[56] ನೇ (ಭ)

[57] ನಿರ್ಣಯವು (ಭ)

[58] ನಿರ್ಣಯವು (ಭ)

[59] ದುದಾ (ವಿ, ಮು)

[60] ದುದಾ (ವಿ, ಮು)

[61] ಪದ (ಭ)

[62] ಪದ (ಭ)

[63] ನು | ಕೊಂದರೆಯು (ಪ)

[64] ನು | ಕೊಂದರೆಯು (ಪ)

* ಈ ಪದ್ಯ ’ಪ’ ಪ್ರತಿಯಲ್ಲಿಲ್ಲ

[65] ಮುನಿ (ಭ)

[66] ಮುನಿ (ಭ)

[67] ಲಿಷ್ಟ (ಭ)

[68] ಲಿಷ್ಟ (ಭ)

[69] ನಾ (ಭ)

[70] ನಾ (ಭ)

** ಈ ಪದ್ಯದ ಮೊದಲಿನ ಮೂರು ಚರಣಗಳು ’ಭ’ ಪ್ರತಿಯಲ್ಲಿಲ್ಲ. ಮುಂದಿನ ಮೂರು ಚರಣಗಳು ’ಪ’ ಪ್ರತಿಯಲ್ಲಿಗೆ ಹೀಗೆ ಇವೆ. ” ವಿದಿತಪಹಡೆನಗಿದುವನಭಿವ | ರ್ಣಿಸುವುದೆನಗವರವರ ಪೂರ್ವಾ | ಸ್ಪದವನೆಲ್ಲವನಭ್ಯುದಿತ ಸಂತೋಷದಲಿ ಕಥೆಯ ||

[71] ದೃಷ್ಟಿ (ವಿ, ಭ)

[72] ದೃಷ್ಟಿ (ವಿ, ಭ)

** ಈ ಪದ್ಯದ ಮೊದಲಿನ ಮೂರು ಚರಣಗಳು ’ಭ’ ಪ್ರತಿಯಲ್ಲಿಲ್ಲ. ಮುಂದಿನ ಮೂರು ಚರಣಗಳು ’ಪ’ ಪ್ರತಿಯಲ್ಲಿಗೆ ಹೀಗೆ ಇವೆ. ” ವಿದಿತಪಹಡೆನಗಿದುವನಭಿವ | ರ್ಣಿಸುವುದೆನಗವರವರ ಪೂರ್ವಾ | ಸ್ಪದವನೆಲ್ಲವನಭ್ಯುದಿತ ಸಂತೋಷದಲಿ ಕಥೆಯ ||

[73] ನುಪ (ವಿ)

[74] ನುಪ (ವಿ)

[75] ನಾಮ ಮ | ಹಾಮಹೀಶನ (ವಿ, ಭ, ಮು)

[76] ನಾಮ ಮ | ಹಾಮಹೀಶನ (ವಿ, ಭ, ಮು)

[77] ನಾನಕುಲನು | ದ್ಧಾದಮತಿ (ವಿ, ಭ, ಮು)

[78] ನಾನಕುಲನು | ದ್ಧಾದಮತಿ (ವಿ, ಭ, ಮು)

[79] ಹೀಶ್ವರರಸೆದರವನಿಗೆ (ಪ)

[80] ಹೀಶ್ವರರಸೆದರವನಿಗೆ (ಪ)