ಸೂಚನೆ :
ಚಿತ್ತಯಿಸು ಶೌನಾಕ ಪ್ರಮದ್ವರೆ
ಮೃತ್ಯುವುಖದಲಿ ಬಿದ್ದು ಮಗುಳೆ

[1]ಸೆ
ಯುತ್ತ ಜೀವಿಸಿದಂದವನು ಕೇಳೆಂದ[2]ನಾ ಸೂತ*

ಪದನು :
ಕೇಳು ಶೌನಕ ರುರು ಸಮಗ್ರಗು
ಣಾಲಯನು ತಾನೆನಿಸಿ ಪುಣ್ಯವ
ಮೇಳಯಿಸಿದನು ಯಜ್ಞದಾನತಪೋವ್ರತಂಗಳಲಿ
ಶೀಲನಿಧಿ ಗುಣನಿಧಿ ದಯಾನಿಧಿ
ಬಾಲಿಕೆ ಪ್ರಮದ್ವರೆ ಸಹಿತ [3]ಪ
ರ್ಣಾ[4]ಲಯದಲೆಸೆದಿರ್ದ[5]ನುನ್ನತ[6] [7]ಕರ್ಮ[8] ನಿಷ್ಠೆಯಲಿ  ೧

ಹರಿಪದಾಂಬುಜಭಕ್ತನುನ್ನತ
ಗುರುಪದೋಪಾಸಕನುಪಾಶ್ರಿತ
ಸುರಪಿತೃದ್ವಿಜಚರಣ ಭೃಗುಕುಲಕುಮುದಹಿಮಕಿರಣ
ಶರಣಜನರರಕ್ಷಕನಹಿಂಸಾ
ಪರನ[9]ನಾರತ[10]ಧರ್ಮಪರ ತತ್
ಪರನೆನಿಪ ಗಾರ್ಹಸ್ಥ್ಯದಲಿ ಪರಿನಿಷ್ಠನಾಗಿರ್ದ  ೨

ವರಪತಿವ್ರತೆ ಸತ್ಯರತೆ ಸ
ಚ್ಚರಿತೆ [11]ಸೌಭಗಭರಿತೆ[12] ಶೀಲಾ
ಭರಣೆ [13]ವಂಶೋದ್ಧರಣೆಯಘಕುಲನಿಕರಸಂಹರಣೆ[14] ಪರಮಪಾವನೆ ಪುಣ್ಯಭಾವನೆ
ಸುರಪಿತೃದ್ವಿಜಭಕ್ತೆ ಭುವನೋ
ತ್ತರ ಮಹಾಗುಣಯುಕ್ತೆಯೆಸೆದಳು [15]ಸತಿ ಭೃಗೂದ್ವಹನ[16]       ೩

ಒಂದು ದಿನ ವರ ವನಿತೆ ಕೆಳದಿಯ
ರೆಂದೆನಿಪ ವರ ಮುನಿವಧೂಜನ
ವೃಂದಸಹಿತಾಡುತ್ತ [17]ವಿಪಿನಾಂತರದೊಳಿರುತಿರಲು[18] ಮುಂದೆ ಕಾಳೋರಗನು ಬಿದ್ದಿರ
ಲಿಂದುಮುಖಿ ನೋಡದೆ ಮಹಾವಿಷ
ದಿಂದ[19] ಸಂಪನ್ನ[20]ನನು ಮೆಟ್ಟಿದಳಗ್ರಪಾದದಲಿ        ೪

ಮೆಟ್ಟಿದಾಗಳೆ ಕೆರಳಿ [21]ಕೋಪಾ
ವಿಷ್ಟ[22]ಕಾಯನು ಕಾಂತೆಯನು ನಸು
ಮುಟ್ಟಿದನು ವಿಷವೀರ್ಯದುರ್ಧರ[23]ದಾಡೆಯ[24]ಗ್ರದಲಿ
ಕೆಟ್ಟುದೊಡಲಾ ಛವಿಶಶಾಂಕನ
ಮುಟ್ಟಿದಂಟಿರೆ ರಾಹು ಹರಣವ
ಬಿಟ್ಟಳಲ್ಲಿಯೆ ಬಾಲೆ ಬೆದರಿದು[25]ದಾ ವಧೂ[26] ನಿವಹ    ೫

