ಸೂಚನೆ:
ಹೇಳಿದನು ಭಾರ್ಗವನೆನಿಪ ಸುವಿ
ಶಾಲವಹ ರುರು

[1]ವಿನ[2] ಚರಿತ್ರವ
ಶೀಲನಿಧಿ ಶೌನಕಗೆ ಸೂತನು ಸೌಮನಸ್ಯದಲಿ

ಪದನು:
ಸೂತ ಹೇಳೈ ಸಕಲಭುವನ
ಖ್ಯಾತನಹ ಪಾವಕಗೆ ಬಂದುದು
ಪಾತಕವಲಾ ಶಾಪವಾವಂಗದಲಿ ತತ್ಪಲವ
ಘಾತಿಸಿದನದನೊರೆವುದೆನಗಭಿ
ಜಾತ  ಭೃಗುಕುಲ ಮುಖ್ಯ ಚರಿತವ
ನೋತು ವಿವರಿಸಬೇಹುದೆನಲಿಂತೆಂದನಾ[3]ಸೂತ[4]     ೧

ಕೇಳು[5]ಶೌನಕ ವಿಪ್ರಶಾಪವ[6] ಮೌಳಿಯಲಿ ಧರಿಸುತ್ತ ಸಂಶಯ
ಲೋಲನಾದನು ದೇವಪಿತೃತುಷ್ಟಿಯ[7]ನು ತಾನಿನ್ನು[8] ಪಾಲಿಸುವ ಪರಿಯಂತು ಸುಡು ಸುಡು
ಹೇಳಲಾಗದು ಸತ್ಯವನು ತಾ
ಹೇಳಿ ಕೆಟ್ಟೆನಲಾಯೆನುತ [9]ಪಾವಕನು ಚಿಂತಿಸಿದ[10]     ೨

ತನ್ನ ಮುಖದಲಿ ಹವ್ಯಕವ್ಯವ
ರಾನ್ನವನು ಭೋಗಿಸುವರಲ್ಲೈ
ಮನ್ನಣೆಯ ಸುರವರರು ಪಿತೃಗಳು[11] ಸಹ ಮುಖಂ[12]ಗಳಲಿ
ಉನ್ನತಶ್ರಾದ್ಧಾದಿಕದಲಾ
ನಿನ್ನು ಸಲುವೆನೆ ಸರ್ವಭಕ್ಷಕ
ರೆನ್ನ ಹೋಲುವಘಾತ್ಮರಾರೆಂದಳಲಿ ಬಿಸುಸುಯ್ದು      ೩

ಏನಿದರೆ ಕರ್ತವ್ಯವೆಂಬುದ
ತಾನರಿಯೆನೆಂದೆನುತ ದೃಶ್ಯ
ಸ್ಥಾನವನು [13]ಗಮಿ[14] ಸಿದನು ಪಾವಕನುಡುಗಿ ನಿಜ ತನುವ
ಏನನೆಂಬೆನು ಜವವಿದಗ್ನಿವಿ
ಹೀನವಾದುದು ತೀದುವನುಳವಿ
ಧಾನ ಯಜ್ಞಕ್ರಿಯೆಗ[15]ಳಲ್ಲಿಯದಲ್ಲಿ ನಿಮಿಷದಲಿ[16]        ೪

ಊದಿ ನೋಡಿದಡೊಲೆಯೊಳಗೆ ಬರಿ
ಬೂದಿಯುಳಿದುದು ಯಜ್ಞವಾಟದ
ವೇದಿಗಳು ಬಿಸಿಯಾರಿದುವು ಬೀಸಿದರೆ ಕೆದರಿದರೆ
ಹೋದುದದರಕೃಶಾನು ಜೀರ್ಣೀಸ
ದಾದುದುಂಡುವ ಲೋಕ ಶೋಕವನು
ಹೋಧಧಿಯ ನಡುಗಡಲೊಳದ್ದುದು ನಿಮಿಷಮಾತ್ರದಲಿ          ೫

ಹಸಿಯ ಫಲವನು ಮೆದ್ದಡದು ಜೀ
ರ್ಣಿಸದೆ ಬಿದ್ದುದು ಹೊಟ್ಟೆಯನು ಹೊಸೆ
ಹೊಸೆದು ಕಾರಿದುದಖಿಳ ಜನ ಭೂಜನನಿವಾಸಿಗಳು[17]ಮಸೆದು[18] ಕಾಷ್ಠಂಗಳಲ್ಲಿ ಕಾಣರು
ಬಿಸಿಯಾನ್ತು ಚರಾಚರಕೆ ಬ
ಣ್ಣಿಸಲದೇಕವಸಾನವಾ ಪವಮಾನಸಖ[19]ನಡಗೆ[20]      ೬

