ಭೂವಿಬುಧವರ ಕೇಳು ದೂತನು
ದೇವಸಂತತಿಗಾನು ಕಳುಹಿದ
ರೀವಿಲಾಪದ ಕೇಳಿ ನಿನ್ನಲಿ ಕರುಣವನು ಮಾಡಿ

[1]ಭಾವಿಸಿಷ್ಟಾಪೂರ್ತಿಕರ್ಮದ[2] ಭಾವಭೀತರು ದೈವವಶವಿದ[3]ನಾವನೈ[4] ಮೀ[5]ರಲು[6] ಸಮರ್ಥನು ವಿಪ್ರ ಕೇಳೆಂದ    ೨೧

ಆರರೇ ಸುರವರರು ತನ್ನಯ
ನೀರೆಯನು ಬದುಕಿಸುವಡಕಟಾ
ತೋರಲೇತಕೆ ಕರುಣವನು ತಾನವರಿಗವರೆನಗೆ
ಬೇರೆ ದೂತನ ಕಳುಹಲೇತಕೆ
ದೂರುವವ ತಾನಲ್ಲ ತಮಗೀ
ಡೇರದಿರ್ದಡೆ ಬಂದ ಫಥದಲಿ ಹೋಗು ನೀನೆಂದ      ೨೨

ಎಂದಡೆಂದನು ದೇವದೂತನು
ತಂದೆ ತಪ್ಪಿಸಲಿರಿದು ವಿಹಿತವ
ನಿಂದುಮೌ[7]ಳಿಗೆ[8] ಬರಿದೆ ಜರಿಯದಿರಮರಪತಿಗಳನು
ಒಂದು ಪಾಯವ ಹೇಳುವೆನು ಸುರ
ರೆಂದುದನು ನಿಜಮತಕೆ ಬಹಡೆನ
ಲೆಂದನಾ ದ್ವಿಜಮುಖ್ಯನಧಿಕಮನೋನುರಾಗಲಿ        ೨೩

ಹೇಳು ಹೇಳೆಲೆ ತಂದೆ [9]ಹೇಳೆ[10] ನ್ನಾಳಿಯನು ನೆನೆಯದಿರು ತನ್ನಯ
ಲೋಲಲೋಚನೆ ಜೀವಿಸುವ ಪರಿಯೆಂತುಪಾಯವನು[11]ಹೇಳು[12] ಬಲ್ಲರೆ ಬಾಂಧವನೆ ಕರು
ಣಾಳುಗಳಲಾ ದೇವವರರೆನೆ
ಹೇಳಿದನುಪಾಯವನು ಪಾವನಕೀರ್ತಿ[13]ಗೊಲ[14]ವಿನಲಿ ೨೪

ಬುದ್ದಿವಂತನೆ ನಿಜಮನೋರಥ
ಸಿದ್ಧಿಯನು [15]ಬಯಸುವರೆ[16] ಮನದಲಿ[17]ಬದ್ದ[18] ನಾಗದಿರಾಯುವಂತನೆ ಕೊಡು ನಿಜಾಯುಷದ
ಅರ್ಧವನು ಸತಿ ಜೀವಿಸುವಳು ನಿ
ಬದ್ಧವಿದು ನಿನಗಿಷ್ಟವೈಯೆನ
ಲುದ್ಧವಾದನು ಮುನ್ನಿನಿಂದೊಮ್ಮೊಳಕೆ ಮುನಿನಾಥ   ೨೫

ಹೇಳು ಹೇಳಿನ್ನೊಮ್ಮೆ ತಡೆಯದೆ
ಹೇಳು ಬದುಕಿಸಿಕೊಂಡೆ ತನ್ನನು
ಕಾಲಿಗೆರಗುವೆನಿತ್ತ ಬಾ ಹತ್ತಿರಕೆ ಬಾ ತನ್ನ
ಬಾಲೆ ಬದುಕುವುಪಾಯವನು ನೀ[19]ಹೇಳದಾ[20] ವಂಗದಲಿ ಕೊಡುವೆನು
ಮೇಲಣಾಯುಷ್ಯಾರ್ಥವನು ವಿಧಿಕೋವಿದನೆಯೆಂದ    ೨೬