ದಿಂಡುಗೆಡೆದಳು ಧರೆಗೆ ಹೂವಿನ
ದಂಡೆಯನು ಬಿಸುಟಂತೆ ಕೆದರಿದ
ಮಂಡೆಯಲಿ ಬಿಡುಮುಡಿಯ ಮಲ್ಲಿಗೆ ಸೂಸಲವನಿಯಲಿ
ಕಂಡು ಕೆಳದಿಯರೊರಲಿದರು ಋಷಿ
ಮಂಡಲ[27]ವಿದೇನೆನುತ ಕೇಳುತ[28] ಪುಂಡರೀಕದಳಾಕ್ಷಿಯಲ್ಲಿಗೆ ಬಂದುದಾ[29]ಕ್ಷಣಕೆ[30]        ೬

ಕೇಳುಅಲೆ ಹರಿತಂದ [31]ನಂದಾ[32] ಸ್ಥೂಲಕೇಶನು ಮಗಳ ಮರಣ
ಜ್ವಾಲೆಯಲಿ ಮುಳುಗಿದನು ರುರುವಿನ ಮನದ ದುಃಸ್ಥಿತಿಯ
ಹೇಳಬೇಕಾ ಪ್ರಮತಿಯೊಡಲಲಿ[33]ಬಾಳ ಕೊಂಡಂತಾಯ್ತು[34] ವರಮುನಿ
ಜಾಲ ಜಗ್ಗನೆ ಜರಿದುದಂಗನೆಯಿರವನೀಕ್ಷಿಸುತ         ೭

ಬಂದನಾತ್ರೇಯನು ಮಹಾಸತಿ
ಹೊಂದಿದ[35]ಳಲಾ[36]ಯೆನುತ ಕುಶಿಕನು
ಬಂದನಳಲಿದನಾಷ್ಣಿಶೇಣನು ದೀರ್ಘಜಾನುಕನು
ಬಂದನಲ್ಲಿಗೆ ಕೋಣಕುತ್ಸನು
ಬಂದನಾ ಗೌತಮನು ಕೇಳೈ
ತಂದನಿರದಾ ಶಂಖಮೇಖಲನಾ ಭರದ್ವಾಜ  ೮

ಬಂದುದಾ [37]ಮುನಿ[38]ನಿವಹವವ[39]ರಿವ[40] [41]ರೆಂದು[42] ಬಣ್ಣಿಸಲೇಕೆ ಕಾಣು
ತ್ತಿಂದುಮುಖಿಯನು ರಾಹು [43]ಸೌಧ[44]ಧರ್ಮಕ್ಕೆ ಮುನಿವಂತೆ
ಅಂದು [45]ಘೋರೋರಗನ ವಿಷದಲಿ[46] ಹೊಂದಿದಬಲೆಯನೀಕ್ಷಿಸುತ ಘೋ
ಳೆಂದು ಬಾಯನು ಬಿಟ್ಟುದಿಳೆ ಬಿರಿವಂತೆ ದುಃಖದಲಿ    ೯

ಪದುಮಮುಖಿಯನು ಪರಿವರಿಸಿ ದುಗು
ಡದಲಿ ಮುನಿಸಭೆ ಕುಳ್ಳಿರಲು ನಿಜ
ಸುದತಿಯನು ಕಾಣುತ್ತ ರುರು ರೋದನಕೆ ಲಜ್ಜಿಸುತ
ಸದನವನು ಹೊರವಂಟು ಕಡು ವಿಜ
ನದಲಿ ಘೋರಾರಣ್ಯವನು ಹೊ
ಕ್ಕೊದರಿದನು ಕೆದರಿದನು ತದ್ವನವಾಸಿಖಗಮೃಗವ    ೧೦

