ಸೋಕಿ ನಿನ್ನನು ರವಿಯ ರಶ್ಮಿಯ
ಪಾಕ

[1]ಕರ್ತುವೆ[2] ಜಲವನವನಿಯ
ಲೋಕಪಾವನವಾಗಲಶುಚಿ[3]ದ್ರವ್ತಚಯ[4] ಸಹಿತ
ಏಖೆ ನಿನಗಶುಚಿತ್ವವೆಂಬೀ
ಶೋಕ ಬಿಡೂ ಸಂಶಯವನೆಂದಾ
ಲೋಕಕಾರಣಮೂರ್ತಿ ಸಂತವಿಸಿದನು ಪಾವಕನ       ೨೧

ಎನೆ ಹಸಾದವೆನುತ್ತ ಪಾವಕ
ನನುನಯವ ಕೈಕೊಂಡು ನಿರ್ಮಲ
ಮನದಲಂಬುಜಭವಗೆ ಕೈಗಳ ಮುಗಿದು ತಲೆವಾಗಿ
ಅನಿಮಿಷರು ಋಷಿವರರು ಸಹಿತಂ
ದನಲನೆಯ್ದಿದ[5]ನಾತ್ಮ[6] ವಾಸವ
ನನುಪಮನೆ ಕೇಳಾಯ್ತು ಮಂಗಳವೀ ಜಗಂಗಳಿಗೆ     ೨೨

ಸಂತವಾದುದು ಸುರರಿಗಾ ಋಷಿ
ಸಂತತಿಗೆ ಪರಿತೋಷವಾದುದು
ಚಿಂತೆ ಬಿಟ್ಟುದು ಸಕಲಲೋಕಪ್ರಾಣಿಜೀವನದ
ಅಂತರಾಯವಪಾಯಗಂಡುದು
ತಂತಮಗೆ ಜನ[7]ಮನದ ಸಂತಸ[8] ತಂತುಗಳ ಸಾಗಿಸಿತು ಭೋಗಿಸಿತಿಷ್ಟಹವ ಸುಖವ     ೨೩

ಆವಧರಿಸಿದೈ ಮುನಿಪ ಶೌನಕ
ಪವನಸಖನ ವಿಚಿತ್ರಚರಿತವ
ನವನಿಪಾವನವೆನಿಪ ಪುಣ್ಯಾಖ್ಯಾನಸಂಗತಿಯ
ಅವಧರಿಸು [9]ಮೇಲಾದ[10] ಮುನಿ ಭಾ
ರ್ಗವ ಚರಿತ್ರವ[11]ನುದಿಸಿದನಲೈ[12] ಚ್ಯವನನನಾನತರಕ್ಷಕನು ತಾನೆನಿಸಿ ಧರಣಿಯಲಿ      ೨೪

ಭವನ[13]ನುತಮಾಹಾತ್ಮ್ಯ[14] ನೆನಿಪಾ
ಚ್ಯವನ ಮುನಿಗೆ [15]ಸುಕನ್ಯೆ[16]ಯಲಿ ಸಂ
ಭವಿಸಿದನಲಾ ಪ್ರಮತಿ ಬಳಿಕಾ ಪ್ರಮತಿಯೆಂಬವಗೆ
ದಿವಿಜ[17]ವನಿತೆ[18] ಘೃತಾಚಿಯಲಿ ಸಂ
ಭವಸಿದನು ರುರುವೆಂಬವನು ರೌ
ರರವನು ಶುನಕನಲಾ ಪ್ರಮದ್ವರೆಯಾತ್ಮಭವನೆಂದ   ೨೫

ನೀನಲಾ ಮುನಿನಾಥ ಶುನಕನ
ಸೂನು ನಿನ್ನ ಪಿತಾಮಹನು ತಾ
ನೇನ ಮಾಡಿದನೆಂಬುದನು ಕೇಳದುಭುತದ ಕಥೆಯ
ಮೇನಕೆಯ ಮಗಳಾ ಪ್ರಮಧ್ವರೆ
ತಾನು ಮರಣವನೈದಿ ಮಗುಳಾ
ಸ್ಥಾನದಲಿ [19]ಜೀವಿಸಿದ[20]ಳಲ್ಮೈ ತಂದೆ ಕೇಳೆಂದ        ೨೬

ಒಂದು ದಿನ ಗಂಧರ್ವರಾಜನು
ಬಂದು ಕಂಡನು ಮೇನಕೆಯ ಸರ
ಳಿಂದೆಸಲು [21]ಮನುಮಥನು ವಿಶ್ವಾವಸಂ ಸಮಾಹ್ವಯನು[22] ಇಂದುಮುಖಿಯನು ಕೂಡಿದನು ಬಳಿ
ಕಂದು ಗರ್ಭವ [23]ತಳೆದು[24] ಬಿಸುಟಳು
ಸಂದ ವಿಪಿನಾಂತರದಲೆಲೆ ಮುನಿನಾಥ ಕೇಳೆಂದ     ೨೭

