ಎನುತ ಕಂಡನು ತಿರುಗಿ ಭೃಗುವಿನ
ಮನೆಯ ಯಜಮಾನನವೊಲುಜ್ವಲ
ನೆನಿಪ ಪಾವಕ
ವನಿತೆಯಹಳೇ ಈ ಮಹಿಳೆಯಿವ[3]ಳನುವರಿಯಲುಳ್ಳುದನೆ ಹೇಳು ಮಹಾತ್ಮ[4] ನೀನೆಂದ ೨೧
ನೀನಲಾ ಸಕಲಾತ್ಮಕನು ಪವ
ಮಾನಸಖನೆಂದೆನಿಸ್ ಸಲೆ ವೈ
ಶ್ವಾನರಾಖ್ಯೆಯಲಖಿಳದಲಿ ಜಠರಸ್ಥನೆಂದೆನಿಸಿ
ನೀನು ಜೀವಾಧಾರನಲ್ಲೈ
ನೀ[5]ನುಳಿಯಲುಳಿವುದು[6] ಜಗತ್ರಯ
ಭಾನುವಂತನೆ ಹೇಳು ಸತ್ಯವನೆಂದನಾ ದನುಜ ೨೨
ತನ್ನ ಸತಿ ಪೂರ್ವದಲಿ ನಿನಗದ
ನಿನ್ನು ವರ್ಣಿಸಲೇಕೆ ಕೊಟ್ಟನು
ತನ್ನ [7]ನಂಬಿಸಿ[8]ಬಾಲಿಕೆಯ[9]ನೀ ಬಾಲಿಕೆಯ ಪಿತನು[10]
ಬನ್ನವನು ಹೇಳುವಡೆ ನಾಚಿಕೆ
ತನ್ನ ಮನದೊಳಗಾಗುತಿದೆ ನೀ
ನನ್ನಿಯುಳ್ಳವ[11]ನುಳ್ಳು[12]ದನು ಹೇಳಾರ ವಧುವೆಂದ ೨೩
ಸತ್ಯಸಂಧನೆ ಹೇಳು ಭೃಗುವಿನ[13]ಮತ್ತಕಾಶಿನಿ[14]ಯಾದಡೀಕೆಯ
ಹೊತ್ತುಕೊಂಡೊಯ್ವೆನು ನಿಜಾಲಯ[15]ಕೆಂಬ ಮನವೆನಗೆ[16]
[17]ಹತ್ತಿರಕೆ ಮುನಿವರನಿಹನೆ ಹೇ
ಳು[18]ತ್ತಮನೆ ಹೇಳೆನುತ ಪಾವಕ
ನತ್ತಲಭಿಮುಖವಾಗಿ ನಿಂದನು ಕರಗಳನು ಮುಗಿದು ೨೪
ಇರಲು ಖಳನುಕ್ತಿಯನು ವೈಶ್ವಾ
ನರನು ಕೇಳುತ ಭೀತಿವಿಹ್ವಲ
ಕರುಣನಾಗುತ ಧರ್ಮ[19]ಸಂಕಟ[20]ವಾಯ್ತಳಾ ಎನುತ
ನಿರುತವನು ಹೇಳಿದರೆ ಮುನಿಪತಿ
ಕೆರಳಿ ಶಾಪವ[21]ನೀವ[22]ನನೃತವ
ನೊರೆವೆ [23]ನಾನಿದನೆಂತೆನುತ[24] ಚಿಂತಿಸಿದನಳವಳಿದು ೨೫
ಶಾಪವಾಗಲಿ ವರವೆಯಾಗಲಿ
ಕೋಪಿಸಲಿ ಮುನಿ [25]ಮೇಣಸತ್ಯಾ
ಳಾಪ[26]ವನು ತಾ ಮಾಡ[27]ಲಂಜುವೆನೆಂದು[28] ಭೃಗುಮುನಿಗೆ
ಓಪಳಹುದೆಂದರೆಉಹಿದನು ಬಳಿ
ಕಾ ಪುಲೋಮೆಯ ಹಿಡಿದನಾ ಖಳ
ದೀಪಶಿಕೆಯನು ಶಲಭನುಫಭೋಗಿಸಲು ಹಿಡಿವಂತೆ ೨೬
ಸಿಕ್ಕಿದೆಯಲಾ ಎನುತ ಹಿಡಿದನು
ರಕ್ಕಸನು ಮುಂದಲೆಯನಂಗನೆ
ಬಿಕ್ಕಿಬಿರಿದಳುತಿರಲು ಮಿಗೆ ಕರೆಕರೆದು [29]ಕಾದಲನ[30]
ಅಕ್ಕಟಾ [31]ಗತಿಯೇನು ಸತಿತಾ[32]
ಸೊಕ್ಕಿದಸುರನ ಕಂಕುಳೊಳಗೊಡ
ಳಿಕ್ಕುಳಿಸಿ [33]ಕುವರಿ[34]ಯವೊಲತ್ತಳು ಬೆದರಿ ಮೃಗನಯನೆ ೨೭
