ಜಗವ ಮರುಳು ಮಾಡಿಹೆ ನೀ
ಪರಶಿವ ಮನ ಮೋಹಿನೀ !
ಮೂಲಾಧಾರ ಕಮಲದಲ್ಲಿ
ವೀಣಾರವ ವಿನೋದಿನೀ.

ದೇಹ ದೇಹ ಯಂತ್ರದಲ್ಲಿ
ಸುಷುಮ್ನಾದಿ ತಂತ್ರದಲ್ಲಿ
ಗುಣಭೇದದ ಮಂತ್ರದಲ್ಲಿ
ಗುಣತ್ರಯ ವಿಭಾಗಿನೀ.

ಮಹಾಮಾಯೆ ಅನಾಯಾಸ-
ದಿಂದ ಮೋಹ ಪಾಶದಿ
ಜಗವ ಬಿಗಿದು ನೀನು ಮಾತ್ರ
ತತ್ವಾಕಾಶದಲ್ಲಿ ನಿಂತೆ
ಅಚಲ ಮಿಂಚಿನಂದದಿ !