ಸೂಚನೆ :

ಸೂತನಭಿವರ್ಣಿಸಿದನಮಳ
ಖ್ಯಾತ ಪೌಲೋಮವನು ತತ್ಕುಲ
ಜಾತ ಶೌನಕಮುಖ್ಯಮುನಿಸಭೆ

[1]ನೆಚ್ಚನೊಲವಿನಲಿ[2]

ಪದನು :
ಶ್ರೀಮದಮ[3]ರಪ್ರ[4]ವರಮಕುಟ
ಸ್ತೋಮಮಣಿಗಣಕಿರಣಕೀರ್ಣೋ
ದ್ದಾಮ [5]ದಿವ್ಯ[6] ಪದಾಬ್ಜಪೀಠನನಂತಗುಣನಿಳಯ
ಭೂಮಿ[7]ಸುರಗೋದ್ವಿಜ[8]ಸುಧರ್ಮ[9]ಕ್ಷೇಮ[10] ಕಾರಣಮೂರ್ತಿಯಹ ಲ
ಕ್ಷ್ಮೀ ಮನೋರಮನೀಗೆ ನಮಗಿಷ್ಟಾರ್ಥ ಸಂಪದವ      ೧

ನೈಮಿಷದೊಲ್ಲಂದಾಯ್ತು ಸುಜನ
ಸ್ತೋಮ ಶೌನಕಮುಖ್ಯ[11]ರೆನೆ[12] ಸು
ತ್ರಾಮಲೋಕಹಿತಾರ್ಥ[13]ದಲಿ ಸತ್ರವನು[14] ವಿರಚಿಸಲು
ಆ ಮಹಾಜನದುತ್ಸವಕೆ [15]ವಿ
ಶ್ರಾಮ[16] [17]ಯಾಮಿಯವೋಲು ಬಂದನು[18] ರೋಮಹರ್ಷಣನಂದನನು ಸೂತನು ತದಾಶ್ರಮಕೆ    ೨

ಸತುಕರಿಸಿ ಸೂತನನು ಬರಲ
ಪ್ರತಿಮನನು ಕುಶಲೋಕ್ತಿಯಲಿ ಸು
ವ್ರತಗಳಿಷ್ಟಫಲಾಪ್ತಿ[19]ಯಾಯ್ತೆವಗೆ[20]ನುತ ಹರುಷದಲಿ
ವಿತತ [21]ವಿದ್ಯಾ[22]ರೂಢನನು ಪುಳ
ಕಿತಶರೀರರು ಕೇಳಿದರು ವಿ[23]ಶ್ರುತ[24] ಮಹಾಖ್ಯಾನಂಗಳನು ಪುಣ್ಯಾವಹಂಗಳನು   ೩

ಬಲ್ಲೆಯ[25]ಲ್ಲವ[26] ಸೂತ ಸಜ್ಜನ
ವಲ್ಲಭನೆ [27]ಪಾರಾಶರವ್ರತಿ[28] [29]ಬಲ್ಲ[30] ನಾನಾಖ್ಯಾನಯುತ ಪೌರಾಣ[31]ಸಂಹಿತೆಯ[32] ಎಲ್ಲವನು ಕೇಳಿದೆವು ಪಿತೃಮುಖ
ದಲ್ಲಿ ಭಾರತ ಪುಣ್ಯ [33]ಕಥನವ
ನಿಲ್ಲಿ[34] ವಿಸ್ತರವಾಗಿ [35]ವಿವರಿಸಬೇಹುದೆವಗೊಲಿದು[36]    ೪

ಮೊದಲ [37]ಕಥೆ[38] ಪೌಲೋಮವೆಂಬರು
ಸದಮಳನೆ ಹೇಳೆಮಗೆ [39]ಭೃಗುಕುಲ
ವದರೊಳತಿ[40]ವಿಖ್ಯಾತ ಗಡ ತತ್ಸಂಗತಿಭುನೊಲಿದು
ವಿದಿತ[41]ವೆನಲ[42]ಭಿವರ್ಣಿಸುವುದೆ
ಮ್ಮೆದ್ಯ ಸಂಶಯ[43]ಶಲ್ಯ[44]ವನು ಕಳೆ
ವುದು ಮಹಾತ್ಮಯೆನುತ ಸಭೆಯಲಿ ಶೌಕನನು ನುಡಿದ           ೫