ಎಲ್ಲವನು ತಾನೀವೆ ತನ್ನಯ
ವಲ್ಲಭೆಗೆ ಮೇಣರ್ಧ[21]ವೆಂದೇ
ನಲ್ಲಿ[22] ಸಂಶಯವಿಲ್ಲ ಕೊಟ್ಟೆನು ಕೊಟ್ಟೆನೆಂದೆನಲು
ಬಲ್ಲಿದನು ನೀನಹೆ ಸುಮಂತ್ರಕ
ವಲ್ಲವಾಗಲು ತವಕವುಳ್ಳಡೆ
ಬಲ್ಲಹನೆ ಬರುಮಾತಿನಲಿ ಫಲವೇನು ಹೇಳೆಂದ        ೨೭

ಮುನ್ನ ಮಾರ್ಕಾಂಡೇಯಮುನಿ ದು
ಗ್ದಾರ್ಣ[23]ವಾಲಯನೊಲವಿನಲಿ[24] ಸಂ
ಪನ್ನ ಮೃತ್ಯುವ ಗೆಲಿದವೋಲು ತದೀಯ ಕರುನದಲಿ
ನನ್ನಿ ನೀ ಮೃತ್ಯುವನು [25]ಗೆಲಿದಿ
ನ್ನುನ್ನತಾ[26] ಯುಷ್ಯದರ್ಧದಲಿ ತಾ
ಮನ್ನಿಸಿತ್ತೆನೆನುತ್ತ ಸಜಲಾಪರ್ಣವ ಮಾಡೆಂದ                   ೨೮

ಶೃತಿವಿಹಿತ[27]ವೆನೆ[28] ತಂದೆ ಕೊಡುವುದು
ಸತಿಗೆ ಪತಿಯಾ ಪತಿಗೆ ಮೇಣಾ
ಸತಿ ಕೊಡುವುದಾಯುಷ್ಯದರ್ಧವನುಕ್ತಮಂತ್ರದಲಿ
ಹಿತವಿದನೆ ನೀ ಬೇಗ ಮಾಡೆನೆ
ಮತಿಯು[29]ತನು[30] ಮಂತ್ರದಲಿ [31]ಕೊಟ್ಟ[32]ನು
ಸತಿಗೆ ತನ್ನಾಯುಷ್ಯದರ್ಧವ ಸೋದಕ[33]ದಲೆ[34]ನಲು   ೨೯

ಏಳಳೇತಕ್ಕೆನ್ನ ಸತಿಯನೆ
ಹೇಳುವೆನು ತಾನೆನುತ ಹೋದನು
ಕಾಲನಲ್ಲಿಗೆ ದೂತನಾ ಗಂಧರ್ವಪತಿಸಹಿತ
ಹೇಳಿದರು ಕಾಲಂಗೆ ಪರಮ ಕೃ
ಪಾಲಯನೆ ಬಿನ್ನಹದ ಹದನದು
ಕೇಳಿ ಕಾರುಣ್ಯವನು ಮಾಳ್ಪುದು ತಮ್ಮ ಮೇಲೆನುತ   ೩೦

ಅವಧರಿಸು ರುರುವೆಂಬ ವಿಪ್ರನ
ಯುವತಿ ಮಡಿದಳು ಹೊಕ್ಕನಾತನು
ದಿವಿಜಪತಿಗಳ ಮರೆಯನಾ ನಿಜ ಸುಕೃತವನು ತೋರಿ
ಅವಿ[35]ತಥ[36]ವಲಾ ವಿಪ್ರವಚನವ
ದೆವಗಸಾಧ್ಯವಿದೆಂದುಪಾಯವ
ಹವಣಿಸಿದೆವಾಯುಷ್ಯದರ್ಧವನಿತ್ತಡಹುದೆಂದು          ೩೧

ಇತ್ತನಾದ್ವಿಜ[37]ವರ[38]ನು ಕೇಳಿದು
ಚಿತ್ತವಲ್ಲಭೆಗರ್ಧಜೀವವ
ನೆತ್ತಿಕೊಡು ಬಾಲೆಯನು ಸುರರಭ್ಯರ್ಥಿಸಿದರೆನಲು
ಇತ್ತೆ ನಾನೆನಗೇನು ಗಂಧ
ರ್ವೋತ್ತಮನೆ ಹೇಳನ್ಯ[39]ನೇ[40] ದಿವಿ
ಜೋತ್ತಮರಿಗಾ[41]ನೆನುತ[42] ಕೊಟ್ಟನು ಸತಿಯ ಜೀವವನು       ೩೨