ಏಕೆ ಕಂಡೆನು ಪೂರ್ವದಲಿ ಭವ
ನೈಕ[47]ರತ್ನವೆನಿಪ್ಪ ಸತಿಯನು[48] ಸೋಕಿ ಕಂಗಳು ಕೋಳುವೋಗಲದೇಕೆ [49]ಭಾಮಿ[50]ನಿಗೆ
ಲೋಕದಲಿ ಹೋಲುವ[51]ಳದಾರೆ
ನ್ನಾಕೆಯನುಪಮ[52]ರೂಪುಗುಣಸೀ
ಲಾಕೃತಿಯ ನಾನೆಂತು [53]ಮರೆದಪೆನೆನುತ[54] ಹಳವಿಸಿದ        ೧೧

ಎಲೆ ವಿಧಾತೃ ವೃಥಾ ವಿಯೋಗದ
ಬಲೆಯ ಬೀಸಿದೆ ಕಾಯದರ್ಧಕೆ[55]ತಳು[56]ವಿದೆಯದೇ[57]ಕರ್ಧ[58]ವನು ನಿನಗರಿದೆ ಸಾಧಿಸಲು
ಹೊಳೆಯನಡುಗಡಲೊಳಗೆ ನಾವೆಯ
ಮುಳುಗಿಸಿದೆ ಮುಂದುವರಿಯದವರನು
ಒಅಲ[59]ವರಿಸಿ[60]ದೇಕೊಂದು ದೇಹದ[61]ಲೆಂದು[62] ಹಳವಿಸಿದ     ೧೨

ಕೊಂಡು ಹೋಗೆನ್ನುವನು [63]ಬಿಡು ಮೇಣ್[64] ಪುಂಡರೀಕಾಕ್ಷಿಯನು [65]ಕಾಯವ[66] ಖಂಡಿ[67]ತವೆ[68] ಕೈಗಾದಡೇನುಂಟಯ್ಯ ಫಲವಿದಕೆ
ಉಂಡುಹೋಗಲಿ ಕರ್ಮವೆಂಬಡೆ
ಪಂಡಿತನು ತಾನಲ್ಲ ಪಿತೃಋಣ
ಕೊಂಡು ಮಳ[69]ಗದೆ[70] ನರಕ ಕೂಪದಲೆನ್ನನಕಟೆಂದ  ೧೩

ಅಷ್ಜದಿಗುಪಾಲರಿರ [71]ವಿರಚಿಸಿ
ದಿ[72]ಷ್ಟವುಳ್ಲರೆ [73]ತನ್ನ ಪುಣ್ಯವು[74] ಶಿಷ್ಟಜನಸಮ್ಮತನು ತಾನೆಂದಿನಿಸುವೊಡೆ ತನ್ನಾ
ದೃಷ್ಟಿ ಮೋಹನಮೂರಿಯನು ಪರಿ[75]ಸೃಷ್ತಿ[76]ಯನು ಮಾಡುವುದು ಕರುಣಾ
ದೃಷ್ಟಿಯಲಿ ನೀವೆನುತ ಕೈಗಳ ಮುಗಿದು ಪೊಡವಂಟ ೧೪

ಉತ್ತಮರ ವಂಶದಲಿ ಜನಿಸಿದ
ವೃತವಂತನು ತಾ[77]ನಹಡೆ[78] ನಿಜ
ಮತ್ತಕಾಶಿನಿ ತನ್ನ ಮರುಗಿಸದಂತೆ ಮಾಡುವುದು
ವೃತ್ರರಿಪುಮುಖ್ಯರಿಗೆ ತಾ ಕೈ
ಯೆತ್ತಿದನು ಪ್ಡ[79]ವಟ್ಟು[80] ಪಿತೃಗಳ
ಮೊತ್ತವನು ಮರೆವಿಕ್ಕೆನೆಂದನು ವಿಪ್ರನಭಿನಮಿಸಿ      ೧೫