ಸುಯ್ದು ಚಿಂತಿಸಿ [21]ಸುಕೃತಹೀನರು[22] ಬೆಯ್ದರಾ ಭೃಗುಮುನಿಯನೀತನೆ
ಕೊಯ್ದನೆಲ್ಲರ ಕೊರಳನಕಟಕಟಿತ್ತು ಶಾಪವನು
ಮೆಯ್ದೆಗೆದ[23]ನದರಿಂದ[24] ನಲನೆನು
ತಯ್ದೆ ನೆರೆದುದು ಋಷಿನಿವಹ ನಭ
ವೆಯ್ದದನೆ ನಡೆದಮರರಿಗೆ ಹೇಳಿದರು ಬೇಗಡೆಯ     ೭

ಅಮರರಮರಾಧಿಪ[25]ತಿ[26] ಸಹಿತ
ಕ್ರಮವಿದೇನೆಂದೆನುತ ಹೋದರು
ಕಮಲಸಂಭವನಲ್ಲಿಗಾ ಋಷಿನಿವಹ[27]ವೊಡ[28]ಗೂಡಿ
ನಮಿಸಲವರನು ನೋಡಿದನು ಸಂ
ಭ್ರಮಿಸುವಿರಿ ನೀವೇಕೆ ಶ್ರೀಘ್ರಾ
ಗಮನಕಾರಣವೇನೆನುತ ಬೆಸಗೊಂಡಬುಜಭವ        ೮

ಭೃಗು ಮುನಿದು ಶಾಪವನು ಕೊಟ್ಟಡೆ
ತೆಗೆದು [29]ನಿಂದುದು[30] ವಹ್ನಿ ಕೆಟ್ಟುದು
ಜಗದ ಜೀವವ್ರಾತವೆಂದೇ ಋಷಿಗಳೆಮ್ಮೊಡನೆ
ನಿಗಮಗರ್ಭಗೆ [31]ಹೇಳಲೆಮ್ಮಲಿ[32] ಮುಗಿವುದೆಲ್ಲೆಂದೆನುತ ಬಂದೆವು
ಬಗೆವುದೊಡೆಯರು ಮೇಲುಕಾರ್ಯವನೆಂದುದಮರಗಣ         ೯

ಧಾರಿಣಿಯ [33]ಮೇಲಿಲ್ಲ ಸ್ವಾಹಾ[34] ಕಾರವಬ್ರಹ್ಮಣ್ಯವಾದುದು
ಭೂರಿ ಜಗ[35]ವಿದು ಯಜ್ಞಭಾಗವಿಹೀನವೆಂದೆನಿಸಿ[36] ವಾರಿಜಾಸನ ಕೇಳು ಕೆಟ್ಟೆವು
ಬೇರೆ ಗತಿ ತಮಗಾವುದೆಂದಾ
ಕಾರವನು ತೋರುತ್ತ ಬಿನ್ನಹಮಾಡಿದರಂಸುರರು      ೧೦

ಅಂಜದಿರಿ ಸುರವರರರು ಮುನಿ[37]ಜನ
ವಂ[38]ಜದಿರಿ ಶಾಪಕ್ಕೆ ಸೆಡೆದು ಧ
ನಂಜಯನು ಜಾರಿದನೆ [39]ಕೈಮೀರಿದನೆ ಸುರವರರ[40] ಸಂಜನಿಸಿತೇ ಪ್ರಳಯ ಲೋಕಕೆ
ಕಂಜನಾಭನ ಪದವಲಾ ಪವಿ
ಪಂಜರವು ತಮಗೆನುತ ಕರೆದನು ಹವ್ಯವಾಹನನ      ೧೧