ಸ್ಥೂಲಕೇಶಾಹ್ವಯ ಮಹಾಮುನಿ
ಯಾಲಯದ ವಳಯದಲಿ ಬಿದ್ದುದು
ಲೋಲಲೋಚನೆ ಬಿಸುಟ ಗರ್ಭವದೊಂದು ವರನದಿಯ
ಕೂಲದಲಿ ಜನಿಸಿದಳು ಕನ್ನಿಕೆ
ಭಾಳನೇತ್ರನ ವಧುವೊ ಲಕ್ಷ್ಮಿಯೊ
ಹೇಳೆನಲು ತೊಳಗೊಳಗಿ ಬೆಳಗಿದಳಖಿಳ ದಿಗುತಟವ           ೨೮

ಕಂಡನಾ ಮುನಿನಾಥ ನೀ ಭೂ
ಮಂಡಲಕೆ ತೊಡ[25]ವೆನಿಪ[26] ಕನ್ಯಾ[27]ಮಂಡಲಮಹಾರತ್ನವನು ತನ್ನಾಶ್ರಮಕ್ಕೊಲಿದು[28] ಕೊಂಡುಹೋದನು ಸಲಹಿದನು ತನು
ಗೊಂಡ[29]ವೊಲು ಲಾವಣ್ಯವೆಲ್ಲಾ[30] ಪುಂಡರೀಕಾಕ್ಷಿಯ[31]ರಿಗಧಿಕೆಯೆನಿಪ್ಪ[32] ಬಾಲಿಕೆಯ      ೨೯

ಪ್ರಮದೆ[33]ಯರಿ[34]ಗೆಲ್ಲರಿಗೆ ತಾನು
ತ್ತಮೆಯೆನಿಸಿದುದರಿಂದ ಮುನಿಪತಿ
ಕಮಲಮುಖಿ[35]ಗೆ ಪ್ರಮದ್ವರಾಖ್ಯೆಯ[36]ನಧಿಕ[37]ಮೋಹ[38]ದಲಿ
ವಿಮಳ ಪಕ್ಷದ ವಿಧುವಿನಂತಿರೆ
ಸುಮತಿ ರಚಿಸಿದನಿಂತು ಬೆಳೆದಳು
ರಮಣಿ ರಕ್ಷಾಮಣಿಯವೋಲಿರ್ದಳು ಮನೋಭವನ    ೩೦

ಮುನಿಪ ಕೇಳೊಂದು ದಿನ ಕಂಡನು
ಮನುಮಥನ ಮಸೆದಲ[39]ಗು ನಟ್ಟಿತು[40] ವನದಲೊಬ್ಬಳಯಾಡು[41]ತಿರ್ದಾ[42]ಲೋಲ[43]ನೇತ್ರೆಯನು[44] ಮನವನಾವರಿಸಿತ್ತು ತತ್ಕೃತ
ಘನತರಜ್ವರ ಕಂಗಳಬಲೆಯ
ತನುವಿನೊಳಗರಸಿದುವು ತತ್ಪ್ರತಿಕಾರದೌಷಧವ       ೩೧

ತನಗಸಾಧ್ಯವೆನುತ್ತ ಮನದಲಿ
ವನಿತೆಯನು ನೆನೆಯುತ್ತ ದುಗುಡದ
ಲನುಪಮನು ನಡೆತಂದು ಹೊಕ್ಕನು ರುರು ನಿಜಾಲಯವ
ಜನಿಸದಾದುದು ನಿದ್ರೆ ವಿಗತಾ
ಶನನು ಕೃಶತರಗಾತ್ರನಾಗಿರೆ
ತನಯನನು ಬೆಸಗೊಂಡನಂದಾ ಪ್ರಮತಿ ಶಂಕಿಸುತ  ೩೨

ಏನಿದೇನೈ ಮಗನೆ ಚಿತ್ತ
ಗ್ಲಾನಿ[45]ನಿನಗೆಲೆ[46] ತಂದೆ ಹೇಳೆನೆ
ತಾನು ಹೋದೆನು ತಂದೆ ಕಂಡೆನು ಕಮಲಲೋಚನೆಯ
ಕಾನನದ ಲಕ್ಷ್ಮಿಯೊ ಧರಿತ್ರಿಗೆ
ತಾ[47]ನು ಸುಳಿದಾ ಗಿರಿಜೆಯೋ ಮಿಗೆ[48] ಮಾನವಾಂಗನೆಯಲ್ಲ ಸೋತುದು ತನ್ನ ಮನವೆಂದ

