[ಅನುಮಾ ಹೊಳೆಯ ದಡ. ಸಿದ್ಧಾರ್ಥನ ಪ್ರವೇಶ.]

ಸಿದ್ಧಾರ್ಥ — ನಿಲ್ಲಿಲ್ಲಿ, ಕಂಥಕಾ, ನಿಲ್ಲಿಲ್ಲಿ! ಅನುಮಾ
ತರಂಗಿಣಿಯ ನಿರ್ಮಲ ಸವಾರಿಗಳನೀಂಟು!
ವೈರಾಗ್ಯಯಜ್ಞಕ್ಕೆ ಬಲಿಯಾಗಲೆಂದುಳಿದ
ಕಡೆಯ ಸಂಗವು ನೀನು. ಸತಿಸುತರ ಮೋಹ ಬಂಧನ
ಕಠಿನ. ಕಷ್ಟವಾಯ್ತೆನಗದರ ಖಂಡಿಪುದು.
ಚನ್ನ ಸಂಗದ ಮೋಹ ಬಂಧನವೊ ಕಠಿನತರ!
ಎನಗದನು ಹರಿಯುವುದು ಕಷ್ಟತರವಾಯ್ತು!
ಕಂಥಕನ ಸಂಗವಿದು ಕಠಿನತಮ, ಮೇಣಿದನು
ಖಂಡಿಪುದು ಕಷ್ಟತಮ. ಅವರೆಲ್ಲ ಮಾನವರು,
ನೀನು ಪಶು, ಕಂಥಕಾ! ಅದಕಾಗಿ ಎನ್ನೆದೆ
ಕುದಿಯುತಿದೆ. ಹಿಂದೆಂದು, ಹಿಂದಾರು, ಎಂದೆಂದು
ಸಾಧಿಸದ ಸಾಹಸವನೆಸಗಿರುವೆ, ಕಂಥಕನೆ!
ಅದರಿಂದ ಧನ್ಯನಾಗಿಹೆ. ಹೋಗು, ಸೇರು
ಕಪಿಲವಸ್ತುವ ಬೇಗ. ಎನ್ನವರು ಬಂದು
ಕೇಳುವರು ನಿನ್ನ. ತಲೆದೂಗಿ ಸುಮ್ಮನಿರು
ತಲೆಯನೇತಕೆ ತೂಗುತಿಹೆ ಇಂತು? ನೀನೆನ್ನ
ಅರೆಯುವೆಯಾ? ಹೋಗು, ಕಂಥಕ, ಹೋಗು.
ನೋಡಲ್ಲಿ!
ಪೂರ್ವದಿಗ್ವಧುವಿನೊಡಗೂಡಿ ಉಷೆ ನಲಿಯುವಳು!
ಹೋಗು, ಎಲ್ಲಿಯೂ ನಿಲ್ಲದೆಯೆ ಹೋಗು.
ನೀನು ಕಣ್ಮರೆಯಾಗುವಲ್ಲಿ ಪರಿಯಂತವೂ
ಕಣ್ದಣಿಯೆ ನೋಡುವೆನು! (ನೋಡುತ್ತಾ ನಿಂತು, ನಿಟ್ಟುಸಿರೆಳೆದು)
ಪಾಪ ಬಡಜಂತು!
ಏನ ಚಿಂತಿಸಿ ತೆರಳಿತೋ, ತಿಳಿಯೆ. ಬಾ ಉದಯ,
ಬಾ; ಇಳೆಗೆ ಬೆಳಕ ತಾ! (ತಿರುಗಿ) ಯಾರಿವನು ಮರಳಲ್ಲಿ?
ಬಾ ಇಲ್ಲಿ, ಸೋದರನೆ. (ತಿರುಕ ಬರುತ್ತಾನೆ.)
ಬಡವಸ್ತ್ರಗಳ ನೀಡು,
ಸಿರಿಯ ಕೇತನಗಳಿವು ತೆಗೆದುಕೋ; ನೋಡು!

ಭಿಕ್ಷುಕ — ಮಹಾತ್ಮಾ, ನೀನಾರು?

ಸಿದ್ಧಾರ್ಥ — ಅದನರಿಯೆ ಹೊರಟಿಹೆನು.
(ಬಟ್ಟೆಗಳನ್ನು ಬದಲಾಯಿಸುತ್ತಾರೆ.)
ನೀನೀಗ ರಾಜನಂತೆಸೆಯುತಿಹೆ, ಸೋದರನೆ.
ಬೇಡುವವರಲ್ಲೆನಿತು ರಾಜರುಗಳಿಲ್ಲ,
ರಾಜರಲ್ಲೆನಿತು ಭಿಕ್ಷುಕರಿಲ್ಲ! ಬೇಡುವವ
ರಲ್ಲೆನಿತು ನೀಡುವವರಿಲ್ಲ! ನೀಡುವವ
ರಲ್ಲೆನಿತು ಬೇಡುವವರಿಲ್ಲ! ತೆರಳು, ನಲಿ,
ಸೋದರನೆ. ನಿನ್ನ ನಲ್ಮೆಯ ನನ್ನ ನಲ್ಮೆ. (ತೆರಳುತ್ತಾನೆ.)