ಎಲೆ ಹುತಾಶನ ಭೂತಭಾವನ
ಎಲೆ ಸಮಸ್ತಪ್ರಾಣಿಜೀವನ
ಎಲೆ ಚರಾಚರ [41]ಜಠರವಾಸಿ[42] ಪವಿತ್ರ ಗುಣ[43]ರಾಶಿ[44] ಎಲೆ[45]ಯೊಲವಿನೆಲೆ[46] ಲೋಕಪಾ[47]ಲನೆ[48] ಹೊಳಹುದೋರು ಮಹಾತ್ಮಯೆನುತಾ
ನಳಿನಭವ[49]ನರ್ಥಿಸಲು ಮೈದೋರಿದನು ಪವನಸಖ[50] ೧೨

ಬಂದು ಚರಣದಲೆರಗಲಂಬುಜ
ನಂದನನು ಮೈದಡಹಿ ಕರುಣದ
ಲೆಂದ[51]ನೆಲೆಮಗನೇನ[52] ಮಾಡಿದೆ ಲೋಕ[53]ವಿಪ್ಲವವ[54] ಕಂದ ನೀನಿಲ್ಲದಡೆ ಜೀವಿಸು
ವಂದವೆಂತೈ[55]ತ್ರಿಜಗ[56]ದೈವಮು
ಕುಂದನಾಜ್ಞಾವರ್ತಿಗಳು ನಾವೆಂದನಬುಜಭವ         ೧೩

ದೇವಪಿತೃಮರ್ತ್ಯರಿಗೆ ನೀನೇ
ಜೀವನವಲಾ ಸಕಲ[57]ಜೀವರ[58] ಜೀವ[59]ಭೂತನು[60] ನೀನಲಾ ಜಠರಸ್ಥನೆಂದೆನಿಸಿ
ಕಾವೆ ಜಗವನು ಮಗುಳೆ ಕಡೆಯಲಿ
ಸೋವೆ ಸಂವರ್ತಾಗ್ನಿರೂಪದ
ಲಾವನೈ ನಿನ್ನುವನು ಪರಿಭವಿಸುವನು ಹೇಲೆಂದ       ೧೪

ಅಂಜಬೇಡೆಲೆ ಮಗನೆ ಪಾಪದ
ಪುಂಜ ನಿನ್ನನು ಹೊದ್ದಲರಿಯದು
ಮಂಜು ಮುಸುಕಲು ಬಲ್ಲುದೇ ಮಾರ್ತಾಂಡಮಂಡಲವ
ಕಂಜನಾಭವ ಕರುಣೆಯುಳ್ಳವ
ರಜುವರೆ ಬಂದುದಕೆ ಬೆದರದಿ
ರೆಂಜಲಿಸದಪಕೀರ್ತಿ ನಿನ್ನನು ಚಿಂತೆ ಬೇಡೆಂದ         ೧೫

ರವಿಕರಂ[61]ಗಳು[62]ಶುದ್ಧವಹ ವ
ಸ್ತುವನು [63]ಮೇಣ್[64] ಚಾಂಡಾಲಗೃಹವನು
ಕವಿದು ಬೆರ[65]ಸದೆ[66] ಬಂದ ಭಗಂವದೇನು ಭಾನಿವಿಗೆ
ಜವವಳಿಯದಿರು ಜರುಗದಿರು ಮಾ
ಧವನ ಮನದೊಲವಿನ ಕಟಾಕ್ಷದ
ಕವಚರಕ್ಷಿತರಾವು ನಮಗಿ[67]ನ್ನಾವ[68] ಭಯವೆಂದ       ೧೬

ವಾಯು ಬೆರಸನೆ ಜಗದ[69]ಜೀವ[70]ನಿ
ಕಾಯವನು ಚಾಂಡಾಲಗೃಹ[71]ವನು[72] ಬಾಯಬಿಟ್ಟನೆ ನಿನ್ನವೊಲು ದೈವದಲಿ ಬಂದುದಕೆ
ಆಯುವಂತನೆ ನಾವಲಾ ನಾ
ರಾಯಣಾಜ್ಜಾವರ್ತಿಗಳು ತ
ತ್ಕಾಯ[73]ದೊಳು[74] ತೋರುವ ಜಗತ್ರಯವೆಂದಬುಜಭವ        ೧೭