ಮರೆಯದೀಮನವೇವೆನಬಲೆಯ
ಸೆರಗ ಸೋಂ[49]ಕುವಡಂ[50]ಜಿ ಬಂದೆನು
ಬರುಮನದ ಬಾಹಿ[51]ರನ[52]ಬೆಸಗೊಳಲೇಕೆ ಮನುಮಥನ
ಸೆರೆಗೆ ನೂಕಿದಳೆನ್ನ[53] ನಿಂತೆನ
ಲ[54] ರಿವೆನದನಾನೆನುತ ಹೋದನು
ಮರುಗು[55]ಸುವ[56] ಮಾನಿನಿಯದಾರೆನುತಾಶ್ರಮಕೆ ಬಂದ       ೩೪

ಕಂಡನಾ ಮುನಿಯಾಶ್ರಮದಲಾ
ಪುಂಡರೀಕಾಕ್ಷಿಯನು ಕಾಮನ
ಖಂಡೆಯವನೊರೆಗಳೆದು ಹೊಗರಿಟ್ಟಂತೆ ರಂಜಿಸಲು
ದಂಡದಂತಿರೆ ನಮಿಸಲಾ ಮುನಿ
ಕಂಡನೀತನನುಚಿತದಿಂದಿದಿ
ರ್ಗೊಂಡು ತೆಗೆದಪ್ಪಿದನು ಕುಶಲೋಕ್ತಿಯಲಿ ಮನ್ನಿಸುತ          ೩೫

ಹೇಳಿದೇನೈ ಬಂದೆ ನೀನೆ
ನ್ನಾಲಯಕೆ ಕಾರ್ಯವನು ಹೇಳೆನೆ
ಹೇಳಿದನು ಬಾಲಿಕೆಯ ಬಲೆಯಲಿ ಬಿದ್ದ ಸಂತನಿರವ
ಮೇಲೆ ನೀನೇ ಬಲ್ಲೆಯನೆ ಸಮ
ಶೀಲನಾ[57]ದೆನೆ[58]ನುತ್ತ ಕೊಟ್ಟನು
ಲೋಲಲೋಚನೆಯನು ಮಹಾಮುನಿ ವರ ಮುಹೂರ್ತದಲಿ     ೩೬

ಆದುದಭಿಮತಸಿದ್ದಿ ಮನದ ವಿ
ಷಾದವಡಗಿತು ಕಾಮನಲ[59]ಗನು[60] ಕೋದ[61]ನೊರೆ[62]ಯಲಿ ಮರೆಯ ಮಾತಿನ್ನೇಕೆ ಮಂಗಳದ
ವಾದವಭಿನವಾಯ್ತು ಹರುಶ್ಃಅ ಮ
ಹೋದಧಿಗೆ ಪೂರ್ಣೇಂದುವಾಯ್ತು ತ
ಳೊದರಿಯ ವೈವಾಹರಚನಾರಂಭ ಸಂರಂಭ          ೩೭

ಒಸಗೆ ಮಿಗಲಂತಾ ಮಹಾಮತಿ
ಶಶಿಮುಖಿಯ ಸಮ್ಮೇಳನದಲಿ ರಂ
ಜಿಸಿದಭಿಜನ[63]ಸಮ್ಮ[64]ತಾಮಳ ಪುಣ್ಯಕೃತ್ಯದಲಿ
ವಸುಧೆ ಪಾವನವಾಗಲಮರರ
ಬಸಿರು [65]ತುಂಬಿತು[66] ಹವ್ಯ ಕವ್ಯ
ಪ್ರಸರದಲಿ ಪಿತೃನಿಕರವಧಿಕಾನಂದದಲಿ ಮುಳುಗೆ      ೩೮

ಹೇಳಿದನು ಮುನಿನಾಥ ಪಾವಕ
ನೂಳಿಗವನುಪಶಮಿಸಿದಂದವ
ನಾ ಲತಾಂಗಿ ಪ್ರಮದ್ವರೆಯ ವೈವಾಹಸಂಗತಿಯ
ಹೇಳುವರಿಗಿಷ್ಟಾರ್ಥಸಿದ್ಧಿಯ
ಮೂಲವಿದು ಕೇಳುವ ಮಹಾತ್ಮರ
ಪಾಲಿಸುವ [67]ನನವರತವಾ[68] ನಿತ್ಯಾತ್ತ್ಮ ಮುರವೈರಿ   ೩೯

ದ್ವಿತೀಯ ಸಂಧಿ ಸಮಾಪ್ತ

[1] ಕರ್ಮವೆ (ಪ)

[2] ಕರ್ಮವೆ (ಪ)

[3] ಯದಲ್ಲ ಪಯ (ಭ)