ಹಾ ಪತಿಯೆ ಹಾ ಗತಿಯೆ ಹಾ ಹಾ
ರೂಪ್ದೋರೆಯದೇಕೆ [35]ತನ್ನನು[36]
ಕಾಪಟಿಗನೆಳೆದೊಯ್ವನಿರದಬಲೆಯನನಾಥೆಯನು
ಗೋಪರಿಲ್ಲದ ಪಶುವ ಹೆಬ್ಬುಲಿ
ತೋಪಿನಲಿ ಹಿಡಿದಂದವಾಯ್ತೆ
ನ್ನಾ [37]ಪಥವ[38] ನಾರರಿವರೆಂದೊರಲಿದಳು ಲಲಿತಾಂಗಿ ೨೮
ಒಡೆಯರಿಲ್ಲದ ಮನೆಯೊಳಗೆ ನಾಯ್
ತುಡುಕಿ ಹವಿಯನು ತಿಂದ ತೆರನಾ
ಯ್ತಡವಿಯಲಿ ಪತಿಯಿಲ್ಲದೆಡೆ [39]ಹೊಕ್ಕೆನ್ನ[40] ನೀ ಕುನ್ನಿ
ಹಿಡಿದನಿದೆಯಿದೆ ಹಂದೆಯಾದೆನು
ಕೊಡಹಿ ವಿಪ್ರಾಕೃತಿಯನಿವನನು
ತಡೆಯ[41]ಲಾರಿರೆ[42] ತರುಗಳಿರ ನೀವೆಂದಬುಜಾಕ್ಷಿ ೨೯
ಕೊಡಹಿ ಕೈಕಾಲ್ಗಳನು ತನುಬಲ
ವುಡುಗಿ ಬಸವಳಿದಬಲೆ ಕಂಬನಿ
ಗಡಲ ತೆಪ್ಪದವೋಲು ತನಿಗೆಡದಸುರನಂಗದಲಿ
ಮಿಡುಕುತಿರಾ ಕ್ಷಣ[43]ಕವಳ[44]ಬಸು
ರೊಡೆದು ಬಿದ್ದುದು ಗರ್ಭವವನಿಗೆ
ಮೃಡನಪರ ರೂಪೆನಲು ದುರ್ಧರ ತೀವ್ರ ತೇಜದಲಿ ೩೦
ಬಿದ್ದ ಗರ್ಭದ ತೇಜದಲಿ ಖಳ
ನದ್ದು ಭಸ್ಮೀಭೂತನಾದರುನು
ಬಿದ್ದನಾ ಕ್ಷಣದೊಳಗೆ ಬಿಟ್ಟು ಮಹಾ ಪತಿವ್ರತೆಯ
ಬಿದ್ಧು ಹೋ[45]ಹರು[46]ಬಲ್ಲಿರೇ ನಿರ
ವದ್ಯರನು ಬಾಧಿಸುವ ಖಳರೆನು
ತಿರ್ದುದಂಬರದೊಳಗೆ ಸುರಮುನಿಕರ ಹರುಷದಲಿ ೩೧
ಮಲ್ಲಿಗೆಯ ಮಳೆಗರೆದರೆಂದು
ತ್ಫುಲ್ಲಮುಖಿಯಂಗದಲಿ ಕಮಲಜ
ನಲ್ಲಿ[47]ಗಂದಿಳಿತಂದು ನಿ[48]ಖಿಳಾಮರಮುನೀಶ್ವರ[49]ರ
ಸಲ್ಲಲಿತ ಸಂಸ್ತುತ್ಗಳೆಸೆಯಲು
ಸೊಲ್ಲ ಸೂಸಿದನಂಗನೆಗೆ ಬಲು
ಹುಳ್ಳವನು ಪತಿಭಕ್ತಿಯಲಿ ನೀನೆಂದನಬುಜಭವ[50] ೩೨
ಎತ್ತಿಕೊಳ್ಳೌ ಶಿಶುವನಂಗ[51]ನೆ[52]
ಮುತ್ತನೆಮ್ಮನ್ವಯದ[53]ತೇಜದ[54]
[55]ಬಿತ್ತನೇತಕ್ಕಳಿಸಲಿಸುವೆ ಹಾ ವನಿತೆ ಶುಭಚರಿತೆ[56]
ಮೃತ್ಯು ಮೃತ್ಯುವಕಂಡನಂಜದಿ
ರುತ್ತಮಾಂಗನೆ ಭೀತಿ ಬೇಡೆನು
ತೆತ್ತಿದನು ಪದಕಮಲಸನ್ನತೆಯನು ಸರಾಗದಲಿ ೩೩
ತೊಡೆದನಬಲೆಯ ಕಂಬನಿಯನೆ[57]ಲೆ
ಯೊ[58]ಡತಿ ತಾಯೆ ಮಹಾಸತಿಯೆ ಸಾ
ಕೊಡಲ ಕಂಪವ ಬಿಡು ನಿರಾಮಯವಿನ್ನು ನಿನಗೆನುತ