ಪುಣ್ಯ [45]ವಿಷ[46]ಯಾಶ್ರಮವು ಮುಖವಿದಂ
ಪುಣ್ಯವಲ್ಲಿಂ ಮೇಲೆ ಪುಣ್ಯಕೆ
ಪುಣ್ಯದಂತಿರೆ ಬಂದೆ ಭಾಗ್ಯಾಧಿಕನೆ ಮನವೊಲಿದು
ಪುಣ್ಯಕಥೆಯನು [47]ವಿಸ್ತರಿಸಿ[48] ಬಹಂ
ಪುಣ್ಯವೊಡಗೂಡೀದರೆ ಜಗದಲಿ
ಪುಣ್ಯವಂತರದಾರು ತಮ್ಮಂತೆಂದನಾ ಮುನಿಪ          ೬

ಎನಲು ಉಡಿದನು ಸೂತನಾ ಮುನಿ
ಜನಕೆ [49]ಕೈ ಮುಗಿಯುತ್ತ ಮನದಲಿ
ಮುನಿಪರಾಶರಸೂನುವನು ವಂದಿಸುತ ಭಕ್ತಿಯಲಿ
ತನುಪುಳಕ ಪಸರಿಸಲು ಕಂದ್ರೆ
ದನುಪಮಾಚ್ಯುತನಂಘ್ರಿಕಮಲವ
ನೆನೆಯುತಂದಿದನೆಂದನಾ ಮುನಿ[50] ಶೌನಕಾದ್ಯರಿಗೆ    ೭

ಮುನ್ನ ವೇದವ್ಯಾಸಮುನಿ ಕರು
ಣಾರ್ಣವನು ಕೃಪೆ ಮಾಡಿದನಲೈ
ತನ್ನ [51]ಪಿತಗಾ ಪಿತೃಮುಖದಲಧ್ಯಯನ ತನಗಾಯ್ತು[52] ಮಾನ್ಯ[53]ರಿರ[54] ನಿಮಗದನು ತಾನಭಿ
ವರ್ಣೀಸುವೆ[55]ನುತ್ತಮಭೃಗೂದ್ವಹ[56] ರನ್ವಯವ ಚಿತ್ತಾ[57]ವಧಾನದೊಳೆಂ[58]ದನಾ ಮುನಿಪ    ೮

ನಿಗಮನಷ್ಠನೆ ಕೇಳು [59]ಸುರಮುನಿ[60] ಜಗದಧೀಶ್ವರನಿಕರಪೂಜಿತ
ಭೃಗು[61]ಕುಲಾಮಳ ಚರಿತವನು ಬಹುಪುಣ್ಯಭರಿತವನು[62] ಜಗದುದರನುದರೋದ್ಭವ[63]ನಲಾ[64] [65]ನಿಗಮಗರ್ಭನು ತತ್ತನೂಜನು[66] ಭೃಗುತದಾತ್ಮಜನಾ ಚ್ಯವನಸಂಜ್ಞಿತನು ಕೇಳೆಂದ      ೯

ಚ್ಯವನನಿಂದಾ ಪ್ರಮತಿ ಕೇಳೆಂದು
ಭವಿಸಿದನು ಬಳಿಕಾ ಪ್ರಮತಿಸಂ
ಭವನು ರುರು ಗುರುವಿಂಗೆ ಶುನಕೌ ಶುನಕನೆಂಬವಗೆ
ಭೌವನನ್ತ ಶೌನಕನು ನೀನುದು
ಭವಿಸಿದೆಯಲ್ಲಾತಂದೆ ಭೃಗುವಂ
ಶ[67]ವನು[68] ಸಂಕ್ಷೇಪದಲಿ ನಿನಗಿಂದೊರೆದೆ ನಾನೆಂದ   ೧೦

ಹವಣಿ[69]ಸದಿ[70]ರೆಲೆ ಸೂತ ಹೇಳೈ
ಚ್ಯವನನೆಂ[71]ದೇಕಾ[72]ಯ್ತು ಹೆಸರೆ
ಮ್ಮವರ ಕುಲಪಾವನ ಮಹಾಭೃಗುಮುನಿಯ ತನಯಂಗೆ ||
ವಿವರಿಸೈ ಪುಣ್ಯಾತ್ಮ ಪುಣ್ಯ
ಶ್ರವಣವಲ್ಲಾ ಕಥನವಿದು ದುರಿ
ತವನು ದೂವ್ವಾಳಿಸುವದಿನ್ನೇನುಂಟು ಹೇಳೆಂದ         ೧೧

