[ಬಾಂದಳದ ನಡುವೆ, ಮುಗಿಲ ತೇರಿನಲ್ಲಿ ಯಕ್ಷ ಕಿನ್ನರ ಗಂಧರ್ವರು ಕುಳಿತಿದ್ದಾರೆ.]

ಗಂಧರ್ವ — ಏಳು, ಮೇಲೇಳು, ಎಲೆ ಮೇಘರಥವೇ!

ಕಿನ್ನರ — ದಾರಿ ಬಿಡು, ದಾರಿ ಬಿಡು, ಎಲೆ ವಾಯುಪಥವೆ!

ಯಕ್ಷ — ನಾವು ಮೇಲೇರುತಿರೆ, ರಮಣೀಯವಾಗುತ್ತ-
ಲಿಹುದು ತಿರೆ!

ಗಂಧರ್ವ — ಗಿರಿಶೃಂಗ ಹಳ್ಳಕೊಳ್ಳಗಳೆಲ್ಲ
ಸಮತೆಯನ್ನೈದುತಿವೆ!

ಕಿನ್ನರ — ಹಿಮಗಿರಿಗೆ! ಹಿಮಗಿರಿಗೆ!
ಎಲೆ ಮೇಘರಥವೇ!

ಯಕ್ಷ — ಕಳೆದ ರಾತ್ರಿಯ ತೆರದ
ರಾತ್ರಿಯನು ಕಂಡಿಲ್ಲ.

ಗಂಧರ್ವ — ಅದು ಮಹಾರಾತ್ರಿ!

ಕಿನ್ನರ — ನೋಡಲ್ಲಿ! ರವಿಯುದಯ, ಪೂರ್ವಗಿರಿ ಶಿಖರದೊಳ್!

ಯಕ್ಷ — ನೋಡಲ್ಲಿ! ಮತ್ತೊಂದು ರವಿಯುದಯವೆಸದಿಹುದು:
ಕತ್ತಲಂದದ ಕೂದಲನು ಕತ್ತರಿಸುತಿಹುದು
ಅನುಮ ನದಿಯ ತೀರದರೆಯಲ್ಲಿ! ಅಮಲತರ!

ಕಿನ್ನರ — ರವಿಯಿಬ್ಬರೊಂದುದಯ;
ಹಳೆಯ ಸೂರ್ಯನು ಉದಯಗಿರಿ ಶಿಖರದಲ್ಲಿ!
ಹೊಸ ನೇಸರ್ ಅನುಮಾತರಂಗಿಣಿಯ ತಿರದರೆಯಲ್ಲಿ!

ಗಂಧರ್ವ — ಹಳೆಯ ರವಿ
ದಿನಪ!

ಯಕ್ಷ — ಹೊಸ ರವಿಯು ಜನಪ! ನೋಡಲ್ಲಿ!
ಮರ್ತ್ಯನಯನಂಗಳಿಗೆ ಕಾಣದಿಹ ಅಧಿಕಾರ
ಮಕುಟವದು ಎಂತು ಶೋಭಿಪುದಲ್ಲಿ ಮೂಜಗದ
ಕತ್ತಲನ್ನೋಡಿಸುವ ತೆರದಿ.

ಗಂಧರ್ವ — ಸಿದ್ಧಾರ್ಥನ್
ಇನ್ನಾವಗಂ ಬುದ್ಧ!

ಕಿನ್ನರ — ಮುಂದಾಗುವನು ಸಿದ್ಧ!

ಯಕ್ಷ — ಹಿಮಗಿರಿ! ಹಿಮಗಿರಿ! ನಿಲ್ಲೆಲೈ ಮೇಘ!

ಗಂಧರ್ವ — ಬನ್ನಿ, ನಮ್ಮೂರ ಸೇರುವಂ ಬೇಗ.

ಕಿನ್ನರ — ಬುದ್ಧದೇವನ ಪರಮ ತ್ಯಾಗವೆ ಮಹಾತ್ಯಾಗ!

ಯಕ್ಷ — ಧನ್ಯಂ ಮಹಾರಾತ್ರಿ!

ಕಿನ್ನರ — ಲೋಕಕಾಗಲಿ ಮೈತ್ರಿ!

(ತೆರಳುತ್ತಾರೆ.)

ಪರದೆ

siz�+.pп�ymily:”Times New Roman”,”serif”‘> ಇಂದು,
ಸಿದ್ಧಾರ್ಥ! ಶಿವನಾದೆ ಮುಂದೆ ಎಂದೆಂದೂ!

 

(ಹೋಗುತ್ತಾನೆ.)