ಭಿಕ್ಷುಕ — ಶಿವನ ಬಟ್ಟೆಯನುಟ್ಟ ನೀನೆ ಧನ್ಯನು ಇಂದು,
ಸಿದ್ಧಾರ್ಥ! ಶಿವನಾದೆ ಮುಂದೆ ಎಂದೆಂದೂ!

(ಹೋಗುತ್ತಾನೆ.)

ಪರದೆ ma� srп�ypan>ರನ್ನಗಳ; ತೆಗೆದುಕೋ
ವಸನಗಳ; ತೆಗೆದುಕೋ ಈ ಎನ್ನ ಹೃದಯವನು.
ನೀನೇಳುವಲ್ಲಿಪರಿಯಂತ ನಾನಡಿಗಿ,
ಮೇಲೆ ದಾರಿಯ ಹಿಡಿವೆ. ಎಲ್ಲಕೂ ಮಿಗಿಲಾಗಿ
ನಿನ್ನನೊಲಿದಿದ್ದೆ, ಚನ್ನಜ್ಜಾ. ಸೂತಿಕಾಗೃಹದಿಂದ
ನಾನಿನಿತು ಶೋಕದಿಂ ಪೊರಮಟ್ಟು ಬರಲಿಲ್ಲ.
ಎಂದಾದರೊಂದು ದಿನ ಬಂದು ಕಾಣುವೆ ನಿನ್ನ;
ಹೋಗಿ ಬರುವೆನು, ಚನ್ನ; ನಿನಗೆ ಬಂಗಳಮಕ್ಕೆ!
(ಕುದುರೆಯೊಡನೆ ಹೊರಡುತ್ತಾನೆ.)

 

ಚನ್ನ (ತುಸುಹೊತ್ತಿನಮೇಲೆ ಎದ್ದು)
ಸಿದ್ಧಾರ್ಥ, ಹೊತ್ತಾಯ್ತು, ಹೊರಡೋಣ, ಏಳು;
ನಿನಗು ನಿದ್ದೆಯೆ, ಒಡೆಯ? ಸಿದ್ಧಾರ್ಥ, ಸಿದ್ಧಾರ್ಥ!
(ಹುಡುಕಿ)
ಸಿದ್ಧಾರ್ಥ, ಎಲ್ಲಿರುವೆ? ನನ್ನೊಡೆಯ, ಎಲ್ಲಿರುವೆ?
ಅರೆದಾರಿಯಲ್ಲೆನ್ನ ಕೊರಳ ಕೊಯ್ಯುವೆಯೇನು?
ಮಲಗಿದವನನ್ನಿಂತು ಬಿಟ್ಟೋಡುವುದೆ ನೀನು?
‘ನಾನಿನ್ನ ಬಿಡಲಾರೆ’ ಎಂದು ನುಡಿ ಏನಾಯ್ತು?
ಏನು ಮಾಡಲಿ ನಾನು? ಎತ್ತ ಹೋಗಲಿ ಇನ್ನು?
ಕಪಿಲವಸ್ತುವಿಗೆಂತು ತೆರಳಿ ಮೊಗದೋರಲಿ?
ಶುದ್ಧೋದನನಿಗೆಂತು ಮೋರೆ ತೋರಿಸಲಿನ್ನು?
ಹಾ ವಿಧಿಯೆ, ಕೊರಳ ಕೊಯ್ದೆಯ ಎನ್ನ? (ಕೆಳಗೆ ನೋಡಿ)
ಸಿದ್ಧಾರ್ಥ,
ಸಾಯುವವಗೇತಕೀ ಒಡವೆಗಳು? ಎನ್ನೊಲವಿಗಿವು
ಹೊಣೆಯೆ? ತೊಲಗು ತೊಲಗಲೆ ಸಿರಿಯೆ!
(ಆಭರಣಗಳನ್ನು ಒದೆಯುತ್ತಾನೆ.) ತಪ್ಪಾಯ್ತು
ಮನ್ನಿಸೆನ್ನನು, ಒಡೆಯ. ನೀನಿತ್ತ ವಸ್ತುಗಳ
ಒದೆಯುವನು ಮೂಢ. (ಅವುಗಳನ್ನು ತೆಗೆದುಕೊಂಡು)
ಎಲೆ ರನ್ನದೊಡವೆಗಳೆ,
ಬೆಲೆಗಾಗಿ ನಿಮ್ಮ ನಾನೆಂದಿಗೂ ಮುಟ್ಟೆ;
ನನ್ನೊಡೆಯನೊಲವಿಂದ ಕೊಟ್ಟ ವರಗಳು ನೀವು!
ನೀವವನ ಸುಸ್ಮೃತಿಯ ಕಿಂಕರರು, ಬನ್ನಿ!
ಬಾ, ರಾಹುತ, ಬೇಗ ಕಪಿಲವಸ್ತುವ ಸೇರಿ,
ಸುದ್ದಿಯನು ಸಾರಿ, ಧನ್ಯರಾಗುವ ಬಾ.
(ಹಿಂತಿರುಗಿ ದಿಟ್ಟಿಸಿ ನೋಡಿ)
ಕಂಥಕನೆ, ನೀನೆ ಧನ್ಯನು, ನಿನ್ನದೇ ಪುಣ್ಯ!
ನಿನ್ನ ಜನ್ಮವನಿಂದು ಕರುಬುವನು ಚನ್ನ!

(ತೆರಳುತ್ತಾರೆ.)

ಪರದೆ