ಆದೊಡವಧರಿಸೆಲೆ ಮುನಿಪ ಭಾ
ಗ್ಯೋಧಧಿಯಲಾ ನೀನು ನಿನ್ನಂ
ತಾಧರಿಸುವವರಾರು ಪುಣ್ಯಾ[73]ಖ್ಯಾನ ಕಥೆಗಳನು[74] ಮೇದಿನೀ ಪಾ[75]ವನ[76]ರು ಮೊದಲೀ
ಭೂದಿವಿಜರದರೊಳಗೆ ವೈಷ್ಣವ[77]ರಾದವರು ನಿನ್ನಂದದಲಿ ಯಾರುಂಟು ಹೇಳೆಂದ[78]   ೧೨

ಕೇಳು ಶೌನಕ ಸಕಲ ಮುನಿಗಳು
ಕೇಳಿರೈ ಭೃಗುಮುನಿವರ ವಧು
ಲೋಲಲೊಚನೆ ರೂಪಗುಣಸೌಭಾಗ್ಯವರವನಧಿ
ಶೀಲವಂತೆ ಪುಲೋಮೆಯೆಂಬಳು
ಹೋಲಿಸುವ[79]ಡುಮೆಲಕ್ಷ್ಮಿಯೆಂಬರಿ[80] ಗೇಳುಮಡೀ ಪತಿಭಕ್ತಿಬಹವಿತೆ ಚಿತ್ರೆ ಸುಚರಿತ್ರೆ           ೧೩

ಧರಿಸಿದಳು ಗರ್ಭವನು ಮುನಿಪನ
ವರತಪಸ್ಸಾಮರ್ಥ್ಯಸಿದ್ಧಿಯ
ಧರಿಸುವಮ್ತಿರೆ ಧರ್ಮರತೆ ವರ ವನಿತೆ ಜನವಿನುತೆ
ತರುಣಿ ತರುಣಮೃಗಾಕ್ಷಿಯಂತೆಸೆ
ದಿರಲು ತನ್ನಯ ಗ್ರಹಕೆ ಪರಮಾ
ಭರಣದಂತಿರಲಾದ ಹದನನು [81]ವಿವರಿಸುವೆನೆಂದ[82]   ೧೪

ಒಂದು ದಿನ ಮುನಿನಾಥನಾ ನಿಜ
ಮಂದಿರವ ಹೊರವಂತು ಮನೆಯೊಳ
ಗಿಂದುಮುಖಿಯಿರಲೊಬ್ಬ[83]ಳೇ[84] ಸ್ನಾನವನಂ ರಚಿಸುತಿರೆ
ಸಂದನತ್ತಲು ಸಲಿಸಸನ್ನಿಧಿ
ಗಂದು ರಾಕ್ಷಸನೊಬ್ಬನಿತ್ತಲು
ಬಂದನಾಕ್ಷಣದೊಳಗೆ ಬಾಲಮೃಗಾಕ್ಷಿಯಿದ್ದೆಡೆಗೆ           ೧೫

ಮರಸಿ ನಿಜವೇಷವನು [85]ದುರ್ಮತಿ[86] [87]ಬರಲದನು[88] ಕಾಣುತ್ತ ದೂರದ
ಲಿರದೆ ಕಮಲದಳಾಕ್ಷಿ ವಿಪ್ರನೆನುತ್ತ ಸತ್ಕರಿಸಿ
ಬರವಿದೆತ್ತಣ[89]ದೇನು[90] ಕುಳ್ಳಿರು
ಧರಣಿಯಮರನೆನ್ನುತ ಸತಿಯುಪ
ಚರಿಸಿದಳು ಚಪಳನನು ಚಾರುಮೃದುಸ್ಮಿತೋಕ್ತಿಯಲಿ  ೧೬

ಕೇಳು[91]ತುವೆ[92] ನುಡಿಗಳನು ಕಿವಿಗಳು
ಕೋಳುಹೋದುವು ಕಂಗಳಬಲೆಯ
ಮೇಲೆ ಬಿದ್ದುವು [93]ಬಿಗಿದುದಂತಃಕರಣ[94]ವಂಗನೆಯ
ಕಾಳು ಕೈ ಕೊಂಡಿದು ಮನೋಗತಿ
ಹೇಳಲೇನಂಗಜನ [95]ಹೊಂಗರಿ[96] ಗೋಲು ಮರುಮೊನೆಗೊಂಡುದಾ ಖಳನೊಡಲು ಕಂಪಿಸಿತು    ೧೭