ಶ್ರೀನಿವಾಸಪದಾಬ್ಜಯುಗಳವ
ತಾನು ನಂಬಿದ ಭಕ್ತನಾದರೆ
ಮಾನಿನಿಯ ಮರಣವನು [81]ಮಾಣಿಸಿ[82]ಕೊಡುವುದೆನಗೊಲಿದು
ನೀನಲಾ ಜಗದುದುಭವಸ್ಥಿತಿ
ಹಾನಿ[83]ನಿರ್ಮಿತಕರ್ತು ನಿನಗಿ
ನ್ನೇ[84]ನಸಾಧ್ಯವು ದೇವ ಕೃಪೆಮಾಡೆಂದನಾ ವಿಪ್ರ        ೧೬

ಎಂದು ತಲಬಾಗಿರಲು ಸುರಪಿತೃ
ವೃಂದವದನಾಲಿಸುತ ಕರುಣಾ
ಕಂದಳಿತ ಕಮನೀಯ ಹೃದಯರು ತಮ್ಮೊಳೊಂದಾಗಿ
ಎಂದರಾದ್ವಿಜವರನ ಹುಯ್ಯಲು
ಬಂದುದಿನಕಿನ್ನೇನು ಗತಿ [85]ಮಡಿ
ದಿಂದು [86]ಮುಖಿಯನು [87]ಮಗುಳಿ ಬದುಕಿಸುವಂತವೆಂತೆ[88] ನುತ            ೧೭

ಇಲ್ಲ ಸತಿಗಾಯುಷ್ಯ [89]ಬದುಕಿಸ[90] ಬಲ್ಲರಾರಬಲೆಯನು ಲಕ್ಷ್ಮೀ
ವಲ್ಲಭನು ಹೊರಗಾತಿ ಮಾರ್ಕಾಂಡೇಯನಂತಕನ
ಹಲ್ಲ[91]ನೊಡೆ[92]ಯನೆ ಹಲವು ಯುಗ ತರಿ
ಸಲ್ಲದೇ ತತ್ಪಾದಭಕುತರು
ಬಲ್ಲಿದರು ನೋಡುವೆವುಪಾಯವನೆಂದುದಮರಗಣ      ೧೮

ತಿಳುಹಿ ನೋಡುವೆವೆನುತ ದೂತನ
ಕಳುಹಿದರು ವಿಪ್ರೋತ್ತಮನ[93]ಹೊರೆ[94] ಗಿಳಿದನಾತನು ಕಂಡನಾ ದ್ವಿಜವರನನಡವಿಯಲಿ
ಅಳಲಬೇಡೆಲೆ ವಿಪ್ರ ನಿಜ ವರ
ಲಲನೆಗಿಲ್ಲಾಯುಷ್ಯವಾರಿಗೆ
ಹಲುಬಿದರೆ ಫಲವೇ[95]ನಸಾಧ್ಯವಿದೆಂ[96]ದನಾ ದೂತ     ೧೯

ಆರು ಹೇಳೆಲೆ ತಂದೆ ಹಳುಹಿದ
ರಾರು ನಿನ್ನನು ತನ್ನ ಜಠರದ
ಕೂರಲಗಿನುಪಟಳವ[97]ನುಪಶಮಿಶುವರ[98]ದಾರಿನ್ನು
ನಾರಿಗಿಲ್ಲಾಯುಷ್ಯ ಗಡ ನೀ
ನಾರು ಹೇಳುವಡಿದನು ದೈವದ
ಕೂರುಮೆಗೆ ದುಃಸ್ಸಾಧ್ಯವೆನಿಪುದದಾವುದುಂಟೆಂದ     ೨೦