ಕೊಟ್ಟೆನೆನ್ನದ ಮುನ್ನ ಜೀವವ
ತೊಟ್ಟಳಂಗನೆ ವಿಷದ ವೇಗವ
ಮೆಟ್ಟಿ ನೆರೆ ನಿದ್ರಾವಸಾನದಲೇಳುವಂದದಲಿ
ಬಿಟ್ಟು[43]ಮೂರ್ಛೆಯನೆದ್ದ[44]ಳರಳಿತು
ದಿಟ್ಟಿ ಚೇತರಿಸಿತ್ತು ತನು ಗುಡಿ
ಗಟ್ಟಿ ಕುಣಿದುದು ಕೂಡೆ ಸುಜನಸ್ತೋಮ ನಲವಿನಲಿ    ೩೨

ಎದ್ದಳೋ ಸತಿ ರುರುವಿನಳಲನು
ಕದ್ದಳೋ [45]ಕಾಲನ ಭಯವ ನೆರೆ
ಗೆದ್ದಳೋ ಗುಣವುಳ್ಲವರಲಾ[46] ಸುರಪತಿಗಳೆನುತ
ಹೊದ್ದಿದರು ಬಾಲಿಕೆಯನವನಿ[47]ಯ
ಲೆ[48]ದ್ದನಿಧಿಯಂತಾದಳಂಗನೆ
ಭದ್ರವಾಯ್ತೆನುತಿರ್ದು[49]ದಂದಾ[50] ಸಕಲ ಮುನಿ[51]ನಿಕರ[52]        ೩೩

[53]ಮಾಡಿ ವೈವಾಹಿಕವನಂತೊಡ[54] ಗೂಡಿ ಕನ್ಯಾವರರ ಪಿತೃಗಳು
ನೋಡಿ ಸುಮುಹೂರ್ತ[55]ದಲಿ[56] ಪುನರಪಿ ಪುಣ್ಯಕಾಲದಲಿ
ನೋಡಿ ಸಂತಸವಟ್ಟುದಭಿಜನ
ಪಾಡಿದರು ಮಂಗಳವನಾವುದು
ಕೂಡದೆಲೆ ಮುನಿನಾಥ ದೈವ[57]ಸುನಿಷ್ಠರಿಂಗೆಂದ[58]     ೩೪

ವರ ತಪಸ್ವಿಗಳಿಗೆ ದುರ್ಲಭ
ತರದಾವುದು ದೇವಋಷಿಪಿತೃ
ವಿರಚಿತಾನುಗ್ರಹಕೆ [59]ಭಾಜನಭೂತರೆಂದೆನಲು[60] [61]ದೊರಕಿದಡೆ ತದನುಗ್ರಹದಲವ
ವರದ[62] ಪಾವನಚರಿತರನು ನೆರೆ
ಹೊರೆವ[63]ನಾ ನಿತ್ಯಾತ್ಮ[64] ನಾರಾಯಣನು ಕರುಣದಲಿ          ೩೬

ತೃತೀಯ ಸಂಧಿ ಸಮಾಪ್ತ

[1] ಭೂಮಿಗಿಷ್ಟಾಪೂತಕರ್ಮಾ | (ವಿ)

[2] ಭೂಮಿಗಿಷ್ಟಾಪೂತಕರ್ಮಾ | (ವಿ)

[3] ನಾವವನು (ವಿ, ಪ)

[4] ನಾವವನು (ವಿ, ಪ)

[5] ರುವ (ಭ)

[6] ರುವ (ಭ)

[7] ಳಿಯ (ಭ)

[8] ಳಿಯ (ಭ)

[9] ನೀಯೆ | (ಪ)

[10] ನೀಯೆ | (ಪ)

[11] ಹೇಳ (ವಿ, ಮು)

[12] ಹೇಳ (ವಿ, ಮು)

[13] ಯೊಲ (ಪ)

[14] ಯೊಲ (ಪ)

[15] ಭವಿಸುವಡೆ (ಭ)

[16] ಭವಿಸುವಡೆ (ಭ)

[17] ಕ್ರುದ್ಧ (ವಿ, ಮು)

[18] ಕ್ರುದ್ಧ (ವಿ, ಮು)

[19] ಹೇಳಿದಾ (ವಿ, ಪ,. ಮು)