ನೆಟ್ಟ ದೃಷ್ಟಿಯ ದೃಢತೆಯಲಿ ಮರ
ವಟ್ಟುದೊಡಲು ದುರಾತ್ಮ[97]ನಿದ್ದ[98]ನು
ನೆಟ್ಟ ಕಂಭದವೋಲು ನಯನಪ್ರೀತಿರಸ ಮಿಗಲು
ಮೆಟ್ಟಿ ಮೂರ್ಛೆಯನೆರಡುಗಳಿಗೆಗೆ
ತೊಟ್ಟು ಧೃತಿಯನು ಮನುಮಥನ ಸರ
ಳಟ್ಟಿ ಸುಡುತಿರೆ ನೋಡಿದನು ಕೆಲಬಲನನಮರಾರಿ      ೧೮

ತಿರುಗಿ ಕಂಡನು [99]ವಿಜನ[100]ದೊಳಗಾ
ತರುಣಿಯೊಬ್ಬಳೆಯಿಹುದನೆನಗವ
ಸರವಿದಹುದಬಲೆಯನು ಕೊಂಡೊಯ್ವೆನು ನಿಜಾಲಯಕೆ
ನಿರುತವಿವಳಾರಂಗನೆಯೊ ಹರ
ಹರ ಮಹಾಸತಿ ತಾನು ಮುನ್ನವೆ
ವರಿಸಿದವಳಿವಳಾಗ[101]ಬೇಕೆಂದ[102]ನು [103]ಖಳೋತ್ತಮನು[104]    ೧೯

ಇತ್ತು ತನಗೀಕೆಯನು ಪೂರ್ವದ
ಲಿತ್ತನಾ ಭೃಗುವಿಂಗೆ ಕಾಂತೆಯ
ಹೆತ್ತವನು ತನ್ನುವನು [105]ನಂಬಿಸಿ[106] ಹುಸಿದು ಹಾರುವಗೆ
ಸತ್ಯವಿದು ಸಂದೇಹ[107]ವಿಲ್ಲವು[108] ಮತ್ತಕಾಶಿನಿ ತನ್ನ ವನಿತೆ ಭೃ
ಗೊತ್ತಮನ ಸತಿ[109]ಯಾಗಳೆಂ[110]ದನು ತನ್ನ ಮನದೊಳಗೆ        ೨೦

[1] ಮೆಚ್ಚುವಂದದಲಿ (ಪ), ಮೆಚ್ಚೆ ನಲವಿನಲಿ (ಭ), ಮೆಚ್ಚಲೊಲವಿನಲಿ (ಮು).

[2] ಮೆಚ್ಚುವಂದದಲಿ (ಪ), ಮೆಚ್ಚೆ ನಲವಿನಲಿ (ಭ), ಮೆಚ್ಚಲೊಲವಿನಲಿ (ಮು).

[3] ರಾದಿ (ವಿ)

[4] ರಾದಿ (ವಿ)

[5] ನವ್ಯ (ಮು)

[6] ನವ್ಯ (ಮು)

[7] ಭೂಸುರಗೋ (ಮು)

[8] ಭೂಸುರಗೋ (ಮು)

[9] ಸ್ತೋಮ (ಮು)

[10] ಸ್ತೋಮ (ಮು)

[11] ನೆರೆ (ಪ)

[12] ನೆರೆ (ಪ)

[13] ವೆನೆ ಸತ್ಕಥೆಯ (ಭ)

[14] ವೆನೆ ಸತ್ಕಥೆಯ (ಭ)

[15] ಸು|ತ್ರಾಮ (ಮು)

[16] ಸು|ತ್ರಾಮ (ಮು)

[17] ಮಾಯಾಮಿಯವೊಲು ಬರೆ (ಪ), ಭೂಮಿಯವೋಲು ಬಂದನು (ಭ)

[18] ಮಾಯಾಮಿಯವೊಲು ಬರೆ (ಪ), ಭೂಮಿಯವೋಲು ಬಂದನು (ಭ)

[19] ಪ್ರಿಯವಾಯ್ತೆ (ವಿ)

[20] ಪ್ರಿಯವಾಯ್ತೆ (ವಿ)