ಅಪ್ಪುಗಳು ಲೋಕದ ಸಮಸ್ತವ
ನೊಪ್ಪುಗೊಳ್ಳವೆ ನೆರೆ ಪವಿತ್ರತೆ[75]ತಪ್ಪಿಹೋಹುದೆ[76] ಮಿಂದು ಪಾವನವಾಗದೇ ಲೋಕ
ಸರ್ಪರಾಜ ಮಹಾಶಯನನೊಲಿ
ದೊಪ್ಪುಗೊಂಡ ಮಹಾತ್ಮರೊಲಿದಂ
ತಿಪ್ಪರೆಂದರಿ ತದ್ವಿ[77]ಮೋಹಿತ[78]ವೃತ್ತರಾಅವೆಂದ       ೧೮

ಹೇಸಿದಳೆ ಧರೆ ಸಲೆ ಶುಭಾಶುಭ
ವಾಸನೆಗಳಿಗೆ ನಿನ್ನವೋಲೆಲೆ
ಭಾಸುರಾಂಗನೆ [79]ಮೀರುವರೆ ಮೇಣ್ ನಿನ್ನತನ್ನಳವೆ[80] ವಾಸುದೇವನ ಸೂತ್ರ ನೀ ನಿ
ರ್ದೋಷಿ ನಿಜಮುಖದಿಂದ ಸುರರು ಹು
ತಾಶನವ ಕೈಕೊಳಲಿ ಪಿತೃಗಳು ಸಹಿತ ಕೇಳೆಂದ      ೧೯

ನಿನ್ನ ಮುಖವೇ [81]ಮುಖವೆಮಗೆ ನೆರೆ[82] ನಿನ್ನ ಮುಖವೇ ಮುಖವು [83]ಸುರರಿಗೆ[84] ನಿನ್ನ ಮುಖವೇ ಸಕಲ ಪಿತೃಮುಖ್ಯರಿಗೆ ಮುಖವೆನಲು
ನಿನ್ನ ಮುಖವೇ ಭಾವಿಸುವಡೆ ಜ
ಗನ್ನಿವಾಸ[85]ನ ಮುಖವು[86] ಹವಿಯನು
ಮುನ್ನ ನೀ [87]ಕೊಳ್ಳಧ್ವರಂಗಳಲೆಂ[88] ದನಬುಜಭವ     ೨೦

[1] ನಿಜ (ಪ,ಮು)

[2] ನಿಜ (ಪ,ಮು)

[3] ಮುನಿಪ (ವಿ)

[4] ಮುನಿಪ (ವಿ)

[5] ಶಾಪವನಿತ್ತ ಮುನಿಯದ (ಮು)

[6] ಶಾಪವನಿತ್ತ ಮುನಿಯದ (ಮು)

[7] ಲಿ ತನಗಿನ್ನು (ಮು)

[8] ಲಿ ತನಗಿನ್ನು (ಮು)

[9] ಚಿಂತಿಸಿದನಳವಳಿದು (ವಿ,ಪ)

[10] ಚಿಂತಿಸಿದನಳವಳಿದು (ವಿ,ಪ)

[11] ಸಹಿತ ಮಖ (ವಿ,ಪ

[12] ಸಹಿತ ಮಖ (ವಿ,ಪ

[13] ರಚಿ (ಪ್ರ)

[14] ರಚಿ (ಪ್ರ)

[15] ಳಿದ್ದಲಿಯಾಯ್ತು ಕೆಂಡಗಳು (ಮು)

[16] ಳಿದ್ದಲಿಯಾಯ್ತು ಕೆಂಡಗಳು (ಮು)

[17] ಮಸಗಿ (ವಿ, ಪ, ಮು)

[18] ಮಸಗಿ (ವಿ, ಪ, ಮು)

[19] ನೆಡೆಗೆ (ಪ)

[20] ನೆಡೆಗೆ (ಪ)

[21] ಕ್ರತುವಿಹೀನರು (ಪ, ಮು)

[22] ಕ್ರತುವಿಹೀನರು (ಪ, ಮು)

[23] ನಲ್ಲಿಂದ (ಪ)

[24] ನಲ್ಲಿಂದ (ಪ).