ನುಡಿದನೀ ಕಂಬನಿಯ ಹೆಗ್ಗಡ
ಲಡವಿಯಲಿ ನದಿಯಾಗಿ ಹರಿಯಲಿ
ಪೊಡವಿಪಾವನವಾಗಲಿದು[59]ವೇ[60] ತೀರ್ಥವಹುದೆಂದ ೩೪
ಕಂಬನಿಯ ಕಡ[61]ಲೊಳು[62] ವಧೂಸರ
ವೆಂಬ ಹೆಸರಲಿ ಸಕಲ ಭುವನಕ
ದಂಬ[63]ಪಾವನ[64]ವಾಗಿ ಹರಿಯಲಿ ಸಾಗರಾಂತ[65]ವೆನೆ[66]
ಕೊಂಬುದಿದನಿದರೊಳಗೆ ಮೀವುದು
ನಂಬಿ ಬಹು ಪುಣ್ಯಪ್ರದವಿದೆಂ
ದಂಬುಜಾಸನ ದೇವನಾ[67]ಜ್ಞಾಪಿ[68]ಸಿದನಭಿಜನಕೆ ೩೫
ತಾಯೆ ನಡೆ ಸುಖಿಯಾಗೆನು[69]ತಲಾ[70]
ಮಾಯೆಯನು ಕೈಕೊಂಡನತ್ತಲು
ಜೀಯ ಭಾಪು ಕೃಪಾಂಬು[71]ಧಿಯೆ[72]ಯೆಂ[73]ದೆನುತ[74]ಜನ ಹೊಗಳೆ
ಆಯೆನುತ ಹರುಷದಲಿ ಕಮಲದ
ಳಾಯತಾಕ್ಷಿ ನಿಜಾತ್ಮಭವನನು
ಬಾಯಬಿಡುತಿರಲೆತ್ತಿಕೊಂಡಳು ಬಂದಳಾಶ್ರಮಕೆ ೩೬
ಚ್ಯವನನೆಂಬಭಿಧಾನವಾಯ್ತುದು
ಭವಿಸಿದಾ ಶಿಶುವಿಂಗೆ ಗರ್ಭ
ಚ್ಯವನ[75]ವೆಂದೆಲೆ ವನಿತೆ[76] ಬಳಿಕಾ ಶಿಶುವನೊಡಗೊಂಡು
ಭುವನಪೂಜಿಗೆ ಬಂದಳಾ ನಿಜ
ಭವನದಲ್ಲಿಗೆ ಕೋಪಮೂರ್ಛಿತ
ಭವನಪರಮೂರ್ತಿಯವೊಲಿರ್ಧಾ ತನ್ನ ಪತಿಯೊಡೆಗೆ ೩೭
ಹೋದೆಯೆಲ್ಲಿಗೆ ಕಾಂತೆ ಮಸಣಕೆ
ಹೋದೆಯೆನ್ನಯ ಮಾತನೇತಕೆ
ಬೂದಿಯನು ಬೆಸಗೊಂಬುದಾರೇನಾದರೆಂಬುದನು
ಆದರಿಸುವುದನಾಥೆಯಾದೆನು
ಆದರಿಸುವುದನಾಥೆಯಾದೆನು
ಪಾದಸೇವಿಕೆಯಾದಕಾರಣ
ಕಾದುದಿದೆ ನಿಮ್ಮೊಲವೆನು[77]ತ ಸೂಸಿದಳು ಕಂಬನಿಯ[78] ೩೮
ಹೆತ್ತ ಹದನನು ಹೇಳಲೆಲ್ಲವ
ಚಿತ್ತವಿಸುತಿಂತೆಂದನೆನ್ನಯ
ಮತ್ತಕಾಶಿನಿಯೆಂದು ನಿನ್ನನದಾರು ಹೇಳಿದರು
ವೃತ್ತವಿರಹಿತೆ ಹೇಳೆನಲು ದುರ್
ವೃತ್ತೆಯಾ [79]ನಲ್ಲರಿಯಿರೆ[80]ನ್ನಯ
ವೃತ್ತವನು ನೀವೆನುತ ಕಂಬನಿದುಂಬಿದಳು ತರಳೆ ೩೯
ಅರಿ[81]ದನೆಂತೆ[82]ನ್ನ ಬಲೆಯೆಂಬುದ
ನೊರಲದಿರು [83]ಹೇಳೆನ್ನ[84] ಕೋಪದ
ಹೋರೆಯನಿಳುಹುವೆನಾತನಲಿ ಹೇಳುವರೆ ಮನೆಯೊಳಗೆ
ಹೊರಗಣವರಾರೊಬ್ಬ[85]ಳ[86]ಲ್ಲದೆ
ಬರಿದೆ ಬಳಲಿಸಬೇಡೆನಲು ಮುನಿ
ಗುರುವ ಮಾನಿನಿ ತೋರಿದಳು ಕೈನೀಡಿ ಪಾವಕನ ೪೦
Leave A Comment