ಕೇಳು ಮಧ್ಯಮ

[1]ಪಾಂಡವನಸುತ[2] ನಾಲಿಸುವಡಭಿಮನ್ಯು ಸಮರಕ
ರಾಳವಿಕ್ರಮನಾತ್ಮಭವನು ಪರೀಕ್ಷಿ[3]ತಾಹ್ವಯನಂ
ಪಾಲಿಸುವನವನಿಯನು ಮೃಗಯಾ
ಕೇಳಿಯಲಿ ಶಾಪವನು ಪಡೆದಾ
ಭೀಳತಕ್ಷಕಮುಖದಲಳಿವನು ಮಗನೆ ಕೇಳೆಂದ         ೨೧

ಅವನ ಮಗನದ ಕೇಳಿ ಕಡುಗೋ
ಪವನು ತಳೆದು ಮಹೋರಗೇಂದ್ರರ
ನಿವಹವನು ಜನಮೇಜಯನು ಸರ್ಪಾಧ್ವರಪ ಮಾಡಿ
ಸವೆಯೆ ಕೊಲುವನು ತಕ್ಷಕ[4]ನ ಬೇ[5] ಳುವುದನೀಕ್ಷಿಸಿ ಬಹಳ ಕರುಣಾ
ರ್ಣವನಲಾ ತಲೆಗಾವನಾಸ್ತೀಕಾಖ್ಯಮುನಿ[6]ಯೊಲಿದು[7] ೨೨

ಅದುನಿಮಿತ್ತವೆ ಮಗನ [8]ಕೊಲ್ಲದಿ
ರದಕೆ[9] ಕಾರಣ ಸರ್ಪನಿನಗೆಂ
ದುದು ವೃಥೋಕ್ತಿಯದಲ್ಲ ನೋಳ್ಪೊಡೆ ಹಿಂಸೆ [10]ತರವಲ್ಲ[11] ಸದಮಳನೆ ಕೇಳೆಂದು ಸಂಶಯ
ಹೃದಯನನು ತಿಳುಹಿದನು ಬಳಿಕಾ
ಸುದತಿಸಹಿತಾಶ್ರಮದಲೆಸೆದರು ಧರ್ಮಪರರೆನಿಸಿ     ೨೩

ರುರುವಿನಮಳಚರಿತ್ರವನು ವಿ
ಸ್ತರಿಸಿದೆನು ಪೌಲೋಮವಿಲ್ಲಿಗೆ
ಪರಿಸಮಾ[12]ಪ್ತವ[13]ಘೌಘಹರವಿಷ್ಥಾರ್ಥಸಿದ್ಧಿಕರ
ಧರೆಗೆ ಪಾವನವಾದ ಭೃಗುಕುಲ
ಚರಿತವಿದನಾದರದಲೋದುವ
ನಿರುತ ಕೇಳುವ ಪುಣ್ಯಪುರುಷರೆ ಧನ್ಯ[14]ತಮ[15]ರೆಂದು ೨೪

ಇದು ಸದಾಯುಷ್ಕೀರ್ತಿವರ್ಧನ
ವಿದು ಪರಮಮಂಗಳವಿವರ್ಧನ
ವಿದು ಮನೋರಥಸಿದ್ಧಿಕರವಿಹಪರಸಮೃದ್ಧಿಕರ
ಇದನು ಪಠಿಸುವ ಪುಣ್ಯಪುರುಷರ
ಹೃದಯದಲಿ ಮನೆಯಮಾಡುವನು ಕರು
ಣದಲಿ [16]ಸಲೆ ನಿತ್ಯಾತ್ಮ[17] ನಾರಾಯಣನು ಮನವೊಲಿದು       ೨೫

ಅಂತು ಚತುರ್ಥ ಸಂಧಿಗೆ ಪೌಲೋಮಪರ್ವ ಸಮಾಪ್ತ

[1] ಪಾಂಡುಸುತಸುತ (ವಿ, ಪ, ಮು)

[2] ಪಾಂಡುಸುತಸುತ (ವಿ, ಪ, ಮು)

[3] ದಾ (ವಿ, ಮು)

[4] ಬೀ | (ವಿ, ಮು)

[5] ಬೀ | (ವಿ, ಮು)

[6] ಬಂದು (ಭ)

[7] ಬಂದು (ಭ)

[8] ನೀ ಕೊ | ಲ್ಲದಿರ (ವಿ, ಭ, ಮು)

[9] ನೀ ಕೊ | ಲ್ಲದಿರ (ವಿ, ಭ, ಮು)

[10] ಹಿತವಲ್ಲ (ವಿ, ಪ)

[11] ಹಿತವಲ್ಲ (ವಿ, ಪ)

[12] ಪ್ರಿಯ (ಭ)

[13] ಪ್ರಿಯ (ಭ)

[14] ರವ (ಮು)

[15] ರವ (ಮು)

[16] ನಿತ್ಯಾತುಮನು (ಪ).

[17] ನಿತ್ಯಾತುಮನು (ಪ).