ಮಹಾಮಾಯಿ ಇದೀಗ ಅಂಕಿತದಿಂದ ಎರಡನೆಯ ಮುದ್ರಣವಾಗುತ್ತಿದೆ. ಕಂಬತ್ತಳ್ಳಿ ಪ್ರಕಾಶ್‌ ಅವರಿಗೆ ವಂದನೆಗಳನ್ನು ಹೇಳುತ್ತೇನೆ. ಇದು ಇಂಗ್ಲೀಷ್ ಹಾಗೂ ಭಾರತದ ಅನೇಕ ಭಾಷೆಗಳಲ್ಲಿ ಅನುವಾದವಾಗಿದ್ದು ವ್ಯಾಪಕವಾಗಿ ಚರ್ಚೆಗೊಳಗಾದ ನಾಟಕ. ಚರ್ಚಿಸಿದ ನಿರ್ದೇಶಕರು ಹಾಗೂ ಪಂಡಿತರಿಗೆ ವಂದನೆಗಳನ್ನು ಹೇಳುತ್ತೇನೆ. ಈ ನಾಟಕದ ಇಂಗ್ಲೀಷ್‌ ಅನುವಾದಕ್ಕೆ ದೇಶದ ಬಹು ದೊಡ್ಡ ವಿಮರ್ಶಕರಾದ ಸನ್ಮಾನ್ಯ ಶ್ರೀ ಜಿ.ಎಸ್.ಆಮೂರ ಅವರು ಮಹತ್ವದ ಮುನ್ನುಡಿಯೊಂದನ್ನು ಬರೆದುಕೊಟ್ಟಿದ್ದಾರೆ. ಮಿತ್ರ ಸಿ. ನಾಗಣ್ಣನವರು ಸೊಗಸಾಗಿ ಕನ್ನಡಿಸಿಕೊಟ್ಟಿದ್ದಾರೆ. ಅದನ್ನಿನಲ್ಲಿ ಉಪಯೋಗಿಸಿಕೊಂಡಿದ್ದೇನೆ. ಅವರಿಗೂ ನನ್ನ ನಾಟಕಗಳ ಬಗ್ಗೆ ಬರೆದ ದಿವಂಗತ ಮಿತ್ರ ಡಿ.ಆರ್. ನಾಗರಾಜ ಅವರಿಗೂ ನನ್ನ ವಂದನೆಗಳು.

ಚಂದ್ರಶೇಖರ ಕಂಬಾರ