ಹೋಹೊ ಬದುಕಿದೆ ಕಾಂತೆ ಕಂಗಳ
ಕಾಹಿ ಕಾಸಿದುದಂಗವಟ್ಟವ
ಮೇಹುಗೊಂಡುದು ಮಾಣುಮಾಣಿನ್ನಂಜಬೇಡೆನುತ
ಗೇಹದೊಳಗಿದ್ದೆಲವೊ ಹವಿಗಳ
ವಾಹನನೆ ವಿಪರಿತ ಕರ್ಮವ
ನೂಹಿಸಿದೆ ದುಷ್ಟಾತ್ಮ ಎಂದನು ಭೃಗು ಹುತಾಶನಿಗೆ    ೪೧

ಕನಲುತಿತ್ತನು ಸರ್ವಭಕ್ಷಕ
ನೆನಿಸು ಹೋಗೆಂದೆನುತ ಶಾಪವ
ನನಲನದನಲಿಸುತ ಹೋ ಹೋ ನಿರಪರಾಧಿಯನು
ಮುನಿಪತಿಯೆ

[1]ಶಪಿಸಿದೆಯಲಾ[2] ನಾ
ನನೃತಭಾಷಿತನಲ್ಲ ನಿನ್ನನು
ಮುನಿದು[3] ಶಪಿಸಲು[4]ಬಲ್ಲೆನೊಮ್ಮೆಗೆ ಸೈರಿಸಿದೆನೆಂದ   ೪೨

ಮಾನ್ಯರಲ್ಲಾ ವಿಪ್ರರದರಿಂ
ಮನ್ನಿಸಿದೆನೆಂದುದನು ಸಾಕ್ಷಿಗೆ[5]ವಹ್ನಿ[6]ಯನು ಹೇಳು[7]ವರು[8] ಧರ್ಮವಲಾ ವಿಚಾರಿಸಲು
ನನ್ನಿಯನು ಹೇಳಿದರೆ ನರಕಮ
ಹಾರ್ಣವದಲಾಳುವರೆ ನಿನಗಾ
ನೆನ್ನೆ ನೀ ಸರ್ವಜ್ಞನೆಂದನು ಪಾವಕನು ಮುನಿಗೆ          ೪೩

ಕಂಡುದನು ಕೇಳ್ದುದನು [9]ಮೇಣ್ ಬೆಸ[10] ಗೊಂ[11]ಡುದನು[12]ವುಸುರದ ದುರಾತ್ಮರು
ದಿಂಡುಗೆಡೆವರು ನರಕದಲಿ [13]ಕಂಡು[14]ದನು ವಂಚಿಸಲು
ಪಂಡಿತ[15]ನೆ ನೀನೆಂಧುದನು ಕಿಐ
ಕೊಂಡೆ[16] ನಾನಾ ನಾಮರೂಪ[17] ದ
ಲುಂಡಪೆನು ಸರ್ವವನು[18] ಪಾತಕವಿಲ್ಲ ತನಗೆಂದ       ೪೪

ಎನಲು ಲೇಸಘವಿಲ್ಲ ಕೇಳಿಂ
ದನುಪಮನು ಮನ್ನಿಸಿದನಗ್ನಿಯ[19]ನನಿಲಮಿತ್ರನೆ ಮನ್ನಿಸಿದೆಯಲೆ ತನ್ನನೆಂದೆನುತ[20] ವನಿತೆಯನು ತನಯನನು ಕರುಣಾ
ವನಧಿ ತೆಗೆದಪ್ಪಿದನು ನಿಂದನು
ಮನದೊಳಗೆ ನಿತ್ಯಾತ್ಮನಾರಾಯಣನ [21]ಧ್ಯಾನಿಸುತ[22] ೪೫

ಪ್ರಥಮ ಸಂಧಿ ಸಮಾಪ್ತ

[1] ಶಾಪಿಸಿದೆಲಾ (ಪ)

[2] ಶಾಪಿಸಿದೆಲಾ (ಪ)

[3] ಶಾಪಿಸ (ಪ)

[4] ಶಾಪಿಸ (ಪ)

[5] ನನ್ನಿ (ಭ)

[6] ನನ್ನಿ (ಭ)

[7] ವುದು (ಭ, ಪ)

[8] ವುದು (ಭ, ಪ)

[9] ಮುನಿಬೆಸ (ವಿ), ಮುಚ್ಚಿಸಿ (ಪ)

[10] ಮುನಿಬೆಸ (ವಿ), ಮುಚ್ಚಿಸಿ (ಪ)

[11] ಡದನು (ಪ)

[12] ಡದನು (ಪ)

[13] ಬಲ್ಲು (ಪ, ಭ)

[14] ಬಲ್ಲು (ಪ, ಭ)

[15] ನು ನೀನೆಂದು ಶಾಪವ | ಕೊಂಡು (ಪ)

[16] ನು ನೀನೆಂದು ಶಾಪವ | ಕೊಂಡು (ಪ)

[17] ವ| ನುಂಡಡೆಯುತಾ ಸರ್ವ (ಪ)

[18] ವ| ನುಂಡಡೆಯುತಾ ಸರ್ವ (ಪ)

[19] ನನುಪಮಾಮಲ ಮಿತ್ರನೇ ಮನ್ನಿಸಿದೆನೆಂದೆನುತ (ವಿ), ನನುಪಮಾನಿಲ ಮಿತ್ರನೇ ಮನ್ನಿಸಿದೆಯಲೆ ತನ್ನ (ಭ)

[20] ನನುಪಮಾಮಲ ಮಿತ್ರನೇ ಮನ್ನಿಸಿದೆನೆಂದೆನುತ (ವಿ), ನನುಪಮಾನಿಲ ಮಿತ್ರನೇ ಮನ್ನಿಸಿದೆಯಲೆ ತನ್ನ (ಭ)

[21] ಭಾವಿಸುತ (ವಿ, ಪ)

[22] ಭಾವಿಸುತ (ವಿ, ಪ)