[21] ಕವಿತಾ (ಪ), ವಿಜ್ಞಾ (ಮು)

[22] ಕವಿತಾ (ಪ), ವಿಜ್ಞಾ (ಮು)

[23] ಸ್ಮಿತ (ಭ)

[24] ಸ್ಮಿತ (ಭ)

[25] ಲ್ಲೈ (ವಿ, ಪ, ಮು)

[26] ಲ್ಲೈ (ವಿ, ಪ, ಮು)

[27] ಪಾರಾಶರೀವರ (ವಿ, ಮು), ಪಾರಾಶರೀಯವ (ಪ)

[28] ಪಾರಾಶರೀವರ (ವಿ, ಮು), ಪಾರಾಶರೀಯವ (ಪ)

[29] ನೆಲ್ಲ (ಪ)

[30] ನೆಲ್ಲ (ಪ)

[31] ಸಂಗತಿಯ (ವಿ, ಪ, ಮು)

[32] ಸಂಗತಿಯ (ವಿ, ಪ, ಮು)

[33] ಕಥೆಯನು|ಯಿಲ್ಲಿ (ಪ)

[34] ಕಥೆಯನು|ಯಿಲ್ಲಿ (ಪ)

[35] ಕರುಣಿಸಬೇಹುದೆಮಗೆಂದ (ವಿ, ಪ)

[36] ಕರುಣಿಸಬೇಹುದೆಮಗೆಂದ (ವಿ, ಪ)

[37] ದಕೆ (ವಿ, ಭ)

[38] ದಕೆ (ವಿ, ಭ)

[39] ಬುಧ ಸಂ| ಘದೊಳುನೀ (ಮು).

[40] ಬುಧ ಸಂ| ಘದೊಳುನೀ (ಮು).

[41] ವಹುದ (ವಿ, ಮು)

[42] ವಹುದ (ವಿ, ಮು)

[43] ವೆಲ್ಲ (ಭ)

[44] ವೆಲ್ಲ (ಭ)

[45] ವೀ (ವಿ, ಪ, ಮು)

[46] ವೀ (ವಿ, ಪ, ಮು)

[47] ಕೇಳುವೀ (ವಿ, ಪ, ಮು)

[48] ಕೇಳುವೀ (ವಿ, ಪ, ಮು)

[49] ನಿಮಗಿದ ವರ್ಣಿಸುವೆನೆನು| ತನುಪಮಿತರುತ್ತಮ ಭೃಗೂದ್ವಹರಮಳರನ್ವಯವ || ಅನುಸರದಲಿಂತೆಂದ ನಾವರ| ಮುನಿಪತಿ ಪರಿಕಿಸಲು ಕಂದೆರೆದು| ವನಜನಾಭನ ನೆನೆದು ನುಡಿದನು (ಮು).

[50] ನಿಮಗಿದ ವರ್ಣಿಸುವೆನೆನು| ತನುಪಮಿತರುತ್ತಮ ಭೃಗೂದ್ವಹರಮಳರನ್ವಯವ || ಅನುಸರದಲಿಂತೆಂದ ನಾವರ| ಮುನಿಪತಿ ಪರಿಕಿಸಲು ಕಂದೆರೆದು| ವನಜನಾಭನ ನೆನೆದು ನುಡಿದನು (ಮು).

[51] ಪಿತೃಮುಖದಲ್ಲಿ ತನಗಧ್ಯಯನವಾಯಿತ್ತು (ವಿ, ಮು) ಪಿತಗಾ ಪಿತೃಮುಖದಲಿದು ಸಾಧ್ಯವೆನಗಾಯ್ತು (ಪ)

[52] ಪಿತೃಮುಖದಲ್ಲಿ ತನಗಧ್ಯಯನವಾಯಿತ್ತು (ವಿ, ಮು) ಪಿತಗಾ ಪಿತೃಮುಖದಲಿದು ಸಾಧ್ಯವೆನಗಾಯ್ತು (ಪ)

[53] ರಿಗೆ (ಪ)

[54] ರಿಗೆ (ಪ)

[55] ನೆನುತುರುಭೃಗೂದ್ವಹ (ಭ)

[56] ನೆನುತುರುಭೃಗೂದ್ವಹ (ಭ)

[57] ನುಸಾರದಲೆಂ (ಭ, ಪ)

[58] ನುಸಾರದಲೆಂ (ಭ, ಪ)