[25] ರು (ವಿ, ಭ)

[26] ರು (ವಿ, ಭ)

[27] ದೊಡ (ವಿ, ಪ)

[28] ದೊಡ (ವಿ, ಪ)

[29] ನಿಂದನು (ಭ)

[30] ನಿಂದನು (ಭ)

[31] ವೇಳ್ವೆವೆಮ್ಮಲಿ (ವಿ)

[32] ವೇಳ್ವೆವೆಮ್ಮಲಿ (ವಿ)

[33] ಮೇಲೆಲ್ಲ ಹಾಹಾ (ಮು)

[34] ಮೇಲೆಲ್ಲ ಹಾಹಾ (ಮು)

[35] ದಲಿ ಯಜ್ಞಹೀನವಿಭಾಗರೆಂದೆನಿಸಿ (ಪ)

[36] ದಲಿ ಯಜ್ಞಹೀನವಿಭಾಗರೆಂದೆನಿಸಿ (ಪ)

[37] ವರ| ರಂ (ವಿ, ಮು)

[38] ವರ| ರಂ (ವಿ, ಮು)

[39] ಸುರವರ ಮರ್ತ್ಯಲೋಕವನು (ಪ)

[40] ಸುರವರ ಮರ್ತ್ಯಲೋಕವನು (ಪ)

[41] ಜೀವರಾಶಿ (ಭ)

[42] ಜೀವರಾಶಿ (ಭ)

[43] ಹಸ್ತಿ (ಪ)

[44] ಹಸ್ತಿ (ಪ)

[45] ನವೀನನ್ತೆ (ವಿ, ನಿಲೀನನೆ (ಭ)

[46] ನವೀನನ್ತೆ (ವಿ, ನಿಲೀನನೆ (ಭ)

[47] ವನ (ಭ)

[48] ವನ (ಭ)

[49] ನಭ್ಯರ್ಥಿಸಲು ಮೈದೋರಿದನು ವಹ್ನಿ (ಮು)

[50] ನಭ್ಯರ್ಥಿಸಲು ಮೈದೋರಿದನು ವಹ್ನಿ (ಮು)

[51] ನೀನೆಲೆ ಮಗನೆ (ವಿ), ಕೇಳೆಲೆ ಮಗನೆ (ಪ)

[52] ನೀನೆಲೆ ಮಗನೆ (ವಿ), ಕೇಳೆಲೆ ಮಗನೆ (ಪ)

[53] ನಿಷ್ಪಲವ (ವಿ), ನಿಷ್ಕಲವ (ಮು)

[54] ನಿಷ್ಪಲವ (ವಿ), ನಿಷ್ಕಲವ (ಮು)

[55] ಜಗಕೆ (ವಿ, ಭ)

[56] ಜಗಕೆ (ವಿ, ಭ)

[57] ದೇವರ (ಭ)

[58] ದೇವರ (ಭ)

[59] ಭಜಿತನು (ಪ)

[60] ಭಜಿತನು (ಪ)

[61] ಗಳ (ಭ)

[62] ಗಳ (ಭ)

[63] ಮಿಗೆ (ಭ)

[64] ಮಿಗೆ (ಭ)

[65] ಸನೆ (ಭ)

[66] ಸನೆ (ಭ)

[67] ನ್ನಾರ (ಪ)

[68] ನ್ನಾರ (ಪ)

[69] ಮೇಧ್ಯ (ಭ, ಪ)

[70] ಮೇಧ್ಯ (ಭ, ಪ)

[71] ದಲಿ (ಭ)

[72] ದಲಿ (ಭ)

[73] ವೀ (ವಿ, ಮು) ದಲಿ (ಪ)

[74] ವೀ (ವಿ, ಮು) ದಲಿ (ಪ)

[75] ಯೊಪ್ಪಿ ಹೊದ್ದದೆ (ಪ)

[76] ಯೊಪ್ಪಿ ಹೊದ್ದದೆ (ಪ)

[77] ಹಾರಿತ (ಪ)

[78] ಹಾರಿತ (ಪ)

[79] ಕೇಳು ಮೇಣ್ ನಿನ್ನಳವೆ ತನ್ನಳವೆ (ಪ)

[80] ಕೇಳು ಮೇಣ್ ನಿನ್ನಳವೆ ತನ್ನಳವೆ (ಪ)

[81] ಮುಖವು ಸುರರಿಗೆ (ಭ)

[82] ಮುಖವು ಸುರರಿಗೆ (ಭ)

[83] ಜನರಿಗೆ (ಭ)

[84] ಜನರಿಗೆ (ಭ)

[85] ವು ಮುಖ್ಯ (ಭ)

[86] ವು ಮುಖ್ಯ (ಭ)

[87] ಕೊಳಲಧ್ವರಂಗಳವೆಂ (ಮು)

[88] ಕೊಳಲಧ್ವರಂಗಳವೆಂ (ಮು)