[1] ಸು | ವೃತ್ತೆ ತಾ ಜನಿಸಿದಂದವದಾಯ್ತೆಂದ (ಮು)

[2] ಸು | ವೃತ್ತೆ ತಾ ಜನಿಸಿದಂದವದಾಯ್ತೆಂದ (ಮು)

* ಈ ಪದ್ಯ ’ಪ’ ಪ್ರತಿಯಲ್ಲಿಲ್ಲ

[3] ಪ್ರಮ | ದಾ

[4] ಪ್ರಮ | ದಾ

[5] ನುತ್ತಮ (ವಿ, ಪ)

[6] ನುತ್ತಮ (ವಿ, ಪ)

[7] ಧರ್ನ್ಮ (ಭ)

[8] ಧರ್ನ್ಮ (ಭ)

[9] ತಾರಕ (ವಿ, ಮು)

[10] ತಾರಕ (ವಿ, ಮು)

[11] ಸೌಭಾಗ್ಯಯುತೆ (ಮು)

[12] ಸೌಭಾಗ್ಯಯುತೆ (ಮು)

[13] ನಿರ್ಮಲಕರಣೆ ವಂಶೋದ್ಧರಣೆಯಘಹರಣೆ (ಭ)

[14] ನಿರ್ಮಲಕರಣೆ ವಂಶೋದ್ಧರಣೆಯಘಹರಣೆ (ಭ)

[15] ಭೃಗುವ ಸದನದಲಿ (ಪ)

[16] ಭೃಗುವ ಸದನದಲಿ (ಪ)

[17] ತದ್ವಿಪಿನಾಂಟರದಲೊಂದು (ವಿ)

[18] ತದ್ವಿಪಿನಾಂಟರದಲೊಂದು (ವಿ)

[19] ಸಂಪೂರ್ಣ (ಪ)

[20] ಸಂಪೂರ್ಣ (ಪ)

[21] ಕೋಪೋ | ದ್ದಿಷ್ಟ (ಭ), ಕೋಪಾ | ರಿಷ್ಟ (ಪ)

[22] ಕೋಪೋ | ದ್ದಿಷ್ಟ (ಭ), ಕೋಪಾ | ರಿಷ್ಟ (ಪ)

[23] ದಂಷ್ಟ್ರದ (ಮು)

[24] ದಂಷ್ಟ್ರದ (ಮು)

[25] ದೆಲ್ಲ ವಧು (ಭ)

[26] ದೆಲ್ಲ ವಧು (ಭ)

[27] ವದೇನೇನೆನುತಲಾ (ವಿ, ಮು)

[28] ವದೇನೇನೆನುತಲಾ (ವಿ, ಮು)

[29] ಹ್ರದಕೆ (ಪ)

[30] ಹ್ರದಕೆ (ಪ)

[31] ನಾತನು (ಪ)

[32] ನಾತನು (ಪ)

[33] ಹೂಳಿದುದು ಹೃತ್ತಾಪ (ಭ), ಬಾಳ ಕೋದಂತಾಯ್ತು (ವಿ)

[34] ಹೂಳಿದುದು ಹೃತ್ತಾಪ (ಭ), ಬಾಳ ಕೋದಂತಾಯ್ತು (ವಿ)

[35] ಳೆ ಹಾ (ಪ, ವಿ)

[36] ಳೆ ಹಾ (ಪ, ವಿ)

[37] ಋಷಿ (ಭ)

[38] ಋಷಿ (ಭ)

[39] ರಿರ (ಪ)

[40] ರಿರ (ಪ)

[41] ದಿಂದು (ಪ)

[42] ದಿಂದು (ಪ)

[43] ಸಾಧ (ಭ), ಸ್ವಾಧ (ಪ)

[44] ಸಾಧ (ಭ), ಸ್ವಾಧ (ಪ)

[45] ಘೋರಾಕ್ರಂದವಿಧದಲಿ (ಪ)

[46] ಘೋರಾಕ್ರಂದವಿಧದಲಿ (ಪ)