[4] ಯದಲ್ಲ ಪಯ (ಭ)

[5] ನಾಕ (ಮು)

[6] ನಾಕ (ಮು)

[7] ಸಕಲ ಸಪ್ತಸು (ವಿ, ಪ, ಮು)

[8] ಸಕಲ ಸಪ್ತಸು (ವಿ, ಪ, ಮು)

[9] ಮೊದಲಾದ (ಭ)

[10] ಮೊದಲಾದ (ಭ)

[11] ನಾನೊರೆವೆನೈ (ಮು)

[12] ನಾನೊರೆವೆನೈ (ಮು)

[13] ವಿನುತ ಮಹಾತ್ಮ (ಪ, ಭ)

[14] ವಿನುತ ಮಹಾತ್ಮ (ಪ, ಭ)

[15] ಸುರಶ್ಮಿ (ವಿ,ಪ)

[16] ಸುರಶ್ಮಿ (ವಿ,ಪ)

[17] ಕನ್ಯೆ (ಭ)

[18] ಕನ್ಯೆ (ಭ)

[19] ಜನಿಸಿದ್ದ (ಭ)

[20] ಜನಿಸಿದ್ದ (ಭ)

[21] ವಿಶ್ವಾವಸು ಸಮಾಹ್ವಯನು ಕಡು ನೊಂದು (ವಿ, ಮು)

[22] ವಿಶ್ವಾವಸು ಸಮಾಹ್ವಯನು ಕಡು ನೊಂದು (ವಿ, ಮು)

[23] ಕಳೆದು (ಭ)

[24] ಕಳೆದು (ಭ)

[25] ರೆನಿಪ (ಭ)

[26] ರೆನಿಪ (ಭ)

[27] ಮಂಡಲದ ರತ್ನವನು ತನ್ನಾಶ್ರಮಕೆ ಕೊಂಡೊಯ್ದು (ಪ)

[28] ಮಂಡಲದ ರತ್ನವನು ತನ್ನಾಶ್ರಮಕೆ ಕೊಂಡೊಯ್ದು (ಪ)

[29] ಲಾವಣ್ಯದವೊಲೆಲ್ಲಾ (ವಿ, ಪ)

[30] ಲಾವಣ್ಯದವೊಲೆಲ್ಲಾ (ವಿ, ಪ)

[31] ನು ಹೋಲುವವರಿಲ್ಲ (ಭ)

[32] ನು ಹೋಲುವವರಿಲ್ಲ (ಭ)

[33] ಯಾ (ಭ)

[34] ಯಾ (ಭ)

[35] ಪ್ರಮದಾಖ್ಯೆಯನು ತಾ (ಪ)

[36] ಪ್ರಮದಾಖ್ಯೆಯನು ತಾ (ಪ)

[37] ಕರುಣ (ಭ)

[38] ಕರುಣ (ಭ)

[39] ಗನಾರುರು (ಭ), ಗನಾತನು (ವಿ)

[40] ಗನಾರುರು (ಭ), ಗನಾತನು (ವಿ)

[41] ತಿರಲಾ (ಪ, ಭ, ಮು)

[42] ತಿರಲಾ (ಪ, ಭ, ಮು)

[43] ಲೋಚನೆಯ (ಭ)

[44] ಲೋಚನೆಯ (ಭ)

[45] ಯೇನೆಲೆ (ಪ)

[46] ಯೇನೆಲೆ (ಪ)

[47] ನಿಳಿದ ಸಾಕ್ಷಾತ್ತು ಗಿರಿಜೆಯು (ಭ)

[48] ನಿಳಿದ ಸಾಕ್ಷಾತ್ತು ಗಿರಿಜೆಯು (ಭ)

[49] ಕಲು ಅಂ (ಪ)

[50] ಕಲು ಅಂ (ಪ)

[51] ಯನು (ಭ)

[52] ಯನು (ಭ)

[53] ನೆಂಟದ | ನ (ಭ)

[54] ನೆಂಟದ | ನ (ಭ)

[55] ಸಿದ (ಭ)

[56] ಸಿದ (ಭ)

[57] ದನೆ (ವಿ, ಮು)

[58] ದನೆ (ವಿ, ಮು)

[59] ಗುರೆ (ಪ)

[60] ಗುರೆ (ಪ)

[61] ಮೊನೆ (ಪ)

[62] ಮೊನೆ (ಪ)

[63] ಸನ್ನು (ಪ, ಭ)

[64] ಸನ್ನು (ಪ, ಭ)

[65] ತಣಿದುದು (ವಿ, ಪ, ಮು)

[66] ತಣಿದುದು (ವಿ, ಪ, ಮು)

[67] ನುರುಮಹಿಮನಾ (ಮು)

[68] ನುರುಮಹಿಮನಾ (ಮು)