ಪರದೆ ma� srп�ypan>ರನ್ನಗಳ; ತೆಗೆದುಕೋ
ವಸನಗಳ; ತೆಗೆದುಕೋ ಈ ಎನ್ನ ಹೃದಯವನು.
ನೀನೇಳುವಲ್ಲಿಪರಿಯಂತ ನಾನಡಿಗಿ,
ಮೇಲೆ ದಾರಿಯ ಹಿಡಿವೆ. ಎಲ್ಲಕೂ ಮಿಗಿಲಾಗಿ
ನಿನ್ನನೊಲಿದಿದ್ದೆ, ಚನ್ನಜ್ಜಾ. ಸೂತಿಕಾಗೃಹದಿಂದ
ನಾನಿನಿತು ಶೋಕದಿಂ ಪೊರಮಟ್ಟು ಬರಲಿಲ್ಲ.
ಎಂದಾದರೊಂದು ದಿನ ಬಂದು ಕಾಣುವೆ ನಿನ್ನ;
ಹೋಗಿ ಬರುವೆನು, ಚನ್ನ; ನಿನಗೆ ಬಂಗಳಮಕ್ಕೆ!
(ಕುದುರೆಯೊಡನೆ ಹೊರಡುತ್ತಾನೆ.)

 

ಚನ್ನ (ತುಸುಹೊತ್ತಿನಮೇಲೆ ಎದ್ದು)
ಸಿದ್ಧಾರ್ಥ, ಹೊತ್ತಾಯ್ತು, ಹೊರಡೋಣ, ಏಳು;
ನಿನಗು ನಿದ್ದೆಯೆ, ಒಡೆಯ? ಸಿದ್ಧಾರ್ಥ, ಸಿದ್ಧಾರ್ಥ!
(ಹುಡುಕಿ)
ಸಿದ್ಧಾರ್ಥ, ಎಲ್ಲಿರುವೆ? ನನ್ನೊಡೆಯ, ಎಲ್ಲಿರುವೆ?
ಅರೆದಾರಿಯಲ್ಲೆನ್ನ ಕೊರಳ ಕೊಯ್ಯುವೆಯೇನು?
ಮಲಗಿದವನನ್ನಿಂತು ಬಿಟ್ಟೋಡುವುದೆ ನೀನು?
‘ನಾನಿನ್ನ ಬಿಡಲಾರೆ’ ಎಂದು ನುಡಿ ಏನಾಯ್ತು?
ಏನು ಮಾಡಲಿ ನಾನು? ಎತ್ತ ಹೋಗಲಿ ಇನ್ನು?
ಕಪಿಲವಸ್ತುವಿಗೆಂತು ತೆರಳಿ ಮೊಗದೋರಲಿ?
ಶುದ್ಧೋದನನಿಗೆಂತು ಮೋರೆ ತೋರಿಸಲಿನ್ನು?
ಹಾ ವಿಧಿಯೆ, ಕೊರಳ ಕೊಯ್ದೆಯ ಎನ್ನ? (ಕೆಳಗೆ ನೋಡಿ)
ಸಿದ್ಧಾರ್ಥ,
ಸಾಯುವವಗೇತಕೀ ಒಡವೆಗಳು? ಎನ್ನೊಲವಿಗಿವು
ಹೊಣೆಯೆ? ತೊಲಗು ತೊಲಗಲೆ ಸಿರಿಯೆ!
(ಆಭರಣಗಳನ್ನು ಒದೆಯುತ್ತಾನೆ.) ತಪ್ಪಾಯ್ತು
ಮನ್ನಿಸೆನ್ನನು, ಒಡೆಯ. ನೀನಿತ್ತ ವಸ್ತುಗಳ
ಒದೆಯುವನು ಮೂಢ. (ಅವುಗಳನ್ನು ತೆಗೆದುಕೊಂಡು)
ಎಲೆ ರನ್ನದೊಡವೆಗಳೆ,
ಬೆಲೆಗಾಗಿ ನಿಮ್ಮ ನಾನೆಂದಿಗೂ ಮುಟ್ಟೆ;
ನನ್ನೊಡೆಯನೊಲವಿಂದ ಕೊಟ್ಟ ವರಗಳು ನೀವು!
ನೀವವನ ಸುಸ್ಮೃತಿಯ ಕಿಂಕರರು, ಬನ್ನಿ!
ಬಾ, ರಾಹುತ, ಬೇಗ ಕಪಿಲವಸ್ತುವ ಸೇರಿ,
ಸುದ್ದಿಯನು ಸಾರಿ, ಧನ್ಯರಾಗುವ ಬಾ.
(ಹಿಂತಿರುಗಿ ದಿಟ್ಟಿಸಿ ನೋಡಿ)
ಕಂಥಕನೆ, ನೀನೆ ಧನ್ಯನು, ನಿನ್ನದೇ ಪುಣ್ಯ!
ನಿನ್ನ ಜನ್ಮವನಿಂದು ಕರುಬುವನು ಚನ್ನ!

(ತೆರಳುತ್ತಾರೆ.)

ಪರದೆ