[47] ಸತಿಯೆಂದನಿಪ ರತ್ನವ (ಪ)

[48] ಸತಿಯೆಂದನಿಪ ರತ್ನವ (ಪ)

[49] ಕಾಮಿ (ಭ)

[50] ಕಾಮಿ (ಭ)

[51] ರಿದಾರೆ | ನಾಕೃಶಾಂಗಿಯ (ಭ)

[52] ರಿದಾರೆ | ನಾಕೃಶಾಂಗಿಯ (ಭ)

[53] ಮರೆವೆನೆನುತ್ತ (ವಿ, ಪ) ಮರೆಯುವೆನೆಂದು (ಮು)

[54] ಮರೆವೆನೆನುತ್ತ (ವಿ, ಪ) ಮರೆಯುವೆನೆಂದು (ಮು)

[55] ಕಳು (ಪ)

[56] ಕಳು (ಪ)

[57] ನರ್ಧ (ಭ)

[58] ನರ್ಧ (ಭ)

[59] ವರವಿ (ವಿ)

[60] ವರವಿ (ವಿ)

[61] ಲೆನುತ (ಭ)

[62] ಲೆನುತ (ಭ)

[63] ಮೇಣ್ ಬಿಡು (ಭ)

[64] ಮೇಣ್ ಬಿಡು (ಭ)

[65] ತಾನೇ (ಭ)

[66] ತಾನೇ (ಭ)

[67] ತವು (ಭ)

[68] ತವು (ಭ)

[69] ಗಿತು (ವಿ, ಮು)

[70] ಗಿತು (ವಿ, ಮು)

[71] ರಚಿಸಿದ | ಯಿ (ಪ)

[72] ರಚಿಸಿದ | ಯಿ (ಪ)

[73] ಪೂರ್ವಜನ್ಮವಿ (ಪ)

[74] ಪೂರ್ವಜನ್ಮವಿ (ಪ)

[75] ಶಿಷ್ಟೆ (ವಿ, ತುಷ್ಟೆ (ಭ)

[76] ಶಿಷ್ಟೆ (ವಿ, ತುಷ್ಟೆ (ಭ)

[77] ನಹೆನು (ಪ)

[78] ನಹೆನು (ಪ)

[79] ವಡಲು (ಪ, ಭ)

[80] ವಡಲು (ಪ, ಭ)

[81] ಬದುಕಿಸಿ (ಪ), ಮನ್ನಿಸಿ (ಭ)

[82] ಬದುಕಿಸಿ (ಪ), ಮನ್ನಿಸಿ (ಭ)

[83] ಸಮ್ಮತ ಕರ್ಮ ನಿನಗಿಂ | ದೇ (ಭ)

[84] ಸಮ್ಮತ ಕರ್ಮ ನಿನಗಿಂ | ದೇ (ಭ)

[85] ಮತಿಯಿಂದು (ವಿ, ಪ)

[86] ಮತಿಯಿಂದು (ವಿ, ಪ)

[87] ಮರಳಿ ಬದುಕಿಸಬಲ್ಲರಾರೆ (ವಿ,ಪ)

[88] ಮರಳಿ ಬದುಕಿಸಬಲ್ಲರಾರೆ (ವಿ,ಪ)

[89] ಜೀವಿಸ (ವಿ, ಮು)

[90] ಜೀವಿಸ (ವಿ, ಮು)

[91] ನೊದೆ (ವಿ, ಪ, ಮು)

[92] ನೊದೆ (ವಿ, ಪ, ಮು)

[93] ಬಳಿ (ವಿ)

[94] ಬಳಿ (ವಿ)

[95] ನು ಯೋಚಿಸುಯೆಂ (ಮು)

[96] ನು ಯೋಚಿಸುಯೆಂ (ಮು)

[97] ಶಮಿಸುವವರವರ (ಪ)

[98] ಶಮಿಸುವವರವರ (ಪ)