[59] ಶವನಕ (ಮು)

[60] ಶವನಕ (ಮು)

[61] ಕುಲಲಲಾಮನ ಚರಿತವನು ಬಹು ಪುಣ್ಯಭರಿತವನು (ಭ, ಪ)

[62] ಕುಲಲಲಾಮನ ಚರಿತವನು ಬಹು ಪುಣ್ಯಭರಿತವನು (ಭ, ಪ)

[63] ನು ಮಿಗೆ (ಪ)

[64] ನು ಮಿಗೆ (ಪ)

[65] ಮಿಗೆ ನಿಗಮಗರ್ಭನ ತನೂಜನು (ವಿ), ನಿಗಮಗರ್ಭನ ತನುಜ ತನುಜನು (ಮು)

[66] ಮಿಗೆ ನಿಗಮಗರ್ಭನ ತನೂಜನು (ವಿ), ನಿಗಮಗರ್ಭನ ತನುಜ ತನುಜನು (ಮು)

[67] ವಿದ (ಮು, ಪ, ಭ)

[68] ವಿದ (ಮು, ಪ, ಭ)

[69] ಸಿದಿ (ಮು, ಪ, ಭ)

[70] ಸಿದಿ (ಮು, ಪ, ಭ)

[71] ದೆಂತಾ (ಮು)

[72] ದೆಂತಾ (ಮು)

[73] ಖ್ಯಾನಗಳನಿವನು (ವಿ), ಭಾಗ್ಯ ಕಥೆಗಳನು (ಪ)

[74] ಖ್ಯಾನಗಳನಿವನು (ವಿ), ಭಾಗ್ಯ ಕಥೆಗಳನು (ಪ)

[75] ಲಕ (ವಿ)

[76] ಲಕ (ವಿ)

[77] ರಾದ ನಿನ್ನಂದದಲಿರಲಿ ಕಿನ್ನಾವುದರಿದೆಂದ (ವಿ, ಮು)

[78] ರಾದ ನಿನ್ನಂದದಲಿರಲಿ ಕಿನ್ನಾವುದರಿದೆಂದ (ವಿ, ಮು)

[79] ಡಾಲಕ್ಷ್ಮಿಯೆಂಬಳಿ (ಪ, ಭ)

[80] ಡಾಲಕ್ಷ್ಮಿಯೆಂಬಳಿ (ಪ, ಭ)

[81] ಮತ್ತೆ ಕೇಳೆಂದ (ಭ)

[82] ಮತ್ತೆ ಕೇಳೆಂದ (ಭ)

[83] ನೇ (ಪ, ಭ)

[84] ನೇ (ಪ, ಭ)

[85] ಮರ್ಮಕೆ (ವಿ)

[86] ಮರ್ಮಕೆ (ವಿ)

[87] ಬರುತಿರಲು (ಭ)

[88] ಬರುತಿರಲು (ಭ)

[89] ದೆನುತ (ವಿ)

[90] ದೆನುತ (ವಿ)

[91] ತಲೆ (ಮು)

[92] ತಲೆ (ಮು)

[93] ಚಿಗಿದುದಂತರ್ಭಾವ (ವಿ)

[94] ಚಿಗಿದುದಂತರ್ಭಾವ (ವಿ)

[95] ಕೆಂಗರಿ (ವಿ)

[96] ಕೆಂಗರಿ (ವಿ)

[97] ನಿಂದ (ವಿ)

[98] ನಿಂದ (ವಿ)

[99] ಭವನ (ವಿ)

[100] ಭವನ (ವಿ)

[101] ದಿರಲೆಂದ (ಭ, ಮ)

[102] ದಿರಲೆಂದ (ಭ, ಮ)

[103] ರಾಕ್ಷಸನು ನೋಡಿ (ಪ, ಭ)

[104] ರಾಕ್ಷಸನು ನೋಡಿ (ಪ, ಭ)

[105] ವಂಚಿಸಿ (ಭ, ಮು)

[106] ವಂಚಿಸಿ (ಭ, ಮು)

[107] ವಲ್ಲಿದು (ಮು), ವಲ್ಲೈ (ಪ, ಭ)

[108] ವಲ್ಲಿದು (ಮು), ವಲ್ಲೈ (ಪ, ಭ)

[109] ಯಹಳೆಯೆಂ (ಮು).

[110] ಯಹಳೆಯೆಂ (ಮು).