[20] ಹೇಳಿದಾ (ವಿ, ಪ,. ಮು)

[21] ವೆಂದೆ | ನ್ನಲ್ಲಿ (ಪ)

[22] ವೆಂದೆ | ನ್ನಲ್ಲಿ (ಪ)

[23] ವನ ಕೃಪೆಯಿಂದಲಾ (ವಿ)

[24] ವನ ಕೃಪೆಯಿಂದಲಾ (ವಿ)

[25] ಗೆಲ್ಲೆ | ನ್ನೆನ್ನುವಾ (ಭ)

[26] ಗೆಲ್ಲೆ | ನ್ನೆನ್ನುವಾ (ಭ)

[27] ವೆಲೆ (ಪ)

[28] ವೆಲೆ (ಪ)

[29] ತನೆ (ಪ)

[30] ತನೆ (ಪ)

[31] ಕೊಟ್ಟೆ (ಪ)

[32] ಕೊಟ್ಟೆ (ಪ)

[33] ವಿದೆ (ವಿ)

[34] ವಿದೆ (ವಿ)

[35] ರತ (ವಿ)

[36] ರತ (ವಿ)

[37] ನದ (ಭ)

[38] ನದ (ಭ)

[39] ರೇ (ಭ)

[40] ರೇ (ಭ)

[41] ವೆನುತ (ಭ)

[42] ವೆನುತ (ಭ)

[43] ಮೂರ್ಧೆಯೊಳೆದ್ದ (ಪ, ಭ)

[44] ಮೂರ್ಧೆಯೊಳೆದ್ದ (ಪ, ಭ)

[45] ಗುಣವುಳ್ಳವರಲಾ | ಸಿದ್ಧವಾಯಿತು ಜಯವೆನುತ ಜಹ್ಯ (ಪ)

[46] ಗುಣವುಳ್ಳವರಲಾ | ಸಿದ್ಧವಾಯಿತು ಜಯವೆನುತ ಜಹ್ಯ (ಪ)

[47] ಯೊ|ಳೆ (ಭ)

[48] ಯೊ|ಳೆ (ಭ)

[49] ದಂತಾ (ವಿ, ಪ, ಮು)

[50] ದಂತಾ (ವಿ, ಪ, ಮು)

[51] ನಿವಹ (ಭ)

[52] ನಿವಹ (ಭ)

[53] ಮಾಡಿದರು ವೈವಾಹಿಕನೊಡ (ಪ), ಮಾಡಿದರು ವೈವಾಹವನ್ನೊಡ (ಭ)

[54] ಮಾಡಿದರು ವೈವಾಹಿಕನೊಡ (ಪ), ಮಾಡಿದರು ವೈವಾಹವನ್ನೊಡ (ಭ)

[55] ವನು (ವಿ)

[56] ವನು (ವಿ)

[57] ಸುನಿಷ್ಠಿತರಿಗೆಂದ (ವಿ, ಪ)

[58] ಸುನಿಷ್ಠಿತರಿಗೆಂದ (ವಿ, ಪ)

[59] ಕಾರಣಭೂತರೆಂದೆನಲು (ವಿ), ಬಾಧಕವುಂಟೆ ಪರಿಕಿಸಲು (ಮು)

[60] ಕಾರಣಭೂತರೆಂದೆನಲು (ವಿ), ಬಾಧಕವುಂಟೆ ಪರಿಕಿಸಲು (ಮು)

[61] ತೊರೆದ ವಸು ದೊರಕಿದಡೆವೋಲಾ | ಪರಮ (ಮು), ದೊರಕಿದರೆ ತದನುಗ್ರಹದವೊಲು | ವರದ (ಪ), ದೊರಕಿದಡೆ ತದನಾಗ್ರಹದ ಹಲ | ವರನು (ಭ)

[62] ತೊರೆದ ವಸು ದೊರಕಿದಡೆವೋಲಾ | ಪರಮ (ಮು), ದೊರಕಿದರೆ ತದನುಗ್ರಹದವೊಲು | ವರದ (ಪ), ದೊರಕಿದಡೆ ತದನಾಗ್ರಹದ ಹಲ | ವರನು (ಭ)

[63] ನಿತ್ಯಾತುಮನು (ಪ)

[64] ನಿತ್ಯಾತುಮನು (ಪ)